Firefox/C2/Tabbed-Browsing-Blocking-Pop-ups/Kannada

From Script | Spoken-Tutorial
Revision as of 11:35, 11 July 2014 by Pratik kamble (Talk | contribs)

Jump to: navigation, search
Time Narration
0:00 Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
0:04 ಈ ಟ್ಯುಟೋರಿಯಲ್ ನಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್, ಸ್ಟೋರಿಂಗ್ ಕಂಟೆಂಟ್ ಅಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು.
0:13 ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು.
0:21 ಒಂದೇ ಬ್ರೌಸರ್ ವಿಂಡೊವಿನಲ್ಲಿ ತುಂಬಾ ವೆಬ್ ಪೇಜ್ ಗಳನ್ನು ಬೇರೆ ಬೇರೆ ಟಾಬ್ಸ್ ಗಳಲ್ಲಿ ನೋಡಲು Mozilla Firefox ಅನುವು ಮಾಡಿಕೊಡುತ್ತದೆ.
0:29 ಈ ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಇದು ಹಲವಾರು ಬ್ರೌಸರ್ ವಿಂಡೊಗಳನ್ನು ತೆರೆಯುವ ಕೆಲಸವನ್ನು ತಪ್ಪಿಸುತ್ತದೆ.
0:36 ಹೀಗಾಗಿ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ.
0:40 ಪ್ರತಿ ಟ್ಯಾಬ್, ಅದು ಪ್ರದರ್ಶಿತಗೊಂಡಾಗ ಬ್ರೌಸರ್ ನ ಪೂರ್ಣ ಪರಿಧಿಯನ್ನು ವ್ಯಾಪಿಸಿ ತೋರಿಸುತ್ತದೆ.
0:45 ಇದು ತೆರೆದಿರುವ ಬ್ರೌಸರ್ ವಿಂಡೊಗಳ ಗಾತ್ರ ಮತ್ತು ಸ್ಥಾನವನ್ನು ಪ್ರತಿ ಬಾರಿ ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
0:52 ಬಳೆಕೆದಾರ ಒಂದೇ ಬಾರಿ ತುಂಬಾ ಟ್ಯಾಬ್ಸ್ ಗಳನ್ನು ತೆರೆಯದಿದ್ದಲ್ಲಿ, ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸಿಕೊಳ್ಳುತ್ತದೆ,
1:05 ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ ಎಂದುಕೊಳ್ಳಿ,
1:08 ಇಲ್ಲೊಂದು “Firefox for Desktop” ಎಂಬ ಲಿಂಕ್ ಇದೆ.
1:11 ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು.
1:14 ಹಾಗೆ ತೆರೆಯಲು, ಲಿಂಕ್ ನ ಮೇಲೆ ಬಲ ಮೌಸ್ ಬಟನ್ ಅನ್ನು ಒತ್ತಿರಿ.
1:17 ಕಾಂಟೆಕ್ಸ್ಟ್ ಮೆನ್ಯುವಿನಲ್ಲಿ, ‘Open link in new tab’ ಎಂಬಲ್ಲಿ ಒತ್ತಿರಿ.
1:21 ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್‌ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ.
1:28 ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು.
01;34 ನೀವು ಕ್ರಮವಾಗಿ File ಮತ್ತು Tab ನ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು.
1:40 ಇದರ ಶಾರ್ಟ್ಕಟ್ ಕೀ CTRL+T ಆಗಿದೆ.
1:40 ನೀವು ಹೊಸ ಟ್ಯಾಬ್ ತೆರೆದಾಗ, ಆ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ.
1:50 ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ.
1:56 ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ!
2:01 ನೀವು ಬಲಬದಿಯ ಕೊನೆಯ ಟ್ಯಾಬ್‌‌ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು
2:08 ನಾವು ಟ್ಯಾಬ್ ಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಬದ್ದವಾಗಿಡಬಹುದು.
2:11 ಟ್ಯಾಬ್ ನ ಮೇಲೆ ಮೌಸ್ ಬಟನ್ ಅನ್ನು ಒತ್ತಿ ಹಿಡಿದು ಅದನ್ನು ನಿಮಗೆ ಬೇಕಾದೆಡೆ ಸ್ಥಾನಾಂತರಿಸಿ.
2:17 ಈಗ ಮೌಸ್ ಬಟನ್ ಅನ್ನು ಬಿಡಿ.
2:20 ಈಗ ಟ್ಯಾಬ್ ನೀಮಗೆ ಬೇಕಾದಲ್ಲಿ ಸ್ಥಾನಾಂತರಿತವಾಗಿದೆ.
2:23 Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ.
2:29 ಹುಡುಕುವ ಸಾಧನವನ್ನು “google” ಗೆ ಬದಲಾಯಿಸೋಣ.
2:32 ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ.
2:40 ಅದಕ್ಕೆ ಸಂಬಂಧಪಟ್ಟ ವಿಕಿಪಿಡಿಯ ಪೇಜ್ ಇದರ ಮೊದಲ ಫಲಿತಾಂಶವಾಗಿದೆ.
2:44 ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ.
2:48 ಈಗ, File ಮೇಲೆ ಒತ್ತಿ ಆನಂತರ ‘Save Page As’ ಮೇಲೆ ಒತ್ತಿರಿ.
2:52 ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ.
2:59 ಈಗ File ಮತ್ತು New Tab ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ.
3:05 ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ.
3:10 ಕ್ರಮವಾಗಿ File ಮತ್ತು Open File ಮೇಲೆ ಒತ್ತಿರಿ.
312 ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ.
3:17 URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳೀಯ ಜಾಗ ಎಂದು ಕಾಣುವಿರಿ.
3:25 ಈಗ ನೀವು ಈ ಪುಟವನ್ನು, ನೀವು ಆಫ್‌ಲೈನ್ ಆಗಿದ್ದರೂ ಕೂಡಾ ಓದಬಹುದು.
3:29 ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು.
3:34 Firefox ನಮಗೆ Preferences window ನ ಒಳಗಿರುವ Content tab ನ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಅನುವು ಮಾಡಿಕೊಡುತ್ತದೆ..
3:42 Windows ನಲ್ಲಿ, ಇದು Options window ನ ಒಳಗಿರುತ್ತದೆ.
3:46 ಪಾಪ್-ಅಪ್ ನಿರ್ಬಂಧವು ಪೂರ್ವನಿಯೋಜಿತವಾಗಿ, ಆನ್ ಆಗಿರುತ್ತದೆ.
3:50 Edit ಮತ್ತು Preferences ಮೇಲೆ ಒತ್ತಿರಿ.
3:52 ವಿಂಡೊಸ್ ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಒತ್ತಿರಿ.
3:56 Content ಟ್ಯಾಬ್ ನಲ್ಲಿ, ಮೊದಲ ಆಯ್ಕೆಯಾದ, ‘Block pop-up windows’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ.
4:02 ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ.
4:05 ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುತ್ತದೆ.
4:11 Close ಬಟ್ಟನ್ ಮೇಲೆ ಒತ್ತಿರಿ.
4:13 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
4:16 ಇಲ್ಲಿ ನಾವು ಕಲಿತ ವಿಷಯಗಳ ಲಘು ಸಾರಾಂಶವನ್ನು ನೋಡೋಣ.
4:19 ಟ್ಯಾಬ್ಡ್ ಬ್ರೌಸಿಂಗ್, ಸ್ಟೊರಿಂಗ್ ಕಂಟೆಂಟ್ ಆಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್-ಅಪ್ಸ್
4:25 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
4:29 ಹೊಸ ಟ್ಯಾಬ್ ಅನ್ನು ತೆಗೆಯಿರಿ.
4:30 ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ.
4:33 ‘The history of email’ ಅನ್ನು ಹುಡುಕಿ.
4:36 ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
4:43 ಹುಡುಕುವ ಸಾಧಕವನ್ನು ‘bing’ಗೆ ಬದಲಾಯಿಸಿ.
4:46 ಮತ್ತೆ ‘The history of email’ ಅನ್ನು ಹುಡುಕಿ.
4:49 ‘‘History of Email & Ray Tomlinson’ ಎಂಬ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
4:58 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
5:02 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
5:04 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
5:09 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
5:14 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
5:18 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
5:25 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
5:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
5:37 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
5:48 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
5:53

ಧನ್ಯವಾದಗಳು.

Contributors and Content Editors

Nancyvarkey, PoojaMoolya, Pratik kamble, Udaya, Vasudeva ahitanal