Java/C2/Getting-started-Eclipse/Kannada
From Script | Spoken-Tutorial
Revision as of 12:34, 23 July 2014 by Vasudeva ahitanal (Talk | contribs)
Time | Narration |
00:01 | ಎಕ್ಲಿಪ್ಸ್ ನ ಜೊತೆಗೆ ಕೆಲಸ ಆರಂಭಿಸುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಎ ಟ್ಯುಟೋರಿಯಲ್ ನಲ್ಲಿ ನಾವು, |
00:08 | ಎಕ್ಲಿಪ್ಸ್ ನಲ್ಲಿ ಪ್ರೊಜೆಕ್ಟ್ ಅನ್ನು ಹೇಗೆ ರಚಿಸುವುದು ಮತ್ತು ಕ್ಲಾಸ್ ಅನ್ನು ಹೇಗೆ ಸೇರಿಸುವುದು, |
00:12 | ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು, |
00:14 | ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ರನ್ ಮಾಡುವುದು ಇತ್ಯಾದಿಗಳನ್ನು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ನಲ್ಲಿ ನಾವು
|
00:25 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, |
00:28 | ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಇನ್ಸ್ಟಾಲ್ ಆಗಿರಬೇಕು. |
00:30 | ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಅನ್ನು ನೋಡಲು ಈ ವೆಬ್ಸೈಟ್ ಗೆ ಭೇಟಿ ಕೊಡಿ. |
00:39 | ಎಕ್ಲಿಪ್ಸ್ ಎಂಬುದು Integrated Development Environment (ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಎನ್ವಿರೋನ್ಮೆಂಟ್) ಆಗಿದೆ. |
00:42 | ಇದೊಂದು ಟೂಲ್ ಆಗಿದ್ದು ಇದರಲ್ಲಿ ಸುಲಭವಾಗಿ ನಾವು ಬರೆಯಬಹುದು, ದೋಷಗಳನು ತೆಗೆಯಬಹುದು ಹಾಗೂ ಜಾವಾ ಪ್ರೊಗ್ರಾಮ್ ಅನ್ನು ರನ್ ಮಾಡಬಹುದು. |
00:50 | ನಾವೀಗ ಎಕ್ಲಿಪ್ಸ್ ಅನ್ನು ತೆರೆಯೋಣ. |
00:55 | Alt F2 ಒತ್ತಿ ಹಾಗೂ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ. |
01:08 | ನಾವು Workspace Launcher ಎಂಬ ಡಯಲಾಗ್ ಬಾಕ್ಸ್ ಅನ್ನು ಪಡೆಯುತ್ತೇವೆ. |
01:11 | ಇಲ್ಲಿ Workspace ಎಂಬುದು ಪ್ರೊಜೆಕ್ಟ್ ಗೆ ಸಂಬಂಧಿಸಿದ ಡಾಟಾ ಮತ್ತು ನಿಮ್ಮ ಎಕ್ಲಿಪ್ಸ್ ಗೆ ಸಂಬಂಧಿಸಿದ ಫೈಲ್ ಗಳು ಇರುವ ಜಾಗವಾಗಿದೆ. |
01:19 | ಈಗ ಕಾಣುತ್ತಿರುವುದು ಡೀಫಾಲ್ಟ್ ಲೊಕೆಶನ್ ಆಗಿದೆ. |
01:24 | Browse ಎಂಬ ವಿಕಲ್ಪವನ್ನು ಉಪಯೋಗಿಸುವುದರಿಂದ ಬೇರೆ ಡರಕ್ಟರಿಯನ್ನು ಕೂಡಾ ಅಯ್ಕೆಮಾಡಬಹುದು. |
01:27 | ಈಗ ನಾವು ಡೀಫಾಲ್ಟ್ ಡೈರಕ್ಟರಿಯನ್ನೇ ಆಯ್ದುಕೊಳ್ಳೋಣ. |
01:30 | ಮುಂದುವರಿಯಲು OK ಕ್ಲಿಕ್ ಮಾಡಿ. |
01:39 | ನೀವು Welcome to Eclipse ಎಂಬ ಪೇಜ್ ಅನ್ನು ನೋಡುತ್ತೀರಿ. |
01:46 | ಮೇಲ್ಗಡೆ ಎಡ ಮೂಲೆಯಲ್ಲಿರುವ Workbench ಎಂಬುದನ್ನು ಕ್ಲಿಕ್ ಮಾಡಿ. |
01:52 | ಇಲ್ಲಿ ನಾವು Eclipse IDE ಯನ್ನು ನೋಡುತ್ತೇವೆ. ಈಗ ಪ್ರೊಜೆಕ್ಟ್ ಒಂದನ್ನು ಸೇರಿಸೋಣ. |
01:57 | File ಗೆ ಹೋಗಿ New ಎಂಬಲ್ಲಿ Project ಎಂಬುದನ್ನು ಆಯ್ಕೆ ಮಾಡಿ. |
02:05 | ಪ್ರೊಜೆಕ್ಟ್ ಗಳ ಸೂಚಿಯಿಂದ Java Project ಎಂಬುದನ್ನ್ಉ ಆಯ್ಕೆಮಾಡಿ. |
02:10 | ಮತ್ತು ಗಮನಿಸಿ, ನಾವು ನಮ್ಮ ಹೆಚ್ಚಿನ ಟ್ಯುಟೋರಿಯಲ್ ಗಳಿಗಾಗಿ java project ಅನ್ನೇ ಉಪಯೋಗಿಸಲಿದ್ದೇವೆ. Next ಎಂಬಲ್ಲಿ ಕ್ಲಿಕ್ ಮಾಡಿ. |
02:19 | Project name ಎಂಬಲ್ಲಿ EclipseDemo ಎಂದು ಟೈಪ್ ಮಾಡಿ. |
02:30 | ಇಲ್ಲಿ Use default location ಎಂಬ ವಿಕಲ್ಪ ಇರುವುದನ್ನು ಗಮನಿಸಿ. |
02:34 | ನೀವು ಈ ವಿಕಲ್ಪವನ್ನು ಆಯ್ಕೆ ಮಾಡಿದಲ್ಲಿ, ಎಲ್ಲಾ EclipseDemo ಪ್ರೊಜೆಕ್ಟ್ ನ ಡಾಟಾ ಗಳು ಡೀಫಾಲ್ಟ್ ವರ್ಕ್ ಸ್ಪೇಸ್ ನಲ್ಲಿ ಶೇಖರಗೊಳ್ಳುತ್ತವೆ. |
02:41 | ಇದನ್ನು ಆಯ್ಕೆ ಮಾಡದಿದ್ದಲ್ಲಿ, Browse ಎಂಬುದರ ಸಹಾಯದಿಂದ ವಿಭಿನ್ನ ಲೊಕೇಶನ್ ಗಳನ್ನೂ ಆಯ್ಕೆಮಾಡಬಹುದು. |
02:47 | ಪ್ರಸ್ತುತ ನಾವು ಡೀಫಾಲ್ಟ್ ಲೊಕೇಶನ್ ಅನ್ನೇ ಉಪಯೋಗಿಸುತ್ತಿದ್ದೇವೆ. |
02:52 | ಬಾಕ್ಸ್ ನ ಕೆಳಬದಿಯ ಎಡಭಾಗದಲ್ಲಿರುವ Finish ಎಂಬುದನ್ನು ಕ್ಲಿಕ್ ಮಾಡಿ. |
03:00 | ನಾವು Open Associated Perspective? ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುತ್ತೇವೆ. |
03:04 | ಪರ್ಸ್ಪೆಕ್ಟೀವ್ ಎಂಬುದು ಎಕ್ಲಿಪ್ಸ್ ನಲ್ಲಿ ನಿಶ್ಚಿತವಾದ ಐಟಮ್ ಗಳನ್ನು ರೆಫರ್ ಮಾಡುತ್ತದೆ. |
03:09 | ಈ ಡಯಲಾಗ್ ಬಾಕ್ಸ್ ಎಂಬುದು ಜಾವಾ ಡೆವಲಪ್ಮೆಂಟ್ ಗೆ ಸರಿಹೊಂದುವ ಪರ್ಸ್ಪೆಕ್ಟೀವ್ಸ್ ಅನ್ನು ಸೂಚಿಸುತ್ತದೆ. |
03:20 | Remember my decision ಎಂಬುದನ್ನು ಆಯ್ಕೆ ಮಾಡಿ Yes ಎಂಬುದನ್ನು ಕ್ಲಿಕ್ ಮಾಡಿ. |
03:24 | ನಾವಿಲ್ಲಿ ಪ್ರೊಜೆಕ್ಟ್ ನ ಜೊತೆಗೆ EclipseIDE ಯನ್ನು ಹೊಂದಿದ್ದೇವೆ. ನಾವಿಲ್ಲಿ ಈ ಪ್ರೊಜೆಕ್ಟ್ ಗೆ ಕ್ಲಾಸ್ ಅನ್ನು ಸೇರಿಸೋಣ. |
03:37 | ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ New ಗೆ ಹೋಗಿ Class ಅನ್ನು ಆಯ್ಕೆ ಮಾಡಿ. |
03:46 | Name ಎಂಬಲ್ಲಿ DemoClass ಎಂದು ಹೆಸರಿಡಿ. |
03:55 | ಇಲ್ಲಿ ಗಮನಿಸಿ, Modifiers ಎಂಬಲ್ಲಿ ನಾವು ಎರಡು ವಿಕಲ್ಪಗಳನ್ನು ಹೊಂದಿದ್ದೇವೆ, public ಮತ್ತು default ಎಂದು. |
03:59 | ಈಗ ಅದನ್ನು public ಎಂದೇ ಇರಿಸಿ. |
04:01 | ಇನ್ನೊಂದು ವಿಕಲ್ಪದ ಬಗ್ಗೆ ಅನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. |
04:06 | method stubs ಎಂಬ ಸೂಚಿಯಲ್ಲಿ public static void main ಎಂಬ ವಿಕಲ್ಪವನ್ನು ಆಯ್ಕೆಮಾಡೋಣ. |
04:15 | ಉಳಿದ ವಿಕಲ್ಪಗಳನ್ನು ಅನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. |
04:19 | ಬಾಕ್ಸ್ ನ ಕೆಳಗಡೆ ಎಡಬದಿಯಲ್ಲಿ ಇರುವ Finish ಎಂಬ ಬಟನ್ ಅನ್ನು ಕ್ಲಿಕ್ ಮಾಡಿ |
04:30 | ಇಲ್ಲಿ ನಾವು ಕ್ಲಾಸ್ ಫೈಲ್ ಅನ್ನು ಹೊಂದಿದ್ದೇವೆ. |
04:35 | ಗಮನಿಸಿ, ಇಲ್ಲಿ ಬಹಳ ವಿಭಾಗಗಳಿವೆ. ಇವುಗಳನ್ನು ಪೊರ್ಟ್ಲೆಟ್ಸ್ ಎಂದು ಕರೆಯುತ್ತೇವೆ. |
04:41 | ನಾವಿಲ್ಲಿ Package Explorer ಎಂಬ ಪೊರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ. ಇದು File Browser ನಂತೆ ವರ್ತಿಸುತ್ತದೆ. |
04:46 | ನಾವು Editor ಎಂಬ ಪೋರ್ಟ್ಲೆಟ್ಸ್ ಅನ್ನು ಹೊಂದಿದ್ದೇವೆ, ಇಲ್ಲಿ ನಾವು ಕೋಡ್ ಗಳನ್ನು ಬರೆಯುತ್ತೇವೆ. |
04:50 | ಮತ್ತು Outline ಎಂಬ ಪೋರ್ಟ್ಲೆಟ್ ಪ್ರೊಜೆಕ್ಟ್ ನಹೈರಾರ್ಕಿ ಯನ್ನು ಕೊಡುತದೆ. |
04:56 | ಪ್ರತಿಯೊಂದು ಪೋರ್ಟ್ಲೆಟ್ ಅನ್ನೂ ಕೂಡಾ ರಿಸೈಜ್ ಮಾಡಬಹುದು. |
05:10 | ಇವುಗಳು ಮಿನಿಮೈಜ್ ಬಟನ್ ನ ಸಹಾಯದಿಂದ ಮಿನಿಮೈಜ್ ಕೂಡಾ ಮಾಡಬಹುದು. |
05:26 | ಇವುಗಳು ರಿಸ್ಟೋರ್ ಬಟನ್ ನ ಸಹಾಯದಿಂದ ರಿಸ್ಟೋರ್ ಕೂಡಾ ಆಗುತ್ತವೆ. |
05:37 | ಈಗ ನಾನು ಉಳಿದ ಪೋರ್ಟಲ್ ಗಳನ್ನು ಮಿನಿಮೈಸ್ ಮಾಡಿ ಎಡಿಟರ್ ನ ಮೇಲೆ ಫೋಕಸ್ ಮಾಡುತ್ತೇನೆ. |
05:49 | ನಮಗೆ ತೋರುತ್ತಿರುವಂತೆ, ಈಗಾಗಲೆ ಕೆಲವು ಕೋಡ್ ಗಳು ಇಲ್ಲಿ ಪ್ರಸ್ತುತವಿದೆ. ಎಕ್ಲಿಪ್ಸ್ ನಮಗಾಗಿ ಇದನ್ನು ರಚಿಸಿದೆ. |
05:54 | ನಾವು ಕ್ಲಾಸ್ ಅನ್ನು ರಚಿಸುವಾಗ ಯಾವ ವಿಕಲ್ಪವನ್ನು ಆಯ್ಕೆ ಮಾಡುತ್ತೇವೆಯೋ ಅದನ್ನಾಧಾರಿಸಿ ಇಲ್ಲಿ ಕೋಡ್ ಜನರೇಟ್ ಆಗುತ್ತದೆ. |
06:00 | ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. |
06:08 | System.out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ (“Hello Eclipse”). ಎಂದು ಟೈಪ್ ಮಾಡಿ. |
06:26 | ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿ ಕೊಲನ್ ಅನ್ನು ಸೇರಿಸಿ. |
06:31 | File ಮತ್ತು Save ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಫೈಲ್ ಅನ್ನು ಸೇವ್ ಮಾಡಿ. |
06:37 | ಅಥವಾ, Control S ಒತ್ತುವುದರ ಮೂಲಕ ಕೂಡಾ ಸೇವ್ ಮಾಡಬಹುದು. |
06:42 | ಈ ಪ್ರೊಗ್ರಾಮ್ ಅನ್ನು ರನ್ ಮಾಡಲು editor ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ run as ಗೆ ಹೋಗಿ java application ಎಂಬುದನ್ನು ಆಯ್ಕೆ ಮಾಡಿ. |
06:56 | ಏನಾದರೂ ಪ್ರಿಂಟ್ ಆಗಿದ್ದಲ್ಲಿ ನಾವು ಅದನ್ನು ಔಟ್ಪುಟ್ ರೂಪದಲ್ಲಿ ಔಟ್ಪುಟ್ ಕನ್ಸೋಲ್ ನಲ್ಲಿ ಕಾಣುತ್ತೇವೆ. |
07:04 | ನಮ್ಮ ಕೋಡ್ ನಲ್ಲಿ ಸಮಸ್ಯೆ ಇದ್ದಲ್ಲಿ ಆ ಸಮಸ್ಯೆಯು Problems ಎಂಬ ಪೋರ್ಟ್ಲೆಟ್ ನಲ್ಲಿ ತೋರುತ್ತದೆ. |
07:10 | ಹೀಗೆ ಎಕ್ಲಿಪ್ಸ್ ನಲ್ಲಿ ಜಾವಾ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ರನ್ ಮಾಡುವುದೆಂದು ಕಲಿತೆವು. |
07:18 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:20 | ಈ ಟ್ಯುಟೋರಿಯಲ್ ನಲ್ಲಿ ನಾವು, ಎಕ್ಲಿಪ್ಸ್ ನಲ್ಲಿ ಪ್ರೊಜೆಕ್ಟ್ ಅನ್ನು ಹಾಗೂ ಅದರಲ್ಲಿ ಕ್ಲಾಸ್ ಅನ್ನು ಹೇಗೆ ರಚಿಸುವುದು, ಎಕ್ಲಿಪ್ಸ್ ನಲ್ಲಿ ಜಾವಾ ಸೋರ್ಸ್ ಕೋಡ್ ಅನ್ನು ಹೇಗೆ ಬರೆಯುವುದು ಮತ್ತು ಅದನ್ನು ಹೇಗೆ ರನ್ ಮಾಡುವುದೆಂದು ಕಲಿತೆವು. |
07:33 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, Display ಎಂಬ ಹೆಸರಿನ ಹೊಸ ಪ್ರೊಜೆಕ್ಟ್ ಅನ್ನು ರಚಿಸಿ. |
07:38 | ಹಾಗೂ ಆ Display ಗೆ Welcome ಎಂಬ ಕ್ಲಾಸ್ ಅನ್ನು ಸೇರಿಸಿ. |
07:44 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
07:50 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
07:53 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
07:58 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:02 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:05 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:17 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:23 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:27 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |