Blender/C2/Camera-View-Settings/Kannada
From Script | Spoken-Tutorial
Revision as of 16:55, 8 October 2014 by Vasudeva ahitanal (Talk | contribs)
Time | Narration |
00:07 | ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ. |
00:11 | ಈ ಟ್ಯುಟೋರಿಯಲ್ ನೇವಿಗೇಶನ್ – ಕ್ಯಾಮೆರಾ ವ್ಯೂ ಕುರಿತು ಇದೆ. |
00:16 | ನಾವು ಬ್ಲೆಂಡರ್ 2.59 ರಲ್ಲಿ ಕ್ಯಾಮೆರಾ ನೇವಿಗೇಟ್ ಹೇಗೆ ಮಾಡುವದು ಎಂದು ಕಲಿಯುವೆವು. |
00:21 | ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
00:30 | ಈ ಟ್ಯುಟೋರಿಯಲ್ ನೋಡಿದ ನಂತರ ನಾವು |
00:32 | ಹೊಸ ಕ್ಯಾಮೆರಾ ವ್ಯೂ ಪಡೆಯಲು ಕ್ಯಾಮರಾದ ಸ್ಥಾನವನ್ನು ಹೇಗೆ ಬದಲಾಯಿಸುವುದು; |
00:38 | ಕ್ಯಾಮೆರಾ ವ್ಯೂ ಅನ್ನು ರೋಲ್, ಪ್ಯಾನ್, ಡಾಲಿ ಮತ್ತು ಟ್ರ್ಯಾಕ್ ಹೇಗೆ ಮಾಡುವದು; |
00:43 | ಮತ್ತು ಫ್ಲೈ ಮೋಡ್ ಬಳಸಿ ಹೊಸ ಕ್ಯಾಮೆರಾ ವ್ಯೂ ಹೇಗೆ ಆಯ್ಕೆಮಾಡುವದು ಎಂದು ಕಲಿಯಲಿದ್ದೇವೆ. |
00:50 | ಬ್ಲೆಂಡರ್ ನ್ನು ನಿಮ್ಮ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವದೆಂದು ನಿಮಗೆ ಈಗಾಗಲೆ ತಿಳಿದಿದೆ ಎಂದು ಭಾವಿಸುತ್ತೇನೆ. |
00:54 | ತಿಳಿದಿಲ್ಲವಾದರೆ, ಬ್ಲೆಂಡರ್ ಇನ್ಸ್ಟಾಲ್ ಮಾಡುವ ಬಗ್ಗೆ ಇರುವ ನಮ್ಮ ಮೊದಲಿನ ಟ್ಯುಟೋರಿಯಲ್ ಅನ್ನು ನೋಡಿರಿ. |
01:02 | ಬ್ಲೆಂಡರ್ ಓಪನ್ ಮಾಡಿದಾಗ ಡಿಫಾಲ್ಟ್ ಆಗಿ 3D ವ್ಯೂ ಯೂಸರ್ ಪರ್ಸ್ಪೆಕ್ಟಿವ್ ವ್ಯೂನಲ್ಲಿ ಇರುತ್ತದೆ. |
01:11 | ಈಗ ನಾವು ಕ್ಯಾಮೆರಾ ವ್ಯೂ ಗೆ ಬದಲಾಯಿಸೋಣ. |
01:15 | 3D ಪ್ಯಾನೆಲ್ ನ ಕೆಳಗಡೆಯ ಎಡ ಮೂಲೆಯಲ್ಲಿ ಇರುವ View ಟ್ಯಾಬ್ ಗೆ ಹೋಗಿ. |
01:21 | ಮೆನ್ಯುದಲ್ಲಿನ Camera ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
01:25 | ಕೀಬೋರ್ಡ್ ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ 0 ಒತ್ತಿರಿ. |
01:29 | ನೀವು ಲ್ಯಾಪ್-ಟಾಪ್ ಬಳಸುತ್ತಿದ್ದರೆ ನಿಮ್ಮ ನಂಬರ್ ಕೀ ಗಳನ್ನು ನಮ್-ಪ್ಯಾಡ್ ಹಾಗೆ ನೀವು ಅನುಕರಿಸುವದು ಅವಶ್ಯವಿದೆ. |
01:36 | ನಮ್-ಪ್ಯಾಡ್ ಅನುಕರಿಸುವದು ಹೇಗೆ ಎಂದು ತಿಳಿಯಲು User Preferences(ಯೂಸರ್ ಪ್ರಿಫರೆನ್ಸಿಸ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
01:45 | ಇದು ಕ್ಯಾಮೆರಾ ವ್ಯೂ ಆಗಿದೆ. |
01:49 | ಈ ಡಾಟೆಡ್ ಬಾಕ್ಸ್ ಆಕ್ಟಿವ್ ಕ್ಯಾಮೆರಾದ ವ್ಯೂ ನ ಕ್ಷೇತ್ರ ಆಗಿದೆ. |
01:55 | ಈ ಡಾಟೆಡ್ ಬಾಕ್ಸ್ ನಲ್ಲಿರುವ ಎಲ್ಲ ಒಬ್ಜೆಕ್ಟ್ ಗಳು ರೆಂಡರ್ ಮಾಡಲ್ಪಡುತ್ತವೆ. |
02:01 | ಮುಂದಿನ ಟ್ಯುಟೋರಿಯಲ್ ರೆಂಡರ್ ಸೆಟ್ಟಿಂಗ್ಸ್ ನ್ನು ಒಳಗೊಂಡಿದೆ. |
02:05 | ಆಕ್ಟಿವ್ ಕ್ಯಾಮೆರಾದ ಸ್ಥಾನವನ್ನು ಈಗಿನ ವ್ಯೂ ಪಾಯಿಂಟ್ ಗೆ ಹೊಂದಿಸಲು ಬ್ಲೆಂಡರ್ ನಿಮಗೆ ಅನುಮತಿಸುತ್ತದೆ. |
02:11 | ಇದನ್ನು ಹೇಗೆ ಮಾಡುವುದೆಂದು ನಾವು ನೋಡೋಣ. |
02:15 | ಪರ್ಸ್ಪೆಕ್ಟಿವ್ ವ್ಯೂಗೆ ಮರಳಿ ಹೋಗಲು ನಮ್-ಪ್ಯಾಡ್ ಝೀರೋ ಒತ್ತಿ. |
02:20 | ಈ ಶಾರ್ಟ್ಕಟ್ ‘ನಮ್-ಪ್ಯಾಡ್ ಝೀರೋ’ ಕ್ಯಾಮೆರಾ ವ್ಯೂ ಗಾಗಿ ಟಾಗಲ್ ಸ್ವಿಚ್ ಆಗಿರುವದನ್ನು ನೀವು ನೊಡುತ್ತಿರುವಿರಿ. |
02:26 | ನಿಮ್ಮ ಕ್ಯಾಮೆರಾವನ್ನು ನಿಮಗೆ ಎಲ್ಲಿ ಇಡಬೇಕಾಗಿದೆಯೋ ಆ ಸ್ಥಳಕ್ಕೆ ವ್ಯೂ ಅನ್ನು ರೊಟೇಟ್ ಮಾಡಲು ಮೌಸ್ನ ವ್ಹೀಲ್ ಅಥವಾ ಮೌಸ್ ನ ಮಧ್ಯದ ಬಟನ್ ಹಿಡಿದುಕೊಂಡು ಮೌಸ್ ಅನ್ನು ಅತ್ತಿತ್ತ ಕೊಂಡೊಯ್ಯಿರಿ. |
02:36 | ನಾನು ಈ ಸ್ಥಳವನ್ನು ಆಯ್ದುಕೊಂಡಿದ್ದೇನೆ. |
02:40 | ಕಂಟ್ರೋಲ್, Alt & ನಮ್-ಪ್ಯಾಡ್ ಝೀರೋ ಒತ್ತಿರಿ. |
02:46 | ಕ್ಯಾಮೆರಾ ಹೊಸ ಸ್ಥಾನಕ್ಕೆ ಚಲಿಸುತ್ತದೆ. |
02:49 | ಇದೇ ಸಮಯಯಲ್ಲಿ 3D ವ್ಯೂ, ಕ್ಯಾಮೆರಾ ವ್ಯೂಗೆ ಸ್ವಿಚ್ ಆಗುತ್ತದೆ. |
02:54 | ಕ್ಯಾಮೆರಾದ ಮೇಲೆ ರೋಲಿಂಗ್, ಪ್ಯಾನಿಂಗ್, ಟ್ರ್ಯಾಕಿಂಗ್ ಮುಂತಾದ ನೇವಿಗೇಶನ್ ನ ಕ್ರಿಯೆಗಳನ್ನು ಮಾಡಲು ಸಹ ಬ್ಲೆಂಡರ್ ನಿಮಗೆ ಅನುಮತಿಸುತ್ತದೆ. |
03:03 | ಇವುಗಳನ್ನು ಈಗ ನಾವು ನೋಡೋಣ. |
03:05 | ಕ್ಯಾಮೆರಾ ಆಯ್ಕೆಮಾಡಲು ಡಾಟೆಡ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡುತ್ತಿದ್ದೇನೆ. |
03:10 | ಇನ್ನು ಮುಂದೆ ನೀವು ಕ್ಯಾಮೆರಾವನ್ನು ಬೇರೆ ಯಾವುದೇ ಒಬ್ಜೆಕ್ಟ್ ಗೆ ಮಾಡಿದ ಹಾಗೆ ಮ್ಯಾನಿಪ್ಯುಲೇಟ್ ಮಾಡಬಹುದು. |
03:17 | ಈ ಕ್ರಿಯೆಗಳನ್ನು ನಿರ್ವಹಿಸಲು ನೀವು ಕ್ಯಾಮೆರಾ ವ್ಯೂ ದಲ್ಲಿ ಇರುವದು ಅವಶ್ಯ ಎನ್ನುವದನ್ನು ನೆನಪಿನಲ್ಲಿಡಿ. |
03:22 | ನಾವು ನೋಡುವ ಮೊದಲನೆಯ ಕ್ರಿಯೆ ಕ್ಯಾಮೆರಾ ವ್ಯೂಅನ್ನು ರೋಲ್ ಮಾಡುವದು. |
03:26 | ಒಬ್ಜೆಕ್ಟ್ ರೊಟೇಶನ್ ಮೋಡ್ ನಲ್ಲಿ ಹೋಗಲು ನಿಮ್ಮ ಕೀಬೋರ್ಡ್ ನಲ್ಲಿ R ಒತ್ತಿರಿ. |
03:32 | ಈಗ ನಿಮ್ಮ ಮೌಸ್ ಅನ್ನು ಎಡದಿಂದ ಬಲಕ್ಕೆ ಮತ್ತು ಮೇಲೆ ಹಾಗೂ ಕೆಳಗೆ ಒಯ್ಯಿರಿ. |
03:42 | ಡಿಫಾಲ್ಟ್ ನಿಂದ ಇದು ಕ್ಯಾಮೆರಾವನ್ನು ಅದರ ಲೋಕಲ್ z-ಆಕ್ಸಿಸ್ ನಲ್ಲಿ ತಿರುಗಿಸುತ್ತದೆ ಅಂದರೆ ಕ್ಯಾಮೆರಾ ವ್ಯೂನಲ್ಲಿ ಒಳಗೆ ಹೋಗಿ ಅಥವಾ ಹೊರಗೆ ಬರುವ ಆಕ್ಸಿಸ್ ನ ಸುತ್ತಮುತ್ತ. |
03:53 | ಈ ಆಕ್ಶನ್ ನ್ನು ರದ್ದುಗೊಳಿಸಲು ಸ್ಕ್ರೀನ್ ಮೇಲೆ ರೈಟ್ ಕ್ಲಿಕ್ ಮಾಡಿರಿ ಅಥವಾ ಕೀಬೋರ್ಡ್ ಮೇಲಿನ Esc ಒತ್ತಿರಿ. |
03:58 | ಇದು ನಿಮ್ಮನ್ನು ಮರಳಿ ನಿಮ್ಮ ಹಿಂದಿನ ಕ್ಯಾಮೆರಾ ವ್ಯೂಗೆ ಕರೆದೊಯ್ಯುತ್ತದೆ. |
04:04 | ಈಗ, ನಾವು ನೋಡುವ ಮುಂದಿನ ಕ್ರಿಯೆ ಕ್ಯಾಮೆರಾ ವ್ಯೂ ಅನ್ನು ಪ್ಯಾನಿಂಗ್ ಮಾಡುವದು. |
04:09 | ಪ್ಯಾನಿಂಗ್ 2 ದಿಕ್ಕುಗಳಲ್ಲಿ ಇರುತ್ತದೆ - ಎಡದಿಂದ ಬಲಕ್ಕೆ ಅಥವಾ ಮೇಲೆ ಹಾಗೂ ಕೆಳಗೆ. |
04:15 | ಒಬ್ಜೆಕ್ಟ್ ರೊಟೇಶನ್ ಮೋಡ್ ನಲ್ಲಿ ಹೋಗಲು R ಒತ್ತಿರಿ. X ಅನ್ನು ಎರಡು ಸಲ ಒತ್ತಿರಿ. |
04:22 | ಮೊದಲನೆಯ X ರೊಟೇಶನ್ ಅನ್ನು ಗ್ಲೋಬಲ್ X ಆಕ್ಸಿಸ್ ಗೆ ಲಾಕ್ ಮಾಡುತ್ತದೆ. |
04:26 | ಎರಡನೆಯ X ರೊಟೇಶನ್ ಅನ್ನು ಲೋಕಲ್ X ಆಕ್ಸಿಸ್ ಗೆ ಲಾಕ್ ಮಾಡುತ್ತದೆ. |
04:31 | ಗ್ಲೋಬಲ್ ಮತ್ತು ಲೋಕಲ್ ಟ್ರಾನ್ಸ್ಫಾರ್ಮ್ ಆಕ್ಸಿಸ್ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರವಾಗಿ ಚರ್ಚಿಸುವೆವು. </p> |
04:38 | ಈಗ ಮೌಸ್ ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ. |
04:42 | ಕ್ಯಾಮೆರಾ ವ್ಯೂ ಮೇಲೆ ಹಾಗೂ ಕೆಳಗೆ ಪ್ಯಾನ್ ಆಗುತ್ತದೆ. |
04:47 | ಈಗ, Y ಅನ್ನು ಎರಡು ಸಲ ಒತ್ತಿರಿ. |
04:51 | ಮೊದಲನೆಯ y ರೊಟೇಶನ್ ಅನ್ನು ಗ್ಲೋಬಲ್ y ಆಕ್ಸಿಸ್ ಗೆ ಲಾಕ್ ಮಾಡುತ್ತದೆ. |
04:56 | ಎರಡನೆಯ y ರೊಟೇಶನ್ ಅನ್ನು ಲೋಕಲ್ y ಆಕ್ಸಿಸ್ ಗೆ ಲಾಕ್ ಮಾಡುತ್ತದೆ. |
05:00 | ಈಗ ಮೌಸ್ಅನ್ನು ಎಡದಿಂದ ಬಲಕ್ಕೆ ಚಲಿಸಿ. |
05:05 | ಈ ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಪ್ಯಾನ್ ಆಗುತ್ತದೆ. |
05:12 | ಕ್ಯಾಮೆರಾ ವ್ಯೂ ಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ. |
05:16 | ನಂತರ ನಾವು ಕ್ಯಾಮೆರಾವನ್ನು ಡಾಲಿ ಮಾಡೋಣ. ಇದನ್ನು ಮಾಡಲು ಎರಡು ವಿಧಾನಗಳಿವೆ. |
05:21 | ಮೊದಲನೆಯದು, ಕ್ಯಾಮೆರಾ ಹಿಡಿದುಕೊಳ್ಳಲು G ಒತ್ತಿರಿ. |
05:25 | ಮೌಸ್ನ ವ್ಹೀಲ್ ಅಥವಾ ಮೌಸ್ ನ ಮಧ್ಯದ ಬಟನ್ ಹಿಡಿದುಕೊಳ್ಳಿ ಮತ್ತು ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ. |
05:43 | ಎರಡನೆಯ ವಿಧಾನ, ನೀವು ಕ್ಯಾಮೆರಾವನ್ನು ಅದರ ಲೋಕಲ್ z ಅಕ್ಸಿಸ್ ನ ಉದ್ದಕ್ಕೂ ಚಲಿಸಬಹುದು. G ಒತ್ತಿ. |
05:53 | ನಂತರ ಕ್ಯಾಮೆರಾವನ್ನು ಲೋಕಲ್ z ಅಕ್ಸಿಸ್ ಗೆ ಲಾಕ್ ಮಾಡಲು Z ಅನ್ನು ಎರಡು ಸಲ ಒತ್ತಿ. |
05:59 | ಈಗ ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯುತ್ತಿದ್ದರೆ ಇದೇ ಪರಿಣಾಮವನ್ನು ಕೊಡುವದು. |
06:11 | ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ. |
06:15 | ಕ್ಯಾಮೆರಾ ವ್ಯೂ ಅನ್ನು ಎಡದಿಂದ ಬಲಕ್ಕೆ ಅಥವಾ ಮೇಲೆ ಹಾಗೂ ಕೆಳಗೆ ಟ್ರ್ಯಾಕಿಂಗ್ ಮಾಡುವದು ಅದನ್ನು ಲೋಕಲ್ X ಅಥವಾ Y ಆಕ್ಸಿಸ್ ಗಳ ಉದ್ದಕ್ಕೂ ಚಲಿಸುವದನ್ನು ಒಳಗೊಂಡಿದೆ. |
06:24 | G ಒತ್ತಿರಿ. X ಎರಡು ಸಲ ಒತ್ತಿ ಮತ್ತು ಮೌಸ್ ನ್ನು ಎಡದಿಂದ ಬಲಕ್ಕೆ ಚಲಿಸಿ. |
06:35 | ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಟ್ರ್ಯಾಕ್ ಮಾಡುತ್ತದೆ. |
06:42 | ಈಗ Y ಅನ್ನು ಎರಡು ಸಲ ಒತ್ತಿ ಮತ್ತು ಮೌಸ್ಅನ್ನು ಮೇಲೆ ಹಾಗೂ ಕೆಳಗೆ ಕೊಂಡೊಯ್ಯಿರಿ. |
06:48 | ಕ್ಯಾಮೆರಾ ವ್ಯೂ ಮೇಲೆ ಹಾಗೂ ಕೆಳಗೆ ಟ್ರ್ಯಾಕ್ ಆಗುತ್ತದೆ. |
06:53 | ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ. |
06:59 | ಬ್ಲೆಂಡರ್ ಕ್ಯಾಮೆರಾಗಾಗಿ ಒಂದು ಫ್ಲೈ ಮೋಡ್ ಸಹ ಒದಗಿಸುತ್ತದೆ. |
07:05 | ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ. |
07:10 | ಕ್ಯಾಮೆರಾ ವ್ಯೂ ಅನ್ನು ಈಗ ನೀವು ಮೂರು ವಿಧದಲ್ಲಿ ಚಾಲಿಸಬಹುದು. |
07:14 | ಮೊದಲನೆಯದಾಗಿ, ಕೀಬೋರ್ಡ್ ಮೇಲಿನ ಶಾರ್ಟ್ಕಟ್ ಕೀ ಗಳನ್ನು ಬಳಸುವದು. |
07:19 | ಝೂಮ್ ಇನ್ ಮಾಡಲು ಕೀಬೋರ್ಡ್ ಮೇಲಿನ W ಒತ್ತಿರಿ. |
07:30 | ಝೂಮ್ ಔಟ್ ಮಾಡಲು S ಒತ್ತಿರಿ. |
07:40 | ಎಡಕ್ಕೆ ಸರಿಸಲು A ಒತ್ತಿರಿ. |
07:51 | ಬಲಕ್ಕೆ ಸರಿಸಲು D ಒತ್ತಿರಿ. |
08:02 | ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ. |
08:05 | ಎರಡನೆಯದಾಗಿ, ಕ್ಯಾಮೆರಾ ವ್ಯೂನಲ್ಲಿ ಝೂಮ್ ಇನ್ ಹಾಗೂ ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ಅನ್ನು ಬಳಸುವದು ಅಥವಾ ಫ್ಲೈ ಮೋಡ್ ನಲ್ಲಿ ತಿರುಗಿಸುವದು. |
08:13 | ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ. |
08:18 | ಝೂಮ್ ಇನ್ ಮಾಡಲು ಮೌಸ್ನ ವ್ಹೀಲ್ಅನ್ನು ಮೇಲ್ಗಡೆಗೆ ತಿರುಗಿಸಿರಿ. |
08:25 | ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ + ಒತ್ತಿರಿ. |
08:30 | ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ಅನ್ನು ಕೆಳಗಡೆಗೆ ತಿರುಗಿಸಿರಿ. |
08:38 | ಶಾರ್ಟ್ಕಟ್ ಗಾಗಿ ನಮ್-ಪ್ಯಾಡ್ - ಒತ್ತಿರಿ. |
08:43 | ಕ್ಯಾಮೆರಾ ವ್ಯೂಗೆ ಮರಳಿ ಹೋಗಲು ರೈಟ್ ಕ್ಲಿಕ್ ಮಾಡಿರಿ. |
08:49 | ಕೊನೆಯದಾಗಿ, ಕ್ಯಾಮೆರಾ ವ್ಯೂ ಅನ್ನು ಎಡದಿಂದ ಬಲಕ್ಕೆ ಹಾಗೂ ಹಿಂದಕ್ಕೆ ತಿರುಗಿಸಲು ಮೌಸ್ನ ವ್ಹೀಲ್ಅನ್ನು ಬಳಸುವದು ಅಥವಾ ಫ್ಲೈ ಮೋಡ್ ನಲ್ಲಿ ತಿರುಗಿಸುವದು. |
08:59 | ಫ್ಲೈ ಮೋಡ್ ನಲ್ಲಿ ಹೋಗಲು Shift, F ಒತ್ತಿರಿ. |
09:04 | D ಒತ್ತಿ ಮತ್ತು ಮೌಸ್ ನ ವ್ಹೀಲ್ ಅನ್ನು ಮೇಲೆ ಹಾಗೂ ಕೆಳಗೆ ತಿರುಗಿಸಿರಿ. |
09:13 | ಈ ಕ್ಯಾಮೆರಾ ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ಚಲಿಸುತ್ತದೆ. |
09:28 | ಕ್ಯಾಮೆರಾ ವ್ಯೂ ಲಾಕ್ ಮಾಡಲು ಸ್ಕ್ರೀನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
09:33 | ಈಗ, ಇದು ನಿಮ್ಮ ಹೊಸ ಕ್ಯಾಮೆರಾ-ವ್ಯೂ ಆಗಿದೆ. |
09:38 | ಇಲ್ಲಿಗೆ ನಮ್ಮ ನೇವಿಗೇಶನ್ – ಕ್ಯಾಮೆರಾ ವ್ಯೂ ಬಗ್ಗೆ ಇರುವ ಟ್ಯುಟೋರಿಯಲ್ ಮುಗಿಯಿತು. |
09:43 | ಈಗ ಹೊಸ ಫೈಲ್ ನಲ್ಲಿ, |
09:45 | ಕ್ಯಾಮೆರಾದ ಸ್ಥಳ ಹಾಗೂ ಕ್ಯಾಮೆರಾ ವ್ಯೂ ಬದಲಿಸಿ ನಿಮ್ಮ ಕ್ಯಾಮೆರಾವನ್ನು ರೋಲ್, ಪ್ಯಾನ್, ಡಾಲಿ ಮತ್ತು ಟ್ರ್ಯಾಕ್ ಮಾಡಿರಿ. |
09:54 | ಮತ್ತು ಹೊಸ ಕ್ಯಾಮೆರಾ ವ್ಯೂ ಆಯ್ಕೆಮಾಡಲು ಫ್ಲೈ ಮೋಡ್ ಬಳಸಿರಿ. |
10:00 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
10:08 | ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ.
oscar.iitb.ac.in ಮತ್ತು spoken-tutorial.org/NMEICT-Intro |
10:27 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
10:30 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:33 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:38 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:45 | ಧನ್ಯವಾದಗಳು. |
10:47 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |