GIMP/C2/Rotating-And-Cropping-An-Image/Kannada

From Script | Spoken-Tutorial
Revision as of 14:31, 25 November 2014 by Vasudeva ahitanal (Talk | contribs)

Jump to: navigation, search
Time Narration
00:22 ಗಿಂಪ್ ನ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:24 ಈ ಇಮೇಜನ್ನು ಎಡಿಟ್ ಮಾಡಲು ಆರಂಭಿಸುವ ಮೊದಲು, ನಿಮ್ಮ ನಿಜವಾದ ಫೋಟೋಗ್ರಫಿಗಾಗಿ, RAW (ರಾ) ಅನ್ನು ಬಳಸುವ ಬಗೆಗೆ ನಿಮಗೆ ಸಂಕ್ಷಿಪ್ತವಾಗಿ ಹೇಳಬೇಕಾಗಿದೆ.
00:33 ನಾನು ಈ ಇಮೇಜನ್ನು JPEG (ಜೇಪೆಗ್) ನಲ್ಲಿ ತೆಗೆದಿದ್ದರೆ, ನನಗೆ ಎನ್ಕೋಡ್ ಮಾಡಲು ಬ್ರೈಟ್ನೆಸ್ನ 256 ‘ಸ್ಟೆಪ್’ಗಳು ಸಿಗುತ್ತಿತ್ತು.
00:42 ಇದು ಹೆಚ್ಚುಕಡಿಮೆ ಕಪ್ಪು ಬಿಳುಪು ಆಗಿದ್ದು, ಸ್ವಲ್ಪ ನೀಲಿ-ಹಸಿರು ಛಾಯೆಯಿದ್ದು, ಮೂಲತಃ ಬೂದುಬಣ್ಣದ್ದು ಮಾತ್ರ ಆಗಿರುವದನ್ನು ನೀವು ನೋಡಬಹುದು.
00:52 JPEG (ಜೇಪೆಗ್) ನೊಂದಿಗೆ, ನೀವು ಬೂದುಬಣ್ಣದ 256 ವಿಭಿನ್ನ ವ್ಯಾಲ್ಯೂಗಳನ್ನು ಹೊಂದಿರುವಿರಿ,
01:00 ಕಪ್ಪು ಬಣ್ಣಕ್ಕಾಗಿ ಸೊನ್ನೆ ಹಾಗೂ ಬಿಳಿ ಬಣ್ಣಕ್ಕಾಗಿ 255.
01:05 ಈ ಇಮೇಜನಲ್ಲಿ ಬಿಳಿ ಬಣ್ಣವಿಲ್ಲ, ಸ್ವಲ್ಪ ಕಪ್ಪು ಬಣ್ಣ ಮಾತ್ರ ಇದೆ.
01:11 ಹೀಗಾಗಿ ಈ ಸ್ಥಳದ ಸ್ವಲ್ಪ ಭಾಗವನ್ನು ಮಾತ್ರ ಉಪಯೋಗಿಸಲಾಗಿದೆ.
01:16 ಎಷ್ಟು ಎನ್ನುವುದನ್ನು ನಾನು ಆಮೇಲೆ ತೋರಿಸುತ್ತೇನೆ.
01:19 ನಾನು ಈ ಇಮೇಜನ್ನು RAW (ರಾ) ನಲ್ಲಿ ತೆಗೆದಿದ್ದೆ. ನನ್ನ ಕ್ಯಾಮೆರಾ, raw (ರಾ) ಇಮೇಜ್ಗಳನ್ನು 12 bit (ಹನ್ನೆರಡು ಬಿಟ್) ಡೇಟಾ ಫಾರ್ಮ್ಯಾಟ್ ನಲ್ಲಿ ಸ್ಟೋರ್ ಮಾಡುತ್ತದೆ.
01:27 ವ್ಯಾಲ್ಯೂಗಳನ್ನು ಹರಡಿದನಂತರ ಈ ಇಮೇಜನ್ನು ನಾನು RAW ಕನ್ವರ್ಟರ್ ಮೂಲಕ ಪಡೆದಿದ್ದೇನೆ. ಇಲ್ಲಿ ಬೂದುಬಣ್ಣದ 256 (ಇನ್ನೂರೈವತ್ತಾರು) ವಿಭಿನ್ನ ವ್ಯಾಲ್ಯೂಗಳಿವೆ. ಈಗ ನಾನು ಇಮೇಜನ್ನು ಎಡಿಟ್ ಮಾಡಲು ಆರಂಭಿಸಬಹುದು.
01:42 ಮೊದಲಿನದಕ್ಕೆ ಹೋಲಿಸಿ ನೋಡಿದಾಗ ಈ ‘ಇಮೇಜ್’ನಲ್ಲಿ ಹೆಚ್ಚು ವಿವರಗಳನ್ನು ಸೇವ್ ಮಾಡಲಾಗಿದೆ.
01:47 ನನಗೆ ನೆನಪಿದ್ದಂತೆ ಇದು ಮೊದಲನೆಯ ಇಮೇಜ್ ಆಗಿದೆ ಮತ್ತು ಇದನ್ನು ನಾನು ಪರಿವರ್ತನೆಯ ನಂತರ ಪಡೆದಿದ್ದೇನೆ.
01:54 ಎರಡನೆಯ ಇಮೇಜ್, ಮುಂದಿನ ಪ್ರಕ್ರಿಯೆಗಾಗಿ ಒಂದು ಉತ್ತಮವಾದ ಆಧಾರವಾಗಿದೆ. ಇದು ಮೊದಲನೆಯ ಇಮೇಜ್ನ ಲಹರಿಯನ್ನು ಹೊಂದಿದ್ದರೂ ಉತ್ತಮವಾಗಿ ಕಾಣಬಲ್ಲ ಚಿತ್ರವಾಗಿ ಫಲಿಸುತ್ತದೆ.
02:06 ಈಗ ನಾನು ಈ ಎರಡು ಇಮೇಜ್ಗಳನ್ನು ಗಿಂಪ್ನಲ್ಲಿ ಓಪನ್ ಮಾಡಿದ್ದೇನೆ. ಆದ್ದರಿಂದ ನಾವು ಎರಡೂ ಇಮೇಜ್ಗಳ ಹಿಸ್ಟೋಗ್ರಾಮ್ ನತ್ತ ನೋಡೋಣ.
02:14 ಈ ಹಿಸ್ಟೋಗ್ರಾಮ್, ಇಮೇಜ್ನ ಡೈಲಾಗ್ ನಲ್ಲಿ ಮರೆಯಾಗಿದೆ.
02:17 ಆದರೆ, ನಾವು ಮೂರು ವಿಧದಲ್ಲಿ ಇಮೇಜ್ನ ಡೈಲಾಗನ್ನು ತಲುಪಬಹುದು, ಮೊದಲನೆಯ ವಿಧವು ಟೂಲ್ ಬಾರ್ ನಲ್ಲಿ ಇರುತ್ತದೆ.
02:33 ಎರಡನೆಯದಾಗಿ ಇಲ್ಲಿ, Access the Image ಎನ್ನುವ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ Dialogs ನ ಮೇಲೆ ಕ್ಲಿಕ್ ಮಾಡುವುದು.
02:40 ಮೂರನೆಯದಾಗಿ, ಇಮೇಜ್ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Dialogs ಮತ್ತು Histogram ಗಳನ್ನು ಕ್ಲಿಕ್ ಮಾಡುವುದು.
02:48 ಇಲ್ಲಿ, ಇದು ಮೊದಲನೆಯ ಇಮೇಜ್ನ ಹಿಸ್ಟೋಗ್ರಾಮ್ ಆಗಿದೆ,
02:51 ಇದನ್ನು ಸ್ವಲ್ಪ ದೊಡ್ಡದು ಮಾಡಿರಿ ಮತ್ತು ಇಮೇಜ್ನಲ್ಲಿಯ ವಿವಿಧ ವರ್ಣಗಳ, ವಿಭಿನ್ನ ಪಿಕ್ಸೆಲ್ಗಳ ವಿತರಣೆಯನ್ನು ನೀವು ಇಲ್ಲಿ ನೋಡುತ್ತೀರಿ.
02:59 ಡಿಜಿಟಲ್ ಇಮೇಜ್, ಸಂಖ್ಯೆಗಳ ಮೂಲಕ ವರ್ಣಚಿತ್ರವನ್ನು ಮಾಡಿದಂತೆ ಇರುತ್ತದೆ.
03:03 ನೀವು ಇಮೇಜ್ನಲ್ಲಿ ಝೂಮ್ ಇನ್ ಮಾಡಿದಾಗ, ಬಹಳಷ್ಟು ಚಿಕ್ಕ ಚಿಕ್ಕ ಟೈಲ್ಗಳನ್ನು ನೋಡುತ್ತೀರಿ ಮತ್ತು ಈ ಟೈಲ್ಗಳಲ್ಲಿ ಪ್ರತಿಯೊಂದು ಟೈಲ್, ಪ್ರತ್ಯೇಕ ಬಣ್ಣವನ್ನು ಹೊಂದಿದೆ. ಇದು ಪಿಕ್ಸೆಲ್ ಎಂದು ಕರೆಯಲ್ಪಡುತ್ತದೆ.
03:14 ಪ್ರತಿಯೊಂದು ಬಣ್ಣವು ಒಂದು ವ್ಯಾಲ್ಯೂವಿನಿಂದ ಗುರುತಿಸಲ್ಪಡುತ್ತದೆ. ‘ಕಲರ್ ಪಿಕ್ಕರ್’ ನ ಸಹಾಯದಿಂದ ನಾನು ನಿಮಗೆ ಈ ವ್ಯಾಲ್ಯೂಗಳನ್ನು ತೋರಿಸಲು ಸಾಧ್ಯವಿದೆ.
03:26 ನಾನು ಕಲರ್ ಪಿಕ್ಕರ್ ಅನ್ನು ಬಳಸಿದಾಗ, Red, Green ಮತ್ತು Blue ಬಣ್ಣಗಳಿಗಾಗಿ ವ್ಯಾಲ್ಯೂಗಳನ್ನು ಪಡೆಯುತ್ತೇನೆ.
03:32 ಈ ಇಮೇಜ್ನಲ್ಲಿ, ಕೆಂಪು ಬಣ್ಣದ ವ್ಯಾಲ್ಯೂ, ಹಸಿರು ಹಾಗೂ ನೀಲಿ ಬಣ್ಣಗಳ ವ್ಯಾಲ್ಯೂಗಿಂತ ಸ್ವಲ್ಪ ಕಡಿಮೆ ಆಗಿದೆ.
03:38 ಹಸಿರು ಮತ್ತು ನೀಲಿ ಬಣ್ಣಗಳು ಹೆಚ್ಚು ಕಡಿಮೆ ಒಂದೇ ವ್ಯಾಲ್ಯೂವನ್ನು ಹೊಂದಿವೆ.
03:43 ಡಿಜಿಟಲ್ ಫೋಟೋಗ್ರಫಿ ಎನ್ನುವುದು, ಸಂಖ್ಯೆಗಳ ಮೂಲಕ ವರ್ಣಚಿತ್ರವನ್ನು ಮಾಡುವದಾಗಿದೆ.
03:46 ಈ ಇಮೇಜ್ನಲ್ಲಿ, ನಾನು 0 (ಸೊನ್ನೆ) ಯಿಂದ 255 (ಇನ್ನೂರೈವತ್ತೈದು) ರವರೆಗೆ ಸಂಖ್ಯೆಗಳನ್ನು ಪಡೆದಿದ್ದೇನೆ. ಇಲ್ಲಿ ನಿಜವಾಗಿಯೂ ಕಪ್ಪಾಗಿರುವ ಭಾಗವಿದೆ ಆದರೆ ಇದು ಕೊನೆಯ ಇಮೇಜ್ನಲ್ಲಿಯೂ ಇರಬಹುದು ಎಂದು ನನಗೆನಿಸುತ್ತಿಲ್ಲ.
04:00 ನಿಜವಾದ ಇಮೇಜ್ ಇಲ್ಲಿಂದ, 80 ರ (ಎಂಭತ್ತರ) ಅಕ್ಕಪಕ್ಕದಲ್ಲಿ ಆರಂಭವಾಗುತ್ತದೆ. ಇಮೇಜ್ನ ಪ್ರಕಾಶಮಾನವಾದ ಭಾಗ ಇಲ್ಲಿ, 200 ರ ಅಕ್ಕಪಕ್ಕದಲ್ಲಿ ಇರುತ್ತದೆ.
04:10 ಹೀಗಾಗಿ, ನಮಗೆ 0 (ಸೊನ್ನೆ) ಯಿಂದ 256 (ಇನ್ನೂರೈವತ್ತಾರು) ರವರೆಗೆ ಸ್ಥಳವಿದೆ ಆದರೆ ನಾವು 120 (ನೂರಿಪ್ಪತ್ತು) ನ್ನುಮಾತ್ರ ಬಳಸುತ್ತೇವೆ. ಇದು ನಾವು ಬಳಸಲು ಸಾಧ್ಯವಿದ್ದ ಡೇಟಾದ ಅರ್ಧಕ್ಕಿಂತ ಕಡಿಮೆ ಆಗಿದೆ.
04:23 ಆ ಕಾರಣದಿಂದಾಗಿ, ಈ ಇಮೇಜ್ನ ಬಹಳಷ್ಟು ಮಾಹಿತಿ ಇಲ್ಲಿ ಕಳೆದು ಹೋಗಿದೆ.
04:29 ನಾವು ಎರಡನೆಯ ಇಮೇಜ್ನ ಹಿಸ್ಟೋಗ್ರಾಮ್ಅನ್ನು ನೋಡೋಣ.
04:33 ನಾವು ಇಲ್ಲಿ ನೋಡುವಂತೆ, ಮೊದಲಿನದಕ್ಕೆ ಹೋಲಿಸಿದಾಗ ಈ ಹಿಸ್ಟೋಗ್ರಾಮ್ನಲ್ಲಿ ಹೆಚ್ಚು ಡೇಟಾ ಇರುತ್ತದೆ ಆದರೆ ವಕ್ರರೇಖೆಯ ರೂಪ ಒಂದೇ ತರಹ ಇದೆ.
04:45 ನೀವು ಈ ಎರಡು ಹಿಸ್ಟೋಗ್ರಾಮ್ಗಳನ್ನು ಹೋಲಿಸಿರಿ.
04:51 ಎರಡನೆಯ ಇಮೇಜ್ನಲ್ಲಿಯ ವಿವರಗಳು ಹರಡಿಕೊಂಡಿವೆ. ಹೀಗಾಗಿ, ಇಲ್ಲಿ ನಾನು ಬಗೆಹರಿಸಬೇಕಾದ ಸಮಸ್ಯೆ ಏನೆಂದರೆ ಎರಡನೆಯ ಇಮೇಜನ್ನು ಮೊದಲನೆಯದರಂತೆ ಕುಗ್ಗಿಸಬೇಕು.
05:01 ಆದರೆ, ಮೊದಲನೆಯ ಇಮೇಜಿನಲ್ಲಿಯ ಹಾಗೆ ಇದು ಇನ್ನೂ ಸ್ವಲ್ಪ ಹೆಚ್ಚು ವಿವರಗಳನ್ನು ಹಾಗೂ ಸ್ವಲ್ಪ ಹೆಚ್ಚು ಕಾಂಟ್ರಾಸ್ಟ್ಅನ್ನು ಹೊಂದಿರಬೇಕಿತ್ತು.
05:11 ಈ ಇಮೇಜ್ನೊಂದಿಗೆ ನಾನು ಕೆಲಸ ಮಾಡಲು ಆರಂಭಿಸುವ ಮೊದಲು, ಹಿಂದಿನ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡುವಾಗ ‘ಗಿಂಪ್ ಯೂಸರ್ ಇಂಟರ್ಫೇಸ್’ ನ ಬಗೆಗೆ ನಾನು ಪತ್ತೆ ಹಚ್ಚಿದ್ದನ್ನು ನಿಮಗೆ ತೋರಿಸಬೇಕಾಗಿದೆ.
05:23 ನೀವು ಇಮೇಜಿನ ವಿಂಡೋದಲ್ಲಿ Tab ಅನ್ನು ಒತ್ತಿದಾಗ, ಇಲ್ಲಿರುವ ಟೂಲ್ ಬಾಕ್ಸ್ ಮಾಯವಾಗುತ್ತದೆ ಮತ್ತು ಸಾಧ್ಯವಿದ್ದಷ್ಟು ದೊಡ್ಡ ಇಮೇಜನ್ನು ಪಡೆಯಲು ನನಗೆ ಸಹಾಯಮಾಡುತ್ತದೆ. ನನ್ನ ಅವಶ್ಯಕತೆಗೆ ಅನುಸಾರವಾಗಿ ಟೂಲ್ ಬಾಕ್ಸ್ಅನ್ನು ನಾನು ಆನ್ ಮತ್ತು ಆಫ್ ಮಾಡಬಹುದು.
05:41 ಹೀಗಾಗಿ, ಇಲ್ಲಿ ಏನು ಮಾಡುತ್ತಿರುವೆನೆಂದು ನಾನು ಮತ್ತು ನೀವು ಸಹ ಚೆನ್ನಾಗಿ ನೋಡಬಹುದು.
05:46 ನಾನು ಇಮೇಜನ್ನು ಎಡಿಟ್ ಮಾಡಲು ಆರಂಭಿಸುವ ಮುನ್ನ ಕೆಲವು ಸೆಟ್ಟಿಂಗ್ ಗಳನ್ನು ಬದಲಾಯಿಸಬೇಕು.
05:52 ಆದ್ದರಿಂದ, ನಾನು ಕ್ರಮವಾಗಿ File, Preference ಮತ್ತು Window management ಗಳಿಗೆ ಹೋಗಿ, ಇಲ್ಲಿ, ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
06:03 ‘tool box’ ಮತ್ತು ‘docks’ ಗಳಿಗಾಗಿ Keep above ಎನ್ನುವುದನ್ನು ಇಟ್ಟು ಇನ್ನುಳಿದ ಆಯ್ಕೆಗಳನ್ನು ಹಾಗೆಯೇ ಬಿಟ್ಟುಬಿಡಿ.
06:11 ನಾನು ‘OK’ ಎನ್ನುವುದನ್ನು ಒತ್ತಿದ ನಂತರ ಗಿಂಪ್, ಜಾಹೀರುಪಡಿಸಿದಂತೆ ಕೆಲಸ ಮಾಡುತ್ತದೆ.
06:17 ನಾನು ‘ಟೂಲ್ ಬಾಕ್ಸ್’ನಿಂದ ‘ಟೂಲ್ಸ್’ಗಳನ್ನು ಆಯ್ಕೆಮಾಡಬಹುದು ಮತ್ತು ನಾನು ಆರಿಸಿಕೊಂಡ ‘ಟೂಲ್ಸ್’ಗಳ ಎಲ್ಲ ಆಯ್ಕೆಗಳನ್ನು ಪಡೆಯಬಹುದು.
06:25 ನಾನು ಇಮೇಜ್ನಲ್ಲಿ ಮತ್ತೆ ಕ್ಲಿಕ್ ಮಾಡಿ, ಟ್ಯಾಬ್ಅನ್ನು ಬಳಸಿ ‘ಟೂಲ್ ಬಾಕ್ಸ’ನ್ನು ಆನ್ ಹಾಗೂ ಆಫ್ ಮಾಡಬಹುದು.
06:33 ಮೊದಲು, ಇಮೇಜ್, ಲೆವಲ್ ಆಗಿದೆಯೋ ಹೇಗೆ ಎಂದು ಪರಿಶೀಲಿಸಬೇಕು.
06:37 ಈ ಇಮೇಜ್ನಲ್ಲಿ, ನಂಬಲರ್ಹವಾದ ಮಾನವ ನಿರ್ಮಿತ ಕಟ್ಟಡಗಳಿಲ್ಲ. ಹೀಗಾಗಿ ನಾನು ಇಮೇಜ್ ನೇರವಾಗಿದೆಯೋ ಎಂದು ಪರಿಶೀಲಿಸಲು ‘ಗ್ರಿಡ್ ಮೆಥಡ್’ಅನ್ನು ಬಳಸಲು ಸಾಧ್ಯವಿಲ್ಲ.
06:47 ನೀರಿನ ಮೇಲ್ಮೈ ಒಳ್ಳೆಯ ಸೂಚನೆಯಾಗಿದೆ.
06:50 ಆದರೆ ನಮಗೆ ಇಲ್ಲಿ ದಿಗಂತವು ಕಾಣಿಸುತ್ತಿಲ್ಲ ಮತ್ತು ನೀರಿನ ಮೇಲಿನ ಗೆರೆಗಳು ಸಹ ಸ್ವಲ್ಪ ದಾರಿತಪ್ಪಿಸುತ್ತಿವೆ.
06:57 ಇದು, ಇಲ್ಲಿರುವುದು ದಿಗಂತವಲ್ಲ ಆದರೆ ನದಿಯಲ್ಲಿಯ ಒಂದು ತಿರುವು ಮಾತ್ರ.
07:02 ಹೀಗಾಗಿ, ರೂಲರನ್ನು ಎಲ್ಲಿ ಸೆಟ್ ಮಾಡಿ ಕ್ಷಿತಿಜವನ್ನು ಪರಿಶೀಲಿಸಬೇಕು ಎನ್ನುವ ನಿಜವಾದ ಸುಳಿವನ್ನು ನಾನು ಹೊಂದಿರುವದಿಲ್ಲ.
07:08 ನಾನು ನನ್ನ ಕಣ್ಣಿನ ಮೇಲೆ ಭರವಸೆ ಇಡಬೇಕಾಗಿದೆ, ಛಾಯಾಗ್ರಹಣದಲ್ಲಿ ಏನನ್ನಾದರೂ ಮಾಡಲು ಇದು ತುಂಬಾ ಕೆಟ್ಟ ವಿಧಾನವೇನೂ ಅಲ್ಲ.
07:16 ಈಗ ನಾನು Rotate ಎನ್ನುವ ಟೂಲನ್ನು ಆಯ್ಕೆಮಾಡುತ್ತೇನೆ. corrective backward ನ ಬದಲಿಗೆ normal forward ಅನ್ನು ಆರಿಸಿಕೊಳ್ಳುತ್ತೇನೆ ಹಾಗೂ Preview ಎನ್ನುವಲ್ಲಿ Image ಎನ್ನುವುದನ್ನು ಸೆಟ್ ಮಾಡುತ್ತೇನೆ, Grid ಅನ್ನು ಅಲ್ಲ.
07:30 ಸರಿ. ಇಮೇಜ್ನಲ್ಲಿ ಕ್ಲಿಕ್ ಮಾಡಿರಿ.
07:38 ಇಲ್ಲಿ ಮಧ್ಯದಲ್ಲಿ, ‘ಸೆಂಟರ್ ಆಫ್ ರೊಟೇಶನ್’ ಎಂದು ಕರೆಯಲ್ಪಡುವ ಒಂದು ಬಿಂದುವಿದೆ. ಇಮೇಜನ್ನು ಆ ಬಿಂದುವಿನ ಸುತ್ತ ತಿರುಗಿಸಲಾಗುವದು.
07:46 ಇದು, ನಾವು ಇಮೇಜನ್ನು ತಿರುಗಿಸಲು ಬೇಕಾಗುವ ಕೋನವನ್ನು ಸೆಟ್ ಮಾಡಬಹುದಾದ ಡೈಲಾಗ್ ಆಗಿದೆ .
07:52 ಇಲ್ಲಿ, ಇಮೇಜನ್ನು ತಿರುಗಿಸಲು ನನಗೆ ಸಹಾಯ ಮಾಡಬಲ್ಲ ಒಂದು ಸ್ಲೈಡರ್ ದೆ. ಆದರೆ ಇದನ್ನು ನಿಭಾಯಿಸುವದು ಕಷ್ಟ ಎಂದು ನೀವು ನೋಡಬಹುದು. ಇಮೇಜನ್ನು ಇಷ್ಟು ವಾಲಿಸಬೇಕಾಗಿಲ್ಲ.
08:05 ಆದ್ದರಿಂದ ನಾವು ಇಲ್ಲಿ ಸೊನ್ನೆಗೆ ಮರಳಿ ಹೋಗೋಣ. ಈಗ ನಾನು ಇಮೇಜನ್ನು ತಿರುಗಿಸಲು ಈ ಸ್ಟೈಲ್ಅನ್ನು ಬಳಸುತ್ತೇನೆ.
08:14 ಈ ಇಮೇಜ್, ಬಲಕ್ಕೆ ಸ್ವಲ್ಪ ವಾಲಿದೆ. ಆದ್ದರಿಂದ ನಾನು ಇಮೇಜನ್ನು ಎಡಕ್ಕೆ, ಎಂದರೆ ಕೌಂಟರ್ ಕ್ಲಾಕ್-ವೈಸ್ ದಿಕ್ಕಿನಲ್ಲಿ ತಿರುಗಿಸಬೇಕು. ಅದಕ್ಕಾಗಿ ಇಲ್ಲಿ ನನಗೆ ಋಣಾತ್ಮಕ ವ್ಯಾಲ್ಯೂಗಳು ಬೇಕು.
08:29 ಹೀಗಾಗಿ, ನನಗೆ ಸರಿಯಾದ ಮತ್ತು ನೇರವಾದ ಇಮೇಜ್ ಸಿಗುವವರೆಗೆ ನಾನು ಈ ಕೋನವನ್ನು ಬದಲಾಯಿಸುತ್ತ ಇರುತ್ತೇನೆ.
08:36 ಆದ್ದರಿಂದ ನಾನು ಈ ಕೋನವನ್ನು -0.25° (ಮೈನಸ್ ಸೊನ್ನೆ ಪಾಯಿಂಟ್ ಎರಡು ಐದು ಅಂಶಗಳು) ಎಂದು ಸೆಟ್ ಮಾಡುತ್ತೇನೆ.
08:43 ಹಿಂದೆ ಇರುವ ಈ ವಿಂಡೋವನ್ನು ಎಳೆಯಿರಿ ಹಾಗೂ Rotate ನ ಮೇಲೆ ಕ್ಲಿಕ್ ಮಾಡಿ, ಈ ಕ್ರಿಯೆಯ ಫಲಿತಾಂಶಕ್ಕಾಗಿ ಕಾಯಿರಿ.
08:50 ಮುಂದಿನ ಹಂತ ಕ್ರಾಪಿಂಗ್ ಎನ್ನುವುದು ಆಗಿದೆ.
08:54 ನನಗೆ ಇಮೇಜ್ನಲ್ಲಿ ಈ ಹಡಗು, ಈ ನೀರು ಮತ್ತು ಇಲ್ಲಿಯ ಈ ಹಕ್ಕಿಗಳು ಇರಬೇಕಾಗಿದೆ.
09:02 ಇಮೇಜ್ನಲ್ಲಿ ಇಲ್ಲಿಯ ಈ ಹುಲ್ಲು, ಇಲ್ಲಿಯ ಈ ಭಾಗ ಇರಬೇಕಾಗಿಲ್ಲ. ನದಿಯ ಈ ದಂಡೆ, ನನ್ನ ಇಮೇಜ್ನಲ್ಲಿ ಇರಬೇಕಾಗಿದೆಯೋ ಎನ್ನುವುದೂ ಸಹ ನನಗೆ ಖಚಿತವಾಗಿಲ್ಲ.
09:16 ನಾನು ಇಮೇಜ್ನ ಈ ಭಾಗವನ್ನು ಕ್ರಾಪ್ ಮಾಡುವೆನು. ಏಕೆಂದರೆ, ನಂತರ ನನಗೆ ಇಮೇಜ್ನ ಅತ್ಯಂತ ದಟ್ಟವಾದ ಭಾಗ ಬೇಕಾಗುತ್ತದೆ.
09:24 ಎಂದರೆ, ಇಲ್ಲಿಯ ಹಕ್ಕಿಗಳು, ಈ ಹಡಗು, ಆಮೇಲೆ ಈ ಗಿಡಗಳು, ಹಡಗಿನ ಹಿಂದಿರುವ ನದಿಯ ಈ ದಂಡೆ ಮತ್ತು ಕೊನೆಯದಾಗಿ ಈ ನೀರು ಹಾಗೂ ಆಕಾಶ.
09:35 ಇಮೇಜ್ನ ಈ ಭಾಗ ತುಂಬಾ ಗಾಢವಾಗಿದೆ.
09:39 ನನಗೆ ಇಮೇಜ್ನ ಈ ಭಾಗದಲ್ಲಿ, ಝೂಮ್ ಇನ್ ಮಾಡಬೇಕಾಗಿದೆ ಏಕೆಂದರೆ ನನಗೆ ಸಾಧ್ಯವಿದ್ದಷ್ಟು ನದಿಯ ಭಾಗವನ್ನು ಸೇರಿಸಬೇಕಾಗಿದೆ ಆದರೆ ನದಿಯ ದಂಡೆಯನ್ನಲ್ಲ.
09:49 ಆದ್ದರಿಂದ, ಹಾಟ್ ಕೀ Z ಅನ್ನು ಒತ್ತಿ ಇಲ್ಲಿ, ಇಮೇಜ್ನ ಈ ಭಾಗದಲ್ಲಿ ಝೂಮ್ ಇನ್ ಮಾಡುತ್ತೇನೆ.
10:00 ಇಲ್ಲಿ ಇನ್ನೊಂದು ಹಕ್ಕಿ ಹಾರುತ್ತಿದೆ.
10:02 ನಾನು ಎಡಬದಿಗೆ ಹೋಗಿ ರೂಲರ್ ಅನ್ನು ನದಿಯ ದಂಡೆಯ ಹತ್ತಿರ ಎಳೆದು ಇಲ್ಲಿಯೇ ಬಿಡುತ್ತೇನೆ.
10:09 Shift + ctrl + E ಗಳನ್ನು ಒತ್ತಿದಾಗ ನನ್ನನ್ನು ಮತ್ತೆ ಮರಳಿ ಇಮೇಜ್ ಗೆ ತರುತ್ತದೆ.
10:15 ಈಗ ನಾನು ಕ್ರಾಪ್ ಟೂಲ್ ಅನ್ನು ಆಯ್ಕೆಮಾಡಬೇಕು ಮತ್ತು ಕೆಲವು ಆಯ್ಕೆಗಳನ್ನು ಅದರಲ್ಲಿ ಸೆಟ್ ಮಾಡಬೇಕು.
10:20 ನನಗೆ Fixed aspect ratio ಎನ್ನುವುದು 2:1 (ಎರಡಕ್ಕೆ ಒಂದು) ಎಂದು ಇರಬೇಕಾಗಿದೆ.
10:29 ಸ್ವಲ್ಪ ಸಹಾಯಕ್ಕೆಂದು, ಪ್ರೀವ್ಯೂನಲ್ಲಿ ನಾನು Rule of thirds ಎನ್ನುವುದನ್ನು ಸೆಟ್ ಮಾಡುತ್ತೇನೆ. ಇದು ನನಗೆ ಕೆಲವು ಸಹಾಯಕ ಗೆರೆಗಳನ್ನು ಒದಗಿಸುವುದು.
10:37 ಇಲ್ಲಿ ಏನೆಲ್ಲವನ್ನು ಸೇರಿಸಲಾಗಿದೆ ಎಂದು ನಾನು ನೋಡುತ್ತೇನೆ.
10:41 ಇಲ್ಲಿ ಇದು ಪಕ್ಷಿಗಳ ಒಂದು ಸಮೂಹ ಮತ್ತು ಇಲ್ಲಿ ಒಂದೇ ಪಕ್ಷಿ ಕಾಣುತ್ತಿದೆ.
10:47 ಈಗ ನೀವು ರೂಲರ್ ಅನ್ನು ದೂರ ಸರಿಸಿ ಕ್ಲಿಕ್ ಮಾಡಬಹುದು.
10:51 ಇಮೇಜ್ನ ಕೆಳಭಾಗದಲ್ಲಿ ನೀರು ಇದೆ ಆದರೆ ಅಲ್ಲಿ ಸಾಕಷ್ಟು ನೀರು ಇಲ್ಲ, ಅಲ್ಲದೆ ತುಂಬಾ ಹೆಚ್ಚು ಆಕಾಶವನ್ನು ಒಳಗೊಂಡಿದೆ.
11:01 ಇಲ್ಲಿ ಮೇಲಿರುವ ಒಂದೇ ಹಕ್ಕಿಯನ್ನು ನಾನು ಕಳೆದುಕೊಳ್ಳಲು ಸಾಧ್ಯವಿದೆ ಏಕೆಂದರೆ ನನಗೆ ಹಕ್ಕಿಗಳ ಈ ಸಮೂಹವು ನನ್ನ ಇಮೇಜ್ನಲ್ಲಿ ಇರಬೇಕಾಗಿದೆ.
11:09 ಈಗ ನಾನು ಸುಮ್ಮನೆ ಇದನ್ನು ಕೆಳಗೆ ಎಳೆಯುತ್ತೇನೆ. ಇದು ಚೆನ್ನಾಗಿ ಕಾಣುತ್ತಿದೆ.
11:14 ನನ್ನ ಕೆಲಸವನ್ನು ಪರಿಶೀಲಿಸಲು ನಾನು ‘Rule of thirds’ ಎನ್ನುವುದನ್ನು ಆಯ್ಕೆ ಮಾಡುತ್ತೇನೆ.
11:19 ನನ್ನ ಕಣ್ಣು ಅಷ್ಟು ಕೆಟ್ಟಿಲ್ಲ ಏಕೆಂದರೆ ನಾನು ಇಮೇಜನ್ನು, ನೀರು, ಗಿಡಗಳು ಮತ್ತು ಆಕಾಶವೆಂದು 3 (ಮೂರು) ಭಾಗಗಳಲ್ಲಿ ವಿಭಾಗಿಸಿದ್ದೆ.
11:30 ಈ ಹಡಗು, ನಮಗಿರುವ ಆಸಕ್ತಿಗಳಲ್ಲಿ ಒಂದು.
11:34 ಪಕ್ಷಿಗಳ ಈ ಗುಂಪು ಎರಡನೆಯ ಆಸಕ್ತಿ ಆಗಿದೆ ಮತ್ತು ಇದು ‘ಇಮೇಜ್’ನ ಸೊಗಸಾದ 1/9 ನೇ ಭಾಗವಾಗಿದೆ.
11:42 ಇದು ಕೆಲಸ ಮಾಡುವದು. ಆದ್ದರಿಂದ, ನಾನು ಕ್ರಾಪ್ ಮಾಡಲು ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ.
11:49 ಇಮೇಜನ್ನು ದೊಡ್ಡದು ಮಾಡಲು tab ಮತ್ತು shift + ctrl +E ಗಳನ್ನು ಒತ್ತಿರಿ.
11:55 ಇಮೇಜ್ನ ಕ್ರಾಪಿಂಗ್ ನೊಂದಿಗೆ ನಾವು ತುಂಬಾ ಚೆನ್ನಾಗಿ ಆರಂಭಿಸಿದ್ದೇವೆ. ಈ ಇಮೇಜ್ ನೊಂದಿಗೆ ಮತ್ತೇನು ಮಾಡಬಹುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾನು ತೋರಿಸುವೆನು.
12:05 ವಿದಾಯ ಹೇಳುವ ಮೊದಲು ನಾನು ಇಮೇಜನ್ನು ಸೇವ್ ಮಾಡಬೇಕು. ಇದನ್ನು ನಾನು ಬಹಳ ಮೊದಲೇ ಮಾಡಬೇಕಾಗಿತ್ತು.
12:12 ನಾನು ಇಮೇಜನ್ನು Fog.xcf ಎಂದು ಸೇವ್ ಮಾಡುತ್ತೇನೆ. ‘xcf’ ಎನ್ನುವುದು ‘ಗಿಂಪ್’ನ, ಸ್ವಂತ ಫೈಲ್ ಫಾರ್ಮ್ಯಾಟ್ನ, ಎಕ್ಸ್ಟೆನ್ಶನ್ ಆಗಿದೆ. ಅದು ‘ಗಿಂಪ್’ನ ಲೇಯರ್ಸ್, ಅನ್-ಡು ಹಾಗೂ ಇನ್ನಿತರ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.
12:29 ನಾನು ನಿಮ್ಮಿಂದ ತಿಳಿಯಲು ಇಚ್ಚಿಸುತ್ತೇನೆ.
12:32 ನಿಮಗೆ ಇದರಲ್ಲಿ ಏನು ಇಷ್ಟವಾಯಿತು, ಇದನ್ನು ಹೇಗೆ ಉತ್ತಮಗೊಳಿಸಬಹುದಿತ್ತು ಎನ್ನುವದನ್ನು ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆದು ತಿಳಿಸಿ. info [at] meetthegimp dot org
12:42 ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://meetthegimp.org
12:47 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…………………… .

Contributors and Content Editors

Vasudeva ahitanal