C-and-Cpp/C2/Tokens/Kannada

From Script | Spoken-Tutorial
Revision as of 15:57, 27 August 2014 by Vasudeva ahitanal (Talk | contribs)

Jump to: navigation, search
Time Narration
00:01 C ಮತ್ತು C++ನಲ್ಲಿ ಟೊಕನ್ಸ್ ಎಂಬ ಈ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಟೋಕನ್ ಗಳನ್ನು ಡಿಫೈನ್ ಮಾಡುವ ಮತ್ತು ಬಳಸುವ ಬಗೆಯನ್ನು ಕಲಿಯುತ್ತೇವೆ.
00:12 ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ.
00:15 ಕೆಲವು ಸಾಮಾನ್ಯ ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ವಿಧಾನವನ್ನೂ ನೋಡೋಣ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:33 ಪೀಠಿಕೆಯೊಂದಿಗೆ ಆರಂಭಿಸೋಣ.
00:36 ಟೋಕನ್ ಎಂಬುದು Data types, Variables, Constants ಮತ್ತು Identifiers ಗಳಿಗೆ ಬಳಸುವ ಸಾಮಾನ್ಯ ಪದ.
00:46 ನಮ್ಮ ಪ್ರೋಗ್ರಾಮ್ ನೊಂದಿಗೆ ಆರಂಭಿಸೋಣ.
00:49 ನಾನೀಗಾಗಲೇ ಕೋಡ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ.
00:53 ಅದನ್ನು ಒಪನ್ ಮಾಡುತ್ತೇನೆ.
00:56 ನಮ್ಮ ಫೈಲ್ ನ ಹೆಸರು Tokens ಡಾಟ್ c.
01:04 ಈ ಪ್ರೊಗ್ರಾಮ್ ನಲ್ಲಿ ವೇರಿಯೇಬಲ್ ಗೆ ಆರಂಭಿಕ ಮೌಲ್ಯ ಕೊಟ್ಟು ಅದರ ಮೌಲ್ಯವನ್ನು ಪ್ರಿಂಟ್ ಮಾಡಬಹುದು.
01:09 ಈಗ, ಈ ಕೋಡ್ ಅನ್ನು ವಿವರಿಸುತ್ತೇನೆ.
01:12 ಇದು ನಮ್ಮ ಹೆಡರ್ ಫೈಲ್.
01:16 ಇದು ನಮ್ಮ ಮೈನ್ ಫಂಕ್ಷನ್.
01:20 ಇಲ್ಲಿ, int (ಇಂಟ್) ಎಂಬುದು ಕೀವರ್ಡ್.
01:22 ಕೀವರ್ಡ್ ಗಳ ಅರ್ಥ ಕಂಪೈಲರ್ ಗೆ ತಿಳಿದಿರುತ್ತದೆ.
01:26 a ಎಂಬುದು ಇಂಟಿಜರ್ ವೇರಿಯೆಬಲ್.
01:28 ನಾವು ಇದಕ್ಕೆ ಮೌಲ್ಯ ಎರಡನ್ನು ಕೊಟ್ಟಿದ್ದೇವೆ.
01:32 ಇದಕ್ಕೆ ಇನಿಶಿಯಲೈಜೇಶನ್ (initialization) ಎನ್ನುವರು.
01:35 ಅಕಸ್ಮಾತ್ ಮೌಲ್ಯವನ್ನು ಕೊಡದಿದ್ದರೆ, ಅದನ್ನು ಡಿಕ್ಲರೇಷನ್ (declaration) ಎನ್ನುವರು.
01:43 ಇಲ್ಲಿ, b ಎಂಬುದು ಕಾಂನ್ಸ್ಟಂಟ್ (constant) ಆಗಿದೆ.
01:46 ನಾವು b ಗೆ ಮೌಲ್ಯ ನಾಲ್ಕನ್ನು ಕೊಟ್ಟು ಇನಿಶಿಯಲೈಜ್ (initialize) ಮಾಡಿದ್ದೇವೆ.
01:53 ರೀಡ್ ಒನ್ಲಿ ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಲು ಕಾನ್ಸ್ಟ್ (const) ಎಂಬ ಕೀವರ್ಡ್ ಅನ್ನು ಉಪಯೋಗಿಸುತ್ತೇವೆ.
01:58 ಕೀವರ್ಡ್ ಮತ್ತು ಕಾಂಸ್ಟಂಟ್ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
02:06 ಕೀವರ್ಡ್ ಗಳಿಗೆ ಇರುವ ಅರ್ಥವನ್ನು ಬದಲಾಯಿಸಲಾಗದು.
02:11 ಕೀವರ್ಡ್ ಗಳನ್ನು ವೇರಿಯೇಬಲ್ ಹೆಸರುಗಳಾಗಿ ಉಪಯೋಗಿಸಲಾಗದು.
02:15 C ಯಲ್ಲಿ ಮೂವತ್ತೆರಡು ಕೀವರ್ಡ್ ಗಳಿವೆ.
02:18 ಅದರಲ್ಲಿ ಕೆಲವು auto, break, case, ಕ್ಯಾರ್(char), ಈನಮ್(enum), ಎಕ್ಸ್ಟರ್ನ್(extern)
02:28 ಕಾನ್ಸ್ಟಂಟ್ : ಕಾನ್ಸ್ಟಂಟ್ ಗಳು, ಸ್ಥಿರ ಮೌಲ್ಯಗಳು.
02:33 ಪ್ರೊಗ್ರಾಮ್ ಎಕ್ಸಿಕ್ಯೂಟ್ ಆಗುವಾಗ, ಅವುಗಳು ಬದಲಾಗುವುದಿಲ್ಲ.
02:38 ಕಾನ್ಸ್ಟಂಟ್ ಗಳಲ್ಲಿ ಎರಡು ವಿಧ, ನ್ಯೂಮರಿಕ್ (Numeric) constants ಮತ್ತು ಕ್ಯಾರಕ್ಟರ್(Character) constants.
02:45 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
02:47 ಇಲ್ಲಿ C ಯ ಡಾಟಾ ಟೈಪ್, ಫ್ಲೋಟ್ ಆಗಿದೆ.
02:52 ನಾವು ಇದಕ್ಕೆ 1.5 ಮೌಲ್ಯವನ್ನು ಕೊಟ್ಟಿದ್ದೇವೆ.
02:56 ಡಾಟಾ ಟೈಪ್ ಎಂಬುದು ಕೆಲವು ನಿಯಮಗಳನ್ನೊಳಗೊಂಡ ಒಂದು ಸೀಮಿತ ಸೆಟ್ ಆಗಿದೆ.
03:04 ಇಲ್ಲಿ d ಎಂಬುದು ಒಂದು ವೇರಿಯೇಬಲ್.
03:07 ಕ್ಯಾರ್ (char) ಮತ್ತು ಸಿಂಗಲ್ ಕೋಟ್ಸ್ ಗಳನ್ನು ಉಪಯೋಗಿಸಿದರೆ, ನಾವು character ಅನ್ನು ಉಪಯೋಗಿಸುತ್ತಿದ್ದೇವೆ ಎಂದರ್ಥ.
03:12 ಹಾಗಾಗಿ, d ಎಂಬುದು ‘A’ ಯನ್ನು ಹೊಂದಿದ, ಕಾರಕ್ಟರ್ ವೇರಿಯೇಬಲ್.
03:20 ಇದರಿಂದ, int, double, float ಮತ್ತು char ಗಳು ಡಾಟಾ ಟೈಪ್ ಗಳು ಎಂಬುದು ತಿಳಿಯುತ್ತದೆ.
03:30 a, c ಮತ್ತು d ಗಳು ವೇರಿಯೇಬಲ್ ಗಳು.
03:35 ಈಗ ನಮ್ಮ ಸ್ಲೈಡ್ ಗೆ ಹಿಂತಿರುಗಿ.
03:37 ಡಾಟಾ ಟೈಪ್ ಮತ್ತು ವೇರಿಯೇಬಲ್ ಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯೋಣ.
03:48 ಡಾಟಾ ಟೈಪ್ : ಇಂಟಿಜರ್ ಡಾಟಾ ಟೈಪ್ ಗಳೊಂದಿಗೆ ಆರಂಭಿಸೋಣ.
03:50 ಇದನ್ನು int ಆಗಿ ಡಿಕ್ಲೇರ್ ಮಾಡಲಾಗುತ್ತದೆ.
03:53 ನಾವು ಇಂಟಿಜರ್ ಡಾಟಾ ಟೈಪ್ ಅನ್ನು ಪ್ರಿಂಟ್ ಮಾಡಲು ಪರ್ಸಂಟ್ ಡಿ (%ಡಿ) ಎಂಬ ಫಾರ್ಮಾಟ್ ಸ್ಪೆಸಿಫೈರ್ ಅನ್ನು ಉಪಯೋಗಿಸಬೇಕು.
04:01 ಹಾಗೆಯೇ, ಫ್ಲೋಟ್ ಮತ್ತು %f ಅನ್ನು floating pointnumber ಗಳಿಗೆ ಉಪಯೋಗಿಸುತ್ತಾರೆ.
04:09 character ಡಾಟಾ ಟೈಪ್ ಗಳಿಗೆ ಕ್ಯಾರ್(char) ಮತ್ತು %c ಅನ್ನು ಉಪಯೊಗಿಸುತ್ತೇವೆ.
04:15 ಮತ್ತು ಡಬಲ್ ಡಾಟಾ ಟೈಪ್ ಗಳಿಗೆ ಡಬಲ್ ಮತ್ತು %lf ಅನ್ನು ಫಾರ್ಮಾಟ್ ಸ್ಪೆಸಿಫೈರ್ ಆಗಿ ಉಪಯೊಗಿಸುತ್ತೇವೆ.
04:24 ನಾವೀಗ ಡಾಟಾ ಟೈಪ್ ಗಳ ರೇಂಜ್ ಅನ್ನು ನೋಡೋಣ.
04:29 ಇದು, ಇಂಟಿಜರ್ ಡಾಟಾ ಟೈಪ್ ನ ರೇಂಜ್
04:34 ಇದು, ಫ್ಲೋಟಿಂಗ್ ಪಾಯಿಂಟ್ ನ ರೇಂಜ್
04:39 ಇದು, ಕಾರಕ್ಟರ್ ನ ರೇಂಜ್
04:42 ಮತ್ತು ಇದು, ಡಬಲ್ ನ ರೇಂಜ್
04:47 ವೇರಿಯೇಬಲ್ ಗೆ ಕೊಟ್ಟ ಮೌಲ್ಯವು ಈ ರೇಂಜ್ ಗಿಂತ ದೊಡ್ಡದು ಅಥವಾ ಸಣ್ಣದು ಇರಬಾರದು.
04:56 ಈಗ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ತಿಳಿಯೋಣ.
05:00 ವೇರಿಯೇಬಲ್ ಎಂಬುದು ಒಂದು ಡಾಟಾ ನೇಮ್.
05:02 ಇದನ್ನು ಡಾಟಾ ಮೌಲ್ಯವನ್ನು ಶೇಖರಿಸಲು ಉಪಯೋಗಿಸಬಹುದು.
05:06 ಪ್ರೊಗ್ರಾಮ್ ರನ್ ಆಗುವಾಗ ಇದರ ಮೌಲ್ಯವು ಬದಲಾಗಬಹುದು.
05:10 ವೇರಿಯೇಬಲ್ ಅನ್ನು ಉಪಯೋಗಿಸುವ ಮೊದಲು ಅದನ್ನು ಡಿಕ್ಲೇರ್ ಮಾಡಬೇಕು.
05:14 ವೇರಿಯೇಬಲ್ ಗಳಿಗೆ ಅರ್ಥಪೂರ್ಣ ಹೆಸರುಗಳನ್ನು ಕೊಡಲು ಪ್ರಯತ್ನಿಸಬೇಕು.
05:18 ಉದಾಹರಣೆಗೆಜಾನ್, ಮಾರ್ಕ್ಸ್, ಸಮ್ ಇತ್ಯಾದಿ.
05:24 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗೋಣ.
05:27 ಇಲ್ಲಿ, ಪ್ರಿಂಟ್ ಎಫ್ (printf) ಎಂಬುದು ಈ ಫಂಕ್ಷನ್ ನ ಐಡೆಂಟಿಫೈರ್ ಹೆಸರಾಗಿದೆ.
05:32 ನಮ್ಮ ಸ್ಲೈಡ್ ಗೆ ಹಿಂತಿರುಗಿ.
05:35 ಈಗ ಐಡೆಂಟಿಫೈರ್ ಗಳ ಬಗ್ಗೆ ತಿಳಿಯೋಣ.
05:38 ಐಡೆಂಟಿಫೈರ್ ಗಳು ಯೂಸರ್ ನಿರ್ಧಾರಿತ ಹೆಸರುಗಳು.
05:41 ಐಡೆಂಟಿಫೈರ್ ನಲ್ಲಿ ವರ್ಣಗಳು ಮತ್ತು ಅಂಕೆಗಳು ಇರಬಹುದು.
05:46 ದೊಡ್ಡಕ್ಷರ ಮತ್ತು ಸಣ್ಣಕ್ಷರಗಳನ್ನು ಉಪಯೋಗಿದಬಹುದು.
05:51 ಮೊದಲನೇ ಅಕ್ಷರವು ವರ್ಣ ಅಥವಾ ಅಂಡರ್ಸ್ಕೋರ್(underscore) ಆಗಿರಬೇಕು.
05:55 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
05:58 ಇಲ್ಲಿ ನಾವು ವೇರಿಯೇಬಲ್ ಮತ್ತು ಕಾನ್ಸ್ಟಂಟ್ ಗಳನ್ನು ಇನಿಶಿಯಲೈಜ್(initialize) ಮಾಡಿದ್ದೇವೆ.
06:02 ಇಲ್ಲಿ ನಾವು ಅವುಗಳನ್ನು ಪ್ರಿಂಟ್ ಮಾಡುತ್ತೇವೆ.
06:05 ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
06:08 ಈಗ save ಒತ್ತಿ.
06:10 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:12 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
06:21 ಕಂಪೈಲ್ ಮಾಡಲು, “gcc” ಸ್ಪೇಸ್ tokens ಡಾಟ್ c ಸ್ಪೇಸ್ ಹೈಫನ್ (-) ಒ (O) ಸ್ಪೇಸ್ “tok”ಎಂದು ಟೈಪ್ ಮಾಡಿ, Enter ಒತ್ತಿ.
06:30 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ “tok” ಎಂದು ಟೈಪ್ ಮಾಡಿ.
06:35 ಔಟ್ ಪುಟ್ ತೋರುತ್ತದೆ.
06:39 ಇಲ್ಲಿ, ಡೆಸಿಮಲ್ ಪಾಯಿಂಟ್ ನ ನಂತರ ಆರು ಮೌಲ್ಯಗಳಿವೆ.
06:44 ಮತ್ತು, ಇಲ್ಲಿ ಎರಡು ಮೌಲ್ಯಗಳಿವೆ
06:48 ಈಗ, ಇದರ ಕಾರಣವನ್ನು ಹುಡುಕೋಣ. ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
06:54 ಏಕೆಂದರೆ ಇಲ್ಲಿ ಪರ್ಸೆಂಟ್ ಪಾಯಿಂಟ್ 2f ಎಂದಿದೆ.
06:59 ನಾವು ಡೆಸಿಮಲ್ ಪಾಯಿಂಟ್ ನ ನಂತರ ಎರಡೇ ಸಂಖ್ಯೆಯನ್ನು ಪ್ರಿಂಟ್ ಮಾದಬಹುದು ಎಂದರ್ಥ.
07:04 ಅಕಸ್ಮಾತ್, ಇಲ್ಲಿ ನನಗೆ ಔಟ್ ಪುಟ್ ಮೂರು ಸಂಖ್ಯೆಯದ್ದಾಗಬೇಕಾದರೆ,
07:09  % point 2f ಅನ್ನು % point 3f ಆಗಿ ಬದಲಾಯಿಸಬೇಕು.
07:16 Save ಒತ್ತಿ
07:19 ಟರ್ಮಿನಲ್ ಗೆ ಹಿಂತಿರುಗಿ.
07:22 ಮೊದಲಿನಂತೆ ಕಂಪೈಲ್ ಮಾಡಿ ಎಕ್ಸಿಕ್ಯೂಟ್ ಮಾಡಿ.
07:28 ಇಲ್ಲಿ ಡೆಸಿಮಲ್ ಪಾಯಿಂಟ್ ನ ನಂತರ ಮೂರು ಸಂಖ್ಯೆಗಳನ್ನು ಕಾಣಬಹುದು.
07:33 ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡೋಣ.
07:36 ಪ್ರೊಗ್ರಾಮ್ ಗೆ ಹಿಂತಿರುಗಿ.
07:40 ನಾನು ಇಲ್ಲಿ ಸಲ್ಪ ಬದಲಾವಣೆ ಮಾಡುತ್ತೇನೆ.
07:42 ಮೊದಲು ನಿಮ್ಮ ಕೀಬೋರ್ಡ್ ನಲ್ಲಿ shift, ctrl ಮತ್ತು s ಕೀ ಗಳನ್ನು ಒಟ್ಟಿಗೇ ಒತ್ತಿ.
07:50 ಈಗ ಫೈಲ್ ಅನ್ನು ಡಾಟ್ ಸಿಪಿಪಿ (.cpp) ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡಿ.
07:58 ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ (iostream) ಎಂದು ಬದಲಾಯಿಸೋಣ.
08:03 using ಸ್ಟೇಟ್ಮೆಂಟ್ ಸೇರಿಸಿ.
08:08 ಮತ್ತು ಸೇವ್ ಮಾಡಿ.
08:11 C++ ನಲ್ಲಿ, ಲೈನ್ ಅನ್ನು ಪ್ರಿಂಟ್ ಮಾಡಲು cout ಫಂಕ್ಷನ್ ಉಪಯೋಗಿಸುವುದರಿಂದ, printf ಸ್ಟೇಟ್ಮೆಂಟ್ ಬದಲಾಗಿ cout ಸ್ಟೇಟ್ಮೆಂಟ್ ಬರೆಯಿರಿ.
08:21 Search for and replacetext ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
08:27 ಇಲ್ಲಿ, printf ಒಪನಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
08:33 ಮತ್ತು, ಈ ಕಾಲಮ್ ನಲ್ಲಿ cout ಮತ್ತು ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
08:40 ಈಗ, Replace All ಬಟನ್ ಅನ್ನು ಒತ್ತಿ, ನಂತರ ಕ್ಲೋಸ್ ಒತ್ತಿ.
08:45 ನಮಗೆ, format specifier ಮತ್ತು ಸ್ಲ್ಯಾಶ್ n ನ ಅಗತ್ಯವಿಲ್ಲ.
08:50 ಅದನ್ನು ಡಿಲೀಟ್ ಮಾಡೋಣ.
08:52 ಈಗ, comma ಬದಲು, ಎರಡು ಒಪನಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
09:01 Save ಒತ್ತಿ. ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ.
09:04 ಮತ್ತೆ, ಎರಡು ಓಪನಿಂಗ್ ಆಂಗಲ್ ಬ್ರಾಕೆಟ್ ಟೈಪ್ ಮಾಡಿ.
09:09 ಮತ್ತು, ಡಬಲ್ ಕೋಟ್ಸ್ ಒಳಗೆ, ಸ್ಲ್ಯಾಶ್ ಎನ್ ಎಂದು ಟೈಪ್ ಮಾಡಿ.
09:16 ಈಗ Save ಒತ್ತಿ.
09:20 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
09:24 ಕಂಪೈಲ್ ಮಾಡಲು g++ ಸ್ಪೇಸ್ tokens ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ಟಿ ಒ ಕೆ ಒನ್ (tok1)
09:35 ಇಲ್ಲಿ, tokens.c ಫೈಲ್ ನ output parametertok ಫೈಲ್ ಒವರ್ ರೈಟ್ ಆಗದಿರಲು tok1 ಎಂದು ಟೈಪ್ ಮಾಡಿದ್ದೇವೆ.
09:46 ಈಗ Enter ಒತ್ತಿ.
09:48 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ tok1 ಎಂದು ಟೈಪ್ ಮಾಡಿ.
09:55 ಔಟ್ ಪುಟ್ ತೋರುತ್ತದೆ.
09:59 ಈಗ, ನಾವು ಎದುರಿಸುವ ಕೆಲವು ಸಾಮಾನ್ಯ ಎರರ್ ಗಳನ್ನು ನೋಡೋಣ.
10:03 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
10:05 ಇಲ್ಲಿ, b ಗೆ ಪುನಃ ಎಂಟು ಎಂದು ಮೌಲ್ಯವನ್ನು ಕೊಡುತ್ತೇನೆ.
10:12 Save ಒತ್ತಿ. ಈಗ ಏನಾಗುತ್ತದೆ ಎಂದು ನೋಡೋಣ.
10:15 ಟರ್ಮಿನಲ್ ಗೆ ಹಿಂತಿರುಗಿ.
10:17 ಪ್ರಾಂಪ್ಟ್ ಅನ್ನು ಖಾಲಿ ಮಾಡುತ್ತೇನೆ.
10:22 ಮೊದಲಿನಂತೆ ಕಂಪೈಲ್ ಮಾಡಿ.
10:26 ನಮ್ಮ tokens.cpp ಫೈಲ್ ನ ಎಳನೇ ಲೈನ್ ನಲ್ಲಿ ಎರರ್ ಇರುವುದನ್ನು ನೋಡಬಹುದು.
10:32 Assignment of read only variable b.
10:36 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
10:39 ಇದಕ್ಕೆ ಕಾರಣ, b ಕಾನ್ಸ್ಟಂಟ್ ಆಗಿದೆ. ಕಾಂಸ್ಟಂಟ್ ಗಳು ಸ್ಥಿರ ಮೌಲ್ಯಗಳು.
10:45 ಪ್ರೊಗ್ರಾಮ್ ಎಕ್ಸಿಕ್ಯೂಟ್ ಆಗುವಾಗ ಅವು ಬದಲಾಗುವುದಿಲ್ಲ.
10:49 ಹಾಗಾಗಿ ಇದು ಎರರ್ ಕೊಡುತ್ತಿದೆ. ಈ ಎರರ್ ಅನ್ನು ಸರಿಪಡಿಸೋಣ.
10:54 ಇದನ್ನು ಡಿಲೀಟ್ ಮಾಡಿ. Save ಒತ್ತಿ.
10:57 ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
11:01 ಮೊದಲಿನಂತೆ ಕಂಪೈಲ್ ಮಾಡಿ.
11:03 ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. ಹೌದು , ಇದು ಕೆಲಸ ಮಾಡುತ್ತಿದೆ.
11:09 ಈಗ ನಾವು ಇನ್ನೊಂದು ಸಾಮಾನ್ಯವಾಗಿ ಆಗುವ ಎರರ್ ನೋಡೋಣ.
11:12 ಪ್ರೊಗ್ರಾಮ್ ಗೆ ಹಿಂತಿರುಗಿ.
11:15 ಇಲ್ಲಿ ಸಿಂಗಲ್ ಕೋಟ್ಸ್ ಅನ್ನು ಬಿಡುತ್ತೇನೆ ಎಂದೆಣಿಸಿ. Save ಒತ್ತಿ.
11:21 ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
11:25 ಮೊದಲಿನಂತೆ ಕಂಪೈಲ್ ಮಾಡಿ.
11:28 ನಮ್ಮ ಫೈಲ್ tokens ಡಾಟ್ cpp ನ ಒಂಬತ್ತನೇ ಸಾಲಿನಲ್ಲಿ ಎರರ್ ಇರುವುದನ್ನು ನೋಡಬಹುದು.
11:34 A was not declared in the scope. ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
11:40 ಏಕೆಂದರೆ, ಸಿಂಗಲ್ ಕೋಟ್ಸ್ ಗಳ ನಡುವೆ ಇರುವುದನ್ನು character ಎಂದು ಪರಿಗಣಿಸಲಾಗುತ್ತದೆ.
11:47 ಮತ್ತು, ಇಲ್ಲಿ ನಾವು d ಯನ್ನು character ವೇರಿಯೇಬಲ್ ಅಗಿ ಡಿಕ್ಲೇರ್ ಮಾಡಿದ್ದೇವೆ.
11:53 ಈ ಎರರ್ ಅನ್ನು ಸರಿಪಡಿಸೋಣ. ಇಲ್ಲಿ ಸಿಂಗಲ್ ಕೋಟ್ಸ್ ಟೈಪ್ ಮಾಡಿ.
11:59 Save ಒತ್ತಿ. ಏಕ್ಸಿಕ್ಯೂಟ್ ಮಾಡೋಣ.
12:02 ಟರ್ಮಿನಲ್ ಗೆ ಹಿಂತಿರುಗಿ.
12:04 ಮೊದಲಿನಂತೆ ಕಂಪೈಲ್ ಮಾಡಿ.
12:06 ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ. ಹೌದು, ಇದು ಕೆಲಸ ಮಾಡುತ್ತಿದೆ.
12:13 ಈಗ, ಸ್ಲೈಡ್ ಗೆ ಹಿಂತಿರುಗಿ.
12:15 ಸಾರಾಂಶ ತಿಳಿಯೋಣ.
12:16 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು :
12:18 ಡಾಟಾ ಟೈಪ್. ಉದಾಹರಣೆಗೆ : int, double, float ಇತ್ಯಾದಿ.
12:24 ವೇರಿಯೇಬಲ್. ಉದಾಹರಣೆಗೆ : int=2; ಇತ್ಯಾದಿ.
12:29 ಐಡೆಂಟಿಫೈರ್ ಗಳು.ಉದಾಹರಣೆಗೆ :printfಮತ್ತು
12:34 ಕಾನ್ಸ್ಟಂಟ್. ಉದಾಹರಣೆಗೆ: double const b=4;
12:40 ಅಸೈನ್ಮೆಂಟ್ ಆಗಿ, simple interest ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಬರೆಯಿರಿ.
12:45 ಸುಳಿವು : principal * rate * time ಅಪಾನ್(upon) 100
12:50 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
12:54 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
12:56 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
13:01 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
13:03 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
13:07 ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
13:10 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
13:19 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
13:24 ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
13:30 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
13:35 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ ಮತ್ತು ಪ್ರವಾಚಕ ಐ ಐ ಟೀ ಬಾಂಬೆ ಇಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal