Scilab/C2/Conditional-Branching/Kannada
ಸೈಲ್ಯಾಬ್ ನಲ್ಲಿ Conditional Branching ವಿಷಯದ ಅಧ್ಯಯನಕ್ಕೆ ನಿಮಗೆ ಸ್ವಾಗತ. ಈ ಪಠ್ಯಕ್ರಮ ಅಧ್ಯಯನ ಮಾಡಲು ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಫಲಕದ ಕಿಟಿಕಿ ತೆರೆಯಿರಿ.
ಇಂದು ಸೈಲ್ಯಾಬ್ ನ ಎರಡು ಪ್ರಕಾರದ ಶರ್ತ ಬದ್ಧ ರಚನೆಗಳ ಬಗ್ಗೆ ಚರ್ಚೆ ಮಾಡೋಣ. ಅವೆಂದರೆ "if-then-else" ರಚನೆ ಹಾಗೂ "select-case-conditional" ರಚನೆ.
ಕೊಟ್ಟಿರುವ ಶರತ್ತು ಪೂರೈಸಿದರೆ, ’if' ಹೇಳಿಕೆಯು, ಹೇಳಿಕೆಗಳ ಒಂದು ಸಮೂಹವನ್ನು ಕಾರ್ಯಗತ ಮಾಡಲು ಆದೇಶ ನೀಡುತ್ತದೆ. ಉದಾಹರಣೆಗೆ:
n=42 , if (n==42) then disp("The number is forty two") end
ಇಲ್ಲಿ '=' ಚಿಹ್ನೆಯು ಕೊಟ್ಟ ಕೆಲಸದ ನಿರ್ವಾಹಕ ಆಗಿದ್ದು , ಚರಾಕ್ಷರ 'n 'ಗೆ 42 ಮೌಲ್ಯ ಕೊಟ್ಟಿದೆ. ಸಮಾನತೆ ನಿರ್ವಾಹಕನಾಗಿ '==' ಚಿಹ್ನೆಯು ತನ್ನ ಬಲ ಹಾಗೂ ಎಡ ನಿರ್ವಾಹಕ ಪದಗಳ ಸಮಾನತೆಯನ್ನು ಖಚಿತಪಡಿಸುತ್ತದೆ. [ಈ ಉದಾಹರಣೆಯಲ್ಲಿ n ಮತ್ತು 42] ಮತ್ತು ಉತ್ತರವನ್ನು ಬೂಲಿಯನ್ ನಲ್ಲಿ ಕೊಡುತ್ತದೆ.
ಮೊದಲನೇ ಸಾಲಿನ ನಂತರ comma ಚಿಹ್ನೆಯು ಐಚ್ಛಿಕ ವಾಗಿದೆ ಹಾಗೂ ಕೀಲಿಪದ ’then’ ಕೂಡ ಐಚ್ಛೆಕ. ಇವುಗಳ ಬದಲು ಕೊಮ ಅಥವಾ ಕ್ಯಾರೇಜ್ ರಿಟರ್ನ್ ಕೂಡಾ ಉಪಯೋಗಿಸಬಹುದು.
ಕೀಲಿಪದ ’end' ಎನ್ನುವುದು ’if' ರಚನೆಯನ್ನು ಸಮಾಪ್ತಿಗೊಳಿಸುತ್ತದೆ.
Script ಕಾರ್ಯಗತ ಆದನಂತರ ಕೆಳಕಂಡ ಫಲಿತಾಂಶ ದೊರೆಯುತ್ತದೆ.
ಒಂದು ಶರತ್ತು ನಿಜವಾದರೆ ಹೇಳಿಕೆಗಳ ಒಂದು ಸಮೂಹವನ್ನು ಹೇಗೆ ಕಾರ್ಯಗತ ಮಾಡುವುದು ಎಂದು ನಾವು ಈವರೆಗೂ ನೋಡಿದೆವು
ಆ ಶರತ್ತು ಸುಳ್ಳಾದರೆ ಅಥವಾ ಬೇರಾವುದಾದರೂ ಶರತ್ತು ತೃಪ್ತಿದಾಯಕವೋ ಎಂದು ಖಚಿತಪಡಿಸಿಕೊಳ್ಳಲು ನಾವು ಇಷ್ಟಪಟ್ಟರೆ ಆಗ ಹೇಳಿಕೆಗಳ ಇನ್ನೊಂದು ಸಮೂಹವನ್ನು ಹೇಗೆ ಕಾರ್ಯಗತ ಮಾಡುವುದು ಎಂದು ನೋಡೋಣ. ಇದನ್ನು ನಾವು ಅನುಕ್ರಮವಾಗಿ 'else' ಅಥವಾ 'elseif' ಕೀಲಿಪದಗಳನ್ನು ಉಪಯೋಗಿಸಿ ಪಡೆಯಬಹುದು. ಅದನ್ನು ಹೀಗೆ ಕಂಡುಹಿಡಿಯಲಾಗುತ್ತದೆ (ಕ್ರಿಯೆಯನ್ನು ತೋರಿಸಲಾಗಿದೆ):
ಈ ಉದಾಹರಣೆ ಯಲ್ಲಿ 'n' ಗೆ 54 ಮೌಲ್ಯ ಕೊಟ್ಟು, ’if’ ಉಪಯೋಗಿಸಿ ನಿಜ, ಮತ್ತು ’else' ಉಪಯೋಗಿಸಿ ಸುಳ್ಳು, ಈ ಎರಡೂ ಶರತ್ತುಗಳ ಬಗ್ಗೆ ಪರೀಕ್ಷಿಸಲಾಗಿದೆ. ಇದನ್ನು ಇಲ್ಲಿ ವಿವರಿಸಲಾಗಿದೆ.
n = 54 if (n == 42) then disp ("The number is forty two") elseif (n == 54) then, disp ("The number is fifty four") else disp ("The number is neither forty two nor fifty four") end
ಫಲಿತಾಂಶವು ಪ್ರದರ್ಶಿತವಾಗಿದೆ.
ಗಮನಿಸಿ, ಮೇಲ್ಕಂಡ ಉದಾಹರಣೆಗಳು ಹಲವು ಪಂಕ್ತಿಗಳಲ್ಲಿ ಇವೆ. ಅವುಗಳನ್ನು ಸೂಕ್ತರೀತಿಯಲ್ಲಿ ಅರ್ಧವಿರಾಮ ಹಾಗೂ ಕೊಮ ಚಿಹ್ನೆಗಳನ್ನು ಉಪಯೋಗಿಸಿ ಒಂದೇ ಪಂಕ್ತಿಯಲ್ಲಿ ಬರೆಯಬಹುದು.
x = 3; y = 5; z = 4; if x>5 then disp(x), elseif x>6 then disp(y), else disp(z), end
ಆಯ್ದ ಹೇಳಿಕೆಯು ಹಲವು ಕವಲುಗಳನ್ನು ಸುಲಭ ಮತ್ತು ಸರಳ ರೀತಿಯಲ್ಲಿ ಜೋಡಿಸಲು ಅನುಮತಿ ಕೊಡುತ್ತದೆ. ಚರಾಕ್ಷರದ ಮೌಲ್ಯಕ್ಕೆ ಅನುಸಾರವಾಗಿ ತಕ್ಷೀರು ಕೀಲಿಪದಕ್ಕೆ ಸಂಭಂದಿಸಿದ ಹೇಳಿಕೆಯನ್ನು ಕಾರ್ಯಗತ ಮಾಡಲು ಅದು ಅನುಮತಿ ಕೊಡುತ್ತದೆ. ಅದರಲ್ಲಿ ಅವಶ್ಯವಿದ್ದಷ್ಟು ಶಾಖೆಗಳು ಇರಬಹುದು.
ಬನ್ನಿ, ಒಂದು ಉದಾಹರಣೆಯೊಂದಿಗೆ ಇದನ್ನು ಪರೀಕ್ಷಿಸೋಣ.
ನಾವು ಒಂದು ಚರಾಕ್ಷರ 'n'ಗೆ ಮೌಲ್ಯ 100 ಕೊಟ್ಟು, ತಕ್ಷೀರು 42, 54 ಹಾಗೂ ’else’ ಮೂಲಕ ಪ್ರತಿನಿಧಿಸಲ್ಪಡುವ ಒಂದು ಪೂರ್ವನಿಗದಿತ ತಕ್ಷೀರನ್ನು ಪರೀಕ್ಷಿಸೋಣ.
n = 100 select n case 42 disp("The number is forty two") case 54 disp("The number is fifty four") else disp ("The number is neither forty two nor fifty four") end
ಇಲ್ಲಿ ಫಲಿತಾಂಶವನ್ನು ನೋಡಬಹುದು (ಇದು ಫಲಿತಾಂಶವನ್ನು ತೋರಿಸುತ್ತದೆ).
ಇದರೊಂದಿಗೆ ಸೈಲ್ಯಾಬ್ ಮೂಲಕ conditional branching ಕುರಿತು ಈ ಮೌಖಿಕ ಅಧ್ಯಯನ/ತರಬೇತಿ ಮುಗಿಯಿತು.
ಈ ಮೌಖಿಕ ಅಭ್ಯಾಸದಲ್ಲಿ ನಾವು ’if-elseif-else statement’ ಹಾಗು ’select statement’ ಗಳ ಬಗ್ಗೆ ತಿಳಿದೆವು. ಸೈಲ್ಯಾಬಿನಲ್ಲಿ ಇನ್ನೂ ಹಲವು ಕಾರ್ಯಗಳು ಇವೆ. ಅವುಗಳ ಬಗ್ಗೆ ಬೇರೆ ಅಧ್ಯಯನಗಳಲ್ಲಿ ಕಲಿಸಲಾಗುವುದು. ಸೈಲಾಬ್ ಸಂಪರ್ಕವನ್ನು ವೀಕ್ಷಿಸುತ್ತಿರಿ.
ಮೌಖಿಕ ಅಧ್ಯಯನವು "Talk to a Teacher" ಯೋಜನೆಯ ಒಂದು ಅಂಗವಾಗಿದೆ. ಇದು ICT ಮೂಲಕ ರಾಷ್ಟ್ರೀಯ ಶಿಕ್ಷಣ ಅಭಿಯಾನ ಇವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. ಇದರಬಗ್ಗೆ ಹೆಚ್ಹಿನ ಮಾಹಿತಿ http://spoken-tutorial.org/NMEICT-Intro, ಇಲ್ಲಿ ದೊರೆಯುತ್ತದೆ
ಭಾಗವಹಿಸಿದ್ದಕ್ಕೆ ಧನ್ಯವಾದಗಳು. ಶುಭವಿದಾಯ