Health-and-Nutrition/C2/Hand-expression-of-breastmilk/Kannada

From Script | Spoken-Tutorial
Revision as of 12:05, 17 June 2019 by Sandhya.np14 (Talk | contribs)

Jump to: navigation, search
Time
Narration
00:01 Hand expression of breast milk ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು –

ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು)

00:11 ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯುವುದು ಮತ್ತು
00:15 ತಾಯಿಯು ಎಷ್ಟು ಬಾರಿ ಎದೆಹಾಲನ್ನು ತೆಗೆಯಬೇಕು ಇವುಗಳ ಬಗ್ಗೆ ಕಲಿಯುವೆವು.
00:20 ಎದೆಹಾಲನ್ನು ತೆಗೆದು ಸಂಗ್ರಹಿಸುವುದು -

ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಯಲ್ಲಿ,

00:25 ಗಾಯವಾದ ಮೊಲೆತೊಟ್ಟಿನ ಹಾಗೂ ಅದರ ಸುತ್ತಲಿನ ಕಪ್ಪು ಜಾಗದ ಒಣಚರ್ಮದ ಚಿಕಿತ್ಸೆಯಲ್ಲಿ,
00:31 ಗಾಯವಾದ ಮೊಲೆತೊಟ್ಟು ಲ್ಯಾಚಿಂಗ್ ಮಾಡುವಾಗ ನೋಯುತ್ತಿದ್ದು, ಆಗ ಮಗುವಿಗೆ ಹಾಲುಣಿಸಬೇಕಿದ್ದರೆ,
00:38 ಎದೆಹಾಲು ಪೂರೈಕೆಯನ್ನು ಹೆಚ್ಚಿಸಲು ಅಥವಾ ಮುಂದುವರೆಸಲು,
00:42 ತಾಯಿಯು ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸಲು,
00:49 ಮೊಲೆತೊಟ್ಟಿನ ಸುತ್ತಲಿನ ಕಪ್ಪು ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಮಗುವನ್ನು ಜೋಡಿಸಲು,
00:56 ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಿದೆಯೇ ಎಂದು ನೋಡಲು,
01:05 ಮಗುವಿಗೆ ಪೌಷ್ಟಿಕ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸಲು,
01:14 ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶು,
01:18 ಅಸ್ವಸ್ಥ ಶಿಶು,
01:20 ಸಶಕ್ತ ಸ್ನಾಯುಗಳನ್ನು ಹೊಂದಿರದ ಶಿಶು,
01:22 ಸೀಳಿದತುಟಿ ಮತ್ತು/ಅಥವಾ ಅಂಗುಳವನ್ನು ಹೊಂದಿರುವ ಶಿಶು ಹಾಗೂ
01:27 ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಕಷ್ಟಪಡುವ ಶಿಶುಗಳಿಗೆ ಹಾಲುಣಿಸುವುದು, ಈ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ.
01:32 ಈಗ, ಎದೆಹಾಲನ್ನು ಹೇಗೆ ತೆಗೆಯಬೇಕೆಂದು ನಾವು ಕಲಿಯೋಣ.
01:37 ತಾಯಿಯು ತನ್ನ ಕೈಗಳನ್ನು ಬಳಸಿ, ಎದೆಹಾಲು ತೆಗೆಯುವ ವಿಧಾನವನ್ನು ಶಿಫಾರಸು ಮಾಡಲಾಗಿದೆ.
01:44 ಏಕೆಂದರೆ, ಈ ವಿಧಾನದಲ್ಲಿ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದಲ್ಲಿ ಹೆಚ್ಚು ತೊಂದರೆ ಆಗುವುದಿಲ್ಲ.
01:51 ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು.
02:00 ಕೈಯಿಂದ ಎದೆಹಾಲನ್ನು ತೆಗೆಯಲು ನಿಪುಣತೆ ಬೇಕು ಮತ್ತು ಅಭ್ಯಾಸದೊಂದಿಗೆ ಇದು ಸುಧಾರಿಸುತ್ತದೆ.
02:08 ಸ್ತನಗಳು ಮೃದುವಾಗಿದ್ದಾಗ, ಕೈಗಳಿಂದ ಎದೆಹಾಲನ್ನು ತೆಗೆಯುವುದು ಸುಲಭ.
02:13 ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಇದನ್ನು ಕಲಿತುಕೊಳ್ಳಬೇಕು.
02:21 ತೆಗೆದ ಹಾಲನ್ನು ಶೇಖರಿಸಲು, ಸ್ಟೀಲ್ ಅಥವಾ ಗಾಜಿನ ಲೋಟವನ್ನು ಹಾಲು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು.
02:29 ಅಗಲವಾದ ಬಾಯಿಯ ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು.
02:36 ತಾನು ಆರಿಸಿದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.
02:41 ನಂತರ, ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಹಾಗೆಯೇ ಬಿಡಬೇಕು.
02:52 ಆಮೇಲೆ, ಪಾತ್ರೆಯನ್ನು ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು.
03:02 ಅಡುಗೆಮನೆಯಲ್ಲಿ ಬಳಸಿದ ಬಟ್ಟೆಯಿಂದ ಈ ಪಾತ್ರೆಯನ್ನು ಎಂದಿಗೂ ಒಣಗಿಸಬಾರದು.
03:10 ಶುಚಿಮಾಡಿದ ಪಾತ್ರೆಯನ್ನು ಚೆನ್ನಾಗಿ ಒಣಗಿಸಿದ ನಂತರ, ಸ್ತನದಿಂದ ಹಾಲನ್ನು ತೆಗೆಯಬೇಕು.
03:17 ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು.
03:26 ತಾಯಿಯು ಹೀಗೆ ಮಾಡಬಹುದು:

ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕಿಯೊಂದಿಗೆ ಕುಳಿತಿರಬಹುದು.

03:34 ಕೆಲವು ತಾಯಂದಿರು, ಎದೆಹಾಲು ತೆಗೆಯುತ್ತಿರುವ ಇತರ ತಾಯಂದಿರ ಗುಂಪಿನಲ್ಲಿ ಸುಲಭವಾಗಿ ಹಾಲನ್ನು ತೆಗೆಯಬಹುದು.
03:41 ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲಿರಿಸಬಹುದು.
03:46 ಅಥವಾ ಅವಳು ತನ್ನ ಮಗುವನ್ನು ನೋಡಬಹುದು, ಮಗುವಿನ ಧ್ವನಿಯನ್ನು ಕೇಳಬಹುದು.
03:53 ಕೆಲವೊಮ್ಮೆ - ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ.
04:00 ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ಕುಡಿಯಬಹುದು, ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು.
04:12 ಹಾಲು ಸರಾಗವಾಗಿ ಹೊರಗೆ ಬರಲು, ತಾಯಿಯು ಸ್ತನಗಳನ್ನು ಬೆಚ್ಚಗೆ ಮಾಡಬಹುದು.
04:17 ಸ್ತನಗಳನ್ನು ಬೆಚ್ಚಗಾಗಿಸಲು, ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇಡಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು.
04:28 ನಯವಾಗಿ ಎಳೆದು ಅಥವಾ ಬೆರಳುಗಳಿಂದ ತಿರುಗಿಸಿ, ಅವಳು ಮೊಲೆತೊಟ್ಟುಗಳನ್ನು ಮತ್ತು ಅದರ ಸುತ್ತಲಿನ ಕಪ್ಪು ಜಾಗವನ್ನು ಉತ್ತೇಜಿಸಬಹುದು.
04:38 ಗುಂಡಾಗಿ ಕೈಯನ್ನು ಚಲಿಸಿ, ತಾಯಿಯು ಸ್ತನಗಳನ್ನು ಲಘುವಾಗಿ ನೀವಬಹುದು.
04:44 ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು.
04:47 ಬೆನ್ನನ್ನು ಉಜ್ಜುವಾಗ, ಅವಳು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು.
04:53 ತನ್ನ ಮುಂದೆ ಒಂದು ಮೇಜಿನ ಮೇಲೆ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತಲೆಯನ್ನು ಇರಿಸಬೇಕು.
05:01 ಅವಳ ಸ್ತನಗಳನ್ನು ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು.
05:07 ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು.
05:12 ಹೆಬ್ಬೆರಳುಗಳು ಮುಂದೆ ಚಾಚಿ, ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು.
05:17 ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು.
05:25 ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಒತ್ತಬೇಕು.
05:34 ಹೀಗೆ ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು.
05:38 ಎದೆಹಾಲು ಸುಲಭವಾಗಿ ಹರಿದು ಬರಲು ಈ ಹಂತಗಳು ಸಹಾಯ ಮಾಡುತ್ತವೆ.
05:43 ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎನ್ನುತ್ತಾರೆ.
05:51 'ಆಕ್ಸಿಟೋಸಿನ್ ರಿಫ್ಲೆಕ್ಸ್' ಶುರುವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು.
05:59 ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು
06:04 ಮತ್ತು ಸ್ವಲ್ಪ ಮುಂದಕ್ಕೆ ಬಾಗಬೇಕು.
06:07 ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿಯಬೇಕು.
06:11 ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಡಬೇಕು.
06:20 ತನ್ನ ಸ್ತನವನ್ನು ಹಿಡಿದುಕೊಳ್ಳಲು ಅವಳು ಯಾವುದೇ ಕೈಯನ್ನು ಬಳಸಬಹುದು. ಒಂದು ಕೈ ದಣಿದಾಗ ಇನ್ನೊಂದು ಕೈಗೆ ಬದಲಾಯಿಸಬಹುದು.
06:29 ಸ್ತನವನ್ನು ಹಿಡಿದುಕೊಂಡಾಗ, ಅವಳ ಹೆಬ್ಬೆರಳು ಸ್ತನದ ಮೇಲಿನ ಭಾಗದಲ್ಲಿರಬೇಕು.
06:35 ಅವಳ ಬೆರಳುಗಳು ಸ್ತನದ ಕೆಳ ಭಾಗದಲ್ಲಿ, ಹೆಬ್ಬೆರಳಿಗೆ ವಿರುದ್ಧವಾಗಿ ಇರಬೇಕು.
06:42 ಅವಳ ಹೆಬ್ಬೆರಳು, ಮೊಲೆತೊಟ್ಟು ಮತ್ತು ಬೆರಳುಗಳು ಯಾವಾಗಲೂ ಒಂದೇ ಸಾಲಿನಲ್ಲಿ ಇರಬೇಕು.
06:48 ಮೊಲೆತೊಟ್ಟು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು.
06:54 ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ನಡುವೆ 2 ಬೆರಳುಗಳ ಅಂತರವಿರಬೇಕು.
07:04 ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು.
07:10 ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಸಿಗುತ್ತದೆ.
07:19 ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು, ಬಲಗೈಯಿಂದ ಹಿಡಿದಿಕೊಂಡಿದ್ದಾಳೆ.
07:27 ಈಗ ಅವಳು ಒಂದೇಸಮನಾಗಿ ಒತ್ತಡವನ್ನು ಹಾಕಿ, ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತಬೇಕು.
07:36 ನಂತರ, ಕೈಯನ್ನು ಸರಿಸದೆ ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು.
07:44 ಆನಂತರ, ಸ್ತನದ ಮೇಲಿನ ಒತ್ತಡವನ್ನು ತೆಗೆಯಬೇಕು.
07:48 ಹಿಂದಕ್ಕೆ ಒತ್ತುವುದು, ಒತ್ತಡ ಹಾಕುವುದು ಮತ್ತು ಒತ್ತಡವನ್ನು ತೆಗೆದುಬಿಡುವುದು ಈ 3 ಹಂತಗಳನ್ನು ತಾಯಿಯು ಪುನರಾವರ್ತಿಸಬೇಕು.
07:56 ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಹಂತವು ಬಹಳ ಮುಖ್ಯವಾಗಿದೆ.
08:02 ಮೊಲೆತೊಟ್ಟಿನ ಕಡೆಗೆ ಮಾತ್ರ ಒತ್ತಿದರೆ, ಬಹಳ ಕಡಿಮೆ ಹಾಲು ಸಿಗುತ್ತದೆ.
08:07 ಆದರೆ ಸ್ತನವನ್ನು ಹಿಂದೆ ಒತ್ತಿದಾಗ, ದಟ್ಟವಾದ ಸ್ತನ ಅಂಗಾಂಶದಿಂದ ಹಾಲು ಬಿಡುಗಡೆಯಾಗುತ್ತದೆ.
08:15 ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಯಬಹುದು (block).
08:23 ತಾಯಿಯು ಕೈಯಿಂದ ಎದೆಹಾಲನ್ನು ತೆಗೆಯಲು ಆರಂಭಿಸಿದಾಗ, ಮೊದಲಿಗೆ ಹಾಲಿನ ಕೆಲವೇ ಹನಿಗಳು ಹೊರಬರಬಹುದು.
08:30 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ತೊಟ್ಟಿಕ್ಕುತ್ತದೆ.
08:36 ಮೊದಮೊದಲು, ಹಾಲು ಹನಿಹನಿಯಾಗಿ ಬರುವುದು ಅಥವಾ ನಿಧಾನವಾಗಿ ಬರುವುದು.
08:42 ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಸುಧಾರಿಸುತ್ತದೆ.
08:53 ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು. ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ.
09:01 ಗಾಢವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ.
09:08 ಹಾಲಿನ ಹರಿವು ಕಡಿಮೆಯಾಗಿ, ಹನಿಹನಿಯಾಗಿ ಬೀಳುವವವರೆಗೂ ತಾಯಿಯು 3 ಹಂತಗಳನ್ನು ಪುನರಾವರ್ತಿಸಬೇಕು.
09:16 ನಂತರ, ಅವಳು ಸ್ತನದ ಇತರ ಭಾಗಗಳಿಂದ ಹಾಲನ್ನು ತೆಗೆಯಲು, ತನ್ನ ಬೆರಳುಗಳ ಸ್ಥಾನವನ್ನು ಬದಲಿಸಬೇಕು.
09:23 ಸ್ತನವು ತುಂಬಿಕೊಂಡಿರುವ ಜಾಗವನ್ನು ತಿಳಿದುಕೊಂಡು, ಅವಳು ಆ ಜಾಗಗಳನ್ನು ಒತ್ತಬಹುದು.
09:30 ಒಂದು ಸ್ತನದಿಂದ ಕನಿಷ್ಠ 3 ರಿಂದ 5 ನಿಮಿಷಗಳ ಕಾಲ, ಹಾಲಿನ ಹರಿವು ಕಡಿಮೆಯಾಗುವ ತನಕ ಅವಳು ಹಾಲನ್ನು ತೆಗೆಯಬೇಕು.
09:38 ನಂತರ, ಅವಳು ಇನ್ನೊಂದು ಸ್ತನದಿಂದ ಇದೇ ರೀತಿಯಲ್ಲಿ ಹಾಲನ್ನು ತೆಗೆಯಬೇಕು.
09:45 ಆಮೇಲೆ, ಮತ್ತೊಮ್ಮೆ ಎರಡೂ ಸ್ತನಗಳಿಂದ ಎರಡನೆಯ ಬಾರಿ ಹಾಲನ್ನು ತೆಗೆಯಬೇಕು.
09:51 ಎರಡೂ ಸ್ತನಗಳಿಂದ ಹಾಲನ್ನು ತೆಗೆಯುವುದು, 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
09:57 ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಏಕೆಂದರೆ, ಆ ದಿನಗಳಲ್ಲಿ ಹಾಲು ಕಡಿಮೆ ತಯಾರಾಗುತ್ತದೆ.
10:07 ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ.
10:12 ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ.
10:21 ಸ್ತನ ಅಂಗಾಂಶವು ನಾಜೂಕಾಗಿದೆ.
10:24 ಮೊಲೆತೊಟ್ಟಿನ ಕಡೆಗೆ, ಚರ್ಮದ ಉದ್ದಕ್ಕೂ ಬೆರಳುಗಳನ್ನು ತಿಕ್ಕುವುದು, ಜಾರಿಸುವುದು ಅಥವಾ ಎಳೆಯುವುದನ್ನು ತಪ್ಪಿಸಿ. ಇದು ಸ್ತನಕ್ಕೆ ಗಾಯ ಅಥವಾ ನೋವು ಉಂಟುಮಾಡಬಹುದು.
10:36 ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಚರ್ಮವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ.
10:42 ಮೊಲೆತೊಟ್ಟನ್ನು ಹಿಸುಕುವುದು, ಎಳೆಯುವುದನ್ನು ತಪ್ಪಿಸಿ.
10:46 ಮೊಲೆತೊಟ್ಟನ್ನು ಒತ್ತಿ ಅಥವಾ ಎಳೆಯುವ ಮೂಲಕ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ.
10:51 ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಆಗುತ್ತದೆ.
10:57 ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು.
11:04 ಆಮೇಲೆ, ಅವಳು ನಂತರದ ಬಳಕೆಗಾಗಿ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು.
11:09 ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳನ್ನು ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
11:19 ತಾಯಿಯು ಎಷ್ಟು ಸಲ ತನ್ನ ಎದೆಹಾಲನ್ನು ತೆಗೆಯಬೇಕು ಎಂದು ಈಗ ಚರ್ಚಿಸೋಣ.
11:24 ಎದೆಹಾಲಿನ ಹರಿವನ್ನು ಶುರುಮಾಡಲು ಮತ್ತು ಮುಂದುವರೆಸಲು, ಕಡಿಮೆ ಜನನ-ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸಬೇಕಿದ್ದರೆ, ಆಗ -
11:35 ಹೆರಿಗೆಯ ನಂತರ ಅವಳು ಸಾಧ್ಯವಾದಷ್ಟು ಬೇಗ ಹಾಲನ್ನು ತೆಗೆಯಬೇಕು.
11:40 ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಪಡೆಯಬಹುದು.
11:45 ಎದೆಹಾಲಿನ ಹರಿವು ಶುರುವಾಗಲು ಇದು ಸಹಾಯ ಮಾಡುತ್ತದೆ.
11:48 ಹೆರಿಗೆಯಾದ ತಕ್ಷಣ ಮಗುವಿಗೆ ಮೊಲೆಯುಣಿಸುವುದನ್ನು ಇದು ಹೋಲುತ್ತದೆ.
11:54 ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು.
12:02 ರಾತ್ರಿಯೂ ಸೇರಿದಂತೆ ಇದು ಕನಿಷ್ಠ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಆಗಿರಬೇಕು.
12:08 ಹಾಲು ತೆಗೆಯುವ ಕ್ರಿಯೆಯ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಕೊಡಲು ಅವಳಿಗೆ ಸಾಧ್ಯವಾಗುವುದಿಲ್ಲ.
12:16 ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸಬೇಕಾಗಿದ್ದರೆ -

ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ:

12:25 ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು,
12:33 ಮಗು 3 ಗಂಟೆಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು.
12:43 ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯನ್ನು ನಿವಾರಿಸಬೇಕಿದ್ದರೆ:

ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು.

12:53 ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡಬೇಕಾಗಿದ್ದರೆ:

ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು.

13:02 ಸ್ನಾನದ ನಂತರ ಮತ್ತು ಹಾಲುಣಿಸಿದ ನಂತರ ಅವಳು ಇದನ್ನು ಮಾಡಬೇಕು.
13:07 ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವ ಉದ್ದೇಶವಿದ್ದರೆ:
13:14 ತಡೆಯಿಲ್ಲದ ಪೂರೈಕೆಗಾಗಿ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು.
13:20 ಮಗುವಿಗೆ ಹಾಲನ್ನು ಕೊಡಲು, ತಾಯಿಯು ಕೆಲಸಕ್ಕೆ ಹೋಗುವ ಮುನ್ನ ಎದೆಹಾಲನ್ನು ತೆಗೆದು ಅದನ್ನು ಆರೈಕೆ ಮಾಡುವವರ ಹತ್ತಿರ ಕೊಡಬೇಕು.
13:29 ಇದಕ್ಕಾಗಿ, ತಾಯಿಯು ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆಯನ್ನು ಮೊದಲೇ ಮಾಡಬೇಕು.
13:34 ಅವಳು ಹೆಚ್ಚಿನ ಎದೆಹಾಲನ್ನು ತೆಗೆದು, ನಂತರದ ಬಳಕೆಗಾಗಿ ಅದನ್ನು ಶೇಖರಿಸಿ ಇಡಬೇಕು.
13:39 ಮಗುವಿಗೆ ಹಾಲುಣಿಸಿದ ನಂತರವೂ ತಾಯಿಯು ಎದೆಹಾಲನ್ನು ತೆಗೆಯಬಹುದು.
13:44 ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ-ಲೀಟರ್ ನಷ್ಟು ಹಾಲನ್ನು ಇಡಬೇಕು.
13:51 ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯತೆಯ ಅನುಸಾರ ಹೆಚ್ಚು ಎದೆಹಾಲನ್ನು ಕೊಡಬಹುದು.
13:57 ನೆನಪಿಡಿ, ಆಗಾಗ್ಗೆ ಕೈಯಿಂದ ಹಾಲು ತೆಗೆಯುವುದರಿಂದ ಈ ಕ್ರಿಯೆಯು ಸುಲಭವಾಗುತ್ತದೆ, ಹಾಲು ಶೀಘ್ರವಾಗಿ ಬರುತ್ತದೆ
14:07 ಮತ್ತು ತಾಯಿಯು ಹೆಚ್ಚು ಹಾಲನ್ನು ಕೊಡುತ್ತಾಳೆ.
14:11 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್. ಧನ್ಯವಾದಗಳು.

Contributors and Content Editors

Debosmita, Sandhya.np14