Java/C2/Primitive-type-conversions/Kannada

From Script | Spoken-Tutorial
Revision as of 11:31, 29 September 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಜಾವಾ ದಲ್ಲಿನ ಟೈಪ್ ಕನ್ವರ್ಷನ್ ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 *data (ಡೇಟಾ)ವನ್ನು ಒಂದು data type (ಡೇಟಾ ಟೈಪ್) ನಿಂದ ಮತ್ತೊಂದಕ್ಕೆ ಹೇಗೆ ಪರಿವರ್ತಿಸುವುದು,
00:13 * ಇಂಪ್ಲಿಸಿಟ್ ಮತ್ತು ಎಕ್ಸ್ಪ್ಲಿಸಿಟ್ ಎಂಬ ಎರಡು ರೀತಿಯ ಪರಿವರ್ತನೆಗಳು ಮತ್ತು
00:18 * ಸ್ಟ್ರಿಂಗ್ಸನ್ನು ನಂಬರ್ ಗಳಿಗೆ ಬದಲಾಯಿಸುವುದು ಹೇಗೆ ಎಂಬಿವುಗಳನ್ನು ಕಲಿಯಲಿದ್ದೇವೆ.
00:23 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ.

00:33 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಜಾವಾದಲ್ಲಿನ ಡೇಟಾ ಟೈಪ್ಗಳ ಬಗ್ಗೆ ತಿಳಿದಿರಬೇಕು.
00:38 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
00:47 ಡೇಟಾ ಕನ್ವರ್ಷನ್ ಎಂದರೆ ಡೇಟಾ ವನ್ನು ಒಂದು ಡೇಟಾ ವಿಧಾನದಿಂದ ನಿಂದ ಮತ್ತೊಂದಕ್ಕೆ ಪರಿವರ್ತಿಸುವುದು.
00:53 ಅದನ್ನು ಹೇಗೆ ಮಾಡುವುದೆಂದು ತಿಳಿಯೋಣ.
00:55 ಎಕ್ಲಿಪ್ಸನ್ನು ಪ್ರಾರಂಭಿಸೋಣ
01:02 ನಾವೀಗ ಎಕ್ಲಿಪ್ಸ್ IDE (ಐಡಿಇ) ಮತ್ತು ಉಳಿದ ಕೋಡ್ ಗಳಿಗೆ ಅವಶ್ಯಕವಿರುವ ಸ್ಕೆಲಿಟನ್ ಅನ್ನು ಹೊಂದಿದ್ದೇವೆ.
01:07 ನಾನು TypeConversion (ಟೈಪ್ ಕನ್ವರ್ಷನ್) ಹೆಸರಿನ ಕ್ಲಾಸ್ ಅನ್ನು ತಯಾರಿಸಿದ್ದೇನೆ, ಮತ್ತು ಮೈನ್ ಮೆಥಡ್ ಅನ್ನು ಸೇರಿಸಿದ್ದೇನೆ.
01:13 ನಾವೀಗ ಕೆಲವು ವೇರಿಯೇಬಲ್ ಗಳನ್ನು ಕ್ರಿಯೇಟ್ ಮಾಡೋಣ
01:19 int a (ಇಂಟ್ ಎ) ಸಮ 5(ಐದು)

float b (ಪ್ಲೋಟ್ ಬಿ) b (ಬಿ)ಸಮ a(ಎ)

01:33 ನಾನು ಎರಡು ವೇರಿಯೇಬಲ್ ಗಳನ್ನು ಕ್ರಿಯೇಟ್ ಮಾಡಿದ್ದೇನೆ. ಅವು ಇಂಟೀಜರ್ ಆಗಿರುವ a (ಎ) ಮತ್ತು ಪ್ಲೋಟ್ ಆಗಿರುವ b (ಬಿ)
01:39 ನಾನು ಇಂಟೀಜರ್ ನ ಮೌಲ್ಯವನ್ನು ಪ್ಲೋಟ್ ವೇರಿಯೇಬಲ್ ನಲ್ಲಿ ಸಂಗ್ರಹಿಸುತ್ತಿದ್ದೆನೆ.
01:43 ನಾವೀಗ ಪ್ಲೋಟ್ ವೇರಿಯೇಬಲ್ ಏನನ್ನು ಹೊಂದಿದೆ ಎಂದು ನೋಡೋಣ.
01:48 System.out.println (b)(ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ ಎನ್ (ಬಿ)
01:58 ಫೈಲನ್ನು ಸೇವ್ ಮಾಡಿ ರನ್ ಮಾಡಿ
02:07 ನಾವೀಗ ಇಂಟೀಜರ್5 (ಐದು) ಪ್ಲೋಟ್ 5.0 (ಐದು ಬಿಂದು ಸೊನ್ನೆಗೆ) ಬದಲಾಗಿರುವುದನ್ನು ನೋಡಬಹುದು.
02:13 ಈ ರೀತಿಯ ಬದಲಾಯಿಸುವಿಕೆಗೆ implicit conversion (ಇಂಪ್ಲಿಸಿಟ್ ಕನ್ವರ್ಷನ್) ಎಂದು ಕರೆಯುತ್ತಾರೆ.
02:17 ಹೆಸರೇ ಸೂಚಿಸುವಂತೆ, ಮೌಲ್ಯವು ತಾನಾಗಿಯೇ ಡೇಟಾ ಟೈಪ್ ಗೆ ಸರಿಹೊಂದುವಂತೆ ಬದಲಾಯಿತು.
02:24 ನಾವೀಗ ಇದೇ ವಿಧಾನವನ್ನು ಬಳಸಿ float (ಪ್ಲೋಟ್) ಅನ್ನು int (ಇಂಟ್) ಗೆ ಬದಲಾಯಿಸೋಣ
02:30 5 (ಐದನ್ನು) ತೆಗೆಯಿರಿ, float b (ಪ್ಲೋಟ್ ಬಿ) ಸಮ 2.5f (ಎರಡು ಬಿಂದು ಐದು ಎಫ್), ನಂತರ a (ಎ) ಯ ಜಾಗದಲ್ಲಿ b (ಬಿ) ಯನ್ನು ಹಾಕಿ ಎ ಯ ಮೌಲ್ಯವನ್ನು ಪ್ರಿಂಟ್ ಮಾಡೋಣ.
02:50 ಫೈಲನ್ನು ಸೇವ್ ಮಾಡಿ.
02:56 ಇಲ್ಲಿ ತಪ್ಪಿರುವುದನ್ನು ನಾವು ನೋಡಬಹುದು
03:00 ತಪ್ಪಿನ ಸಂದೇಶ ಹೀಗಿದೆ, Type mismatch: cannot convert from float to int(ಟೈಪ್ ಮಿಸ್ ಮ್ಯಾಚ್:ಕೆನಾಟ್ ಕನ್ವರ್ಟ್ ಪ್ರಮ್ ಪ್ಲೋಟ್ ಟು ಇಂಟ್) (ಟೈಪ್ ಹೊಂದುತ್ತಿಲ್ಲ: ಹಾಗಾಗಿ ಪ್ಲೋಟನ್ನು ಇಂಟ್ ಗೆ ಬದಲಾಯಿಸಲು ಸಾಧ್ಯವಿಲ್ಲ)
03:06 ಇದರ ಅರ್ಥ ಇಂಪ್ಲಿಸಿಟ್ ಕನ್ವರ್ಷನ್ int(ಇಂಟ್) ನಿಂದ float(ಪ್ಲೋಟ್) ಗೆ ಬದಲಾಯಿಸುವಾಗ ಮಾತ್ರ ಸಾಧ್ಯ, ಬೇರೆ ರೀತಿಯಲ್ಲಿ ಸಾಧ್ಯವಿಲ್ಲ.
03:13 float (ಪ್ಲೋಟನ್ನು) int (ಇಂಟ್) ಗೆ ಬದಲಾಯಿಸಲು ನಾವು explicit conversion (ಎಕ್ಪ್ಲಿಸಿಟ್ ಕನ್ವರ್ಷನ್) ಅನ್ನು ಉಪಯೋಗಿಸಬೇಕು.
03:17 ಹಾಗೆ ಮಾಡುವುದು ಹೇಗೆಂದು ನೋಡೋಣ
03:23 ನಾವದನ್ನು ವೇರಿಯೇಬಲ್ ನ ಮುಂಚೆ int (ಇಂಟ್)ಅನ್ನು ಆವರಣದಲ್ಲಿ ಬರೆದು ಮಾಡುತ್ತೇವೆ.
03:34 b ವೇರಿಯೇಬಲ್ ನಲ್ಲಿರುವ ಡೇಟಾ int (ಇಂಟ್) ಡೇಟಾ ಟೈಪ್ ಗೆ ಬದಲಾಯಿಸಬೇಕು ಮತ್ತು ಅದು a ನಲ್ಲಿ ಸಂಗ್ರಹಗೊಳ್ಳಬೇಕೆಂದು ಈ ಸ್ಟೇಟ್ಮೆಂಟ್ ಹೇಳುತ್ತದೆ.
03:43 ಸೇವ್ ಮಾಡಿ ಫೈಲನ್ನು ರನ್ ಮಾಡಿ
03:51 ನಾವು ನೋಡುವಂತೆ . float (ಪ್ಲೋಟ್) ನ ಮೌಲ್ಯ int (ಇಂಟ್) ಗೆ ಬದಲಾವಣೆಗೊಂಡಿದೆ.
03:56 ಆದರೆ ಡೇಟಾ ಟೈಪ್ ಗೆ ಸರಿಹೊಂದಲು, ಅದಕ್ಕೆ ತಕ್ಕಂತೆ ಡೇಟಾವು ಸಹ ಬದಲಾಗಿದೆ.
04:01 Explicit conversion (ಎಕ್ಪ್ಲಿಸಿಟ್ ಕನ್ವರ್ಷನ್) ಅನ್ನು ಡೇಟಾವನ್ನು int (ಇಂಟ್) ನಿಂದ float (ಪ್ಲೋಟ್) ಗೆ ಬದಲಾಯಿಸಲೂ ಸಹ ಉಪಯೋಗಿಸಬಹುದು.
04:07 ಹಿಂದಿನ ಉದಾಹರಣೆಯನ್ನು ಪ್ರಯತ್ನಿಸೋಣ.
04:10 int a =5 (ಇಂಟ್ ಎ ಸಮ ಐದು), float b (ಪ್ಲೋಟ್ ಬಿ), b = (float) a (ಬಿ ಸಮ (ಪ್ಲೋಟ್)ಎ)
04:32 System.out.println(b); (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್ (ಬಿ))
04:36 ನಾವು integer (ಇಂಟೀಜರ್) ಅನ್ನು float (ಪ್ಲೋಟ್) ಗೆ ಬದಲಾಯಿಸಲು Explicit conversion (ಎಕ್ಪ್ಲಿಸಿಟ್ ಕನ್ವರ್ಷನ್) ಅನ್ನು ಉಪಯೋಗಿಸುತ್ತಿದ್ದೇವೆ.
04:42 ಫೈಲನ್ನು ಸೇವ್ ಮಾಡಿ ರನ್ ಮಾಡಿ.
04:51 int (ಇಂಟ್) ನ ಮೌಲ್ಯ float (ಪ್ಲೋಟ್) ನ ಮೌಲ್ಯಕ್ಕೆ ಬದಲಾಗಿರುವುದನ್ನು ನಾವು ನೋಡಬಹುದು
04:58 ನಾವು'character ( ಕ್ಯಾರಕ್ಟರನ್ನು) integer (ಇಂಟೀಜರ್) ಗೆ ಪರಿವರ್ತಿಸಿದಾಗ ಏನಾಗುತ್ತದೆಂದು ನೋಡೋಣ.
05:06 int a, (ಇಂಟ್ ಎ) char c (ಕ್ಯಾರ್ ಸಿ) ಸಮ ಸಿಂಗಲ್ ಕೋಟ್ಸ್ ನಲ್ಲಿ' m (ಎಮ್);
05:24 a (ಎ) ಸಮ (int) c (ಇಂಟ್ ಸಿ)
05:32 System.out.println(a); (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್ (ಎ))
05:36 ನಾವು ಕ್ಯಾರಕ್ಟರ್ m (ಎಮ್)ಅನ್ನು ಇಂಟೀಜರ್ ಗೆ ಪರಿವರ್ತಿಸುತ್ತಿದ್ದೇವೆ ಮತ್ತು ಅದರ ಮೌಲ್ಯವನ್ನು ಪ್ರಿಂಟ್ ಮಾಡುತ್ತಿದ್ದೇವೆ.
05:43 ಇದನ್ನು ಸೇವ್ ಮಾಡಿ ರನ್ ಮಾಡೋಣ
05:53 ನಾವು ನೋಡುವ ಹಾಗೆ, ಔಟ್ ಪುಟ್ 109 (ನೂರ ಒಂಭತ್ತು) ಇದು m (ಎಮ್) ನ ascii ಆಸ್ಕಿ ಮೌಲ್ಯವಾಗಿದೆ.
05:58 ಇದರ ಅರ್ಥ ಯಾವಾಗ char (ಕ್ಯಾರ್) int (ಇಂಟ್) ಗೆ ಪರಿವರ್ತಿತವಾಗುತ್ತದೋ ಆಗ ಅದರ ascii (ಆಸ್ಕಿ) ಮೌಲ್ಯ ಸಂಗ್ರಹವಾಗುತ್ತದೆ.
06:03 ನಾವೀಗ digit (ಡಿಜಿಟ್)ನೊಂದಿಗೆ ಪ್ರಯತ್ನಿಸೋಣ.
06:06 char c(ಕ್ಯಾರ್ ಸಿ) ಸಮ digit 5 (ಡಿಜಿಟ್ ಐದು)
06:11 ಇದನ್ನು ಸೇವ್ ಮತ್ತು ರನ್ ಮಾಡಿ
06:18 ನಾವು ನೋಡುವ ಹಾಗೆ, ಔಟ್ ಪುಟ್ ೫೩ (ಐವತ್ತಮೂರು) ಇದು ಕ್ಯಾರಕ್ಟರ್ ಐದರ ascii ಆಸ್ಕಿ ಮೌಲ್ಯವಾಗಿದೆ.
06:24 ಇದು ಸಂಖ್ಯೆಯಾದ ೫ (ಐದಲ್ಲ).
06:26 ಸಂಖ್ಯೆಯನ್ನು ಪಡೆಯಲು, ನಾವು ಸ್ಟ್ರಿಂಗನ್ನು ಉಪಯೋಗಿಸಬೇಕು ಮತ್ತು ಅದನ್ನು ಇಂಟೀಜರ್ ಗೆ ಪರಿವರ್ತಿಸಬೇಕು.
06:31 ನಾವೀಗ ಹಾಗೆ ಮಾಡುವುದು ಹೇಗೆಂದು ನೋಡೋಣ.
06:33 ಮೈನ್ ಫಂಕ್ಷನ್ ಅನ್ನು ತೆಗೆಯೋಣ
06:38 ಟೈಪ್
06:40 ಸ್ಟ್ರಿಂಗ್ ಎಸ್ ಹೈಟ್ ಅಂದರೆ ಹೈಟ್ ನ ಸ್ಟ್ರಿಂಗ್ ಫಾರ್ಮ್ ಸಮ ಡಬಲ್ ಕೋಟ್ಸ್ ನಲ್ಲಿ ೬ (ಆರು)
06:58 int h(ಇಂಟ್ ಹೆಚ್) ಸಮ explicit conversion ಎಕ್ಸ್ಪ್ಲಿಸಿಟ್ ಕನ್ವರ್ಷನ್ int of sHeight (ಇಂಟ್ ಆಫ್ ಎಸ್ ಹೈಟ್) ಮತ್ತು
07:11 System.out.println(ಹೆಚ್); (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್ (ಹೆಚ್)) ಫೈಲನ್ನು ಸೇವ್ ಮಾಡಿ.
07:27 ಆರನ್ನು ಮೌಲ್ಯವಾಗಿ ಹೊಂದಿರುವ ಸ್ಟ್ರಿಂಗ್ ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಿದ್ದೇನೆ ಮತ್ತು ಅದನ್ನು ಇಂಟೀಜರ್ ಗೆ ಪರಿವರ್ತಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅಲ್ಲಿ ತಪ್ಪಿರುವುದನ್ನು ನೋಡುತ್ತಿದ್ದೇವೆ.
07:37 ತಪ್ಪಿನ ಸಂದೇಶ ಹೀಗಿದೆ Cannot cast from String to int. (ಕೆನಾಟ್ ಕಾಸ್ಟ್ ಫ್ರಮ್ ಸ್ಟ್ರಿಂಗ್ ಟು ಇಂಟ್) (ಅಂದರೆ ಸ್ಟ್ರಿಂಗ್ ನಿಂದ ಇಂಟ್ ಗೆ ಕಾಸ್ಟ್ ಮಾಡಲು ಆಗುವುದಿಲ್ಲ)
07:42 ಇದರ ಅರ್ಥ ಸ್ಟ್ರಿಂಗ್ಸನ್ನು ಪರಿವರ್ತಿಸಲು, ನಾವು ಇಂಪ್ಲಿಸಿಟ್ ಅಥವಾ ಎಕ್ಸ್ಪ್ಲಿಸಿಟ್ ಕನ್ವರ್ಷನ್ ಅನ್ನು ಉಪಯೋಗಿಸಲಾಗುವುದಿಲ್ಲ.
07:48 ಇದನ್ನು ಬೇರೆಯ ವಿಧಾನದಲ್ಲಿಯೇ ಮಾಡಬೇಕು. ಅದನ್ನು ಉಪಯೋಗಿಸೋಣ
07:58 int sHeight ( ಇಂಟ್ ಎಸ್ ಹೈಟ್) ಅನ್ನು ತೆಗೆಯಿರಿ ಮತ್ತು Integer.parseInt sHeight '. (ಇಂಟೀಜರ್' ಡಾಟ್ ಪಾರ್ಸ್ಇಂಟ್ ಎಸ್ ಹೈಟ್) ಎಂದು ಟೈಪ್ ಮಾಡಿ.
08:21 ಫೈಲನ್ನು ಸೇವ್ ಮಾಡಿ ರನ್ ಮಾಡಿ.
08:29 ಮೌಲ್ಯವು ಯಶಸ್ವಿಯಾಗಿ ಇಂಟೀಜರ್ ಗೆ ಪರಿವರ್ತಿತವಾಗಿರುವುದನ್ನು ನೋಡುತ್ತೇವೆ.
08:35 ಇದನ್ನು ಮಾಡಲು ನಾವು ಇಂಟೀಜರ್ ಮಾಡ್ಯೂಲ್ ನ parseInt method ('ಪಾರ್ಸ್ಇಂಟ್ ಮೆಥೆಡ್) ಅನ್ನು ಉಪಯೋಗಿಸುತ್ತೇವೆ.
08:41 ನಾವೀಗ 6543 (ಆರು ಐದು ನಾಲ್ಕು ಮೂರರಂತೆ) ಒಂದಕ್ಕಿಂತ ಹೆಚ್ಚು ಡಿಜಿಟ್ಸ್ ಇದ್ದರೆ ಏನಾಗುತ್ತದೆಂದು ನೋಡೋಣ.
08:49 ಫೈಲನ್ನು ಸೇವ್ ಮಾಡಿ ರನ್ ಮಾಡಿ.
08:55 ನಾವು ಪುನಃ, ಸಂಖ್ಯೆಯನ್ನು ಹೊಂದಿರುವ ಸ್ಟ್ರಿಂಗ್ ಯಶಸ್ವಿಯಾಗಿ ಇಂಟೀಜರ್ ಗೆ ಪರಿವರ್ತಿತವಾಗಿರುವುದನ್ನು ನೋಡುತ್ತೇವೆ.
09:03 ಈಗ ಸ್ಟ್ರಿಂಗ್ಸ್ ಪ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದ್ದರೆ ಏನಾಗುತ್ತದೆಂದು ನೋಡೋಣ.
09:10 6543 (ಆರು ಐದು ನಾಲ್ಕು ಮೂರನ್ನು) 65.43 (ಅರವತ್ತೈದು ಬಿಂದು ನಾಲ್ಕು ಮೂರಕ್ಕೆ) ಬದಲಿಸಿ. ಹೀಗೆ ನಾವು ಸ್ಟ್ರಿಂಗ್ಸ್ ನಲ್ಲಿ ಪ್ಲೋಟಿಂಗ್ ಪಾಯಿಂಟ್ ನಂಬರನ್ನು ಹೊಂದಿದ್ದೇವೆ ಮತ್ತು ಅದನ್ನು ಇಂಟೀಜರ್ ಗೆ ಪರಿವರ್ತಿಸುತ್ತಿದ್ದೇವೆ.
09:22 ಫೈಲನ್ನು ಸೇವ್ ಮಾಡಿ ರನ್ ಮಾಡಿ.
09:31 ನಾವು ತಪ್ಪಿರುವುದನ್ನು ನೋಡುತ್ತೆವೆ. ಹೀಗೇಕೆ ಆಗುತ್ತದೆ ಎಂದರೆ ನಾವು ಪ್ಲೋಟಿಂಗ್ ಪಾಯಿಂಟನ್ನು ಹೊಂದಿರುವ ಸ್ಟ್ರಿಂಗನ್ನು ಇಂಟೀಜರ್ ಗೆ ಪರಿವರ್ತಿಸಲಾಗುವುದಿಲ್ಲ.
09:41 ನಾವದನ್ನು ಪ್ಲೋಟ್ ಗೆ ಪರಿವರ್ತಿಸಬೇಕು. ಹಾಗೆ ಮಾಡುವುದು ಹೇಗೆಂದು ನೋಡೋಣ;
09:45 ಮೊದಲು ಡೇಟಾ ಟೈಪ್ ಪ್ಲೋಟ್ ಆಗಿರಲೇಬೇಕು,
09:51 ಎರಡನೆಯದಾಗಿ ನಾವು float . parsefloat (ಪ್ಲೋಟ್ ಡಾಟ್ ಫಾರ್ಸ್ ಪ್ಲೋಟ್) ಅನ್ನು ಉಪಯೋಗಿಸುತ್ತೇವೆ.
10:07 ನಾವು ಪ್ಲೋಟ್ ಕ್ಲಾಸ್ ನ ಪಾರ್ಸ್ ಪ್ಲೋಟ್ ಮೆಥಡ್ ಅನ್ನು ಪ್ಲೋಟಿಂಗ್ ಪಾಯಿಂಟ್ ಸಂಖ್ಯೆಯನ್ನು ಹೊಂದಿರುವ ಸ್ಟ್ರಿಂಗನ್ನು ಆಕ್ಚುಅಲ್ ಪ್ಲೋಟಿಂಗ್ ಪಾಯಿಂಟ್ ಸಂಖ್ಯೆಗೆ ಪರಿವರ್ತಿಸಲು ಉಪಯೋಗಿಸುತ್ತಿದ್ದೇವೆ.
10:18 ಫೈಲನ್ನು ಸೇವ್ ಮಾಡಿ ರನ್ ಮಾಡಿ. ಪ್ಲೋಟಿಂಗ್ ಪಾಯಿಂಟ್ ಸಂಖ್ಯೆಯನ್ನು ಹೊಂದಿರುವ ಸ್ಟ್ರಿಂಗ್ ಯಶಸ್ವಿಯಾಗಿ ಪ್ಲೋಟಿಂಗ್ ಪಾಯಿಂಟ್ ಸಂಖ್ಯೆಗೆ ಪರಿವರ್ತಿತವಾಗಿದೆ.
10:33 ಹೀಗೆ ನಾವು ಇಂಪ್ಲಿಸಿಟ್ ಮತ್ತು ಎಕ್ಸ್ಪ್ಲಿಸಿಟ್ ಪರಿವರ್ತನೆಯನ್ನು ಮಾಡುತ್ತೇವೆ ಮತ್ತು ಸ್ಟ್ರಿಂಗನ್ನು ನಂಬರಿಗೆ ಪರಿವರ್ತಿಸುತ್ತೇವೆ.
10:45 ಈ ಮೂಲಕ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು.
10:48 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತದದ್ದು, ಡೇಟಾವನ್ನು ಒಂದು ವಿಧಾನದಿಂದ ಮತ್ತೊಂದಕ್ಕೆ ಪರಿವರ್ತಿಸುವುದು ಹೇಗೆ.
10:54 ಇಂಪ್ಲಿಸಿಟ್ ಮತ್ತು ಎಕ್ಪ್ಲಿಸಿಟ್ ಕನ್ವರ್ಷನ್ ಎಂಬುದರ ಅರ್ಥವೇನು
10:57 ಸ್ಟ್ರಿಂಗ್ಸನ್ನು ಸಂಖ್ಯೆಗೆ ಪರಿವರ್ತಿಸುವುದು ಹೇಗೆ ಇತ್ಯಾದಿ.
11:01 ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ರೂಪದಲ್ಲಿInteger.toString (ಇಂಟೀಜರ್ ಡಾಟ್ ಟುಸ್ಟ್ರಿಂಗ್ ಮತ್ತು) Float.toString. (ಪ್ಲೋಟ್.ಟುಸ್ಟ್ರಿಂಗ್ )ನ ಬಗ್ಗೆ ಓದಿ.
11:07 ಮತ್ತು ಅವುಗಳ ಕಾರ್ಯಗಳನ್ನು ತಿಳಿಯಿರಿ.
11:14 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
11:20 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
11:23 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
11:27 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೋರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
11:31 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:34 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:40 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:44 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:50 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11:55 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal