Java/C2/Hello-World-Program-in-Eclipse/Kannada

From Script | Spoken-Tutorial
Jump to: navigation, search
Time Narration
00:01 HelloWorld in Java on Eclipse ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ಎಕ್ಲಿಪ್ಸ್ ನ ಉಪಯೋಗದಿಂದ ಜಾವಾ ದಲ್ಲಿ Hello World ಎಂಬ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದು ಕಲಿಯಲಿದೇವೆ.
00:13 ಈ ಟ್ಯುಟೋರಿಯಲ್ ನಲ್ಲಿ ನಾವು Eclipse 3.7.0 ಹಾಗೂ Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00:25 ಹಾಗೂ, ನೀವು ಎಕ್ಲಿಪ್ಸ್ ನಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು, ಅದನ್ನು ಹೇಗೆ ಸೇವ್ ಮಾಡುವುದು ಮತ್ತು ಹೇಗೆ ರನ್ ಮಡುವುದು ಎಂದು ತಿಳಿದಿರಬೇಕು.
00:30 ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:36 ಇಲ್ಲಿ ಕಾಣುವ ಜಾವಾ ಕೋಡ್ ನ ಪಂಕ್ತಿಯು Hello World ಎಂಬ ಸಂದೆಶವನ್ನು ಪ್ರಿಂಟ್ ಮಾಡುತ್ತದೆ.
00:44 ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ.
00: 46 Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ.
00:56 Workspace Launcher ಎಂಬ ಡಯಲಾಗ್ ಬಾಕ್ಸ್ ನಲ್ಲಿ Ok ಕ್ಲಿಕ್ ಮಾಡಿ, ಈಗ ನಾವು Eclipse IDE ಎಂಬುದನ್ನು ಹೊಂದಿದ್ದೇವೆ.
01:09 ಈಗ ನಾವು ಹೊಸ ಪ್ರೊಜೆಕ್ಟ್ ಅನ್ನು ಸೇರಿಸೋಣ.
01:12 File ಮೇಲೆ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Project ಎಂಬುದನ್ನು ಆಯ್ಕೆಮಾಡಿ.
01:19 ಪ್ರೊಜೆಕ್ಟ್ ಗಳ ಸೂಚಿಯಲ್ಲಿ Java Project ಎಂಬುದನ್ನು ಆಯ್ಕೆಮಾಡಿ ನಂತರ Next ಎಂಬುದನ್ನು ಕ್ಲಿಕ್ ಮಾಡಿ.
01:26 Project name ಎಂಬಲ್ಲಿ, DemoProject ಎಂದು ಟೈಪ್ ಮಾಡಿ. (ದಯವಿಟ್ಟು ಗಮನಿಸಿ, Demo ಮತ್ತು Project ಇವುಗಳ ನಡುವೆ ಸ್ಪೇಸ್ ಇಲ್ಲ ಮತ್ತು D ಹಾಗೂ P ಎಂಬುದು ದೊಡ್ಡ ಅಕ್ಷರದಲ್ಲಿದೆ.
01:40 ಬಾಕ್ಸ್ ನ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
01:46 DemoProject ಎಂಬುದೀಗ ರಚಿತವಾಯಿತು.
01:49 ಈಗ ಪ್ರೊಜೆಕ್ಟ್ ಗೆ ಹೊಸ ಕ್ಲಾಸ್ ಅನ್ನು ಸೇರಿಸೋಣ.
01:52 ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Class ಎಂಬುದನ್ನು ಆಯ್ಕೆಮಾಡಿ.
01:59 ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ.
02.13 ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ.
02.20 ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ.
02:27 ಏಕೆಂದರೆ, ಜಾವಾ ದಲ್ಲಿ ಪ್ರತಿ ಕ್ಲಾಸ್ ಕೂಡಾ ಅದರ ಫೈಲ್ ನಲ್ಲೇ ಇರುತ್ತದೆ, ಹಾಗೆಯೇ, Demo Program ಎಂಬ ಕ್ಲಾಸ್ ಕೂಡಾ Demo program. Java ಎಂಬ ಫೈಲ್ ನಲ್ಲೇ ಇದೆ.
02:40 ಇಲ್ಲಿ ಎಡಿಟರ್ ಗೆ ಇರುವ ಜಾಗವು ತುಂಬಾ ಚಿಕ್ಕದಾಗಿರುವುದನ್ನು ನಾವು ನೋಡಬಹುದು. ಹಾಗಾಗಿ ಬೇರೆ ಪೋರ್ಟ್ಲೆಟ್ ಗಳನ್ನು ಮಿನಿಮೈಸ್ ಮಾಡುವುದರ ಮೂಲಕ ನಾವಿದನ್ನು ದೊಡ್ಡದಾಗಿಸೋಣ.
02:55 ಇಲ್ಲಿ ಗಮನಿಸಿ, ಈ ಪಂಕ್ತಿಯು ಎರಡು ಸ್ಲಾಶ್ ಗಳಿಂದ ಆರಂಭಗೊಳ್ಳುತ್ತದೆ, ಅಂದರೆ ಈ ಪಂಕ್ತಿಯು ಕೇವಲ ಕಮೆಂಟ್ ಆಗಿದ್ದು ಇದು ಕೋಡ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
03:05 ನಾವು ಈ ಪಂಕ್ತಿಯನ್ನು ತೆಗೆಯೋಣ. ಹಾಗೆಯೇ ಸ್ಲಾಶ್ ಆಸ್ಟ್ರಿಕ್ಸ್ ಹಾಗೂ ಆಸ್ಟ್ರಿಕ್ಸ್ ಸ್ಲಾಶ್ ಗಳ ನಡುವೆ ಇರುವ ಎಲ್ಲವೂ ಕೂಡಾ ಕಮೆಂಟ್ ಗಳೆ ಆಗಿವೆ.
03:17 ಹಾಗಾಗಿ ನಾವು ಈ ಕಮೆಂಟ್ ಗಳನ್ನೂ ತೆಗೆಯೋಣ.
03:22 ಈಗ ಇಲ್ಲಿ ನಾವು ಕೋಡ್ ನ ಮುಖ್ಯವಾದ ಭಾಗವನ್ನು ಹೊಂದಿದ್ದೇವೆ.
03:27 ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. System.
03:35 ಇಲ್ಲಿ ಗಮನಿಸಿ, ನಾವು ಟೈಪ್ ಮಾಡುತ್ತಿದ್ದಂತೆಯೇ ಎಕ್ಲಿಪ್ಸ್ ನಮಗೆ ಮುಂದಿನ ಎಲ್ಲಾ ಸಾಧ್ಯತೆಗಳನ್ನು ಸೂಚಿಸುತ್ತದೆ.
03:38 ಈಗ ನಾವು ಕಮಾಂಡ್ ಅನ್ನು ನಾವೇ ಟೈಪ್ ಮಾಡೋಣ,
03:43 out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ HelloWorld ಎಂದು ಟೈಪ್ ಮಾಡಿ.
03:56 ಜಾವಾ ದಲ್ಲಿ ಪ್ರತಿ ಸ್ಟೇಟ್ಮೆಂಟ್ ಕೂಡಾ ಸೆಮಿಕೊಲನ್ ನಿಂದ ಕೊನೆಗೊಳ್ಳುತ್ತವೆ.
03:59 ಹಾಗಾಗಿ, ಸೆಮಿಕೊಲನ್ ಅನ್ನು ಸೇರಿಸೋಣ.
04:03 ಈಗ ಇದು ಜಾವಾದಲ್ಲಿನ ಒಂದು ಸಂಪೂರ್ಣವಾದ HelloWorld ಪ್ರೊಗ್ರಾಮ್ ಆಗಿದೆ.
04:06 ಸೇವ್ ಮಾಡಲು Ctrl + S ಒತ್ತಿ.
04:11 ರೈಟ್ ಕ್ಲಿಕ್ ಮಾಡಿ ಅಲ್ಲಿ Run as ಮತ್ತು java application ಎಂಬುದನ್ನು ಒತ್ತಿ ಕೋಡ್ ಅನ್ನು ರನ್ ಮಾಡಿ.
04:19 ನಾವೀಗ ಔಟ್ಪುಟ್ ಕನ್ಸೋಲ್ ನಲ್ಲಿ HelloWorld ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ.
04:24 ಈಗ ನಾವು World ಎಂಬುದನ್ನು Java ಎಂದು ಬದಲಾಯಿಸೋಣ.
04:30 Ctrl + S ಒತ್ತಿ ಸೇವ್ ಅಮಾಡಿ ಹಾಗೂ Run ಮಾಡಿ.
04:41 ನಾವೀಗ Hello Java ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
04:45 ನಾವೀಗ ಕೋಡ್ ನ ಪ್ರತಿ ಭಾಗವು ಏನನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ.
04:48 ಮೊದಲನೇಯ ಪಂಕ್ತಿಯು ಕ್ಲಾಸ್ ನ ಹೆಸರು DemoProgram ಎಂದೂ ಹಾಗೂ ಇದು Public class ಎಂದೂ ತಿಳಿಸಿಕೊಡುತ್ತದೆ.
04:55 ಎರಡನೇಯ ಪಂಕ್ತಿಯು ಇದೊಂದು main method ಆಗಿದೆಯೆಂದು ತಿಳಿಸುತ್ತದೆ. ಅಂದರೆ, ಈ ಮೆಥಡ್ ನಿಂದ ಜಾವಾದಲ್ಲಿ ನಿರ್ವಹಣೆಯು ಆರಂಭವಾಗುತ್ತದೆ.
05:04 ನಮಗೆಲ್ಲರಿಗೂ ಗೊತ್ತಿರುವಂತೆ ಇದು ಪ್ರಿಂಟ್ ಸ್ಟೇಟ್ಮೆಂಟ್ ಆಗಿದೆ.
05:07 ಹೀಗೆ ನಾವು ಜಾವಾ ದಲ್ಲಿ HelloWorld ಪ್ರೊಗ್ರಾಮ್ ಅನ್ನು ಬರೆಯುತ್ತೇವೆ.
05:14 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
05:17 ಈ ಟ್ಯುಟೋರಿಯಲ್ ನಲ್ಲಿ ನಾವು HelloWorld ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ಕೋಡ್ ನ ಪ್ರತಿಯೊಂದು ಭಾಗವು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತೆವು.
05:27 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
05:29 ನೀವು Greet ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚಿಸಿ ಹಾಗೂ ಔಟ್ಪುಟ್ ನಲ್ಲಿ Program Successful ಎಂದು ಬರುವಂತೆ ಪ್ರೊಗ್ರಾಮ್ ಬರೆಯಿರಿ.
05:37 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
05:42 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
05:45 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
05:51 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
05:55 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
05:59 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:05 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:09 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:14 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal