LibreOffice-Suite-Calc/C3/Advanced-Formatting-and-Protection/Kannada

From Script | Spoken-Tutorial
Revision as of 20:01, 13 November 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿ ಅಡ್ವಾನ್ಸ್ಡ್ ಫಾರ್ಮೇಟಿಂಗ್ (Advanced Formatting) ಮತ್ತು ಪ್ರೊಟೆಕ್ಷನ್ (Protection) ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ಸ್ಪ್ರೆಡ್ ಶೀಟ್ ಅನ್ನು ರಕ್ಷಿಸಲು ಪಾಸ್ ವರ್ಡ್ ನ ರಚನೆ, ಸ್ಪ್ರೆಡ್ ಶೀಟ್ ನ ಒಂದು ಶೀಟ್ ಅನ್ನು ಅಥವಾ ಟ್ಯಾಬ್ ಅನ್ನು ರಕ್ಷಿಸಲು ಪಾಸ್ ವರ್ಡ್ ನ ರಚನೆ, ಡಾಟಾ ಬೇಸ್ ಗೆ ರೇಂಜ್ ಅನ್ನು ನಿಶ್ಚಯಿಸಲು, Subtotal ವಿಕಲ್ಪದ ಬಳಕೆ, ಸೆಲ್ ಗಳನ್ನು Validate ಮಾಡಲು ಕಲಿಯಲಿದ್ದೇವೆ.

00:25 ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ.
00:35 “Personal-Finance-Tracker.ods” ಅನ್ನು ಓಪನ್ ಮಾಡೋಣ.
00:40 ಈ ಫೈಲ್ ಗೆ ಪಾಸ್ ವರ್ಡ್ ಅನ್ನು ರಚಿಸಲು ಕಲಿಯೋಣ.
00:44 ಈ ವಿಕಲ್ಪವು ಪಾಸ್ ವರ್ಡ್ ಗೊತ್ತಿದ್ದವರಿಗೆ ಮಾತ್ರ ಈ ಪೈಲ್ ಅನ್ನು ಓಪನ್ ಮಾಡಲು ಅನುವು ಮಾಡಿಕೊಡುತ್ತದೆ.
00:51 ಮೇನ್ ಮೆನುವಿನಿಂದ, click File ಮತ್ತು Save As ಅನ್ನು ಕ್ಲಿಕ್ ಮಾಡಿ.
00:55 Save ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
00:58 ನಂತರ, Save with password ಬಾಕ್ಸ್ ಅನ್ನು ಆಯ್ಕೆಮಾಡಿ.
01:03 Save ಅನ್ನು ಕ್ಲಿಕ್ ಮಾಡಿ.
01:06 Save As ವಿಕಲ್ಪವನ್ನು ಬಳಸುತ್ತಿರುವದರಿಂದ, ನಾವು ಈ ಫೈಲ್ ಅನ್ನು ಬೇರೆಯ ಫೈಲ್ ಆಗಿ ಸೇವ್ ಮಾಡಬಹುದು ಅಥವಾ ಇದೇ ಫೈಲ್ ಗೆ ರೀಪ್ಲೇಸ್ ಮಾಡಬಹುದು.
01:15 ಇಲ್ಲಿ ಇದೇ ಫೈಲ್ ನ ಜಾಗಕ್ಕೆ ರೀಪ್ಲೇಸ್ ಮಾಡೋಣ.
01:18 Yes ಅನ್ನು ಕ್ಲಿಕ್ ಮಾಡಿ.
01:20 passwordಪಾಸ್ ವರ್ಡ್ ಅನ್ನು ನಮೂದಿಸಿ.
01:23 ಪಾಸ್ ವರ್ಡ್ ಅನ್ನು confirm ಬಾಕ್ಸ್ ನಲ್ಲಿ ಪುನಃ ನಮೂದಿಸಿ. OK ಅನ್ನು ಕ್ಲಿಕ್ಕಿಸಿ.
01:30 Personal-Finance-Tracker.ods ಅನ್ನು ಕ್ಲೋಸ್ ಮಾಡೋಣ.
01:36 ಈಗ, ಈ ಫೈಲ್ ಅನ್ನು ಪುನಃ ಓಪನ್ ಮಾಡಿ ಪರಿಶೀಲಿಸೋಣ.
01:41 Enter Password ಡಯಲಾಗ್ ಬಾಕ್ಸ್ ಕಾಣಿಸುತ್ತದೆ!
01:45 ಇಲ್ಲಿ ತಪ್ಪಾದ ಪಾಸ್ ವರ್ಡ್ ಅನ್ನು ನಮೂದಿಸೋಣ.
01:48 OK ಅನ್ನು ಕ್ಲಿಕ್ ಮಾಡಿ.
01:50 password is incorrect ಎನ್ನುವು ಸಂದೇಶವು ಪರದೆಯಲ್ಲಿ ಕಾಣಿಸುತ್ತದೆ.
01:56 ಈಗ ಸರಿಯಾದ ಪಾಸ್ ವರ್ಡ್ ಅನ್ನು ನಮೂದಿಸೋಣ.
01:59 ಈಗ ಫೈಲ್ ತೆರೆದುಕೊಳ್ಳುತ್ತದೆ.
02:01 ಪಾಸ್ ವರ್ಡ್ ವಿಕಲ್ಪವನ್ನು ತೆಗೆಯುವುದು ಹೇಗೆ? ಇದು ಅತ್ಯಂತ ಸರಳ.
02:07 Save with password ವಿಕಲ್ಪದ ಆಯ್ಕೆಯನ್ನು ತೆಗೆಯಿರಿ (ಅನ್ ಚೆಕ್).
02:10 ಪುನಃ ಸೇವ್ ವಿಕಲ್ಪವನ್ನು ಬಳಸೋಣ, ಮೊದಲಿನಂತೆಯೇ ನಾವು ಬೇರೆಯ ಫೈಲ್ ಆಗಿ ಸೇವ್ ಮಾಡಬಹುದು ಅಥವಾ ಅದೇ ಫೈಲ್ ಗೆ ರೀಪ್ಲೇಸ್ ಮಾಡಬಹುದು.
02:18 ಇಲ್ಲಿ ಇದೇ ಫೈಲ್ ಅನ್ನು ರೀಪ್ಲೇಸ್ ಮಾಡೋಣ.
02:21 Yes ಅನ್ನು ಕ್ಲಿಕ್ ಮಾಡಿ.
02:23 ಈ ಫೈಲ್ ಅನ್ನು ಕ್ಲೋಸ್ ಮಾಡಿ ಓಪನ್ ಮಾಡೋಣ.
02:27 ಈಗ ಫೈಲ್ ಅನ್ನು ತೆರೆಯಲು ಪಾಸ್ ವರ್ಡ್ ನ ಅಗತ್ಯವಿಲ್ಲ.
02:31 ಈಗ ಈ ಫೈಲ್ ನಲ್ಲಿನ ಶೀಟ್ ಗಳಿಗೆ ಪಾಸ್ ವರ್ಡ್ ನ ರಕ್ಷಣೆಯನ್ನು ಒದಗಿಸೋಣ.
02:37 ಮೆನು ಬಾರ್ ನಿಂದ, “Tools” ಅನ್ನು ಕ್ಲಿಕ್ ಮಾಡಿ, ಅನಂತರ “Protect Document” ಮತ್ತು “Sheet” ವಿಕಲ್ಪಗಳನ್ನು ಕ್ಲಿಕ್ ಮಾಡಿ.
02:44 “Protect Sheet” ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
02:47 ಈ ಹಾಳೆಗಳನ್ನು ರಕ್ಷಿಸಲು (Protect), “Select Locked cells” ಮತ್ತು “Select Unlocked cells” ವಿಕಲ್ಪಗಳನ್ನು ಗುರುತಿಸದಿರಿ(ಅನ್ ಚೆಕ್).
02:56 ಈಗ, “Password” ಕ್ಷೇತ್ರದಲ್ಲಿ, ನಿಮ್ನಾಕ್ಷರದಲ್ಲಿ “abc” ಎಂದು ನಮೂದಿಸಿ, “Confirm” ಕ್ಷೆತ್ರದಲ್ಲಿ ಪುನಃ ಪಾಸ್ ವರ್ಡ್ ಅನ್ನು ನಮೂದಿಸಿ.
03:07 OK ಅನ್ನು ಕ್ಲಿಕ್ ಮಾಡಿ.
03:08 ಈಗ, ಯಾವುದಾದರೂ ಒಂದು ಸೆಲ್ ಅನ್ನು ಆರಿಸಿ ಅಲ್ಲಿನ ದತ್ತಾಂಶಗಳ(ಡೇಟಾ) ಬದಲಾವಣೆಯನ್ನು ಮಾಡಲು ಪ್ರಯತ್ನಿಸೋಣ.
03:15 ಆದರೆ ನಮಗೆ ಯಾವುದೇ ಸೆಲ್ ಅನ್ನು ಸೆಲೆಕ್ಟ್ ಮಾಡಲು ಆಗುತ್ತಿಲ್ಲ!
03:18 ಈ ಹಾಳೆಯನ್ನು ಸಂಕಲಿಸಲು(ಎಡಿಟ್) ಸಾಧ್ಯವಿಲ್ಲ!
03:22 ಆದರೆ ಬೇರೆಯ ಹಾಳೆಗಳ ಸ್ಥಿತಿಗತಿಗಳೇನು?
03:24 Sheet2 ಅನ್ನು ಕ್ಲಿಕ್ ಮಾಡಿ.
03:27 ಇಲ್ಲಿ ಒಂದು ಸೆಲ್ ಅನ್ನು ಸೆಲೆಕ್ಟ್ ಮಾಡಿ ಮತ್ತು ಸಂಕಲಿಸಲು ಪ್ರಯತ್ನಿಸಿ.
03:30 ಕ್ಯಾಲ್ಕ್ ನಮಗೆ ಬೇರೆ ಹಾಳೆಗಳನ್ನು ಸಂಕಲಿಸಲು ಅವಕಾಶವನ್ನು ಕೊಡುತ್ತದೆ.
03:35 ಈಗ ಮೊದಲಿನ ಹಾಳೆಗೆ ಹೋಗೋಣ.
03:38 ಈಗ ,ಈ ಹಾಳೆಯನ್ನು ರಕ್ಷಣಾರಹಿತವಾಗಿ (un-protect) ಮಾಡೋಣ.
03:41 ಇದು ಅತ್ಯಂತ ಸರಳ.
03:43 ಮೈನ್ ಮೆನುವಿನಿಂದ, “Tools” ಅನ್ನು ಕ್ಲಿಕ್ ಮಾಡಿ.ಅಲ್ಲಿ ಪುನಃ “Protect Document” ಮತ್ತು “Sheet” ಅನ್ನು ಕ್ಲಿಕ್ ಮಾಡಿ.
03:49 ಪಾಸ್ ವರ್ಡ್ ಅನ್ನು ಕೇಳುತ್ತಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ
03:53 ಅಲ್ಲಿ ನಿಮ್ನಾಕ್ಷರಗಳಲ್ಲಿ “abc” ಎಂದು ನಮೂದಿಸಿ ಮತ್ತು OK ಅನ್ನು ಕ್ಲಿಕ್ ಮಾಡಿ..
03:59 ಈಗ ನಾವು ಸೆಲ್ ಗಳನ್ನು ಸೆಲೆಕ್ಟ್ ಮಾಡಲು ಸಮರ್ಥರಾಗಿರುತ್ತೇವೆ!
04:03 “Ranges”ನ ಬಗ್ಗೆ ಕಲಿಯೋಣ.
04:06 ಈಗ ನೀವು ಒಂದು ಸ್ಪ್ರ್ರೆಡ್ ಶೀಟ್ ನಲ್ಲಿ ಸೆಲ್ ಗಳ ರೇಂಜ್ ಅನ್ನು ನಿರ್ಧರಿಸಬಹುದು ಮತ್ತು ಅದನ್ನು ಡೇಟಾ ಬೇಸ್ ಆಗಿ ಬಳಸಲೂಬಹುದು.
04:12 ಈ ಡೇಟಾ ಬೇಸ್ ರೇಂಜ್ ನ ಪ್ರತ್ಯೇಕ ಅಡ್ಡಸಾಲು(row) ಡೇಟಾ ಬೇಸ್ ರೆಕಾರ್ಡ್ ಗೆ ಅನುಗುಣವಾಗಿರುತ್ತದೆ ಮತ್ತು
04:17 ಅಡ್ಡಸಾಲಿನಲ್ಲಿರುವ ಪ್ರತ್ಯೇಕ ಸೆಲ್, ಡೇಟಾ ಬೇಸ್ ಕ್ಷೇತ್ರಕ್ಕೆ(field) ಅನುಗುಣವಾಗಿರುತ್ತದೆ.
04:22 ಇಲ್ಲಿ ನೀವು ಇತರ ಡೇಟಾ ಬೇಸ್ ಗಳಂತೆ ಸಾರ್ಟ್, ಗ್ರೂಪ್ ,ಸರ್ಚ್ ಮತ್ತು ಇನ್ನಿತರ ಲೆಕ್ಕಾಚಾರಗಳನ್ನು ಮಾಡಬಹುದು.
04:30 “Personal-Finance-Tracker.ods” ನಲ್ಲಿ ಒಂದು ಡೇಟಾ ಬೇಸ್ ಅನ್ನು ನಿರ್ಧರಿಸೋಣ ಮತ್ತು ದತ್ತಾಂಶಗಳನ್ನು ವಿಂಗಡಿಸೋಣ( ಸಾರ್ಟ್).
04:38 ಮೊದಲಿಗೆ, ನಮಗೆ ಡೇಟಾ ಬೇಸ್ ನಲ್ಲಿ ಬೇಕಾದ ಅಂಶಗಳನ್ನು ಸೆಲೆಕ್ಟ್ ಮಾಡಿಕೊಳ್ಳೋಣ.
04:43 “SN” ನಿಂದ Account ಶೀರ್ಷಿಕೆಯ ಅಡಿಯಲ್ಲಿರುವ ಎಲ್ಲಾ ದತ್ತಾಂಶಗಳನ್ನು ಒಟ್ಟಿಗೆ ಸೆಲೆಕ್ಟ್ ಮಾಡಿಕೊಳ್ಳೋಣ. ದತ್ತಾಂಶಗಳನ್ನು ಸೆಲೆಕ್ಟ್ ಮಾಡುವುದನ್ನು ನಾವು ಈಗಾಗಲೇ ಕಲಿತಿದ್ದೇವೆ.
04:53 ಈಗ, ನಮ್ಮ ಡೇಟಾ ಬೇಸ್ ಗೆ ಹೆಸರೊಂದನ್ನು ಕೊಡೋಣ.
04:56 ಮೆನು ಬಾರ್ ನಿಂದ ,“Data” ಮತ್ತು “Define Range” ಗಳನ್ನು ಕ್ಲಿಕ್ ಮಾಡಿ.
05:02 “Name” ಕ್ಷೇತ್ರದಲ್ಲಿ,“dtbs” ಎಂದು ಟೈಪ್ ಮಾಡಿ. ಇದು ಡೇಟಾ ಬೇಸ್ (database) ನ ಸಂಕ್ಷಿಪ್ತರೂಪವಾಗಿದೆ.
05:08 “OK” ಅನ್ನು ಕ್ಲಿಕ್ ಮಾಡಿ.
05:10 ಪುನಃ, ಮೆನು ಬಾರ್ ನಿಂದ, “Data” ಮತ್ತು “Select Range” ಅನ್ನು ಕ್ಲಿಕ್ ಮಾಡಿ.
05:15 “Select Database Range” ಎನ್ನುವ ಡಯಲಾಗ್ ಬಾಕ್ಸ್ ಕಾಣಿಸುತ್ತದೆ ಮತ್ತು ಅಲ್ಲಿ “dtbs” ಎನ್ನುವ ಹೆಸರು ಡೇಟಾ ಬೇಸ್ ಆಗಿ ಪ್ರದರ್ಶಿತವಾಗಿರುವುದನ್ನು ಗಮನಿಸಿ.
05:24 “OK” ಬಟನ್ ಅನ್ನು ಕ್ಲಿಕ್ ಮಾಡಿ.
05:27 ಈಗ ಡೇಟಾ ಬೇಸ್ ನಲ್ಲಿ ದತ್ತಾಂಶಗಳನ್ನು(ಡೇಟಾ) ವರ್ಗೀಕರಿಸೋಣ(sort).
05:31 ಮೆನು ಬಾರ್ ನಿಂದ, “Data” ಮತ್ತು “Sort” ಅನ್ನು ಕ್ಲಿಕ್ ಮಾಡೋಣ.
05:35 Sort ಡಯಲಾಗ್ ಬಾಕ್ಸ್ ಕಾಣಿಸುತ್ತದೆ,ಅಲ್ಲಿ “Sort by” ಕ್ಷೇತ್ರವನ್ನು ಕ್ಲಿಕ್ ಮಾಡೋಣ ಮತ್ತು “SN” ಅನ್ನು ಸೆಲೆಕ್ಟ್ ಮಾಡೋಣ.
05:42 ಅನಂತರ, ಬಲ ಬದಿಯಿಂದ, “Descending” ಅನ್ನು ಸೆಲೆಕ್ಟ್ ಮಾಡಿ.
05:47 ಮೊದಲನೆಯ “Then by” ಕ್ಷೇತ್ರದಲ್ಲಿ, ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು “Cost”ಅನ್ನು ಸೆಲೆಕ್ಟ್ ಮಾಡಿ.
05:54 ಪುನಃ, ಬಲ ಬದಿಯಿಂದ, “Descending” ಅನ್ನು ಸೆಲೆಕ್ಟ್ ಮಾಡಿ.
05:58 ಎರಡನೆಯ “Then by” ಕ್ಷೇತ್ರದಲ್ಲಿ, ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು “Spent” ಅನ್ನು ಸೆಲೆಕ್ಟ್ ಮಾಡಿ. ನಂತರ ಪುನಃ ಮೊದಲಿನಂತೆಯೇ ಬಲಬದಿಯಿಂದ “Descending”ಅನ್ನು ಸೆಲೆಕ್ಟ್ ಮಾಡಿ.
06:07 OK ಅನ್ನು ಕ್ಲಿಕ್ ಮಾಡಿ.
06:09 “SN” ಶೀರ್ಷಿಕೆಯ ಅಡಿಯಲ್ಲಿ ದತ್ತಾಂಶಗಳು ಅವರೋಹಣ ಕ್ರಮದಲ್ಲಿ(descending order) ವರ್ಗೀಕೃತವಾಗಿವೆ!
06:15 ಇದೇ ರೀತಿಯಲ್ಲಿ, ಡೇಟಾ ಬೇಸ್ ನಲ್ಲಿ ಇನ್ನಿತರ ಕಾರ್ಯಗಳನ್ನು ಕೂಡ ಮಾಡಬಹುದು!
06:21 CTRL+Z ಕೀಲಿಯನ್ನು ಒತ್ತಿ, undo ಮಾಡೊಣ ಮತ್ತು ದತ್ತಾಂಶಗಳ ಮೂಲಸ್ವರೂಪವನ್ನು ಹಿಂಪಡೆಯೋಣ.
06:28 ಈಗ, ಕ್ಯಾಲ್ಕ್ ನಲ್ಲಿ “Subtotal” ವಿಕಲ್ಪವನ್ನು ಬಳಸುವುದನ್ನು ಕಲಿಯೋಣ.
06:34 “Subtotal” ವಿಕಲ್ಪವು ನಮ್ಮ ಇಚ್ಛೆಯ ಗಣಿತದ ಕಾರ್ಯಗಳನ್ನು ಬಳಸಿ ವಿವಿಧ ಶೀರ್ಷಿಕೆಗಳ ಅಡಿಯಲ್ಲಿನ ದತ್ತಾಂಶಗಳ ಒಟ್ಟು ಮೊತ್ತವನ್ನು ಕಂಡುಹಿಡಿಯುತ್ತದೆ.
06:43 “Cost” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ ಸಬ್ ಟೋಟಲ್ ಅನ್ನು ಕಂಡುಹಿಡಿಯೋಣ.
06:49 ಮೊದಲಿಗೆ, 8 ನೇ ಅಡ್ಡಸಾಲಿನಲ್ಲಿ(row) ನಮೂದಿತವಾಗಿರುವ ಅಂಶಗಳನ್ನು ಡಿಲೀಟ್ ಮಾಡೋಣ.
06:53 SN ನಿಂದ ACCOUNT ಶೀರ್ಷಿಕೆಯ ಅಡಿಯಲ್ಲಿರುವ ಎಲ್ಲಾ ದತ್ತಾಂಶಗಳನ್ನು ಒಟ್ಟಿಗೆ ಸೆಲೆಕ್ಟ್ ಮಾಡೋಣ.
06:59 ನಂತರ, ಮೆನು ಬಾರ್ ನಿಂದ, “Data” ಮತ್ತು “Subtotals” ಅನ್ನು ಸೆಲೆಕ್ಟ್ ಮಾಡೋಣ.
07:04 Subtotals ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅಲ್ಲಿರುವ “Group by” ಕ್ಷೇತ್ರದಿಂದ “SN”ಅನ್ನು ಸೆಲೆಕ್ಟ್ ಮಾಡಿ.
07:11 ಇದು ದತ್ತಾಂಶಗಳನ್ನು(ಡೇಟಾ) ಕ್ರಮಾಂಕದಂತೆ ಗುಂಪುಗೂಡಿಸುತ್ತದೆ (groups).
07:15 ನಂತರ, “Calculate subtotals for” ಕ್ಷೇತ್ರದಲ್ಲಿ “Cost” ವಿಕಲ್ಪವನ್ನು ಕ್ಲಿಕ್ ಮಾಡಿ.
07:21 ಇದು ಶೀರ್ಷಿಕೆಯ ಅಡಿಯಲ್ಲಿನ ಎಲ್ಲಾ ಅಂಶಗಳ ಒಟ್ಟು ಮೊತ್ತವನ್ನು ಲೆಕ್ಕಿಸುತ್ತದೆ.
07:26 “Use function” ಕ್ಷೇತ್ರದ ಅಡಿಯಲ್ಲಿ, “Sum” ಅನ್ನು ಆಯ್ದುಕೊಳ್ಳೋಣ ಮತ್ತು OK ಅನ್ನು ಕ್ಲಿಕ್ ಮಾಡೋಣ.
07:33 ಸ್ಪ್ರೆಡ್ ಶೀಟ್ ನಲ್ಲಿನ “Costs” ಶೀರ್ಷಿಕೆಯ ಅಡಿಯಲ್ಲಿ ದತ್ತಾಂಶಗಳ “Grand total” ಪ್ರದರ್ಶಿತವಾಗಿರುವುದನ್ನು ಗಮನಿಸಿ.
07:41 ಸ್ಪ್ರೆಡ್ ಶೀಟ್ ನ ಎಡ ಬದಿಯಲ್ಲಿ “1”, ”2” ಮತ್ತು “3” ಎಂಬ 3 ಹೊಸ ಟ್ಯಾಬ ಗಳು ಕಾಣುತ್ತವೆ.
07:47 ಈ ಟ್ಯಾಬ್ ಗಳು, ದತ್ತಾಂಶಗಳ 3 ವಿವಿಧ ಅವಲೋಕನಗಳನ್ನು ನಮಗೆ ಒದಗಿಸುತ್ತವೆ.
07:52 ಟ್ಯಾಬ್ 1 ಅನ್ನು ಕ್ಲಿಕ್ ಮಾಡಿ.
07:54 ಕೇವಲ “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ “grand total” ಪ್ರದರ್ಶಿತವಾಗಿರುವುದನ್ನು ಗಮನಿಸಿ.
08:00 ಟ್ಯಾಬ್ “2” ಅನ್ನು ಕ್ಲಿಕ್ ಮಾಡಿ.
08:02 “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳು ಮತ್ತು ಅವುಗಳ “grand total” ಪ್ರದರ್ಶಿತವಾಗಿದೆ.
08:08 ಈಗ, ಟ್ಯಾಬ್ “3” ಅನ್ನು ಕ್ಲಿಕ್ ಮಾಡಿ.
08:11 ಈಗ ನಾವು ಶೀಟ್ ನ ಸಮಗ್ರ ನೋಟ ಮತ್ತು “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ “grand total” ಅನ್ನು ನೋಡಬಹುದು.
08:18 ಫೈಲ್ ಅನ್ನು ಕ್ಲೋಸ್ ಮಾಡೋಣ.
08:21 ಬದಲಾವಣೆಗಳನ್ನು Save ಅಥವಾ Discard ಮಾಡಲು ಕೇಳುವ ಮೆಸೇಜ್ ಕಾಣಿಸುತ್ತದೆ.
08:26 Discard ಅನ್ನು ಕ್ಲಿಕ್ ಮಾಡಿ.
08:28 ಫೈಲ್ ಅನ್ನು ಪುನಃ ಓಪನ್ ಮಾಡೋಣ.
08:31 ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ “Validity” ವಿಕಲ್ಪದ ಬಗೆಗೆ ತಿಳಿಯೋಣ.
08:37 “Validity” ವಿಕಲ್ಪವು ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳನ್ನು validate ಮಾಡುತ್ತದೆ.
08:41 ಸ್ಪ್ರೆಡ್ ಶೀಟ್ ನಲ್ಲಿ ಆಯ್ದ ಸೆಲ್ ಗಳಿಗೆ “Validation rules” ಗಳನ್ನು ನಿರ್ಧರಿಸುವ ಮೂಲಕ ಇದನ್ನು ಸಾಧಿಸಬಹುದು.
08:49 ಉದಾಹರಣೆಗಾಗಿ, “Personal-Finance-Tracker.ods”, ನಲ್ಲಿ Validation ಮಾಡುವಾಗ ಬಳಸಿದ ಅಂಶಗಳಿಗೆ mode of payment ಅನ್ನು ನಿರ್ಧರಿಸಬಹುದು.
08:59 ಈಗ “Date” ಶೀರ್ಷಿಕೆಯನ್ನು ಮತ್ತು ಅದರ ಅಡಿಯಲ್ಲಿನ ಅಂಶಗಳನ್ನು ಡಿಲೀಟ್ ಮಾಡಿ.
09:04 “Received”ಶೀರ್ಷಿಕೆಯ ಬದಿಯಲ್ಲಿ “Mode of Payment” ಎಂಬುವುದರ ಸಂಕ್ಷಿಪ್ತರೂಪವಾಗಿ “M-O-P”ಎನ್ನುವ ಶೀರ್ಷಿಕೆಯನ್ನು ನಮೂದಿಸೋಣ.
09:12 “Items” ಶೀರ್ಷಿಕೆಯ ಅಡಿಯಲ್ಲಿನ ,”Salary”, ”Electricity Bills” ಮತ್ತು ಇನ್ನಿತರ ಅಂಶಗಳಿಗೆ mode of payments ಅನ್ನು ಪ್ರದರ್ಶಿಸಲು,
09:21 “M-O-P” ಶೀರ್ಷಿಕೆಯ ಅಡಿಯಲ್ಲಿನ ಸೆಲ್ ಗಳನ್ನು ಉಪಯೋಗಿಸಬಹುದು.
09:27 ಈಗ, ”M-O-P” ಶೀರ್ಷಿಕೆಯ ನೇರ ಕೆಳಗಿನ ಖಾಲಿ ಸೆಲ್ ಅನ್ನು ಕ್ಲಿಕ್ ಮಾಡಿ.
09:33 “Salary” ಅಂಶಕ್ಕೆ mode of payment ಅನ್ನು ಈ ಸೆಲ್ ಹೊಂದಲಿದೆ.
09:38 ಈಗ, ಮೆನು ಬಾರ್ ನಿಂದ, “Data” ಮತ್ತು “Validity” ಅನ್ನು ಕ್ಲಿಕ್ ಮಾಡಿ.
09:43 “Validity” ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09:47 “Criteria” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:50 “Allow” ಕ್ಷೇತ್ರದ ಡ್ರಾಪ್ ಡೌನ್ ನಿಂದ, “List” ಅನ್ನು ಕ್ಲಿಕ್ ಮಾಡಿ.
09:55 “Entries” ಬಾಕ್ಸ್ ಕಾಣಿಸುತ್ತದೆ.
09:58 ಆಯ್ದ ಸೆಲ್ ಅನ್ನು validating ಮಾಡುವಾಗ ಕಾಣಿಸಿಕೊಳ್ಳುವ ವಿಕಲ್ಪವನ್ನು ನಮೂದಿಸೋಣ.
10:05 “In Cash” ಎಂದು ಮೊದಲ mode of payment ಅನ್ನು ಟೈಪ್ ಮಾಡಿ ಮತ್ತು ಕೀ ಬೋರ್ಡ್ ನಿಂದ “Enter” ಕೀಲಿಯನ್ನು ಒತ್ತಿರಿ.
10:13 ನಂತರ, “Demand Draft”ಎಂದು ಎರಡನೆಯ mode of payment ಅನ್ನು ಟೈಪ್ ಮಾಡೋಣ.
10:19 OK ಅನ್ನು ಕ್ಲಿಕ್ ಮಾಡೋಣ.
10:21 ಆಯ್ದ ಸೆಲ್ ಗಳು validate ಆಗಿವೆ!
10:25 ಈಗ ಸೆಲ್ ನ ಬದಿಯಲ್ಲಿನ ಕೆಳಮುಖದ ಬಾಣದ ಚಿನ್ಹೆಯನ್ನು ಒತ್ತಿರಿ.
10:30 “Entries” ಬಾಕ್ಸ್ ನಲ್ಲಿ Mode of Payments ಆಗಿ ನಮೂದಿಸಿರುವ ಅಂಶಗಳು ಕಾಣುತ್ತವೆಯೇ?
10:36 ಕೆಳಗಿನ ಸೆಲ್ ಗಳನ್ನು validate ಮಾಡಲು, ಟೂಲ್ ಬಾರ್ ನಲ್ಲಿನ “Format Paintbrush” ವಿಕಲ್ಪವನ್ನು ಕ್ಲಿಕ್ ಮಾಡಿ.
10:43 ನಂತರ ,validated ಸೆಲ್ ನ ಕೆಳಗಿನ ಸೆಲ್ ಗಳನ್ನು ,ಲೆಫ್ಟ್ ಕ್ಲಿಕ್ ಮಾಡಿ, ಸೆಲ್ ಗಳ ಮೇಲೆ ಮೌಸ್ ಅನ್ನು ಎಳೆಯುವ (ಡ್ರ್ಯಾಗ್) ಮೂಲಕ ಸೆಲೆಕ್ಟ್ ಮಾಡಿ.
10:53 ಈಗ ಮೌಸ್ ನ ಬಟನ್ ಅನ್ನು ಬಿಡಿ.
10:57 ಸೆಲೆಕ್ಟ್ ಆಗಿರುವ ಎಲ್ಲಾ ಸೆಲ್ ಗಳು validate ಆಗಿವೆ.
11:09 ಈಗ “M-O-P” ಶೀರ್ಷಿಕೆಯ ನೇರ ಕೆಳಗಿನ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ ಕಾಣುವ ಕೆಳಮುಖದ ಬಾಣದ ಗುರುತನ್ನು ಕ್ಲಿಕ್ ಮಾಡಿ.
11:17 mode of payment ಗೆ ಇರುವ ಎರಡೂ ವಿಕಲ್ಪಗಳು ಪ್ರದರ್ಶಿತವಾಗಿವೆ.
11:21 “In Cash” ವಿಕಲ್ಪವನ್ನು ಕ್ಲಿಕ್ ಮಾಡಿ.
11:25 ನಾವು ರಚಿಸಿಕೊಂಡಿರುವ mode of payment ಗೆ ಸರಿಯಾಗಿ validated ಸೆಲ್ ಗಳಲ್ಲಿ “Cash” ಅಥವಾ “Demand Draft” ವಿಕಲ್ಪಗಳನ್ನು ಸೆಲೆಕ್ಟ್ ಮಾಡಬಹುದು.
11:36 ಇಲ್ಲಿಗೆ ಲಿಬ್ರೆ ಆಫಿಸ್ ಕ್ಯಾಲ್ಕ್ ನ ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:42 ಇಲ್ಲಿ ನಾವು:

ಸ್ಪ್ರೆಡ್ ಶೀಟ್ ಗೆ ಪಾಸ್ ವರ್ಡ್ ನ ರಕ್ಷಣೆ(Password protect), ಸ್ಪ್ರೆಡ್ ಶೀಟ್ ಫೈಲ್ ನ ಪ್ರತ್ಯೇಕ ಶೀಟ್ ಗೆ ಅಥವಾ ಟ್ಯಾಬ್ ಗೆ ಪಾಸ್ ವರ್ಡ್ ನ ರಕ್ಷಣೆ, ಡೇಟಾ ಬೇಸ್ ಗೆ ರೇಂಜ್ ಅನ್ನು ನಿರ್ಧರಿಸಲು, Subtotals ಗಳನ್ನು ಬಳಸಲು, ಸೆಲ್ ಗಳನ್ನು validate ಮಾಡಲು ಕಲಿತಿದ್ದೇವೆ.

12.01 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
12.04 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
12.07 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12.13 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12.17 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12.20 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
12.27 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
12.31 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
12.39 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
12.50 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Vasudeva ahitanal