C-and-Cpp/C2/If-And-Else-If-statement/Kannada
From Script | Spoken-Tutorial
Revision as of 13:55, 25 September 2014 by Vasudeva ahitanal (Talk | contribs)
Time | Narration |
00:02 | ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ಕಂಡೀಶನಲ್ ಸ್ಟೇಟ್ಮೆಂಟ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:11 | ಒಂದೇ ಸ್ಟೇಟ್ಮೆಂಟ್ ಅನ್ನು ಎಕ್ಸಿಕ್ಯೂಟ್ ಮಾಡುವುದು ಹೇಗೆ ಮತ್ತು |
00:14 | ಸ್ಟೇಟ್ಮೆಂಟ್ ನ ಗುಂಪನ್ನು ಎಕ್ಸಿಕ್ಯೂಟ್ ಮಾಡುವುದು ಹೇಗೆ? |
00:16 | ಎಂಬುದನ್ನು ನಾವು ಉದಾಹರಣೆಯೊಂದಿಗೆ ಕಲಿಯಲಿದ್ದೇವೆ ಹಾಗೂ, |
00:19 | ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ಮತ್ತು ಅವುಗಳ ಪರಿಹಾರವನ್ನೂ ನೋಡಲಿದ್ದೇವೆ. |
00:25 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ನೇಆವೃತ್ತಿ ಮತ್ತು gcc ಮತ್ತುg++ಕಂಪೈಲರ್ನ4.6.1 ನೇಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:38 | ಸ್ಟೇಟ್ಮೆಂಟ್ಸ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:43 | ಸ್ಟೇಟ್ಮೆಂಟ್ ಎಂಬುದು ಪ್ರೊಗ್ರಾಮ್ ಎಕ್ಸಿಕ್ಯೂಟ್ ಆಗುವ ರೀತಿಯನ್ನು ನಿಯಂತ್ರಿಸುತ್ತದೆ. |
00:49 | ಇದು, ಯಾವ ಕೋಡ್ ಎಕ್ಸಿಕ್ಯೂಟ್ ಆಗಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. |
00:55 | ನಾವು, ಕಂಡೀಶನ್ ಗಳು ಸರಿ ಅಥವಾ ತಪ್ಪು ಎಂಬುದನ್ನು ನಿರ್ಧಾರಿಸಬಹುದು. |
01:00 | ನಾವು, ಒಂದು ಸ್ಟೇಟ್ಮೆಂಟ್ ಅಥವಾ ಸ್ಟೇಟ್ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಬಹುದು. |
01:07 | ಇಫ್ ಸ್ಟೇಟ್ಮೆಂಟ್ ನ ಹರಿವನ್ನು ತಿಳಿಯೋಣ. |
01:13 | ಇಲ್ಲಿ, ಕಂಡೀಶನ್ ಸರಿಯಾಗಿದ್ದಲ್ಲಿ statement1ಎಕ್ಸಿಕ್ಯೂಟ್ ಆಗುತ್ತದೆ, |
01:20 | ಕಂಡೀಶನ್ ತಪ್ಪಾಗಿದ್ದಲ್ಲಿ ಸ್ಟೇಟ್ಮೆಂಟ್ ಟು ಎಕ್ಸಿಕ್ಯೂಟ್ ಆಗುತ್ತದೆ. |
01:29 | ಈಗ, ನಾವು ಎಲ್ಸ್ ಇಫ್ ಸ್ಟೇಟ್ಮೆಂಟ್ ನ ಹರಿವನ್ನು ತಿಳಿಯೋಣ. |
01:32 | ಇಲ್ಲಿ, ಕಂಡೀಶನ್ ಒನ್(condition1) ಸರಿಯಾಗಿದ್ದಲ್ಲಿ ಸ್ಟೇಟ್ಮೆಂಟ್ ಒನ್ (statement1)ಎಕ್ಸಿಕ್ಯೂಟ್ ಆಗುತ್ತದೆ, |
01:41 | condition1 ತಪ್ಪಾಗಿದ್ದಲ್ಲಿ, ಮತ್ತೊಂದು ಕಂಡೀಶನ್ ಆದ condition2 ಅನ್ನು ಪರಿಶೀಲಿಸುತ್ತದೆ, |
01:49 | condition2 ಸರಿಯಾಗಿದ್ದಲ್ಲಿ, statement3ಎಕ್ಸಿಕ್ಯೂಟ್ ಆಗುತ್ತದೆ, |
01:54 | ಮತ್ತು condition2 ತಪ್ಪಾಗಿದ್ದಲ್ಲಿ statement2ಎಕ್ಸಿಕ್ಯೂಟ್ ಆಗುತ್ತದೆ. |
02:02 | ಈಗ, ನಮ್ಮ ಪ್ರೊಗ್ರಾಮ್ ಅನ್ನು ನೋಡೋಣ. |
02:06 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. |
02:09 | ಹಾಗಾಗಿ ಅದನ್ನು ಒಪನ್ ಮಾಡೋಣ. |
02:13 | ನಮ್ಮ ಫೈಲ್ ನ ಹೆಸರು ಇಫ್ ಎಸ್ ಟಿ ಎಮ್ ಟಿ(ifstmt) ಡಾಟ್ c ಎಂದು ಗಮದಲ್ಲಿಡಿ. |
02:18 | ಈ ಪ್ರೊಗ್ರಾಮ್ ನಲ್ಲಿ ಎರಡು ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿದು, ಕೆಲವು ಕಂಡೀಶನ್ ಗಳನ್ನು ಪರಿಶೀಲಿಸುತ್ತೇವೆ. |
02:26 | ಈಗ, ಕೋಡ್ ಅನ್ನು ವಿವರಿಸುತ್ತೇನೆ. |
02:30 | ಇದು ನಮ್ಮ ಹೆಡರ್ ಫೈಲ್. |
02:34 | ಇದು ನಮ್ಮ ಮೈನ್ ಫಂಕ್ಷನ್. |
02:38 | ಇಲ್ಲಿ ನಾವು ಮೂರು ಇಂಟಿಜರ್ ವೇರಿಯೇಬಲ್ a, b ಮತ್ತು ಸಮ್(sum) ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
02:46 | ಇಲ್ಲಿ, ನಾವು ಯೂಸರ್ ಇಂದ ಇನ್ಪುಟ್ ಕೇಳುತ್ತಿದ್ದೇವೆ. |
02:49 | a ಮತ್ತು b ಯ ಮೌಲ್ಯವನ್ನು ಯೂಸರ್ ಕೊಡುತ್ತಾನೆ. |
02:52 | ಮೌಲ್ಯಗಳನ್ನು ವೇರಿಯೇಬಲ್ a ಮತ್ತು ವೇರಿಯೇಬಲ್ b ಯಲ್ಲಿ ಇಡಲಾಗುತ್ತದೆ. |
02:58 | ಸ್ಕ್ಯಾನ್ ಎಫ್(scanf) ಫಂಕ್ಷನ್, ಡಾಟಾವನ್ನು ಕಂಸೋಲ್ ಇಂದ ಪಡೆಯುತ್ತದೆ, |
03:02 | ನಂತರ ಕೊಟ್ಟ ವೇರಿಯೇಬಲ್ ನಲ್ಲಿ ಇಡುತ್ತದೆ. |
03:06 | scanf ನಲ್ಲಿರುವ ಫಾರ್ಮ್ಯಾಟ್ ಸ್ಪೆಸಿಫೈರ್, ಡಾಟಾದ ಟೈಪ್ ಅನ್ನು ತಿಳಿಯಲು ಸಹಾಯ ಮಾಡುತ್ತದೆ. |
03:10 | ಇಲ್ಲಿರುವ ಪರ್ಸೆಂಟ್ ಡಿ, ನಾವು ಇಂಟಿಜರ್ ಡಾಟಾ ಟೈಪ್ ಅನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. |
03:18 | ಇಲ್ಲಿ a ಮತ್ತು b ಯ ಮೌಲ್ಯಗಳನ್ನು ಕೂಡುತ್ತೇವೆ. |
03:22 | ಮೊತ್ತವನ್ನು ಸಮ್ ನಲ್ಲಿ ಇಡುತ್ತೇವೆ. |
03:25 | ನಂತರ ಫಲಿತಾಂಶವನ್ನು ಪ್ರಿಂಟ್ ಮಾಡುತ್ತೇವೆ. |
03:29 | ಇದು ನಮ್ಮ ಇಫ್ ಸ್ಟೇಟ್ಮೆಂಟ್. |
03:30 | ಇಲ್ಲಿ, ಸಮ್ ಇಪ್ಪತ್ತಕ್ಕಿಂತ ದೊಡ್ಡದೇ ಎಂದು ಕಂಡೀಶನ್ ಪರಿಶೀಲಿಸುತ್ತೇವೆ. |
03:36 | ಕಂಡೀಶನ್ ಸರಿಯಾಗಿದ್ದಲ್ಲಿ, ಸಮ್ ಈಸ್ ಗ್ರೇಟರ್ ದೆನ್ ಟ್ವೆಂಟಿ ಎಂದು ಪ್ರಿಂಟ್ ಮಾಡುತ್ತೇವೆ. |
03:42 | ಈಗ, ಈ ಲೈನ್ ಗಳನ್ನು ಕಮೆಂಟ್ ಮಾಡೋಣ. |
03:48 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
03:51 | ಈಗ, save ಒತ್ತಿ. |
03:53 | ಮೊದಲು, ಇಫ್ ಸ್ಟೇಟ್ಮೆಂಟ್ ನ ಎಕ್ಸಿಕ್ಯೂಶನ್ ನೋಡೋಣ. |
03:58 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
04:09 | ಕಂಪೈಲ್ ಮಾಡಲು, “gcc”ಸ್ಪೇಸ್ ಇಫ್ ಎಸ್ ಟಿ ಎಮ್ ಟಿ(ifstmt)ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಇಫ್(if)ಎಂದು ಟೈಪ್ ಮಾಡಿ, Enter ಒತ್ತಿ. |
04:20 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಇಫ್ ಎಂದು ಟೈಪ್ ಮಾಡಿ, Enter ಒತ್ತಿ. |
04:26 | ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ. |
04:31 | ಹತ್ತು ಮತ್ತು ಹನ್ನೆರಡು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
04:38 | ಸಮ್ ಆಫ್ a ಎಂಡ್ b ಈಸ್ ಟ್ವೆಂಟಿಟು. ಸಮ್ ಈಸ್ ಗ್ರೇಟರ್ ದಾನ್ ಟ್ವೆಂಟಿ ಎಂದು ಔಟ್ ಪುಟ್ ತೋರಿಸುತ್ತದೆ. |
04:45 | ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
04:48 | ಇನ್ನೊಂದು ಕಂಡೀಶನ್ ಅನ್ನು ಪರಿಶೀಲಿಸೋಣ. |
04:52 | ಇಲ್ಲಿಂದ ಕಮೆಂಟ್ ತೆಗೆಯುತ್ತೇನೆ. |
04:56 | ಇಲ್ಲಿ ಕಮೆಂಟ್ ಮಾಡುತ್ತೇನೆ. |
05:00 | ಈಗ, save ಒತ್ತಿ. |
05:03 | ಇದು ನಮ್ಮ ಎಲ್ಸಿಫ್ ಸ್ಟೇಟ್ಮೆಂಟ್. |
05:05 | ಇಲ್ಲಿ, ನಾವು, ಸಮ್ ಹತ್ತಕ್ಕಿಂತ ದೊಡ್ಡದೇ? ಎಂದು ಇನ್ನೊಂದು ಕಂಡೀಶನ್ ಅನ್ನು ಪರಿಶೀಲಿಸೋಣ. |
05:11 | ಕಂಡೀಶನ್ ಸರಿಯಾಗಿದ್ದಲ್ಲಿ ಸಮ್ ಈಸ್ ಗ್ರೇಟರ್ ದೆನ್ ಟೆನ್ ಎಂಡ್ ಲೆಸ್ ದೆನ್ ಟ್ವೆಂಟಿ ಎಂದು ಪ್ರಿಂಟ್ ಮಾಡುತ್ತೇವೆ. |
05:18 | ಈಗ ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
05:20 | ಮೊದಲಿನಂತೆ ಕಂಪೈಲ್ ಮಾಡಿ. |
05:23 | ಮೊದಲಿನಂತೆ ಎಕ್ಸಿಕ್ಯೂಟ್ ಮಾಡೋಣ. |
05:26 | ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ. |
05:30 | ಹತ್ತು ಮತ್ತು ಎರಡು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
05:35 | ಸಮ್ ಆಫ್ a ಎಂಡ್ b ಈಸ್ ಟ್ವೆಲ್ವ್. ಸಮ್ ಈಸ್ ಗ್ರೇಟರ್ ದಾನ್ ಟೆನ್ ಎಂಡ್ ಲೆಸ್ ದಾನ್ ಟ್ವೆಂಟಿ ಎಂದು ಔಟ್ ಪುಟ್ ತೋರಿಸುತ್ತದೆ. |
05:42 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ. |
05:44 | ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
05:48 | ಇಲ್ಲಿ ಮತ್ತು ಇಲ್ಲಿಂದ ಕಮೆಂಟ್ ಅನ್ನು ತೆಗೆಯುತ್ತೇನೆ. ಈಗ, Save ಒತ್ತಿ. |
05:56 | ಮೇಲಿನ ಎರಡೂ ಕಂಡೀಶನ್ ಗಳೂ ತಪ್ಪಾಗಿದ್ದಲ್ಲಿ, ಸಮ್ ಈಸ್ ಲೆಸ್ ದೆನ್ ಟೆನ್ ಎಂದು ಪ್ರಿಂಟ್ ಮಾಡುತ್ತೇವೆ. |
06:04 | ಇದು ನಮ್ಮ ಎಲ್ಸ್ ಸ್ಟೇಟ್ಮೆಂಟ್. |
06:07 | ಈಗ, ಎಕ್ಸಿಕ್ಯೂಟ್ ಮಾಡಿ ನೋಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
06:11 | ಮೊದಲಿನಂತೆ ಕಂಪೈಲ್ ಮಾಡಿ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. |
06:18 | ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b ಎಂದು ತೋರಿಸುತ್ತದೆ. |
06:22 | ಮೂರು ಮತ್ತು ಐದು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
06:27 | ಸಮ್ ಆಫ್ a ಎಂಡ್ b ಈಸ್ ಏಟ್(8). ಸಮ್ ಈಸ್ ಲೆಸ್ ದೆನ್ ಟೆನ್ ಎಂದು ಔಟ್ ಪುಟ್ ತೋರಿಸುತ್ತದೆ. |
06:34 | ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ. |
06:38 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
06:41 | ಇಲ್ಲಿ, ಇಫ್ ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿಕೊಲನ್ ಅನ್ನು ಟೈಪ್ ಮಾಡುತ್ತೇನೆ ಎಂದೆಣಿಸಿ. |
06:47 | ಈಗ ಏನಾಗುತ್ತದೆ ಎಂದು ನೋಡೋಣ. Save ಒತ್ತಿ. |
06:50 | ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
06:53 | ಮೊದಲಿನಂತೆ ಕಂಪೈಲ್ ಮಾಡೋಣ. |
06:56 | ಎಲ್ಸ್ ವಿತೌಟ್ ಅ ಪ್ರಿವಿಯಸ್ ಇಫ್ ಎಂದು ಎರರ್ ತೋರಿಸುತ್ತದೆ. |
07:02 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಇದು ಸಿಂಟಾಕ್ಸ್ ಎರರ್. |
07:07 | ಇಫ್ ಸ್ಟೇಟ್ಮೆಂಟ್ ಯಾವಾಗಲೂ ಸೆಮಿಕೊಲನ್ ನಿಂದ ಅಂತ್ಯಗೊಳ್ಳುವುದಿಲ್ಲ. |
07:10 | ಮತ್ತು, ಎಲ್ಸಿಫ್ ಸ್ಟೇಟ್ಮೆಂಟ್ , ಇಫ್ ಸ್ಟೇಟ್ಮೆಂಟ್ ಇಲ್ಲದೆ ಕೆಲಸ ಮಾಡುವುದಿಲ್ಲ. |
07:16 | ಈಗ ಎರರ್ ಅನ್ನು ಸರಿಪಡಿಸೋಣ. ಇಲ್ಲಿ ಸೆಮಿಕೊಲನ್ ಅನ್ನು ಡಿಲೀಟ್ ಮಾಡಿ. |
07:22 | ಈಗ Save ಒತ್ತಿ. |
07:25 | ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
07:29 | ಮೊದಲಿನಂತೆ ಕಂಪೈಲ್ ಮಾಡಿ. ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. |
07:35 | ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b. |
07:37 | ಮೂರು ಮತ್ತು ಆರು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
07:43 | ಸಮ್ ಆಫ್ a ಎಂಡ್ b ಈಸ್ ನೈನ್. ಸಮ್ ಈಸ್ ಲೆಸ್ ದಾನ್ ಟೆನ್ ಎಂದು ಔಟ್ ಪುಟ್ ತೋರಿಸುತ್ತದೆ. |
07:52 | ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
07:57 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
07:59 | ಇಲ್ಲಿ ಕೆಲವನ್ನು ಬದಲಾಯಿಸುತ್ತೇನೆ. |
08:03 | Shift, Ctrl ಮತ್ತು S ಕೀ ಗಳನ್ನು ನಿಮ್ಮ ಕೀಬೋರ್ಡ್ ನಲ್ಲಿ ಒಂದೇ ಬಾರಿಗೆ ಒತ್ತಿ. |
08:11 | ಈಗ ಫೈಲ್ ಅನ್ನು ಡಾಟ್ cpp ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. Save ಒತ್ತಿ. |
08:20 | ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ. |
08:26 | ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ. |
08:30 | ಈಗ ಸರ್ಚ್ ಫಾರ್ ಎಂಡ್ ರಿಪ್ಲೇಸ್ ಟೆಕ್ಸ್ಟ್ ಎಂಬ ಆಪ್ಶನ್ ಒತ್ತಿ. |
08:35 | ಪ್ರಿನ್ಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಸ್ಟೇಟ್ಮೆಂಟ್ ಇಂದ ರಿಪ್ಲೇಸ್ ಮಾಡಿ. |
08:40 | ರಿಪ್ಲೇಸ್ ಆಲ್ ಒತ್ತಿ ಮತ್ತು save ಒತ್ತಿ. |
08:46 | ಈಗ ಇಲ್ಲಿರುವ, ಕ್ಲೋಸಿಂಗ್ ಬ್ರಾಕೆಟ್ ಗಳನ್ನು ಡಿಲೀಟ್ ಮಾಡಿ. |
08:49 | ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಸ್ಟೇಟ್ಮೆಂಟ್ ಇಂದ ರಿಪ್ಲೇಸ್ ಮಾಡಿ. |
08:54 | c++ ನಲ್ಲಿ ಲೈನ್ ಅನ್ನು ರೀಡ್ ಮಾಡಲು ಸಿಇನ್ ಫಂಕ್ಷನ್ ಉಪಯೋಗಿಸುವುದರಿಂದ, ಸಿಇನ್ ಮತ್ತು ಎರಡು ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ. |
09:05 | ಈಗ, ಫಾರ್ಮಾಟ್ ಸ್ಪೆಸಿಫೈರ್ ಗಳನ್ನು ಡಿಲೀಟ್ ಮಾಡಿ. |
09:09 | ”,”(comma) ಮತ್ತು ಆಂಪರ್ಸಾಂಡ್ ಅನ್ನು ಡಿಲೀಟ್ ಮಾಡಿ. |
09:12 | ಇಲ್ಲಿ ”,”(comma) ಅನ್ನು ಡಿಲೀಟ್ ಮಾಡಿ ಮತ್ತು ಎರಡು ಕ್ಲೋಸಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
09:17 | ಪುನಃ ಆಂಪರ್ಸಾಂಡ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಗಳನ್ನು ಡಿಲೀಟ್ ಮಾಡಿ. ಈಗ save ಒತ್ತಿ. |
09:25 | ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಮತ್ತು ”,”(comma) ಗಳನ್ನು ಡಿಲೀಟ್ ಮಾಡಿ. |
09:31 | ಈಗ ಬ್ಯಾಕ್ ಸ್ಲ್ಯಾಶ್ ಎನ್ ಮತ್ತು ಫಾರ್ಮಾಟ್ ಸ್ಪೆಸಿಫೈರ್ ಅನ್ನು ಡಿಲೀಟ್ ಮಾಡಿ. |
09:37 | ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
09:42 | ಪುನಃ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಮತ್ತು ಡಬಲ್ ಕೋಟ್ಸ್ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್ ಎಂದು ಟೈಪ್ ಮಾಡಿ. |
09:49 | ಇಲ್ಲಿಯೂ, ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡೋಣ. |
09:53 | ಈಗ ಪುನಃ ಇಲ್ಲಿ ಮತ್ತು ಇಲ್ಲಿ ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ. |
09:59 | ಈಗ, Save ಒತ್ತಿ. |
10:02 | ಎಕ್ಸಿಕ್ಯೂಟ್ ಮಾಡೋಣ. |
10:04 | ಟರ್ಮಿನಲ್ ಗೆ ಹಿಂದಿರುಗಿ. ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ. |
10:10 | ಕಂಪೈಲ್ ಮಾಡಲು g++ ಸ್ಪೇಸ್ ifstmt ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ಇಫ್ ಒನ್ ಎಂದು ಟೈಪ್ ಮಾಡಿ. |
10:20 | ifstmt ಡಾಟ್ c ಯ if ಔಟ್ ಪುಟ್ ಪಾರಾಮೀಟರ್ ಒವರ್ ರೈಟ್ ಆಗದಿರಲು ಇಲ್ಲಿ if1 ಎಂದು ಇದೆ. |
10:31 | ಈಗ Enter ಒತ್ತಿ. |
10:32 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ if1 ಎಂದು ಟೈಪ್ ಮಾಡಿ Enter ಒತ್ತಿ. |
10:39 | ಎಂಟರ್ ದ ವ್ಯಾಲ್ಯೂ ಆಫ್ a ಎಂಡ್ b. ನಾನು ಇಪ್ಪತ್ತು ಮತ್ತು ಹತ್ತು ಎಂದು ಮೌಲ್ಯಗಳನ್ನು ಕೊಡುತ್ತೇನೆ. |
10:48 | ಸಮ್ ಆಫ್ a ಎಂಡ್ b ಈಸ್ ಥರ್ಟಿ. ಸಮ್ ಈಸ್ ಗ್ರೇಟರ್ ದೆನ್ ಟ್ವೆನ್ಟಿ. ಎಂದು ಔಟ್ ಪುಟ್ ತೋರಿಸುತ್ತದೆ. |
10:56 | ಇಲ್ಲಿಗೆ, ಈ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ. |
10:59 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. |
11:02 | ಸಾರಾಂಶ ತಿಳಿಯೋಣ. |
11:04 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : ಇಫ್ ಸ್ಟೇಟ್ಮೆಂಟ್, ಉದಾಹರಣೆಗೆ ಇಫ್ ಕಂಡೀಶನ್ |
11:11 | ಮತ್ತು ಎಲ್ಸಿಫ್ ಸ್ಟೇಟ್ಮೆಂಟ್ ಉದಾಹರಣೆಗೆ ಎಲ್ಸ್ ಇಫ್ ಕಂಡೀಶನ್. |
11:17 | a ಎಂಬುದು b ಗಿಂತ ದೊಡ್ಡದೋ ಅಥವಾ ಸಣ್ಣದೋ ಎಂದು ಪರಿಶೀಲಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
11:24 | ಸುಳಿವು : ಇಫ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ. |
11:28 | a, b ಅಥವಾ c ಗಳಲ್ಲಿ ಯಾವುದು ದೊಡ್ಡದು ಎಂದು ಪರಿಶೀಲಿಸಲು ಮತ್ತೊಂದು ಪ್ರೊಗ್ರಾಮ್ ಬರೆಯಿರಿ. |
11:34 | ಸುಳಿವು : ಎಲ್ಸ್ ಇಫ್ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ. |
11:38 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
11:41 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
11:44 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
11:48 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, |
11:50 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
11:54 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
11:57 | ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ. |
12:04 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
12:09 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
12:15 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
12:20 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |