C-and-Cpp/C2/Relational-Operators/Kannada
From Script | Spoken-Tutorial
Revision as of 17:04, 7 November 2014 by Vasudeva ahitanal (Talk | contribs)
Time | Narration |
---|---|
00:01 | c ಮತ್ತು c++ ನಲ್ಲಿ ರಿಲೇಶನಲ್ ಆಪರೇಟರ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು : |
00:09 | ರಿಲೇಶನಲ್ ಆಪರೇಟರ್ ಗಳಾದ |
00:11 | ಲೆಸ್ ದ್ಯಾನ್, ಉದಾಹರಣೆಗೆ a ಲೆಸ್ ದ್ಯಾನ್ b |
00:14 | ಗ್ರೇಟರ್ ದ್ಯಾನ್, ಉದಾಹರಣೆಗೆ a ಗ್ರೇಟರ್ ದ್ಯಾನ್ b |
00:17 | ಲೆಸ್ ದ್ಯಾನ್ ಆರ್ ಈಕ್ವಲ್ ಟು, ಉದಾಹರಣೆಗೆ a ಲೆಸ್ ದ್ಯಾನ್ ಆರ್ ಈಕ್ವಲ್ ಟು b |
00:22 | ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು, ಉದಾಹರಣೆಗೆ a ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು b |
00:27 | ಈಕ್ವಲ್ ಟು ಉದಾಹರಣೆಗೆ aಈಕ್ವಲ್ ಟು b |
00:30 | ನಾಟ್ ಈಕ್ವಲ್ ಟು, ಉದಾಹರಣೆಗೆ a ನಾಟ್ ಈಕ್ವಲ್ ಟು b |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:50 | ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:53 | ರಿಲೇಶನಲ್ ಆಪರೇಟರ್ ಗಳನ್ನು, ಇಂಟಿಜರ್ ಮತ್ತು ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಗಳನ್ನು ಹೋಲಿಸಲು ಬಳಸುತ್ತೇವೆ. |
00:57 | ರಿಲೇಶನಲ್ ಆಪರೇಟರ್ ಗಳನ್ನು ಉಪಯೋಗಿಸಿದ ಎಕ್ಸ್ಪ್ರೆಶನ್ ಗಳು, ಫಾಲ್ಸ್ ಇದ್ದಲ್ಲಿ ಸೊನ್ನೆಯನ್ನು, ಮತ್ತು ಟ್ರು ಇದ್ದಲ್ಲಿ ಒಂದನ್ನು ಕೊಡುತ್ತದೆ. |
01:04 | ಈಗ ನಾನು ರಿಲೇಶನಲ್ ಆಪರೇಟರ್ ಗಳನ್ನು c ಪ್ರೊಗ್ರಾಮ್ ನ ಸಹಾಯದಿಂದ ವಿವರಿಸುತ್ತೇನೆ. |
01:09 | ನಾನೀಗಾಗಲೇ ಪ್ರೊಗ್ರಮ್ ಅನ್ನು ಬರೆದಿದ್ದೇನೆ. |
01:11 | ಹಾಗಾಗಿ, ನಾನು ಎಡಿಟರ್ ಅನ್ನು ಒಪನ್ ಮಾಡಿ ಕೋಡ್ ಅನ್ನು ವಿವರಿಸುತ್ತೇನೆ. |
01:15 | ಮೊದಲು ಎರಡು ವೇರ್ರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ, a ಮತ್ತು b. |
01:20 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಯೂಸರ್ ಗೆ a ಮತ್ತು b ಗಳ ಮೌಲ್ಯವನ್ನು ಕೊಡಲು ತಿಳಿಸುತ್ತದೆ. |
01:26 | ಈ ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್, a ಮತ್ತು b ಗಳ ಮೌಲ್ಯವನ್ನು ತೆಗೆದುಕೊಳ್ಳುತ್ತದೆ. |
01:32 | ಈಗ ಗ್ರೇಟರ್ ದ್ಯಾನ್ ಆಪರೇಟರ್ ಅನ್ನು ಉಪಯೋಗಿಸೋಣ. |
01:35 | ಈ ಆಪರೇಟರ್, ತನ್ನ ಎರಡೂ ಬದಿಯ ಆಪರೇಟರ್ ಗಳನ್ನು ಹೋಲಿಸುತ್ತದೆ. |
01:38 | a ಯು, b ಗಿಂತ ದೊಡ್ಡದಿದ್ದರೆ, ಇದು ಟ್ರು ಎಂದು ಕೊಡುತ್ತದೆ. |
01:43 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ. |
01:47 | ಮೇಲಿನ ಕಂಡೀಶನ್ ಫಾಲ್ಸ್ ಇದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ. |
01:50 | ನಂತರ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ. |
01:53 | ಈಗ ಲೆಸ್ ದ್ಯಾನ್ ಆಪರೇಟರ್ ಬಗೆಗೆ ತಿಳಿಯೋಣ. |
01:56 | ಇದೂ ಕೂಡ ಆಪರಂಡ್ ಗಳನ್ನು ಹೋಲಿಸುತ್ತದೆ. |
01:57 | a ಯು, b ಗಿಂತ ಚಿಕ್ಕದಿದ್ದರೆ, ಇದು ಟ್ರು ಎಂದು ಕೊಡುತ್ತದೆ. |
02:02 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ. |
02:06 | ಇಲ್ಲದಿದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ. |
02:09 | ಕೋಡ್ ಅನ್ನು ಇಲ್ಲಿಯವರೆಗೆ ಎಕ್ಸಿಕ್ಯೂಟ್ ಮಾಡೋಣ. |
02:13 | ಕೆಳಗಿನವುಗಳನ್ನು ಮೊದಲು ಕಮೆಂಟ್ ಮಾಡಿ. |
02:16 | ಸ್ಲ್ಯಾಶ್ ಅಸ್ಟರಿಕ್ಸ್ , ಅಸ್ಟರಿಕ್ಸ್ ಸ್ಟಾರ್ ಎಂದು ಟೈಪ್ ಮಾಡಿ. |
02:24 | Save ಒತ್ತಿ. |
02:26 | ನಾನು ನನ್ನ ಫೈಲ್ ಅನ್ನು ರೆಲೇಶನಲ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ. |
02:29 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:35 | ಕಂಪೈಲ್ ಮಾಡಲು, gcc ಸ್ಪೇಸ್ ರಿಲೇಶನಲ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಆರ್ ಇ ಎಲ್ ಎಂದು ಟೈಪ್ ಮಾಡಿ. |
02:49 | Enter ಕೀಯನ್ನು ಒತ್ತಿ. |
02:51 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಆರ್ ಇ ಎಲ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:56 | ನಾನು, a ಗೆ ಎಂಟು ಎಂದೂ, b ಗೆ ಮೂರು ಎಂದು ಕೊಡುತ್ತೇನೆ. |
03:01 | ಏಟ್ (8) ಈಸ್ ಗ್ರೇಟರ್ ದ್ಯಾನ್ ಥ್ರೀ ಎಂದು ಔಟ್ ಪುಟ್ ತೋರಿಸುತ್ತದೆ. |
03:07 | ನೀವು ಇದೇ ಕೋಡ್ ಅನ್ನು, a ಮತ್ತು b ಗೆ ಬೇರೆ ಮೌಲ್ಯಗಳನ್ನು ಕೊಟ್ಟು ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಬಹುದು. |
03:11 | ಕೋಡ್ ಗೆ ಹಿಂದಿರುಗಿ. |
03:14 | ಇಲ್ಲಿಂದ ಕಮೆಂಟ್ ಅನ್ನು ಡಿಲೀಟ್ ಮಾಡಿ, ಮತ್ತು ಇಲ್ಲಿ ಟೈಪ್ ಮಾಡಿ. |
03:24 | ಈಗ ನಾವು ಲೆಸ್ ದ್ಯಾನ್ ಆರ್ ಈಕ್ವಲ್ ಟು ಆಪರೇಟರ್ ಬಗೆಗೆ ತಿಳಿಯೋಣ. |
03:28 | ಈ ಆಪರೇಟರ್, ತನ್ನ ಎರಡೂ ಬದಿಯ ಆಪರೇಟರ್ ಗಳನ್ನು ಹೋಲಿಸುತ್ತದೆ. |
03:33 | a ಯು, b ಗಿಂತ ಚಿಕ್ಕದು, ಅಥವಾ ಸಮವಾಗಿದ್ದರೆ, ಇದು ಟ್ರು ಎಂದು ಕೊಡುತ್ತದೆ. |
03:38 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್, ಮೇಲಿನ ಕಂಡೀಶನ್ ಟ್ರು ಇದ್ದರೆ ಮಾತ್ರ ಎಕ್ಸಿಕ್ಯೂಟ್ ಆಗುತ್ತದೆ. |
03:42 | ಮೇಲಿನ ಕಂಡೀಶನ್ ಫಾಲ್ಸ್ ಇದ್ದರೆ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ. |
03:45 | ನಂತರ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ. |
03:49 | ಮುಂದಿನ ಆಪರೇಟರ್, ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು |
03:52 | ಇದು, a ಮತ್ತು b ಗಳನ್ನು ಹೋಲಿಸಿ, a ಯು b ಗಿಂತ ದೊಡ್ಡದು ಅಥವಾ ಸಮವಾಗಿದ್ದರೆ ಟ್ರು ಎಂದು ಕೊಡುವುದು. |
04:00 | ಕಂಡೀಶನ್ ಟ್ರು ಆಗಿದ್ದರೆ ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
04:05 | ಈಗ, ಇಲ್ಲಿಯವರೆಗೆ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:07 | Save ಅನ್ನು ಒತ್ತಿ. |
04:09 | ಟರ್ಮಿನಲ್ ಗೆ ಹಿಂದಿರುಗಿ. |
04:12 | ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ತ್ಯೂಟ್ ಮಾಡಿ. |
04:17 | ನಾನು, a ಗೆ ಎಂಟು ಮತ್ತು b ಗೆ ಮೂರು ಎಂದು ಕೊಡುತ್ತೇನೆ. |
04:22 | ಏಟ್ ಈಸ್ ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು ಥ್ರೀ ಎಂದು ಔಟ್ ಪುಟ್ ತೋರಿಸುತ್ತದೆ. |
04:30 | ಉಳಿದ ಕೋಡ್ ಗೆ ಹಿಂದಿರುಗೋಣ. |
04:33 | ಇಲ್ಲಿ ಮತ್ತು ಇಲ್ಲಿಂದ ಮಲ್ಟಿಲೈನ್ ಕಮೆಂಟ್ ಅನ್ನು ಡಿಲೀಟ್ ಮಾಡಿ. |
04:43 | ಈಗ ನಾವು ಈಕ್ವಲ್ ಟು ಆಪರೇಟರ್ ಬಗೆಗೆ ತಿಳಿಯೋಣ. |
04:47 | ಇದನ್ನು ಸೂಚಿಸಲು, ಎರಡು ಈಕ್ವಲ್ ಸೈನ್ ಬರೆಯುತ್ತಾರೆ. |
04:50 | ಎರಡೂ ಆಪರಂಡ್ ಗಳೂ ಸಮವಾಗಿದ್ದಲ್ಲಿ, ಈ ಆಪರೇಟರ್ ಟ್ರು ಎಂದು ಕೊಡುತ್ತದೆ. |
04:57 | a ಮತ್ತು b ಎರಡೂ ಸಮವಾಗಿದ್ದರೆ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
05:00 | ಇಲದಿದ್ದರೆ, ಕಂಟ್ರೋಲ್ ಮುಂದಿನ ಸ್ಟೇಟ್ಮೆಂಟ್ ಗೆ ಹೋಗುತ್ತದೆ. |
05:06 | ಹೀಗೆಯೇ, ನಾಟ್ ಈಕ್ವಲ್ ಟು ಆಪರೇಟರ್ ಕೂಡಾ ಇದೆ. |
05:08 | ಎರಡೂ ಆಪರಂಡ್ ಗಳೂ ಸಮವಾಗಿಲ್ಲದಿದ್ದಲ್ಲಿ, ಈ ಆಪರೇಟರ್, ಟ್ರು ಎಂದು ಕೊಡುತ್ತದೆ. |
05:15 | a ಯು b ಗೆ ಸಮವಾಗಿಲ್ಲದಿದ್ದಲ್ಲಿ, ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
05:20 | ಪ್ರೊಗ್ರಾಮ್ ನ ಅಂತ್ಯಕ್ಕೆ ಬರೋಣ. ರಿಟರ್ನ್ ಝೀರೋ ಎಂದು ಟೈಪ್ ಮಾಡಿ. |
05:24 | save ಒತ್ತಿ. |
05:26 | ಟರ್ಮಿನಲ್ ಗೆ ಹಿಂತಿರುಗಿ. |
05:28 | ಮೊದಲಿನಂತೆ ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡಿ. |
05:32 | aಗೆ ಎಂಟು ಮತ್ತು b ಗೆ ಮೂರು ಎಂದು ಮೌಲ್ಯಗಳನ್ನು ಕೊಡಿ. |
05:38 | ಔಟ್ ಪುಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ. |
05:40 | ಏಟ್ ಈಸ್ ನಾಟ್ ಈಕ್ವಲ್ ಟು ಥ್ರೀ. |
05:44 | ಇಲ್ಲಿಯವರೆಗೆ ರಿಲೇಶನಲ್ ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡಿದೆವು. |
05:48 | ಈ ಕೋಡ್ ಅನ್ನು ಬೇರೆ ಬೇರೆ ಸಂಖ್ಯೆಗಳನ್ನು ಕೊಟ್ಟು ಎಕ್ಸಿಕ್ಯೂಟ್ ಮಾಡಿ ಪ್ರಯತ್ನಿಸಿ. |
05:51 | ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಬರೆಯುವುದು ಸುಲಭ. |
05:56 | ಸಿಂಟ್ಯಾಕ್ಸ್ ನಲ್ಲಿ ಕೆಲವು ವ್ಯತ್ಯಾಸಗಳಿವೆ. |
05:59 | ನಾನೀಗಾಗಲೇ, c++ ನಲ್ಲಿ ಕೋಡ್ ಅನ್ನು ಬರೆದ್ದಿದ್ದೇನೆ. |
06:04 | ರಿಲೇಶನಲ್ ಆಪರೇಟರ್ಸ್ ಇನ್ c ಎಂಬ ಪ್ರೊಗ್ರಾಮ್ ಗೆ ಕೋಡ್ ಇಲ್ಲಿದೆ. |
06:08 | ಹೆಡರ್ ನಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು, |
06:12 | ಮತ್ತು, ಇಲ್ಲಿ ಯೂಸಿಂಗ್ ಸ್ಟೇಟ್ಮೆಂಟ್ ಕೂಡಾ ಇದೆ. |
06:15 | c++ನಲ್ಲಿ, ಸಿ ಔಟ್ ಎಂಬುದು ಔಟ್ ಪುಟ್ ಸ್ಟೇಟ್ಮೆಂಟ್ ಆಗಿದೆ, |
06:19 | ಮತ್ತು, ಸಿ ಇನ್ ಎಂಬುದು c++ನ ಇನ್ಪುಟ್ ಸ್ಟೇಟ್ಮೆಂಟ್ ಆಗಿದೆ. |
06:22 | ಹಾಗಾಗಿ, ಈ ವ್ಯತ್ಯಾಸಗಳನ್ನು ಹೊರತು ಪಡಿಸಿ, ಎರಡೂ ಕೋಡ್ ಗಳು ಒಂದೇತೆರನಾಗಿವೆ. |
06:26 | Save ಅನ್ನು ಒತ್ತಿ. |
06:28 | ಫೈಲ್ ಅನ್ನು ಡಾಟ್ ಸಿಪಿಪಿ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
06:32 | ನಾನು, ನನ್ನ ಫೈಲ್ ಅನ್ನು ರಿಲೇಶನಲ್ ಡಾಟ್ ಸಿಪಿಪಿ ಎಂದು ಸೇವ್ ಮಾಡಿದ್ದೇನೆ. |
06:37 | ಕೋಡ್ ಅನ್ನು ಕಂಪೈಲ್ ಮಾಡೋಣ. |
06:39 | ಟರ್ಮಿನಲ್ ಅನ್ನು ಒಪನ್ ಮಾಡಿ, g++ ರಿಲೇಶನಲ್ ಡಾಟ್ ಸಿಪಿಪಿ ಸ್ಪೇಶ್ ಮೈನಸ್ ಒ ಸ್ಪೇಸ್ ಆರ್ ಇ ಎಲ್ ಒನ್ ಎಂದು ಟೈಪ್ ಮಾಡಿ. |
06:50 | ಎಕ್ಸೆಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಆರ್ ಇ ಎಲ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
06:56 | ನಾನು, a ಗೆ ಎಂಟು ಎಂದೂ, b ಗೆ ಮೂರು ಎಂದೂ ಮೌಲ್ಯಗಳನ್ನು ಕೊಡುತ್ತೇನೆ. |
07:00 | ಔಟ್ ಪುಟ್ ತೋರಿಸುತ್ತದೆ. |
07:02 | ಔಟ್ ಪುಟ್ c ಪ್ರೊಗ್ರಾಮ್ ನ ಔಟ್ ಪುಟ್ ನಂತೆಯೇ ಇರುವುದನ್ನು ನೋಡಬಹುದು. |
07:07 | ಈಗ, ಸಾಮಾನ್ಯವಾಗಿ ನಮಗೆ ಬರುವ ಎರರ್ ಅನ್ನು ನೋಡೋಣ. |
07:10 | ಪ್ರೊಗ್ರಾಮ್ ಗೆ ಹಿಂತಿರುಗಿ. |
07:13 | ಇಲ್ಲಿ, ಎರಡು ಈಕ್ವಲ್ ಸೈನ್ ನ ಬದಲು, ಒಂದೇ ಈಕ್ವಲ್ ಸೈನ್ ಬರೆದೆವು ಎಂದೆಣಿಸಿ. |
07:19 | Save ಅನ್ನು ಒತ್ತಿ. |
07:21 | ಟರ್ಮಿನಲ್ ಗೆ ಹಿಂತಿರುಗಿ. |
07:23 | ಮೊದಲಿನಂತೆ, ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ. |
07:33 | ಇಲ್ಲಿ, ಥ್ರೀ ಈಸ್ ಈಕ್ವಲ್ ಟು ಥ್ರೀ ಎಂದು ತೋರಿಸುತ್ತಿದೆ. |
07:37 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
07:40 | ಇದರ ಕಾರಣ, ಇಲ್ಲಿ ಇರುವುದು ಅಸೈನ್ಮೆಂಟ್ ಆಪರೇಟರ್. |
07:43 | ಹಾಗಾಗಿ, b ಯ ಮೌಲ್ಯ a ಗೆ ಕೊಡಲಾಗಿದೆ. |
07:46 | ಈಗ, ಈ ಎರರ್ ಅನ್ನು ಸರಿಪಡಿಸೋಣ. |
07:49 | ಇನ್ನೊಂದು ಈಕ್ವಲ್ ಸೈನ್ ಅನ್ನು ಟೈಪ್ ಮಾಡಿ. |
07:51 | Save ಅನ್ನು ಒತ್ತಿ. |
07:54 | ಟರ್ಮಿನಲ್ ಗೆ ಹಿಂತಿರುಗಿ. |
07:56 | ಮೊದಲಿನಂತೆ ಕಂಪೈಲ್ ಮಾಡಿ, ಎಕ್ಸಿಕ್ಯೂಟ್ ಮಾಡಿ. |
08:04 | ಈಗ ಔಟ್ ಪುಟ್ ಸರಿಯಾಗಿದೆ. |
08:06 | ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ. |
08:08 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : |
08:10 | ರಿಲೇಶನಲ್ ಆಪರೇಟರ್ ಗಳಾದ |
08:12 | ಲೆಸ್ ದ್ಯಾನ್, ಉದಾಹರಣೆಗೆ, a ಲೆಸ್ ದ್ಯಾನ್ b |
08:14 | ಗ್ರೇಟರ್ ದ್ಯಾನ್ ಉದಾಹರಣೆಗೆ, a ಗ್ರೇಟರ್ ದ್ಯಾನ್ b |
08:17 | ಲೆಸ್ ದ್ಯಾನ್ ಆರ್ ಈಕ್ವಲ್ ಟು ಉದಾಹರಣೆಗೆ, a ಲೆಸ್ ದ್ಯಾನ್ ಆರ್ ಈಕ್ವಲ್ ಟುb |
08:22 | ಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು ಉದಾಹರಣೆಗೆ, aಗ್ರೇಟರ್ ದ್ಯಾನ್ ಆರ್ ಈಕ್ವಲ್ ಟು b |
08:27 | ಈಕ್ವಲ್ ಟು ಉದಾಹರಣೆಗೆ, a ಈಕ್ವಲ್ ಟು b |
08:29 | ನಾಟ್ ಈಕ್ವಲ್ ಟು ಉದಾಹರಣೆಗೆ, a ನಾಟ್ ಈಕ್ವಲ್ ಟು b |
08:34 | ಮೂರು ವಿದ್ಯಾರ್ಥಿಗಳ ಅಂಕವನ್ನು ಇನ್ಪುಟ್ ಆಗಿ ಪಡೆದು, ಅವನ್ನು ಹೋಲಿಸಿ, ಯಾವ ವಿದ್ಯಾರ್ಥಿಯು ಹೆಚ್ಚು ಅಂಕವನ್ನು ಪಡೆದಿದ್ದಾನೆ ಎಂದು ಕಂಡುಹಿಡಿದು,ಇಬ್ಬರು ಅಥವಾ ಹೆಚ್ಚು ಜನ ಸಮಾವಾದ ಅಂಕವನ್ನು ಪಡೆದಿದ್ದಾರೆಯೇ ಎಂದು ಪರಿಶೀಲಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
08:48 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
08:51 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
08:54 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
08:58 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
09:03 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
09:06 | ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ. |
09:14 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
09:18 | ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದಬೆಂಬಲಿತವಾಗಿದೆ. |
09:24 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
09:34 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |