C-and-Cpp/C2/Relational-Operators/Kannada

From Script | Spoken-Tutorial
Revision as of 10:51, 14 November 2014 by Vasudeva ahitanal (Talk | contribs)

Jump to: navigation, search
Time Narration
00:01 c ಮತ್ತು c++ ನಲ್ಲಿ ರಿಲೇಶನಲ್ ಆಪರೇಟರ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು :
00:09 ರಿಲೇಶನಲ್ ಆಪರೇಟರ್ ಗಳಾದ
00:11 ಲೆಸ್ ದ್ಯಾನ್, ಉದಾಹರಣೆಗೆ a ಲೆಸ್ ದ್ಯಾನ್ b
00:14 ಗ್ರೇಟರ್ ದ್ಯಾನ್, ಉದಾಹರಣೆಗೆ a ಗ್ರೇಟರ್ ದ್ಯಾನ್ b
00:17 ಲೆಸ್ ದ್ಯಾನ್ ಆರ್ ಈಕ್ವಲ್ ಟು, ಉದಾಹರಣೆಗೆ a ಲೆಸ್ ದ್ಯಾನ್ ಆರ್ ಈಕ್ವಲ್ ಟು b
00:22 ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು, ಉದಾಹರಣೆಗೆ a ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು b
00:27 ಈಕ್ವಲ್ ಟು ಉದಾಹರಣೆಗೆ aಈಕ್ವಲ್ ಟು b
00:30 ನಾಟ್ ಈಕ್ವಲ್ ಟು, ಉದಾಹರಣೆಗೆ a ನಾಟ್ ಈಕ್ವಲ್ ಟು b
00:37 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:50 ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:53 ರಿಲೇಶನಲ್ ಆಪರೇಟರ್ ಗಳನ್ನು, ಇಂಟಿಜರ್ ಮತ್ತು ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಗಳನ್ನು ಹೋಲಿಸಲು ಬಳಸುತ್ತೇವೆ.
00:57 ರಿಲೇಶನಲ್ ಆಪರೇಟರ್ ಗಳನ್ನು ಉಪಯೋಗಿಸಿದ ಎಕ್ಸ್ಪ್ರೆಶನ್ ಗಳು, ಫಾಲ್ಸ್ ಇದ್ದಲ್ಲಿ ಸೊನ್ನೆಯನ್ನು, ಮತ್ತು ಟ್ರು ಇದ್ದಲ್ಲಿ ಒಂದನ್ನು ಕೊಡುತ್ತದೆ.
01:04 ಈಗ ನಾನು ರಿಲೇಶನಲ್ ಆಪರೇಟರ್ ಗಳನ್ನು c ಪ್ರೊಗ್ರಾಮ್ ನ ಸಹಾಯದಿಂದ ವಿವರಿಸುತ್ತೇನೆ.
01:09 ನಾನೀಗಾಗಲೇ ಪ್ರೊಗ್ರಮ್ ಅನ್ನು ಬರೆದಿದ್ದೇನೆ.
01:11 ಹಾಗಾಗಿ, ನಾನು ಎಡಿಟರ್ ಅನ್ನು ಒಪನ್ ಮಾಡಿ ಕೋಡ್ ಅನ್ನು ವಿವರಿಸುತ್ತೇನೆ.
01:15 ಮೊದಲು ಎರಡು ವೇರ್ರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ, a ಮತ್ತು b.
01:20 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಯೂಸರ್ ಗೆ a ಮತ್ತು b ಗಳ ಮೌಲ್ಯವನ್ನು ಕೊಡಲು ತಿಳಿಸುತ್ತದೆ.
01:26 ಈ ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್, a ಮತ್ತು b ಗಳ ಮೌಲ್ಯವನ್ನು ತೆಗೆದುಕೊಳ್ಳುತ್ತದೆ.
01:32 ಈಗ ಗ್ರೇಟರ್ ದ್ಯಾನ್ ಆಪರೇಟರ್ ಅನ್ನು ಉಪಯೋಗಿಸೋಣ.
01:35 ಈ ಆಪರೇಟರ್, ತನ್ನ ಎರಡೂ ಬದಿಯ ಆಪರೇಟರ್ ಗಳನ್ನು ಹೋಲಿಸುತ್ತದೆ.
01:38 a ಯು, b ಗಿಂತ ದೊಡ್ಡದಿದ್ದರೆ, ಇದು ಟ್ರು ಎಂದು ಕೊಡುತ್ತದೆ.
01:43 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ.
01:47 ಮೇಲಿನ ಕಂಡೀಶನ್ ಫಾಲ್ಸ್ ಇದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ.
01:50 ನಂತರ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ.
01:53 ಈಗ ಲೆಸ್ ದ್ಯಾನ್ ಆಪರೇಟರ್ ಬಗೆಗೆ ತಿಳಿಯೋಣ.
01:56 ಇದೂ ಕೂಡ ಆಪರಂಡ್ ಗಳನ್ನು ಹೋಲಿಸುತ್ತದೆ.
01:57 a ಯು, b ಗಿಂತ ಚಿಕ್ಕದಿದ್ದರೆ, ಇದು ಟ್ರು ಎಂದು ಕೊಡುತ್ತದೆ.
02:02 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ.
02:06 ಇಲ್ಲದಿದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ.
02:09 ಕೋಡ್ ಅನ್ನು ಇಲ್ಲಿಯವರೆಗೆ ಎಕ್ಸಿಕ್ಯೂಟ್ ಮಾಡೋಣ.
02:13 ಕೆಳಗಿನವುಗಳನ್ನು ಮೊದಲು ಕಮೆಂಟ್ ಮಾಡಿ.
02:16 ಸ್ಲ್ಯಾಶ್ ಅಸ್ಟರಿಕ್ಸ್ , ಅಸ್ಟರಿಕ್ಸ್ ಸ್ಲ್ಯಾಶ್ ಎಂದು ಟೈಪ್ ಮಾಡಿ.
02:24 Save ಒತ್ತಿ.
02:26 ನಾನು ನನ್ನ ಫೈಲ್ ಅನ್ನು ರೆಲೇಶನಲ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ.
02:29 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:35 ಕಂಪೈಲ್ ಮಾಡಲು, gcc ಸ್ಪೇಸ್ ರಿಲೇಶನಲ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಆರ್ ಇ ಎಲ್ ಎಂದು ಟೈಪ್ ಮಾಡಿ.
02:49 Enter ಕೀಯನ್ನು ಒತ್ತಿ.
02:51 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಆರ್ ಇ ಎಲ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
02:56 ನಾನು, a ಗೆ ಎಂಟು ಎಂದೂ, b ಗೆ ಮೂರು ಎಂದು ಕೊಡುತ್ತೇನೆ.
03:01 ಏಟ್ (8) ಈಸ್ ಗ್ರೇಟರ್ ದ್ಯಾನ್ ಥ್ರೀ ಎಂದು ಔಟ್ ಪುಟ್ ತೋರಿಸುತ್ತದೆ.
03:07 ನೀವು ಇದೇ ಕೋಡ್ ಅನ್ನು, a ಮತ್ತು b ಗೆ ಬೇರೆ ಮೌಲ್ಯಗಳನ್ನು ಕೊಟ್ಟು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಬಹುದು.
03:11 ಕೋಡ್ ಗೆ ಹಿಂದಿರುಗಿ.
03:14 ಇಲ್ಲಿಂದ ಕಮೆಂಟ್ ಅನ್ನು ಡಿಲೀಟ್ ಮಾಡಿ, ಮತ್ತು ಇಲ್ಲಿ ಟೈಪ್ ಮಾಡಿ.
03:24 ಈಗ ನಾವು ಲೆಸ್ ದ್ಯಾನ್ ಆರ್ ಈಕ್ವಲ್ ಟು ಆಪರೇಟರ್ ಬಗೆಗೆ ತಿಳಿಯೋಣ.
03:28 ಈ ಆಪರೇಟರ್, ತನ್ನ ಎರಡೂ ಬದಿಯ ಆಪರೇಟರ್ ಗಳನ್ನು ಹೋಲಿಸುತ್ತದೆ.
03:33 a ಯು, b ಗಿಂತ ಚಿಕ್ಕದು, ಅಥವಾ ಸಮವಾಗಿದ್ದರೆ, ಇದು ಟ್ರು ಎಂದು ಕೊಡುತ್ತದೆ.
03:38 ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ.
03:42 ಮೇಲಿನ ಕಂಡೀಶನ್ ಫಾಲ್ಸ್ ಇದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ.
03:45 ನಂತರ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ.
03:49 ಮುಂದಿನ ಆಪರೇಟರ್, ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು
03:52 ಇದು, a ಮತ್ತು b ಗಳನ್ನು ಹೋಲಿಸಿ, a ಯು b ಗಿಂತ ದೊಡ್ಡದು ಅಥವಾ ಸಮವಾಗಿದ್ದರೆ ಟ್ರು ಎಂದು ಕೊಡುವುದು.
04:00 ಕಂಡೀಶನ್ ಟ್ರು ಆಗಿದ್ದರೆ ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
04:05 ಈಗ, ಇಲ್ಲಿಯವರೆಗೆ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:07 Save ಅನ್ನು ಒತ್ತಿ.
04:09 ಟರ್ಮಿನಲ್ ಗೆ ಹಿಂದಿರುಗಿ.
04:12 ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ತ್ಯೂಟ್ ಮಾಡಿ.
04:17 ನಾನು, a ಗೆ ಎಂಟು ಮತ್ತು b ಗೆ ಮೂರು ಎಂದು ಕೊಡುತ್ತೇನೆ.
04:22 ಏಟ್ ಈಸ್ ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು ಥ್ರೀ ಎಂದು ಔಟ್ ಪುಟ್ ತೋರಿಸುತ್ತದೆ.
04:30 ಉಳಿದ ಕೋಡ್ ಗೆ ಹಿಂದಿರುಗೋಣ.
04:33 ಇಲ್ಲಿ ಮತ್ತು ಇಲ್ಲಿಂದ ಮಲ್ಟಿಲೈನ್ ಕಮೆಂಟ್ ಅನ್ನು ಡಿಲೀಟ್ ಮಾಡಿ.
04:43 ಈಗ ನಾವು ಈಕ್ವಲ್ ಟು ಆಪರೇಟರ್ ಬಗೆಗೆ ತಿಳಿಯೋಣ.
04:47 ಇದನ್ನು ಸೂಚಿಸಲು, ಎರಡು ಈಕ್ವಲ್ ಸೈನ್ ಬರೆಯುತ್ತಾರೆ.
04:50 ಎರಡೂ ಆಪರಂಡ್ ಗಳೂ ಸಮವಾಗಿದ್ದಲ್ಲಿ, ಈ ಆಪರೇಟರ್ ಟ್ರು ಎಂದು ಕೊಡುತ್ತದೆ.
04:57 a ಮತ್ತು b ಎರಡೂ ಸಮವಾಗಿದ್ದರೆ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
05:00 ಇಲದಿದ್ದರೆ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ.
05:06 ಹೀಗೆಯೇ, ನಾಟ್ ಈಕ್ವಲ್ ಟು ಆಪರೇಟರ್ ಕೂಡಾ ಇದೆ.
05:08 ಎರಡೂ ಆಪರಂಡ್ ಗಳೂ ಸಮವಾಗಿಲ್ಲದಿದ್ದಲ್ಲಿ, ಈ ಆಪರೇಟರ್, ಟ್ರು ಎಂದು ಕೊಡುತ್ತದೆ.
05:15 a ಯು b ಗೆ ಸಮವಾಗಿಲ್ಲದಿದ್ದಲ್ಲಿ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
05:20 ಪ್ರೊಗ್ರಾಮ್ ನ ಅಂತ್ಯಕ್ಕೆ ಬರೋಣ. ರಿಟರ್ನ್ ಝೀರೋ ಎಂದು ಟೈಪ್ ಮಾಡಿ.
05:24 save ಒತ್ತಿ.
05:26 ಟರ್ಮಿನಲ್ ಗೆ ಹಿಂತಿರುಗಿ.
05:28 ಮೊದಲಿನಂತೆ ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡಿ.
05:32 aಗೆ ಎಂಟು ಮತ್ತು b ಗೆ ಮೂರು ಎಂದು ಮೌಲ್ಯಗಳನ್ನು ಕೊಡಿ.
05:38 ಔಟ್ ಪುಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ.
05:40 ಏಟ್ ಈಸ್ ನಾಟ್ ಈಕ್ವಲ್ ಟು ಥ್ರೀ.
05:44 ಇಲ್ಲಿಯವರೆಗೆ ರಿಲೇಶನಲ್ ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡಿದೆವು.
05:48 ಈ ಕೋಡ್ ಅನ್ನು ಬೇರೆ ಬೇರೆ ಸಂಖ್ಯೆಗಳನ್ನು ಕೊಟ್ಟು ಎಕ್ಸಿಕ್ಯೂಟ್ ಮಾಡಿ ಪ್ರಯತ್ನಿಸಿ.
05:51 ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಬರೆಯುವುದು ಸುಲಭ.
05:56 ಸಿಂಟ್ಯಾಕ್ಸ್ ನಲ್ಲಿ ಕೆಲವು ವ್ಯತ್ಯಾಸಗಳಿವೆ.
05:59 ನಾನೀಗಾಗಲೇ, c++ ನಲ್ಲಿ ಕೋಡ್ ಅನ್ನು ಬರೆದ್ದಿದ್ದೇನೆ.
06:04 ರಿಲೇಶನಲ್ ಆಪರೇಟರ್ಸ್ ಇನ್ c ಎಂಬ ಪ್ರೊಗ್ರಾಮ್ ಗೆ ಕೋಡ್ ಇಲ್ಲಿದೆ.
06:08 ಹೆಡರ್ ನಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು,
06:12 ಮತ್ತು, ಇಲ್ಲಿ ಯೂಸಿಂಗ್ ಸ್ಟೇಟ್ಮೆಂಟ್ ಕೂಡಾ ಇದೆ.
06:15 c++ನಲ್ಲಿ, ಸಿ ಔಟ್ ಎಂಬುದು ಔಟ್ ಪುಟ್ ಸ್ಟೇಟ್ಮೆಂಟ್ ಆಗಿದೆ,
06:19 ಮತ್ತು, ಸಿ ಇನ್ ಎಂಬುದು c++ನ ಇನ್ಪುಟ್ ಸ್ಟೇಟ್ಮೆಂಟ್ ಆಗಿದೆ.
06:22 ಹಾಗಾಗಿ, ಈ ವ್ಯತ್ಯಾಸಗಳನ್ನು ಹೊರತು ಪಡಿಸಿ, ಎರಡೂ ಕೋಡ್ ಗಳು ಒಂದೇತೆರನಾಗಿವೆ.
06:26 Save ಅನ್ನು ಒತ್ತಿ.
06:28 ಫೈಲ್ ಅನ್ನು ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
06:32 ನಾನು, ನನ್ನ ಫೈಲ್ ಅನ್ನು ರಿಲೇಶನಲ್ ಡಾಟ್ ಸಿಪಿಪಿ ಎಂದು ಸೇವ್ ಮಾಡಿದ್ದೇನೆ.
06:37 ಕೋಡ್ ಅನ್ನು ಕಂಪೈಲ್ ಮಾಡೋಣ.
06:39 ಟರ್ಮಿನಲ್ ಅನ್ನು ಒಪನ್ ಮಾಡಿ, g++ relational.cpp -o rel1 (g++ ರಿಲೇಶನಲ್ ಡಾಟ್ ಸಿಪಿಪಿ ಸ್ಪೇಶ್ ಮೈನಸ್ ಒ ಸ್ಪೇಸ್ ಆರ್ ಇ ಎಲ್ ಒನ್) ಎಂದು ಟೈಪ್ ಮಾಡಿ.
06:50 ಎಕ್ಸೆಕ್ಯೂಟ್ ಮಾಡಲು, ./rel1 (ಡಾಟ್ ಸ್ಲ್ಯಾಶ್ ಆರ್ ಇ ಎಲ್ ಒನ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
06:56 ನಾನು, a ಗೆ ಎಂಟು ಎಂದೂ, b ಗೆ ಮೂರು ಎಂದೂ ಮೌಲ್ಯಗಳನ್ನು ಕೊಡುತ್ತೇನೆ.
07:00 ಔಟ್ ಪುಟ್ ತೋರಿಸುತ್ತದೆ.
07:02 ಔಟ್ ಪುಟ್ c ಪ್ರೊಗ್ರಾಮ್ ನ ಔಟ್ ಪುಟ್ ನಂತೆಯೇ ಇರುವುದನ್ನು ನೋಡಬಹುದು.
07:07 ಈಗ, ಸಾಮಾನ್ಯವಾಗಿ ನಮಗೆ ಬರುವ ಎರರ್ ಅನ್ನು ನೋಡೋಣ.
07:10 ಪ್ರೊಗ್ರಾಮ್ ಗೆ ಹಿಂತಿರುಗಿ.
07:13 ಇಲ್ಲಿ, ಎರಡು ಈಕ್ವಲ್ ಸೈನ್ ನ ಬದಲು, ಒಂದೇ ಈಕ್ವಲ್ ಸೈನ್ ಬರೆದೆವು ಎಂದೆಣಿಸಿ.
07:19 Save ಅನ್ನು ಒತ್ತಿ.
07:21 ಟರ್ಮಿನಲ್ ಗೆ ಹಿಂತಿರುಗಿ.
07:23 ಮೊದಲಿನಂತೆ, ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
07:33 ಇಲ್ಲಿ, ಥ್ರೀ ಈಸ್ ಈಕ್ವಲ್ ಟು ಥ್ರೀ ಎಂದು ತೋರಿಸುತ್ತಿದೆ.
07:37 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
07:40 ಇದರ ಕಾರಣ, ಇಲ್ಲಿ ಇರುವುದು ಅಸೈನ್ಮೆಂಟ್ ಆಪರೇಟರ್.
07:43 ಹಾಗಾಗಿ, b ಯ ಮೌಲ್ಯ a ಗೆ ಕೊಡಲಾಗಿದೆ.
07:46 ಈಗ, ಈ ಎರರ್ ಅನ್ನು ಸರಿಪಡಿಸೋಣ.
07:49 ಇನ್ನೊಂದು ಈಕ್ವಲ್ ಸೈನ್ ಅನ್ನು ಟೈಪ್ ಮಾಡಿ.
07:51 Save ಅನ್ನು ಒತ್ತಿ.
07:54 ಟರ್ಮಿನಲ್ ಗೆ ಹಿಂತಿರುಗಿ.
07:56 ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
08:04 ಈಗ ಔಟ್ ಪುಟ್ ಸರಿಯಾಗಿದೆ.
08:06 ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ.
08:08 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
08:10 ರಿಲೇಶನಲ್ ಆಪರೇಟರ್ ಗಳಾದ
08:12 ಲೆಸ್ ದ್ಯಾನ್, ಉದಾಹರಣೆಗೆ, a ಲೆಸ್ ದ್ಯಾನ್ b
08:14 ಗ್ರೇಟರ್ ದ್ಯಾನ್ ಉದಾಹರಣೆಗೆ, a ಗ್ರೇಟರ್ ದ್ಯಾನ್ b
08:17 ಲೆಸ್ ದ್ಯಾನ್ ಆರ್ ಈಕ್ವಲ್ ಟು ಉದಾಹರಣೆಗೆ, a ಲೆಸ್ ದ್ಯಾನ್ ಆರ್ ಈಕ್ವಲ್ ಟುb
08:22 ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು ಉದಾಹರಣೆಗೆ, aಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು b
08:27 ಈಕ್ವಲ್ ಟು ಉದಾಹರಣೆಗೆ, a ಈಕ್ವಲ್ ಟು b
08:29 ನಾಟ್ ಈಕ್ವಲ್ ಟು ಉದಾಹರಣೆಗೆ, a ನಾಟ್ ಈಕ್ವಲ್ ಟು b
08:34 ಮೂರು ವಿದ್ಯಾರ್ಥಿಗಳ ಅಂಕವನ್ನು ಇನ್ಪುಟ್ ಆಗಿ ಪಡೆದು, ಅವನ್ನು ಹೋಲಿಸಿ, ಯಾವ ವಿದ್ಯಾರ್ಥಿಯು ಹೆಚ್ಚು ಅಂಕವನ್ನು ಪಡೆದಿದ್ದಾನೆ ಎಂದು ಕಂಡುಹಿಡಿದು,ಇಬ್ಬರು ಅಥವಾ ಹೆಚ್ಚು ಜನ ಸಮಾವಾದ ಅಂಕವನ್ನು ಪಡೆದಿದ್ದಾರೆಯೇ ಎಂದು ಪರಿಶೀಲಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
08:48 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
08:51 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
08:54 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
08:58 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
09:03 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
09:06 ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ.
09:14 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
09:18 ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದಬೆಂಬಲಿತವಾಗಿದೆ.
09:24 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
09:34 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal