Blender/C2/3D-Cursor/Kannada
From Script | Spoken-Tutorial
Revision as of 16:53, 8 October 2014 by Vasudeva ahitanal (Talk | contribs)
Time | Narration |
00:03 | ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್, ಬ್ಲೆಂಡರ್ 2.59 ರ 3D ಕರ್ಸರ್ ಕುರಿತು ಇದೆ. |
00:15 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:25 | ಈ ಟ್ಯುಟೋರಿಯಲ್ ನೋಡಿದ ನಂತರ ನಾವು 3D ಕರ್ಸರ್ ಎಂದರೆ ಏನು, |
00:32 | 3D ಕರ್ಸರ್ ಉಪಯೋಗಿಸಿ ಹೊಸ ಒಬ್ಜೆಕ್ಟ್ಸ್ ಗಳನ್ನು ಬ್ಲೆಂಡರ್ ನ 3D ವ್ಯೂ ಗೆ ಹೇಗೆ ಸೇರಿಸುವದು ಮತ್ತು ಬ್ಲೆಂಡರ್ ನಲ್ಲಿ 3D ಕರ್ಸರ್ ಗಾಗಿ ಇರುವ ಸ್ನ್ಯಾಪಿಂಗ್ ನ ಆಯ್ಕೆಗಳ ಬಗ್ಗೆ ಕಲಿಯುವೆವು. |
00:46 | ಬ್ಲೆಂಡರ್ ನ್ನು ನಿಮ್ಮ ಸಿಸ್ಟೆಮ್ ನಲ್ಲಿ ಇನ್ಸ್ಟಾಲ್ ಮಾಡುವ ವಿಧಾನ ನಿಮಗೆ ಈಗಾಗಲೆ ತಿಳಿದಿದೆ ಎಂದು ಭಾವಿಸುತ್ತೇನೆ. |
00:51 | ತಿಳಿದಿಲ್ಲವಾದರೆ, ಬ್ಲೆಂಡರ್ ಇನ್ಸ್ಟಾಲ್ ಮಾಡುವ ಬಗ್ಗೆ ಇರುವ ನಮ್ಮ ಮೊದಲಿನ ಟ್ಯುಟೋರಿಯಲ್ಸ್ ನೋಡಿರಿ. |
00:57 | ಬ್ಲೆಂಡರ್ ಸ್ಕ್ರೀನ್ ನ ಮಧ್ಯದಲ್ಲಿ ನಿಮಗೆ ಕಾಣುವ ಕ್ರಾಸ್-ಹೇರ್ ಯುಕ್ತ ಕೆಂಪು ಮತ್ತು ಬಿಳಿ ಉಂಗುರವೇ 3D ಕರ್ಸರ್ ಇದೆ. |
01:06 | ನಾವು ಬ್ಲೆಂಡರ್ ನಲ್ಲಿ 3D ಕರ್ಸರ್ ನೋಡೋಣ. ಇದಕ್ಕಾಗಿ ನಾವು ಬ್ಲೆಂಡರ್ ಓಪನ್ ಮಾಡಬೆಕು. |
01:12 | ಬ್ಲೆಂಡರ್ ಓಪನ್ ಮಾಡಲು ಎರಡು ವಿಧಾನಗಳಿವೆ. |
01:15 | ಡೆಸ್ಕ್-ಟಾಪ್ ಮೇಲಿನ ಬ್ಲೆಂಡರ್ ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Open ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
01:27 | ಎರಡನೆಯ ಹಾಗೂ ಸರಳ ವಿಧಾನವೆಂದರೆ ಡೆಸ್ಕ್-ಟಾಪ್ ಮೇಲಿನ ಬ್ಲೆಂಡರ್ ಐಕಾನ್ ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ. |
01:42 | ಇದು ಬ್ಲೆಂಡರ್ 2.59. ಸ್ಕ್ರೀನ್ ರೆಸೊಲುಶನ್ 1024 x 768 ಪಿಕ್ಸೆಲ್ಸ್ ಎಂದು ತೋರಿಸಲಾಗಿದೆ, ದಯವಿಟ್ಟು ಇದನ್ನು ಗಮನಿಸಿ. |
01:54 | ಬ್ಲೆಂಡರ್ ಇಂಟರ್ಫೇಸ್ ನಲ್ಲಿನ ಫಾಂಟ್ ಸೈಜ್ ಹೆಚ್ಚಿಸಲಾಗಿದೆ. ಇದರಿಂದ ಎಲ್ಲ ಆಯ್ಕೆಗಳನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ. |
02:01 | ಇಂಟರ್ಫೇಸ್ ನಲ್ಲಿಯ ಫೊಂಟ್ ಸೈಜ್ ಹೆಚ್ಚಿಸುವ ವಿಧಾನವನ್ನು ತಿಳಿಯಲು User Preferences (ಯುಸರ್ ಪ್ರಿಫರನ್ಸೆಸ್) ಎನ್ನುವ ಟ್ಯುಟೋರಿಯಲ್ ನೋಡಿ. |
02:12 | ಇದು ವೆಲ್ಕಮ್ ಪೇಜ್ ಅಥವಾ ಸ್ಪ್ಲಾಶ್ ಸ್ಕ್ರೀನ್ ಇದೆ. ಬ್ಲೆಂಡರ್ ಬಗ್ಗೆ ತಿಳಿದುಕೊಳ್ಳಲು ಇದು ಕೆಲವು ಉಪಯುಕ್ತ ರೆಫರೆನ್ಸ್ ಲಿಂಕ್ಸ್ ಗಳನ್ನು ತೋರಿಸುತ್ತದೆ. |
02:20 | ಸ್ಪ್ಲಾಶ್ ಸ್ಕ್ರೀನ್ ತೆಗೆದುಹಾಕಲು ನಿಮ್ಮ ಕೀಬೋರ್ಡ್ ಮೇಲಿನ ESC ಒತ್ತಿ. ಅಥವಾ |
02:25 | ಬ್ಲೆಂಡರ್ ಇಂಟರ್ಫೇಸ್ ನ ಮೇಲೆ ಎಲ್ಲಿಯಾದರೂ ಮೌಸ್ ಅನ್ನು ಕ್ಲಿಕ್ ಮಾಡಿ. ಸ್ಪ್ಲಾಶ್ ಸ್ಕ್ರೀನ್ ಮೇಲೆ ಮಾತ್ರ ಮಾಡಬೇಡಿ. |
02:32 | ಈಗ ನೀವು ಡಿಫಾಲ್ಟ್ ಬ್ಲೆಂಡರ್ ವರ್ಕ್ಸ್ಪೇಸ್ ಅನ್ನು ಕಾಣಬಹುದು. |
02:37 | 3D ಕರ್ಸರ್ ಎಂಬುದು ಸ್ಕ್ರೀನ್ ನ ಮಧ್ಯದಲ್ಲಿದ್ದು ಕ್ಯೂಬ್ ನಿಂದ ಸುತ್ತುವರಿಯಲ್ಪಟ್ಟಿದೆ. |
02:43 | ನಮಗೆ ಕರ್ಸರ್ ಸರಿಯಾಗಿ ಕಾಣುತ್ತಿಲ್ಲ, ಆದ್ದರಿಂದ ನಾವು ಕ್ಯೂಬ್ ನ್ನು ತೆಗೆದುಹಾಕಬೇಕು. |
02:48 | ಕ್ಯೂಬ್ ಮೊದಲೇ ಡಿಫಾಲ್ಟ್ ಆಗಿ ಆಯ್ಕೆ ಆಗಿಬಿಟ್ಟಿದೆ. |
02:51 | ಇದನ್ನು ತೆಗೆದುಹಾಕಲು ಕೀಬೋರ್ಡ್ ಮೇಲಿನ delete ಒತ್ತಿ. Delete ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
02:58 | ಅಲ್ಲಿ ನೋಡಿ, 3D ಕರ್ಸರ್ ಈಗ ನಿಮಗೆ ಚೆನ್ನಾಗಿ ಕಾಣುವುದು. |
03:04 | 3D ಸೀನ್ ಗೆ ಸೇರಿಸಲಾದ ಹೊಸ ಓಬ್ಜೆಕ್ಟ್ ನ ಸ್ಥಳವನ್ನು ಸೂಚಿಸುವದು 3D ಕರ್ಸರ್ ನ ಮೂಲ ಉದ್ದೇಶವಾಗಿದೆ. |
03:15 | ADD ಗೆ ಹೋಗಿ, Mesh ಗೆ ಹೋಗಿ, Cube ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
03:19 | ಹೊಸ ಓಬ್ಜೆಕ್ಟ್ ಗಳನ್ನು 3D ವ್ಯೂಗೆ ಸೇರಿಸಲು ನೀವು ಕೀಬೋರ್ಡ್ ಶಾರ್ಟ್ಕಟ್ shift & A ಸಹ ಬಳಸಬಹುದು. |
03:27 | 3D ವ್ಯೂಗೆ ಒಂದು ಹೊಸ ಕ್ಯೂಬ್ ಸೇರಿಸಲಾಗಿದೆ. |
03:30 | ಹೊಸ ಕ್ಯೂಬ್ 3D ಕರ್ಸರ್ ಇದ್ದ ಸ್ಥಳದಲ್ಲಿಯೆ ಕಾಣಿಸಿಕೊಂಡಿದ್ದನ್ನು ನೀವು ಗಮನಿಸಬಹುದು. |
03:38 | ಒಂದು ಹೊಸ ಓಬ್ಜೆಕ್ಟ್ ನ್ನು ಹೊಸ ಸ್ಥಳಕ್ಕೆ ಹೇಗೆ ಸೇರಿಸಬಹುದು ಎಂದು ಈಗ ನಾವು ನೋಡೋಣ. |
03:44 | ಮೊದಲು ನಾವು 3D ಕರ್ಸರ್ ನ್ನು ಸ್ಥಳಾಂತರಿಸಬೇಕು. |
03:48 | ಇದಕ್ಕಾಗಿ 3D ಸ್ಪೇಸ್ ನಲ್ಲಿ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ. |
03:53 | ನಾನು ಕ್ಯೂಬ್ ನ ಎಡ ಭಾಗದಲ್ಲಿ ಕ್ಲಿಕ್ ಮಾಡುತ್ತಿದ್ದೇನೆ. |
03:59 | ಹೊಸ ಓಬ್ಜೆಕ್ಟ್ ಸೇರಿಸಲು Shift & A, Mesh. ನಂತರ UV sphere ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
04:10 | UV ಸ್ಫಿಯರ್, 3D ಕರ್ಸರ್ ನ ಹೊಸ ಸ್ಥಳದಲ್ಲಿ ಕಾಣಿಸುತ್ತದೆ. |
04:15 | ಈಗ ನಾವು 3D ಕರ್ಸರ್ ಗಾಗಿ ಸ್ನ್ಯಾಪಿಂಗ್ ಆಯ್ಕೆಗಳನ್ನು ನೋಡೋಣ. |
04:22 | Object ಗೆ ಹೋಗಿ. Snap ಗೆ ಹೋಗಿ. ಇದು Snap ಮೆನ್ಯು ಆಗಿದೆ. |
04:29 | ಇಲ್ಲಿ ವಿವಿಧ ಆಯ್ಕೆಗಳಿವೆ. |
04:31 | ನೀವು ಕೀಬೋರ್ಡ್ ಶಾರ್ಟ್ಕಟ್ Shift & S ಸಹ ಉಪಯೋಗಿಸಬಹುದು. |
04:38 | Selection to cursor, ಆಯ್ಕೆಮಾಡಿದ ವಸ್ತುವನ್ನು 3D ಕರ್ಸರ್ ಗೆ ಸ್ನ್ಯಾಪ್ ಮಾಡುತ್ತದೆ. |
04:45 | ಉದಾಹರಣೆಗೆ ನಾವು ಕ್ಯೂಬ್ ನ್ನು 3D ಕರ್ಸರ್ ಗೆ ಸ್ನ್ಯಾಪ್ ಮಾಡೋಣ. |
04:50 | ಕ್ಯೂಬ್ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿ. |
04:58 | Selection to cursor ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಕ್ಯೂಬ್ 3D ಕರ್ಸರ್ ಗೆ ಸ್ನ್ಯಾಪ್ ಆಗುತ್ತದೆ. |
05:06 | ಈಗ ನಾವು ಕ್ಯೂಬ್ ನ್ನು ಬಲಕ್ಕೆ ಸರಿಸೋಣ. ಗ್ರೀನ್ ಹ್ಯಾಂಡಲ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಹಿಡಿದು, ನಿಮ್ಮ ಮೌಸ್ ನ್ನು ಬಲಕ್ಕೆ ಎಳೆಯಿರಿ. |
05:17 | ಕೀಬೋರ್ಡ್ ಶಾರ್ಟ್ಕಟ್ ಗಾಗಿ G&Y ಒತ್ತಿರಿ. |
05:23 | 3D ವ್ಯೂನಲ್ಲಿ ಓಬ್ಜೆಕ್ಟ್ ಗಳ ಸ್ಥಳ ಬದಲಾಯಿಸುವದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Basic description of Blender interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ಬ್ಲೆಂಡರ್ ಇಂಟರ್ಫೇಸ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
05:35 | ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿರಿ. cursor to selected ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:43 | 3D ಕರ್ಸರ್ ಹೊಸ ಸ್ಥಳದಲ್ಲಿಯ ಕ್ಯೂಬ್ ನ ಮಧ್ಯಕ್ಕೆ ಸ್ನ್ಯಾಪ್ ಆಗುತ್ತದೆ. |
05:50 | ಇಲ್ಲಿ ಕ್ಯೂಬ್ ಮತ್ತು UV ಸ್ಫಿಯರ್ ಆಯ್ಕೆಮಾಡಿದ ಹಾಗೆ ಒಂದು ವೇಳೆ ನೀವು ಎರಡು ಓಬ್ಜೆಕ್ಟ್ ಗಳನ್ನು ಏಕಕಾಲಕ್ಕೆ ಆಯ್ಕೆಮಾಡಿದರೆ, |
05:59 | Cursor to selected 3D ಕರ್ಸರ್ ನ್ನು ಆಯ್ಕೆಮಾಡಿದ ಎರಡೂ ಓಬ್ಜೆಕ್ಟ್ ಗಳ ಮಧ್ಯದಲ್ಲಿ ಸ್ನ್ಯಾಪ್ ಮಾಡುತ್ತದೆ. |
06:07 | ನಾನು ಈಗ ಮಾಡಿ ತೊರಿಸುತ್ತೇನೆ. ನಿಮಗೆ ಕಾಣುತ್ತಿರುವಂತೆ ಕ್ಯೂಬ್ ಈಗಾಗಲೇ ಆಯ್ಕೆ ಆಗಿದೆ. |
06:12 | UV sphere ಆಯ್ಕೆಮಾಡಲು Shift plus right ಕ್ಲಿಕ್ ಮಾಡಿ. ಈಗ ನೀವು ಎರಡೂ ಓಬ್ಜೆಕ್ಟ್ ಗಳನ್ನು ಒಟ್ಟಿಗೆ ಆಯ್ಕೆಮಾಡಿದ್ದೀರಿ. |
06:22 | ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿರಿ. Cursor to selected ಕ್ಲಿಕ್ ಮಾಡಿ. |
06:30 | 3D ಕರ್ಸರ್ ಆಯ್ಕೆಮಾಡಿದ ಎರಡೂ ಓಬ್ಜೆಕ್ಟ್ ಗಳ ಮಧ್ಯದಲ್ಲಿ ಸ್ನ್ಯಾಪ್ ಆಗುತ್ತದೆ. |
06:36 | ಈಗ lamp ಮೇಲೆ Shift plus right ಕ್ಲಿಕ್ ಮಾಡಿ. ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿ. |
06:47 | Cursor to Selected ಕ್ಲಿಕ್ ಮಾಡಿರಿ. 3D ಕರ್ಸರ್ ಆಯ್ಕೆಮಾಡಿದ ಮೂರು ಓಬ್ಜೆಕ್ಟ್ ಗಳ ಮಧ್ಯದಲ್ಲಿ ಸ್ನ್ಯಾಪ್ ಆಗುತ್ತದೆ. |
06:58 | 3D ಕರ್ಸರ್ ನ್ನು ಸ್ಥಳಾಂತರಿಸಲು 3D ವ್ಯೂನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. ನಾನು ಕೆಳಗೆ ಬಲಭಾಗದಲ್ಲಿ ಕ್ಲಿಕ್ ಮಾಡುತ್ತಿದ್ದೇನೆ. |
07:07 | ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿ. |
07:12 | Cursor to Center ಕ್ಲಿಕ್ ಮಾಡಿ. 3D ಕರ್ಸರ್ 3D ವ್ಯೂನ ಮಧ್ಯಕ್ಕೆ ಸ್ನ್ಯಾಪ್ ಆಗುವದು. |
07:22 | ಓಬ್ಜೆಕ್ಟ್ ಗಳನ್ನು ಡಿಸೆಲೆಕ್ಟ್ ಮಾಡಲು ಕೀಬೋರ್ಡ್ ನಲ್ಲಿಯ A ಒತ್ತಿ. |
07:28 | ಈಗ, UV sphere ಮೇಲೆ ರೈಟ್ ಕ್ಲಿಕ್ ಮಾಡಿ. ಇದನ್ನು ಡಿಸೆಲೆಕ್ಟ್ ಮಾಡಲು A ಒತ್ತಿ. |
07:39 | ಸ್ನ್ಯಾಪ್ ಮೆನ್ಯು ಮೇಲೆ ಎಳೆಯಲು Shift & S ಒತ್ತಿ. |
07:44 | Cursor to active ಮೇಲೆ ಕ್ಲಿಕ್ ಮಾಡಿ. |
07:47 | 3D ಕರ್ಸರ್ UV sphere ನ ಮಧ್ಯಕ್ಕೆ ಸ್ನ್ಯಾಪ್ ಆಗುತ್ತದೆ-ಇದು ಕೊನೆಯ ಸಕ್ರಿಯ ಆಯ್ಕೆ. |
07:56 | ಪಿವಟ್ ಪಾಇಂಟ್ ನಂತೆ ಉಪಯೋಗಿಸಿದರೆ ಮಾಡೆಲಿಂಗ್ ನಲ್ಲಿ 3D ಕರ್ಸರ್ ಹೆಚ್ಚು ಪ್ರಯೋಜಕವಾಗಿದೆ. |
08:03 | ಅದನ್ನು ನಾವು ನಂತರದ ಟ್ಯುಟೋರಿಯಲ್ಸ್ ನಲ್ಲಿ ನೋಡೋಣ. |
08:08 | ಈಗ 3D ಕರ್ಸರ್ ಉಪಯೋಗಿಸಿ ಹೊಸ ಓಬ್ಜೆಕ್ಟ್ ಗಳನ್ನು 3D ವ್ಯೂನ ಬೇರೆ ಬೇರೆ ಸ್ಥಳಗಳಲ್ಲಿ ಸೇರಿಸಲು ಪ್ರಯತ್ನಿಸಿ. |
08:16 | ಆನಂತರ ಸ್ನ್ಯಾಪ್ ಮೆನ್ಯು ನಲ್ಲಿ ಸ್ನ್ಯಾಪಿಂಗ್ ಆಯ್ಕೆಗಳನ್ನು ಪ್ರಯತ್ನಿಸಿ. ಶುಭವಾಗಲಿ !! |
08:26 | ಇಲ್ಲಿಗೆ ನಮ್ಮ ಬ್ಲೆಂಡರ್ ನ 3D Cursor ಎನ್ನುವ ಟ್ಯುಟೋರಿಯಲ್ ಮುಕ್ತಾಯವಾಯಿತು. |
08:31 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
08:40 | ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in ಮತ್ತು spoken-tutorial.org/NMEICT-Intro ಲಿಂಕ್ ಗಳ ಮೇಲೆ ಲಭ್ಯವಿದೆ. |
09:00 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
09:02 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:06 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:11 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:17 | ಧನ್ಯವಾದಗಳು. |
09:19 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |