Blender/C2/The-Blender-Interface/Kannada

From Script | Spoken-Tutorial
Revision as of 13:22, 10 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:03 ಬ್ಲೆಂಡರ್ ಟ್ಯುಟೋರಿಯಲ್ ಸರಣಿಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನಲ್ಲಿಯ ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ವಿವರಣೆಯ ಕುರಿತು ಇದೆ.
00:15 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್.
00:22 ಈ ಟ್ಯುಟೋರಿಯಲ್ ನೋಡಿದ ನಂತರ ನಾವು ಬ್ಲೆಂಡರ್ ಇಂಟರ್ಫೇಸ್ ನ ವಿವಿಧ ವಿಂಡೋಗಳು,
00:29 ಪ್ರತಿಯೊಂದು ವಿಂಡೋಗಾಗಿ ನಿಗದಿ ಮಾಡಿದ ಪ್ಯಾರಾಮೀಟರ್ ಗಳು ಮತ್ತು ಟ್ಯಾಬ್ ಗಳು, 3D ವ್ಯೂ ನಲ್ಲಿ ಒಂದು ಒಬ್ಜೆಕ್ಟ್ ಅನ್ನು ಹೇಗೆ ಆಯ್ಕೆಮಾಡುವುದು,
00:37 ಮತ್ತು ಒಬ್ಜೆಕ್ಟ್ ಅನ್ನು X,Y & Z ದಿಕ್ಕುಗಳಲ್ಲಿ ಹೇಗೆ ಚಲಿಸುವದು ಎಂಬೀ ಮುಂತಾದವುಗಳ ಬಗ್ಗೆ ತಿಳಿಯುವೆವು.
00:44 ಬ್ಲೆಂಡರ್ ಅನ್ನು ಪ್ರಾರಂಭಿಸುವ ಬಗೆಯನ್ನು ನೀವು ತಿಳಿದಿದ್ದೀರಿ ಎಂದು ನಾನು ಭಾವಿಸುತ್ತೇನೆ.
00:48 ಇಲ್ಲದಿದ್ದಲ್ಲಿ ದಯವಿಟ್ಟು ಬ್ಲೆಂಡರ್ ಅನ್ನು ಪಡೆಯುವದರ ಬಗ್ಗೆ ಇರುವ ನಮ್ಮ ಹಿಂದಿನ ಟ್ಯುಟೋರಿಯಲ್ಸ್ ನೋಡಿರಿ.
00:56 ಇದು 3D ಪ್ಯಾನೆಲ್ ಆಗಿದೆ.
00:58 3D ವ್ಯೂ ನಲ್ಲಿ ಡಿಫಾಲ್ಟ್ ಆಗಿ ಮೂರು ಒಬ್ಜೆಕ್ಟ್ ಗಳು ಇವೆ.
01:03 ಒಂದು ಕ್ಯೂಬ್, ಒಂದು ಲ್ಯಾಂಪ್ ಮತ್ತು ಒಂದು ಕ್ಯಾಮೆರಾ
01:10 ಕ್ಯೂಬ್ ಈಗಾಗಲೇ ಡಿಫಾಲ್ಟ್ ನಿಂದ ಆಯ್ಕೆಯಾಗಿದೆ.
01:15 ಲ್ಯಾಂಪ್ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ.
01:19 ಕ್ಯಾಮೆರಾ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ.
01:23 ಹೀಗೆ 3D ವ್ಯೂ ನಲ್ಲಿ ಯಾವುದೇ ಒಬ್ಜೆಕ್ಟ್ ಅನ್ನು ಆಯ್ಕೆಮಾಡಲು ಆ ಒಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಬೇಕು.
01:31 ಕ್ಯೂಬ್ ಅನ್ನು ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ.
01:35 ಕ್ಯೂಬ್ ನ ಮಧ್ಯದಲ್ಲಿ ವಿಲೀನವಾಗುವ ಈ ಮೂರು ಬಣ್ಣದ ಬಾಣಗಳು 3D ಟ್ರಾನ್ಸ್ಫಾರ್ಮ್ ಮ್ಯಾನಿಪ್ಯುಲೇಟರ್ ಅನ್ನು ಪ್ರತಿನಿಧಿಸುತ್ತವೆ.
01:44 ಈ ಮ್ಯಾನಿಪ್ಯುಲೇಟರ್ ವಸ್ತುವನ್ನು ನಿರ್ದಿಷ್ಟ ಆಕ್ಸಿಸ್ನಲ್ಲಿ ಚಲಿಸಲು ಸಹಾಯ ಮಾಡುತ್ತದೆ.
01:51 ಕೆಂಪು ಬಣ್ಣವು X ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ.
01:55 ಹಸಿರು Y ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ.
01:59 ಮತ್ತು ನೀಲಿ Z ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ.
02:05 ಲೆಫ್ಟ್ ಕ್ಲಿಕ್ ಮಾಡಿ ಮತ್ತು ಹಸಿರು ಹ್ಯಾಂಡಲ್ ಹಿಡಿಯಿರಿ ಮತ್ತು ನಿಮ್ಮ ಮೌಸ್ ಅನ್ನು ಎಡದಿಂದ ಬಲಕ್ಕೆ ಒಯ್ಯಿರಿ.
02:15 ಕೀಬೋರ್ಡ್ ಶಾರ್ಟಕಟ್ ಗಾಗಿ G&Y ಒತ್ತಿ.
02:22 ಈ ಒಬ್ಜೆಕ್ಟ್ Y ಆಕ್ಸಿಸ್ ನ ದಿಕ್ಕಿನಲ್ಲಿ ಮಾತ್ರ ಚಲಿಸುವದನ್ನು ನಾವು ನೋಡುತ್ತೇವೆ.
02:32 ಹಾಗೆಯೇ, ನೀಲಿ ಹ್ಯಾಂಡಲ್ ಬಳಸಿ ಒಬ್ಜೆಕ್ಟ್ ಅನ್ನು Z ಆಕ್ಸಿಸ್ ನ ಉದ್ದಕ್ಕೂ ಚಲಿಸಿ.
02:45 ಕೀಬೋರ್ಡ್ ಶಾರ್ಟಕಟ್ ಗಾಗಿ G&Z ಒತ್ತಿ.
02:56 ಈಗ ಒಬ್ಜೆಕ್ಟ್ ಅನ್ನು X ಆಕ್ಸಿಸ್ ನ ಉದ್ದಕ್ಕೂ ಚಲಿಸಲು ಪ್ರಯತ್ನಿಸಿ.
03:08 ಕೀಬೋರ್ಡ್ ಶಾರ್ಟಕಟ್ ಗಾಗಿ G&X ಒತ್ತಿ.
03:23 ಕೆಂಪು ಬಾಕ್ಸ್ ನಿಂದ ಆವರಿಸಲ್ಪಟ್ಟ ವಿಸ್ತೀರ್ಣವು 3D ವ್ಯೂ ಇದೆ.
03:32 3D ವ್ಯೂ ನ ಕೆಳಗಿನ ಎಡ ಮೂಲೆಗೆ ಹೋಗಿ.
03:36 View ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ. 3D ವ್ಯೂ ಗಾಗಿ ಹಲವಾರು ವ್ಯೂ ಆಪ್ಶನ್ ಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ.
03:46 Top ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಕೀಬೋರ್ಡ್ ಶಾರ್ಟಕಟ್ ಗಾಗಿ ನಂಪ್ಯಾಡ್ 7 ಒತ್ತಿರಿ.
03:52 3D ವ್ಯೂ ಯುಸರ್ ಪರ್ಸ್ಪೆಕ್ಟಿವ್ ನಿಂದ ಟಾಪ್ ವ್ಯೂ ಗೆ ಬದಲಾಯಿಸುತ್ತದೆ.
03:57 ನಾವು ಟಾಪ್ ವ್ಯೂ ನಿಂದ ನಮ್ಮ ಒಬ್ಜೆಕ್ಟ್ ಅನ್ನು ನೋಡಬಹುದು.
04:03 Select ಮೇಲೆ ಲೆಫ್ಟ್ ಕ್ಲಿಕ್ ಮಾಡಿ. 3D ವ್ಯೂ ನಲ್ಲಿಯ ಎಲ್ಲ ಒಬ್ಜೆಕ್ಟ್ ಗಳಿಗಾಗಿ ಆಯ್ದುಕೊಳ್ಳಲು ವಿವಿಧ ಆಯ್ಕೆಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ.
04:18 Object ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಆಕ್ಟಿವ್ ಒಬ್ಜೆಕ್ಟ್ ಅನ್ನು ಎಡಿಟ್ ಮಾಡಲು ವಿವಿಧ ಆಯ್ಕೆಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ.
04:35 3D ವ್ಯೂ ನ ಎಡಗಡೆಗೆ ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ಇದೆ.
04:41 3D ವ್ಯೂ ನಲ್ಲಿಯ ಆಕ್ಟಿವ್ ಒಬ್ಜೆಕ್ಟ್ ನ್ನು ಮಾರ್ಪಡಿಸಲು ಉಪಯೋಗಿಸುವ ವಿವಿಧ ಟೂಲ್ಸ್ ಗಳನ್ನು ಈ ಪ್ಯಾನೆಲ್ ನಲ್ಲಿ ಲಿಸ್ಟ್ ಮಾಡಿದೆ.
04:49 ಟೂಲ್ಸ್ ಭಿನ್ನವಾದ ವಿಭಾಗಗಳಲ್ಲಿ ಗುಂಪುಮಾಡಲ್ಪಟ್ಟಿವೆ.
04:52 ಟ್ರಾನ್ಸ್ಫಾರ್ಮ್, ಒಬ್ಜೆಕ್ಟ್, ಶೇಡಿಂಗ್, ಕೀಫ್ರೇಮ್ಸ್, ಮೋಶನ್ ಪಾಥ್ಸ್, ರಿಪೀಟ್, ಗ್ರೀಸ್ ಪೆನ್ಸಿಲ್.
05:13 ಉದಾಹರಣೆಗೆ, 3D ವ್ಯೂ ನಲ್ಲಿ ನಾವು ಲ್ಯಾಂಪ್ ನ್ನು ಸ್ಥಾನಾಂತರಿಸೋಣ.
05:19 ಲ್ಯಾಂಪ್ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ.
05:23 ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ಗೆ ಹೋಗಿ.
05:28 ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ನಲ್ಲಿ ಲ್ಯಾಂಪ್ ಗಾಗಿ ಆಯ್ಕೆಗಳನ್ನು ನೀವು ಕಾಣಬಹುದು.
05:35 Translate ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಮೌಸ್ ಅನ್ನು ಅತ್ತಿತ್ತ ಒಯ್ಯಿರಿ.
05:41 ಮೌಸ್ನ ಚಲನೆಯ ದಿಕ್ಕಿನಲ್ಲಿ ಲ್ಯಾಂಪ್ ಚಲಿಸುತ್ತದೆ.
05:46 ಟ್ರಾನ್ಸ್ಲೇಟ್ ಅನ್ನು ರದ್ದುಮಾಡಲು ಸ್ಕ್ರೀನ್ ಮೇಲೆ ರೈಟ್ ಕ್ಲಿಕ್ ಮಾಡಿ ಅಥವಾ ನಿಮ್ಮ ಕೀಬೋರ್ಡ್ ಮೇಲಿನ Esc ಒತ್ತಿ.
05:57 3D ವ್ಯೂ ನ ಬಲಬದಿಗೆ ಡಿಫಾಲ್ಟ್ ನಿಂದ ಅಡಗಿಕೊಂಡಿರುವ ಇನ್ನೊಂದು ಪ್ಯಾನೆಲ್ ಇದೆ.
06:04 ಈ ಅಡಗಿಕೊಂಡಿರುವ ಪ್ಯಾನೆಲ್ ಅನ್ನು ಓಪನ್ ಮಾಡಲು 3D ವ್ಯೂ ನ ಮೇಲ್ಗಡೆಯ ಬಲ ಮೂಲೆಯಲ್ಲಿರುವ ಪ್ಲಸ್ ಸೈನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
06:12 ಕೀಬೋರ್ಡ್ ಶಾರ್ಟಕಟ್ ಗಾಗಿ N ಒತ್ತಿರಿ.
06:17 ಈ ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್, ಪ್ರೊಪರ್ಟೀಸ್ ವಿಂಡೋದಲ್ಲಿಯ ಒಬ್ಜೆಕ್ಟ್ ಪ್ಯಾನೆಲ್ನ ಹಾಗೆಯೇ ಇದೆ.
06:25 ಒಬ್ಜೆಕ್ಟ್ ಪ್ಯಾನೆಲ್ಅನ್ನು ಮುಂದಿನ ಟ್ಯುಟೋರಿಯಲ್ಸ್ ಗಳಲ್ಲಿ ನಾವು ವಿವರವಾಗಿ ನೋಡುವೆವು.
06:30 ಸದ್ಯಕ್ಕೆ ನಾವು ಈ ಹೆಚ್ಚಿನ ಪ್ಯಾನೆಲ್ಅನ್ನು ಬಚ್ಚಿಡೋಣ ಹಾಗೂ ಡಿಫಾಲ್ಟ್ 3D ವ್ಯೂ ಗೆ ಹೋಗೋಣ.
06:37 ನಿಮ್ಮ ಮೌಸ್ ಕರ್ಸರ್ ಅನ್ನು ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್ನ ಎಡ ಅಂಚಿಗೆ ಸರಿಸಿ.
06:44 ಎರಡು ತಲೆ ಇರುವ ಒಂದು ಬಾಣ ಕಾಣಿಸಿಕೊಳ್ಳುವದು.
06:48 ಲೆಫ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಮೌಸ್ಅನ್ನು ಬಲಬದಿಗೆ ಎಳೆಯಿರಿ.
06:52 ಈ ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್ ಮತ್ತೆ ಬಚ್ಚಿಟ್ಟುಕೊಂಡಿತು.
06:59 ಈ ಪ್ಯಾನೆಲ್ ಅನ್ನು ಬಚ್ಚಿಡಲು ಅಥವಾ ತೆಗೆಯಲು ನೀವು ಕೀಬೋರ್ಡ್ ಶಾರ್ಟಕಟ್ N ಸಹ ಬಳಸಬಹುದು.
07:07 3D ವ್ಯೂನ ಬಗ್ಗೆ ಹೆಚ್ಚು ತಿಳಿಯಲು Types of Windows - 3D view (ಟೈಪ್ಸ್ ಆಫ್ ವಿಂಡೋಸ್-3D ವ್ಯೂ) ಎನ್ನುವ ಟ್ಯುಟೋರಿಯಲ್ ನೋಡಿ.
07:18 ಕೆಂಪು ಬಾಕ್ಸ್ ನಿಂದ ಆವರಿಸಲ್ಪಟ್ಟ ಕ್ಷೇತ್ರವು ಇನ್ಫೋ ಪ್ಯಾನೆಲ್ ಆಗಿದೆ.
07:23 ಇದು ನಮ್ಮ ಬ್ಲೆಂಡರ್ ಇಂಟರ್ಫೇಸ್ನ ಎಲ್ಲಕ್ಕಿಂತ ಮೇಲೆ ಇರುವ ಪ್ಯಾನೆಲ್. ಇನ್ಫೋ ಪ್ಯಾನೆಲ್ ಮೇನ್ ಮೆನ್ಯುವನ್ನು ಒಳಗೊಂಡಿದೆ.
07:33 File ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
07:36 ಈ ಮೆನ್ಯು ಕ್ರಿಯೇಟಿಂಗ್ ಎ ನ್ಯೂ ಫೈಲ್, ಒಪನಿಂಗ್ an ಎಕ್ಸಿಸ್ಟಿಂಗ್ ಫೈಲ್, ಸೇವಿಂಗ್ ದ ಫೈಲ್, ಯೂಸರ್ ಪ್ರೆಫರೆನ್ಸಸ್, ಇಂಪೋರ್ಟಿಂಗ್ ಆರ್ ಎಕ್ಸ್ಪೋರ್ಟಿಂಗ್ ಅ ಫೈಲ್ ಮುಂತಾದ ಫೈಲ್ ಆಪ್ಶನ್ಸ್ ಒಳಗೊಂಡಿದೆ.
07:57 Add ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
08:00 ಒಬ್ಜೆಕ್ಟ್ ರಿಪೊಜಿಟರಿ ಇಲ್ಲಿದೆ.
08:04 ಈ ಮೆನ್ಯು ಉಪಯೋಗಿಸಿ ನಾವು ಹೊಸ ಒಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಬಹುದು.
08:10 ಕೀಬೋರ್ಡ್ ಶಾರ್ಟಕಟ್ ಗಾಗಿ Shift & A ಒತ್ತಿ.
08:18 ಈಗ 3D ವ್ಯೂಗೆ ಒಂದು ಪ್ಲೇನ್ add ಮಾಡೋಣ.
08:23 3D ಕರ್ಸರ್ ಅನ್ನು ಚಲಿಸಲು ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ
08:29 ನಾನು ಈ ಸ್ಥಳವನ್ನು ಆರಿಸಿಕೊಳ್ಳುತ್ತಿದ್ದೇನೆ.
08:34 ADD ಮೆನ್ಯು ಮೇಲೆ ತರಲು Shift & A ಒತ್ತಿ.
08:39 Mesh. Plane ಮೇಲೆ ಲೆಫ್ಟ್ ಕ್ಲಿಕ್ ಮಾಡಿ.
08:44 3D ಕರ್ಸರ್ ಇರುವಲ್ಲಿ ಒಂದು ಹೊಸ ಪ್ಲೇನ್ 3D ವ್ಯೂಗೆ ಸೇರಿಸಲ್ಪಟ್ಟಿತು.
08:51 3D ಕರ್ಸರ್ ಬಗ್ಗೆ ತಿಳಿಯಲು ದಯವಿಟ್ಟು Navigation – 3D cursor (ನೇವಿಗೇಶನ್ - 3D ಕರ್ಸರ್) ಎನ್ನುವ ಟ್ಯುಟೋರಿಯಲ್ ನೋಡಿ.
09:00 ಹೀಗೆಯೇ ನೀವು ಇನ್ನೂ ಹೆಚ್ಚು ಹೊಸ ಒಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಲು ಪ್ರಯತ್ನಿಸಬಹುದು.
09:13 ಈಗ ನಾವು ಇನ್ಫೋ ಪ್ಯಾನೆಲ್ ಗೆ ಮರಳಿ ಹೋಗೋಣ.
09:16 ರೆಂಡರ್ ಮೆನ್ಯು ಓಪನ್ ಮಾಡಲು Render ಮೇಲೆ ಲೆಫ್ಟ್ ಕ್ಲಿಕ್ ಮಾಡಿ
09:21 Render ನಲ್ಲಿ ರೆಂಡರ್ ಇಮೇಜ್, ರೆಂಡರ್ ಅನಿಮೇಶನ್, ಶೋ ಆರ್ ಹೈಡ್ ರೆಂಡರ್ ವ್ಯೂ ಮುಂತಾದ ರೆಂಡರ್ ಆಪ್ಶನ್ ಗಳಿವೆ.
09:34 ಮುಂದಿನ ಟ್ಯುಟೋರಿಯಲ್ ಗಳು ರೆಂಡರ್ ಸೆಟ್ಟಿಂಗ್ಸ್ ಅನ್ನು ವಿವರವಾಗಿ ಒಳಗೊಂಡಿವೆ.
09:40 ಈ ಇನ್ಫೋ ಪ್ಯಾನೆಲ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Type of Windows - File Browser and Info Panel (ಟೈಪ್ ಆಫ್ ವಿಂಡೋಸ್ – ಫೈಲ್ ಬ್ರೌಸರ್ ಆಂಡ್ ಇನ್ಫೋ ಪ್ಯಾನೆಲ್) ಎನ್ನುವ ಟ್ಯುಟೋರಿಯಲ್ ನೋಡಿರಿ.
09:55 ಕೆಂಪು ಬಾಕ್ಸ್ನ ಒಳಗಿನ ಕ್ಷೇತ್ರವು ಔಟ್ಲೈನರ್ ಪ್ಯಾನೆಲ್ ಆಗಿದೆ.
10:00 ಇದು ಬ್ಲೆಂಡರ್ ಇಂಟರ್ಫೇಸ್ ನ ಮೇಲ್ಗಡೆಯ ಬಲ ಮೂಲೆಯಲ್ಲಿ ಇರುತ್ತದೆ.
10:07 3D ವ್ಯೂನಲ್ಲಿ ಇರುವ ಎಲ್ಲ ಒಬ್ಜೆಕ್ಟ್ಗಳ ಲಿಸ್ಟ್ ನ್ನು ಔಟ್ಲೈನರ್ ನೀಡುತ್ತದೆ.
10:14 ಔಟ್ಲೈನರ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows – Outliner (ಟೈಪ್ಸ್ ಆಫ್ ವಿಂಡೋಸ್ - ಔಟ್ಲೈನರ್) ಎನ್ನುವ ಟ್ಯುಟೋರಿಯಲ್ ನೋಡಿರಿ.
10:26 ಕೆಂಪು ಬಾಕ್ಸ್ನ ಒಳಗಿನ ಕ್ಷೇತ್ರವು ಪ್ರಾಪರ್ಟೀಸ್ ವಿಂಡೋ ಆಗಿದೆ.
10:31 ಈ ವಿಂಡೋ ದೊಡ್ಡ ಸಂಖ್ಯೆಯ ಟೂಲ್ಸ್ ಮತ್ತು ಸೆಟಿಂಗ್ಸ್ ಹೊಂದಿರುವ ಪ್ಯಾನೆಲ್ಗಳ ಒಂದು ಶ್ರೇಣಿಯನ್ನೇ ಒಳಗೊಂಡಿದೆ.
10:38 ಬ್ಲೆಂಡರ್ ನಲ್ಲಿ ಕೆಲಸ ಮಾಡುವಾಗ ನಾವು ಈ ಪ್ಯಾನೆಲ್ ಗಳನ್ನು ಅನೇಕ ಬಾರಿ ಉಪಯೋಗಿಸುವೆವು.
10:44 ಪ್ರಾಪರ್ಟೀಸ್ ವಿಂಡೋ, ಇದು ಬ್ಲೆಂಡರ್ ಇಂಟರ್ಫೇಸ್ ನ ಕೆಳಗಡೆಯ ಬಲ ಮೂಲೆಯಲ್ಲಿ, ಔಟ್ಲೈನರ್ ವಿಂಡೋದ ಕೆಳಗೆ ಇದೆ.
10:53 ಪ್ರಾಪರ್ಟೀಸ್ ವಿಂಡೋ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows - Properties Part 1 and 2 (ಟೈಪ್ಸ್ ಆಫ್ ವಿಂಡೋಸ್ – ಪ್ರಾಪರ್ಟೀಸ್ ಪಾರ್ಟ್ 1 ಆಂಡ್ 2 ) ಎನ್ನುವ ಟ್ಯುಟೋರಿಯಲ್ ನೋಡಿರಿ.
11:06 ಇದೇ ಟೈಂಲೈನ್.
11:10 ಇದು 3D ವ್ಯೂ ನ ಕೆಳಗೆ ಇದೆ.
11:15 ಇಲ್ಲಿ ನಾವು ಅನಿಮೇಶನ್ ಗಾಗಿ ಫ್ರೇಮ್ ರೇಂಜ್ ನೋಡಬಹುದು.
11:21 ಸದ್ಯಕ್ಕೆ ಯಾವ ಫ್ರೇಮ್ ಮೇಲೆ ನೀವು ಕೆಲಸ ಮಾಡುತ್ತಿರುವಿರಿ ಎಂದು ಈ ಹಸಿರು ಲಂಬ ರೇಖೆಯು ನಿಮಗೆ ಹೇಳುತ್ತದೆ.
11:28 ನೀವು ಇದನ್ನು ಫ್ರೇಮ್ ರೇಂಜ್ನ ಉದ್ದಕ್ಕೂ ಒಯ್ಯಬಹುದು.
11:33 ಲೆಫ್ಟ್ ಕ್ಲಿಕ್ ಮಾಡಿ ಮತ್ತು ಹಸಿರು ಗೆರೆಯನ್ನು ಹಿಡಿದುಕೊಳ್ಳಿ.
11:36 ಈಗ ನಿಮ್ಮ ಮೌಸ್ಅನ್ನು ಒಯ್ಯಿರಿ.
11:43 ಫ್ರೇಮ್ ಅನ್ನು ದೃಢೀಕರಿಸಲು ಲೆಫ್ಟ್ ಕ್ಲಿಕ್ ನ್ನು ಬಿಡಿ.
11:50 ಸ್ಟಾರ್ಟ್ 1 ನಮ್ಮ ಅನಿಮೇಶನ್ ರೇಂಜ್ನ ಆರಂಭದ ಫ್ರೇಮ್ ಅನ್ನು ಪ್ರತಿನಿಧಿಸುತ್ತದೆ.
11:58 ಎಂಡ್ 250 ನಮ್ಮ ಅನಿಮೇಶನ್ ರೇಂಜ್ನ ಕೊನೆಯ ಫ್ರೇಮ್ ಅನ್ನು ಪ್ರತಿನಿಧಿಸುತ್ತದೆ.
12:10 ಇವು ನಮ್ಮ ಅನಿಮೇಶನ್ ಗಾಗಿ ಇರುವ ಪ್ಲೇಬ್ಯಾಕ್ ಆಯ್ಕೆಗಳು.
12:16 ಟೈಂಲೈನ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows –Timeline (ಟೈಪ್ಸ್ ಆಫ್ ವಿಂಡೋಸ್ - ಟೈಂಲೈನ್) ಈ ಟ್ಯುಟೋರಿಯಲ್ ನೋಡಿರಿ.
12:25 ಇದು ಬ್ಲೆಂಡರ್ ಇಂಟರ್ಫೇಸ್ ನ ಒಂದು ಸಂಕ್ಷಿಪ್ತ ಅವಲೋಕನ.
12:30 ಡಿಫಾಲ್ಟ್ ನಿಂದ ಬ್ಲೆಂಡರ್ನ ವರ್ಕಸ್ಪೇಸ್ ನಲ್ಲಿರುವ ಈ ಎಲ್ಲಾ ವಿಂಡೋಗಳನ್ನು ಹೊರತುಪಡಿಸಿ
12:35 ಯಾವುದೇ ಹಂತದಲ್ಲಿ ಮೆನ್ಯುನಿಂದ ಆಯ್ದುಕೊಳ್ಳಬಹುದಾದ ಬೇರೆ ವಿಂಡೋಗಳು ಸಹ ಇವೆ.
12:42 ಮುಂದಿನ ಟ್ಯುಟೋರಿಯಲ್ಸ್ ಗಳಲ್ಲಿ ಈ ಎಲ್ಲ ವಿಂಡೋಗಳ ಬಗ್ಗೆ ವಿಸ್ತಾರವಾದ ವಿವರಣೆಯನ್ನು ಒದಗಿಸಲಾಗಿದೆ.
12:51 ಈಗ 3D ವ್ಯೂ ನಲ್ಲಿರುವ ಪ್ರತಿಯೊಂದು ಒಬ್ಜೆಕ್ಟ್ ನ್ನು ಆಯ್ಕೆಮಾಡಲು ಪ್ರಯತ್ನಿಸಿ.
12:57 3D ಟ್ರಾನ್ಸ್ಫಾರ್ಮ್ ಮ್ಯಾನಿಪ್ಯುಲೇಟರ್ ಉಪಯೋಗಿಸಿ ಕ್ಯೂಬ್ ನ್ನು X,Y ಮತ್ತು Z ದಿಕ್ಕುಗಳಲ್ಲಿ ಒಯ್ಯಿರಿ.
13:06 ವ್ಯೂ ಟ್ಯಾಬ್ ನ್ನು ಪರಿಶೋಧಿಸಿ; ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ನಲ್ಲಿಯ Translate ನ್ನು ಬಳಸಿ ಕ್ಯಾಮೆರಾವನ್ನು 3D ವ್ಯೂನಲ್ಲಿ ತಿರುಗಿಸಿ.
13:20 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
13:28 ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
13:33 oscar.iitb.ac.in, ಮತ್ತು spoken-tutorial.org/NMEICT-Intro.
13:47 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
13:49 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
13:53 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
13:57 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಇಲ್ಲಿ ಸಂಪರ್ಕಿಸಿ.
14:06 ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal