Firefox/C2/Searching-and-Auto-complete/Kannada

From Script | Spoken-Tutorial
Revision as of 11:35, 11 July 2014 by Pratik kamble (Talk | contribs)

Jump to: navigation, search
Time Narration
00:00 Mozilla Firefox ನ Search and Auto-complete features ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಸರ್ಚ್ ಅನ್ನು ಹೇಗೆ ಬಳಸುವುದು, ಸರ್ಚ್ ಇಂಜಿನ್ಸ್ ಅನ್ನು ಹೇಗೆ ನಿರ್ವಹಿಸುವುದು, Find bar ಅನ್ನು ಹೇಗೆ ಬಳಸುವುದು,
00:15 Address bar ನಲ್ಲಿ Auto-complete ಅನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು.
00:26 ಇಂಟರ್ನೆಟ್ ಅನ್ನು ಜನರು ಸಾಮಾನ್ಯವಾಗಿ ಮಾಹಿತಿಯ ಹುಡುಕಾಟಕ್ಕಾಗಿ ಬಳಸುತ್ತಾರೆ.
00:31 ಇಲ್ಲಿ ನಾವು ನಿಶ್ಚಿತವಾದ ವೆಬ್-ಸೈಟ್ ಅನ್ನು ಅಥವಾ ಬೇರೆ ಯಾವುದಾದರು ಮಾಹಿತಿಯನ್ನು ಹುಡುಕಬಹುದು.
0:37 ಈ ತರಹ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಬಹು ಸುಲಭವಾಗಿ ಹುಡುಕಲು ಬೇಕಾದ ಅಸಂಖ್ಯ ಕಾರ್ಯನಿರ್ವಾಹಕಗಳನ್ನು Mozilla Firefox ಹೊಂದಿದೆ.
00:44 ಈಗ ಅದರ ಕೆಲವು ಅಂಶಗಳನ್ನು ನೋಡೊಣ.
00:47 ಒಂದು ದಾರಿ ಏನೆಂದರೆ ಮಾಹಿತಿಯನ್ನು ಬೇರೆ ವೆಬ್-ಸೈಟ್ ಗಳಿಗೆ ಹೋಗಿ ಹುಡುಕುವುದು.
00:50 ಅಂದ ಹಾಗೆ, ಸರ್ಚ್ ಇಂಜಿನ್ಸ್ ಗಳೂ ಕೂಡಾ ವೆಬ್ಸೈಟ್ ಗಳೇ ಆಗಿವೆ!
00:54 URL bar ನಲ್ಲಿ ‘www.google.com’ ಎಂದು ಟೈಪ್ ಮಾಡಿ.
00:59 google ನ ಮುಖಪುಟವು ಮೇಲೆ ಕಾಣುವುದು.
01:01 google ನ ಮುಖಪುಟದ ಮಧ್ಯದಲ್ಲಿರುವ ಮುಖ್ಯವಾದ search box ನಲ್ಲಿ, ‘email’ ಎಂದು ಟೈಪ್ ಮಾಡಿ, Search ಅನ್ನು ಕ್ಲಿಕ್ ಮಾಡಿ.
01:07 ಈಗ ಸರ್ಚ್ ಇಂಜಿನ್ ಸರ್ಚ್ ನ ಎಲ್ಲಾ ಫಲಿತಾಂಶಗಳನ್ನು ತೋರಿಸುತ್ತದೆ.
01:10 google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನಾವು ನೋಡಬಹುದು.
01:16 ಆದರೆ Mozilla Firefox ನಲ್ಲಿ ಇದನ್ನು ಹುಡುಕುವ ಸುಲಭದ ದಾರಿ ಇದೆ.
01:20 navigation toolbar ನಲ್ಲಿ URL bar ನ ಪಕ್ಕದಲ್ಲಿ Search bar ಎಂಬ ಸ್ಥಾನವಿದೆ.
01:26 ನೀವು ಪರ್ಯಾಯವಾಗಿ, CTRL+K ಅನ್ನು ಒತ್ತಿ ಕೂಡಾ Search bar ನ ಸ್ಥಾನಕ್ಕೆ ನೇರವಾಗಿ ಹೋಗಬಹುದು.
01:33 search bar ನ ಮೇಲೆ ಕ್ಲಿಕ್ ಮಾಡಿ ಮತ್ತು ‘email’ ಎಂದು ಟೈಪ್ ಮಾಡಿ.
01:36 ಅದರ ಪಕ್ಕದಲ್ಲಿರುವ ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
01:40 contents area ದಲ್ಲಿ ನಾವು ಹುಡುಕಿದ ಫಲಿತಾಂಶವನ್ನು ಕಾಣುತ್ತೇವೆ.
01:44 ನಾವಿಲ್ಲಿ google ನವರ ಇ-ಮೈಲ್ ಆದ gmail, ಮೊದಲ ಫಲಿತಾಂಶವಾಗಿರುವುದನ್ನು ನೋಡಬಹುದು.
01:50 ಈ Search bar ನ ಎಡಭಾಗದಲ್ಲಿ, ಫಲಿತಾಂಶವನ್ನು ಪಡೆಯಲು ಬಳಸಿದ ಸರ್ಚ್ ಇಂಜಿನ್ ನ logo ಅನ್ನು ಕಾಣಬಹುದು.
01:58 ‘google’ ಎನ್ನುವುದು Mozilla Firefox ನಲ್ಲಿ ಉಪಯೋಗಿಸುವ ಪೂರ್ವನಿಯೋಜಿತವಾದ ಸರ್ಚ್ ಇಂಜಿನ್ ಆಗಿದೆ.
02:02 ನಾವು ನಮ್ಮಿಷ್ಟದ ಸರ್ಚ್ ಇಂಜಿನ್ ಅನ್ನು ಆರಿಸಿಕೊಳ್ಳಬಹುದು.
02:08 Search bar ಒಳಗಿರುವ, google’ ನ logo ಮೇಲೆ ಕ್ಲಿಕ್ ಮಾಡಿ.
02:12 ಗಮನಿಸಿ, ಡ್ರಾಪ್ ಡೌನ್ ಬಾಕ್ಸ್ ಗೋಚರಿಸುತ್ತದೆ. ಇದರಲ್ಲಿ “Yahoo” ಮತ್ತು “Bing” ಒಳಗೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗಳ ಲೋಗೋ ಗಳು ಕಾಣುತ್ತವೆ.
02:21 ಡ್ರಾಪ್ ಡೌನ್ ಬಾಕ್ಸ್ ನಿಂದ “Yahoo” ಅನ್ನು ಆಯ್ಕೆಮಾಡಿ.
02:24 search bar ನ ಎಡಭಾಗದಲ್ಲಿರುವ logo ಈಗ “Yahoo” logo ಗೆ ಬದಲಾಗಿರುವುದನ್ನು ನಾವು ಗಮನಿಸಬಹುದು.
02:30 ಈಗ ಮತ್ತೆ Search bar ನಲ್ಲಿ‘email’ ಎಂದು ಟೈಪ್ ಮಾಡಿ ಮತ್ತು ಭೂತಕನ್ನಡಿಯ ಐಕಾನ್ ಅನ್ನು ಕ್ಲಿಕ್ ಮಾಡಿ.
02:36 ಈ ಬಾರಿ Contents area ದಲ್ಲಿರುವ ಫಲಿತಾಂಶವು “Yahoo” ಸರ್ಚ್ ಇಂಜಿನ್ ನಿಂದ ಬಂದಿರುವುದನ್ನು ನಾವು ನೋಡುವೆವು.
02:42 ಕಳೆದಬಾರಿಗಿಂತ ಫಲಿತಾಂಶಗಳು ಸ್ವಲ್ಪ ವ್ಯತ್ಯಾಸವಾಗಿರುವುದನ್ನು ಗಮನಿಸಿ.
02:46 gmail ಈಗ ಮೊದಲ ಫಲಿತಾಂಶದಲ್ಲಿಲ್ಲ, ಬದಲಾಗಿ “Yahoo” mail ಮೊದಲ ಫಲಿತಾಂಶದಲ್ಲಿರುತ್ತದೆ.
02:53 Search bar ಒಳಗಿರುವ ಸರ್ಚ್ ಇಂಜಿನ್ logo ಅನ್ನು ಮತ್ತೆ ಕ್ಲಿಕ್ ಮಾಡಿ.
02:57 ಡ್ರಾಪ್ ಡೌನ್ ಬಾಕ್ಸ್ ನಲ್ಲಿರುವ ‘Manage Search Engines’ ಅನ್ನು ಆಯ್ಕೆ ಮಾಡಿ.
03:07 ಇದು ‘Manage Search Engines’ ಎಂಬ ಡಯಲಾಗ್ ಬಾಕ್ಸ್ ಅನ್ನು ತೆರೆಯುವುದು.
03:07 ಸೂಚಿಯಲ್ಲಿರುವ ಕೊನೆಯ ಐಟಮ್ ಮೇಲ್ ಕ್ಲಿಕ್ ಮಾಡಿ.
03:10 ಬಲಗಡೆ ಇರುವಂತ ಬಟನ್ ಗಳು ಈಗ ಸಕ್ಷಮಗೊಳ್ಳುವುವು. ‘Remove’ ಬಟನ್ ಮೇಲೆ ಕ್ಲಿಕ್ ಮಾಡಿ.
03:16 ನಾವು ಆರಿಸಿಕೊಂಡಂತಹ ಅಂಶವು ಆ ಪಟ್ಟಿಯಲ್ಲಿ ಕಾಣುವುದಿಲ್ಲ.
03:21 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು OK ಮೇಲೆ ಕ್ಲಿಕ್ ಮಾಡಿ.
03:24 Search bar ಒಳಗಿರುವ ಸರ್ಚ್ ಇಂಜಿನ್ ನ ಲೋಗೋ ಮೇಲೆ ಕ್ಲಿಕ್ ಮಾಡಿ.
03:29 ಅಲ್ಲಿ “Manage Search Engines” ಮೇಲೆ ಕ್ಲಿಕ್ ಮಾಡಿ.
03:32 “Manage Search Engines” ಎಂಬ ಡಯಲಾಗ್ ಬಾಕ್ಸ್ ತೆರೆಯುತ್ತದೆ.
03:37 ಡಯಲಾಗ್ ಬಾಕ್ಸ್ ನ ಕೊನೆಯಲ್ಲಿ ‘Get more search engines…’ ಎಂಬುವ ಲಿಂಕ್ ಇರುತ್ತದೆ.
03:42 ಅದರ ಮೇಲೆ ಕ್ಲಿಕ್ ಮಾಡಿ.
03:43 browser ನ ಹೊಸ tab ತೆರೆದುಕೊಳ್ಳುವುದು.
03:46 search bar ನಲ್ಲಿ ನಾವು ಸೇರಿಸಿಕೊಳ್ಳಬಹುದಾದಂತಹ ಅನೇಕ ಸರ್ಚ್ ಇಂಜಿನ್ ಗಳನ್ನು ಅದು ತೋರಿಸುವುದು.
03:51 ನೀವು ನಿಮಗೆ ಅಗತ್ಯವಿದ್ದಂತೆ ಎಷ್ಟಾದರು ಸರ್ಚ್ ಇಂಜಿನ್ ಗಳನ್ನು ಸೇರಿಸಿಕೊಳ್ಳಬಹುದು.
03:55 tab ನ ಮೂಲೆಯಲ್ಲಿರುವ x ಅನ್ನು ಒತ್ತುವುದರ ಮೂಲಕ ಈ tab ಅನ್ನು close ಮಾಡೋಣ.
04:00 “Find bar” ನ ಸಹಾಯದಿಂದ Contents area ಒಳಗಿರುವ ನಿಶ್ಚಿತವಾದ ಟೆಕ್ಸ್ಟ್ ಅನ್ನು ನಾವು ಹುಡುಕಬಹುದು.
04:07 URL bar ನಲ್ಲಿ , ‘www.gmail.com’ ಎಂದು ಟೈಪ್ ಮಾಡಿ ಮತ್ತು Enter ಒತ್ತಿರಿ.
04:13 gmail home ಪುಟವು ಲೋಡ್ ಆದಾಗ, ‘Edit’ ಮೇಲೆ ಮತ್ತು ನಂತರ ‘Find’ ಮೇಲೆ ಕ್ಲಿಕ್ ಮಾಡಿ.
04:19 browser window ವಿನ ಕೆಳಭಾಗದಲ್ಲಿ“Find bar” ಕಾಣಿಸಿಕೊಳ್ಳುವುದು.
04:22 “Find bar” ನ ಟೆಕ್ಸ್ಟ್ ಬಾಕ್ಸ್ ನಲ್ಲಿ, ‘gmail’ ಎಂದು ಟೈಪ್ ಮಾಡಿ.
04:28 ನಾವು ಟೈಪ್ ಮಾಡುತ್ತಿದಂತೆ, Contents area ನಲ್ಲಿರುವ ಆ ಟೆಕ್ಸ್ಟ್ ನ ಮೊದಲ ಫಲಿತಾಂಶವು ಹೈಲೈಟ್ ಆಗುತ್ತದೆ.
04:36 ‘Next’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಮುಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
04:41 ‘Previous’ ನ ಮೇಲೆ ಕ್ಲಿಕ್ ಮಾಡಿದಾಗ, ಅದು ಆ ಪದದ ಹಿಂದಿನ ಫಲಿತಾಂಶಕ್ಕೆ ಹೈಲೆಟ್ ಆಗುತ್ತದೆ.
04:46 ‘Highlight all’ ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
04:49 ನಾವು Contents area ದಲ್ಲಿ ಹುಡುಕಿದ ಎಲ್ಲಾ ಫಲಿತಾಂಶಗಳೂ ಹೈಲೈಟ್ ಆಗಿರುವುದನ್ನು ನೋಡುತ್ತೇವೆ.
04:56 Mozilla Firefox ತನ್ನ auto-complete ಎಂಬ function ನಿಂದ URL bar ನಲ್ಲಿ ವೆಬ್ ಅಡ್ರಸ್ ಟೈಪ್ ಮಾಡುವುದನ್ನು ಸುಲಭಗೊಳಿಸುತ್ತದೆ.
05:04 address bar ನಲ್ಲಿ ನಾವು ಪೂರ್ತಿ ವೆಬ್ ಅಡ್ರಸ್ ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.
05:08 ಇದನ್ನು ಪ್ರಯತ್ನಿಸೋಣ: address bar ನಲ್ಲಿ ‘gma’ ಎಂದು ಟೈಪ್ ಮಾಡಿ.
05:12 Mozilla Firefox ನಾವು ಟೈಪ್ ಮಾಡುತ್ತಿರುವ ಪದವನ್ನು auto-complete ಮಾಡಲು ಪ್ರಯತ್ನಿಸುವುದನ್ನು ನಾವು ನೋಡುವೆವು.
05:17 ಅದು ‘gma’ ದಿಂದ ಶುರುವಾಗುವ ವೆಬ್ ಸೈಟ್ಸ್ ಗಳ ಡ್ರಾಪ್ ಡೌನ್ ಲಿಸ್ಟ್ ಅನ್ನು ತೋರಿಸುವುದು.
05:23 ಡ್ರಾಪ್ ಡೌನ್ ಪಟ್ಟಿಯಿಂದ ‘gmail’ ಲಿಂಕ್ ಅನ್ನು ಆರಿಸಿಕೊಳ್ಳಿ.
05:27 Contents area ದಲ್ಲಿ ‘gmail’ ವೆಬ್ ಪೇಜ್ ಲೋಡ್ ಆಗುವುದು.
05:30 ಈ ವೈಶಿಷ್ಟ್ಯ ನಮಗೆ ಇಷ್ಟವಾಗದ ಪಕ್ಷದಲ್ಲಿ, ನಾವು ಇದನ್ನು ನಿಲ್ಲಿಸಬಹುದು.
05:34 “Edit” ಮೇಲೆ ಕ್ಲಿಕ್ ಮಾಡಿ ಮತ್ತು ನಂತರ “Preferences” ಅನ್ನು ಕ್ಲಿಕ್ ಮಾಡಿ.
05:37 Windows ಬಳಕೆದಾರರು “Tools” ಮೇಲೆ ಕ್ಲಿಕ್ ಮಾಡಿ ನಂತರ “Options” ಅನ್ನು ಕ್ಲಿಕ್ ಮಾಡಿ.
05:41 Main menu tabs ನ ಪಟ್ಟಿಯಿಂದ “Privacy” tab ಅನ್ನು ಆರಿಸಿಕೊಳ್ಳಿ.
05:46 ಡಯಲಾಗ್ ಬಾಕ್ಸ್ ನ ಅತ್ಯಂತ ಕೆಳಗೆ, ‘When using location bar, suggest’ ಹೆಸರಿನ ಆಯ್ಕೆ ಇದೆ.
05:53 ಅದನ್ನು ವಿಸ್ತರಿಸಲು ಡ್ರಾಪ್ ಡೌನ್ ಪಟ್ಟಿಯಲ್ಲಿರುವ ಬಾಣದ ಮೇಲೆ ಕ್ಲಿಕ್ ಮಾಡಿ.
05:56 ಪಟ್ಟಿಯಿಂದ ‘Nothing’ ಅನ್ನು ಆಯ್ಕೆ ಮಾಡಿ.
05:59 ಡಯಲಾಗ್ ಬಾಕ್ಸ್ ಮುಚ್ಚಲು ‘Close’ ಮೇಲೆ ಒತ್ತಿರಿ.
05:03 address bar ಗೆ ಹಿಂತಿರುಗಿ ಮತ್ತು ‘gma’ ಎಂದು ಟೈಪ್ ಮಾಡಿ. ಸಲಹೆಗಳು ಬರದಿರುವುದನ್ನು ಗಮನಿಸಿ.
06:09 ಈಗ ನಾವು Mozilla Firefox ನ Searching and Auto-complete features ಎಂಬ ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
06:16 ಈ ಟ್ಯುಟೋರಿಯಲ್ ನಲ್ಲಿ, ನಾವು ಸರ್ಚ್ ನ ಬಳಕೆ, ಸರ್ಚ್ ಇಂಜಿನ್ ನ ನಿರ್ವಹಣೆ, Find bar ನ ಬಳಕೆ, auto compete ಮತ್ತು address bar ನ ಬಳಕೆ ಇವುಗಳ ಬಗ್ಗೆ ಕಲಿತೆವು.
06:27 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
06:30 search bar ನಲ್ಲಿರುವ ಸರ್ಚ್ ಇಂಜಿನ್ ನನ್ನು “Yahoo” ಗೆ ಬದಲಾಯಿಸಿ.
06:34 ‘spoken tutorial’ ಅನ್ನು ಹುಡುಕಿ.
06:36 ಮೊದಲ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ.
06:40 “video” ಎಂಬುವ ಪದ, ಪುಟದಲ್ಲಿ ಏಷ್ಟು ಬಾರಿ ಬಂದಿದೆ ಎಂದು ನೋಡಿರಿ.
06:44 ಈಗ ವೆಬ್ ಪೇಜ್ ನಲ್ಲಿರುವ “video” ಪದದ ಎಲ್ಲಾ ಫಲಿತಾಂಶವನ್ನು ಹೈಲೈಟ್ ಮಾಡಲು ‘Highlight all’ ಮೇಲೆ ಕ್ಲಿಕ್ ಮಾಡಿ.
06:51 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
06:54 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
06:58 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
07:02 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:08 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:11 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:18 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:22 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:30 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:41 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
07:46 ಧನ್ಯವಾದಗಳು.

Contributors and Content Editors

Gaurav, PoojaMoolya, Pratik kamble, Udaya, Vasudeva ahitanal