Spoken-Tutorial-Technology/C2/Creation-of-a-spoken-tutorial-using-Camstudio/Kannada

From Script | Spoken-Tutorial
Revision as of 17:44, 27 November 2012 by Sneha (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

ಆತ್ಮೀಯರೆ, CDEEP, IIT Bombay ಪರವಾಗಿ ತಮ್ಮೆಲ್ಲರಿಗೂ ಈ Tutorial ಗೆ ಸ್ವಾಗತ. ಈ Tutorial ನಿಂದ ನೀವು Cam Studio ನ್ನು ಅಭ್ಯಾಸ ಮಾಡುವುದರಲ್ಲಿ ಪರಿಣತಿ ಹೊಂದುತ್ತೀರಾ, ಕಲಿಕೆಯು ಚಿತ್ರ ಮತ್ತು ನಿರೂಪಣೆಗಳನ್ನು ಏಕಕಾಲದಲ್ಲಿ ಬರಿಸಿದರೆ ಕಲಿಕೆಯು ಪರಿಣಾಮಕಾರಿಯಾಗಿರುತ್ತದೆ. Audio ಮತ್ತು Video ನಿರೂಪಣೆಯಿಂದ ಇದರ ವೈವಿದ್ಯಮಯ ಇನ್ನೂ ಹೆಚ್ಚು ಪ್ರಭಾವ ಬೀರುತ್ತದೆ. CamStudio Screen Record ಮಾಡುವ Software. ಇದು Screen ನ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳನ್ನು record ಮಾಡಿ ಮತ್ತೆ ಬೇಕಾದಾಗ ನೋಡಬಹುದು. ಇದನ್ನು ಮುಖ್ಯವಾಗಿ ಈ ಕೆಳಕಂಡ ಕಾರ್ಯಗಳಿಗೆ ಬಳಸಬಹುದು.

   ಹೊಸ ಸಾಫ್ಟ್‌ವೇರನ ವೈಶಿಷ್ಠಗಳನ್ನು ತೋರಿಸಲು 
   ಶಾಲೆ ಮತ್ತು ಕಾಲೇಜ್‌ಗಳಲ್ಲಿ Audio ಮತ್ತು Video Tutorial ಗಳನ್ನು ತಯಾರಿಸಲು 
   Audio ಮತ್ತು Video ಮುಖಾಂತರ ಗ್ರಾಹಕರ ಮಾರ್ಗದರ್ಶನಕ್ಕಾಗಿ ಯಾವುದೇ ಕಾರ್ಯ ಮಾಡುವ ವಿಧಾನ ತೋರಿಸಲು 
   AV File ಗಳನ್ನು Flash ಗೆ convert ಮಾಡುವ ವಿಧಾನ ತೋರಿಸಲು ಮತ್ತು ಇತರ ಹಲವಾರು ವಿಷಯಗಳಿಗೆ ಬಳಸಬಹುದು. 

ಈ ಪುಟ್ಟ ಸಾಫ್ಟ್‌ವೇರ್‌ನ ಉಪಯೋಗಗಳು ಅಪಾರ.

CamStudio Software ‌ಗಳನ್ನು Windows 95, 98, Me, NT.4.0 XP version ಗಳ ಜೊತೆಯಲ್ಲಿ ಬಳಸಬಹುದು. ಇದನ್ನು install ಮಾಡಲು ಬೇಕಾದ Hardware, 400 MHz processor, 64 MB RAM, 4 MB hardisk space ಬೇಕಾಗುತ್ತದೆ.

CAM STUDIO ಉಚಿತವಾಗಿ ಸಿಗುವ open source ಸಾಫ್ಟ್ವೇರ್. ಇದನ್ನು WWW.camstudio.org web site ನಿಂದ download ಮಾಡಿ install ಮಾಡಬೇಕು. ಇದನ್ನು install ಮಾಡಿದ ಮೇಲೆ ಇದರ Icon ಮೇಲೆ double click ಮಾಡಿದರೆ ಇದರ Main menu ತೆರೆಯುತ್ತದೆ. Main menu ನ File ನ ಕೆಳಗಡೆ, Record, Stop, Pause, Exit Option ಗಳನ್ನು ನೋಡಬಹುದು ಮತ್ತು ಇದಕ್ಕನುಗುಣವಾಗಿ File ಗಳಲ್ಲಿ Red-button ರೆಕಾರ್ಡ್ ಗೆ, Grey Button Pause ಗೆ, Blue-button stop ಮಾಡಲು ಬಳಸಲಾಗಿದೆ.

ನಿಮಗೆ ಶಿಫಾರಸ್ಸು ಮಾಡವುದೇನೆಂದರೆ, Record ಮಾಡುವ ಮೊದಲು Capture region ನನ್ನು ನಿರ್ಧರಿಸಬೇಕು.ಈ Region ನಲ್ಲಿ ಒಟ್ಟು 3 Option ಗಳಿವೆ. ನೀವು Region Select ಮಾಡಿ Ok Press ಮಾಡಿದರೆ Screen ಮೇಲೆ ಆಯತಾಕಾರದಲ್ಲಿ box ತೆರೆಯುತ್ತದೆ ಈ Boxನ ಒಳಗಡೆ Record Capture ಆಗುತ್ತದೆ. Fixed Region ನ್ನು ಆಯ್ಕೆ ಮಾಡಿದರೆ ಅದನ್ನು Fixel ಗಳಲ್ಲಿ ವಿವರಿಸಬೇಕು. Full screen Select ಮಾಡಿದರೆ Screen ಎಲ್ಲಾ ಬಾಗದಲ್ಲಿ Record ಆಗುತ್ತದೆ. ಇಲ್ಲಿ Enable Autopan Camstudio ದ ವಿಶಿಷ್ಟ ಲಕ್ಷಣ. ಈ Option ಆಯ್ಕೆ ಮಾಡಿದರೆ Capture region session ಯಾವ ಕಡೆ ಹೋಗುತ್ತದೆ ಆ ಕಡೆ record ಆಗುತ್ತದೆ. ಇಲ್ಲಿ ನೀವು Panning ನ Speed ನ್ನು ಸಹ Set ಮಾಡಬಹುದು.

Option Menu ವಿನ ಕೆಳಭಾಗದಲ್ಲಿ Video Option ನಲ್ಲಿ ನೀವು Compressor ಗಳನ್ನು Select ಮಾಡಿ Video Fileನ Size ನ್ನು ಕಡಿಮೆ ಮಾಡಬಹುದು. By Default, Microsoft Video 1 Compressor ಇರುತ್ತದೆ. ಆದರೆ ನೀವು ನಿಮಗೆ ಬೇಕಾದ Compresser ಅಥವಾ Codec ಗಳನ್ನು dropdown ಮೆನುವಿನಿಂದ ಆಯ್ಕೆ ಮಾಡಿಕೊಳ್ಳಬಹುದು.ನಿಮಗೆ ಬೇಕಾದ ಸ್ವತಂತ್ರ Codec ಗಳನ್ನು Internet ನಿಂದಲೂ Download ಮಾಡಿ ಉಪಯೋಗಿಸಬಹುದು. Video Setting ಆಯ್ಕೆ ಮಾಡಿದಾಗ ನಿಮ್ಮ ಅಗತ್ಯಗಳಿಗನುಗುಣವಾಗಿ File size, quality, Frame rate ಗಳಿಗೆ value ಗಳನ್ನು ನಿರ್ಧರಿಸುವ ಮೊದಲು Audio Adjust button ನ್ನು uncheck ಮಾಡಬೇಕು. ಈ Tutorial ನಲ್ಲಿ Record ಮಾಡಲು Microsoft video 1 ನಲ್ಲಿ Compressor ಗಾಗಿ Key ಫ್ರಮೆಸ್ ನ ವಲುಎ ನ್ನು 5ಕ್ಕೆ Capture Frames 200 ಕ್ಕೆ Playback rate 5 ಕ್ಕೆ ಮತ್ತು quality 50ಕ್ಕೆ ಉಪಯೋಗಿಸಿದ್ದೇನೆ. Trial & Error ಹಾಗೂ ಅನೇಕ Permutation &Combination ಗಳಿಂದ ಹಾಗೂ Outpt Quality ಮತ್ತು Final Size ನ ಆಧಾರದ ಮೇಲೆ ಹೇಳುವುದಾದರೆ ಈ ಮೇಲಿನ Value ಗಳು ಸೂಕ್ತ ಎಂದು ಭಾವಿಸಿದ್ದೇನೆ.

cursor ನಿಂದ ಆಯ್ಕೆಗಳ ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಗಮನ ಹರಿಸಲು ಸಹಾಯ ಮಾಡುತ್ತದೆ.cursor ನಿಂದ ನೀವು hide ಅಥವಾ show ಆಯ್ಕೆ ಮಾಡಬಹುದು.by default ಆಗಿ ತನ್ನಷ್ಟಕ್ಕೆ show ದ ಮೇಲೆ cursor ನ ಆಯ್ಕೆ ಇರುತ್ತದೆ. ee cursor ನಲ್ಲಿ ಮೂರು ತರಹದ ವಿಭಿನ್ನ ಆಯ್ಕೆಗಳಿವೆ. ಅವುಗಳು actual cursor, dropdown ಮೆನುವಿನಿಂದ ಆಯ್ಕೆಮಾಡಿದ custom ಕುರ್ಸೋರ್ ಮತ್ತು ಕಂಪ್ಯೂಟರ್ ನಲ್ಲಿ ಇರುವ ಕುರ್ಸೋರ್ ಫಾಲ್ದೆರ್ ನಿಂದ ಲೋಡ್ ಮಡಿದ ಕುರ್ಸೋರ್. ಇದರ ಅಂದರೆ cursor ನ ಸುತ್ತಮುತ್ತಲಿನ ಪ್ರದೇಶ, box ನಲ್ಲಿ ಚೆಕ್ ಮಾಡಬಹುದು.ಇಲ್ಲಿ ಅದರ ಆಕಾರ , size, ಹಾಗು ಬಣ್ಣ ಸಹ ಗುರುತಿಸಬಹುದು.

Cam Studio ತನ್ನಷ್ಟಕ್ಕೆ Record ಮಾಡುವುದಿಲ್ಲ. ನಿಮಗೆ Microphone ಅಥವಾ Audio Speaker ಬೇಕಾಗುತ್ತದೆ. Option ನಲ್ಲಿ Check ಮಾಡಿ Select ಮಾಡಿಕೊಳ್ಳಬಹುದು. ಇತರೆ Option ನಂತೆ Programme Option ನಲ್ಲಿ Sub-option ಗಳಿವೆ. CamStudio ನ ವರ್ತನೆಯನ್ನು Customize ಮಾಡಲು ಈ Option ಗಳನ್ನು ಬಳಸಬಹುದು. Record ಮಾಡುವಾಗ ಈ Programme ನ್ನು Minimize ಮಾಡಬೇಕು. ಹೀಗೆ ಮಾಡಿದಾಗ CamStudio ವನ್ನು System Tray ನಲ್ಲಿ Windows Screen ಕೆಳಗಡೆ ಬಲಬಾಗದ ಮೂಲೆಯಲ್ಲಿ ಇರುತ್ತದೆ. ಈಗ ನೀವು CamStudio Icon ನ್ನು ನೋಡಬಹುದು. ಏಕೆಂದರೆ ನಾನು ಈ ಟುಟೋರಿಯಲ್ ನಲ್ಲಿ CamStudio ಬಳಸಿ Record ಮಾಡಿದ್ದೇನೆ. Record To Flash Option, Sub-option ಗಳನ್ನು ಒಳಗೊಂಡಿರುತ್ತದೆ. ನೀವು Key-Board ನ Hot key ಗಳನ್ನು Record, Pass, Stop ಮಾಡಲು ಬಳಸಬಹುದು. ಇವುಗಳಲ್ಲಿ ಯಾವುದಾದರನ್ನು ಬಳಸಲು ನೀವು ಸ್ವತಂತ್ರರು.

CamStudio ವನ್ನು ಬಳಸಲು ಪ್ರಾರಂಭಿಸಲು ನನಗೆ ತಿಳಿದ ಮಟ್ಟಿಗೆ ಸಾಕಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ನಿಮ್ಮದೆ ಆದ Audio ಮತ್ತು Video Tutorial ಗಳನ್ನು ಹಾಗೂ Visual Learning Mobileಗಳನ್ನು ತಯಾರಿಸಲು ಈ CamStudio ವನ್ನು ಬಳಸಬಹುದು. ಒಮ್ಮೆ CamStudio ನ Basics ನಲ್ಲಿ ಪರಿಣತಿಯನ್ನು ಹೊಂದಿದ ಮೇಲೆ ಮುಂದಿನ Version ನಲ್ಲಿ Advanced Feature ಗಳನ್ನು ನಿರೀಕ್ಷಿಸಬಹುದು.

Contributors and Content Editors

Sneha