Java/C2/Errors-and-Debugging-in-Eclipse/Kannada
From Script | Spoken-Tutorial
Revision as of 16:31, 27 August 2014 by Vasudeva ahitanal (Talk | contribs)
Time | Narration |
00:01 | ಎಕ್ಲಿಪ್ಸ್ ನಲ್ಲಿ ದೋಷಗಳು ಹಾಗೂ ಅವುಗಳ ನಿವಾರಣೆಯ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಸಾಮಾನ್ಯವಾದ ಜಾವಾ ಪ್ರೊಗ್ರಾಮ್ ಅನ್ನು ಬರೆಯುವಾಗ ಕಂಡುಬರುವ ಸಂಭವನೀಯ ದೋಷಗಳ ಬಗ್ಗೆ, |
00:14 | ಆ ದೋಷಗಳನ್ನು ಹೇಗೆ ಗುರುತಿಸುವುದು ಮತ್ತು ಎಕ್ಲಿಪ್ಸ್ ನ ಸಹಾಯದಿಂದ ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದನ್ನು ಕಲಿಯಲಿದ್ದೇವೆ. |
00:20 | ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಮತ್ತು Eclipse 3.7 ಅನ್ನು ಉಪಯೋಗಿಸುತ್ತಿದ್ದೇವೆ. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು, |
00:30 | ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ರಚಿಸಿ ರನ್ ಮಾಡಬೇಕೆಂಬುದನ್ನು ತಿಳಿದಿರಬೇಕು. |
00:33 | ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗೆ ಸೂಚಿಸಿದ ವೆಬ್ಸೈಟ್ ಗೆ ಭೇಟಿಕೊಡಿ. [1] |
00:41 | ಜಾವಾ ಪ್ರೊಗ್ರಾಮ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷಗಳೆಂದರೆ, |
00:45 | ಸೆಮಿಕೊಲನ್ ನ (;) ಕಾಣೆಯಾಗುವಿಕೆ, |
00:47 | ಸಂದೇಶದ ಆಚೆ-ಈಚೆ ಇರುವ ಡಬಲ್ ಕೋಟ್ ನ(" ") ಕಾಣೆಯಾಗುವಿಕೆ, |
00:50 | ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳಲ್ಲಿ ತಾಳೆಯಾಗದಿರುವುದು ಮತ್ತು, |
00:52 | ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಲೋವರ್ ಕೇಸ್ ನಲ್ಲಿ ಬರೆಯುವುದು. |
00:55 | ನಾವು ಪ್ರೊಗ್ರಾಮ್ ಅನ್ನು ಬರೆದು ಈ ಪ್ರತಿಯೊಂದು ದೋಷಗಳನ್ನೂ ಮಾಡಿ ಎಕ್ಲಿಪ್ಸ್ ನಲ್ಲಿ ಅದರ ಪರಿಣಾಮವನ್ನು ನೋಡೋಣ. |
01:04 | ನಮ್ಮಲ್ಲಿ Eclipse IDE ಮತ್ತು HelloWorld ನ ಟ್ಯುಟೋರಿಯಲ್ ಗೆ ಬಳಸಿದ ಪ್ರೊಜೆಕ್ಟ್ ಇದೆ. |
01:11 | ನಾವು ಪ್ರೊಜೆಕ್ಟ್ ನಲ್ಲಿ ಹೊಸ ಕ್ಲಾಸ್ ಅನ್ನು ರಚಿಸಿ ಉಪಯೋಗಿಸಬಹುದು. New…… Class. ನಾವು ಕ್ಲಾಸ್ ಗೆ Error Free ಎಂದು ಹೆಸರಿಟ್ಟು methods stubs ಅನ್ನು public static Void main ಎಂದು ಆಯ್ಕೆಮಾಡೋಣ. |
01:37 | ನಾವು package explorer ಅನ್ನು ಮಿನಿಮೈಸ್ ಮಾಡೋಣ. ಕಮೆಂಟ್ ಗಳನ್ನು ತೆಗೆಯೋಣ ಮತ್ತು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಕೆಲವು ದೋಷಗಳೊಂದಿಗೆ ಸೇರಿಸೋಣ. |
02:23 | ಎಕ್ಲಿಪ್ಸ್ ನಲ್ಲಿ ದೋಷವಿರುವ ಪಂಕ್ತಿಯು ರೆಡ್ ಕ್ರಾಸ್ ಮಾರ್ಕ್ ನೊಂದಿಗೆ ಎಡ ಮಾರ್ಜಿನ್ ನಲ್ಲಿ ಕಾಣುತ್ತದೆ. |
02:35 | ಇಲ್ಲಿ, System.out.println ಎಂಬ ಪಂಕ್ತಿಯಲ್ಲಿ ದೋಷವಿರುವ ಕಾರಣ ಅದರ ಎಡ ಭಾಗದಲ್ಲಿ red cross mark ಕಾಣುತ್ತಿದೆ. |
02:44 | ಕ್ರಾಸ್ ಮಾರ್ಕ್ ನ ಮೇಲೆ ಮೌಸ್ ಒವರ್ ಮಾಡಿದಲ್ಲಿ ದೋಷಗಳ ಸೂಚಿಯು ಕಾಣಿಸುತ್ತದೆ. |
02:51 | ಮೊದಲ ದೋಷವಾಗಿ “Syntax error, insert semi-colon to complete BlockStatements” ಎಂದು ತೋರಿಸುತ್ತಿದೆ. |
02:58 | ಏಕೆಂದರೆ, ನಾವು ಪ್ರೊಗ್ರಾಮ್ ನ ಪ್ರತಿಪಂಕ್ತಿಯನ್ನು ಕೂಡಾ ಸೆಮಿಕೊಲೊನ್ ನೊಂದಿಗೆ ಕೊನೆಗೊಳಿಸಬೇಕು. |
03:03 | ಹಾಗಾಗಿ, ನಾವು ಪಂಕ್ತಿಯ ಕೊನೆಯಲ್ಲಿ ಸೆಮಿಕೊಲೊನ್ ಅನ್ನು ಸೇರಿಸೋಣ. |
03:08 | Ctrl s ಒತ್ತುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ. |
03:16 | ಗಮನಿಸಿ, ಒಮ್ಮೆ ನಾವು ಸೆಮಿಕೊಲೊನ್ ಅನ್ನು ಸೇರಿಸಿ ಫೈಲ್ ಅನ್ನು ಸೇವ್ ಮಾಡಿದಲ್ಲಿ ಮೊದಲನೇಯ ದೋಷವು ಹೋಗುವುದು. |
03:21 | ಈಗ ಕೇವಲ ಒಂದೇ ದೋಷವಿದೆ, ಅದು – “HelloWorld cannot be resolved to a variable” ಎಂದು. ಅಂದರೆ, ಯಾವುದೇ ಸಂದೇಶವು ಕನ್ಸೋಲ್ ನಲ್ಲಿ ತೋರಬೇಕೆಂದಿದ್ದಲ್ಲಿ ಅದು ಡಬಲ್ ಕೋಟ್ ನ ಒಳಗೆ ಇರಬೇಕು. |
03:37 | ಕೋಟ್ ಇಲ್ಲದಿದ್ದಲ್ಲಿ, ಜಾವಾ HelloWorld ಅನ್ನು ವೇರಿಯೇಬಲ್ ನ ಹೆಸರೆಂದು ತಿಳಿದುಕೊಳ್ಳುತ್ತದೆ. |
03:41 | ನಾವೀಗ ಸಂದೇಶದ ಮೊದಲಿಗೆ ಮತ್ತು ಕೊನೆಯಲ್ಲಿ ಡಬಲ್ ಕೋಟ್ ಅನ್ನು ಸೇರಿಸೋಣ. |
03:55 | ಸೇವ್ ಮಾಡಲು Ctrl s ಒತ್ತಿ. ನಾವೀಗ, ರೆಡ್ ಮಾರ್ಕ್ ಹೋಗಿ ಪ್ರೊಗ್ರಾಮ್ ದೋಷಮುಕ್ತವಾಗಿರುವುದನ್ನು ನೋಡಬಹುದು. ಹಾಗಾಗಿ, ನಾವು ಈ ಪ್ರೊಗ್ರಾಮ್ ಅನ್ನು ರನ್ ಮಾಡಿ ಪರಿಣಾಮವನ್ನು ನೊಡೋಣ. |
04:10 | Run As ….. Java Applications …... |
04:15 | ನಾವಿಲ್ಲಿ ಸಂದೇಶವು ಕನ್ಸೋಲ್ ನಲ್ಲಿ ಪ್ರಿಂಟ್ ಆಗಿರುವುದನ್ನು ನೋಡಬಹುದು. |
04:22 | ನಾವೀಗ ನಂತರದ ದೋಷವನ್ನು ನೋಡೋಣ |
04:25 | ಈ ದೋಷವು ಫೈಲ್ ನ ಮತ್ತು ಕ್ಲಾಸ್ ನ ಹೆಸರುಗಳು ತಾಳೆಯಾಗದೆ ಇರುವುದರಿಂದ ಉಂಟಾಗುತ್ತದೆ. |
04:29 | ಸಾಮಾನ್ಯವಾಗಿ ಇದು ಎಕ್ಲಿಪ್ಸ್ ನಲ್ಲಿ ಆಗುವುದಿಲ್ಲ. |
04:31 | ಏಕೆಂದರೆ, ನಾವು ಫೈಲ್ ಅನ್ನು ರಚಿಸಲು New Class wizard ಅನ್ನು ಬಳಸುತ್ತೇವೆ ಮತ್ತು ಎಕ್ಲಿಪ್ಸ್ ಫೈಲ್ ಅನ್ನು ತಂತಾನೇ ರಚಿಸುತ್ತದೆ. |
04:41 | ಆದರೆ, ನಾವು ಎಕ್ಲಿಪ್ಸ್ ನ ಹೊರಗೆ ಬೇರೆಲ್ಲಾದರೂ ಜಾವಾ ಫೈಲ್ ಅನ್ನು ರಚಿಸಿ ಅದನ್ನು ಪ್ರೊಜೆಕ್ಟ್ ಗೆ ಸೇರಿಸಬಯಸಿದಾಗ ದೋಷದ ಸಂಭವನೀಯತೆ ಅಧಿಕವಿರುತ್ತದೆ. |
04:47 | ನಾವೀಗ ಕ್ಲಾಸ್ ನ ಹೆಸರನ್ನು ಬದಲಿಸುವುದರ ಮೂಲಕ ದೋಷವನ್ನು ಮಾಡೋಣ. |
04:59 | ಜಾವಾ ಕೇಸ್ ಸೆನ್ಸಿಟೀವ್ ಆಗಿರುವುದರಿಂದ ಕ್ಲಾಸ್ ನ ಹೆಸರು ಮತ್ತು ಫೈಲ್ ನ ಹೆಸರು ತಾಳೆಯಾಗುವುದಿಲ್ಲ. |
05:09 | ಗಮನಿಸಿ, ಬಲ ಬದಿಯಲ್ಲಿ ರೆಡ್ ಕ್ರಾಸ್ ಮಾರ್ಕ್ ಕಾಣುತ್ತದೆ. |
05:14 | ಹಾಗೂ ಅಲ್ಲಿ “The public type errorfree must be defined in its own file” ಎಂದು ಹೇಳುತ್ತಿದೆ. |
05:20 | ಹಾಗೂ errorfree ಎಂಬ ಪದವು ಕೆಂಪು ಬಣ್ಣದಲ್ಲಿ ಅಂಡರ್ಲೈನ್ ಆಗಿದೆ ಎಂಬುದನ್ನೂ ಗಮನಿಸಿ. |
05:29 | ಎಕ್ಲಿಪ್ಸ್ ನಮಗೆ ಉತ್ತಮ ಪರಿಹಾರಗಳನ್ನು ಸೂಚಿಸುತ್ತದೆ ಹಾಗೂ ನಾವಿಲ್ಲಿ ಎರಡು ಪರಿಹಾರಗಳನ್ನು ಹೊಂದಿದ್ದೇವೆ. |
05:35 | ಮೊದಲನೇಯದು, Rename compilation unit to errorfree java. |
05:39 | ಎರಡನೇಯದು, “Rename type to ErrorFree”. |
05:43 | ನಮಗೆ ಬೇಕಾದ್ದು ಎರಡನೇಯದು ಹಾಗೂ ಒಮ್ಮೆ ನಾವು ಅದನ್ನು ErrorFree ಎಂದು ಬದಲಿಸಿದಲ್ಲಿ ದೋಷವು ಮರೆಯಾಗುತ್ತದೆ. |
06:03 | ಮುಂದಿನದು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ ಟೈಪಿಂಗ್ ಅನ್ನು ತಪ್ಪಾಗಿ ಮಾಡಿದಾಗ ಕಾಣುವ ದೋಷ. |
06:09 | ನಾವೀಗ ದೊಡ್ಡ S ಅನ್ನು ಸಣ್ಣ s ಗೆ ಬದಲಿಸೋಣ. |
06:15 | ನಾವು ಈಗ ರೆಡ್ ಕ್ರಾಸ್ ಮಾರ್ಕ್ ಅನ್ನು ಕಾಣುತ್ತೇವೆ. |
06:18 | ಮತ್ತು ಅದು, system cannot be resolved ಎಂದು ಹೇಳುತ್ತದೆ. |
06:23 | ಅಂದರೆ, ಜಾವಾ system ಎಂಬ ಹೆಸರಿನಿಂದ ಕ್ಲಾಸ್ ಅಥವಾ ಒಬ್ಜೆಕ್ಟ್ ಅಥವಾ ವೇರಿಯೇಬಲ್ ಅನ್ನು ನಿರೀಕ್ಷಿಸುತ್ತಿತ್ತು. |
06:28 | ಆದರೆ ಕೋಡ್ ನಲ್ಲಿ ಆ ತರಹದ ಯಾವುದೇ ಸಿಸ್ಟಮ್ ಓಬ್ಜೆಕ್ಟ್ ಇಲ್ಲ. |
06:33 | ಹಾಗಾಗಿ, ನಾವೀಗ ಪರಿಹಾರವನ್ನು ನೋಡೋಣ. |
06:39 | ನಾವಿಲ್ಲಿ ಹನ್ನೊಂದು ಪರಿಹಾರಗಳನ್ನು ಹೊಂದಿದ್ದೇವೆ. ಅವುಗಳಲ್ಲಿ ನಮಗೆ ಬೇಕಾದ್ದು ಎಂಟನೇಯದು. |
06:48 | Change to 'System' (java.lang) |
06:58 | ನೋಡಿ, ಒಮ್ಮೆ ನಾವು ದೊಡ್ಡ S ಅನ್ನು ಬದಲಿಸುತ್ತಿದ್ದಂತೆಯೇ ದೋಷವು ಮರೆಯಾಗುತ್ತದೆ. |
07:06 | ಹೀಗೆ ನಾವು ಎಕ್ಲಿಪ್ಸ್ ನ ಸಹಾಯದಿಂದ ಜಾವಾದಲ್ಲಿ ನಲ್ಲಿನ ದೋಷವನ್ನು ಗುರುತಿಸುತ್ತೇವೆ ಮತ್ತು ಅದನ್ನು ಸರಿಪಡಿಸುತ್ತೇವೆ. |
07:15 | ಇಲ್ಲಿಗೆ ನಾವು ಈ ಟುಟೋರಿಯಲ್ ನ ಅಂತ್ಯಕ್ಕೆ ಬಂದೆವು. |
07:18 | ಈ ಟ್ಯುಟೋರಿಯಲ್ ನಲ್ಲಿ ನಾವು, |
07:20 | ಜಾವಾ ಪ್ರೊಗ್ರಾಮ್ ಬರೆಯುವಾಗ ಆಗುವ ಸಾಮಾನ್ಯ ದೋಷಗಳು ಮತ್ತು, |
07:23 | ಎಕ್ಲಿಪ್ಸ್ ನ ಸಹಾಯ ದಿಂದ ಅವುಗಳನ್ನು ಹೇಗೆ ಗುರುತಿಸಿ ಸರಿಪಡಿಸುವುದು ಎಂಬುದನ್ನು ಕಲಿತೆವು. |
07:30 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, ಕೆಳಗೆ ಕೊಟ್ಟಿರುವ ಕೋಡ್ ನಲ್ಲಿ ದೋಷವನ್ನು ಹುಡುಕಿ. |
07:39 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:48 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
07:53 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:57 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:07 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:11 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:17 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:23 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |