Geogebra/C3/Spreadsheet-View-Advanced/Kannada

From Script | Spoken-Tutorial
Revision as of 01:02, 30 April 2015 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ.
00:01 Geogebra ದಲ್ಲಿ Spreadsheet view advanced. ( ಸ್ಪ್ರೆಡ್ ಶೀಟ್ ವ್ಯೂ ಅಡ್ವಾನ್ಸ್ಡ ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಜಿಯೊಜಿಬ್ರಾಗಾಗಿ ನೀವು ಇದೇ ಮೊದಲಬಾರಿಗೆ ‘ಸ್ಪ್ರೆಡ್ ಶೀಟ್ಸ್’ ಉಪಯೋಗಿಸುತ್ತಿದ್ದರೆ, Spreadsheet View Basics ಎನ್ನುವ ಟ್ಯುಟೋರಿಯಲ್ ಗಾಗಿ ದಯವಿಟ್ಟು spoken tutorial ವೆಬ್ಸೈಟ್ ಅನ್ನು ನೋಡಿ.
00:15 ಈ ಟ್ಯುಟೋರಿಯಲ್ ನಲ್ಲಿ, ನಾವು:
00:19 * ಸ್ಲೈಡರನ್ನು ಬಳಸಿ, ಒಂದು ಫಂಕ್ಷನ್ ನ ಉದ್ದಕ್ಕೂ ಟ್ರೇಸ್ ಮಾಡಲಾದ ಬಿಂದುವಿನ X ಹಾಗೂ Y ಕೊ-ಆರ್ಡಿನೇಟ್ ಗಳನ್ನು ರೆಕಾರ್ಡ್ ಮಾಡುವುದು
00:24 * ನಂಬರ್ ಪ್ಯಾಟರ್ನ್ ಗಳನ್ನು ಗುರುತಿಸಲು ಈ ಡೇಟಾಅನ್ನು ಉಪಯೋಗಿಸುವುದು ಮತ್ತು ಫಂಕ್ಷನ್ ನ ಗ್ರಾಫ್ ನ ಬಗ್ಗೆ ಊಹೆ (ಕಲ್ಪನೆ) ಮಾಡುವುದು, ಇವುಗಳಿಗಾಗಿ ‘ಸ್ಪ್ರೆಡ್ ಶೀಟ್ ವ್ಯೂ’ ಅನ್ನು ಬಳಸುವೆವು.
00:29 ಜಿಯೊಜಿಬ್ರಾ ಆರಂಭಿಸಲು, ನಾನು ಹೊಸ Linux operating system Ubuntu version 10.04 LTS (ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಉಬಂಟು ವರ್ಷನ್ 10.04 LTS) ಹಾಗೂ Geogebra Version 3.2. 40 (ಜಿಯೊಜಿಬ್ರಾ ವರ್ಷನ್ 3.2.40) ಗಳನ್ನು ಬಳಸುತ್ತಿದ್ದೇನೆ.
00:40 ಈಗ ಜಿಯೊಜಿಬ್ರಾ ವಿಂಡೋ ಗೆ ಬರೋಣ.
00:43 ‘ಸ್ಪ್ರೆಡ್ ಶೀಟ್’ಅನ್ನು ಕಾಣುವಂತೆ ಮಾಡಲು, View ಎನ್ನುವ ಮೆನು ಆಯ್ಕೆಗೆ ಹೋಗಿ ಮತ್ತು Spreadsheet View ಎನ್ನುವ ಆಯ್ಕೆಯನ್ನು ಚೆಕ್ ಮಾಡಿ.
00:52 ಇಲ್ಲಿ, ನಾವು ‘xValue' ಎನ್ನುವ ಒಂದು ಸ್ಲೈಡರ್ ಅನ್ನು ತಯಾರಿಸೋಣ. minimum ಮತ್ತು maximum ಡಿಫಾಲ್ಟ್ ವ್ಯಾಲ್ಯೂಗಳನ್ನು ಹಾಗೆಯೇ ಇಟ್ಟು Increment ಎನ್ನುವುದನ್ನು 1 ಕ್ಕೆ ಬದಲಾಯಿಸೋಣ.
01:07 xValue ಅನ್ನು ಕನಿಷ್ಠ ವ್ಯಾಲ್ಯೂದೆಡೆಗೆ ಜರುಗಿಸೋಣ.
01:12 A ಬಿಂದುವನ್ನು ರಚಿಸಿ. ಈ ಬಿಂದುವಿನ ಮೇಲೆ ರೈಟ್-ಕ್ಲಿಕ್ ಮಾಡಿ. Object Properties ಎನುವುದನ್ನು ಆಯ್ಕೆಮಾಡಿ >> X ಕೊ-ಆರ್ಡಿನೇಟ್ ಗಾಗಿ xValue ಹಾಗೂ Y ಕೊ-ಆರ್ಡಿನೇಟ್ ಗಾಗಿ, 3 xValue ಎಂದು A ಬಿಂದುವಿನ ಕೊ-ಆರ್ಡಿನೇಟ್ ಗಳನ್ನು ಬದಲಾಯಿಸಿ.
01:36 ಇಲ್ಲಿ, ನಾವು, ಈ ಬಿಂದುವಿನಿಂದ ಟ್ರೇಸ್ ಮಾಡಲ್ಪಡುವ ರೇಖೆಯ ಸ್ಲೋಪ್ ಅನ್ನು 3 ಎಂದು ಸೆಟ್ ಮಾಡುತ್ತಿದ್ದೇವೆ. ಕೀಬೋರ್ಡ್ ಮೇಲಿನ tab ಅನ್ನು ಒತ್ತಿ. ಹಾಗೆಯೇ Show Trace ಅನ್ನು ಆಯ್ಕೆಮಾಡಿ.
01:50 Close ಅನ್ನು ಒತ್ತಿ. ನಾವು ‘ಸ್ಪ್ರೆಡ್ ಶೀಟ್ ವ್ಯೂ’ ಅನ್ನು ಸರಿಸೋಣ. ಹೀಗಾಗಿ ನಾವು ಕಾಲಂ A ಮತ್ತು B ಗಳನ್ನು ನೋಡಬಹುದು.
02:02 ಈಗ, ನಾವು ಮೊದಲನೆಯ ಟೂಲ್ನಲ್ಲಿಯ, ಮೂರನೆಯ ಆಯ್ಕೆಯಾದ Record to Spreadsheet ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳೋಣ.
02:10 A ಬಿಂದುವನ್ನು ಆಯ್ಕೆಮಾಡಿ. ಅದು ‘ಡ್ರಾಯಿಂಗ್ ಪ್ಯಾಡ್’ನಲ್ಲಿ ಕಾಣಿಸದಿದ್ದರೆ, ದಯವಿಟ್ಟು ಅದನ್ನು Algebra View ನಿಂದ ಆಯ್ಕೆಮಾಡಿ. ಆನಂತರ, ಸ್ಲೈಡರ್ 'xValue'ಅನ್ನು ಕನಿಷ್ಠದಿಂದ ಗರಿಷ್ಠಕ್ಕೆ ಜರುಗಿಸಿ.
02:23 A ಬಿಂದುವಿನ X ಕೊ-ಆರ್ಡಿನೇಟ್, ‘ಸ್ಪ್ರೆಡ್ ಶೀಟ್’ನ ಕಾಲಂ A ನಲ್ಲಿ ಮತ್ತು Y ಕೊ-ಆರ್ಡಿನೇಟ್, ಕಾಲಂ B ನಲ್ಲಿ ಟ್ರೇಸ್ ಆಗಿವೆ ಎಂದು ಗಮನಿಸಿ.
02:34 ಈ ಪಾಠವನ್ನು ತಯಾರಿಸಿದ ಮೇಲೆ, ಟ್ರೇಸ್ ನ ದೃಶ್ಯವನ್ನು ನೋಡಿ ಅಥವಾ Spreadsheet View ನಲ್ಲಿಯ ಡೇಟಾವನ್ನು ನೋಡಿ, ಫಂಕ್ಷನ್ ಅನ್ನು ಊಹಿಸಲು, ನೀವು ವಿದ್ಯಾರ್ಥಿಗಳನ್ನು ಕೇಳಬಹುದು.
02:44 ಊಹೆ ಮಾಡಿದ ಫಂಕ್ಷನ್ ಅನ್ನು Input ಬಾರ್ ನಲ್ಲಿ f(x) = 3 x ಎಂದು ಸೇರಿಸಬಹುದು. ಜಿಯೊಜಿಬ್ರಾದಲ್ಲಿ ಎಷ್ಟುಪಟ್ಟು (times) ಎಂದು ಹೇಳಲು ಸ್ಪೇಸ್ ಅನ್ನು ಬಳಸಬಹುದು. Enter ಒತ್ತಿ.
03:05 ಊಹೆ ಮಾಡಿದ್ದು ಸರಿಯಾಗಿದ್ದರೆ, ಟ್ರೇಸ್ ಮಾಡಿದ ಎಲ್ಲ ಬಿಂದುಗಳು ಇನ್ಪುಟ್ ಮಾಡಿದ ರೇಖೆಯ ಮೇಲೆ ಅಥವಾ ಫಂಕ್ಷನ್ ಮೇಲೆ ಇರುತ್ತವೆ.
03:15 ಸಂಕ್ಷಿಪ್ತವಾಗಿ,
03:18 ನಾವು 'xValue' ಎನ್ನುವ ಒಂದು ಸ್ಲೈಡರ್ ಅನ್ನು ಮಾಡಿದೆವು. (xValue, 3 xValue) ಈ ಕೊ-ಆರ್ಡಿನೇಟ್ ಗಳನ್ನು ಹೊಂದಿರುವ A ಬಿಂದುವನ್ನು ರಚಿಸಿದೆವು.
03:27 ವಿಭಿನ್ನ xValue ಗಳಿಗಾಗಿ, A ಬಿಂದುವಿನ X ಹಾಗೂ Y ಕೊ-ಆರ್ಡಿನೇಟ್ ಗಳನ್ನು ರೆಕಾರ್ಡ್ ಮಾಡಲು, ನಾವು Record to Spreadsheet ಎನ್ನುವ ಆಯ್ಕೆಯನ್ನು ಬಳಸಿದೆವು.
03:34 ನಂಬರ್ ಪ್ಯಾಟರ್ನ್ ಗಳನ್ನು (ಸಂಖ್ಯೆಯ ಮಾದರಿ) ಅಧ್ಯಯನಮಾಡಿ, ನಾವು ಒಂದು ಇನ್ಪುಟ್ ಫಂಕ್ಷನ್ ಅನ್ನು ಊಹೆ ಮಾಡಿದೆವು.
03:40 ಈಗ, ಪಾಠದ ಎರಡನೆಯ ಭಾಗಕ್ಕೆ ಬರೋಣ. ಮೊದಲು, A ಬಿಂದುವಿನಿಂದ ನಾವು Trace ಎನ್ನುವುದನ್ನು ತೆಗೆದುಹಾಕೋಣ.
03:53 ‘y ಇಂಟರ್ಸೆಪ್ಟ್’ ಪ್ಯಾರಾಮೀಟರ್ ಅನ್ನು ನಾವು ಸೇರಿಸೋಣ.
03:56 ಇನ್ನೊಂದು ಸ್ಲೈಡರನ್ನು ತಯಾರಿಸಿ ಅದನ್ನು 'b' ಎಂದು ಹೆಸರಿಸೋಣ. minimum ಮತ್ತು maximum ಡಿಫಾಲ್ಟ್ ವ್ಯಾಲ್ಯೂಗಳನ್ನು ಹಾಗೆಯೇ ಇಟ್ಟು, Increment ಎನ್ನುವುದನ್ನು 1 ಕ್ಕೆ ಬದಲಾಯಿಸೋಣ. ಮತ್ತು Apply ಅನ್ನು ಕ್ಲಿಕ್ ಮಾಡೋಣ.
04:10 ಆನಂತರ ನಾವು 'b' ಯ ವ್ಯಾಲ್ಯೂ ಅನ್ನು ಸರಿಸೋಣ. Move ಟೂಲನ್ನು ಬಳಸಿ, 'b' ಯ ವ್ಯಾಲ್ಯೂ ಅನ್ನು 2 ಕ್ಕೆ ಜರುಗಿಸಿ. ‘xValue’ ಅನ್ನು ಕನಿಷ್ಠ ವ್ಯಾಲ್ಯೂದೆಡೆಗೆ (minimum) ಬದಲಾಯಿಸಿ.
04:24 ನಂತರ, A ಬಿಂದುವಿನ ಮೇಲೆ ರೈಟ್-ಕ್ಲಿಕ್ ಮಾಡಿ. Object Properties ಅನ್ನು ಆಯ್ಕೆಮಾಡಿ, Y ಕೊ-ಆರ್ಡಿನೇಟ್ ಅನ್ನು 3 xValue + b ಎಂದು ಬದಲಾಯಿಸಿ. ಕೀಬೋರ್ಡ್ ಮೇಲಿನ Tab ಅನ್ನು ಒತ್ತಿ.
04:40 Show Trace ಎನ್ನುವುದನ್ನು ಆಯ್ಕೆಮಾಡಿ. ಆಮೇಲೆ, ‘ಸ್ಪ್ರೆಡ್ ಶೀಟ್ ವ್ಯೂ’ಅನ್ನು ಜರುಗಿಸಿ. ಹೀಗೆ, ನೀವು ಕಾಲಂ C ಹಾಗೂ D ಗಳನ್ನು ನೋಡಲು ಸಾಧ್ಯವಿದೆ.
04:50 ನಿಮ್ಮ ಕರ್ಸರನ್ನು C1 ಸೆಲ್ ನ ಮೇಲಿಡಿ. ಮತ್ತೊಮ್ಮೆ Record to Spreadsheet ಆಯ್ಕೆಯನ್ನು ಬಳಸಿ. ಮೊದಲು, A ಬಿಂದುವನ್ನು ಆಯ್ಕೆಮಾಡಿ. ನಿಮಗೆ ಇದನ್ನೇ ಟ್ರೇಸ್ ಮಾಡಬೇಕಾಗಿದೆ. ಆಮೇಲೆ, ‘xValue’ ಅನ್ನು ಕನಿಷ್ಠ ವ್ಯಾಲ್ಯೂದಿಂದ (minimum) ಗರಿಷ್ಠದೆಡೆಗೆ (maximum) ಜರುಗಿಸಿ.
05:06 A ಬಿಂದುವಿನ X ಕೊ-ಆರ್ಡಿನೇಟ್, ‘ಸ್ಪ್ರೆಡ್ ಶೀಟ್’ನ ಕಾಲಂ C ಯಲ್ಲಿ ಮತ್ತು A ಬಿಂದುವಿನ Y ಕೊ-ಆರ್ಡಿನೇಟ್, ಕಾಲಂ D ಯಲ್ಲಿ ಟ್ರೇಸ್ ಆಗಿವೆ ಎಂದು ನೀವು ನೋಡಬಹುದು.
05:17 ಈ ಡೇಟಾದಿಂದ, ಪ್ಯಾಟರ್ನ್ ಅನ್ನು ತಿಳಿಯಲು ಮತ್ತು ಫಂಕ್ಷನ್ ಅನ್ನು ಊಹಿಸಲು ನೀವು ವಿದ್ಯಾರ್ಥಿಗಳನ್ನು ಕೇಳಬಹುದು.
05:22 ಈ ಪ್ರಕ್ರಿಯೆಯನ್ನು ವಿಭಿನ್ನ 'b' ವ್ಯಾಲ್ಯೂಗಳಿಗಾಗಿ ಪುನರಾವರ್ತಿಸಿ. ಊಹೆ ಮಾಡಿದ ಫಂಕ್ಷನ್ ಅನ್ನು Input ಬಾರ್ ನಲ್ಲಿ ಸೇರಿಸಬಹುದು.
05:29 ನಮ್ಮ ಹತ್ತಿರ ಈಗಾಗಲೇ f(x) (ಎಫ್ ಆಫ್ x) ಇರುವುದರಿಂದ, ನಾನು g(x)= 3 x + b ಎಂದು ಬಳಸುತ್ತೇನೆ. ಇಲ್ಲಿ 'b' ಯ ವ್ಯಾಲ್ಯೂ 2 ಆಗಿದೆ. ಮತ್ತು Enter ಅನ್ನು ಒತ್ತುತ್ತೇನೆ.
05:51 ಈಗ ಸಂಕ್ಷಿಪ್ತವಾಗಿ: ನಾವು 'b' ಎನ್ನುವ ಇನ್ನೊಂದು ಸ್ಲೈಡರನ್ನು ಮಾಡಿದೆವು. A ಬಿಂದುವಿನ ಕೊ-ಆರ್ಡಿನೇಟ್ ಗಳನ್ನು xValue ಮತ್ತು Y ಕೊ-ಆರ್ಡಿನೇಟ್ ಗಾಗಿ 3 xValue + b ಎಂದು ಬದಲಾಯಿಸಿದೆವು.
06:02 ವಿಭಿನ್ನ 'xValue' ಹಾಗೂ 'b' ವ್ಯಾಲ್ಯೂಗಳಿಗಾಗಿ, A ಬಿಂದುವಿನ X ಮತ್ತು Y ಕೊ-ಆರ್ಡಿನೇಟ್ ಗಳನ್ನು ರೆಕಾರ್ಡ್ ಮಾಡಲು, Record to Spreadsheet ಎನ್ನುವ ಆಯ್ಕೆಯನ್ನು ಬಳಸಿದೆವು.
06:11 ನಾವು f(x) = 3 x + b ಎನ್ನುವ ಒಂದು ಇನ್ಪುಟ್ ಫಂಕ್ಷನ್ ಅನ್ನು ಊಹೆಮಾಡಿದ್ದೇವೆ. ಇಲ್ಲಿ ನಾವು ಫಂಕ್ಷನ್ ಅನ್ನು g(x) ಎಂದು ಕರೆಯುತ್ತೇವೆ.
06:23 ಈಗ ಒಂದು ಅಸೈನ್ಮೆಂಟ್:
06:25 ‘xValue’ ಹಾಗೂ 'a' ಎನ್ನುವ ಸ್ಲೈಡರ್ಗಳನ್ನು ಮಾಡುವ ಮೂಲಕ, ಒಂದು ‘ಕ್ವಾಡ್ರಾಟಿಕ್ ಫಂಕ್ಷನ್’ಅನ್ನು ಟ್ರೇಸ್ ಮಾಡುವುದನ್ನು ಈ ಅಸೈನ್ಮೆಂಟ್ ಒಳಗೊಂಡಿರುತ್ತದೆ.
06:33 X ಕೊ-ಆರ್ಡಿನೇಟ್ ಗಾಗಿ ‘xValue’ ಹಾಗೂ Y ಕೊ-ಆರ್ಡಿನೇಟ್ ಗಾಗಿ xValue^2 ಗಳನ್ನು ಹೊಂದಿರುವ A ಬಿಂದುವನ್ನು ರಚಿಸಿ.
06:43 ವಿಭಿನ್ನ 'xValue' ಹಾಗೂ 'a' ವ್ಯಾಲ್ಯೂಗಳಿಗಾಗಿ, A ಬಿಂದುವಿನ X ಮತ್ತು Y ಕೊ-ಆರ್ಡಿನೇಟ್ ಗಳನ್ನು ರೆಕಾರ್ಡ್ ಮಾಡಲು, Record to Spreadsheet ಎನ್ನುವ ಆಯ್ಕೆಯನ್ನು ಬಳಸಿ.
06:51 ಮತ್ತು f(x)= a x^2 ಫಂಕ್ಷನ್ ಅನ್ನು ಊಹೆ ಮಾಡುವುದು ಮತ್ತು ಇನ್ಪುಟ್ ಮಾಡುವುದು. ಅಸೈನ್ಮೆಂಟನ್ನು ಮುಂದುವರೆಸಲು ನಾವು, ಒಂದು ‘ಕ್ವಾಡ್ರಾಟಿಕ್ ಫಂಕ್ಷನ್’, a x^2 + bx + 3 ಯನ್ನು ಟ್ರೇಸ್ ಮಾಡುವವರಿದ್ದೇವೆ.
07:05 ನಾವು 'b' ಎನ್ನುವ ಇನ್ನೊಂದು ಸ್ಲೈಡರನ್ನು ಮಾಡುತ್ತೇವೆ. ಕೊ-ಆರ್ಡಿನೇಟ್ಸ್ ‘xValue’, Y ಕೊ-ಆರ್ಡಿನೇಟ್ ಗಾಗಿ a xValue^2 + b xValue + 3 ಗಳನ್ನು ಹೊಂದಿರುವ A ಎನ್ನುವ ಬಿಂದುವನ್ನು ರಚಿಸಿ.
07:18 ವಿಭಿನ್ನ 'a' ಹಾಗೂ 'b' ವ್ಯಾಲ್ಯೂಗಳ ಸಂಯೋಜನೆಗಳಿಗಾಗಿ, A ಬಿಂದುವಿನ X ಮತ್ತು Y ಕೊ-ಆರ್ಡಿನೇಟ್ ಗಳನ್ನು ರೆಕಾರ್ಡ್ ಮಾಡಲು, Record to Spreadsheet ಎನ್ನುವ ಆಯ್ಕೆಯನ್ನು ಬಳಸಿ.
07:26 f(x) = a x^2 + b x + 3 ಈ ಫಂಕ್ಷನ್ ಅನ್ನು ಊಹೆಮಾಡಿ ಮತ್ತು ಇನ್ಪುಟ್ ಮಾಡಿ.
07:32 ನಾನು ಈ ಜಿಯೊಜಿಬ್ರಾ ಫೈಲನ್ನು ಈಗಾಗಲೇ ಕ್ರಿಯೇಟ್ ಮಾಡಿದ್ದೇನೆ. ಈ ಸಂದರ್ಭದಲ್ಲಿ ನಾವು Trace On ಅನ್ನು ಆಯ್ಕೆಮಾಡೋಣ. ಇದನ್ನು ಈಗಾಗಲೇ ಮಾಡಲಾಗಿದೆ.
07:43 ನಾವು ‘xValue’ ಅನ್ನು ಕನಿಷ್ಠ ವ್ಯಾಲ್ಯೂಗೆ (minimum) ಬದಲಾಯಿಸುವೆವು. ನಂತರ Record to Spreadsheet ಅನ್ನು ಬಳಸುವೆವು. A ಬಿಂದುವನ್ನು ಆಯ್ಕೆಮಾಡಿ xValue ಸ್ಲೈಡರನ್ನು ಜರುಗಿಸುವೆವು.
08:05 ನಾವು ಊಹೆಮಾಡಿದ ಫಂಕ್ಷನ್ ಅನ್ನು f(x) = 2 x^2 + 2 x + 3 ಗೆ ಇನ್ಪುಟ್ ಮಾಡಬಹುದು. ಇದನ್ನೇ ನಾನು ‘ಕಾನ್ಸ್ಟಂಟ್’ (ಸ್ಥಿರ) ವ್ಯಾಲ್ಯೂಅನ್ನು ಸೆಟ್ ಮಾಡಲು ಬಳಸಿದ್ದೇನೆ.
08:28 ಈ ಪ್ಯಾರಾಬೋಲಾದ ಉದ್ದಕ್ಕೂ ಟ್ರೇಸ್ ಗಳನ್ನು ಗಮನಿಸಿ.
08:36 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆಒಳ್ಳೆಯ ‘‘ಬ್ಯಾಂಡ್ವಿಡ್ತ್’’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:47 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:02 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

[1]

09:16 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

PoojaMoolya, Sandhya.np14