LibreOffice-Suite-Calc/C3/Linking-Calc-Data/Kannada
From Script | Spoken-Tutorial
Revision as of 14:12, 14 November 2014 by Vasudeva ahitanal (Talk | contribs)
Time | Narration |
00:00 | ಲೀಬ್ರ್ ಆಫಿಸ್ ಕ್ಯಾಲ್ಕ್ ನಲ್ಲಿ ಕ್ಯಾಲ್ಕ್ ಗಳ ಪರಸ್ಪರ ಲಿಂಕಿಂಗ್ ಅನ್ನು ಕಲಿಯುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ಈ ಕೆಳಗಿನವುಗಳನ್ನು ಕಲಿಯಲಿದ್ದೇವೆ: |
00:10 | ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳ ರೆಫ್ರೆನ್ಸ್, |
00:13 | ಹೈಪರ್ ಲಿಂಕ್ ಗಳ ಉಪಯೋಗ. |
00:17 | ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿ ಮತ್ತು ಲೀಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. |
00:29 | ಲಿಬ್ರೆ ಆಫಿಸ್ ಕ್ಯಾಲ್ಕ್ ನಿಮಗೆ |
00:033 | ಬೇರೆ ಶೀಟ್ ನಲ್ಲಿನ ಸೆಲ್ ಅನ್ನು ಪ್ರಚಲಿತದಲ್ಲಿರುವ ಶೀಟ್ ನಲ್ಲಿ ರೆಫ್ರೆನ್ಸ್ ಮಾಡಲು, |
00:37 | ಇಲ್ಲಿ,ಎರಡು ಸ್ಪ್ರೆಡ್ ಶೀಟ್ ಗಳನ್ನು ಸೇವ್ ಮಾಡಿದಾದಲ್ಲಿ ಬೇರೆ ಸ್ಪ್ರೆಡ್ ಶೀಟ್ ನ ಸೆಲ್ ಅನ್ನು ಕೂಡ ರೆಫ್ರೆನ್ಸ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. |
00:44 | “Personal-Finance-Tracker.ods” ಅನ್ನು ಓಪನ್ ಮಾಡೋಣ. |
00:49 | ನಮ್ಮ ಫೈಲ್ ನಲ್ಲಿರುವ sheet 1, “Personal Finance Tracker” ನ ಸ್ಪ್ರೆಡ್ ಶೀಟ್ ಅನ್ನು ಹೊಂದಿದೆ. |
00:55 | “Spent” ಮತ್ತು “Received” ಕಲಮ್ ಗಳಲ್ಲಿ ನಾನು ಕೆಲವೊಂದಿಷ್ಟು ಮೊತ್ತಗಳನ್ನು ಸೇರಿಸಿದ್ದೇನೆ. |
01:04 | “Cost” ಮತ್ತು “Spent” ನ ಅಡಿಯಲ್ಲಿರುವ ಅಂಶಗಳ ಒಟ್ಟು ಮೊತ್ತವನ್ನು ಕ್ರಮವಾಗಿ ಕಂಡು ಹಿಡಿಯೋಣ. |
01:11 | C9 ಸೆಲ್ ಅನ್ನು ಕ್ಲಿಕ್ ಮಾಡೋಣ ಮತ್ತು “ಸಮ ಚಿನ್ಹೆ SUM” ಎಂಬ ಸೂತ್ರವನ್ನು ಮತ್ತು ಬಂಧಕದೊಳಗೆ(ಬ್ರೆಸಸ್) “C3 ವಿವರಾಣಾತ್ಮಕ ಚಿನ್ಹೆ C7” ಎಂದು ನಮೂದಿಸೋಣ. |
01:24 | ಅನಂತರ “Enter” ಕೀಲಿಯನ್ನು ಒತ್ತಿರಿ. |
01:27 | D9 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಹಿಂದಿನ ಸೂತ್ರವನ್ನೇ ಬಳಸಿ ಮೊತ್ತವನ್ನು ಕಂಡು ಹಿಡಿಯಿರಿ. |
01:36 | ಈಗ, ಸೆಲ್ ರೆಫ್ರೆನ್ಸಿಂಗ್ ಅನ್ನು ಬಳಸಿ, ಹೊಸ ಸ್ಪ್ರೆಡ್ ಶೀಟ್ ನಲ್ಲಿ “Cost” ಮತ್ತು “Spent” ನ ಅಡಿಯಲ್ಲಿನ ಅಂಶಗಳ ಮೊತ್ತವನ್ನು ಪ್ರದರ್ಶಿಸೋಣ. |
01:45 | “Sheet 2” ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
01:48 | ಈಗ ಹೊಸ ಶೀಟ್ ಓಪನ್ ಆಗಿದೆ. |
01:51 | A1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “COMPONENT” ಎನ್ನುವ ಶೀರ್ಷಿಕೆಯನ್ನು(ಹೆಡ್ಡಿಂಗ್) ನಮೂದಿಸಿ. |
02:00 | B1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “BALANCE” ಎನ್ನುವ ಶೀರ್ಷಿಕೆಯನ್ನು ನಮೂದಿಸಿ. |
02:07 | ಶೀರ್ಷಿಕೆಗಳ ಅಡಿಯಲ್ಲಿ , ಅಂಶಗಳ(ಕಾಂಪೊನೆಂಟ್) ಹೆಸರುಗಳನ್ನು ನಮೂದಿಸೋಣ. |
02:12 | A3 ಕೋಶವನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “COST” ಎಂದು ನಮೂದಿಸಿ . “Enter” ಕೀಲಿಯನ್ನು ಒತ್ತಿರಿ. |
02:19 | “COST”, ನ ಅಡಿಯಲ್ಲಿ “SPENT” ಎನ್ನುವ ಅಂಶವನ್ನು A4 ಸೆಲ್ ನಲ್ಲಿ ನಮೂದಿಸಿ. |
02:27 | ಈಗ, ಖಾಲಿಯಿರುವ B3 ಸೆಲ್ ಅನ್ನು ಕ್ಲಿಕ್ ಮಾಡಿ. |
02:31 | B3 ಮತ್ತು B4 ಸೆಲ್ ಗಳು “COST” ಮತ್ತು “SPENT” ಶೀರ್ಷಿಕೆಯ ಅಡಿಯಲ್ಲಿ , |
02:38 | “Sheet 1” ನಲ್ಲಿ ಲೆಕ್ಕಾಚಾರ ಮಾಡಿದ ರೀತಿಯಲ್ಲಿ ಸಂಪೂರ್ಣ ಮೊತ್ತವನ್ನು ಪ್ರದರ್ಶಿಸುತ್ತವೆ. |
02:41 | ಇದು ರೆಫ್ರೆನ್ಸಿಂಗ್ ನಿಂದ ಸಾಧ್ಯ. |
02:44 | B3 ಸೆಲ್ ನಲ್ಲಿ ರೆಫ್ರೆನ್ಸ್ ಅನ್ನು ಮಾಡಲು, ಇನ್ ಪುಟ್ ಲೈನ್ ನ ಬದಿಯಲ್ಲಿರುವ “ ಸಮ ” ಚಿನ್ಹೆಯನ್ನು ಕ್ಲಿಕ್ ಮಾಡಿ. |
02:53 | ಈಗ, ಶೀಟ್ ಟ್ಯಾಬ್ ನಲ್ಲಿ “Sheet 1” ಅನ್ನು ಕ್ಲಿಕ್ ಮಾಡಿ. |
02:59 | ಈ ಶೀಟ್ ನಲ್ಲಿ ನಾವು “Costs” ಶೀರ್ಷಿಕೆಯ ಅಡಿಯಲ್ಲಿ ಒಟ್ಟು ಮೊತ್ತವನ್ನು ಹೊಂದಿರುವ C9 ಸೆಲ್ ಅನ್ನು ಕ್ಲಿಕ್ ಮಾಡೋಣ. |
03:07 | ಇನ್ ಪುಟ್ ಲೈನ್ ನಲ್ಲಿ “Sheet 1 dot C9” ಎನ್ನುವುದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
03:15 | ಇನ್ ಪುಟ್ ಲೈನ್ ಪಕ್ಕದಲ್ಲಿನ “ ಅನ್ವೇಷಕ(ಚೆಕ್) ” ಚಿನ್ಹೆಯನ್ನು ಕ್ಲಿಕ್ ಮಾಡಿ. |
03:20 | “Sheet 1” ಟ್ಯಾಬ್ ನಲ್ಲಿರುವ “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ(ಡೇಟಾ) ಒಟ್ಟು ಮೊತ್ತ “Sheet 2 “ ಟ್ಯಾಬ್ ನ B3 ಸೆಲ್ ನಲ್ಲಿ ತಾನಾಗಿಯೇ ನಮೂದಿತವಾಗಿರುವುದನ್ನು ಗಮನಿಸಿ. |
03:34 | ಹೀಗೆಯೇ , ಇತರ ದತ್ತಾಂಶಗಳ ಒಟ್ಟು ಮೊತ್ತವನ್ನು ರೆಫ್ರೆನ್ಸಿಂಗ್ ಮೂಲಕ ನಮೂದಿಸಬಹುದು. |
03:41 | ಹೆಚ್ಚಿನ ದತ್ತಾಂಶಗಳನ್ನು ಹೊಂದಿರುವ ಅನೇಕ ಶೀಟ್ ಗಳ ದತ್ತಾಂಶಗಳನ್ನು ಸಂಕ್ಷಿಪ್ತಗೊಳಿಸಲು ರೆಫ್ರೆನ್ಸಿಂಗ್ ಅನ್ನು ಬಳಸಬಹುದು. |
03:49 | ಈಗ, ಕ್ಯಾಲ್ಕ್ ಶೀಟ್ ನಲ್ಲಿ ಹೈಪರ್ ಲಿಂಕ್ ಗಳನ್ನು ರಚಿಸಲು ಕಲಿಯೋಣ. |
03:55 | ನೀವು ಹೈಪರ್ ಲಿಂಕ್ ಗಳನ್ನು
|
04:06 | “Personal-Finance-Tracker.ods” ನಲ್ಲಿ ಪರ್ಸನಲ್ ಫೈನಾನ್ಸ್ ಟ್ರ್ಯಾಕರ್ “Sheet 1” ನಲ್ಲಿಯೂ ಉಳಿದ ಅಂಶಗಳು “Sheet 2” ನಲ್ಲಿಯೂ ಲಭ್ಯ. |
04:17 | ಈಗ Sheet 1 ರಿಂದ Sheet 2 ಗೆ ಇವುಗಳನ್ನು ಸ್ಥಳಾಂತರಿಸೋಣ. |
04:22 | ಮೊದಲಿಗೆ, “Sheet 1” ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:25 | ಇಲ್ಲಿ B14 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ ”Sheet 2” ಎಂದು ನಮೂದಿಸಿ. |
04:33 | ಇನ್ ಪುಟ್ ಲೈನ್ ನಲ್ಲಿ “Sheet 2” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
04:38 | ಇನ್ ಪುಟ್ ಲೈನ್ ನಲ್ಲಿನ “Sheet 2” ಎಂಬುವುದನ್ನು ಸೆಲೆಕ್ಟ್ ಮಾಡಿ. |
04:44 | ಆ ಪಠ್ಯವನ್ನು ಆರಿಸಿದ ನಂತರ ಟೂಲ್ ಬಾರ್ ನಲ್ಲಿನ “Hyperlink” ಐಕಾನ್ ಅನ್ನು ಕ್ಲಿಕ್ ಮಾಡಿ. |
04:51 | Hyperlink ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
04:55 | ಎಡ ಬದಿಯಲ್ಲಿನ “Document” ವಿಕಲ್ಪವನ್ನು ಅನ್ನು ಕ್ಲಿಕ್ ಮಾಡಿ. |
04:59 | ಡಯಲಾಗ್ ಬಾಕ್ಸ್ ನಲ್ಲಿನ “Target in document” ಐಕಾನ್ ಅನ್ನು ಕ್ಲಿಕ್ ಮಾಡಿ. |
05:04 | “Target in document” ಡಯಲಾಗ್ ಬಾಕ್ಸ್ ಕಾಣುತ್ತದೆ. |
05:08 | ಈಗ, “Sheet” ವಿಕಲ್ಪದ ಬದಿಯಲ್ಲಿನ “ಕೂಡಿಸುವ” ಚಿನ್ಹೆಯನ್ನು ಅನ್ನು ಕ್ಲಿಕ್ ಮಾಡಿ. |
05:13 | ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿನ “Sheet 2” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
05:18 | “Apply” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು “Close” ಬಟನ್ ಅನ್ನು ಕ್ಲಿಕ್ ಮಾಡಿ. |
05:24 | ಈಗ, Hyperlink ಡಯಲಾಗ್ ಬಾಕ್ಸ್ ನಲ್ಲಿ, “Apply” ಮತ್ತು “Close” ಅನ್ನು ಕ್ಲಿಕ್ ಮಾಡಿ. |
05:32 | ಒಂದು ಸೆಲ್ ನಲ್ಲಿ “Sheet 2” ಎಂದು ಹೈಲೈಟ್ ಆಗಿರುವ “Sheet 1” ಟ್ಯಾಬ್ ಕಾಣಿಸುತ್ತದೆ. |
05:40 | ಈಗ, “Sheet 2” ಎಂಬ ಪಠ್ಯದ ಮೇಲೆ ಕ್ಲಿಕ್ ಮಾಡಿ , ಇದು ನಮ್ಮನ್ನು Costs ಗೆ balance ಅನ್ನು ನಮೂದಿಸಿದ ಶೀಟ್ ಗೆ ಒಯ್ಯುತ್ತದೆ. |
05:51 | ನಾವೀಗ ಹೈಪರ್ ಲಿಂಕ್ ಅನ್ನು ರಚಿಸಿದ್ದೇವೆ! |
05:55 | ಹೈಪರ್ ಲಿಂಕ್ ಅನ್ನು ತೆಗಿಯಲು, ಹೈಪರ್ ಲಿಂಕ್ ಆಗಿರುವ “Sheet 2” ಪಠ್ಯವನ್ನು ಸೆಲೆಕ್ಟ್ ಮಾಡಿ. |
06:01 | ರೈಟ್ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿನಿಂದ “Default Formatting” ವಿಕಲ್ಪವನ್ನು ಕ್ಲಿಕ್ ಮಾಡಿ. |
06:09 | ಈಗ ಆ ಪಠ್ಯ ಹೈಪರ್ ಲಿಂಕ್ ಆಗಿರುವುದಿಲ್ಲ. |
06:12 | ಈಗದು ಡಾಕಿಮೆಂಟ್ ನಲ್ಲಿರುವ ಒಂದು ಸಾಮಾನ್ಯ ಲಿಖಿತವಷ್ಟೇ. |
06:16 | ನಾವು ಮಾಡಿರುವ ಬದಲಾವಣೆಗಳನ್ನು undo ಮಾಡೋಣ. |
06:20 | ಇಲ್ಲಿಗೆ ಲಿಬ್ರೆ ಆಫಿಸ್ ಕ್ಯಾಲ್ಕ್ ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. |
06:25 | ಇಲ್ಲಿ ನಾವು:
ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳಿಗೆ ರೆಫ್ರೆನ್ಸ್ ಮಾಡುವುದನ್ನು. |
06:31 | ಕ್ಯಾಲ್ಕ್ ನಲ್ಲಿ ಹೈಪರ್ ಲಿಂಕ್ ಅನ್ನು ಬಳಸುವುದನ್ನು ಕಲಿತಿದ್ದೇವೆ. |
06.36 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: |
06.40 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
06.43 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
06.47 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06.52 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06.56 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07.03 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. |
07.07 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07.15 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
07.25 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |