Blender/C2/Camera-View-Settings/Kannada

From Script | Spoken-Tutorial
Revision as of 16:55, 8 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:07 ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ.
00:11 ಈ ಟ್ಯುಟೋರಿಯಲ್ ನೇವಿಗೇಶನ್ – ಕ್ಯಾಮೆರಾ ವ್ಯೂ ಕುರಿತು ಇದೆ.
00:16 ನಾವು ಬ್ಲೆಂಡರ್ 2.59 ರಲ್ಲಿ ಕ್ಯಾಮೆರಾ ನೇವಿಗೇಟ್ ಹೇಗೆ ಮಾಡುವದು ಎಂದು ಕಲಿಯುವೆವು.
00:21 ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
00:30 ಈ ಟ್ಯುಟೋರಿಯಲ್ ನೋಡಿದ ನಂತರ ನಾವು
00:32 ಹೊಸ ಕ್ಯಾಮೆರಾ ವ್ಯೂ ಪಡೆಯಲು ಕ್ಯಾಮರಾದ ಸ್ಥಾನವನ್ನು ಹೇಗೆ ಬದಲಾಯಿಸುವುದು;
00:38 ಕ್ಯಾಮೆರಾ ವ್ಯೂ ಅನ್ನು ರೋಲ್, ಪ್ಯಾನ್, ಡಾಲಿ ಮತ್ತು ಟ್ರ್ಯಾಕ್ ಹೇಗೆ ಮಾಡುವದು;
00:43 ಮತ್ತು ಫ್ಲೈ ಮೋಡ್ ಬಳಸಿ ಹೊಸ ಕ್ಯಾಮೆರಾ ವ್ಯೂ ಹೇಗೆ ಆಯ್ಕೆಮಾಡುವದು ಎಂದು ಕಲಿಯಲಿದ್ದೇವೆ.
00:50 ಬ್ಲೆಂಡರ್ ನ್ನು ನಿಮ್ಮ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವದೆಂದು ನಿಮಗೆ ಈಗಾಗಲೆ ತಿಳಿದಿದೆ ಎಂದು ಭಾವಿಸುತ್ತೇನೆ.
00:54 ತಿಳಿದಿಲ್ಲವಾದರೆ, ಬ್ಲೆಂಡರ್ ಇನ್ಸ್ಟಾಲ್ ಮಾಡುವ ಬಗ್ಗೆ ಇರುವ ನಮ್ಮ ಮೊದಲಿನ ಟ್ಯುಟೋರಿಯಲ್ ಅನ್ನು ನೋಡಿರಿ.
01:02 ಬ್ಲೆಂಡರ್ ಓಪನ್ ಮಾಡಿದಾಗ ಡಿಫಾಲ್ಟ್ ಆಗಿ 3D ವ್ಯೂ ಯೂಸರ್ ಪರ್ಸ್ಪೆಕ್ಟಿವ್ ವ್ಯೂನಲ್ಲಿ ಇರುತ್ತದೆ.
01:11 ಈಗ ನಾವು ಕ್ಯಾಮೆರಾ ವ್ಯೂ ಗೆ ಬದಲಾಯಿಸೋಣ.
01:15 3D ಪ್ಯಾನೆಲ್ ನ ಕೆಳಗಡೆಯ ಎಡ ಮೂಲೆಯಲ್ಲಿ ಇರುವ View ಟ್ಯಾಬ್ ಗೆ ಹೋಗಿ.
01:21 ಮೆನ್ಯುದಲ್ಲಿನ Camera ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
01:25 ಕೀಬೋರ್ಡ್ ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ 0 ಒತ್ತಿರಿ.
01:29 ನೀವು ಲ್ಯಾಪ್-ಟಾಪ್ ಬಳಸುತ್ತಿದ್ದರೆ ನಿಮ್ಮ ನಂಬರ್ ಕೀ ಗಳನ್ನು ನಮ್-ಪ್ಯಾಡ್ ಹಾಗೆ ನೀವು ಅನುಕರಿಸುವದು ಅವಶ್ಯವಿದೆ.
01:36 ನಮ್-ಪ್ಯಾಡ್ ಅನುಕರಿಸುವದು ಹೇಗೆ ಎಂದು ತಿಳಿಯಲು User Preferences(ಯೂಸರ್ ಪ್ರಿಫರೆನ್ಸಿಸ್) ಎನ್ನುವ ಟ್ಯುಟೋರಿಯಲ್ ನೋಡಿರಿ.
01:45 ಇದು ಕ್ಯಾಮೆರಾ ವ್ಯೂ ಆಗಿದೆ.
01:49 ಈ ಡಾಟೆಡ್ ಬಾಕ್ಸ್ ಆಕ್ಟಿವ್ ಕ್ಯಾಮೆರಾದ ವ್ಯೂ ನ ಕ್ಷೇತ್ರ ಆಗಿದೆ.
01:55 ಈ ಡಾಟೆಡ್ ಬಾಕ್ಸ್ ನಲ್ಲಿರುವ ಎಲ್ಲ ಒಬ್ಜೆಕ್ಟ್ ಗಳು ರೆಂಡರ್ ಮಾಡಲ್ಪಡುತ್ತವೆ.
02:01 ಮುಂದಿನ ಟ್ಯುಟೋರಿಯಲ್ ರೆಂಡರ್ ಸೆಟ್ಟಿಂಗ್ಸ್ ನ್ನು ಒಳಗೊಂಡಿದೆ.
02:05 ಆಕ್ಟಿವ್ ಕ್ಯಾಮೆರಾದ ಸ್ಥಾನವನ್ನು ಈಗಿನ ವ್ಯೂ ಪಾಯಿಂಟ್ ಗೆ ಹೊಂದಿಸಲು ಬ್ಲೆಂಡರ್ ನಿಮಗೆ ಅನುಮತಿಸುತ್ತದೆ.
02:11 ಇದನ್ನು ಹೇಗೆ ಮಾಡುವುದೆಂದು ನಾವು ನೋಡೋಣ.
02:15 ಪರ್ಸ್ಪೆಕ್ಟಿವ್ ವ್ಯೂಗೆ ಮರಳಿ ಹೋಗಲು ನಮ್-ಪ್ಯಾಡ್ ಝೀರೋ ಒತ್ತಿ.
02:20 ಈ ಶಾರ್ಟ್ಕಟ್ ‘ನಮ್-ಪ್ಯಾಡ್ ಝೀರೋ’ ಕ್ಯಾಮೆರಾ ವ್ಯೂ ಗಾಗಿ ಟಾಗಲ್ ಸ್ವಿಚ್ ಆಗಿರುವದನ್ನು ನೀವು ನೊಡುತ್ತಿರುವಿರಿ.
02:26 ನಿಮ್ಮ ಕ್ಯಾಮೆರಾವನ್ನು ನಿಮಗೆ ಎಲ್ಲಿ ಇಡಬೇಕಾಗಿದೆಯೋ ಆ ಸ್ಥಳಕ್ಕೆ ವ್ಯೂ ಅನ್ನು ರೊಟೇಟ್ ಮಾಡಲು ಮೌಸ್ನ ವ್ಹೀಲ್ ಅಥವಾ ಮೌಸ್ ನ ಮಧ್ಯದ ಬಟನ್ ಹಿಡಿದುಕೊಂಡು ಮೌಸ್ ಅನ್ನು ಅತ್ತಿತ್ತ ಕೊಂಡೊಯ್ಯಿರಿ.
02:36 ನಾನು ಈ ಸ್ಥಳವನ್ನು ಆಯ್ದುಕೊಂಡಿದ್ದೇನೆ.
02:40 ಕಂಟ್ರೋಲ್, Alt & ನಮ್-ಪ್ಯಾಡ್ ಝೀರೋ ಒತ್ತಿರಿ.
02:46 ಕ್ಯಾಮೆರಾ ಹೊಸ ಸ್ಥಾನಕ್ಕೆ ಚಲಿಸುತ್ತದೆ.
02:49 ಇದೇ ಸಮಯಯಲ್ಲಿ 3D ವ್ಯೂ, ಕ್ಯಾಮೆರಾ ವ್ಯೂಗೆ ಸ್ವಿಚ್ ಆಗುತ್ತದೆ.
02:54 ಕ್ಯಾಮೆರಾದ ಮೇಲೆ ರೋಲಿಂಗ್, ಪ್ಯಾನಿಂಗ್, ಟ್ರ್ಯಾಕಿಂಗ್ ಮುಂತಾದ ನೇವಿಗೇಶನ್ ನ ಕ್ರಿಯೆಗಳನ್ನು ಮಾಡಲು ಸಹ ಬ್ಲೆಂಡರ್ ನಿಮಗೆ ಅನುಮತಿಸುತ್ತದೆ.
03:03 ಇವುಗಳನ್ನು ಈಗ ನಾವು ನೋಡೋಣ.
03:05 ಕ್ಯಾಮೆರಾ ಆಯ್ಕೆಮಾಡಲು ಡಾಟೆಡ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡುತ್ತಿದ್ದೇನೆ.
03:10 ಇನ್ನು ಮುಂದೆ ನೀವು ಕ್ಯಾಮೆರಾವನ್ನು ಬೇರೆ ಯಾವುದೇ ಒಬ್ಜೆಕ್ಟ್ ಗೆ ಮಾಡಿದ ಹಾಗೆ ಮ್ಯಾನಿಪ್ಯುಲೇಟ್ ಮಾಡಬಹುದು.
03:17 ಈ ಕ್ರಿಯೆಗಳನ್ನು ನಿರ್ವಹಿಸಲು ನೀವು ಕ್ಯಾಮೆರಾ ವ್ಯೂ ದಲ್ಲಿ ಇರುವದು ಅವಶ್ಯ ಎನ್ನುವದನ್ನು ನೆನಪಿನಲ್ಲಿಡಿ.
03:22 ನಾವು ನೋಡುವ ಮೊದಲನೆಯ ಕ್ರಿಯೆ ಕ್ಯಾಮೆರಾ ವ್ಯೂಅನ್ನು ರೋಲ್ ಮಾಡುವದು.
03:26 ಒಬ್ಜೆಕ್ಟ್ ರೊಟೇಶನ್ ಮೋಡ್ ನಲ್ಲಿ ಹೋಗಲು ನಿಮ್ಮ ಕೀಬೋರ್ಡ್ ನಲ್ಲಿ R ಒತ್ತಿರಿ.
03:32 ಈಗ ನಿಮ್ಮ ಮೌಸ್ ಅನ್ನು ಎಡದಿಂದ ಬಲಕ್ಕೆ ಮತ್ತು ಮೇಲೆ ಹಾಗೂ ಕೆಳಗೆ ಒಯ್ಯಿರಿ.
03:42 ಡಿಫಾಲ್ಟ್ ನಿಂದ ಇದು ಕ್ಯಾಮೆರಾವನ್ನು ಅದರ ಲೋಕಲ್ z-ಆಕ್ಸಿಸ್ ನಲ್ಲಿ ತಿರುಗಿಸುತ್ತದೆ ಅಂದರೆ ಕ್ಯಾಮೆರಾ ವ್ಯೂನಲ್ಲಿ ಒಳಗೆ ಹೋಗಿ ಅಥವಾ ಹೊರಗೆ ಬರುವ ಆಕ್ಸಿಸ್ ನ ಸುತ್ತಮುತ್ತ.
03:53 ಈ ಆಕ್ಶನ್ ನ್ನು ರದ್ದುಗೊಳಿಸಲು ಸ್ಕ್ರೀನ್ ಮೇಲೆ ರೈಟ್ ಕ್ಲಿಕ್ ಮಾಡಿರಿ ಅಥವಾ ಕೀಬೋರ್ಡ್ ಮೇಲಿನ Esc ಒತ್ತಿರಿ.
03:58 ಇದು ನಿಮ್ಮನ್ನು ಮರಳಿ ನಿಮ್ಮ ಹಿಂದಿನ ಕ್ಯಾಮೆರಾ ವ್ಯೂಗೆ ಕರೆದೊಯ್ಯುತ್ತದೆ.
04:04 ಈಗ, ನಾವು ನೋಡುವ ಮುಂದಿನ ಕ್ರಿಯೆ ಕ್ಯಾಮೆರಾ ವ್ಯೂ ಅನ್ನು ಪ್ಯಾನಿಂಗ್ ಮಾಡುವದು.
04:09 ಪ್ಯಾನಿಂಗ್ 2 ದಿಕ್ಕುಗಳಲ್ಲಿ ಇರುತ್ತದೆ - ಎಡದಿಂದ ಬಲಕ್ಕೆ ಅಥವಾ ಮೇಲೆ ಹಾಗೂ ಕೆಳಗೆ.
04:15 ಒಬ್ಜೆಕ್ಟ್ ರೊಟೇಶನ್ ಮೋಡ್ ನಲ್ಲಿ ಹೋಗಲು R ಒತ್ತಿರಿ. X ಅನ್ನು ಎರಡು ಸಲ ಒತ್ತಿರಿ.
04:22 ಮೊದಲನೆಯ X ರೊಟೇಶನ್ ಅನ್ನು ಗ್ಲೋಬಲ್ X ಆಕ್ಸಿಸ್ ಗೆ ಲಾಕ್ ಮಾಡುತ್ತದೆ.
04:26 ಎರಡನೆಯ X ರೊಟೇಶನ್ ಅನ್ನು ಲೋಕಲ್ X ಆಕ್ಸಿಸ್ ಗೆ ಲಾಕ್ ಮಾಡುತ್ತದೆ.
04:31 ಗ್ಲೋಬಲ್ ಮತ್ತು ಲೋಕಲ್ ಟ್ರಾನ್ಸ್ಫಾರ್ಮ್ ಆಕ್ಸಿಸ್ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ಚರ್ಚಿಸುವೆವು. </p>
04:38 ಈಗ ಮೌಸ್ ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ.
04:42 ಕ್ಯಾಮೆರಾ ವ್ಯೂ ಮೇಲೆ ಹಾಗೂ ಕೆಳಗೆ ಪ್ಯಾನ್ ಆಗುತ್ತದೆ.
04:47 ಈಗ, Y ಅನ್ನು ಎರಡು ಸಲ ಒತ್ತಿರಿ.
04:51 ಮೊದಲನೆಯ y ರೊಟೇಶನ್ ಅನ್ನು ಗ್ಲೋಬಲ್ y ಆಕ್ಸಿಸ್ ಗೆ ಲಾಕ್ ಮಾಡುತ್ತದೆ.
04:56 ಎರಡನೆಯ y ರೊಟೇಶನ್ ಅನ್ನು ಲೋಕಲ್ y ಆಕ್ಸಿಸ್ ಗೆ ಲಾಕ್ ಮಾಡುತ್ತದೆ.
05:00 ಈಗ ಮೌಸ್ಅನ್ನು ಎಡದಿಂದ ಬಲಕ್ಕೆ ಚಲಿಸಿ.
05:05 ಈ ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಪ್ಯಾನ್ ಆಗುತ್ತದೆ.
05:12 ಕ್ಯಾಮೆರಾ ವ್ಯೂ ಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ.
05:16 ನಂತರ ನಾವು ಕ್ಯಾಮೆರಾವನ್ನು ಡಾಲಿ ಮಾಡೋಣ. ಇದನ್ನು ಮಾಡಲು ಎರಡು ವಿಧಾನಗಳಿವೆ.
05:21 ಮೊದಲನೆಯದು, ಕ್ಯಾಮೆರಾ ಹಿಡಿದುಕೊಳ್ಳಲು G ಒತ್ತಿರಿ.
05:25 ಮೌಸ್ನ ವ್ಹೀಲ್ ಅಥವಾ ಮೌಸ್ ನ ಮಧ್ಯದ ಬಟನ್ ಹಿಡಿದುಕೊಳ್ಳಿ ಮತ್ತು ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ.
05:43 ಎರಡನೆಯ ವಿಧಾನ, ನೀವು ಕ್ಯಾಮೆರಾವನ್ನು ಅದರ ಲೋಕಲ್ z ಅಕ್ಸಿಸ್ ನ ಉದ್ದಕ್ಕೂ ಚಲಿಸಬಹುದು. G ಒತ್ತಿ.
05:53 ನಂತರ ಕ್ಯಾಮೆರಾವನ್ನು ಲೋಕಲ್ z ಅಕ್ಸಿಸ್ ಗೆ ಲಾಕ್ ಮಾಡಲು Z ಅನ್ನು ಎರಡು ಸಲ ಒತ್ತಿ.
05:59 ಈಗ ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯುತ್ತಿದ್ದರೆ ಇದೇ ಪರಿಣಾಮವನ್ನು ಕೊಡುವದು.
06:11 ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ.
06:15 ಕ್ಯಾಮೆರಾ ವ್ಯೂ ಅನ್ನು ಎಡದಿಂದ ಬಲಕ್ಕೆ ಅಥವಾ ಮೇಲೆ ಹಾಗೂ ಕೆಳಗೆ ಟ್ರ್ಯಾಕಿಂಗ್ ಮಾಡುವದು ಅದನ್ನು ಲೋಕಲ್ X ಅಥವಾ Y ಆಕ್ಸಿಸ್ ಗಳ ಉದ್ದಕ್ಕೂ ಚಲಿಸುವದನ್ನು ಒಳಗೊಂಡಿದೆ.
06:24 G ಒತ್ತಿರಿ. X ಎರಡು ಸಲ ಒತ್ತಿ ಮತ್ತು ಮೌಸ್ ನ್ನು ಎಡದಿಂದ ಬಲಕ್ಕೆ ಚಲಿಸಿ.
06:35 ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಟ್ರ್ಯಾಕ್ ಮಾಡುತ್ತದೆ.
06:42 ಈಗ Y ಅನ್ನು ಎರಡು ಸಲ ಒತ್ತಿ ಮತ್ತು ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ.
06:48 ಕ್ಯಾಮೆರಾ ವ್ಯೂ ಮೇಲೆ ಹಾಗೂ ಕೆಳಗೆ ಟ್ರ್ಯಾಕ್ ಆಗುತ್ತದೆ.
06:53 ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ.
06:59 ಬ್ಲೆಂಡರ್ ಕ್ಯಾಮೆರಾಗಾಗಿ ಒಂದು ಫ್ಲೈ ಮೋಡ್ ಸಹ ಒದಗಿಸುತ್ತದೆ.
07:05 ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ.
07:10 ಕ್ಯಾಮೆರಾ ವ್ಯೂ ಅನ್ನು ಈಗ ನೀವು ಮೂರು ವಿಧದಲ್ಲಿ ಚಾಲಿಸಬಹುದು.
07:14 ಮೊದಲನೆಯದಾಗಿ, ಕೀಬೋರ್ಡ್ ಮೇಲಿನ ಶಾರ್ಟ್ಕಟ್ ಕೀ ಗಳನ್ನು ಬಳಸುವದು.
07:19 ಝೂಮ್ ಇನ್ ಮಾಡಲು ಕೀಬೋರ್ಡ್ ಮೇಲಿನ W ಒತ್ತಿರಿ.
07:30 ಝೂಮ್ ಔಟ್ ಮಾಡಲು S ಒತ್ತಿರಿ.
07:40 ಎಡಕ್ಕೆ ಸರಿಸಲು A ಒತ್ತಿರಿ.
07:51 ಬಲಕ್ಕೆ ಸರಿಸಲು D ಒತ್ತಿರಿ.
08:02 ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ.
08:05 ಎರಡನೆಯದಾಗಿ, ಕ್ಯಾಮೆರಾ ವ್ಯೂನಲ್ಲಿ ಝೂಮ್ ಇನ್ ಹಾಗೂ ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ಅನ್ನು ಬಳಸುವದು ಅಥವಾ ಫ್ಲೈ ಮೋಡ್ ನಲ್ಲಿ ತಿರುಗಿಸುವದು.
08:13 ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ.
08:18 ಝೂಮ್ ಇನ್ ಮಾಡಲು ಮೌಸ್ನ ವ್ಹೀಲ್ಅನ್ನು ಮೇಲ್ಗಡೆಗೆ ತಿರುಗಿಸಿರಿ.
08:25 ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ + ಒತ್ತಿರಿ.
08:30 ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ಅನ್ನು ಕೆಳಗಡೆಗೆ ತಿರುಗಿಸಿರಿ.
08:38 ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ - ಒತ್ತಿರಿ.
08:43 ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ.
08:49 ಕೊನೆಯದಾಗಿ, ಕ್ಯಾಮೆರಾ ವ್ಯೂ ಅನ್ನು ಎಡದಿಂದ ಬಲಕ್ಕೆ ಹಾಗೂ ಹಿಂದಕ್ಕೆ ತಿರುಗಿಸಲು ಮೌಸ್ನ ವ್ಹೀಲ್ಅನ್ನು ಬಳಸುವದು ಅಥವಾ ಫ್ಲೈ ಮೋಡ್ ನಲ್ಲಿ ತಿರುಗಿಸುವದು.
08:59 ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ.
09:04 D ಒತ್ತಿ ಮತ್ತು ಮೌಸ್ ನ ವ್ಹೀಲ್ ಅನ್ನು ಮೇಲೆ ಹಾಗೂ ಕೆಳಗೆ ತಿರುಗಿಸಿರಿ.
09:13 ಈ ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಚಲಿಸುತ್ತದೆ.
09:28 ಕ್ಯಾಮೆರಾ ವ್ಯೂ ಲಾಕ್ ಮಾಡಲು ಸ್ಕ್ರೀನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ.
09:33 ಈಗ, ಇದು ನಿಮ್ಮ ಹೊಸ ಕ್ಯಾಮೆರಾ-ವ್ಯೂ ಆಗಿದೆ.
09:38 ಇಲ್ಲಿಗೆ ನಮ್ಮ ನೇವಿಗೇಶನ್ – ಕ್ಯಾಮೆರಾ ವ್ಯೂ ಬಗ್ಗೆ ಇರುವ ಟ್ಯುಟೋರಿಯಲ್ ಮುಗಿಯಿತು.
09:43 ಈಗ ಹೊಸ ಫೈಲ್ ನಲ್ಲಿ,
09:45 ಕ್ಯಾಮೆರಾದ ಸ್ಥಳ ಹಾಗೂ ಕ್ಯಾಮೆರಾ ವ್ಯೂ ಬದಲಿಸಿ ನಿಮ್ಮ ಕ್ಯಾಮೆರಾವನ್ನು ರೋಲ್, ಪ್ಯಾನ್, ಡಾಲಿ ಮತ್ತು ಟ್ರ್ಯಾಕ್ ಮಾಡಿರಿ.
09:54 ಮತ್ತು ಹೊಸ ಕ್ಯಾಮೆರಾ ವ್ಯೂ ಆಯ್ಕೆಮಾಡಲು ಫ್ಲೈ ಮೋಡ್ ಬಳಸಿರಿ.
10:00 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ.
10:08 ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.

oscar.iitb.ac.in ಮತ್ತು spoken-tutorial.org/NMEICT-Intro

10:27 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
10:30 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
10:33 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:38 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:45 ಧನ್ಯವಾದಗಳು.
10:47 ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

Vasudeva ahitanal