Geogebra/C3/Theorems-on-Chords-and-Arcs/Kannada
From Script | Spoken-Tutorial
Revision as of 22:35, 27 April 2015 by Sandhya.np14 (Talk | contribs)
Time | Narration |
00:01 | ನಮಸ್ಕಾರ. Theorems on Chords and Arcs in Geogebra (ಥೇರಮ್ಸ್ ಆನ್ ಕಾರ್ಡ್ಸ್ ಆಂಡ್ ಆರ್ಕ್ಸ್ ಇನ್ ಜಿಯೊಜಿಬ್ರಾ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನ ಕೊನೆಗೆ, |
00:09 | ನಿಮಗೆ |
00:14 | ವರ್ತುಲದ ‘ಕಾರ್ಡ್’ಗಳು ಹಾಗೂ |
00:16 | ವರ್ತುಲದ ವ್ರತ್ತ ಖ೦ಡಗಳು (arcs) ಇವುಗಳ ಬಗ್ಗೆ ಪ್ರಮೇಯಗಳನ್ನು ಸಿದ್ಧಮಾಡಲು ಸಾಧ್ಯವಾಗುವುದು. |
00:18 | ನಿಮಗೆ ಜಿಯೊಜಿಬ್ರಾದೊಂದಿಗೆ (Geogebra) ಕೆಲಸ ಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ. |
00:23 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು |
00:32 | Ubuntu Linux OS Version 11.10 (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ವರ್ಷನ್ 11.10) ಹಾಗೂ |
00:36 | Geogebra Version 3.2.47.0 (ಜಿಯೊಜಿಬ್ರಾ ವರ್ಷನ್ 3.2.47. 0) ಗಳನ್ನು ಬಳಸುತ್ತಿದ್ದೇನೆ. |
00:42 | ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು: |
00:47 | * Circle with Center and Radius (ಸರ್ಕಲ್ ವಿತ್ ಸೆಂಟರ್ ಆಂಡ್ ರೇಡಿಯಸ್) |
00:49 | * Circular Sector with Center between Two Points (ಸರ್ಕ್ಯುಲರ್ ಸೆಕ್ಟರ್ ವಿತ್ ಸೆಂಟರ್ ಬಿಟವೀನ್ ಟು ಪಾಯಿಂಟ್ಸ್) |
00:53 | * Circular Arc with Center between Two points (ಸರ್ಕ್ಯುಲರ್ ಆರ್ಕ್ ವಿತ್ ಸೆಂಟರ್ ಬಿಟವೀನ್ ಟು ಪಾಯಿಂಟ್ಸ್) |
00:56 | * Midpoint (ಮಿಡ್ ಪಾಯಿಂಟ್) |
00:58 | * Perpendicular line (ಪರ್ಪೆಂಡಿಕ್ಯುಲರ್ ಲೈನ್). |
01:00 | ನಾವು ಒಂದು ಹೊಸ ಜಿಯೊಜಿಬ್ರಾ ವಿಂಡೋವನ್ನು ತೆರೆಯೋಣ. |
01:02 | ಕ್ರಮವಾಗಿ Dash home >> Media Apps ಗಳ ಮೇಲೆ ಕ್ಲಿಕ್ ಮಾಡಿ. |
01:06 | Type ನ ಅಡಿಯಲ್ಲಿ , Education >> ಮತ್ತು Geogebra ಗಳನ್ನು ಆರಿಸಿಕೊಳ್ಳಿ. |
01:15 | ನಾವು ಒಂದು ಪ್ರಮೇಯವನ್ನು ಮಂಡಿಸೋಣ. |
01:17 | “ವರ್ತುಲದ ಕೇಂದ್ರಬಿಂದುವಿನಿಂದ ಕಾರ್ಡ್ ಗೆ ಎಳೆದ ಲಂಬವು, ಆ ಕಾರ್ಡ್ ಅನ್ನು ದ್ವಿಭಾಗಿಸುತ್ತದೆ”. |
01:23 | ವರ್ತುಲದ ಕೇಂದ್ರಬಿಂದು A ದಿಂದ ಕಾರ್ಡ್ BC ಗೆ ಎಳೆದ ಲಂಬವು ಅದನ್ನು ದ್ವಿಭಾಗಿಸುತ್ತದೆ. |
01:32 | ನಾವು ಈ ಪ್ರಮೇಯವನ್ನು ಸಿದ್ಧಮಾಡೋಣ. |
01:37 | ಈ ಟ್ಯುಟೋರಿಯಲ್ ಗಾಗಿ, ನಾನು Axes ಗೆ ಬದಲಾಗಿ Grid ಲೇಔಟ್ (ವಿನ್ಯಾಸ) ಅನ್ನು ಬಳಸುವೆನು. |
01:42 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:44 | Graphic view (ಗ್ರಾಫಿಕ್ ವ್ಯೂ) ನಲ್ಲಿ Axes ಅನ್ನು ಅನ್-ಚೆಕ್ (ತೆಗೆದುಹಾಕಿ) ಮಾಡಿ. |
01:47 | Grid ಅನ್ನು ಆಯ್ಕೆಮಾಡಿ. |
01:51 | ನಾವು ಒಂದು ವರ್ತುಲವನ್ನು ರಚಿಸೋಣ. |
01:54 | ಟೂಲ್-ಬಾರ್ ನಲ್ಲಿಯ Circle with Center and Radius ಎನ್ನುವ ಟೂಲನ್ನು ಆಯ್ಕೆಮಾಡಿ. |
01:58 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ A ಬಿಂದುವನ್ನು ಗುರುತಿಸಿ. |
02:01 | ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:03 | ತ್ರಿಜ್ಯಕ್ಕಾಗಿ ನಾವು 3 ಎಂದು ಟೈಪ್ ಮಾಡೋಣ. |
02:06 | OK ಯ ಮೇಲೆ ಕ್ಲಿಕ್ ಮಾಡಿ. |
02:07 | ಕೇಂದ್ರಬಿಂದು A ಹಾಗೂ 3cm ತ್ರಿಜ್ಯವನ್ನು ಹೊಂದಿರುವ ಒಂದು ವರ್ತುಲವನ್ನು ರಚಿಸಲಾಗಿದೆ. |
02:13 | ನಾವು A ಬಿಂದುವನ್ನು ಜರುಗಿಸೋಣ ಹಾಗೂ ವರ್ತುಲದ ಚಲನೆಯನ್ನು ನೋಡೋಣ. |
02:19 | Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ. |
02:22 | ವರ್ತುಲದ ಪರಿಧಿಯ ಮೇಲೆ B ಹಾಗೂ C ಬಿಂದುಗಳನ್ನು ಗುರುತಿಸಿ. |
02:27 | ಕಾರ್ಡ್ BC, ಎಳೆಯಲ್ಪಟ್ಟಿದೆ. |
02:30 | A ಬಿಂದುವಿನ ಮೂಲಕ ಹಾಯ್ದುಹೋಗುವ ಒಂದು ಲಂಬರೇಖೆಯನ್ನು ನಾವು ಕಾರ್ಡ್ BC ಗೆ ಎಳೆಯೋಣ. |
02:35 | ಟೂಲ್-ಬಾರ್ ನಲ್ಲಿಯ Perpendicular Line ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:39 | ‘ಕಾರ್ಡ್’ BC ಯ ಮೇಲೆ ಹಾಗೂ A ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
02:44 | ನಾವು B ಬಿಂದುವನ್ನು ಸರಿಸಿ ಅದರೊಂದಿಗೆ ಲಂಬರೇಖೆಯು ಹೇಗೆ ಸರಿದಾಡುವದೆಂದು ನೋಡೋಣ. |
02:52 | ಲಂಬರೇಖೆ ಹಾಗೂ ‘ಕಾರ್ಡ್ BC’ ಗಳು ಒಂದು ಬಿಂದುವಿನಲ್ಲಿ ಛೇದಿಸುತ್ತವೆ. |
02:56 | Intersect Two Objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:58 | ಛೇದನ ಬಿಂದುವನ್ನು D ಎಂದು ಗುರುತಿಸಿ. |
03:03 | D ಬಿಂದು, ಕಾರ್ಡ್ BC ಯ ಮಧ್ಯಬಿಂದು ಆಗಿದೆಯೋ ಹೇಗೆ ಎಂದು ನಾವು ಪರೀಕ್ಷಿಸೋಣ. |
03:08 | Distance ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:11 | B, D ... D, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
03:19 | BD ಹಾಗೂ DC ಗಳ ದೂರವು ಸಮನಾಗಿದೆ ಎನ್ನುವುದನ್ನು ಗಮನಿಸಿ. |
03:24 | ಇದು, D ಬಿಂದು, ಕಾರ್ಡ್ BC ಯ ಮಧ್ಯಬಿಂದು ಆಗಿದೆ ಎಂದು ಸೂಚಿಸುತ್ತದೆ. |
03:29 | ನಾವು ಕೋನ CDA ಅನ್ನು ಅಳೆಯೋಣ. |
03:33 | Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:35 | C, D, A ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
03:42 | ಕೋನ CDA, 90 ಅಂಶ ಗಳಾಗಿದೆ (ಡಿಗ್ರೀ). |
03:46 | ಪ್ರಮೇಯವನ್ನು ಸಿದ್ಧಮಾಡಲಾಗಿದೆ. |
03:50 | ನಾವು C ಬಿಂದುವನ್ನು ಜರುಗಿಸಿ ಅದರೊಂದಿಗೆ ದೂರಗಳು ಹೇಗೆ ಬದಲಾಗುವುವೆಂದು ನೋಡೋಣ. |
04:03 | ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. |
04:05 | ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ. |
04:08 | ನಾನು ಫೈಲ್ ನ ಹೆಸರನ್ನು 'circle-chord' ಎಂದು ಟೈಪ್ ಮಾಡುವೆನು. |
04:12 | 'circle-chord'. |
04:16 | Save ನ ಮೇಲೆ ಕ್ಲಿಕ್ ಮಾಡುತ್ತೇನೆ. |
04:21 | ನಾವು ಮುಂದಿನ ಪ್ರಮೇಯವನ್ನು ನೋಡೋಣ. |
04:28 | ಒಂದೇ ಆರ್ಕ್ ನಿಂದ ರಚಿಸಲ್ಪಟ್ಟ ಕೋನಗಳು (inscribed angles) ಸಮವಾಗಿರುತ್ತವೆ. |
04:34 | ಆರ್ಕ್ (ವ್ರತ್ತಖ೦ಡ) BC ಯಿಂದ ಮಾಡಲ್ಪಟ್ಟ BDC ಹಾಗೂ BEC ಕೋನಗಳು ಸಮವಾಗಿರುತ್ತವೆ. |
04:44 | ಈ ಪ್ರಮೇಯವನ್ನು ನಾವು ಪರೀಕ್ಷಿಸೋಣ. |
04:48 | ನಾವು ಹೊಸದೊಂದು Geogebra ವಿಂಡೋವನ್ನು ತೆರೆಯೋಣ. |
04:51 | ಕ್ರಮವಾಗಿ File , New ಗಳ ಮೇಲೆ ಕ್ಲಿಕ್ ಮಾಡಿ. |
04:55 | ನಾವು ಒಂದು ವರ್ತುಲವನ್ನು ರಚಿಸೋಣ. |
04:57 | ಟೂಲ್-ಬಾರ್ ನಲ್ಲಿಯ Circle with Center through Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:01 | A ಅನ್ನು ಕೇಂದ್ರಬಿಂದುವೆಂದು ಗುರುತಿಸಿ, |
05:04 | B ಬಿಂದುವನ್ನು ಪಡೆಯಲು ಮತ್ತೊಮ್ಮೆ ಕ್ಲಿಕ್ ಮಾಡಿ. |
05:10 | ನಾವು BC ಎನ್ನುವ ಒಂದು ಆರ್ಕನ್ನು ರಚಿಸೋಣ. |
05:13 | Circular Arc with Center between Two Points ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:17 | A, B ಬಿಂದುಗಳ ಮೇಲೆ ಹಾಗೂ ಪರಿಧಿಯ ಮೇಲೆ C ಬಿಂದುವಿಗಾಗಿ ಕ್ಲಿಕ್ ಮಾಡಿ. |
05:24 | ಆರ್ಕ BC ಯು ರಚಿಸಲ್ಪಟ್ಟಿದೆ. |
05:26 | ನಾವು ಆರ್ಕ್ BC ಯ ಗುಣಧರ್ಮಗಳನ್ನು ಬದಲಾಯಿಸೋಣ. |
05:30 | Algebra View (ಆಲ್ಜಿಬ್ರಾ ವ್ಯೂ) ನಲ್ಲಿ, |
05:32 | ‘d’ ಎನ್ನುವ ಆಬ್ಜೆಕ್ಟ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
05:35 | Object Properties ಅನ್ನು ಆಯ್ಕೆಮಾಡಿ. |
05:37 | Color ಅನ್ನು Green (ಹಸಿರುಬಣ್ಣ) ಎಂದು ಆಯ್ಕೆಮಾಡಿ, Close ನ ಮೇಲೆ ಕ್ಲಿಕ್ ಮಾಡಿ. |
05:46 | New Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ವೃತ್ತದ ಪರಿಧಿಯ ಮೇಲೆ D ಹಾಗೂ E ಬಿಂದುಗಳನ್ನು ಗುರುತಿಸಿ. |
05:56 | ನಾವು ಆರ್ಕ್ BC ಯಿಂದ, D ಹಾಗೂ E ಬಿಂದುಗಳಲ್ಲಿ ಎರಡು ಕೋನಗಳನ್ನು ರಚಿಸೋಣ. |
06:03 | Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:05 | E, B, D, C ಬಿಂದುಗಳ ಮೇಲೆ ಹಾಗೂ ಆಕೃತಿಯನ್ನು ಪೂರ್ಣಗೊಳಿಸಲು ಇನ್ನೊಮ್ಮೆ E ಯ ಮೇಲೆ ಕ್ಲಿಕ್ ಮಾಡಿ. |
06:18 | ನಾವು BDC ಹಾಗೂ BEC ಕೋನಗಳನ್ನು ಅಳೆಯೋಣ. |
06:26 | Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:28 | B, D, C ಹಾಗೂ B, E, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
06:40 | BDC ಹಾಗೂ BEC ಕೋನಗಳು ಸಮವಾಗಿವೆ ಎಂದು ನಾವು ನೋಡಬಹುದು. |
06:51 | ನಾವು ಮುಂದಿನ ಪ್ರಮೇಯವನ್ನು ಮಂಡಿಸೋಣ. |
06:55 | "ಆರ್ಕ್ ನಿಂದ ಕೇಂದ್ರಬಿಂದುವಿನಲ್ಲಿ ರಚಿಸಲ್ಪಟ್ಟ ಕೋನವು, ಅದೇ ಆರ್ಕ್ ನಿಂದ ವೃತ್ತದಲ್ಲಿ ರಚಿಸಲ್ಪಟ್ಟ ಕೋನದ (inscribed angle) ಎರಡರಷ್ಟಿರುತ್ತದೆ”. |
07:06 | ಆರ್ಕ್ BC ಯಿಂದ, A ದಲ್ಲಿಮಾಡಲ್ಪಟ್ಟ BAC ಕೋನವು, ಅದೇ ಆರ್ಕ್ ನಿಂದ ವೃತ್ತದಲ್ಲಿ ಮಾಡಲ್ಪಟ್ಟ BEC ಹಾಗೂ BDC ಕೋನಗಳ ಎರಡರಷ್ಟಿರುತ್ತದೆ. |
07:22 | ಈ ಪ್ರಮೇಯವನ್ನು ನಾವು ಸಿದ್ಧಮಾಡೋಣ. |
07:26 | ನಾವು ಒಂದು ಸೆಕ್ಟರ್ ABC ಯನ್ನು ರಚಿಸೋಣ. |
07:30 | Circular Sector with Center between Two Points ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
07:35 | A, B, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
07:45 | ABC ಸೆಕ್ಟರ್ ನ ಬಣ್ಣವನ್ನು ಬದಲಾಯಿಸೋಣ. |
07:48 | ABC ಸೆಕ್ಟರ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
07:51 | Object Properties ಅನ್ನು ಆಯ್ಕೆಮಾಡಿ. |
07:54 | Color ಗಾಗಿ Green (ಹಸಿರುಬಣ್ಣ) ಅನ್ನು ಆಯ್ಕೆಮಾಡಿ, Close ನ ಮೇಲೆ ಕ್ಲಿಕ್ ಮಾಡಿ. |
08:00 | ನಾವು BAC ಕೋನವನ್ನು ಅಳೆಯೋಣ. |
08:04 | Angle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. B, A, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
08:15 | BAC ಕೋನವು, BEC ಹಾಗೂ BDC ಕೋನಗಳ ಎರಡರಷ್ಟಿದೆ. |
08:28 | ನಾವು C ಬಿಂದುವನ್ನು ಜರುಗಿಸೋಣ. |
08:32 | BAC ಕೋನವು ಯಾವಾಗಲೂ BEC ಹಾಗೂ BDC ಕೋನಗಳ ಎರಡರಷ್ಟಿರುತ್ತದೆ ಎನ್ನುವುದನ್ನು ಗಮನಿಸಿ. |
08:41 | ಹೀಗೆ, ಈ ಪ್ರಮೇಯಗಳು ಸಿದ್ಧಮಾಡಲ್ಪಟ್ಟಿವೆ. |
08:45 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. |
08:48 | ಸಂಕ್ಷಿಪ್ತವಾಗಿ, |
08:53 | ಈ ಟ್ಯುಟೋರಿಯಲ್ ನಲ್ಲಿ, ಈ ಕೆಳಗಿನವುಗಳನ್ನು ಸಿದ್ಧಮಾಡಲು ನಾವು ಕಲಿತಿದ್ದೇವೆ: |
08:57 | * ಕೇಂದ್ರಬಿಂದುವಿನಿಂದ ಕಾರ್ಡ್ ಗೆ ಎಳೆದ ಲಂಬವು, ಕಾರ್ಡ್ ಅನ್ನು ದ್ವಿಭಾಗಿಸುತ್ತದೆ. |
09:00 | * ಒಂದೇ ವ್ರತ್ತ ಖ೦ಡದಿಂದ (arc), ವ್ರತ್ತದಲ್ಲಿ ಮಾಡಲ್ಪಟ್ಟ ಕೋನಗಳು ಸಮನಾಗಿರುತ್ತವೆ. |
09:06 | * ಕೇಂದ್ರಬಿಂದುವಿನಲ್ಲಿ ಆರ್ಕ್ ನಿಂದ ಮಾಡಲ್ಪಟ್ಟ ಕೋನವು, ಅದೇ ಆರ್ಕ್ ನಿಂದ ವೃತ್ತದಲ್ಲಿ ಮಾಡಲ್ಪಟ್ಟ ಯಾವುದೇ ಕೋನದ ಎರಡರಷ್ಟಿರುತ್ತದೆ. |
09:15 | ನಿಮಗಾಗಿ ಒಂದು ಅಸೈನ್ಮೆಂಟ್: |
09:19 | ಒಂದು ವೃತ್ತದ ಸಮಾನ ಕಾರ್ಡ್ ಗಳು, ಕೇಂದ್ರಬಿಂದುವಿನಿಂದ ಸಮನಾದ ದೂರದಲ್ಲಿ ಇರುತ್ತವೆ ಎನ್ನುವುದನ್ನು ಪರೀಕ್ಷಿಸಿ. |
09:24 | ಒಂದು ವರ್ತುಲವನ್ನು ರಚಿಸಿ. |
09:25 | Segment with Given Length from Point ಎನ್ನುವ ಟೂಲನ್ನು ಆಯ್ಕೆಮಾಡಿ. |
09:29 | ಒಂದೇ ಅಳತೆಯ ಎರಡು ಕಾರ್ಡ್ ಗಳನ್ನು ಎಳೆಯಲು ಇದನ್ನು ಬಳಸಿ. |
09:33 | ಕೇಂದ್ರಬಿಂದುವಿನಿಂದ ‘ಕಾರ್ಡ್’ಗಳಿಗೆ ಲಂಬರೇಖೆಗಳನ್ನು ಎಳೆಯಿರಿ. |
09:37 | ಛೇದನ ಬಿಂದುಗಳನ್ನು ಗುರುತಿಸಿ. |
09:40 | ಲಂಬವಾದ ದೂರಗಳನ್ನು ಅಳೆಯಿರಿ. |
09:44 | ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು. |
09:48 | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:51 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:53 | ನಿಮಗೆಒಳ್ಳೆಯ ‘‘ಬ್ಯಾಂಡ್ವಿಡ್ತ್’’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
10:00 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:03 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:06 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
10:14 | “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
10:18 | ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. |
10:25 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
10:29 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .
ವಂದನೆಗಳು. |