LibreOffice-Suite-Base/C2/Tables-and-Relationships/Kannada
From Script | Spoken-Tutorial
Revision as of 10:43, 13 November 2014 by Vasudeva ahitanal (Talk | contribs)
Time | Narration |
00:00 | ಲಿಬ್ರೆ ಆಫೀಸ್ ಬೇಸ್ ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ, ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ ಟೇಬಲ್ಸ್ ಮತ್ತು ರಿಲೇಶನ್ ಶಿಪ್ ನ ಬಗ್ಗೆ ತಿಳಿದುಕೊಳ್ಳಲಿದ್ದೇವೆ. |
00:10 | ಇಲ್ಲಿ, ನಾವು ಟೇಬಲ್ ನಲ್ಲಿ ಡೇಟಾ ಅನ್ನು ಸೇರಿಸುವುದು, |
00:16 | ರಿಲೇಶನ್ ಶಿಪ್ ನ ಲಕ್ಷಣ ಮತ್ತು ಅದನ್ನು ತಯಾರಿಸುವುದನ್ನು ಕಲಿಯಲಿದ್ದೇವೆ. |
00:19 | ಹಿಂದಿನ ಲಿಬ್ರೆ ಆಫೀಸ್ ಬೇಸ್ ಟ್ಯುಟೋರಿಯಲ್ ನಲ್ಲಿ, ಬೇಸ್ ಮತ್ತು ಡೇಟಾ ಬೇಸ್ ನ ಪ್ರಾಥಮಿಕ ಅಂಶವನ್ನು ಪರಿಚಯಿಸಿದ್ದೇವೆ. ಮತ್ತು ಡೇಟಾ ಬೇಸ್ ಮತ್ತು ಟೇಬಲ್ ಅನ್ನು ತಯಾರಿಸುವುದನ್ನು ಕಲಿತಿದ್ದೇವೆ. |
00:31 | ಆ ಟ್ಯುಟೋರಿಯಲ್ ಕೋರ್ಸ್ ನ ಸಮಯದಲ್ಲಿ ನಾವು ಉದಾಹರಣೆಗಾಗಿ Library ಹೆಸರಿನ ಡೇಟಾ ಬೇಸ್ ಅನ್ನು ತಯಾರಿಸಿದ್ದೇವೆ. ಮತ್ತು ಬುಕ್ಸ್ ಟೇಬಲ್ ಅನ್ನು ಕೂಡ ತಯಾರಿಸಿದ್ದೇವೆ. |
00:42 | ಈ ಟ್ಯುಟೋರಿಯಲ್ ನಲ್ಲಿ, ನಾವು ಲೈಬ್ರರಿ ಡೇಟಾ ಬೇಸ್ ನಿಂದ ಶುರು ಮಾಡೋಣ. ಮತ್ತು ಟೇಬಲ್ ನಲ್ಲಿ ಡೇಟಾ ಅನ್ನು ಹೇಗೆ ಸೇರಿಸುವುದು ಎಂಬುದನ್ನು ಕಲಿಯೋಣ. |
00:51 | ಅದಕ್ಕಾಗಿ ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಅನ್ನು ಆರಂಭಿಸೋಣ. |
00:57 | ಅದಕ್ಕಾಗಿ ನಾವು ಸ್ಕ್ರೀನ್ ನ (ಪರದೆಯ) ಕೆಳಗೆ ಎಡಭಾಗದಲ್ಲಿ Start ಬಟನ್ ಮೇಲೆ ಕ್ಲಿಕ್ ಮಾಡೋಣ. |
01:03 | All programs ಮೇಲೆ ಕ್ಲಿಕ್ ಮಾಡೋಣ. ಪುನಃ LibreOffice Suite ಮೇಲೆ ಕ್ಲಿಕ್ ಮಾಡೋಣ. ಮತ್ತು LibreOffice Base ಮೇಲೆ ಕ್ಲಿಕ್ ಮಾಡೋಣ. |
01:12 | ಏಕೆಂದರೆ ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ಈಗಾಗಲೇ ಲೈಬ್ರರಿ ಡೇಟಾ ಬೇಸ್ ಅನ್ನು ತಯಾರಿಸಿದ್ದೇವೆ. ಈಗ ಅದನ್ನು ಓಪನ್ ಮಾಡುವುದಷ್ಟೆ. |
01:21 | ಇದನ್ನು ಮಾಡಲು, 'open an existing database file' ಆಪ್ಷನ್ ಮೇಲೆ ಕ್ಲಿಕ್ ಮಾಡೋಣ. |
01:28 | 'Recently Used' ಡ್ರಾಪ್ ಡೌನ್ ಬಾಕ್ಸ್ ನಲ್ಲಿ ನಮ್ಮ ಲೈಬ್ರರಿ ಡೇಟಾ ಬೇಸ್ ಸ್ಪಷ್ಟವಾಗಿ ಕಾಣಿಸಬೇಕು (ಇರಬೇಕು). |
01:35 | ಹಾಗಾಗಿ, ಈಗ Finish ಬಟನ್ ಮೇಲೆ ಕ್ಲಿಕ್ ಮಾಡೋಣ. |
01:38 | ಇದು ನಿಮಗೆ ಕಾಣಿಸದಿದ್ದರೆ, ನಾವು ವಿಂಡೋಸ್ ಡೈರೆಕ್ಟರಿಯನ್ನು ಬ್ರೌಸ್ ಮಾಡಲು ಮಧ್ಯಭಾಗದಲ್ಲಿರುವ Open ಬಟನ್ ಮೇಲೆ ಕ್ಲಿಕ್ ಮಾಡಬಹುದು. ಅಲ್ಲಿ ಲೈಬ್ರರಿ ಡೇಟಾ ಬೇಸ್ ಸೇವ್ ಆಗಿದೆ. |
01:50 | ಅದು ಸಿಕ್ಕಿದ ಮೇಲೆ, filename ಮೇಲೆ ಕ್ಲಿಕ್ ಮಾಡೋಣ ಮತ್ತು Open ಬಟನ್ ಮೇಲೆ ಕ್ಲಿಕ್ ಮಾಡೋಣ. |
01:57 | ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಈಗಾಗಲೇ ಓಪನ್ (ತೆರೆದಿದ್ದರೆ) ಇದ್ದರೆ, ನಾವು ಇಲ್ಲಿಂದ ಲಿಬ್ರೆ ಡೇಟಾ ಬೇಸ್ ಅನ್ನು ಓಪನ್ ಮಾಡಬಹುದು (ತೆರೆಯಬಹುದು). |
02:07 | ಮೇಲ್ಭಾಗದಲ್ಲಿರುವ File menu ನ ಮೇಲೆ ಕ್ಲಿಕ್ ಮಾಡಿ, ಆಮೇಲೆ Open ಬಟನ್ ಮೇಲೆ ಕ್ಲಿಕ್ ಮಾಡುವುದರಿಂದ, |
02:14 | ನಾವು ವಿಂಡೋಸ್ ಡೈರೆಕ್ಟರಿಯನ್ನು ಬ್ರೌಸ್ ಮಾಡುತ್ತೇವೆ. ಅಲ್ಲಿ ಲೈಬ್ರರಿ ಡೇಟಾ ಬೇಸ್ ಫೈಲ್ ಸೇವ್ ಆಗಿದೆ. |
02:21 | ಫೈಲ್ Library.odb ಮೇಲೆ ಕ್ಲಿಕ್ ಮಾಡೋಣ. ಮತ್ತು ಕೆಳಭಾಗದಲ್ಲಿರುವ Open ಬಟನ್ ಮೇಲೆ ಕ್ಲಿಕ್ ಮಾಡೋಣ. |
02:31 | ಈಗ ನಾವು ಲೈಬ್ರರಿ ಡೇಟಾ ಬೇಸ್ ನ ಒಳಗೆ ಇದ್ದೇವೆ. |
02:35 | ಎಡಗಡೆ ಪೆನಲ್ ನಲ್ಲಿ ಡೇಟಾ ಬೇಸ್ ನ ಸೂಚಿಯಲ್ಲಿರುವ Tables ಐಕಾನ್ ಮೇಲೆ ಕ್ಲಿಕ್ ಮಾಡೋಣ. |
02:42 | ರೈಟ್ (ಬಲಭಾಗದ) ಪೆನಲ್ ನ ಟೇಬಲ್ಸ್ ಸೂಚಿಯಲ್ಲಿ ಬುಕ್ಸ್ ಟೇಬಲ್ ಕಾಣಿಸುತ್ತಿರುವುದನ್ನು ಗಮನಿಸಿ. |
02:48 | ಈಗ ನಾವು ಬುಕ್ಸ್ ಟೇಬಲ್ ಮೇಲೆ ರೈಟ್ ಕ್ಲಿಕ್ ಮಾಡೋಣ. |
02:53 | ನೀವು ಇಲ್ಲಿಂದ ವಿವಿಧ ರೀತಿಯ ಆಪ್ಷನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಗಮನಿಸಿ. |
02:58 | ಈಗ ಈ ಟೇಬಲ್ ನಲ್ಲಿ ಡೇಟಾ ಅನ್ನು ಸೇರಿಸಲು 'open' ಬಟನ್ ಮೇಲೆ ಕ್ಲಿಕ್ ಮಾಡೋಣ. |
03:04 | ವಿಕಲ್ಪವಾಗಿ, ನಾವು ಇದನ್ನು ಓಪನ್ ಮಾಡಲು table name ನ ಮೇಲೆ ಡಬಲ್ ಕ್ಲಿಕ್ ಅನ್ನು ಕೂಡ ಮಾಡಬಹುದು. |
03:10 | 'Books – Library – LibreOffice Base: Table Data View' ಹೆಸರಿನ ಶೀರ್ಷಕದೊಂದಿಗೆ ಒಂದು ಹೊಸ ವಿಂಡೋ ಓಪನ್ ಆಗುತ್ತದೆ (ತೆರೆಯುತ್ತದೆ). |
03:20 | ಈಗ ನಾವು ನೇರವಾಗಿ ಪ್ರತಿಯೊಂದು ಸೆಲ್ ನಲ್ಲಿಯೂ ವೆಲ್ಯೂಸ್ ಅನ್ನು ಟೈಪ್ ಮಾಡಿ ಬುಕ್ಸ್ ಟೇಬಲ್ ನಲ್ಲಿ ಡೇಟಾ ಎಂಟರ್ ಅನ್ನು ಆರಂಭಿಸಬಹುದು. |
03:31 | Bookid ಕಾಲಂ ಗಳು 'AutoField' ಆಗಿರುವುದನ್ನು ಗಮನಿಸಿ. |
03:37 | ಅಂದರೆ, ಬೇಸ್, ನಾವು ಇನ್ಸರ್ಟ್ ಮಾಡಿದ ಡೇಟಾದ ಪ್ರತಿಯೊಂದು ರೋ ಗೆ ಆರೋಹಣ ಸಂಖ್ಯೆಯನ್ನು ಸಹಜವಾಗಿಯೇ ನಿಯೋಜಿಸುತ್ತದೆ. |
03:48 | ಈಗ ಪರದೆಯ (screen) ಕೆಳಗೆ ತೋರಿಸುವ ಹಾಗೆ ಒಂದೊಂದೇ ರೋ ನ ಸೆಲ್ ನಲ್ಲಿ ಡೇಟಾ ಅನ್ನು ಇನ್ ಪುಟ್ ಮಾಡೋಣ. |
04:22 | ಹಾಗಾಗಿ, ಇಲ್ಲಿ ನಮ್ಮ ಹತ್ತಿರ ಟೇಬಲ್ ಬುಕ್ಸ್ ನಲ್ಲಿ ಸ್ಯಾಂಪಲ್ ಡೇಟಾದ 5 ರೋ (rows) ಗಳಿವೆ. |
04:29 | ಮೇಲ್ಭಾಗದಲ್ಲಿರುವ File menu ವಿನ ಮೇಲೆ ಕ್ಲಿಕ್ ಮಾಡಿ, ನಂತರ Close ಆಯ್ಕೆ ಮಾಡಿ, ವಿಂಡೋ ಅನ್ನು ಕ್ಲೋಸ್ ಮಾಡೋಣ. |
04:39 | ಇಲ್ಲಿ ನಿಮಗೆ ಒಂದು ಅಸೈನ್ ಮೆಂಟ್ ಇದೆ. |
04:42 | ಪ್ರತಿಯೊಂದು ಸದಸ್ಯನ ಮಾಹಿತಿ ಸಂಗ್ರಹವಾಗಿರುವಂತಹ ಒಂದು ಮೆಂಬರ್ಸ್ ಟೇಬಲ್ ಅನ್ನು ತಯಾರಿಸಿ. ಉದಾಹರಣೆಗೆ, ಸದಸ್ಯನ ಹೆಸರು ಮತ್ತು ಫೋನ್ ನಂಬರ್. |
04:53 | ಕೆಳಗೆ ನಮೂದಿಸಿದ ಮೂರು ಫೀಲ್ಡ್ ಗಳನ್ನು ಸೇರಿಸಿ. |
04:57 | Member Id ಯನ್ನು Field type Integer ನೊಂದಿಗೆ ಸೇರಿಸಿ ಹಾಗೂ ಇದನ್ನು ಪ್ರೈಮರಿ ಕೀ ಅನ್ನಾಗಿ ಮಾಡಿ. |
05:06 | Name ಅನ್ನು, Fieldtype Text ನೊಂದಿಗೆ |
05:10 | Phone ಅನ್ನು, Fieldtype Text ನೊಂದಿಗೆ ಸೇರಿಸಿ. |
05:15 | ಸರಿ, ನೀವು ಹೀಗೆ ಮಾಡಿದಾಗ, ಮೆಂಬರ್ಸ್ ಟೇಬಲ್ ಹೀಗೆ ಕಾಣಿಸುತ್ತದೆ. |
05:22 | ಈ ವಿಂಡೋ ಅನ್ನು ಕ್ಲೋಸ್ ಮಾಡೋಣ. |
05:25 | ಈಗ ನಾವು ಬುಕ್ಸ್ ಟೇಬಲ್ ಗಾಗಿ ಹೇಗೆ ಮಾಡಿದ್ದೇವೆಯೋ ಹಾಗೆ ಪರದೆಯ ಮೇಲೆ ಗೋಚರಿಸಿದ್ದನ್ನು ಮೆಂಬರ್ಸ್ ಟೇಬಲ್ ನಲ್ಲಿ 4 ಸ್ಯಾಂಪಲ್ ಮೆಂಬರ್ಸ್ ಅನ್ನು ಸೇರಿಸೋಣ. |
05:46 | ಅದನ್ನು ಮಾಡಿದ ಮೇಲೆ, ವಿಂಡೋ ಅನ್ನು ಕ್ಲೋಸ್ ಮಾಡೋಣ. |
05:50 | ಈಗ, ಮರಳಿ ಮುಖ್ಯ ವಿಂಡೋ ಗೆ ಹೋಗೋಣ ಮತ್ತು ಪುನಃ ಟೇಬಲ್ಸ್ ಐಕಾನ್ ಮೇಲೆ ಕ್ಲಿಕ್ ಮಾಡೋಣ. |
05:57 | ಮತ್ತು ಮೂರನೆಯ ಟೇಬಲ್: Books Issued ಅನ್ನು ತಯಾರಿಸೋಣ. |
06:04 | ಅದು ತಯಾರಾದ ಮೇಲೆ, Books Issued ಟೇಬಲ್ ನಲ್ಲಿ ಕೆಳಗೆ ನಮೂದಿಸಿರುವ ಫೀಲ್ಡ್ ಗಳು ಇರಬೇಕು: |
06:09 | Issue Id, Field type Integer. ಇದು ಪ್ರೈಮರಿ ಕೀ ಆಗಿರುತ್ತದೆ, |
06:16 | Book Id,Field type,Integer |
06:20 | Member Id ,Field type,Integer |
06:24 | Issue Date,Field type,Date |
06:28 | Return Date,Field type,Date |
06:31 | Actual Return Date,Field type,Date |
06:35 | ಮತ್ತು Checked In,Field type Yes/No Boolean |
06:42 | ಸರಿ, ನಾವು ಈಗ Books Issued ಟೇಬಲ್ ಅನ್ನು ತಯಾರಿಸಿದ್ದೇವೆ. |
06:47 | ಮತ್ತು ಈಗ ಇದರಲ್ಲಿ ಕೆಳಗಿರುವ ಸ್ಯಾಂಪಲ್ ಡೇಟಾ ಅನ್ನು ಸೇರಿಸೋಣ. ಅದನ್ನು ನೀವು ಪರದೆಯ ಮೇಲೆ ನೋಡಬಹುದು. |
06:56 | ಸದ್ಯ ಇದು ಪೂರ್ಣವಾದ ಅರ್ಥವನ್ನು ನೀಡದಿದ್ದರೂ, ಏನು ನಡೆಯುತ್ತಿದೆಯೆಂದು ನಮಗೆ ತಕ್ಷಣವೇ ತಿಳಿಯುತ್ತದೆ. |
07:17 | ಈಗ, ನಮ್ಮ ಹತ್ತಿರ ಸ್ಯಾಂಪಲ್ ಡೇಟಾದ ಜೊತೆಗೆ ನಮ್ಮ ಲೈಬ್ರರಿಯ ಡೇಟಾಬೇಸ್ ನಲ್ಲಿ ಮೂರು ಟೇಬಲ್ ಗಳೂ ಇವೆ. |
07:25 | ಈಗ ಡೇಟಾಬೇಸ್ ನಲ್ಲಿ ರಿಲೇಷನ್-ಶಿಪ್ ಪರಿಭಾಷೆ ಮಾಡುವುದನ್ನು ನಾವು ಕಲಿಯೋಣ. |
07:31 | ಹಾಗಾಗಿ, ನಾವು ಮಾಹಿತಿಯ ಮೂರು ವಿವಿಧ ಸೆಟ್ ಗಳನ್ನು ಸಂಗ್ರಹಿಸಲು ಮೂರು ಟೇಬಲ್ ಗಳನ್ನು ತಯಾರಿಸಿದ್ದೇವೆ. |
07:38 | Books, Members ಮತ್ತು Issue of Books to Members. |
07:44 | ಈಗ ನಾವು ಈ ಮೂರು ಟೇಬಲ್ ಗಳಲ್ಲಿ ಪ್ರತ್ಯೇಕ ಪುಸ್ತಕ, ಪ್ರತ್ಯೇಕ ಮೆಂಬರ್ ಮತ್ತು ಪ್ರತ್ಯೇಕ ಬುಕ್ ಇಶ್ಯೂ ಅನ್ನು ವಿಶಿಷ್ಟವಾಗಿ ಗುರುತಿಸಲು ಕಾಲಂಗಳನ್ನು ನಿರ್ಮಿಸೋಣ. |
07:57 | ಅವು ಪ್ರೈಮರಿ ಕೀಗಳಾಗಿವೆ. |
08:00 | ಪ್ರೈಮರಿ ಕೀನ ವಿವಿಧ ಅನುಕೂಲಗಳಲ್ಲಿ ಇದೂ ಒಂದು. ಏನೆಂದರೆ, ಇದು ಟೇಬಲ್ ಗಳ ನಡುವೆ ಇರುವ ರಿಲೇಷನ್-ಶಿಪ್ ಅನ್ನು ಸ್ಥಾಪಿಸಲು ಸಹಕರಿಸುತ್ತದೆ. |
08:10 | ಆದರೆ, ನಮಗೆ ರಿಲೇಷನ್-ಶಿಪ್ ಏಕೆ ಬೇಕು? |
08:13 | Books Issued ಟೇಬಲ್ ಅನ್ನು ನೋಡೋಣ. ಇಲ್ಲಿ ನಾವು Book Id ಮತ್ತು Member Id ಫೀಲ್ಡ್ಸ್ ಅನ್ನು ಕಾಣುತ್ತಿದ್ದೇವೆ. |
08:23 | ಅವು Books Issued ಟೇಬಲ್ ನಲ್ಲಿ ಯಾವ ವೆಲ್ಯೂ ಅನ್ನು ಬೇಕಾದರೂ ಇಡಬಹುದು. |
08:28 | ಆದರೆ, ಆ ವೆಲ್ಯೂಗಳು Books ಮತ್ತು Members ಟೇಬಲ್ ಗಳಲ್ಲಿ ಇರುವ ವೆಲ್ಯೂಗಳೊಂದಿಗೆ ಕ್ರಮವಾಗಿ ವ್ಯವಹರಿಸಬೇಕಾಗುತ್ತದೆ. |
08:38 | ಬುಕ್ಸ್ ಟೇಬಲ್ಸ್ ನಲ್ಲಿ Macbeth ನ Book Id 3 ಆಗಿದ್ದರೆ, |
08:45 | Books Issued ಟೇಬಲ್ಸ್ ನ Book Id 3 ಅನ್ನು ಬಳಸಿ ನಾವು ಈಗಲೂ ಸಹ ಅದೇ ಪುಸ್ತಕವನ್ನು ಉಲ್ಲೇಖಿಸಬಹುದು. |
08:56 | ಆದ್ದರಿಂದ, ಈ ಎರಡು ಟೇಬಲ್ ಗಳನ್ನು ಸ್ಪಷ್ಟವಾಗಿ ಸಂಯೋಜಿಸಲು ನಮಗೆ ಈಗಲೂ ಸಹ ಯಾವುದಾದರೂ ರೀತಿಯಲ್ಲಿ ಅವನ್ನು ಲಿಂಕ್ ಮಾಡುವ ಅವಶ್ಯಕತೆ ಇದೆ. |
09:05 | ಮತ್ತು ಉದಾಹರಣೆಗೆ, 2011ರ ಜೂನ್ 2 ನೇ ತಾರೀಖು ರವಿಕುಮಾರ್ ಗೆ 'Macbeth' ಅನ್ನು ಇಶ್ಯೂ ಮಾಡಲಾಗಿತ್ತು ಎಂಬುದನ್ನು ನೀವು ಹೇಗೆ ಪ್ರಮಾಣಿಸುತ್ತೀರಿ ? |
09:16 | ಅಥವಾ ಪುಸ್ತಕವು ಲೈಬ್ರರಿ ಸದಸ್ಯರಿಗೆ ಮಾತ್ರ ಜಾರಿ ಮಾಡಲ್ಪಟ್ಟಿದೆ, ಬೇರೆ ಯಾರಿಗೂ ಇಲ್ಲ ಎಂಬುದನ್ನು ನೀವು ಹೇಗೆ ನಿಶ್ಚಯಿಸುತ್ತೀರಿ ? |
09:25 | ರಿಲೇಷನ್-ಶಿಪ್ ಅನ್ನು ಸೆಟ್ ಅಪ್ ಮಾಡಿ ಇವೆಲ್ಲವನ್ನೂ ಸಾಧಿಸಬಹುದು. ಅದು ಡೇಟಾ ಅನ್ನು ಇಂಟರ್ ಲಿಂಕ್ ಮಾಡಲು ಸಹಕರಿಸುತ್ತದೆ. |
09:34 | ನಾವು ಸರಿಯಾದ ಫೀಲ್ಡ್ ಗಳನ್ನು ಲಿಂಕ್ ಮಾಡಿ, ಬುಕ್ಸ್ ಟೇಬಲ್ ಮತ್ತು ಮೆಂಬರ್ಸ್ ಟೇಬಲ್ ನಿಂದ ವೆಲ್ಯೂಗಳನ್ನು ಬಳಸಲು ಬೇಸ್ ಅನ್ನು ಫೋರ್ಸ್ ಮಾಡುವ ಅವಶ್ಯಕತೆ ಇದೆ. |
09:46 | ಅದು ಹೇಗೆಂದು ನೋಡೋಣ. |
09:48 | ಲಿಬ್ರೆ ಆಫೀಸ್ ಬೇಸ್ ನ ಮುಖ್ಯ ವಿಂಡೋಸ್ ನಲ್ಲಿ Tools ನ ಮೇಲೆ ಕ್ಲಿಕ್ ಮಾಡೋಣ ನಂತರ Relationships ನ ಮೇಲೆ ಕ್ಲಿಕ್ ಮಾಡೋಣ. |
09:58 | ಇದು ಒಂದು ಸಣ್ಣ ಪಾಪಪ್ ವಿಂಡೋ ಅನ್ನು ಓಪನ್ ಮಾಡುತ್ತದೆ, |
10:03 | ಇಲ್ಲಿ ನಾವು ಅತ್ಯಂತ ಮೇಲ್ಭಾಗದಲ್ಲಿರುವ ಟೇಬಲ್ ಅನ್ನು ಆಯ್ಕೆ ಮಾಡೋಣ ಮತ್ತು add ಬಟನ್ ಮೇಲೆ ಕ್ಲಿಕ್ ಮಾಡೋಣ ಮತ್ತು ಇನ್ನೆರಡು ಟೇಬಲ್ ಗಳಿಗೂ ಕೂಡ ಹಾಗೆಯೇ ಮಾಡೋಣ. |
10:15 | ಪಾಪಪ್ ವಿಂಡೋ ಅನ್ನು ಕ್ಲೋಸ್ ಮಾಡೋಣ. |
10:18 | ಈಗ, ನಾವು ಒಂದು ಲೈನ್ ನಲ್ಲಿ ಮೂರು ಟೇಬಲ್ ಗಳಾದ Books, Books Issued ಮತ್ತು Members ಅನ್ನು ನೋಡುತ್ತೇವೆ. |
10:26 | ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಮತ್ತು ಡ್ರಾಪ್ ಮಾಡಿ ಟೇಬಲ್ ಗಳಲ್ಲಿ ಸ್ಪೇಸ್ (ಜಾಗ) ಅನ್ನು ಹೆಚ್ಚಿಸೋಣ. |
10:35 | ಈಗ, ಬುಕ್ಸ್ ಟೇಬಲ್ ನಲ್ಲಿ Book Id ಮೇಲೆ ಕ್ಲಿಕ್ ಮಾಡೋಣ ಮತ್ತು ಅದನ್ನು Books Issued ಟೇಬಲ್ ನಲ್ಲಿರುವ Book Id ಯ ಮೇಲೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡೋಣ. |
10:48 | ಈ ಎರಡು ಫೀಲ್ಡ್ ನೇಮ್ ಗಳನ್ನು ಒಂದು ಲೈನ್ ಸಂಯೋಜಿಸುತ್ತಿರುವುದನ್ನು ಗಮನಿಸಿ. ಆದ್ದರಿಂದ, ಇಲ್ಲಿ ನಾವು ಒಂದು ರಿಲೇಷನ್ ಶಿಪ್ ಅನ್ನು ಸೆಟಪ್ ಮಾಡಿದ್ದೇವೆ ! |
10:57 | MemberId ಗಾಗಿ ಇದನ್ನು ಪುನಃ ಮಾಡೋಣ. |
11:02 | ಮೆಂಬರ್ಸ್ ಟೇಬಲ್ ನಲ್ಲಿ Member Id ಯ ಮೇಲೆ ಕ್ಲಿಕ್ ಮಾಡೋಣ ಮತ್ತು Books Issued ಟೇಬಲ್ ನಲ್ಲಿ ಅದನ್ನುಡ್ರ್ಯಾಗ್ ಮಾಡಿ ಡ್ರಾಪ್ ಮಾಡೋಣ. |
11:11 | ಈಗ ನಾವು ಎರಡು ರಿಲೇಷನ್ ಶಿಪ್ಸ್ ಅನ್ನು ತಯಾರಿಸಿರುವುದನ್ನು ನೀವು ನೋಡಬಹುದು. |
11:16 | ಇದೇ ರಿಲೇಷನ್ ಶಿಪ್ಸ್ ಅನ್ನು ಸಂಸ್ಥಾಪಿಸುವ ರೀತಿ. |
11:20 | ಮತ್ತು ಇದಕ್ಕಾಗಿ ಇಂಟರ್ ಲಿಂಕ್ ಅರ್ಥಪೂರ್ಣ ಡೇಟಾ ಎನ್ನುವುದು ವಿವಿಧ ರೀತಿಯ ಟೇಬಲ್ ಗಳ ರಿಲೇಶನಲ್ ಡೇಟಾಬೇಸ್ ನಲ್ಲಿ ಸಂಗ್ರಹಿಸಲ್ಪಟ್ಟಿದೆ. |
11:30 | ಈಗ ನಾವು ಲಿಬ್ರೆ ಆಫೀಸ್ ನ ಟೇಬಲ್ಸ್ ಮತ್ತು ರಿಲೇಷನ್ ಶಿಪ್ಸ್ ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
11:36 | ಸಂಕ್ಷೇಪವಾಗಿ, ನಾವು ಟೇಬಲ್ ನಲ್ಲಿ ಡೇಟಾ ಅನ್ನು ಹೇಗೆ ಸೇರಿಸುವುದು ಮತ್ತು ರಿಲೇಶನ್ ಶಿಪ್ ನ ಪರಿಭಾಷೆ ಮತ್ತು ಅದನ್ನು ತಯಾರಿಸುವುದನ್ನು ಕಲಿತಿದ್ದೇವೆ. |
11:45 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
11:57 | ಈ ಪ್ರೊಜೆಕ್ಟ್ http://spoken-tutorial.org. ಮೂಲಕ ನಡೆಸಲಾಗಿದೆ. |
12:03 | ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ. |
12:08 | ಈ ಟ್ಯುಟೋರಿಯಲ್ ನ ಅನುವಾದಕಿ ಡಾ. ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |