Firefox/C2/Setting-General-Privacy-Options/Kannada
From Script | Spoken-Tutorial
Time | Narration |
00:00 | ಈ Mozilla Firefox ನ ಭೋದನಾ ತರಗತಿಗೆ ಸ್ವಾಗತ. |
00:04 | ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು. |
00:11 | ಈ ಭೋದನಾ ತರಗತಿಯಲ್ಲಿ ನಾವು Ubuntu 10.04 ನಲ್ಲಿ Firefox version 7.0 ಅನ್ನು ಉಪಯೋಗಿಸುವೆವು. |
00:18 | Mozilla Firefox ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ. |
00:24 | Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ. |
00:29 | ಉದಾಹರಣೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು. |
00:33 | ಅದಕ್ಕೆ ನಾವು ಎಡಿಟ್ ಮತ್ತು ಪ್ರಿಫರೆನ್ಸಸ್ ನ ಮೇಲೆ ಒತ್ತೋಣ. |
00:37 | windows ಬಳಿಕೆದಾರರು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಬೇಕು. |
00:42 | ನಿಯಮಿಸುವ ಅಥವಾ ಆಪ್ಷನ್ಸ್ ಡೈಲಾಗ್ ಬಾಕ್ಸ್ ತೆರೆಯುವುದು. ಡೈಲಾಗ್ ಬಾಕ್ಸ್ ನ ಮೇಲೆ, ಅನೇಕ ಟ್ಯಾಬ್ಸ್ ಗಳಿರುತ್ತದೆ. |
00:50 | ಪ್ರತಿಯೊಂದಕ್ಕು ಬೇರೆ ಬೇರೆ ಫಂಕ್ಷನ್ ಇರುತ್ತದೆ. |
00:53 | ಜೆನರಲ್ ಪಾನೆಲ್, ಸೆಟ್ಟಿಂಗ್ಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡಲು. ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡಲು.
|
01:04 | Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ. |
01:08 | ಸ್ಟಾರ್ಟ್-ಅಪ್ ಕೆಳಗೆ, ‘ವೆನ್ ಫೈರ್ಫಾಕ್ಸ್ ಸ್ಟಾರ್ಟ್ಸ್’ ಡ್ರಾಪ್ ಡೌನ್ ಮೆನುವಿ ನಲ್ಲಿ, ‘ಶೋ ಮೈ ಹೋಮ್ ಪೇಜ್’ ಅನ್ನು ಆರಿಸಿ. |
01:16 | ಪೂರ್ವನಿಯೋಜಿತವಾಗಿ ‘ಹೋಮ್ ಪೇಜ್’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ. |
01:22 | ‘ಹೋಮ್ ಪೇಜ್’ ಫೀಲ್ಡ್ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ. |
01:29 | ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. |
01:30 | ಡೈಲಾಗ್ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. |
001:33 | ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ. |
01:36 | ಈಗ ಈ Firefox ವಿಂಡೊವನ್ನು ಮುಚ್ಚಿರಿ. |
01:40 | ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ. |
01:42 | ನೀವು ಹೋಮ್ ಪೇಜ್ ಆಗಿ Gmail ಲಾಗಿನ್ ಪೇಜ್ ಆಗಿರುವುದನ್ನು ಗಮನಿಸುವಿರಿ. |
01:46 | ಮುಂದೆ, Mozilla Firefox ಡೌನ್ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ. |
01:51 | ಎಡಿಟ್ ಮತ್ತು ಆಯ್ಕೆಗಳ ಮೇಲೆ ಒತ್ತಿರಿ. |
01:54 | ಯಥಾ ಪ್ರಕಾರ, Windows ಬಳಿಕೆದಾರರು, ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ. |
01:58 | ‘ಜನರಲ್’ ಟಾಬ್ ಮೇಲೆ ಒತ್ತಿರಿ. |
02:02 | ‘ಡೌನ್ಲೋಡ್ಸ್’ ಆಪ್ಷನ್ಸ್ ನಲ್ಲಿರುವ ‘ಶೊ ದ ಡೌನ್ಲೊಡ್ಸ್ ವಿಂಡೊ ವೆನ್ ಡೌನ್ಲೊಡಿಂಗ್ ಅ ಫೈಲ್’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ. |
02:09 | ಈಗ ‘ಸೇವ್ ಫೈಲ್ಸ್ ಟು’ ಎಂಬುವ ರೇಡಿಯೊ ಬಟ್ಟನ್ ಅನ್ನು ಪರೀಕ್ಷಿಸಿ. |
02:12 | ಬ್ರೌಸ್ ಬಟ್ಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ. |
02:18 | dialog box ಅನ್ನು ಮುಚ್ಚಲು Close button ಮೇಲೆ ಒತ್ತಿರಿ. |
02:24 | ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ. |
02:28 | ಬ್ರೌಸರ್ನ ಸರ್ಚ್ ಬಾರ್ ನಲ್ಲಿ, ‘ಫ್ಲವರ್ಸ್’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ. |
02:34 | ಹುಡುಕಿದಕ್ಕೆ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಬಲಕ್ಕೆ ಒತ್ತಿರಿ. |
02:38 | ಮತ್ತು ‘ಸೇವ್ ಲಿಂಕ್ ಆಸ್’ ಮೇಲೆ ಒತ್ತಿರಿ. |
02:40 | ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್ಲೋಡ್ ಆಗುವುದನ್ನು ನೀವು ಗಮನಿಸುವಿರಿ. |
02:46 | ‘ಸೇವ್’ ಅನ್ನು ಒತ್ತಿ ಮತ್ತು ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ. |
02:51 | ಟ್ಯಾಬ್ಸ್ ಪಾನೆಲ್, ಟ್ಯಾಬಡ್ ಬ್ರೌಸಿಂಗ್ನ ವೈಶಿಷ್ಟ್ಯ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
02:56 | The Content panel contains preferences related to how websites are displayed.
ಕಂಟೆಂಟ್ ಪಾನೆಲ್, ವೆಬ್ ಸೈಟ್ಸ್ ಹೇಗೆ ತೋರಿಸುತ್ತದೆ ಎಂಬುವ ಬಗ್ಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
03:02 | ಅಪ್ಲಿಕೇಷನ್ಸ್ ಪಾನೆಲ್, ನಿಮಗೆ Mozilla Firefox ವಿವಿಧ ತರದ ಫೈಲ್ಗಳನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ನಿರ್ಧರಿಸಲು ಬಿಡುವುದು. |
03:11 | ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು. |
03:13 | ನಿರ್ದೆಶಿಸಿದಂತೆ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ. |
03:19 | ಪ್ರೈವಸಿ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
03:25 | ಟ್ರಾಕಿಂಗ್ ಕೆಳಗೆ, ‘ಟೆಲ್ ವೆಬ್ ಸೈಟ್ಸ್ ಐ ಡು ನಾಟ್ ವಾಂಟ್ ಟು ಬಿ ಟ್ರಾಕೆಡ್’ ಎಂಬುವುದಕ್ಕೆ ಗುರುತನ್ನು ಇಡೊಣ. |
03:30 | ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ. |
03:37 | ಹಿಸ್ಟರಿಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ. |
03:41 | ‘Firefox ವಿಲ್’ ಫೀಲ್ಡ್ ನಲ್ಲಿ, ‘ನೆವರ್ ರಿಮೆಂಬರ್ ಹಿಸ್ಟರಿ’ ಎಂಬುದನ್ನು ಆರಿಸಿಕೊಳ್ಳಿ. |
03:45 | ಈ ಆಯ್ಕೆಯನ್ನು ಸಮರ್ಥಗೊಳಿಸುವುದೆಂದರೆ ಅದು ನಿಮ್ಮ ಕಂಪ್ಯೂಟರ್ ನಲ್ಲಿರುವ ಬ್ರೌಸಿಂಗ್ ಹಿಸ್ಟರಿಯನ್ನು ಇಟ್ಟಿರುವುದಿಲ್ಲ. |
03:53 | ನಾವು ‘ಕ್ಲಿಯರ್ ಆಲ್ ಕರೆಂಟ್ ಹಿಸ್ಟರಿ’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಅಳಿಸಿಹೋಗುತ್ತದೆ. |
04:01 | ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:’ ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ಮತ್ತು ‘ನಥಿಂಗ್’ಅನ್ನು ಆಯ್ಕೆ ಮಾಡಿ. |
04:11 | ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಒಡೆದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ. |
04:19 | ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ. |
04:23 | ಈಗ ನಿಮ್ಮ ಸ್ವಕೀಯತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. |
04:26 | ಸೆಕ್ಯೂರಿಟಿ ಪಾನೆಲ್, ಜಾಲ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
04:32 | ಸಿಂಕ್ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಬಿಡುತ್ತದೆ. |
04:36 | Firefox Sync ನಮ್ಮನ್ನು ಅಡ್ಡಲಾಗಿ ವಿವಿಧ ವಿಧಾನದಲ್ಲಿ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್ವರ್ಡ್ಸ್ಗಳನ್ನು ಉಪಯೋಗಿಸಲು ಬಿಡುತ್ತದೆ. |
04:45 | ಆಡ್ವಾನ್ಸ್ಡ್ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ. |
04:49 | Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ ಬ್ರೌಸಿಂಗ್ ಮತ್ತು ಸಿಸ್ಟಮ್ ಡಿಫಾಲ್ಟ್ನ ಸೆಟ್ಟಿಂಗ್ಸ್ ಗಳಿವೆ. |
04:57 | ನೆಟ್ವರ್ಕ್ ಆಪ್ಷನ್ ಅನ್ನು ಬಳಸಿ Firefox ಇಂಟರ್ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು. |
05:03 | ನೆಟ್ವರ್ಕ್ ಟಾಬ್ ನ ಒಳಗೆ, ಸಂಪರ್ಕಗಳ ಕೆಳಗೆ, ಸೆಟ್ಟಿಂಗ್ಸ್ ಬಟ್ಟನ್ ಮೇಲೆ ಒತ್ತಿರಿ. |
05:09 | ಇದು ಕನೇಕ್ಷನ್ ಸೆಟ್ಟಿಂಗ್ಸ್ ಡೈಲಾಗ್ ಬಾಕ್ಸ್ ಅನ್ನು ತೆರೆದಿಡುತ್ತದೆ. |
05:11 | ಇಲ್ಲಿ ನೀವು ಪ್ರಾಕ್ಸೀಸ್ಗಳನ್ನು ಕಾನ್ಫಿಗರ್ ಮಾಡಬಹುದು. |
05:15 | ಕಾರ್ಯನಿರ್ವಾಹಣೆಯನ್ನು ಸುಧಾರಿಸಲು ಮತ್ತು ಉತ್ತಮ ತರದಲ್ಲಿ ಸಂರಕ್ಷಿಸಲು ಪ್ರಾಕ್ಸೀಸ್ ಅನ್ನು ಬಳಸುತ್ತಾರೆ. |
05:21 | ಪೂರ್ವನಿಯೋಜಿತವಾಗಿ, ‘ಯೂಸ್ ಸಿಸ್ಟಮ್ ಪ್ರಾಕ್ಸಿ ಸೆಟ್ಟಿಂಗ್ಸ್’ ರೇಡಿಯೊ ಬಟ್ಟನ್ ಅನ್ನು ನಿರ್ದಿಷ್ಟಿಸಿರುತ್ತಾರೆ. |
05:26 | ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ. |
05:31 | ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗಿ ಹೋಗಲು, ಮಾನ್ಯುಅಲ್ ಪ್ರಾಕ್ಸಿ ಕಾನ್ಫಿಘರೇಷನ್ ರೇಡಿಯೊ ಬಟ್ಟನ್ ಮೇಲೆ ಒತ್ತಿರಿ. |
05:38 | ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು. |
05:42 | ಕನೆಕ್ಷೆನ್ ಸೆಟ್ಟಿಂಗ್ಸ್ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. |
05:49 | ಆಯ್ಕೆಗಳು ಅಥವಾ ಆಪ್ಷನ್ಸ್ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟ್ಟನ್ ಒತ್ತಿರಿ. |
05:55 | ನಿಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ. |
05:58 | ಕೊನೆಯದಾಗಿ, ನೀವು ಆಡ್ವಾನ್ಸ್ಡ್ ಪಾನೆಲ್ ನಲ್ಲಿರುವ ಅಪ್-ಡೇಟ್ ಟಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ನವೀನಗೊಳಿಸಬಹುದು. |
06:05 | ಇದು ನಮ್ಮ ಭೋದನಾ ತರಗತಿಯನ್ನು ಕೊನೆಯ ಹಂತಕ್ಕೆ ತಂದಿದೆ. |
06:08 | ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು. |
06:15 | ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ. |
06:19 | ಹೊಸ ಬ್ರೌಸರ್ ವಿಂಡೊ ಅನ್ನು ತೆರೆಯಿರಿ. |
06:21 | ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ. |
06:28 | ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು |
06:30 | ನಿಮ್ಮ ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ. |
06:38 | <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ. |
06:41 | ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ. |
06:45 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
06:48 | ವಾಕ್ ಭೋದನಾ ಯೋಜನಾ ತಂಡ |
06:50 | ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ. |
06:54 | ಆನ್-ಲೈನ್ ಟೆಸ್ಟ್ ನಲ್ಲಿ ತೇರ್ಗಡೆ ಪಡೆದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
06:58 | ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಲು ದಯವಿಟ್ಟು contact@spoken-tutorial.org ಗೆ ಬರೆಯಿರಿ. |
07:04 | ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜಕ್ಟ್ನ ಒಂದು ಭಾಗವಾಗಿದೆ.. |
07:07 | ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ. |
07:12 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ. |
07:27 | ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ |
07:33 | ಸೇರಿದಕ್ಕೆ ಧನ್ಯವಾದಗಳು. |