Advanced-Cpp/C2/Inheritance/Kannada

From Script | Spoken-Tutorial
Revision as of 12:40, 21 November 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 C++ ನಲ್ಲಿಯ Inheritance in C++ (ಇನ್ಹೆರಿಟೆನ್ಸ್ ಇನ್ C++) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಇನ್ಹೆರಿಟೆನ್ಸ್ ಮತ್ತು
00:10 ಇನ್ಹೆರಿಟೆನ್ಸ್ ನಲ್ಲಿನ ಪ್ರಕಾರಗಳನ್ನು ಕಲಿಯುವೆವು,
00:12 ನಾವು ಇದನ್ನು ಉದಾಹರಣೆಗಳ ಸಹಾಯದಿಂದ ಮಾಡುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:19 Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ,
00:24 g++ ಕಂಪೈಲರ್4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:28 ನಾವು ಇನ್ಹೆರಿಟೆನ್ಸ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ.
00:32 ಒಂದು ಒಬ್ಜೆಕ್ಟ್, ಇನ್ನೊಂದು ಒಬ್ಜೆಕ್ಟ್ ನ ಗುಣಗಳನ್ನು ತನ್ನದಾಗಿಸಿಕೊಂಡಾಗ ಅದನ್ನು ಇನ್ಹೆರಿಟೆನ್ಸ್ ಎಂದು ಕರೆಯಲಾಗುತ್ತದೆ.
00:38 ಇದು, ಈಗಿರುವ ಕ್ಲಾಸನ್ನು ಮಾರ್ಪಡಿಸದೇ ಮರುಬಳಕೆ ಮಾಡುವ ಕ್ರಿಯೆಯಾಗಿರುತ್ತದೆ.
00:44 ಇನ್ಹೆರಿಟೆನ್ಸ್ ನಲ್ಲಿಯ ಪ್ರಕಾರಗಳು:
00:45 ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್,
00:48 ಮಲ್ಟಿಪಲ್ ಲೆವೆಲ್ ಇನ್ಹೆರಿಟೆನ್ಸ್,
00:50 ಹೈರಾರ್ಕಿಕಲ್ ಇನ್ಹೆರಿಟೆನ್ಸ್,
00:52 ಮಲ್ಟಿಲೆವೆಲ್ ಇನ್ಹೆರಿಟೆನ್ಸ್,
00:55 ಹೈಬ್ರಿಡ್ ಇನ್ಹೆರಿಟೆನ್ಸ್ ಇತ್ಯಾದಿ.
00:57 ಮೊದಲು, ಬೇಸ್ ಕ್ಲಾಸ್ ಮತ್ತು ಡಿರೈವ್ಡ್ ಕ್ಲಾಸ್ ಗಳೆಂದರೇನು ಎಂದು ನಾವು ತಿಳಿಯೋಣ.
01:02 ಬೇಸ್ ಕ್ಲಾಸ್ ಎನ್ನುವುದು ತನ್ನದೇ ಆದ ಗುಣಗಳನ್ನು ಮತ್ತು ಕ್ರಿಯಾತ್ಮಕತೆಯನ್ನು ಹೊಂದಿದೆ.
01:06 ಇದನ್ನು ಪೇರೆಂಟ್ ಕ್ಲಾಸ್ ಎಂದು ಸಹ ಕರೆಯಲಾಗುತ್ತದೆ.
01:09 ಎಲ್ಲ ಒಬ್ಜೆಕ್ಟ್ ಗಳು ಪರಂಪರೆಯಾಗಿ ಪಡೆಯಬಹುದಾದ ಸಾಮಾನ್ಯವಾದ ಗುಣಗಳನ್ನು ಇದು ಹೊಂದಿದೆ.
01:14 ಡಿರೈವ್ಡ್ ಕ್ಲಾಸ್ ಎನ್ನುವುದು ಚೈಲ್ಡ್ ಕ್ಲಾಸ್ ಆಗಿದೆ.
01:18 ಡಿರೈವ್ಡ್ ಕ್ಲಾಸ್ ಎನ್ನುವುದು ಬೇಸ್ ಕ್ಲಾಸ್ ನ ಗುಣಗಳನ್ನು ಮತ್ತು ಕ್ರಿಯಾತ್ಮಕತೆಯನ್ನು ಪಾರಂಪರ್ಯವಾಗಿ (ಇನ್ಹೆರಿಟ್) ಪಡೆಯುತ್ತದೆ.
01:23 ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ ಏನು ಆಗಿದೆ ಎಂಬುದನ್ನು ನಾವು ನೋಡೋಣ.
01:27 ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ ನಲ್ಲಿ ಒಂದೇ ಒಂದು ಬೇಸ್ ಕ್ಲಾಸ್ ಮತ್ತು ಒಂದು ಡಿರೈವ್ಡ್ ಕ್ಲಾಸ್ ಗಳ ಅಗತ್ಯವಿದೆ.
01:34 ಮಲ್ಟಿಪಲ್ ಇನ್ಹೆರಿಟೆನ್ಸ್:
01:37 ಮಲ್ಟಿಪಲ್ ಇನ್ಹೆರಿಟೆನ್ಸ್ ನಲ್ಲಿ ಡಿರೈವ್ಡ್ ಕ್ಲಾಸ್, ಒಂದಕ್ಕಿಂತ ಹೆಚ್ಚು ಬೇಸ್ ಕ್ಲಾಸ್ ಗಳಿಂದ ಇನ್‌ಹೆರಿಟ್ ಮಾಡುತ್ತದೆ.
01:44 ಹೈರಾರ್ಕಿಕಲ್ ಇನ್ಹೆರಿಟೆನ್ಸ್:
01:47 ಹೈರಾರ್ಕಿಕಲ್ ಇನ್ಹೆರಿಟೆನ್ಸ್ ನಲ್ಲಿ ಅನೇಕ ಡಿರೈವ್ಡ್ ಕ್ಲಾಸ್ ಗಳು ಒಂದೇ ಬೇಸ್ ಕ್ಲಾಸ್ ನಿಂದ ಇನ್‌ಹೆರಿಟ್ ಮಾಡುತ್ತವೆ.
01:55 ಮಲ್ಟಿಲೆವೆಲ್ ಇನ್ಹೆರಿಟೆನ್ಸ್:
01:57 ಮಲ್ಟಿಲೆವೆಲ್ ಇನ್ಹೆರಿಟೆನ್ಸ್ ನಲ್ಲಿ ಸಬ್ ಕ್ಲಾಸ್, ಬೇರೆ ಕ್ಲಾಸ್ಗಳಿಗೆ ಬೇಸ್ ಕ್ಲಾಸ್ ನ ಹಾಗೆ ವರ್ತಿಸುತ್ತದೆ.
02:05 ಮತ್ತು, ಹೈಬ್ರಿಡ್ ಇನ್ಹೆರಿಟೆನ್ಸ್:
02:08 ಹೈಬ್ರಿಡ್ ಇನ್ಹೆರಿಟೆನ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ಬಗೆಯ ಇನ್ಹೆರಿಟೆನ್ಸ್ ಗಳು ಸೇರಿಕೊಂಡಿವೆ.
02:14 ಈಗ, ಸಿಂಗಲ್ ಲೆವೆಲ್ ಇನ್ಹೆರಿಟೆನ್ಸ್ನ ಒಂದು ಉದಾಹರಣೆಯನ್ನು ನಾವು ನೋಡೋಣ.
02:18 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ.
02:21 ನಾನು ಇದನ್ನು ವಿವರಿಸುವೆನು.
02:23 ನಮ್ಮ ಫೈಲ್ ನ ಹೆಸರು exam_inherit.cpp ಆಗಿದೆ ಎಂಬುದನ್ನು ಗಮನಿಸಿರಿ.
02:28 ಈ ಉದಾಹರಣೆಯು ವಿದ್ಯಾರ್ಥಿಯ ಹೆಸರು, ರೋಲ್ ನಂ. ಮತ್ತು ಮಾರ್ಕ್ಸ್ ಗಳನ್ನು ತೋರಿಸುವುದನ್ನು ಒಳಗೊಂಡಿದೆ.
02:35 iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
02:38 ಇಲ್ಲಿ ನಾವು std namespace ಎನ್ನುವುದನ್ನು ಬಳಸುತ್ತಿದ್ದೇವೆ.
02:42 ಇಲ್ಲಿ ನಾವು student ಎನ್ನುವ class ಅನ್ನು ಹೊಂದಿದ್ದೇವೆ.
02:44 ಆಮೇಲೆ, roll_no ಎನ್ನುವ ಒಂದು ಇಂಟೀಜರ್ ವೇರಿಯಬಲ್ ಹಾಗೂ name ಎನ್ನುವ ಕ್ಯಾರೆಕ್ಟರ್ ಆರೇಯನ್ನು ಮತ್ತು
02:50 student ಎನ್ನುವ ಕ್ಲಾಸಿನ ಪ್ರೈವೇಟ್ ಮೆಂಬರ್ ಗಳಾಗಿ ಹೊಂದಿದ್ದೇವೆ.
02:53 input ಮತ್ತು display, ಇವುಗಳು student ಎನ್ನುವ ಕ್ಲಾಸಿನ ಪಬ್ಲಿಕ್ ಫಂಕ್ಶನ್ ಗಳಾಗಿವೆ.
02:59 ಇಲ್ಲಿ ವಿದ್ಯಾರ್ಥಿಯ ರೋಲ್ ನಂ. ಮತ್ತು ಹೆಸರು ಗಳನ್ನು ಪಡೆಯಲು ನಾವು input ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ.
03:06 ಆಮೇಲೆ, ರೋಲ್ ನಂ. ಮತ್ತು ಹೆಸರು ಗಳನ್ನು ತೋರಿಸಲು display ಎನ್ನುವ ಫಂಕ್ಶನ್ ಅನ್ನು ನಾವು ಹೊಂದಿದ್ದೇವೆ.
03:11 ಇಲ್ಲಿ exam_inherit ಎನ್ನುವ ಇನ್ನೊಂದು ಕ್ಲಾಸನ್ನು ಪಡೆದಿದ್ದೇವೆ.
03:16 ಇದು ಡಿರೈವ್ಡ್ ಕ್ಲಾಸ್ ಆಗಿದೆ.
03:18 ಇದು student ಕ್ಲಾಸ್ ನ ಫಂಕ್ಶನ್ ಹಾಗೂ ಡೇಟಾಗಳನ್ನು ಇನ್‌ಹೆರಿಟ್ ಮಾಡುತ್ತದೆ.
03:23 ಆಮೇಲೆ ನಾವು sub1, sub2, sub3 ಮತ್ತು total ಗಳನ್ನು
03:28 exam_inherit ಎನ್ನುವ ಕ್ಲಾಸ್ ನ ಪ್ರೈವೇಟ್ ವೇರಿಯಬಲ್ ಗಳೆಂದು ಡಿಕ್ಲೇರ್ ಮಾಡಿದ್ದೇವೆ.
03:33 ಇಲ್ಲಿ input_exam ಮತ್ತು display_exam ,ಇವುಗಳು ಪಬ್ಲಿಕ್ ಫಂಕ್ಶನ್ ಗಳಾಗಿವೆ.
03:41 ಇಲ್ಲಿ ನಾವು exam_inherit ಎನ್ನುವ ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ.
03:44 ಮೂರು ವಿಷಯಗಳ ಮಾರ್ಕ್ಸಗಳನ್ನು ಸ್ವೀಕರಿಸಲು ನಾವು input_exam ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ.
03:52 ಇಲ್ಲಿ, ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯಲು ನಾವು display_exam ಎನ್ನುವ ಫಂಕ್ಶನ್ ಅನ್ನು ಬಳಸುತ್ತಿದ್ದೇವೆ.
03:59 ಆಮೇಲೆ ನಾವು ಮೊತ್ತವನ್ನು (total) ಪ್ರಿಂಟ್ ಮಾಡುತ್ತೇವೆ.
04:01 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
04:03 ಇಲ್ಲಿ, exam_inherit ಎನ್ನುವ ಕ್ಲಾಸ್ನ ex ಎನ್ನುವ ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ.
04:10 ನಂತರ ಈ ex ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ ನಾವು ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ.
04:15 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
04:18 ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
04:20 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ.
04:30 ಕಂಪೈಲ್ ಮಾಡಲು,
04:31 g++ (ಸ್ಪೇಸ್) exam_inherit.cpp (ಸ್ಪೇಸ್) ಹೈಫನ್ o (ಸ್ಪೇಸ್) exam ಎಂದು ಟೈಪ್ ಮಾಡಿರಿ,
04:41 Enter ಅನ್ನು ಒತ್ತಿರಿ.
04:42 ನಂತರ
04:43 ./exam (ಡಾಟ್ ಸ್ಲ್ಯಾಷ್ ಎಕ್ಸಾಮ್) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿರಿ.
04:46 ಇಲ್ಲಿ ಅದು ಹೀಗೆ ಕಾಣಿಸುತ್ತದೆ,
04:47 Enter Roll no.:
04:49 ನಾನು 1 ಎಂದು ಕೊಡುವೆನು.
04:51 Enter Name:
04:52 ನಾನು Arya ಎಂದು ಎಂಟರ್ ಮಾಡುವೆನು.
04:55 Enter marks of subject1
04:57 ನಾನು 60 ಎಂದು ಕೊಡುವೆನು.
05:00 subject 2 ನ್ನು 70 ಎಂದು
05:02 ಮತ್ತು subject 3 ನ್ನು 80 ಎಂದು ಕೊಡುತ್ತೇನೆ.
05:06 ಔಟ್ಪುಟ್, ಹೀಗೆ ಕಾಣಿಸುತ್ತದೆ:
05:08 Roll no is: 1
05:09 Name is: Arya ಮತ್ತು,
05:11 Total is: 210
05:13 ಈಗ ನಾವು ಇದೇ ಉದಾಹರಣೆಯಲ್ಲಿ ಮಲ್ಟಿಲೆವೆಲ್ ಇನ್ಹೆರಿಟೆನ್ಸ್ ಎನ್ನುವುದನ್ನು ನೋಡುವೆವು.
05:18 ನಾನು ಕೋಡನ್ನು ಈಗಾಗಲೇ ಟೈಪ್ ಮಾಡಿದ್ದೇನೆ.
05:20 ನಾವು ನಮ್ಮ ಎಡಿಟರ್ ಗೆ ಮತ್ತೆ ಬದಲಾಯಿಸೋಣ.
05:22 ನಮ್ಮ ಫೈಲ್ ನ ಹೆಸರು multilevel.cpp ಆಗಿದೆ ಎಂಬುದನ್ನು ಗಮನಿಸಿರಿ.
05:28 ಇಲ್ಲಿ ನಾವು total ಎನ್ನುವ ವೇರಿಯಬಲ್ ಅನ್ನು,
05:32 exam_inherit ಎನ್ನುವ ಕ್ಲಾಸ್ನ ಪಬ್ಲಿಕ್ ವೇರಿಯಬಲ್ ಎಂದು ಡಿಕ್ಲೇರ್ ಮಾಡಿದ್ದೇವೆ.
05:38 ಇದು ಏಕೆಂದರೆ ಪ್ರೈವೇಟ್ ಮೆಂಬರ್ಸ್ ಗಳು ಡಿರೈವ್ಡ್ ಕ್ಲಾಸ್ನಿಂದ ಆಕ್ಸೆಸ್ ಮಾಡಲ್ಪಡುವದಿಲ್ಲ.
05:44 ಇಲ್ಲಿ ನಾವು grade ಎನ್ನುವ ಇನ್ನೊಂದು ಕ್ಲಾಸ್ ಅನ್ನು ಹೊಂದಿದ್ದೇವೆ.
05:49 ಇದು exam_inherit ಎನ್ನುವ ಕ್ಲಾಸ್ ಅನ್ನು ಇನ್‌ಹೆರಿಟ್ ಮಾಡುತ್ತದೆ.
05:53 grade ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿದೆ.
05:56 ಮತ್ತು grade ಎನ್ನುವ ಕ್ಲಾಸ್ ಗೆ exam_inherit ಎನ್ನುವುದು ಬೇಸ್ ಕ್ಲಾಸ್ ಆಗಿದೆ.
06:02 exam_inherit ಎನ್ನುವ ಕ್ಲಾಸ್ನ ಎಲ್ಲ ಫಂಕ್ಶನ್ ಮತ್ತು ಡೇಟಾಗಳು grade ಎನ್ನುವ ಕ್ಲಾಸ್ ಗೆ ಇನ್‌ಹೆರಿಟ್ ಆಗುತ್ತವೆ.
06:11 ಇಲ್ಲಿ ನಾವು Avg ಎನ್ನುವುದನ್ನು grade ಎನ್ನುವ ಕ್ಲಾಸ್ ನ ಪ್ರೈವೇಟ್ ಮೆಂಬರ್ ಎಂದು,
06:17 ಮತ್ತು average ಎನ್ನುವ ಫಂಕ್ಶನ್ ಅನ್ನು ಪಬ್ಲಿಕ್ ಫಂಕ್ಶನ್ ಎಂದು ಡಿಕ್ಲೇರ್ ಮಾಡಿದ್ದೇವೆ.
06:21 ಆಮೇಲೆ ನಾವು ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ.
06:23 ಇಲ್ಲಿ ನಾವು average ಎನ್ನುವ ಫಂಕ್ಶನ್ ಅನ್ನು ಸರಾಸರಿಯನ್ನು (ಎವರೇಜ್) ಕಂಡುಹಿಡಿಯಲು ಉಪಯೋಗಿಸುತ್ತೇವೆ.
06:27 ನಂತರ average ಅನ್ನು ನಾವು ಪ್ರಿಂಟ್ ಮಾಡುತ್ತೇವೆ.
06:30 grade ಕ್ಲಾಸ್ನ gd ಎನ್ನುವ ಒಂದು ಒಬ್ಜೆಕ್ಟ್ ಅನ್ನು main ಫಂಕ್ಶನ್ ನ ಒಳಗಡೆ ನಾವು ಕ್ರಿಯೇಟ್ ಮಾಡುತ್ತೇವೆ.
06:36 ಈ gd ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ ನಾವು ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ.
06:40 gd.input(),
06:42 input_exam,
06:44 display,
06:45 display_exam,
06:46 ಮತ್ತು ಫಂಕ್ಶನ್ average.
06:49 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
06:52 ಈಗ grade ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿರುವುದನ್ನು ನೀವು ನೋಡಬಹುದು.
06:56 ಮತ್ತು exam_inherit ಎನ್ನುವುದು grade ನ ಬೇಸ್ ಕ್ಲಾಸ್ ಆಗಿದೆ.
07:01 ಮತ್ತು ಇಲ್ಲಿ exam_inherit ಎನ್ನುವುದು ಡಿರೈವ್ಡ್ ಕ್ಲಾಸ್ ಆಗಿದೆ.
07:06 ಮತ್ತು student ಎನ್ನುವುದು exam_inherit ಎನ್ನುವುದಕ್ಕೆ ಬೇಸ್ ಕ್ಲಾಸ್ ಆಗಿದೆ.
07:12 ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
07:14 ನಮ್ಮ ಟರ್ಮಿನಲ್ ಗೆ ಹಿಂದಿರುಗಿರಿ.
07:17 ಕಂಪೈಲ್ ಮಾಡಲು,
07:18 g++ (ಸ್ಪೇಸ್) multilevel.cpp (ಸ್ಪೇಸ್) ಹೈಫನ್ o (ಸ್ಪೇಸ್) mul ಎಂದು ಟೈಪ್ ಮಾಡಿರಿ,
07:26 Enter ಅನ್ನು ಒತ್ತಿರಿ.
07:27 ./mul (ಡಾಟ್ ಸ್ಲ್ಯಾಷ್ ಮಲ್) ಎಂದು ಟೈಪ್ ಮಾಡಿರಿ.
07:30 Enter ಅನ್ನು ಒತ್ತಿರಿ.
07:32 ಇಲ್ಲಿ ನಾವು ಹೀಗೆ ನೋಡುತ್ತೇವೆ,

Enter Roll no.:

07:34 ನಾನು 2 ನ್ನು ಎಂಟರ್ ಮಾಡುತ್ತೇನೆ.
07:36 Enter Name:
07:38 ನಾನು Pratham ಎಂದು ಎಂಟರ್ ಮಾಡುತ್ತೇನೆ.
07:41 Enter marks of subject1
07:43 ನಾನು 65 ಎಂದು,
07:46 subject2 ಅನ್ನು 67 ಎಂದು ಮತ್ತು
07:48 subject3 ಅನ್ನು 82 ಎಂದು ಕೊಡುವೆನು.
07:52 ಔಟ್ಪುಟ್ ಹೀಗೆ ಕಾಣಿಸುತ್ತದೆ:
07:54 Roll no is: 2
07:56 Name is: Pratham
07:57 Total is: 214 ಮತ್ತು
07:59 Average is: 71
08:01 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
08:05 ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
08:07 ನಾವು ಸಂಕ್ಷಿಪ್ತಗೊಳಿಸೋಣ.
08:08 ಈ ಟ್ಯುಟೋರಿಯಲ್ ನಲ್ಲಿ,
08:10 ಇನ್ಹೆರಿಟೆನ್ಸ್ ಮತ್ತು
08:11 ಇನ್ಹೆರಿಟೆನ್ಸ್ ನಲ್ಲಿಯ ಪ್ರಕಾರಗಳನ್ನು ನಾವು ಕಲಿತೆವು.
08:14 ಒಂದು ಅಸೈನ್ಮೆಂಟ್ ಎಂದು,
08:15 Shape ಎನ್ನುವ ಕ್ಲಾಸನ್ನು ಕ್ರಿಯೇಟ್ ಮಾಡಲು ಒಂದು ಪ್ರೊಗ್ರಾಮನ್ನು ಬರೆಯಿರಿ.
08:18 ಆಮೇಲೆ ಈ ಕ್ಲಾಸ್ ನಲ್ಲಿ Area ಮತ್ತು Perimeter ಎನ್ನುವ ಎರಡು ಫಂಕ್ಶನ್ ಗಳನ್ನು ಕ್ರಿಯೇಟ್ ಮಾಡಿರಿ.
08:23 ನಂತರ ಚೌಕೋನ, ಆಯತಾಕಾರ ಮತ್ತು ವರ್ತುಲಗಳಂತಹ ವಿವಿಧ ಆಕಾರಗಳ ವಿಸ್ತೀರ್ಣ (ಏರಿಯಾ) ಹಾಗೂ ಪರಿಧಿ (ಪೆರಿಮೀಟರ್) ಗಳನ್ನು ಕಂಡುಹಿಡಿಯಿರಿ.
08:31 ಈ ಕೆಳಗಿನ ಲಿಂಕ್ನಲ್ಲಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
08:34 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
08:37 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
08:42 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು
08:44 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
08:47 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:51 ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ.
08:53 contact [at] spoken hyphen tutorial dot org
08:58 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
09:02 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
09:09 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
09:13 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal