Thunderbird/C2/Address-Book/Kannada

From Script | Spoken-Tutorial
Revision as of 14:07, 13 August 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 ಮೋಜಿಲಾ ಥಂಡರ್ ಬರ್ಡ್ ನಲ್ಲಿನ ಅಡ್ಡ್ರೆಸ್ ಬುಕ್ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.06 ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿದ್ದೇವೆ.
00.14 ಇದರೊಂದಿಗೆ ನಾವು:
00.16 ಹೊಸ ಅಡ್ಡ್ರೆಸ್ ಬುಕ್ ಅನ್ನು ಕ್ರಿಯೇಟ್ ಮಾಡಲು,
00.18 ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು,
00.20 ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿಯಲಿದ್ದೇವೆ.
00.24 ಇಲ್ಲಿ ನಾವು ಉಬಂಟು 13.0.1 ನಲ್ಲಿ ಮೋಜಿಲಾ ಥಂಡರ್ ಬರ್ಡ್ 12.04 ಅನ್ನು ಉಪಯೋಗಿಸುತ್ತಿದ್ದೇವೆ.
00.32 ಅಡ್ಡ್ರೆಸ್ ಬುಕ್ ಎಂದರೇನು?
00.34 ಮೊಬೈಲ್ ಫೋನ್ ನಲ್ಲಿನ Contacts ಎಂಬ ವಿಶೇಷತೆಯ (feature) ರೀತಿಯಲ್ಲೇ ಇಲ್ಲಿ ಅಡ್ಡ್ರೆಸ್ ಬುಕ್ ಕೆಲಸ ಮಾಡುತ್ತದೆ.
00.39 ವಿಳಾಸಗಳನ್ನು ರಚಿಸಲು ಮತ್ತು ನಿರ್ವಹಿಸಲು ಕೂಡ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
00.45 ಥಂಡರ್ ಬರ್ಡ್ ನಲ್ಲಿ ಎರಡು ರೀತಿಯ ಅಡ್ಡ್ರೆಸ್ ಬುಕ್ ಗಳು ಇವೆ.
00.48 Personal address book ಹೊಸ ವಿಳಾಸಗಳನ್ನು ರಚಿಸಲು ಸಹಕರಿಸುತ್ತದೆ.
00.53 Collected address book ಸ್ವತಃ outgoing ಅಥವಾ sent mails ನಿಂದ ಈ-ಮೇಲ್ ಅಡ್ಡ್ರೆಸ್ ಗಳನ್ನು ಸಂಗ್ರಹಿಸುತ್ತದೆ..
00.59 ಲಾಂಚರ್ ನಲ್ಲಿರುವ ಥಂಡರ್ ಬರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಿ.
01.02 Thunderbird ವಿಂಡೋ ಓಪನ್ ಆಗುತ್ತದೆ.
01.05 ಈಗ Personal Address Book ಗೆ ವಿಳಾಸಗಳನ್ನು ಸೇರಿಸಲು ಕಲಿಯೋಣ.
01.10 ಮೇನ್ ಮೆನುವಿನಿಂದ Tools ಮತ್ತು Address Book ಅನ್ನು ಕ್ಲಿಕ್ ಮಾಡಿ.
01.14 Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01.17 ಎಡ ಫಲಕದಲ್ಲಿ ನೀವು Personal ಮತ್ತು Collected Address Books ಅನ್ನು ನೋಡಬಹುದು.
01.23 ಎಡ ಫಲಕದಲ್ಲಿ ಡಿಫಾಲ್ಟ್ ನಿಂದಲೇ Personal Address Book ಸೆಲೆಕ್ಟ್ ಆಗಿದೆ.
01.28 ಬಲ ಫಲಕ ಎರಡು ವಿಭಾಗಗಳನ್ನು ಹೊಂದಿದೆ.
01.31 ಮೇಲಿನ ಭಾಗ ವಿಳಾಸಗಳನ್ನು ತೋರಿಸುತ್ತದೆ.
01.34 ಕೆಳಗಿನ ಭಾಗ ಸೆಲೆಕ್ಟ್ ಮಾಡಿರುವ ವಿಳಾಸದ ಸಮಗ್ರ ಮಾಹಿತಿಯನ್ನು ತೋರಿಸುತ್ತದೆ.
01.40 ಈಗ ಹೊಸ ವಿಳಾಸವನ್ನು ರಚಿಸೋಣ.
01.44 ಟೂಲ್ ಬಾರ್ ನಿಂದ New Contact ಅನ್ನು ಕ್ಲಿಕ್ ಮಾಡಿ.
01.47 New Contact ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01.50 Contact ಟ್ಯಾಬ್ ಅನ್ನು ಕ್ಲಿಕ್ ಮಾಡಿ.
01.53 First ಎಂಬಲ್ಲಿ AMyNewContact ಎಂದು ನಮೂದಿಸಿ.
01.57 USERONE at GMAIL dot COM ಅನ್ನು Email ಎಂಬಲ್ಲಿ ನಮೂದಿಸಿ.
02.02 Display ಫೀಲ್ಡ್ ನಲ್ಲಿ First Name ತಾನಗಿಯೇ ನಮೂದಿಸಲ್ಪಟ್ಟಿರುವುದನ್ನು ಗಮನಿಸಿ.
02.10 Private ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಈ ಟ್ಯಾಬ್ ಅನ್ನು ಸಂಪೂರ್ಣ ಅಂಚೆಯ ವಿಳಾಸವನ್ನು ಸಂಗ್ರಹಿಸಲು ಬಳಸಬಹುದು.
02.18 ಇದರೊಂದಿಗೆ ನೀವು Work, Other ಮತ್ತು Photo ಟ್ಯಾಬ್ ಅನ್ನು ಬಳಸಿ ಆ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮತ್ತು ಭಾವಚಿತ್ರವನ್ನು ಸಂಗ್ರಹಿಸಬಹುದು.
02.26 OK ಅನ್ನು ಕ್ಲಿಕ್ ಮಾಡಿ.
02.29 ಇದೀಗ ವಿಳಾಸವು ಅಡ್ಡ್ರೆಸ್ ಬುಕ್ ಗೆ ಸೇರಲ್ಪಟ್ಟಿದೆ ಮತ್ತು ಬಲ ಫಲಕದಲ್ಲಿ ಕಾಣಿಸುತ್ತಿದೆ.
02.34 ಇದೇ ರೀತಿಯಲ್ಲ್ಲಿ VMyNewContact ಮತ್ತು ZMyNewContact ಅನ್ನು ಸೇರಿಸೋಣ.
02.48 ಹೆಸರಿನ ಆಧಾರದಲ್ಲಿ ವಿಳಾಸಗಳನ್ನು ವಿಂಗಡಿಸಲು ಬಯಸಿದಾದಲ್ಲಿ ,
02.52 ಮೇನ್ ಮೇನ್ಯುವಿನಿಂದ, View, Sort by ಮತ್ತು Name ಅನ್ನು ಕ್ಲಿಕ್ ಮಾಡಿ.
02.58 ವಿಳಾಸಗಳು ಡೀಫಾಲ್ಟ್ ನಿಂದಲೇ ಆರೋಹಣ ಕ್ರಮದಲ್ಲಿ ವರ್ಗೀಕೃತವಾಗಿರುವುದನ್ನು ಗಮನಿಸಿ .
03.04 ಇವುಗಳನ್ನು ಆರೋಹಣ ಕ್ರಮದಲ್ಲಿ ವರ್ಗೀಕರಿಸಲು, ಮೇನ್ ಮೆನ್ಯುವಿಂದ, View, Sort by ಮತ್ತು Ascending ಅನ್ನು ಕ್ಲಿಕ್ ಮಾಡಿ.
03.13 ಇದಕ್ಕೆ ಬದಲಾಗಿ, Address Book ಡಯಲಾಗ್ ಬಾಕ್ಸ್ ನ ಬಲ ಫಲಕದಿಂದ, Name ಅನ್ನು ಕ್ಲಿಕ್ ಮಾಡಿ.
03.19 ಇದೀಗ ಹೆಸರುಗಳು ಅವರೋಹಣ ಕ್ರಮದಲ್ಲಿ ವರ್ಗೀಕೃತವಾಗಿದೆ!
03.24 ಇದೀಗ ವಿಳಾಸವನ್ನು ಹುಡುಕೋಣ (search).
03.27 ನಾವೀಗ ಈ-ಮೇಲ್ ಅಥವಾ ಹೆಸರುಗಳನ್ನು ಬಳಸಿ ವಿಳಾಸಗಳನ್ನು ಹುಡುಕೋಣ.
03.33 ಈಗ AMyNewContact ಎಂಬ ಹೆಸರನ್ನು ಹುಡುಕೋಣ .
03.37 Address Book ಡಯಲಾಗ್ ಬಾಕ್ಸ್ ಗೆ ಹೋಗಿ.
03.40 ಸರ್ಚ್ ಫೀಲ್ಡ್ ನಲ್ಲಿ, AMyNewContact ಎಂದು ನಮೂದಿಸಿ.
03.45 ಸರ್ಚ್ ಫೀಲ್ಡ್ ಅನ್ನು ಗಮನಿಸಿ.
03.47 ದೊಡ್ದದಾದ ಗ್ಲಾಸ್ ಐಕಾನ್ ನ ಬದಲಾಗಿ , ಸಣ್ಣದಾದ ಕ್ರಾಸ್ ಐಕಾನ್ ಕಾಣಿಸುತ್ತದೆ.
03.54 AMyNewContact ಎಂಬ ವಿಳಾಸವು ಮಾತ್ರ ಮೇಲಿನ ಬಲ ಫಲಕದಲ್ಲಿ ಕಾಣಿಸುತ್ತಿದೆ.
04.01 ಈದೀಗ, ಸರ್ಚ್ ಫೀಲ್ಡ್ ನಲ್ಲಿ ಕ್ರಾಸ್ ಐಕಾನ್ ಅನ್ನು ಕ್ಲಿಕ್ ಮಾಡಿ.
04.05 ಮೇಲಿನ ಬಲ ಫಲಕದಲ್ಲಿ ಎಲ್ಲಾ ವಿಳಾಸಗಳು ಕಾಣಿಸುತ್ತವೆ.
04.09 ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ನಿಲ್ಲಿಸಿ, ಈ ಅಸೈನ್ ಮೆಂಟ್ ಅನ್ನು ಮಾಡಿ.
04.13 ವಿಷವನ್ನಾಧರಿಸಿ ಈ –ಮೇಲ್ ಅನ್ನು ಹುಡುಕಿ.
04.16 ZMyContact ಎಂಬ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಗಳು ಬದಲಾಗಿದ್ದಲ್ಲಿ,
04.21 ಈ ಮಾಹಿತಿಗಳನ್ನು ಸರಿಪಡಿಸಬಹುದೆ? ಹೌದು, ಸರಿಪಡಿಸಬಹುದು!
04.26 ಬಲ ಫಲಕದಿಂದ, ZMyNewContact ಅನ್ನು ಸೆಲೆಕ್ಟ್ ಮಾಡೋಣ.
04.30 ಈಗ ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡೋಣ ಮತ್ತು Properties ಅನ್ನು ಆರಿಸೋಣ.
04.36 Edit Contact ForZMyNewContact ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04.42 ವಿಳಾಸದ ಹೆಸರನ್ನು MMyNewContact ಎಂದು ಬದಲಾಯಿಸೋಣ.
04..46 Display ಫೀಲ್ಡ್ ನಲ್ಲಿ ಕೂಡ MMyNewContact ಎಂದು ಹೆಸರು ಬದಲಿಸೋಣ.
04.53 Work Title ಮತ್ತು Department ಗಳನ್ನು ಇದಕ್ಕೆ ಸೇರಿಸಬೇಕು.
04.57 Work ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04.59 Title ನಲ್ಲಿ Manager ಎಂದು ಮತ್ತು Department ನಲ್ಲಿ HR ಎಂದು ನಮೂದಿಸಿ.OK ಅನ್ನು ಕ್ಲಿಕ್ ಮಾಡಿ.
05.06 ಕೆಳಗಿನ ಬಲ ಫಲಕದಲ್ಲಿ ವಿಳಾಸದ ಬಗೆಗಿನ ವಿವರಗಳು ಪುನಾರಚಿತವಾಗಿರುದನ್ನು(updated) ಗಮನಿಸಿ.
05.13 ಇದೀಗ ಥಂಡರ್ ಬರ್ಡ್ ನಿಂದ ಅನಗತ್ಯ ವಿಳಾಸಗಳನ್ನು ಡಿಲೀಟ್ ಮಾಡುವುದು ಹೇಗೆ? ಎಂದು ಕಲಿಯೋಣ.
05.18 ಮೊದಲು ವಿಳಾಸವನ್ನು ಸೆಲೆಕ್ಟ್ ಮಾಡಿ.
05.20 ಕಾಂಟೆಕ್ಸ್ಟ್ (context) ಮೆನ್ಯು ವನ್ನು ನೋಡಲು ವಿಳಾಸದ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ನಂತರ Delete ಅನ್ನು ಕ್ಲಿಕ್ ಮಾಡಿ.
05.25 confirmation ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. OK ಅನ್ನು ಕ್ಲಿಕ್ ಮಾಡಿ.
05.30 ಈಗ ವಿಳಾಸವು ಡಿಲೀಟ್ ಆಗಿದೆ ಮತ್ತು ಇದು ವಿಳಾಸದ ಪಟ್ಟಿಯಲ್ಲಿ ಕಾಣಿಸುವುದಿಲ್ಲ.
05.37 ಥಂಡರ್ ಬರ್ಡ್ ನಿಮಗೆ ನಿಮ್ಮದೇ ಆದ ಅಡ್ಡ್ರೆಸ್ ಬುಕ್ ಅನ್ನು ರಚಿಸಲು ಅವಕಾಶವನ್ನು ಕೊಡುತ್ತದೆ.
05.41 Personal Address Book ಮತ್ತು Collected Addresses ಎಂಬೆರಡು ಅಡ್ಡ್ರೆಸ್ ಬುಕ್ ಗಳು ಡೀಫಾಲ್ಟ್ ನಿಂದಲೇ ಇದರೊಂದಿಗೆ ಇರುತ್ತವೆ.
05.50 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸೋಣ.
05.53 Address Book ಡಯಲಾಗ್ ಬಾಕ್ಸ್ ಅನ್ನು ಓಪನ್ ಮಾಡಿಯೇ ಇಟ್ಟುಕೊಂಡಿರುವುದನ್ನು ಮರೆಯದಿರಿ.
05.58 ಮೇನ್ ಮೆನುವಿನಿಂದ, File ಗೆ ಹೋಗಿ, New ಅನ್ನು ಕ್ಲಿಕ್ ಮಾಡಿ ಮತ್ತು Address Book ಅನ್ನು ಸೆಲೆಕ್ಟ್ ಮಾಡಿ.
06.04 New Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06.08 Address Book Name ಫೀಲ್ಡ್, Office Contacts ಎಂದು ನಮೂದಿಸಿ. OK ಎಂದು ಕ್ಲಿಕ್ ಮಾಡಿ.
06.16 ನಾವು ರಚಿಸಿರುವ ಹೊಸ ಅಡ್ಡ್ರೆಸ್ ಬುಕ್ ಎಡ ಫಲಕದಲ್ಲಿ ಕಾಣಿಸುತ್ತಿದೆ.
06.20 ಡೀಫಾಲ್ಟ್ ಅಡ್ಡ್ರೆಸ್ ಬುಕ್ ಅನ್ನು ಬಳಸಿದ ರೀತಿಯಲ್ಲೇ ಈ ಅಡ್ಡ್ರೆಸ್ ಬುಕ್ ಅನ್ನು ಬಳಸಬಹುದು.
06.28 ಈ ಟ್ಯುಟೋರಿಯಲ್ ಅನ್ನು ಅಲ್ಲಿಗೆ ಸ್ವಲ್ಪ ನಿಲ್ಲಿಸಿ ಈ ಅಸೈನ್ ಮೆಂಟ್ (assignment) ಅನ್ನು ಮಾಡಿ.
06.31 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ ಅದಕ್ಕೆ ವಿಳಾಸಗಳನ್ನು ಸೇರಿಸಿ.
06.36 ಇನ್ನು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಕಲಿಯೋಣ.
06.41 ನೀವು ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡುವಾಗ ಅದರಲ್ಲಿನ ಎಲ್ಲಾ ವಿಳಾಸಗಳು ಕೂಡ ಡಿಲೀಟ್ ಆಗುತ್ತವೆ.
06.50 address book Office Contacts ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು ಎಡ ಫಲಕದಿಂದ ಅದನ್ನು ಸೆಲೆಕ್ಟ್ ಮಾಡಿ.
06.56 ಕಾಂಟೆಕ್ಸ್ಟ್ ಮೆನ್ಯು ವನ್ನು ನೋಡಲು ಅದರ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಸೆಲೆಕ್ಟ್ ಮಾಡಿ.
07.01 ಡಿಲೀಟ್ ಮಾಡುವುದನ್ನು ಖಚಿತಪಡಿಸಲು delete address book ಡಯಲಾಗ್ ಬಾಕ್ಸ್ ಬಾಕ್ಸ್ ಕಾಣಿಸುತ್ತದೆ. OK ಅನ್ನು ಕ್ಲಿಕ್ ಮಾಡಿ.
07.10 ಇದೀಗ ಅಡ್ಡ್ರೆಸ್ ಬುಕ್ ಡಿಲೀಟ್ ಆಗುತ್ತದೆ.
07.14 ಈ ಟ್ಯುಟೊರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ, ಈ ಕೆಳಗಿನ ಅಸೈನ್ ಮೆಂಟ್ ಅನ್ನು ಮಾಡಿ.
07.17 Additional Office Contacts ಎನ್ನುವ ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ.
07.22 Address Book ಟೂಲ್ ಬಾರ್ ನಲ್ಲಿರುವ Edit ಆಪ್ಷನ್ ಅನ್ನು ಅನ್ನು ಬಳಸಿ.
07.27 ಈ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಿ.
07.30 ಮೇನ್ ಮೆನ್ಯುವಿನಿಂದ Address Book ಡಯಲಾಗ್ ಬಾಕ್ಸ್ ನಲ್ಲಿ, Edit ಮತ್ತು Search Addresses ಅನ್ನು ಸೆಲೆಕ್ಟ್ ಮಾಡಿ.
07.37 ವಿಳಾಸಗಳನ್ನು ಹುಡುಕಲು Advanced Search ಆಪ್ಷನ್ ಅನ್ನು ಬಳಸಿ.
07.43 ಇತರ ಮೇಲ್ ಅಕೌಂಟ್ ಗಳಿಂದ ವಿಳಾಸಗಳನ್ನು ಆಮದು (import) ಮಾಡಲು ಕೂಡ ಥಂಡರ್ ಬರ್ಡ್ ಅನುವು ಮಾಡಿಕೊಡುತ್ತದೆ.
07.48 ಈ ರೀತಿಯಲ್ಲಿ ನಾವು ವಿಳಾಸದ ಮಾಹಿತಿಗಳನ್ನು ಕಳೆದುಕೊಳ್ಳದೆ ಅವುಗಳನ್ನು ಪುನಾರಚಿಸಬಹುದು (update).
07.55 ಜೀ-ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (import) ಮಾಡಿಕೊಳ್ಳೋಣ
07.59 ಮೊದಲಿಗೆ ಜೀ-ಮೇಲ್ ಅಕೌಂಟ್ ಅನ್ನು ಓಪನ್ ಮಾಡಿ.
08.02 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ ಮತ್ತು www.gmail.com ಎಂಬ url ಅನ್ನು ನಮೂದಿಸಿ. Enter ಅನ್ನು ಒತ್ತಿ.
08.12 ಜೀ-ಮೇಲ್ ನ ಮುಖ ಪುಟ (ಹೋಮ್ ಪೇಜ್) ಕಾಣಿಸುತ್ತದೆ.
08.15 STUSERONE at gmail dot com ಎಂಬ Username ಅನ್ನು ಮತ್ತು password ಅನ್ನು ನಮೂದಿಸಿ.
08.24 Sign In ಅನ್ನು ಕ್ಲಿಕ್ ಮಾಡಿ. ಜೀ-ಮೇಲ್ ವಿಂಡೋ ಕಾಣಿಸುತ್ತದೆ.
08.29 ಈ ಟ್ಯುಟೋರಿಯಲ್ ಗಾಗಿ ನಾವು ಜೀ-ಮೇಲ್ ನಲ್ಲಿ ನಾಲ್ಕು ವಿಳಾಸಗಳನ್ನು ರಚಿಸಿದ್ದೇವೆ.
08.35 ಜೀ-ಮೇಲ್ ವಿಂಡೋವಿನ ಮೇಲಿನ ಎಡ ಭಾಗದಲ್ಲಿ, Gmail ಮತ್ತು Contacts ಅನ್ನು ಕ್ಲಿಕ್ ಮಾಡಿ.
08.41 Contacts ಟ್ಯಾಬ್ ಕಾಣಿಸುತ್ತದೆ.
08.44 More ಅನ್ನು ಕ್ಲಿಕ್ ಮಾಡಿ ಮತ್ತು Export ಅನ್ನು ಸೆಲೆಕ್ಟ್ ಮಾಡಿ.
08.48 Export contacts ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
08.51 Which contacts do you want to export? ಫೀಲ್ಡ್ ನಲ್ಲಿ, All contacts ಅನ್ನು ಸೆಲೆಕ್ಟ್ ಮಾಡಿ.
08.58 Which export format? ಫೀಲ್ಡ್ ನಲ್ಲಿ, Outlook CSV format ಅನ್ನು ಸೆಲೆಕ್ಟ್ ಮಾಡಿ. Export ಅನ್ನು ಸೆಲೆಕ್ಟ್ ಮಾಡಿ.
09.06 Opening contacts.csv ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09.11 Save File ಅನ್ನು ಸೆಲೆಕ್ಟ್ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ.
09.15 Downloads ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09.18 ಇದೊಂದು ದಾಖಲೆಗಳು (document) ಸೇವ್ ಆಗುವ ಡೀಫಾಲ್ಟ್ ಫೋಲ್ಡರ್ ಆಗಿದೆ.
09.23 ಈ ಫೈಲ್ contacts.csv ಎಂದು ಡೀಫಾಲ್ಟ್ Downloads ಫೋಲ್ಡರ್ ನಲ್ಲಿ ಸೇವ್ ಆಗಿದೆ.
09.30 Downloads ಡಯಲಾಗ್ ಬಾಕ್ಸ್ ಅನ್ನು ಕ್ಲೊಸ್ ಮಾಡಿ.
09.34 ಮೇನ್ ಮೆನ್ಯುವಿನಿಂದ, Tools ಅನ್ನು ಕ್ಲಿಕ್ ಮಾಡಿ ಮತ್ತು Import ಅನ್ನು ಸೆಲೆಕ್ಟ್ ಮಾಡಿ.
09.39 Import ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
09.42 Address Books ಅನ್ನು ಸೆಲೆಕ್ಟ್ ಮಾಡಿ. Next ಅನ್ನು ಕ್ಲಿಕ್ ಮಾಡಿ.
09.47 Select type of file ನ ಸೂಚಿಯಿಂದ (ಲಿಸ್ಟ್) ನಿಂದ, Text file ನ ಮೇಲ್ ನ ಮೇಲೆ ಕ್ಲಿಕ್ ಮಾಡಿ, Next ಅನ್ನು ಕ್ಲಿಕ್ ಮಾಡಿ.
09.54 Downloads ಫೋಲ್ಡರ್ ಅನ್ನು ಬ್ರೌಸ್ ಮಾಡಿ.
09.57 Select which types of files are shown ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು All Files ಅನ್ನು ಸೆಲೆಕ್ಟ್ ಮಾಡಿ.
10.04 contacts.csv ಸೆಲೆಕ್ಟ್ ಮಾಡಿ. Open ಅನ್ನು ಕ್ಲಿಕ್ ಮಾಡಿ.
10.10 Import Address Book ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
10.14 First record contains field names ಬಾಕ್ಸ್ ಅನ್ನು ಗುರುತಿಸಿರುದನ್ನು ಖಚಿತಪಡಿಸಿಕೊಳ್ಳಿ.
10.20 ಈ ಟ್ಯುಟೋರಿಯಲ್ ನಲ್ಲಿ ನಾವು, ಕೇವಲ First Name, Last Name ಮತ್ತು Primary Email ಫೀಲ್ಡ್ ಗಳನ್ನು ಗುರುತಿಸಬೇಕು ಮತ್ತು ಸರಿ ಹೊಂದಿಸಬೇಕು.
10.28 ಎಡ ಬದಿಯ ಇನ್ನಿತರ ಫೀಲ್ಡ್ ಗಳನ್ನು ಗುರುತಿಸದಿರಿ.
10.33 ಎಡ ಬದಿಯ First Name ಬಲ ಬದಿಯ First Name ನೊಂದಿಗೆ ಈಗಾಗಲೇ ಜೋಡಣೆಗೊಂಡಿದೆ (aligned).
10.39 Move Up ಮತ್ತು Move Down ಬಟನ್ ಗಳನ್ನು ಮೋಝಿಲಾ ಥಂಡರ್ ಬರ್ಡ್ ನ ಎಡ ಬದಿಯ Address Book fields ಕಾಲಮ್(column) ಅನ್ನು
10.47 ಬಲ ಬದಿಯ Gmail Record data to import ಕಾಲಮ್(column) ಗೆ ಸರಿ ಹೊಂದಿಸಲು ಬಳಸಬೇಕು.
10.52 ಎಡ ಬದಿಗಿರುವ Last Name ಫೀಲ್ಡ್ ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ್ ಅನ್ನು ಕ್ಲಿಕ್ ಮಾಡಿ.
10.58 Address Book fields ಕಾಲಮ್ ನಲ್ಲಿರುವ Last Name ಮತ್ತು Record data to import ಕಾಲಮ್ ನ Last Name ಜೋಡಣೆಗೊಂಡಿರುವುದನ್ನು ಗಮನಿಸಿ.
11.07 Primary Email ಅನ್ನು ಸೆಲೆಕ್ಟ್ ಮಾಡಿ ಮತ್ತು Move Down ಬಟನ ಅನ್ನು ಕ್ಲಿಕ್ ಮಾಡಿ, ಅದು E-mail Address ನೊಂದಿಗೆ ಜೋಡಣೆಗೊಳ್ಳುವ ತನಕ ಕಾಯಿರಿ. ನಂತರ OK ಅನ್ನು ಕ್ಲಿಕ್ ಮಾಡಿ.
11.17 ಅಡ್ಡ್ರೆಸ್ ಬುಕ್ ಯಶಸ್ವಿಯಾಗಿ ರವಾನೆ (importe) ಆಗಿದೆ ಎಂದು ಮೆಸೇಜ್ ಕಾಣಿಸುತ್ತದೆ. Finish ಅನ್ನು ಕ್ಲಿಕ್ ಮಾಡಿ.
11.24 ಇದೀಗ ಜೀ-ಮೇಲ್ ಅಡ್ಡ್ರೆಸ್ ಬುಕ್ ಥಂಡರ್ ಬರ್ಡ್ ಗೆ ವರ್ಗಾಯಿಸಲ್ಪಟ್ಟಿದೆ.
11.28 Address Book ಡಯಲಾಗ್ ಬಾಕ್ಸ್ ನ ಎಡ ಫಲಕದಲ್ಲಿ, contacts ಎಂಬ ಹೊಸ ಫೋಲ್ದರ್ ಸೇರ್ಪಡೆಗೊಂಡಿದೆ.
11.36 contacts ಅನ್ನು ಕ್ಲಿಕ್ ಮಾಡಿ.
11.38 email ವಿಳಾಸದೊಂದಿರುವ First Names ಗಳು ಕಾಣಿಸುತ್ತವೆ.
11.43 ಜೀ-ಮೇಲ್ ಅಡ್ಡ್ರೆಸ್ ಬುಕ್ ಅನ್ನು ನಾವೀಗ ಥಂಡರ್ ಬರ್ಡ್ ಗೆ ರವಾನಿಸಿಕೊಂಡಿದ್ದೇವೆ!
11.48 ಮೇಲಿನ ಎಡ ಮೂಲೆಯಲ್ಲಿರುವ ಕೆಂಪು ಬಣ್ಣದ ಕ್ರಾಸ್ ಅನ್ನು ಒತ್ತುವ ಮೂಲಕ ಅಡ್ಡ್ರೆಸ್ ಬುಕ್ ಅನ್ನು ಕ್ಲೋಸ್ ಮಾಡಿ.
11.55 ಇದೀಗ ಥಂಡರ್ ಬರ್ಡ್ ನಿಂದ ಲಾಗ್ ಔಟ್ ಆಗೋಣ. ಮೇನ್ ಮೆನ್ಯುವಿನಿಂದ, File ಮತ್ತು Quit ಅನ್ನು ಕ್ಲಿಕ್ ಮಾಡಿ.
12.02 ಇಲ್ಲಿಗೆ ಥಂಡರ್ ಬರ್ಡ್ ಬಗೆಗಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
12.06 ಈ ಟ್ಯುಟೋರಿಯಲ್ ನಲ್ಲಿ ಅಡ್ಡ್ರೆಸ್ ಬುಕ್ ಗೆ ವಿಳಾಸಗಳನ್ನು ಸೇರಿಸಲು, ನೋಡಲು, ಬದಲಾಯಿಸಲು ಮತ್ತು ಡಿಲೀಟ್ ಮಾಡಲು ಕಲಿಯಲಿತಿದ್ದೇವೆ. ಇದರೊಂದಿಗೆ
12.17 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಲು,
12.19 ಈಗಾಗಲೇ ರಚಿತವಾಗಿರುವ ಅಡ್ಡ್ರೆಸ್ ಬುಕ್ ಅನ್ನು ಡಿಲೀಟ್ ಮಾಡಲು,
12.21 ಬೇರೆ ಮೇಲ್ ಅಕೌಂಟ್ ನಿಂದ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಲು ಕಲಿತಿದ್ದೇವೆ.
12.25 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಕೊಡಲಾಗಿದೆ.
12.27 ಹೊಸ ಅಡ್ಡ್ರೆಸ್ ಬುಕ್ ಅನ್ನು ರಚಿಸಿ.
12.29 ವಿಳಾಸಗಳನ್ನು ಸೇರಿಸಿ ಮತ್ತು ನೋಡಿ.
12.32 ನಿಮ್ಮ ಈ-ಮೇಲ್ ಐ.ಡಿ ಇಂದ ಥಂಡರ್ ಬರ್ಡ್ ಅಕೌಂಟ್ ಗೆ ವಿಳಾಸಗಳನ್ನು ಆಮದು (Import) ಮಾಡಿಕೊಳ್ಳಿ.
12.38 ಅಡ್ಡ್ರೆಸ್ ಬುಕ್ ಅನ್ನು ಆಮದು ಮಾಡಿಕೊಳ್ಳುವ ವೇಳೆಯಲ್ಲಿ ಎಲ್ಲಾ ಫೀಲ್ಡ್ ಗಳನ್ನು ಸರಿ ಹೊಂದಿಸಿ.
12.43 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
12.46 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
12.50 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12.56 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12.59 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
13.03 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
13.10 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
13.14 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13.22 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
13.32 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

Vasudeva ahitanal