Firefox/C4/Add-ons/Kannada
From Script | Spoken-Tutorial
Revision as of 13:10, 17 July 2014 by Vasudeva ahitanal (Talk | contribs)
Visual Cue | Narration | ||
00.01 | ಮೊಝಿಲ್ಲಾ ಫೈರ್ ಫಾಕ್ಸ್ ನಲ್ಲಿನ ಅಡ್ವಾನ್ಸ್ ಫೈರ್ ಫಾಕ್ಸ್ ಫೀಚರ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
00.08 | ಈ ಟ್ಯುಟೋರಿಯಲ್ ನಲ್ಲಿ ನಾವು ಫೈರ್ ಫಾಕ್ಸ್ ನ ಅಡ್ವಾನ್ಸ್ಡ್ ಫೀಚರ್ ಗಳಾದ Quick find link (ಕ್ವಿಕ್ ಫೈನ್ಡ್ ಲಿಂಕ್), Firefox Sync (ಫೈರ್ ಫಾಕ್ಸ್ ಸಿಂಕ್) ಮತ್ತು Plug-ins (ಪ್ಲಗ್ ಇನ್ಸ್) ಗಳ ಬಗ್ಗೆ ಕಲಿಯಲಿದ್ದೇವೆ. | ||
00.19 | ಇಲ್ಲಿ ನಾವು ಉಬಂಟು 10.04ರಲ್ಲಿ ಫೈರ್ ಫಾಕ್ಸ್ ನ ಆವೃತ್ತಿ 7.0ಯನ್ನು ಬಳಸುತ್ತಿದ್ದೇವೆ. | ||
00.26 | ನಾವೀಗ ಫೈರ್ ಫಾಕ್ಸ್ ಬ್ರೌಸರನ್ನು ತೆರೆಯೋಣ. | ||
00.29 | ಡಿಫಾಲ್ಟ್ ಆಗಿ yahoo ಹೋಮ್ ಪೇಜ್ ತೆರೆದುಕೊಳ್ಳುತ್ತದೆ. | ||
00.33 | ಈಗ ನಾವು ಫೈರ್ ಫಾಕ್ಸ್ ನಲ್ಲಿ ಲಿಂಕ್ ಗಳನ್ನು ಹುಡುಕುವುದನ್ನು ಕಲಿಯೋಣ. | ||
00.37 | ಒಂದೇ ವೆಬ್ ಪುಟದಲ್ಲಿ ಸರ್ಚ್ ಮಾಡಲು ಮತ್ತು ಲಿಂಕ್ ಗಳನ್ನು ಹುಡುಕಲು ಫೈರ್ ಫಾಕ್ಸ್ ಅನುವು ಮಾಡಿಕೊಡುತ್ತದೆ. | ||
00.43 | ಅಡ್ರೆಸ್ ಬಾರ್ ನಲ್ಲಿ WWW. Google.co.in ಎಂದು ಬರೆದು enter ಒತ್ತಿರಿ. | ||
00.51 | ಕರ್ಸರ್ Google (ಗೂಗಲ್) ಸರ್ಚ್ ಬಾರ್ ನ ಒಳಗೆ ಇರುವುದನ್ನು ಗಮನಿಸಿ.. | ||
00.58 | ನಂತರ, ಸರ್ಚ್ ಬಾರ್ ನ ಹೊರಗೆ ಎಲ್ಲಿ ಬೇಕಾದಲ್ಲಿ ಕರ್ಸರ್ ಅನ್ನು ಕ್ಲಿಕ್ ಮಾಡಿ. | ||
01.04 | ಈಗ ಕೀಬೋರ್ಡ್ ನ ಮುಖಾಂತರ apostrophe (ಅಪೋಸ್ಟ್ರೊಪಿ) ಕೀಯನ್ನು ಒತ್ತಿರಿ. | ||
01.09 | quick find link (ಕ್ವಿಕ್ ಫೈಂಡ್ ಲಿಂಕ್ಸ್) ಎಂಬ ಸರ್ಚ್ ಬಾಕ್ಸ್ ವಿಂಡೋವಿನ ಎಡಬದಿಯ ಮೇಲ್ಭಾಗದ ಮೂಲೆಯಲ್ಲಿ ಗೋಚರಗೊಳ್ಳುತ್ತದೆ. | ||
01.16 | ಬಾಕ್ಸ್ ನ ಒಳಗೆ Bengali (ಬೆಂಗಾಲಿ) ಎಂದು ಬರೆಯೋಣ. Bengali (ಬಂಗಾಲಿ) ಎಂಬ ಲಿಂಕ್ ಹೈಲೈಟ್ ಆಗಿರುವುದನ್ನು ಗಮನಿಸಿ. | ||
01.25 | ನೀವೀಗ ವೆಬ್ ಪೇಜ್ ನಲ್ಲಿ ಸುಲಭವಾಗಿ ಮತ್ತು ವೇಗವಾಗಿ ಲಿಂಕ್ ಅನ್ನು ಹುಡುಕಬಹುದು. | ||
01.31 | ಒಂದು ವೇಳೆ ಫೈರ್ ಫಾಕ್ಸ್ ಬ್ರೌಸರ್ ಅನ್ನು ಈ ಸೆಟ್ಟಿಂಗ್ ಮತ್ತು ಪ್ರಿಫರೆನ್ಸ್ ಗಳೊಂದಿಗೆ ಬೇರೆ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಫೋನ್ ಗಳಂತಹ ಬೇರೆ ಸಾಧನಗಳಲ್ಲಿ ಬಳಸಲು ಸಾಧ್ಯವೇ? ಎಂದಲ್ಲಿ ಖಂಡಿತ ಸಾಧ್ಯ! | ||
01.43 | ಹೌದು! firefox sync features (ಫೈರ್ ಫಾಕ್ಸ್ ಸಿಂಕ್ ಫೀಚರ್ಸ್), ನಿಮ್ಮ ಬುಕ್ಮಾರ್ಕ್ಸ್, ಹಿಸ್ಟರಿ ಮತ್ತು ಇನ್ಸ್ಟಾಲ್ಡ್ ಎಕ್ಸ್ಟೆನ್ಷನ್ ಗಳಂತಹ ಎಲ್ಲಾ ಡಾಟಾಗಳನ್ನೂ ಮೊಝಿಲ್ಲಾ ಸರ್ವರ್ ನಲ್ಲಿ ಭದ್ರವಾಗಿ ಸ್ಟೋರ್ ಮಾಡಿರುತ್ತದೆ. | ||
01.55 | ನೀವು ನಿಮ್ಮ ಕಂಪ್ಯೂಟರನ್ನು ಈ ಸರ್ವರ್ ಗೆ ಸಿಂಕ್ ಮಾಡುವ ಮುಖಾಂತರ ನಿಮ್ಮ ಬ್ರೌಸರ್ ಡಾಟಾ ವನ್ನು ಆಕ್ಸಸ್ ಮಾಡಬಹುದು. | ||
02.02 | ನಾವೀಗ ಸಿಂಕ್ ಫೀಚರನ್ನು ಎನೇಬಲ್ ಮಾಡೋಣ. | ||
02.06 | ಮೆನ್ಯು ಬಾರ್ ನಲ್ಲಿ tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ನಂತರ set up sync (ಸೆಟ್ ಅಪ್ ಸಿಂಕ್) ಅನ್ನು ಕ್ಲಿಕ್ ಮಾಡಿ. The Firefox sink setup (ದ ಫೈರ್ ಫಾಕ್ಸ್ ಸ್ಕಿನ್ ಸೆಟ್ ಅಪ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
02.15 | ನಾವು ಮೊದಲ ಬಾರಿಗೆ ಸಿಂಕ್ ಅನ್ನು ಉಪಯೋಗಿಸುತ್ತಿರುವುದರಿಂದ create a new account ಎಂಬಲ್ಲಿ ಕ್ಲಿಕ್ ಮಾಡಿ. | ||
02.21 | The account details (ದ ಅಕೌಂಟ್ ಡೀಟೇಲ್ಸ್) ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | ||
02.24 | ಈ ಟ್ಯುಟೋರಿಯಲ್ ನ ಕಾರ್ಯಕ್ಕಾಗಿ ನಾವಾಗಲೇ g mail (ಜಿ ಮೇಲ್) ಎಂಬ ಅಕೌಂಟನ್ನು ರಚಿಸಿದ್ದೇವೆ. | ||
02.30 | email address ನಲ್ಲಿ ST.USERFF@gmail.com (ಎಸ್ ಟಿ ಡಾಟ್ ಯೂಸರ್ ಎಫ್ ಎಫ್ ಅಟ್ ಜಿಮೇಲ್ ಡಾಟ್ ಕಾಮ್) ಎಂದು ಬರೆಯಿರಿ. | ||
02.42 | choose a password (ಚೂಸ್ ಅ ಪಾಸ್ವರ್ಡ್) ಎಂಬಲ್ಲಿ ಪಾಸ್ ವರ್ಡ್ ಅನ್ನು ಬರೆಯೋಣ. | ||
02.47 | confirm password (ಕನ್ಫರ್ಮ್) ಎಂಬಲ್ಲಿ, ಪಾಸ್ ವರ್ಡ್ ಅನ್ನು ಮತ್ತೆ ಬರೆಯೋಣ. | ||
02.52 | ಡಿಫಾಲ್ಟ್ ಆಗಿ server (ಸರ್ವರ್) ನಲ್ಲಿ firefox sync server (ಫೈರ್ ಫಾಕ್ಸ್ ಸಿಂಕ್ ಸರ್ವರ್) ಆಯ್ಕೆಯಾಗಿರುತ್ತದೆ. | ||
02.58 | ಈ ಸೆಟ್ಟಿಂಗ್ ಅನ್ನು ನಾವೀಗ ಪರಿವರ್ತಿಸುವುದಿಲ್ಲ. “terms of service” (ಟರ್ಮ್ಸ್ ಆಫ್ ಸರ್ವೀಸ್) ಮತ್ತು “privacy policy” (ಪ್ರೈವಸಿ ಪಾಲಿಸಿ) ಬಾಕ್ಸ್ ಗಳನ್ನು ಚೆಕ್ ಮಾಡಿ. | ||
03.08 | “next” (ನೆಕ್ಸ್ಟ್) ಅನ್ನು ಕ್ಲಿಕ್ ಮಾಡಿ. ಫೈರ್ ಫಾಕ್ಸ್ sync key (ಸಿಂಕ್ ಕೀ) ಯನ್ನು ತೋರಿಸುತ್ತದೆ. | ||
03.11 |
ಬೇರೆ ಮೆಷಿನ್ ಗಳನ್ನು ಸಿಂಕ್ ಮುಖಾಂತರ ಆಕ್ಸಿಸ್ ಮಾಡಲು ಈ ಕೀಯನ್ನು ಆ ಸಿಸ್ಟಮ್ ಗಳಲ್ಲಿ ಬಳಸಬೇಕಾಗುತ್ತದೆ. | ||
03.18 | “save” (ಸೇವ್) ಬಟನ್ ನ ಮೇಲೆ ಕ್ಲಿಕ್ ಮಾಡಿ. save sync key ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. | ||
03.24 | desktopಗೆ ಬ್ರೌಸ್ ಮಾಡಿ. “save” ಅನ್ನು ಒತ್ತಿರಿ. | ||
03.28 | firefox sync key.html ಎಂಬ ಎಚ್ ಟಿ ಎಮ್ ಎಲ್ ಫೈಲ್ ಡೆಸ್ಕ್ ಟಾಪ್ ನಲ್ಲಿ ಸೇವ್ ಆಗಿರುತ್ತದೆ. | ||
03.35 | ಈ ಕೀಯನ್ನು ಗಮನದಲ್ಲಿಟ್ಟುಕೊಂಡಿರಿ ಮತ್ತು ನೀವು ಆಕ್ಸಸ್ ಮಾಡಲು ಸುಲಭವಾಗುವ ಸ್ಥಳದಲ್ಲಿ ಈ ನಂಬರ್ ಅನ್ನು ಸೇವ್ ಮಾಡಿರಿ. | ||
03.41 | ಈ ಕೀಯನ್ನು ಬಳಸದ ಹೊರತಾಗಿ ನೀವು ಬೇರೆ ಕಂಪ್ಯೂಟನಿಂದ ನಿಮ್ಮ ಸಿಂಕ್ ಅಕೌಂಟನ್ನು ಆಕ್ಸಸ್ ಮಾಡಲು ಸಾಧ್ಯವಿಲ್ಲ. | ||
03.48 | next ಅನ್ನು ಕ್ಲಿಕ್ ಮಾಡಿ. Please Confirm You're Not a Robot (ಪ್ಲೀಸ್ ಕನ್ಫರ್ಮ್ ಯು ಆರ್ ನಾಟ್ ಎ ರೋಬೋಟ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ, | 03.53 | ಕಾಣುವ ಅಕ್ಷರಗಳನ್ನು ಬರೆಯಿರಿ. ಸೆಟ್ ಅಪ್ ಸಂಪೂರ್ಣಗೊಳ್ಳುತ್ತದೆ. |
03.59 | “firefox sync setup” (ಫೈರ್ ಫಾಕ್ಸ್ ಸಿಂಕ್ ಸೆಟ್ ಅಪ್) ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿನ “sync option” (ಸಿಂಕ್ ಆಪ್ಷನ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
04.06 | ನೀವಿಲ್ಲಿ ನಿಮ್ಮ ಸಿಂಕ್ ಆಪ್ಷನ್ ನನ್ನು ಸೆಟ್ ಮಾಡಬಹುದು. | ||
04.09 | ಈ ಟ್ಯುಟೋರಿಯಲ್ ನ ಉಪಯೋಗಕ್ಕಾಗಿ ಡಿಫಾಲ್ಟ್ ಆಪ್ಷನ್ ನನ್ನು ನಾವು ಪರಿವರ್ತಿಸುವುದಿಲ್ಲ. “done” (ಡನ್) ನ ಮೇಲೆ ಕ್ಲಿಕ್ ಮಾಡಿ. | ||
04.17 | Next (ನೆಕ್ಸ್ಟ್) ನ ಮೇಲೆ ಕ್ಲಿಕ್ ಮಾಡಿ. ಫೈರ್ ಫಾಕ್ಸ್, ಕಂಟೆಂಟ್ ಅನ್ನು ಪರಿಶೀಲಿಸುತ್ತದೆ. ನಂತರ finish (ಫಿನಿಷ್) ಬಟನ್ ಕಾಣುತ್ತದೆ. “finish”ನ ಮೇಲೆ ಕ್ಲಿಕ್ ಮಾಡಿ. | ||
04.25 | ನೀವೀಗ ನಿಮ್ಮ ಕಂಪ್ಯೂಟರ್ ನಲ್ಲಿ ಫೈರ್ ಫಾಕ್ಸ್ ಸಿಂಕ್ ಸೆಟ್ ಅಪ್ ಅನ್ನು ಹೊಂದಿದ್ದೀರಿ. | ||
04.29 | ಬೇರೆ ಕಂಪ್ಯೂಟರ್ ನಿಂದ ನಿಮ್ಮ ಬ್ರೌಸರ್ ಡಾಟಾ ವನ್ನು ಹೇಗೆ ಆಕ್ಸಸ್ ಮಾಡುವಿರಿ? | ||
04.35 | ಅದಕ್ಕೆ ನೀವು ಸಿಂಕ್ ಟು ಅದರ್ ಕಂಪ್ಯೂಟರ್ ಆರ್ ಡಿವೈಸ್ ಎಂಬ ಟೂಲ್ ಅನ್ನು ಹೊಂದಿರಬೇಕಾಗುತ್ತದೆ. | ||
04.40 | ಈ ಟ್ಯುಟೋರಿಯಲ್ ನ ಅನುಕೂಲಕ್ಕಾಗಿ ಸ್ಲೈಡ್ ಗಳ ಮುಖಾಂತರ ಆದೇಶಗಳನ್ನು ಹೇಳಲಿದ್ದೇವೆ. | ||
04.46 | ನೀವು ಇನ್ನೊಂದು ಕಂಪ್ಯೂಟರ್ ಅಥವಾ ಡಿವೈಸ್ ನ ಜೊತೆ ಸಿಂಕ್ ಮಾಡಲು ಈ ಆದೇಶಗಳನ್ನು ಪಾಲಿಸಬಹುದು. | ||
04.52 | ಇನ್ನೊಂದು ಕಂಪ್ಯೂಟರ್ ಅಥವಾ ಡಿವೈಸ್ ನಲ್ಲಿ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯಿರಿ. | ||
04.57 | ಮೆನ್ಯು ಬಾರ್ ನಲ್ಲಿ tools (ಟೂಲ್ಸ್) ನ ಮೇಲೆ ಕ್ಲಿಕ್ ಮಾಡಿ ಮತ್ತು setup firefox sync (ಸೆಟ್ ಅಪ್ ಫೈರ್ ಫಾಕ್ಸ್ ಸಿಂಕ್) ಅನ್ನು ಆಯ್ಕೆ ಮಾಡಿ. | ||
05.03 | I have a firefox sync account (ಐ ಹ್ಯಾವ್ ಎ ಫೈರ್ ಫಾಕ್ಸ್ ಸಿಂಕ್ ಅಕೌಂಟ್) ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ E Mail IDಮತ್ತು Password ಅನ್ನು ಬರೆಯಿರಿ. | ||
05.10 | ನಿಮ್ಮ sync key ಯನ್ನು ಬರೆಯಿರಿ . finish (ಫಿನಿಷ್) ಮೇಲೆ ಕ್ಲಿಕ್ ಮಾಡಿ. | ||
05.15 | ಇನ್ನೊಂದು ಕಂಪ್ಯೂಟರ್ ಈಗ ಸಿಂಕ್ ಗೊಂಡಿದೆ. ನೀವು ನಿಮ್ಮ ಬ್ರೌಸರ್ ಡಾಟಾ ವನ್ನು ಅದರ್ ಕಂಪ್ಯೂಟರ್ ಟೂಲ್ ಎಂಬುದರಿಂದ ಆಕ್ಸಸ್ ಮಾಡಬಹುದು. | ||
05.23 | ನೀವಿಲ್ಲಿ ಹೊಸ ಬುಕ್ಮಾರ್ಕ್ ಅನ್ನು ಸೇವ್ ಮಾಡಬಹುದು ಮತ್ತು ನಿಮ್ಮ ಕಂಪ್ಯೂಟರ್ ನ ಪ್ರಿಫರೆನ್ಸ್ ಅನ್ನು ಬದಲಿಸಲೂಬಹುದು. | ||
05.28 | ಈ ಬದಲಾವಣೆಗಳು ಸ್ವಯಂ ಚಾಲಿತವಾಗಿ ಸಿಂಕ್ ಮ್ಯಾನೇಜರ್ನಲ್ಲಿ ಅಪ್ ಡೇಟ್ ಗೊಳ್ಳುತ್ತದೆ. | ||
05.34 | ಕೊನೆಯದಾಗಿ, ಸಿಂಕ್ ಮ್ಯಾನೇಜರ್ ನಲ್ಲಿನ ಅಪ್ ಡೇಟೆಡ್ ಡಾಟಾ ಗಳನ್ನು ಪ್ರಧಾನ ಕಂಪ್ಯೂಟರ್ ನಲ್ಲಿ ಸಿಂಕ್ ಮಾಡುವುದು ಹೇಗೆಂದು ಕಲಿಯೋಣ. | ||
05.42 | ಈಗ ಮೆನ್ಯು ಬಾರ್ ನಲ್ಲಿ tools ಅನ್ನು ಕ್ಲಿಕ್ ಮಾಡಿ. | ||
05.46 | ಸಿಂಕ್ ಆಪ್ಷನ್ ಈಗ (sync now) ಸಿಂಕ್ ನೌ ಎಂದು ಗೋಚರಿಸುತ್ತಿರುವುದನ್ನು ಗಮನಿಸಿ. | ||
05.51 | ನೀವು ಇದರ ಮೇಲೆ ಕ್ಲಿಕ್ ಮಾಡುವ ಮುಖಾಂತರ ಸಿಂಕ್ ಮ್ಯಾನೇಜರ್ ನ ಜೊತೆ ನಿಮ್ಮ ಡಾಟಾ ವನ್ನು ಸಿಂಕ್ ಮಾಡಬಹುದು. | ||
05.55 | ನೀವು ನಿಮ್ಮ ಫೈರ್ ಫಾಕ್ಸ್ ಸಿಂಕ್ ಅಕೌಂಟನ್ನು ಡಿಲಿಟ್ ಮಾಡಬಹುದು ಅಥವಾ ಸಿಂಕ್ ಡಾಟಾವನ್ನು ಅಳಿಸಲೂಬಹುದು. | ||
06.02 | ಇದನ್ನು ಮಡುವುದಾದರೂ ಹೇಗೆ? ಅದೂ ಕೂಡಾ ತುಂಬಾ ಸರಳ. | ||
06.06 | ಹೊಸ ಬ್ರೌಸರ್ ಅನ್ನು ತೆರೆಯಿರಿ. ಅಡ್ರೆಸ್ ಬಾರ್ ನಲ್ಲಿ https://account.services.mozilla.com. ಎಂದು ಟೈಪ್ ಮಾಡಿ Enter ಒತ್ತಿರಿ. | ||
06.21 | username ನಲ್ಲಿ ST.USERFF@gmail.com ಎಂದು ಬರೆಯಿರಿ | ||
06.28 | ಈಗ ಪಾಸ್ ವರ್ಡ್ ಅನ್ನು ಬರೆದು login ಮೇಲೆ ಕ್ಲಿಕ್ ಮಾಡಿ. | ||
06.33 | ಫೈರ್ ಫಾಕ್ಸ್ ಸಿಂಕ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. | ||
06.36 | ನೀವೀಗ ಫೈರ್ ಫಾಕ್ಸ್ ಸೆಟ್ಟಿಂಗ್ ಮತ್ತು ಡಾಟಾ ವನ್ನು ಪರಿವರ್ತಿಸಬಹುದು. | ||
06.40 | ನಾವೀಗ ಈ ಪೇಜ್ ನಿಂದ ಹೊರಗೆ ಹೋಗೋಣ. | ||
06.43 | ಇನ್ನು ಪ್ಲಗ್ ಇನ್ಸ್ ನ ಬಗ್ಗೆ ಕಲಿಯೋಣ. ಪ್ಲಗ್ ಇನ್ಸ್ ಎಂದರೇನು? | ||
06.49 | ಪ್ಲಗ್ ಇನ್ಸ್ ಎಂಬುದು ಫೈರ್ ಫಾಕ್ಸ್ ಬ್ರೌಸರ್ ಗೆ ನಿರ್ದಿಷ್ಟ ಕಾರ್ಯನಿರ್ವಹಣೆಯನ್ನು ಸೇರಿಸುವ ಸಾಫ್ಟ್ ವೇರ್ ಪ್ರೋಗ್ರಾಮ್. | ||
06.57 | ಹಾಗಾಗಿಯೂ ಪ್ಲಗ್ ಇನ್ಸ್ ಎಂಬುವು ಎಕ್ಸ್ಟೆನ್ಷನ್ ಗಳಿಗಿಂತ ಭಿನ್ನವಾದವುಗಳು. | ||
07.00 | ಪ್ಲಗ್ ಇನ್ಸ್ ಎಂಬುವು ಬೇರೆ ಬೇರೆ ಕಂಪನಿಗಳಿಂದ ತಯಾರಿಸಲ್ಪಟ್ಟ ಪ್ರೋಗ್ರಾಮ್ ಗಳು. | ||
07.04 | ಪ್ಲಗ್ ಇನ್ ಗಳು ಮೂರನೇ ವ್ಯಕ್ತಿಯ ಪ್ರೋಗ್ರಾಮ್ ಗಳನ್ನು ಫೈರ್ ಫಾಕ್ಸ್ ಬ್ರೌಸರ್ನಲ್ಲಿ ಇಂಟಿಗ್ರೇಟ್ ಮಾಡುತ್ತವೆ. | ||
07.10 | ಪ್ಲಗ್ ಇನ್ ಗಳು ವೀಡಿಯೋವನ್ನು ನೋಡಲು, ಮಲ್ಟಿ ಮೀಡಿಯಾ ಕಂಟೆಟ್ ಅನ್ನು ನೋಡಲು, ವೈರಸ್ ಸ್ಕ್ಯಾನ್ ಅನ್ನು ನಡೆಸಲು ಮತ್ತು ಫೈರ್ ಫಾಕ್ಸ್ ನಲ್ಲಿ ಪವರ್ ಆನಿಮೇಷನ್ ಅನ್ನು ಮಾಡಲು ಅನುವು ಮಾಡಿಕೊಡುತ್ತದೆ. | ||
07.21 | ಉದಾಹರಣೆಗೆ, ಫ್ಲಾಷ್ ಎಂಬುದು ವೀಡಿಯೋವನ್ನು ನೋಡಲು ನೀವು ಫೈರ್ ಫಾಕ್ಸ್ ಬ್ರೌಸರ್ನಲ್ಲಿ ಇನ್ಸ್ಟಾಲ್ ಮಾಡಿದ ಒಂದು ಪ್ಲಗ್ ಇನ್. | ||
07.28 | ನಾವೀಗ ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಇನ್ ಸ್ಟಾಲ್ ಆಗಿರುವ ಪ್ಲಗ್ ಇನ್ ಗಳನ್ನು ನೋಡೋಣ. | ||
07.33 | ಮೆನ್ಯು ಬಾರ್ ನಲ್ಲಿ tools ಮೇಲೆ ಕ್ಲಿಕ್ ಮಾಡಿ ನಂತರ addons ಅನ್ನು ಆರಿಸಿ. | ||
07.38 | addon manager ಎಂಬ ಟ್ಯಾಬ್ ತೆರೆದುಕೊಳ್ಳುತ್ತದೆ. ಎಡಬದಿಯ ಪ್ಯಾನಲ್ ನಲ್ಲಿರುವ plug-ins ಬಟನ್ ಮೇಲೆ ಕ್ಲಿಕ್ ಮಾಡಿ. | ||
07.45 | ಈಗ ಬಲಬದಿಯ ಪ್ಯಾನಲ್ ನಲ್ಲಿ ನೀಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ ಪ್ಲಗ್ ಇನ್ ಗಳ ಪಟ್ಟಿಯೇ ಗೋಚರವಾಗುತ್ತದೆ. | ||
07.50 | ಪ್ಲಗ್ ಇನ್ ಗಳನ್ನು ಇನ್ಸ್ಟಾಲ್ ಮಾಡುವುದಾದರೂ ಹೇಗೆ? | ||
07.53 | ಪ್ರತಿಯೊಂದು ಪ್ಲಗ್ ಇನ್ ಅನ್ನು ಕೂಡಾ ಇನ್ಸ್ಟಾಲ್ ಮಾಡಲು ಅದಕ್ಕೆ ಸಂಬಂಧ ಪಟ್ಟ ಸೈಟ್ ನಿಂದ ಅದನ್ನು ಡೌನ್ಲೋಡ್ ಮಾಡಿ ನಂತರ ಇನ್ಸ್ಟಾಲ್ ಮಾಡಬಹುದು. | ||
08.01 | ಇನ್ಸ್ಟಾಲೇಷನ್ ಪ್ರೊಡ್ಯೂಸರ್ ಒಂದೊಂದು ಪ್ಲಗ್ ಇನ್ ಗಳಲ್ಲಿ ಒಂದೊಂದು ತರಹ ಇರಬಹುದು. | ||
8.05 | ಪ್ಲಗ್ ಇನ್ ಗಳ ಇನ್ಸ್ಟಾಲೇಷನ್ ಮಾಹಿತಿಗಾಗಿ ಮತ್ತು ಫೈರ್ ಫಾಕ್ಸ್ ನಲ್ಲಿನ ಪ್ಲಗಿನ್ಸ್ ಉಪಲಭ್ಯತೆಯ ಮಾಹಿತಿಗಾಗಿ ದಯವಿಟ್ಟು mozilla websiteಗೆ ಭೇಟಿ ನೀಡಿ. | ||
08.16 | ನಾವೀಗ ಬ್ರೌಸರನ್ನು ಮುಚ್ಚೋಣ. | ||
08.19 | ಪ್ಲಗಿನ್ ಗಳನ್ನು ನಿಷೇಧಗೊಳಿಸಲು disable ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
08.24 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. | ||
08.27 | ಈ ಟ್ಯುಟೋರಿಯಲ್ ನಲ್ಲಿ ನಾವು
* ಲಿಂಕ್ ಗಳನ್ನು ಶೀಘ್ರವಾಗಿ ಹುಡುಕುವುದು * ಫೈರ್ ಫಾಕ್ಸ್ ಸಿಂಕ್ ಮತ್ತು ಪ್ಲಗ್ ಇನ್ಸ್ ಇವುಗಳ ಬಗ್ಗೆ ಕಲಿತಿದ್ದೇವೆ. | ||
08.36 | ಇಲ್ಲಿ ನಿಮಗೆ ಅಭ್ಯಾಸವಿದೆ. | ||
08.38 | ಫೈರ್ ಫಾಕ್ಸ್ ಗಾಗಿ 3 ಪ್ಲಗ್ ಇನ್ ಗಳನ್ನು ಡೌನ್ಲೋಡ್ ಮಾಡಿ ನಂತರ ಇನ್ಸ್ಟಾಲ್ ಮಾಡಿ. | ||
08.43 | ಫೈರ್ ಫಾಕ್ಸ್ ಸಿಂಕ್ ಅಕೌಂಟನ್ನು ರಚಿಸಿರಿ. ಬೇರೆ ಕಂಪ್ಯೂಟರ್ ನಿಂದ ನಿಮ್ಮ ಫೈರ್ ಫಾಕ್ಸ್ ಬ್ರೌಸರ್ ಅನ್ನು ಆಕ್ಸಸ್ ಮಾಡಿ. | ||
08.50 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | ||
08.56 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
09.01 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | ||
09.06 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
09.10 | ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ. | ||
09.16 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | ||
09.21 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
09.28 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ | ||
09.31 | spoken hyphen tutorial dot org slash NMEICT hyphen Intro | ||
09.36 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ಶಶಾಂಕ. ಸಹಯೊಗಕ್ಕಾಗಿ ಧನ್ಯವಾದಗಳು. |