Firefox/C2/Searching-and-Auto-complete/Kannada
From Script | Spoken-Tutorial
Time | Narration |
00:00 | Mozilla Firefox ನ Search and Auto-complete features ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಸರ್ಚ್ ಅನ್ನು ಹೇಗೆ ಬಳಸುವುದು, ಸರ್ಚ್ ಇಂಜಿನ್ಸ್ ಅನ್ನು ಹೇಗೆ ನಿರ್ವಹಿಸುವುದು, Find bar ಅನ್ನು ಹೇಗೆ ಬಳಸುವುದು, |
00:15 | Address bar ನಲ್ಲಿ Auto-complete ಅನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ. |
00:18 | ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು. |
00:26 | ಇಂಟರ್ನೆಟ್ ಅನ್ನು ಜನರು ಸಾಮಾನ್ಯವಾಗಿ ಮಾಹಿತಿಯ ಹುಡುಕಾಟಕ್ಕಾಗಿ ಬಳಸುತ್ತಾರೆ. |
00:31 | ಇಲ್ಲಿ ನಾವು ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು. |
00:37 | ಈ ತರಹ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಬಹು ಸುಲಭವಾಗಿ ಹುಡುಕಲು ಬೇಕಾದ ಅಸಂಖ್ಯ ಕಾರ್ಯನಿರ್ವಾಹಕಗಳನ್ನು Mozilla Firefox ಹೊಂದಿದೆ. |
00:44 | ಈಗ ಅದರ ಕೆಲವು ಅಂಶಗಳನ್ನು ನೋಡೊಣ. |
00:47 | ಒಂದು ದಾರಿ ಏನೆಂದರೆ ಮಾಹಿತಿಯನ್ನು ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು. |
00:50 | ಅಂದ ಹಾಗೆ, ಸರ್ಚ್ ಇಂಜಿನ್ಸ್ ಗಳೂ ಕೂಡಾ ವೆಬ್ಸೈಟ್ ಗಳೇ ಆಗಿವೆ! |
00:54 | URL bar ನಲ್ಲಿ ‘www.google.com’ ಎಂದು ಟೈಪ್ ಮಾಡಿ. |
00:59 | google ನ ಮುಖಪುಟವು ಮೇಲೆ ಕಾಣುವುದು. |
01:01 | google ನ ಮುಖಪುಟದ ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, ‘email’ ಎಂದು ಟೈಪ್ ಮಾಡಿ, Search ಅನ್ನು ಕ್ಲಿಕ್ ಮಾಡಿ. |
01:07 | ಈಗ ಸರ್ಚ್ ಇಂಜಿನ್ ಸರ್ಚ್ ನ ಎಲ್ಲಾ ಫಲಿತಾಂಶಗಳನ್ನು ತೋರಿಸುತ್ತದೆ. |
01:10 | google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು. |
01:16 | ಆದರೆ Mozilla Firefox ನಲ್ಲಿ ಇದನ್ನು ಹುಡುಕುವ ಸುಲಭದ ದಾರಿ ಇದೆ. |
01:20 | navigation toolbar ನಲ್ಲಿ URL bar ನ ಪಕ್ಕದಲ್ಲಿ Search bar ಎಂಬ ಸ್ಥಾನವಿದೆ. |
01:26 | ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ ಕೂಡಾ Search bar ನ ಸ್ಥಾನಕ್ಕೆ ನೇರವಾಗಿ ಹೋಗಬಹುದು. |
01:33 | search bar ನ ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ. |
01:36 | ಅದರ ಪಕ್ಕದಲ್ಲಿರುವ ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ. |
01:40 | contents area ದಲ್ಲಿ ನಾವು ಹುಡುಕಿದ ಫಲಿತಾಂಶವನ್ನು ಕಾಣುತ್ತೇವೆ. |
01:44 | ನಾವಿಲ್ಲಿ google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನೋಡಬಹುದು. |
01:50 | ಈ Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ಪಡೆಯಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು. |
01:58 | ‘google’ ಎನ್ನುವುದು Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್ ಆಗಿದೆ. |
02:02 | ನಾವು ನಮ್ಮಿಷ್ಟದ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು. |
02:08 | Search bar ಒಳಗಿರುವ, google’ ನ logo ಮೇಲೆ ಕ್ಲಿಕ್ ಮಾಡಿ. |
02:12 | ಗಮನಿಸಿ, ಡ್ರಾಪ್ ಡೌನ್ ಬಾಕ್ಸ್ ಗೋಚರಿಸುತ್ತದೆ. ಇದರಲ್ಲಿ “Yahoo” ಮತ್ತು “Bing” ಒಳಗೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗಳ ಲೋಗೋ ಗಳು ಕಾಣುತ್ತವೆ. |
02:21 | ಡ್ರಾಪ್ ಡೌನ್ ಬಾಕ್ಸ್ ನಿಂದ “Yahoo” ಅನ್ನು ಆಯ್ಕೆಮಾಡಿ. |
02:24 | search bar ನ ಎಡಭಾಗದಲ್ಲಿರುವ logo ಈಗ “Yahoo” logo ಗೆ ಬದಲಾಗಿರುವುದನ್ನು ನಾವು ಗಮನಿಸಬಹುದು. |
02:30 | ಈಗ ಮತ್ತೆ Search bar ನಲ್ಲಿ‘email’ ಎಂದು ಟೈಪ್ ಮಾಡಿ ಮತ್ತು ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ. |
02:36 | ಈ ಬಾರಿ Contents area ದಲ್ಲಿರುವ ಫಲಿತಾಂಶವು “Yahoo” ಸರ್ಚ್ ಇಂಜಿನ್ ನಿಂದ ಬಂದಿರುವುದನ್ನು ನಾವು ನೋಡುವೆವು. |
02:42 | ಕಳೆದಬಾರಿಗಿಂತ ಫಲಿತಾಂಶಗಳು ಸ್ವಲ್ಪ ವ್ಯತ್ಯಾಸವಾಗಿರುವುದನ್ನು ಗಮನಿಸಿ. |
02:46 | gmail ಈಗ ಮೊದಲ ಫಲಿತಾಂಶದಲ್ಲಿಲ್ಲ, ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ. |
02:53 | Search bar ಒಳಗಿರುವ ಸರ್ಚ್ ಇಂಜಿನ್ logo ಅನ್ನು ಮತ್ತೆ ಕ್ಲಿಕ್ ಮಾಡಿ. |
02:57 | ಡ್ರಾಪ್ ಡೌನ್ ಬಾಕ್ಸ್ ನಲ್ಲಿರುವ ‘Manage Search Engines’ ಅನ್ನು ಆಯ್ಕೆ ಮಾಡಿ. |
03:07 | ಇದು ‘Manage Search Engines’ ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುವುದು. |
03:07 | ಸೂಚಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ. |
03:10 | ಬಲಗಡೆ ಇರುವಂತ ಬಟನ್ ಗಳು ಈಗ ಸಕ್ಷಮಗೊಳ್ಳುವುವು. ‘Remove’ ಬಟನ್ ಮೇಲೆ ಕ್ಲಿಕ್ ಮಾಡಿ. |
03:16 | ನಾವು ಆರಿಸಿಕೊಂಡಂತಹ ಅಂಶವು ಆ ಪಟ್ಟಿಯಲ್ಲಿ ಕಾಣುವುದಿಲ್ಲ. |
03:21 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ. |
03:24 | Search bar ಒಳಗಿರುವ ಸರ್ಚ್ ಇಂಜಿನ್ ನ ಲೋಗೋ ಮೇಲೆ ಕ್ಲಿಕ್ ಮಾಡಿ. |
03:29 | ಅಲ್ಲಿ “Manage Search Engines” ಮೇಲೆ ಕ್ಲಿಕ್ ಮಾಡಿ. |
03:32 | “Manage Search Engines” ಎಂಬ ಡಯಲಾಗ್ ಬಾಕ್ಸ್ ತೆರೆಯುತ್ತದೆ. |
03:37 | ಡಯಲಾಗ್ ಬಾಕ್ಸ್ ನ ಕೊನೆಯಲ್ಲಿ ‘Get more search engines…’ ಎಂಬುವ ಲಿಂಕ್ ಇರುತ್ತದೆ. |
03:42 | ಅದರ ಮೇಲೆ ಕ್ಲಿಕ್ ಮಾಡಿ. |
03:43 | browser ನ ಹೊಸ tab ತೆರೆದುಕೊಳ್ಳುವುದು. |
03:46 | search bar ನಲ್ಲಿ ನಾವು ಸೇರಿಸಿಕೊಳ್ಳಬಹುದಾದಂತಹ ಅನೇಕ ಸರ್ಚ್ ಇಂಜಿನ್ ಗಳನ್ನು ಅದು ತೋರಿಸುವುದು. |
03:51 | ನೀವು ನಿಮಗೆ ಅಗತ್ಯವಿದ್ದಂತೆ ಎಷ್ಟಾದರು ಸರ್ಚ್ ಇಂಜಿನ್ ಗಳನ್ನು ಸೇರಿಸಿಕೊಳ್ಳಬಹುದು. |
03:55 | tab ನ ಮೂಲೆಯಲ್ಲಿರುವ x ಅನ್ನು ಒತ್ತುವುದರ ಮೂಲಕ ಈ tab ಅನ್ನು close ಮಾಡೋಣ. |
04:00 | “Find bar” ನ ಸಹಾಯದಿಂದ Contents area ಒಳಗಿರುವ ನಿಶ್ಚಿತವಾದ ಟೆಕ್ಸ್ಟ್ ಅನ್ನು ನಾವು ಹುಡುಕಬಹುದು. |
04:07 | URL bar ನಲ್ಲಿ , ‘www.gmail.com’ ಎಂದು ಟೈಪ್ ಮಾಡಿ ಮತ್ತು Enter ಒತ್ತಿರಿ. |
04:13 | gmail home ಪುಟವು ಲೋಡ್ ಆದಾಗ, ‘Edit’ ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ. |
04:19 | browser window ವಿನ ಕೆಳಭಾಗದಲ್ಲಿ“Find bar” ಕಾಣಿಸಿಕೊಳ್ಳುವುದು. |
04:22 | “Find bar” ನ ಟೆಕ್ಸ್ಟ್ ಬಾಕ್ಸ್ ನಲ್ಲಿ, ‘gmail’ ಎಂದು ಟೈಪ್ ಮಾಡಿ. |
04:28 | ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ಫಲಿತಾಂಶವು ಹೈಲೈಟ್ ಆಗುತ್ತದೆ. |
04:36 | ‘Next’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ. |
04:41 | ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ. |
04:46 | ‘Highlight all’ ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
04:49 | ನಾವು Contents area ದಲ್ಲಿ ಹುಡುಕಿದ ಎಲ್ಲಾ ಫಲಿತಾಂಶಗಳೂ ಹೈಲೈಟ್ ಆಗಿರುವುದನ್ನು ನೋಡುತ್ತೇವೆ. |
04:56 | Mozilla Firefox ತನ್ನ auto-complete ಎಂಬ function ನಿಂದ URL bar ನಲ್ಲಿ ವೆಬ್ ಅಡ್ರಸ್ ಟೈಪ್ ಮಾಡುವುದನ್ನು ಸುಲಭಗೊಳಿಸುತ್ತದೆ. |
05:04 | address bar ನಲ್ಲಿ ನಾವು ಪೂರ್ತಿ ವೆಬ್ ಅಡ್ರಸ್ ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ. |
05:08 | ಇದನ್ನು ಪ್ರಯತ್ನಿಸೋಣ: address bar ನಲ್ಲಿ ‘gma’ ಎಂದು ಟೈಪ್ ಮಾಡಿ. |
05:12 | Mozilla Firefox ನಾವು ಟೈಪ್ ಮಾಡುತ್ತಿರುವ ಪದವನ್ನು auto-complete ಮಾಡಲು ಪ್ರಯತ್ನಿಸುವುದನ್ನು ನಾವು ನೋಡುವೆವು. |
05:17 | ಅದು ‘gma’ ದಿಂದ ಶುರುವಾಗುವ ವೆಬ್ ಸೈಟ್ಸ್ ಗಳ ಡ್ರಾಪ್ ಡೌನ್ ಲಿಸ್ಟ್ ಅನ್ನು ತೋರಿಸುವುದು. |
05:23 | ಡ್ರಾಪ್ ಡೌನ್ ಪಟ್ಟಿಯಿಂದ ‘gmail’ ಲಿಂಕ್ ಅನ್ನು ಆರಿಸಿಕೊಳ್ಳಿ. |
05:27 | Contents area ದಲ್ಲಿ ‘gmail’ ವೆಬ್ ಪೇಜ್ ಲೋಡ್ ಆಗುವುದು. |
05:30 | ಈ ವೈಶಿಷ್ಟ್ಯ ನಮಗೆ ಇಷ್ಟವಾಗದ ಪಕ್ಷದಲ್ಲಿ, ನಾವು ಇದನ್ನು ನಿಲ್ಲಿಸಬಹುದು. |
05:34 | “Edit” ಮೇಲೆ ಕ್ಲಿಕ್ ಮಾಡಿ ಮತ್ತು ನಂತರ “Preferences” ಅನ್ನು ಕ್ಲಿಕ್ ಮಾಡಿ. |
05:37 | Windows ಬಳಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ. |
05:41 | Main menu tabs ನ ಪಟ್ಟಿಯಿಂದ “Privacy” tab ಅನ್ನು ಆರಿಸಿಕೊಳ್ಳಿ. |
05:46 | ಡಯಲಾಗ್ ಬಾಕ್ಸ್ ನ ಅತ್ಯಂತ ಕೆಳಗೆ, ‘When using location bar, suggest’ ಹೆಸರಿನ ಆಯ್ಕೆ ಇದೆ. |
05:53 | ಅದನ್ನು ವಿಸ್ತರಿಸಲು ಡ್ರಾಪ್ ಡೌನ್ ಪಟ್ಟಿಯಲ್ಲಿರುವ ಬಾಣದ ಮೇಲೆ ಕ್ಲಿಕ್ ಮಾಡಿ. |
05:56 | ಪಟ್ಟಿಯಿಂದ ‘Nothing’ ಅನ್ನು ಆಯ್ಕೆ ಮಾಡಿ. |
05:59 | ಡಯಲಾಗ್ ಬಾಕ್ಸ್ ಮುಚ್ಚಲು ‘Close’ ಮೇಲೆ ಒತ್ತಿರಿ. |
05:03 | address bar ಗೆ ಹಿಂತಿರುಗಿ ಮತ್ತು ‘gma’ ಎಂದು ಟೈಪ್ ಮಾಡಿ. ಸಲಹೆಗಳು ಬರದಿರುವುದನ್ನು ಗಮನಿಸಿ. |
06:09 | ಈಗ ನಾವು Mozilla Firefox ನ Searching and Auto-complete features ಎಂಬ ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
06:16 | ಈ ಟ್ಯುಟೋರಿಯಲ್ ನಲ್ಲಿ, ನಾವು ಸರ್ಚ್ ನ ಬಳಕೆ, ಸರ್ಚ್ ಇಂಜಿನ್ ನ ನಿರ್ವಹಣೆ, Find bar ನ ಬಳಕೆ, auto compete ಮತ್ತು address bar ನ ಬಳಕೆ ಇವುಗಳ ಬಗ್ಗೆ ಕಲಿತೆವು. |
06:27 | ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. |
06:30 | search bar ನಲ್ಲಿರುವ ಸರ್ಚ್ ಇಂಜಿನ್ ನನ್ನು “Yahoo” ಗೆ ಬದಲಾಯಿಸಿ. |
06:34 | ‘spoken tutorial’ ಅನ್ನು ಹುಡುಕಿ. |
06:36 | ಮೊದಲ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ. |
06:40 | “video” ಎಂಬುವ ಪದ, ಪುಟದಲ್ಲಿ ಏಷ್ಟು ಬಾರಿ ಬಂದಿದೆ ಎಂದು ನೋಡಿರಿ. |
06:44 | ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ಫಲಿತಾಂಶವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ. |
06:51 | http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
06:54 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
06:58 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
07:02 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:08 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:11 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:18 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:22 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:30 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
07:41 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
07:46 | ಧನ್ಯವಾದಗಳು. |
Contributors and Content Editors
Gaurav, PoojaMoolya, Pratik kamble, Udaya, Vasudeva ahitanal