KTurtle/C3/Programming-Concepts/Kannada

From Script | Spoken-Tutorial
Revision as of 10:31, 29 October 2014 by Vasudeva ahitanal (Talk | contribs)

Jump to: navigation, search
border =1 Time Narration
00:01 ನಮಸ್ಕಾರ.
00:03 KTurtle ನಲ್ಲಿ Programming concepts ನ ಈ ಟ್ಯುಟೋರಿಯಲ್-ಗೆ ಸ್ವಾಗತ.
00:08 ಈ ಟ್ಯುಟೋರಿಯಲ್- ನಲ್ಲಿ ನಾವು,
00:12 KTurtle ನಲ್ಲಿ ಪ್ರೋಗ್ರಾಮ್ ಅನ್ನು ಹೇಗೆ ಬರೆಯುವುದು,
00:15 ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ವೇರಿಯೇಬಲ್ಸ್ ಗಳ ಉಪಯೋಗ,
00:18 ಕ್ಯಾನ್ವಾಸಿನ ಮೇಲೆ ಮುದ್ರಣವನ್ನು ಮಾಡಲು ಪ್ರಿಂಟ್ ಕಮಾಂಡ್ ಅನ್ನು ಹೇಗೆ ಉಪಯೋಗಿಸುವುದು, ಮತ್ತು
00:22 ಲೈನ್ ಅನ್ನು ಹೇಗೆ ಕಮೆಂಟ್ ಮಾಡುವುದು ಎನ್ನುವುದನ್ನು ಕಲಿಯಲಿದ್ದೇವೆ.
00:24 ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 11.10 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:37 ನಿಮಗೆ Kturtleನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ .
00:43 ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ.
00:49 ಆರಂಭಿಸುವುದಕ್ಕಿಂತ ಮೊದಲು ನಾವು KTurtle ನ ಕೆಲವು ಪ್ರಾಥಮಿಕ ಮಾಹಿತಿಯ ಬಗ್ಗೆ ಚರ್ಚಿಸೋಣ.
00:55 ಕ್ಯಾನ್ವಾಸಿನ ಮೇಲೆ ಕಾಣಿಸುತ್ತಿರುವ "Turtle" ಅನ್ನು ನಾವು "sprite" (ಸ್ಪ್ರೈಟ್) ಎನ್ನುತ್ತೇವೆ.
01:00 "Sprite" ಅನ್ನುವುದು ಒಂದು ಸಣ್ಣ ಇಮೇಜ್ (ಚಿತ್ರ). ಅದು ಪರದೆಯ ಮೇಲೆ ಎಲ್ಲಾ ಕಡೆಯೂ ಚಲಿಸುತ್ತದೆ. ಉದಾಹರಣೆಗೆ, ಕರ್ಸರ್ ಅನ್ನುವುದು ಒಂದು sprite.
01:10 "spritehide" ಎಂಬ ಕಮಾಂಡ್ Turtle ಅನ್ನು ಕ್ಯಾನ್ವಾಸಿನ ಮೇಲೆ ಕಾಣದಿರುವ ಹಾಗೆ ಮಾಡುತ್ತದೆ.
01:15 Turtle ಕಾಣಿಸದಿದ್ದರೆ (ಗುಪ್ತವಾಗಿದ್ದರೆ) "spriteshow" ಎಂಬ ಕಮಾಂಡ್ ಅದನ್ನು ಕಾಣುವ ಹಾಗೆ ಮಾಡುತ್ತದೆ.
01:21 "clear" ಕಮಾಂಡ್ ಕ್ಯಾನ್ವಾಸಿನ ಮೇಲೆ ಇರುವ ಎಲ್ಲಾ ಚಿತ್ರಗಳನ್ನು ಅಳಿಸಿಹಾಕುತ್ತದೆ.
01:27 KTurtle ನಲ್ಲಿ,
01:29 "$ " (ಡಾಲರ್) ಎಂಬ ಚಿಹ್ನೆ ವೇರಿಯೇಬಲ್ಸ್ ಗಳ ಒಂದು ಕಂಟೇನರ್.
01:34 "*" (asterisk –ಆಸ್ಟೆರಿಸ್ಕ್) ಎರಡು ಸಂಖ್ಯೆಗಳನ್ನು ಗುಣಿಸಲು ಉಪಯೋಗಿಸಲ್ಪಡುತ್ತದೆ.
01:41 "^"(caret-ಕ್ಯಾರೆಟ್) ಸಂಖ್ಯೆಯ ಪವರ್ ಅನ್ನು ಹೆಚ್ಚಿಸುತ್ತದೆ.
01:45 "#"(hash) ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
01:50 "sqrt" (ಎಸ್ ಕ್ಯೂ ಆರ್ ಟಿ) ಎನ್ನುವುದು ಒಂದು ಸಂಖ್ಯೆಯ ವರ್ಗಮೂಲವನ್ನು ತಿಳಿಯಲು ಇರುವಂತಹ ಒಂದು ಇನ್ ಬಿಲ್ಟ್ ಫಂಕ್ಷನ್.
01:58 ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ.
02:02 Dash home >> Media Apps ಮೇಲೆ ಕ್ಲಿಕ್ ಮಾಡೋಣ.
02:07 Type ಎಂಬುದರ ಕೆಳಗೆ, Education ಅನ್ನು ಆಯ್ಕೆ ಮಾಡಿ ನಂತರ KTurtle ಅನ್ನು ಆಯ್ಕೆ ಮಾಡೋಣ.
02:13 KTurtle ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ.
02:20 ನಾವು terminal ಅನ್ನು ಬಳಸಿಯೂ ಕೂಡ KTurtle ಅನ್ನು ತೆರೆಯಬಹುದು.
02:24 ಟರ್ಮಿನಲ್ ಅನ್ನು ತೆರೆಯಲು CTRL+ALT+T ಅನ್ನು ಒಟ್ಟಿಗೆ ಒತ್ತಿ.
02:30 KTurtle ಅಂತ ಟೈಪ್ ಮಾಡಿ enter ಬಟನ್ ಅನ್ನು ಒತ್ತೋಣ. ಈಗ KTurtle ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ.
02:41 ಈಗ ನಾನು ಪ್ರೋಗ್ರಾಮ್ ಕೋಡ್ ಅನ್ನು ಟೈಪ್ ಮಾಡುತ್ತೇನೆ ಮತ್ತು ವಿವರಿಸುತ್ತೇನೆ.
02:46 ಪ್ರೋಗ್ರಾಮ್ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು ಹಾಗಾಗಿ ನಾನು ಅದನ್ನು ಝೂಮ್ ಮಾಡುತ್ತೇನೆ.
02:55 #program to find square of a number. ಎಂಟರ್ ಅನ್ನು ಪ್ರೆಸ್ ಮಾಡೋಣ.
03:15 "#" ಹ್ಯಾಷ್ ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
03:19 ಅಂದರೆ ಪ್ರೋಗ್ರಾಮ್ ರನ್ ಆಗುತ್ತಿರುವಾಗ ಈ ಲೈನ್ ಬರುವುದಿಲ್ಲ. Enter ಅನ್ನು ಒತ್ತೋಣ.
03:29 reset
03:30 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. ಎಂಟರ್ ಅನ್ನು ಒತ್ತೋಣ.
03:38 $i= ask double quotes ನಲ್ಲಿ enter a number for I and click OK.
03:58 "$i" ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ಒಂದು ವೇರಿಯೇಬಲ್.
04:03 “ask” ಎಂಬ ಕಮಾಂಡ್ ಯೂಸರ್ ಇನ್ ಪುಟ್ ಅನ್ನು ವೇರಿಯೇಬಲ್ ನಲ್ಲಿ ಸಂಗ್ರಹಿಸಲು ಕೇಳುತ್ತದೆ. ಎಂಟರ್ ಅನ್ನು ಒತ್ತಿ.
04:11 “fontsize” space 28.
04:17 fontsize ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ.
04:20 Fontsize ಸಂಖ್ಯೆಯನ್ನು ಇನ್ ಪುಟ್ ನ ರೂಪದಲ್ಲಿ ತೆಗೆದುಕೊಳ್ಳುತ್ತದೆ. ಮತ್ತು pixels ನಲ್ಲಿ ಸೆಟ್ ಮಾಡುತ್ತದೆ.
04:27 print $i*$i (ಪ್ರಿಂಟ್ ಡಾಲರ್ ಐ ಇಂಟು ಡಾಲರ್ ಐ)
04:36 print $i*$i ಒಂದು ಸಂಖ್ಯೆಯ ವರ್ಗದ ಎಣಿಕೆಯನ್ನು ಮತ್ತು ಪ್ರಿಂಟ್ ಅನ್ನು ಮಾಡುತ್ತದೆ. ಎಂಟರ್ ಅನ್ನು ಒತ್ತೋಣ.
04:45 spritehide
04:48 spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ.
04:53 ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ.
04:56 ಎಡಿಟರ್ ನಲ್ಲಿ ಕೋಡ್ ನ ಉತ್ಪಾದನೆಯನ್ನು ಆರಂಬಿಸಲು ಟೂಲ್ ಬಾರ್ ನಲ್ಲಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
05:03 ಇದು ಉತ್ಪತ್ತಿಯಾದ ವೇಗದ ಸೂಚಿಯನ್ನು ತೋರಿಸುತ್ತದೆ.
05:07 Full speed (no highlighting and inspector)
05:10 Full speed,

slow, slower, slowest ಮತ್ತು step-by-step.

05:17 ನಾನು ಕೋಡ್ ಅನ್ನು slow ವೇಗದಲ್ಲಿ ರನ್ ಮಾಡುತ್ತೇನೆ.
05:21 ಒಂದು "input bar" ಕಾಣಿಸುತ್ತದೆ.
05:23 i ಗಾಗಿ 15 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
05:29 '15' = '225' (15 ರ ವರ್ಗ 225) ಎಂದು ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
05:35 ಈಗ ಪ್ರೋಗ್ರಾಮಿನ ಮೂಲಕ ಸಂಖ್ಯೆಯ nth power (ಎನ್ಥ್ ಪವರ್) ಅನ್ನು ಕಂಡುಹಿಡಿಯುವುದನ್ನು ಕಲಿಯೋಣ.
05:42 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ.
05:46 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
05:56 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ.
06:03 ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.
06:07 ಪ್ರೋಗ್ರಾಮ್ ನ ವಿವರಣೆ (ಸ್ಪಷ್ಟೀಕರಣ)
06:09 # ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
06:13 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
06:18 $i ಮತ್ತು $n ಗಳು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವಂತಹ ವೇರಿಯೇಬಲ್ಸ್ ಗಳು.
06:25 “ask” ಎಂಬ ಕಮಾಂಡ್ ಯೂಸರ್ ಇನ್ ಪುಟ್ ಅನ್ನು ವೇರಿಯೇಬಲ್ ನಲ್ಲಿ ಸಂಗ್ರಹಿಸಲು ಕೇಳುತ್ತದೆ.
06:31 fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ.
06:37 Fontsize ಸಂಖ್ಯೆಯನ್ನು ಇನ್ ಪುಟ್ ನ ರೂಪದಲ್ಲಿ ತೆಗೆದುಕೊಳ್ಳುತ್ತದೆ. ಮತ್ತು pixels ನಲ್ಲಿ ಸೆಟ್ ಮಾಡುತ್ತದೆ.
06:43 print ($i^$n) ಒಂದು ಸಂಖ್ಯೆಯ nth power ನ ಎಣಿಕೆಯನ್ನು ಮತ್ತು ಪ್ರಿಂಟ್ ಅನ್ನು ಮಾಡುತ್ತದೆ.
06:52 spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ.
06:57 ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ.
07:00 i ಗಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
07:05 n ಗಾಗಿ 4 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. 5^4=625 ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
07:18 ಈಗ ಸಂಖ್ಯೆಯ ವರ್ಗಮೂಲವನ್ನು ತಿಳಿಯಲು ಪ್ರೋಗ್ರಾಮ್ ನಲ್ಲಿ ಇನ್ ಬಿಲ್ಟ್ “sqrt” (ಎಸ್ ಕ್ಯೂ ಆರ್ ಟಿ) ಫಂಕ್ಷನ್ ಅನ್ನು ಉಪಯೋಗಿಸೋಣ.
07:27 ನಾನು editor ನಿಂದ ಕೋಡ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
07:35 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಕಾಪಿ ಮಾಡಿ.
07:43 ನಾನು ಪ್ರೋಗ್ರಾಮ್ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರಬಹುದಾದ್ದರಿಂದ ಅದನ್ನು ಝೂಮ್ ಮಾಡುತ್ತೇನೆ.
07:49 ನಾನು ಕೋಡ್ ಅನ್ನು ವಿವರಿಸುತ್ತೇನೆ.
07:52 # ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
07:57 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
08:02 $i ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ಒಂದು ವೇರಿಯೇಬಲ್.
08:07 fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ.
08:12 print sqrt $i ಒಂದು ಸಂಖ್ಯೆಯ ವರ್ಗಮೂಲವನ್ನು ಪ್ರಿಂಟ್ ಮಾಡುತ್ತದೆ.
08:19 spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. ( ಕ್ಯಾನ್ವಾಸಿನ ಮೇಲೆ Turtle ಕಾಣದ ಹಾಗೆ ಮಾಡುತ್ತದೆ.)
08:24 ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ.
08:28 i ಗಾಗಿ '169' ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
08:34 169 = 13, (169 ರ ವರ್ಗಮೂಲ 13) ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
08:39 ಪುನಃ ರನ್ ಮಾಡೋಣ.
08:42 i ಗಾಗಿ -169 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
08:49 ನಾವು ಋಣಾತ್ಮಕ ಸಂಖ್ಯೆಯನ್ನು ಎಂಟರ್ ಮಾಡಿದರೆ, ಔಟ್ ಪುಟ್ 'nan' (ಎನ್ ಎ ಎನ್) ಆಗುತ್ತದೆ. ಅಂದರೆ ಇದು ಸಂಖ್ಯೆಯಲ್ಲ.
08:56 ಏಕೆಂದರೆ ಋಣಾತ್ಮಕ ಸಂಖ್ಯೆಯ ವರ್ಗಮೂಲ ನಿಜವಾದ (ವಾಸ್ತವಿಕ) ಸಂಖ್ಯೆಯಾಗಿರುವುದಿಲ್ಲ.
09:02 ಈಗ ನಾವು ಪ್ರೋಗ್ರಾಮಿನ ಮೂಲಕ ಧನಾತ್ಮಕ ಸಂಖ್ಯೆಯ ಘನಮೂಲದ ಮೂಲ್ಯಾಂಕನವನ್ನು ಮಾಡೋಣ.
09:08 ನಾನು editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ.
09:19 ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಕಾಪಿ ಮಾಡಿ.
09:25 ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ.
09:31 ನಾನು ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ.
09:35 # ಎಂಬ ಚಿಹ್ನೆ ಇದರ ನಂತರ ಬರೆದಿರುವ ಲೈನ್ ಅನ್ನು ಕಮೆಂಟ್ ಮಾಡುತ್ತದೆ.
09:38 ಇದೊಂದು ಸಿಂಗಲ್ ಲೈನ್ ಕಮೆಂಟ್ ಎನ್ನುವುದನ್ನು ದಯವಿಟ್ಟು ಗಮನಿಸಿ.
09:42 ಪ್ರತಿಯೊಂದು ಕಮೆಂಟೂ ಸಹ # ಚಿಹ್ನೆಯ ಮುಂದೆ ಬರಬೇಕು.
09:48 reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ.
09:53 $i ಮತ್ತು $C ಅನ್ನುವುದು ಯೂಸರ್ ಇನ್ ಪುಟ್ ಅನ್ನು ಸಂಗ್ರಹಿಸಲು ಇರುವ ವೇರಿಯೇಬಲ್ಸ್.
09:59 $C=($i)^(1/3) (ಡಾಲರ್ ಸಿ ಈಸ್ ಈಕ್ವಲ್ ಟು ಡಾಲರ್ ಐ ಟು ದ ಪವರ್ ಆಫ್ ವನ್ ಬೈ ಥ್ರೀ), ಸಂಖ್ಯೆಯ ಘನಮೂಲವನ್ನು ಎಣಿಸುತ್ತದೆ.
10:07 fontsize 28 ಪ್ರಿಂಟಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ.
10:13 print $C ಒಂದು ಸಂಖ್ಯೆಯ ಘನಮೂಲವನ್ನು ಪ್ರಿಂಟ್ ಮಾಡುತ್ತದೆ.
10:19 spritehide ಕ್ಯಾನ್ವಾಸಿನಿಂದ Turtle ಅನ್ನು ಗುಪ್ತವಾಗಿರಿಸುತ್ತದೆ. ( ಕ್ಯಾನ್ವಾಸಿನ ಮೇಲೆ Turtle ಕಾಣದ ಹಾಗೆ ಮಾಡುತ್ತದೆ.)
10:23 ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ.
10:27 i ಗಾಗಿ 343 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
10:34 343 = 7 (343 ರ ಘನಮೂಲ 7) ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ.
10:40 ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
10:43 ಸಂಕ್ಷೇಪವಾಗಿ,
10:46 ಈ ಟ್ಯುಟೋರಿಯಲ್-ನಲ್ಲಿ ನಾವು
10:49 ಪ್ರೋಗ್ರಾಮಿಂಗ್ ಕಾನ್ಸೆಪ್ಟ್ಸ್
10:52 sqrt ಫಂಕ್ಷನ್ ನ ಉಪಯೋಗ,
10:55 print ಕಮಾಂಡಿನ ಉಪಯೋಗ ಮತ್ತು
10:57 KTurtle editor ಮತ್ತು ಕ್ಯಾನ್ವಾಸಿನ ಉಪಯೋಗಗಳನ್ನು ಕಲಿತಿದ್ದೇವೆ.
11:02 ಅಸೈನ್-ಮೆಂಟ್-ಗಾಗಿ, ನಾನು ನಿಮಗೆ ಪ್ರಾಥಮಿಕ ಪ್ರೋಗ್ರಾಂ ಕಮಾಂಡ್-ಗಳ ಮೂಲಕ
11:08 ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುವ ಮತ್ತು
11:11 ಒಂದು ಸಂಖ್ಯೆಯ nth root ತಿಳಿಯುವ ಪ್ರೋಗ್ರಾಂ ಅನ್ನು ಬರೆಯಲು ಸೂಚಿಸುತ್ತೇನೆ.
11:15 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial
11:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ.
11:22 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
11:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
11:29 ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
11:32 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
11:35 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
11:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
11:48 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:55 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
11:59 ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal