Java/C2/Using-this-keyword/Kannada

From Script | Spoken-Tutorial
Revision as of 15:42, 20 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾ-ದಲ್ಲಿ”thisದಿಸ್” ಕೀ ವರ್ಡ್ ಅನ್ನು ಉಪಯೋಗಿಸುವ ಕುರಿತಾದ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 this ದಿಸ್ ಕೀವರ್ಡ್ –ಅನ್ನು ಉಪಯೋಗಿಸುವದು
00:11 thisದಿಸ್ ಕೀವರ್ಡ್-ಅನ್ನು field ಫೀಲ್ಡ್ ಗಳ ಜೊತೆಗೆ ಉಪಯೋಗಿಸುವುದು.
00:14 “thisದಿಸ್” ಕೀವರ್ಡ್-ಅನ್ನು ಕನ್ಸ್-ಟ್ರಕ್ಟರ್-ಗಳ ಬದಲಾವಣೆಗಾಗಿ ಉಪಯೋಗಿಸುವದನ್ನು ಕಲಿಯುತ್ತೇವೆ.
00:17 ಇಲ್ಲಿ ನಾವು,
  • Ubuntu version 11.10(ಉಬಂಟು ವರ್ಶನ್ ೧೧.೧೦)
  • jdk 1.6 (ಜೆ.ಡಿ.ಕೆ ೧.೬)
  • Eclipse 3.7.0 (ಎಕ್ಲಿಪ್ಸ್ ೩.೭.೦)

ಗಳನ್ನು ಉಪಯೋಗಿಸುತ್ತೇವೆ.

00:28 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು,
00:30 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಗಳನ್ನು ರಚಿಸುವ ಕುರಿತು ತಿಳಿದಿರಬೇಕು.
00:34 ತಿಳಿಯದಿದ್ದರೆ ಸಂಬಂಧಪಟ್ಟ ಟ್ಯುಟೊರಿಯಲ್ ಗಾಗಿ ಕೆಳಕಂಡ ಅಂತರ್ಜಾಲವನ್ನು ಭೇಟಿಕೊಡಿ.

(http://www.spoken-tutorial.org)

00:40 ಈಗ ನಾವು “thisದಿಸ್” ಕೀವರ್ಡ್-ನ ಉಪಯೋಗವನ್ನು ನೋಡೋಣ.
00:44 ಕನ್ಸ್-ಟ್ರಕ್ಟರ್-ನಲ್ಲಿ thisದಿಸ್ಎನ್ನುವದು ಪ್ರಸ್ತುತ objectಒಬ್ಜೆಕ್ಟ್ ಅನ್ನು ತಿಳಿಸುತ್ತದೆ.
00:48 thisದಿಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ನಲ್ಲಿ ನಾವು ಪ್ರಸ್ತುತ ಒಬ್ಜೆಕ್ಟ್ ನ ಯಾವುದೇ ಮೆಂಬರ್-ಅನ್ನು ರೆಫರ್ ಮಾಡಬಹುದು.
00:55 ಈಗ ನಾವು “ದಿಸ್ this” ಕೀವರ್ಡ್-ನ ಉಪಯೋಗವನ್ನು ಫೀಲ್ಡ್-ಗಳ ಜೊತೆಗೆ ನೋಡೊಣ.
01:00 thisದಿಸ್ ಕೀವರ್ಡ್ ಹೆಸರಿನ ಗೊಂದಲಗಳನ್ನು ತಪ್ಪಿಸಲು ಸಹಾಯಮಾಡುತ್ತದೆ.
01:07 ನಾವು ಇಲ್ಲಿ ಅಂತಹ ಉದಾಹರಣೆ ಒಂದನ್ನು ನೋಡಬಹುದು.
01:10 ಅದಕ್ಕಾಗಿ ನಾವು ಎಕ್ಲಿಪ್ಸ್ ಅನ್ನು ತೆರೆಯೋಣ.
01:17 Student class ಎನ್ನುವ ಹಿಂದಿನ ಟ್ಯುಟೊರಿಯಲ್ ನ ರಚನೆಯನ್ನು ತೆರೆಯೋಣ.
01:23 ಡೀಫಾಳ್ಟ್ ಕನ್ಸ್-ಟ್ರಕ್ಟರ್ ಅನ್ನು ಕಮೆಂಟ್ ಮಾಡಿ ಮತ್ತು ಕನ್ಸ್ಟ್ರಕ್ಟರ್ ಅನ್ನು ಒಂದು ಪೆರಾಮೀಟರ್ ಜೊತೆಗೆ ಕಮೆಂಟ್ ಮಾಡಿ.
01:40 ಮೊದಲ ಎರಡು ಒಬ್ಜೆಕ್ಟ್ ಗಳ ಕೋಡ್ ಅನ್ನೂ ಕಮೆಂಟ್ ಮಾಡಿ.
02:03 ಈಗ “ಪೆರಾಮೀಟರೈಜ್ಡ್ ಕನ್ಸ್-ಟ್ರಕ್ಟರ್” ಅನ್ನು ಗುರುತಿಸಿ.
02:11 the_roll_number ಮತ್ತು the_name ಇವು ಕನ್ಸ್-ಟ್ರಕ್ಟರ್-ಗೆ ಕಳಿಸಿದ ಆರ್ಗ್ಯುಮೆಂಟ್-ಗಳಾಗಿವೆ.
02:20 roll_number ಮತ್ತು name ಗಳು ಇನ್ಸ್ಟೆಂಟ್ ವೆರಿಯೆಬಲ್-ಗಳು.
02:26 ಈಗ ನಾನು roll_number ಮತ್ತುnameಗಳಿಗೆ ಆರ್ಗ್ಯುಮೆಂಟ್ ಗಳನ್ನು ಬದಲಿಸುತ್ತೇನೆ.
02:39 ಹಾಗಾಗಿ ನಾವು ಕನ್ಸ್-ಟ್ರಕ್ಟರ್-ನಲ್ಲಿ :
02:42 roll_number ಸಮ roll_number ಮತ್ತು name ಸಮ name ಎಂದು ಹೊಂದಿದ್ದೇವೆ.
02:55 ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಅದಕ್ಕಾಗಿ Ctrl S ಒತ್ತಿ ಮತ್ತು Ctrl F11 ಒತ್ತಿ.
03:04 ನಾವು ಈ ಕೆಳಗಿನ ಪರಿಣಾಮವನ್ನು ಪಡೆಯುತ್ತಿದ್ದೇವೆ:
03:07 I am a Parameterized Constructor”

0 null

03:12 ಈಗ ಕೋಡ್ ಗೆ ಬನ್ನಿರಿ.
03:17 ನಾವು ಕೋಡ್ ನಲ್ಲಿ ೨ ಎಚ್ಚರಿಕೆ ಗಳನ್ನು ಕಾಣುತ್ತಿದ್ದೇವೆ.
03:20 ನಿಮ್ಮ ಮೌಸ್ ಎಚ್ಚರಿಕೆ ಚಿಹ್ನೆಯ ಮೇಲಿದೆ.
03:23 The assignment to the variable roll_number has no effect. ಎಂದು ನಾವು ಕಾಣಬಹುದು.
03:29 ಮತ್ತು The assignment to the variable name has no effect ಎಂದೂ ಕಾಣಬಹುದು.
03:33 ಇದು ಏಕೆಂದರೆ ಕನ್ಸ್-ಟ್ರಕ್ಟರ್ ಗಳಾದ roll_number ಮತ್ತು name ಗಳು ಲೊಕಲ್ ವೇರಿಯೇಬಲ್ ಗಳಾಗಿವೆ.
03:40 ಲೋಕಲ್ ವೇರಿಯೇಬಲ್ ಅಂದರೆ ಒಂದು ಮೆಥಡ್ ಅಥವಾ ಬ್ಲೋಕ್ ಗಳಲ್ಲಿ ಪಡೆಯಬಹುದಾದ ವೇರಿಯೇಬಲ್ ಎಂದರ್ಥ.
03:47 ಇಲ್ಲಿ, roll_number ಮತ್ತು name ಇವು 11 ಮತ್ತು Raju ಎಂಬ ಬೆಲೆ ಪಡೆಯುತ್ತದೆ.
03:54 ಏಕೆಂದರೆ ನಾವು11 ಮತ್ತು Raju ಎಂಬ ಬೆಲೆಯನ್ನು ಕನ್ಸ್-ಟ್ರಕ್ಟರ್ ಗೆ ಕಳಿಸಿದ್ದೇವೆ.
04:01 ಆದರೆ ಒಮ್ಮೆ ಅವು ಕನ್ಸ್-ಟ್ರಕ್ಟರ್ ನಿಂದ ಹೊರಬಂದರೆ ಅವನ್ನು ಬಳಸಲು ಆಗುವದಿಲ್ಲ.
04:06 ಹಾಗೇ roll_number ಮತ್ತು name ಎನ್ನುವದು ಇನ್ಸ್ಟೆನ್ಸ್-ವೇರಿಯೇಬಲ್ ಆಗಿದೆ.
04:13 ಅವು ಒಮ್ಮೆ ಒಬ್ಜೆಕ್ಟ್ ರಚನೆ ಆದಾಗಲೇ 0 ಮತ್ತುnull ಬೆಲೆಗೆ ಇನಿಶಿಯಲೈಜ್ ಆಗಿದೆ.
04:18 ಹಾಗಾಗಿ ನಾವು 0 ಮತ್ತು null ಎಂಬ ಫಲಿತಾಂಶವನ್ನು ಪಡೆದಿದ್ದೇವೆ.
04:21 ಈಗ ನಾವು ಕನ್ಸ್-ಟ್ರಕ್ಟರ್ ನಲ್ಲಿ ಸಣ್ಣ ಬದಲಾವಣೆಯನ್ನು ಮಾಡೋಣ.
04:29 ಅದಕ್ಕಾಗಿ this . roll_number = roll_number ಎಂದು ಟಾಯಿಪ್ ಮಾಡಿ.
04:37 ಮತ್ತು this .name = name ಎಂದೂ ಕೂಡಾ ಟಾಯಿಪ್ ಮಾಡಿ.
04:44 ಈಗ ಫಾಯಿಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ . ಅದಕ್ಕಾಗಿ ctrl S ಮತ್ತು Ctrl F11 ಗಳನ್ನು ಒತ್ತಿರಿ.
04:51 ನಾವು ಈಕೆಳಗಿನ ಪರಿಣಾಮವನ್ನು ಪಡೆದಿದ್ದೇವೆ.
04:53

I am Parameterized Constructor 11 ಮತ್ತು Raju

04:58 ಇದಕ್ಕೆ ಕಾರಣ this.roll_number ಮತ್ತು this.name ಇವು roll_number ಮತ್ತು name ಇವಕ್ಕೆ ರೆಫರ್ ಆಗಿವೆ.
05:12 ಮತ್ತು ಇಲ್ಲಿ roll_number ಮತ್ತು name ಗಳು ಮೆಥಡ್-ನಲ್ಲಿ ಕಳಿಸಲ್ಪಟ್ಟ ಆರ್ಗ್ಯುಮೆಂಟ್-ಗಳಾಗಿವೆ.
05:19 ಲೋಕಲ್ ಮತ್ತು ಇನ್ಸ್ಟೆನ್ಸ್ ವೇರಿಯೇಬಲ್-ಗಳ ನಡುವಿನ ಗೊಂದಲದ ನಿವಾರಣೆಗೆ ನಾವು ಈ ಕೀವರ್ಡ್ ಅನ್ನು ಉಪಯೋಗಿಸುತ್ತೇವೆ.
05:29 ಈಗ ನಾವು ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ “thisದಿಸ್” ಕೀವರ್ಡ್ ನ ಉಪಯೋಗವನ್ನು ಕುರಿತು ತಿಳಿಯೋಣ.
05:34 ನಾವು “thisದಿಸ್” ಕೀವರ್ಡ್ ಅನ್ನು ಕನ್ಸ್-ಟ್ರಕ್ಟರ್ ಒಂದರ ಒಳಗೆ ಮತ್ತೊಂದನ್ನು ಕಾಲ್ ಮಾಡಲು ಉಪಯೋಗಿಸಬಹುದು.
05:39 ಆದರೆ ಕನ್ಸ್-ಟ್ರಕ್ಟರ್ ಮಾತ್ರ ಅದೇ ಕ್ಲಾಸ್-ನಲ್ಲಿ ಇರಬೇಕು.
05:43 ಇದನ್ನು explicit constructor invocation (ಎಕ್ಸ್ಪ್ಲಿಸಿಟ್ ಕನ್ಸ್-ಟ್ರಕ್ಟರ್ ಇನ್ವೋಕೇಶನ್ ) ಎನ್ನುವರು.
05:46 ಸರಿ, ನಾವೀಗ ಹಿಂದೆ ಮಾಡಿ ಇಟ್ಟಿರುವ Student ಕ್ಲಾಸ್-ಗೆ ಮರಳೋಣ.
05:53 ಅದಕ್ಕಾಗಿ ಈಗ ಕಮೆಂಟ್ ಗಳನ್ನು ತೆಗೆಯಿರಿ.
06:28 ಮೊದಲ ಎರಡು ಕನ್ಸ್-ಟ್ರಕ್ಟರ್-ಗಳಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳನ್ನು ಅವುಗಳ ಬೆಲೆ ನಿಗಧಿಪಡಿಸಲು ಈಗ ಇವನ್ನು ಕಮೆಂಟ್ ಮಾಡಿ.
06:52 ನಂತರ ದ್ವಿತೀಯ ಮತ್ತು ತೃತೀಯ ಒಬ್ಜೆಕ್ಟ್-ಗಳನ್ನು ರಚಿಸುವ ಭಾಗವನ್ನು ಕಮೆಂಟ್ ಮಾಡಿ.
07:08 ಈಗ ಮೊದಲು ಪೆರಾಮೀಟರ್-ಗಳಿಲ್ಲದ ಕನ್ಸ್-ಟ್ರಕ್ಟರ್ ಗೆ ಬನ್ನಿ.
07:16 ಕರ್ಲಿ ಬ್ರೆಕೆಟ್-ಗಳ ನಂತರ ಬ್ರೆಕೆಟ್-ನಲ್ಲಿ11 ಮತ್ತು ಸೆಮಿಕೋಲನ್ ಗಳನ್ನು ಬರೆಯಿರಿ.
07:28 ಎರಡನೇ ಕನ್ಸ್-ಟ್ರಕ್ಟರ್ ನಲ್ಲಿ “ this(ದಿಸ್) ಬ್ರೆಕೆಟ್-ನಲ್ಲಿ 11 ಕೊಮಾ ಡಬಲ್-ಕ್ವೋಟ್ಸ್-ನಲ್ಲಿ Raju ಸೆಮಿಕೋಲನ್” ಎಂದು ಟಾಯಿಪ್ ಮಾಡಿ.
07:42 ಈಗ ಫಾಯಿಲ್-ಅನ್ನು ಸೇವ್-ಮಾಡಿ ರನ್-ಮಾಡಿ. ಅದಕ್ಕಾಗಿ Ctrl S ಮತ್ತು Ctrl F11 ಗಳನ್ನು ಒತ್ತಿ.
07:49 ನಾವು ಈ ಕೆಳಗಿನ ಪರಿಣಾಮವನ್ನು ಪಡೆದಿದ್ದೇವೆ.
07:51 I am a Parameterized Constructor
07:54 I am a constructor with a single parameter
07:57 I am Default Constructor

11 ಮತ್ತು Raju

08:02 ಈಗ ನಾನು ಫಲಿತಾಂಶದ ಕುರಿತು ವಿವರಿಸುತ್ತೇನೆ.
08:08 ನಾವು ಒಬ್ಜೆಕ್ಟ್-ಅನ್ನು ರಚಿಸಿದಾಗ , ಅದಕ್ಕೆ ಸಂಬಂಧಿಸಿದ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ.
08:13 ಇಲ್ಲಿನ ಕನ್ಸ್-ಟ್ರಕ್ಟರ್, ಆರ್ಗ್ಯೂಮೆಂಟ್ ಇಲ್ಲದ ಕನ್ಸ್-ಟ್ರಕ್ಟರ್ ಆಗಿದೆ.
08:20 ಇಲ್ಲಿ ನಿಯಂತ್ರಣ ಕನ್ಸ್ಟ್ರಕ್ಟರ್-ನ ಮೊದಲ ಸಾಲಿಗೆ ಬರುತ್ತದೆ.
08:24 ಇದು “this ಬ್ರೆಕೆಟ್-ನಲ್ಲಿರುವ 11” ಎಂಬ ಸ್ಟೇಟ್-ಮೆಂಟ್ ಅನ್ನು ಸಂಧಿಸುತ್ತದೆ.
08:26 ಆದ್ದರಿಂದ ಇದು ಸಿಂಗಲ್-ಇಂಟಿಜರ್-ಆರ್ಗ್ಯೂಮೆಂಟ್ ಅನ್ನು ಸ್ವೀಕರಿಸುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡುತ್ತದೆ.
08:36 ನಂತರ ನಿಯಂತ್ರಣವು “ಬ್ರೆಕೆಟ್-ನಲ್ಲಿರುವ 11 ಕೊಮಾ Raju” ಎಂಬಲ್ಲಿಗೆ ಬರುತ್ತದೆ.
08:44 ಆದ್ದರಿಂದ ಇದು ಒಂದು ಇಂಟೀಜರ್ ಮತ್ತು ಒಂದು ಸ್ಟ್ರಿಂಗ್ ಆರ್ಗ್ಯೂಮೆಂಟ್-ಗಳನ್ನು ಸ್ವೀಕರಿಸುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡುತ್ತದೆ.
08:53 ಹಾಗಾಗಿ ಈ ಕನ್ಸ್ಟ್ರಕ್ಟರ್ ಎಕ್ಸಿಕ್ಯೂಟ್ ಆಗಿ , ನಾವು I am Parameterized Constructorಎಂಬ ಫಲಿತವನ್ನು ಪಡೆದಿದ್ದೇವೆ.
09:02 ಈಗ ಇನ್ಸ್ಟೆನ್ಸ್ ವೇರಿಯೇಬಲ್ ಗಳು 11 ಮತ್ತು Raju ಇವಕ್ಕೆ ಇನಿಶಿಯಲ್ ಆಗುತ್ತವೆ. ಏಕೆಂದರೆ ನಾವು ಅದನ್ನು ಮುಂದೆ ಕಳಿಸಿದ್ದೇವೆ.
09:11 ಈಗ, ನಿಯಂತ್ರಣವು ಕಾಲಿಂಗ್ ಕನ್ಸ್-ಟ್ರಕ್ಟರ್ ಗೆ ಮರಳುತ್ತದೆ.
09:16 ಹಾಗಾಗಿ ಎರಡನೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ.
09:19 ಹಾಗಾಗಿ ನಾವು I am constructor with a single parameter ಎಂಬ ಫಲಿತವನ್ನು ಪಡೆದಿದ್ದೇವೆ.
09:25 ನಂತರ, ನಿಯಂತ್ರಣವು ಮೊದಲನೇ ಕನ್ಸ್-ಟ್ರಕ್ಟರ್-ಗೆ ಹೋಗಿ ಅದನ್ನು ಎಕ್ಸಿಕ್ಯೂಟ್ ಮಾಡುತ್ತದೆ.
09:30 ಹಾಗಾಗಿ ನಾವು “I am a default constructor” ಎಂಬ ಫಲಿತವನ್ನು ಪಡೆಯುತ್ತೇವೆ.
09:36 ನಂತರ StudentDetail ಎಂಬ ಮೆಥಡ್ ಎಕ್ಸಿಕ್ಯೂಟ್ ಆಗುತ್ತದೆ.
09:42 ಅದಕ್ಕಾಗಿ ನಾವು, 11 ಮತ್ತು Raju ಎಂದು ಪಡೆದಿದ್ದೇವೆ.
09:45 ಈಗ ನಾವು ಸಣ್ಣ ಬದಲಾವಣೆಯನ್ನು ಮಾಡೋಣ.
09:47 thisದಿಸ್ ಸ್ಟೆಟ್-ಮೆಂಟ್ ಅನ್ನು ಕನ್ಸ್-ಟ್ರಕ್ಟರ್ ನ ಕೊನೆಯಲ್ಲಿ ಬರುವಂತೆ ಮಾಡಿ.
10:00 ನಮಗೆ ಕಂಪೈಲರ್ ದೋಷವನ್ನು ತೋರಿಸುತ್ತದೆ.
10:03 ಮೌಸ್ ಈಗ ದೋಷ ಚಿಹ್ನೆಯ ಮೇಲಿದೆ.
10:06 ನಾವು ಈ ದೋಷವನ್ನು ಹೊಂದಿದ್ದೇವೆ:
10:07 ಕನ್ಸ್-ಟ್ರಕ್ಟರ್ ನಲ್ಲಿ ಮೊದಲನೇ ಸ್ಟೇಟ್-ಮೆಂಟ್ “ಕನ್ಸ್-ಟ್ರಕ್ಟರ್ ಕಾಲ್”ಆಗಿರಲೇಬೇಕು.
10:12 ಅದಕ್ಕಾಗಿ ನಾವು ಇದನ್ನು ಕನ್ಸ್-ಟ್ರಕ್ಟರ್ ನ ಮೊದಲ ಸಾಲಾಗಿ ಮಾಡಬೇಕು.
10:16 ಇದನ್ನು ಕನ್ಸ್-ಟ್ರಕ್ಟರ್ ನ ಮೊದಲ ಸಾಲಾಗಿ ಮಾಡಿಬಿಡಿ.
10:27 ಈಗ ದೊಷ ಇಲ್ಲದಿರುವದನ್ನು ನಾವು ಕಾಣುತ್ತೇವೆ.
10:31 ಹೀಗೆ ಈ ಟ್ಯುಟೋರಿಯಲ್-ನಲ್ಲಿ ನಾವು ,
10:35 thisದಿಸ್ ಕೀವರ್ಡ್ ಅನ್ನು ಫೀಲ್ಡ್ ಗಳ ಜೊತೆಗೆ ಉಪಯೋಗಿಸುವದನ್ನು,
10:38 thisದಿಸ್ ಕೀವರ್ಡ್ ಅನ್ನು ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ ಉಪಯೋಗಿಸುವದನ್ನೂ,
10:41 ಕನ್ಸ್-ಟ್ರಕ್ಟರ್ ಒಂದರಲ್ಲಿ “thisದಿಸ್” ಕೀವರ್ಡ್ ಹೇಗೆ ಉಪಯೋಗಿಸಲ್ಪಡಬೇಕು ಎಂಬುದನ್ನೂ ಕಲಿತೆವು.
10:45 ಸ್ವಂತ ಅಭ್ಯಾಸಕ್ಕಾಗಿ, ಮೊದಲೇ ಮಾಡಿಟ್ಟಿರುವ Employeಎಂಪ್ಲೊಯೀ ಕ್ಲಾಸ್ ನಲ್ಲಿ:
10:49 ಎರಡು ಪೆರಾಮೀಟರ್-ಗಳಿರುವ ಕನ್ಸ್-ಟ್ರಕ್ಟರ್ ಒಂದನ್ನು ರಚಿಸಿ.
10:52 thisದಿಸ್ ಕೀವರ್ಡ್ ಅನ್ನು ಇನ್ಸ್ಟೆನ್ಸ್ ವೇರಿಯೇಬಲ್-ಗಳನ್ನು ಇನಿಶಿಯಲ್ ಮಾಡಲು ಉಪಯೋಗಿಸಿ.
10:57 ಹಾಗೇ ಪೆರಾಮೀಟರ್ ಇಲ್ಲದ ಮತ್ತು ಒಂದು ಪೆರಾಮೀಟರ್ ಇರುವ ಕನ್ಸ್-ಟ್ರಕ್ಟರ್ ಅನ್ನು ರಚಿಸಿ.
11:01 ಟ್ಯುಟೋರಿಯಲ್ ನಲ್ಲಿ ತಿಳಿಸಿರುವಂತೆ ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ “thisದಿಸ್” ಕೀವರ್ಡ್ ಅನ್ನು ಬಳಸಿ ಪ್ರಯತ್ನಿಸಿ.
11:07 ಸ್ಪೋಕನ್ ಟ್ಯುಟೋರಿಯಲ್ ಕುರಿತು ಹೆಚ್ಚಿನ ಮಾಹಿತಿಗಾಗಿ,
11:09 ಕೆಳಗಿನ ಲಿಂಕ್-ನಲ್ಲಿರುವ ವೀಡಿಯೊ ನೋಡಿ.

[1]

11:12 ಇದು ಸ್ಪೋಕನ್-ಟ್ಯುಟೋರಿಯಲ್ ಕುರಿತು ಪೂರ್ಣ ಮಾಹಿತಿ ನೀಡುತ್ತದೆ.
11:16 ನಿಮ್ಮಲ್ಲಿ ಉತ್ತಮ ಬ್ಯಾಂಡ್-ವಿಡ್ತ್ ಇರದಿದ್ದರೆ ಡೌನ್-ಲೋಡ್ ಮಾಡಿಕೊಂಡೂ ನೋಡಬಹುದು.
11:19 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡ ,
11:23 ಸ್ಪೋಕನ್-ಟ್ಯುಟೋರಿಯಲ್ ಅನ್ನು ಬಳಸಿ ಕಾರ್ಯಾಗಾರವನ್ನೂ ನಡೆಸುತ್ತದೆ.
11:26 ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:30 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಎಂಬಲ್ಲಿಗೆ ಮೇಲ್ ಕಳುಹಿಸಿ.
11:36 ಸ್ಪೋಕನ್ ಟ್ಯುಟೋರಿಯಲ್ ಯೋಜನೆ ಟಾಕ್ ಟು ಎ ಟೀಚರ್ ಯೋಜನೆಯ ಭಾಗವಾಗಿದೆ.
11:40 ಇದು ಭಾರತ ಸರಕಾರದ , MHRD, ನ್ಯಾಶನಲ್ ಮಿಶನ್ ಓನ್ ಎಜುಕೇಶನ್ ಥ್ರೂ ICT ಯಿಂದ ಪ್ರಾಯೋಜಿಸಲ್ಪಟ್ಟಿದೆ.
11:46 ಹೆಚ್ಚಿನ ಮಾಹಿತಿಯನ್ನು http://spoken-tutorial.org/NMEICT-Intro ಇಲ್ಲಿಂದ ಪಡೆಯಿರಿ.
11:55 ನಾವು ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ.
11:58 ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ.

Contributors and Content Editors

PoojaMoolya, Pratik kamble, Vasudeva ahitanal