Jmol-Application/C2/Introduction-to-Jmol-Application/Kannada
From Script | Spoken-Tutorial
Time | Narration |
00:01 | ತಮ್ಮೆಲ್ಲರಿಗೂ ಸ್ವಾಗತ. |
00:02 | Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾನು, |
00:11 | Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
00:16 | ನಾವು, |
00:18 | Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್), |
00:22 | * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು, |
00:25 | * ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು, |
00:28 | * hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು. |
00:34 | ನಾವು |
00:36 | *ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು, |
00:41 | ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು. |
00:45 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ: |
00:49 | * ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು |
00:50 | * ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು. |
00:53 | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು |
00:56 | * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ, |
01:00 | * Jmol ನ ೧೨.೨.೨ ನೇ ಆವೃತ್ತಿ, |
01:03 | ಮತ್ತು * Java ೭ ನ್ನು ಬಳಸುತ್ತಿದ್ದೇನೆ. |
01:06 | ದಯವಿಟ್ಟು ಗಮನಿಸಿ. |
01:07 | Jmol ಅಪ್ಲಿಕೇಶನ್ ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು. |
01:14 | Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ: |
01:17 | * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ Molecular Viewer (ಮೋಲೆಕ್ಯುಲರ್ ವ್ಯೂಅರ್) ಆಗಿದೆ. |
01:21 | * ರಾಸಾಯನಿಕ ರಚನೆಗಳ ೩ ಆಯಾಮದ (3D) ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ. |
01:27 | ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ದ್ವಿತೀಯ (secondary) ರಚನೆಯನ್ನು ವೀಕ್ಷಿಸಲು ಬಳಸಲಾಗುತ್ತದೆ. |
01:33 | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ. |
01:37 | Ubuntu OS(ಉಬಂಟು ಒ ಎಸ್) ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಉಪಯೋಗಿಸಿ ಮಾಡಲಾಗುವುದು. |
01:45 | ಈ ಟ್ಯುಟೋರಿಯಲ್ ಅನ್ನು ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.org ನ Linux ಸರಣಿಯಲ್ಲಿ ನೋಡಿ. |
01:56 | ವಿಂಡೋಸ್, ಮ್ಯಾಕ್ ಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು ದಯವಿಟ್ಟು www.jmol.sourceforge.net ನೋಡಿ. |
02:08 | ಮತ್ತು ಇನ್ಸ್ಟಾಲ್ ಮಾಡಲು ವೆಬ್ ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ. |
02:13 | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
02:20 | ‘ಜೆಮೋಲ್ ಅಪ್ಲಿಕೇಶನ್’ ಅನ್ನು ಒಪನ್ ಮಾಡಲು Dash Home (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ. |
02:24 | ‘ಸರ್ಚ್ ಬಾಕ್ಸ್’ ನಲ್ಲಿ Jmol ಎಂದು ಟೈಪ್ ಮಾಡಿ. |
02:27 | ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ. |
02:30 | ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ ವನ್ನು ಓಪನ್ ಮಾಡಲು Jmol ಐಕಾನ್ ಮೇಲೆ ಕ್ಲಿಕ್ ಮಾಡಿ. |
02:35 | ‘ಜೆಮೋಲ್ ಅಪ್ಲಿಕೇಶನ್ ' ವಿಂಡೊ ನ ಮೆನ್ಯೂ ಬಾರ್, ಮೇಲ್ತುದಿಯಲ್ಲಿದೆ. |
02:40 | 'ಮೆನ್ಯೂ ಬಾರ್’ನ ಕೆಳಗೆ 'ಟೂಲ್ ಬಾರ್' ಇದೆ. |
02:43 | ಇಲ್ಲಿ'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ ' ಡಿಸ್ಪ್ಲೇ ಎರಿಯಾ' ಇದೆ. |
02:48 | ಮೆನ್ಯು ಬಾರ್ ನಲ್ಲಿ File, Edit, Display, ಗಳಂತಹ ವಿವಿಧ ಆಯ್ಕೆಗಳಿವೆ. |
02:56 | ಇಲ್ಲಿಯ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ. |
03:00 | ‘ಟೂಲ್ಸ್’ ಮೆನು ಗೆ ಇನ್ನೂ ಆನೇಕ ಆಯ್ಕೆಗಳೊಂದಿಗೆ ಅಣುಗಳ ಮಧ್ಯದ ದೂರವನ್ನು ಅಳೆಯುವ ಸಾಧನಗಳಿವೆ. |
03:07 | ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ ಗಳಲ್ಲಿ ಕಲಿಯೋಣ. |
03:12 | ‘Help’ ಮೆನುನಲ್ಲಿ ‘ಜೆಮೋಲ್ ಅಪ್ಲಿಕೇಶನ್’ ನ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಇದೆ. |
03:18 | ಇದು ‘ಡಾಕ್ಯುಮೆಂಟೇಷನ್’ ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ ನ್ನು ಹೊಂದಿದೆ. |
03:23 | ಟೂಲ್-ಬಾರ್ ಬಹಳಷ್ಟು ‘ಮೆನ್ಯು ಐಕಾನ್’ ಗಳನ್ನು ಹೊಂದಿದೆ. |
03:27 | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಕ್ರಿಯೆಗಳನ್ನು ಶೀಘ್ರವಾಗಿ ಮಾಡುತ್ತವೆ. |
03:37 | ಇಲ್ಲಿ ಅಣುಗಳ ‘ಸೆಟ್’ ಅನ್ನು ಆಯ್ಕೆ ಮಾಡಲು, ತಿರುಗಿಸಲು, ದೂರವನ್ನು ಅಳೆಯಲು ‘ಐಕಾನ್’ ಗಳ ಸೆಟ್ ಇದೆ. |
03:47 | ಪರಮಾಣುಗಳ ಮಾದರಿಗಳನ್ನು ‘ಎಡಿಟ್’ ಮತ್ತು ರಚನೆ ಮಾಡಲು ‘modelkit ಐಕಾನ್’ ಅನ್ನು ಉಪಯೋಗಿಸುತ್ತಾರೆ. |
03:53 | 'ಜೆಮೋಲ್ ಪ್ಯಾನೆಲ್' ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು. |
03:58 | ‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ‘ವಿಂಡೋ’ದ ಯಾವುದೇ ಮೂಲೆಗೆ ‘ಕರ್ಸರ್’ ಅನ್ನು ತೆಗೆದುಕೊಂಡು ಹೋಗಿ. |
04:04 | ಈಗ ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ. |
04:10 | ‘ಮೆನ್ಯು ಬಾರ್ ' ನಲ್ಲಿನ Display ಮೆನ್ಯು ವನ್ನು ‘ಪ್ಯಾನಲ್’ ನ್ ಸೈಜ್ ಬದಲಾಯಿಸಲು ಉಪಯೋಗಿಸಬಹುದು. |
04:16 | Display ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ. |
04:20 | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನುನಮೂದಿಸಬಹುದಾದ ಒಂದು ‘ಡಾಯಲಾಗ್ ಬಾಕ್ಸ್’, ತೆರೆದುಕೊಳ್ಳುತ್ತದೆ. |
04:27 | ನನಗೆ ‘೮೦೦ ಬೈ ೬೦೦’ ಪಿಕ್ಸೆಲ್ ಗಳ ‘ಸೈಜ್’ ನ ವಿಂಡೋ ಬೇಕು. |
04:32 | ಆದ್ದರಿಂದ ನಾನು ‘೮೦೦ ಸ್ಪೇಸ್ ೬೦೦’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
04:41 | ಈಗ ‘ಜೆಮೋಲ್ ಪ್ಯಾನೆಲ್’ “೮೦೦ ಬೈ ೬೦೦” ಕ್ಕೆ ‘ರಿ-ಸೈಜ್’ ಆಗುತ್ತದೆ. |
04:47 | ಈಗ ಮುಂದುವರೆದು ನಾವು ಕೆಲವು ಸರಳ ಸಾವಯವ ಪರಮಾಣುಗಳ ಮಾದರಿಗಳನ್ನು ರಚನೆ ಮಾಡೋಣ. |
04:53 | Modelkit ನಮಗೆ ಕನಿಷ್ಠ ಎನರ್ಜಿಯಿಂದ ಮಾದರಿಗಳನ್ನು ಕಟ್ಟಲು ಮತ್ತು ಮಾರ್ಪಡಿಸಲು ಅನುಮತಿಸುತ್ತದೆ. |
05:00 | ಟೂಲ್ ಬಾರ್ ನಲ್ಲಿಯ modelkit (ಮಾಡೆಲ್-ಕಿಟ್) ಐಕಾನ್ ಮೇಲೆ ಕ್ಲಿಕ್ ಮಾಡಿ. |
05:04 | Methane (ಮಿಥೇನ್) ನ ಮಾದರಿಯು ಪ್ಯಾನೆಲ್ನ ಮೇಲೆ ಕಾಣಿಸಿಕೊಳ್ಳುತ್ತದೆ. |
05:07 | ‘ಜೆಮೋಲ್ ಪ್ಯಾನೆಲ್’ ನ್ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣುತ್ತದೆ. |
05:12 | ಈ ‘ಮೆನ್ಯು’ ಸರಳವಾಗಿ ಅಣುಗಳನ್ನು ಕೂಡಿಸುವ, ‘ಡಿಲೀಟ್’ ಮತ್ತು ‘ಡ್ರಾಗ್’ ಮಾಡುವ ಸಮರ್ಥ ಲಕ್ಷಣಗಳನ್ನು ಹೊಂದಿದೆ. |
05:19 | * ‘ಫಂಕ್ಶನಲ್ ಗ್ರೂಪ್’ಗಳನ್ನು ಕೂಡಿಸಿ. |
05:21 | * ಬಾಂಡ್ಸ್ ಗಳನ್ನು ‘ಡಿಲಿಟ್’, ‘ಆಡ್’ ಮತ್ತು ‘ರೊಟೆಟ್’ ಮಾಡಿ. |
05:25 | * ‘ಹೈಡ್ರೊಜೆನ್’ ಗಳನ್ನು ಕೂಡಿಸಿ, ‘ಫೈಲ್’ ಗಳನ್ನು ಮಿನಿಮೈಜ್ ಮತ್ತು ಸೇವ್ ಮಾಡಿ. |
05:30 | ಮೆನ್ಯೂವಿನ ಮೇಲೆ ನಿರ್ದಿಷ್ಟ ಲಕ್ಷಣವನ್ನು ಉಪಯೋಗಿಸಲು, ಒದಗಿಸಿದ ‘ಚೆಕ್- ಬಾಕ್ಸ್’ ನ ಮೇಲೆ ಕ್ಲಿಕ್ ಮಾಡಿ. |
05:35 | Modelkit ಕಾರ್ಯವು ನಮಗೆ Methyl group (ಮಿಥೈಲ್ ಗುಂಪಿ)ಗೆ ಬದಲಾಗಿ Hydrogen atom (ಹೈಡ್ರೋಜೆನ್ ಪರಮಾಣುವನ್ನು) ಅನ್ನು ಬಳಸಲು ಅನುಮತಿಸುತ್ತದೆ. |
05:41 | ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿಗೆ (Hydrogen atomಗೆ) ಕರ್ಸರ್ ತನ್ನಿ. |
05:46 | ಆ Hydrogen atom (ಹೈಡ್ರೊಜೆನ್ ಅಣು) ನ ಮೇಲೆ ಒಂದು ಕೆಂಪು ರಿಂಗ್ ಕಾಣುತ್ತದೆ. |
05:50 | ಅಣುವಿನ ಮೇಲೆ ಕ್ಲಿಕ್ ಮಾಡಿ. |
05:52 | Methyl (ಮಿಥೈಲ್) ಗುಂಪು ಜೋಡಿಸಿದ್ದನ್ನು ತಾವು ಗಮನಿಸಬಹುದು. |
05:56 | Methane molecule (ಮಿಥೇನ್ ಮೊಲೆಕ್ಯುಲ್) ಈಗ Ethane (ಈಥೇನ್) ಆಗಿ ಪರಿವರ್ತನೆ ಆಯಿತು. |
06:00 | ಅದೇ ಹಂತವನ್ನು ಪುನರಾವರ್ತಿಸಿ. |
06:03 | Propane ನ ಮಾದರಿಯನ್ನು ಪಡೆಯಲು hydrogen atom (ಹೈಡ್ರೋಜನ್ ಆಟಂ) ಮೇಲೆ ಕ್ಲಿಕ್ ಮಾಡಿ. |
06:07 | ಈ ಪರಮಾಣುವಿನ ಮೇಲಿನ ಕನಿಷ್ಠ ಎನರ್ಜಿ (Energy minimization) ನಮಗೆ ಹೆಚ್ಚು ಸ್ಠಿರ ಕನ್ಫರ್ಮೇಷನ್ ಅನ್ನು ಕೊಡುತ್ತದೆ. |
06:13 | Energy minimization (ಎನರ್ಜಿ ಕನಿಷ್ಠ) ಮಾಡಲು: |
06:15 | Modelkit ಮೆನುವಿನ ಆಯ್ಕೆಗಳನ್ನು ಕೆಳಗೆ ಸ್ಕ್ರೊಲ್ ಮಾಡಿ. |
06:19 | ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:22 | ಈಗ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ಆದ ಪ್ರೋಪೇನ್ ಪರಮಾಣುವಿನ (Propane molecule) ನ ಮಾದರಿ ನಮಲ್ಲಿ ಇದೆ. |
06:28 | ಇದನ್ನು '.mol' ಫೈಲ್ ಎಂದು ಸೇವ್ ಮಾಡಲು Modelkit menu ವನ್ನು ತೆರೆಯಿರಿ. |
06:33 | 'menu' ವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:37 | ಸ್ಕ್ರೀನ್ ಮೇಲೆ 'Save' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
06:41 | ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾದಲ್ಲಿ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ. |
06:45 | ನಾನು ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
06:50 | ಆದ್ದರಿಂದ 'Desktop’ ಅನ್ನು ಆಯ್ಕೆ ಮಾಡಿ ಮತ್ತು'Open' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
06:54 | 'File Name ' ಗೆ ಹೋಗಿ ಮತ್ತು text box (ಟೆಕ್ಸ್ಟ್ ಬಾಕ್ಸ್) ನಲ್ಲಿ 'Propane' ಎಂದು ಟೈಪ್ ಮಾಡಿ. |
06:59 | ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಆಪ್ಶನ್ ಅನ್ನು ಆಯ್ಕೆ ಮಾಡಿ. |
07:03 | ಈಗ ಡೈಲಾಗ್ ಬಾಕ್ಸ್ ನ ಕೆಳ-ಬಲ ಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:08 | Propane ನ 3D ಮಾದರಿಯು Desktop ನ ಮೇಲೆ '.mol' ಫೈಲ್ ಎಂದು ಸೇವ್ ಆಗುತ್ತದೆ. |
07:14 | ಜೆಮೋಲ್ ನಿಂದ ನಿರ್ಗಮಿಸಲು File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಮನಿಂದ ನಿರ್ಗಮಿಸಲು Exit ಆಯ್ಕೆಯನ್ನು ಆರಿಸಿಕೊಳ್ಳಿ. |
07:21 | ನಾವು ಈಗ ಸಂಕ್ಷೇಪಿಸೋಣ. |
07:22 | ನಾವು ಈ ಟ್ಯುಟೋರಿಯಲ್ ನಲ್ಲಿ: |
07:25 | * ಜೆಮೋಲ್ ಅಪ್ಲಿಕೇಷನ್ ವಿಂಡೋನ ಬಗೆಗೆ |
07:27 | * ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು, |
07:29 | * Methane, Ethane ಹಾಗೂ Propane ಮುಂತಾದ ಸರಳ ಸಾವಯವ ಪರಮಾಣುಗಳ 3D ಮಾಡೆಲ್ ಗಳ ರಚನೆಗಾಗಿ ಟೂಲ್ ಬಾರ್ ನ Modelkit ಫಂಕ್ಶ್ ನ್ ಅನ್ನು ಬಳಸುವುದು, |
07:40 | * ಮಿಥೈಲ್ ಗ್ರುಪ್’ನೊಂದಿಗೆ ‘ಹೈಡ್ರೋಜೆನ್’ಅನ್ನು ಪರ್ಯಾಯವಾಗಿ ಸೇರಿಸುವದರ ಮೂಲಕ ಪರಮಾಣುಗಳನ್ನು ರಚಿಸುವುದು, |
07:45 | * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠಗೊಳಿಸುವುದು. |
07:48 | * ಮತ್ತು ಇಮೇಜ್ ಅನ್ನು .mol ಫೈಲ್ ಎಂದು ಸೇವ್ ಮಾಡುವುದರ ಬಗೆಗೆ ಕಲಿತೆವು. |
07:52 | Jmol Modelkit ಫಂಕ್ಶ್ ನ್ ಅನ್ನು ಬಳಸಿ ಈ ಕೆಳಗಿನ ಪರಮಾಣುಗಳ ಮಾದರಿಗಳನ್ನು ಮಾಡಿ. |
07:58 | * 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್). |
08:03 | * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠ ಮಾಡಿ. |
08:07 | * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ. |
08:11 | * ಟೂಲ್ ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ. |
08:15 | ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು. |
08:19 | ಈ ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿ.
http://spoken-tutorial.org/What http://spoken-tutorial.org/What_is_a_Spoken_Tutorial |
08:22 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:26 | ನಿಮ್ಮಲ್ಲಿ ಸರಿಯಾದ್ ಬ್ಯಾಂಡ್ವಿಡ್ಥ್ ಇಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿ. |
08:30 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್’, ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:36 | ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ. |
08:40 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org |
08:47 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ಎನ್ನುವುದು ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ಎನ್ನುವುದರ ಭಾಗವಾಗಿದೆ. |
08:52 | ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ. |
08:59 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕ…..
ವಂದನೆಗಳು. |