Health-and-Nutrition/C2/Breast-crawl/Kannada
From Script | Spoken-Tutorial
Revision as of 22:15, 31 January 2019 by Sandhya.np14 (Talk | contribs)
Time | Narration |
00:00 | Breast crawl (ಬ್ರೆಸ್ಟ್ ಕ್ರಾಲ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು: 'ಬ್ರೆಸ್ಟ್ ಕ್ರಾಲ್' ಎಂದರೇನು, |
00:10 | 'ಬ್ರೆಸ್ಟ್ ಕ್ರಾಲ್' ನ ವಿಧಾನ ಮತ್ತು |
00:13 | ಅದರ ಮಹತ್ವ ಇವುಗಳ ಬಗ್ಗೆ ಕಲಿಯುತ್ತೇವೆ. |
00:18 | 'ಬ್ರೆಸ್ಟ್ ಕ್ರಾಲ್' ಎಂದರೇನು ಇದನ್ನು ನಾವು ಮೊದಲು ತಿಳಿದುಕೊಳ್ಳೋಣ. |
00:23 | ಮಗು, ಸಹಜವಾದ ಆಹಾರದ ನಡವಳಿಕೆಯೊಂದಿಗೆ ಜನಿಸುತ್ತದೆ. |
00:28 | ಹೆರಿಗೆಯಾದ ಕೂಡಲೇ ತಾಯಿಯ ಹೊಟ್ಟೆಯ ಮೇಲೆ ಶಿಶುವನ್ನು ಇರಿಸಿದಾಗ, ಅದು ತಾಯಿಯ ಸ್ತನವನ್ನು ಹುಡುಕಿ ಸ್ತನ್ಯಪಾನವನ್ನು ಆರಂಭಿಸುವುದು. |
00:40 | ಈ ಸಂಪೂರ್ಣ ಪ್ರಕ್ರಿಯೆಯನ್ನು 'ಬ್ರೆಸ್ಟ್ ಕ್ರಾಲ್' ಎಂದು ಕರೆಯುತ್ತೇವೆ. |
00:46 | ಗಮನಿಸಿ: ಪೂರ್ಣ ಅವಧಿಯ ನಂತರ, ನೈಸರ್ಗಿಕ ಅಥವಾ ಸಿಸೇರಿಯನ್ ಹೆರಿಗೆಯಲ್ಲಿ ಜನಿಸಿದ ಮತ್ತು |
00:58 | ಜನಿಸಿದ ಕೂಡಲೇ ಚೆನ್ನಾಗಿ ಅತ್ತಿರುವ ಸಾಮಾನ್ಯ ಶಿಶುಗಳಿಗೆ 'ಬ್ರೆಸ್ಟ್ ಕ್ರಾಲ್' ಅನ್ನು ಮಾಡಬಹುದು. |
01:03 | ಉಸಿರುಗಟ್ಟುವಂತಹ ಉಸಿರಾಟದ ತೊಂದರೆಗಳಿಂದ ಬಳಲಬಹುದಾದ ಕಾರಣ, ಕಡಿಮೆ ಜನನ ತೂಕ ಹೊಂದಿರುವ, ಅಸ್ಥಿರ ಆರೋಗ್ಯವನ್ನು ಹೊಂದಿರುವ ಶಿಶುಗಳಲ್ಲಿ 'ಬ್ರೆಸ್ಟ್ ಕ್ರಾಲ್' ಅನ್ನು ಮಾಡಲಾಗುವುದಿಲ್ಲ. |
01:15 | ಈಗ ನಾವು 'ಬ್ರೆಸ್ಟ್ ಕ್ರಾಲ್' ನ ವಿಧಾನವನ್ನು, ಆನಂತರ ಅದರ ಮಹತ್ವವನ್ನು ಕಲಿಯುವೆವು. |
01:22 | ಮೊದಲು, ಹೆರಿಗೆ ಕೊಠಡಿಯ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. |
01:29 | ನಂತರ, ಶಿಶುವನ್ನು ತಾಯಿಯ ಹೊಟ್ಟೆಯ ಮೇಲೆ ಇರಿಸಿ ಶುಚಿಗೊಳಿಸುವುದು. |
01:35 | ಕೈಗಳ ಹೊರತಾಗಿ ಶಿಶುವಿನ ಪೂರ್ತಿ ಶರೀರವನ್ನು ಒಂದು ಸ್ವಚ್ಛವಾದ ಶುಷ್ಕ ಬಟ್ಟೆಯಿಂದ ಚೆನ್ನಾಗಿ ಶುಚಿಗೊಳಿಸಿ. |
01:42 | ನೆನಪಿಡಿ, ಶಿಶುವಿನ ಕೈಗಳನ್ನು ತೇವವಾಗಿರಿಸಿ. |
01:46 | ಶುಚಿಗೊಳಿಸುವಾಗ ಶಿಶುವಿನ ಚರ್ಮದ ಮೇಲಿರುವ ರಕ್ಷಣಾತ್ಮಕ ಬಿಳಿ ಲೇಪನವನ್ನು ತೆಗೆಯಬೇಡಿ. |
01:53 | ಅದು ಶಿಶುವನ್ನು ತಂಪಾದ ವಾತಾವರಣದಿಂದ ರಕ್ಷಿಸುತ್ತದೆ. |
01:56 | ಶಿಶುವನ್ನು ಶುಚಿಗೊಳಿಸಿದ ನಂತರ ಹಸಿ ಬಟ್ಟೆಯನ್ನು ತೆಗೆದುಬಿಡಿ. |
02:01 | ಶಿಶುವನ್ನು ಒರೆಸಿದ ನಂತರ, ಹೆರಿಗೆ ಸಮಯದಲ್ಲಿರುವ ಸಹಾಯಕಿಯು (birth attendant) ಬಳ್ಳಿಯ ನಾಡಿಬಡಿತವನ್ನು ನೋಡಬೇಕು. |
02:08 | ನಾಡಿಬಡಿತವು ನಿಂತಾಗ, ಅವಳು ಬಳ್ಳಿಯನ್ನು ಕತ್ತರಿಸಬೇಕು. |
02:13 | ನಂತರ, ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯನ್ನು ಸ್ಪರ್ಶಿಸುವಂತೆ, ತಾಯಿಯ ಮೇಲೆ ಮಗುವನ್ನು ಸರಿಯಾಗಿರಿಸಿ. |
02:22 | ತಾಯಿಯ ತೊಳೆಯದ ಸ್ತನಗಳ ನಡುವೆ ಶಿಶುವಿನ ತಲೆಯನ್ನು ಇರಿಸಬೇಕು. |
02:26 | ಶಿಶುವಿನ ಬಾಯಿಯು ತಾಯಿಯ ಸ್ತನದ ಕೆಳಗೆ ಇರಬೇಕು. |
02:30 | ಈಗ 'ಬ್ರೆಸ್ಟ್ ಕ್ರಾಲ್' ಗಾಗಿ ಮಗುವನ್ನು ಸರಿಯಾಗಿ ಇರಿಸಲಾಗಿದೆ. |
02:37 | ನವಜಾತ ಶಿಶುವಿಗೆ ಮುಂದಕ್ಕೆ ಸರಿಯುವುದು ಬಹಳ ಸ್ವಾಭಾವಿಕ ಆಗಿರುವುದರಿಂದ, ಮಗು ಸುಲಭವಾಗಿ ಮುಂದಕ್ಕೆ ತಾಯಿಯ ಸ್ತನದೆಡೆಗೆ ತೆವಳಬಹುದು. |
02:46 | ಆನಂತರ, ಮಗು ಮತ್ತು ತಾಯಿಯನ್ನು ಬೆಚ್ಚಗಿಡಲು ಅವರಿಗೆ ಒಂದು ಸ್ವಚ್ಛವಾದ, ಶುಷ್ಕ ಹೊದಿಕೆಯನ್ನು ಹೊದಿಸಿ. |
02:54 | ಮಗುವಿನ ತಲೆಯ ಮೇಲೆ ಒಂದು ಟೋಪಿ ಹಾಕಿ. |
02:57 | ದಯವಿಟ್ಟು ಗಮನಿಸಿ- ಇನ್ನು ಮುಂದಿನ ಚಿತ್ರಗಳಲ್ಲಿ ನಾವು ಟೋಪಿ ಮತ್ತು ಬಟ್ಟೆಯನ್ನು ತೋರಿಸಿಲ್ಲ. |
03:04 | 'ಬ್ರೆಸ್ಟ್ ಕ್ರಾಲ್' ಸಮಯದಲ್ಲಿ ಮಗುವಿನ ಸ್ಥಿತಿಯನ್ನು ಸರಿಯಾಗಿ ಗಮನಿಸಲು ಇದು ನಮಗೆ ಸಹಾಯ ಮಾಡುತ್ತದೆ. |
03:10 | ಮಗುವಿಗೆ ಬಟ್ಟೆಯನ್ನು ಹೊದಿಸಿದ ನಂತರ, ತಾಯಿಯು ಮಗುವಿನ ಬೆನ್ನನ್ನು ತನ್ನ ಕೈಯಿಂದ ಹಿಡಿದುಕೊಳ್ಳುವಂತೆ ಮಾಡಿ. |
03:18 | 'ಬ್ರೆಸ್ಟ್ ಕ್ರಾಲ್' ಗೆ ಸಹಾಯ ಮಾಡುವ ಮಗುವಿನ ಸಾಮರ್ಥ್ಯಗಳನ್ನು ನಾವು ಚರ್ಚಿಸೋಣ. |
03:24 | ಹೆರಿಗೆಯ ನಂತರ ಶಿಶುವು ಬಹಳ ಜಾಗರೂಕವಾಗಿದ್ದು, ಸಹಜ ಪ್ರವೃತ್ತಿಯನ್ನು ಹೊಂದಿರುತ್ತದೆ. |
03:29 | ಶಿಶುವಿನ ಅಶುಚಿಯಿರುವ ಕೈಗಳ ವಾಸನೆಯು ಅದಕ್ಕೆ ಜೊಲ್ಲು ಸುರಿಸಲು ಪ್ರಚೋದಿಸುತ್ತದೆ. |
03:35 | ಅಲ್ಲದೆ, ಮಗು ತನ್ನ ಸೀಮಿತ ದೃಷ್ಟಿಯೊಂದಿಗೆ, ತನ್ನ ತಾಯಿಯ ಮುಖ ಮತ್ತು ಅರಿಯೋಲಾವನ್ನು ನೋಡಲು ಸಾಧ್ಯವಿದೆ. |
03:43 | ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
03:47 | ಕೊನೆಗೆ, ಮಗು ತನ್ನ ಕೈ- ಕಾಲುಗಳನ್ನು ಬಳಸಿ ಚಲಿಸಲು ಆರಂಭಿಸುತ್ತದೆ. ನಿಧಾನವಾಗಿ ತನ್ನ ತಾಯಿಯ ಸ್ತನಗಳೆಡೆಗೆ ತೆವಳುತ್ತದೆ. |
03:57 | ಆದಾಗ್ಯೂ, ಕೆಲವು ಶಿಶುಗಳು ತಕ್ಷಣವೇ ತೆವಳಲು ಪ್ರಾರಂಭಿಸುತ್ತವೆ ಮತ್ತು ಕೆಲವು ಶಿಶುಗಳು ಸಮಯ ತೆಗೆದುಕೊಳ್ಳುತ್ತವೆ. |
04:04 | ಸ್ತನವನ್ನು ತಲುಪಿದ ನಂತರ, ಮಗು ಮೊದಲು ತನ್ನ ಕೈಗಳಿಂದ ಸ್ತನವನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತದೆ. |
04:12 | ಈ ಸಮಯದಲ್ಲಿ, ಮಗು ತನ್ನ ಮೊದಲ ಸ್ತನ್ಯಪಾನ ಮಾಡುವ ತನಕ, ಮಗು ಮತ್ತು ತಾಯಿಗೆ ತೊಂದರೆಕೊಡಬೇಡಿ. |
04:20 | ಈ ಕ್ರಿಯೆ ನಡೆಯುವಾಗ, ತಾಯಿ ಮತ್ತು ಅವಳ ಸಹಾಯಕಿ ಇಬ್ಬರಿಗೂ ತಾಳ್ಮೆ ಇರಬೇಕು. |
04:27 | ತನ್ನ ಮೊದಲ ಸ್ತನ್ಯಪಾನಕ್ಕಾಗಿ ತಾಯಿಯ ಸ್ತನದವರೆಗೆ ತಲುಪಲು ಮಗು 30 ರಿಂದ 60 ನಿಮಿಷಗಳನ್ನು ತೆಗೆದುಕೊಳ್ಳಬಹುದು. |
04:35 | ಹಾಲುಣಿಸುವ ಆರಂಭದಲ್ಲಿ, ಮಗು ತನ್ನ ಬಾಯಿಯನ್ನು ಅಗಲವಾಗಿ ತೆರೆಯುತ್ತದೆ ಮತ್ತು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. |
04:45 | ಮೊಲೆಯೂಡಿಸುವುದು ಮುಗಿದ ನಂತರ, ಮಗು ಸುಮಾರು ಒಂದು ಘಂಟೆಯವರೆಗೆ ಅದೇ ಸ್ಥಾನದಲ್ಲಿ ಇರಲಿ. |
04:52 | ಹೀಗೆ ಮಾಡುವುದರಿಂದ, ತಾಯಿ ಮತ್ತು ಮಗುವಿನ ನಡುವಿನ ಬಂಧವನ್ನು ಸುಧಾರಿಸಲು ಸಹಾಯವಾಗುತ್ತದೆ. |
04:58 | ಆದಾಗ್ಯೂ, ತಾಯಿಯು ಯಾವುದೇ ಔಷಧಿಗಳನ್ನು ತೆಗೆದುಕೊಂಡಿದ್ದರೆ ದಯವಿಟ್ಟು ಅವಳ ವೈದ್ಯರನ್ನು ಸಂಪರ್ಕಿಸಿ. |
05:05 | ಕೆಲವೊಮ್ಮೆ, ಹೆರಿಗೆಯ ನಂತರ, ತಾಯಿಯು ಹೆರಿಗೆಯ ಕೋಣೆಯಿಂದ ಮತ್ತೊಂದು ಕೋಣೆಗೆ ಹೋಗಬೇಕಾಗಬಹುದು. |
05:13 | ಅಂತಹ ಸಂದರ್ಭಗಳಲ್ಲಿ, ತಾಯಿಯನ್ನು ಮತ್ತೊಂದು ಕೋಣೆಗೆ ವರ್ಗಾಯಿಸಿದ ನಂತರ, ಈಮೊದಲು ಹೇಳಿದಂತೆ ತಾಯಿಯ ಹೊಟ್ಟೆಯ ಮೇಲೆ ಮಗುವನ್ನು ಇರಿಸಿ, ತಾಯಿ ಮತ್ತು ಮಗುವಿಗೆ ಪರಸ್ಪರ ಚರ್ಮದ ಸ್ಪರ್ಶವು ಸಿಗುವಂತೆ ನೋಡಿಕೊಳ್ಳಿ. |
05:29 | 'ಸಿಸೇರಿಯನ್ ಸೆಕ್ಷನ್' ಹೆರಿಗೆಯಲ್ಲಿ ಜನಿಸಿದ ಶಿಶುಗಳಿಗಾಗಿ, ಈಗ ನಾವು ‘ಬ್ರೆಸ್ಟ್ ಕ್ರಾಲ್’ ಅನ್ನು ಚರ್ಚಿಸೋಣ. |
05:35 | ಇದನ್ನು ಮಾಡಲು, ಮಗುವಿನ ಕಾಲುಗಳು ತಾಯಿಯ ತಲೆಯ ಕಡೆಗೆ ಇರುವಂತೆ, ಹೊಟ್ಟೆಯ ಬದಲಾಗಿ ಶಿಶುವನ್ನು ತಾಯಿಯ ಎದೆಯ ಮೇಲೆ ಇಡಬೇಕು. |
05:47 | ಎದೆ ಮತ್ತು ಹೊಟ್ಟೆಯು ತಾಯಿಯ ಭುಜದ ಮೇಲೆ ಮತ್ತು ಬಾಯಿಯು ಸ್ತನದ ಮೇಲೆ ಇರಬೇಕು. |
05:54 | ಆಪರೇಷನ್ ಥಿಯೇಟರ್ ನಲ್ಲಿ, ಸಾಧ್ಯವಾದಷ್ಟು ವೇಳೆ ಮಗುವಿಗೆ ಮೊಲೆಯೂಡಿಸಲು ಅನುಮತಿಸಿ. |
05:59 | ಹೆರಿಗೆಯಾದ ತಕ್ಷಣ, ಪರಸ್ಪರ ಚರ್ಮದ ಸ್ಪರ್ಶವು ಇತರ ಯಾವುದೇ ನವಜಾತ ಆರೈಕೆಗಳಿಗಿಂತ ಅತೀ ಮುಖ್ಯವಾಗಿದೆ ಎಂದು ನೆನಪಿಡಿ. |
06:09 | ಗಮನಿಸಿ, ‘ಬ್ರೆಸ್ಟ್ ಕ್ರಾಲ್’ ಮುಗಿದ ಮೇಲೆಯೇ, ಹೆರಿಗೆಯ ನಂತರದ ನವಜಾತ ಶಿಶುವಿನ ಆರೈಕೆಯನ್ನು ನೀಡಬೇಕು. |
06:17 | ಈಗ, ನವಜಾತ ಶಿಶುವಿಗಾಗಿ ‘ಬ್ರೆಸ್ಟ್ ಕ್ರಾಲ್’ ನ ಮಹತ್ವವನ್ನು ನಾವು ಚರ್ಚಿಸೋಣ. |
06:23 | ಮಗು, ಕೊಲೊಸ್ಟ್ರಮ್ ಎಂದು ಕರೆಯಲಾಗುವ ತಾಯಿಯ ಮೊಟ್ಟಮೊದಲ ಹಾಲನ್ನು ಪಡೆಯಲು ‘ಬ್ರೆಸ್ಟ್ ಕ್ರಾಲ್’ ಸಾಧ್ಯವಾಗಿಸುತ್ತದೆ. |
06:29 | ಇದು ಹಳದಿ ಬಣ್ಣ ಹೊಂದಿದ್ದು, ಸ್ವಲ್ಪ ಗಟ್ಟಿಯಾಗಿದೆ. |
06:33 | ಹೆರಿಗೆಯ ನಂತರ, ಪ್ರತಿ ಸ್ತನ್ಯಪಾನ ಸಮಯದಲ್ಲಿ ಮಗುವಿನ ಕೊಲೊಸ್ಟ್ರಮ್ ಸೇವನೆಯ ಪ್ರಮಾಣವು ನಿಧಾನವಾಗಿ ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಿ. |
06:43 | ಪ್ರತಿ ಸ್ತನ್ಯಪಾನ ಸಮಯದಲ್ಲಿ ಮಗು ಪ್ರತಿಯೊಂದು ಸ್ತನದಿಂದ - ಮೊದಲನೆಯ ದಿನ 5 ಮಿಲಿಲೀಟರ್ ಗಳು, |
06:47 | ಎರಡನೆಯ ದಿನ 10 ಮಿಲಿಲೀಟರ್ ಗಳು, |
06:50 | ಮೂರನೆಯ ದಿನ 25 ಮಿಲಿಲೀಟರ್ ಗಳು, |
06:53 | ನಾಲ್ಕನೇ ದಿನ 40 ಮಿಲಿಲೀಟರ್ ಗಳು ಮತ್ತು ಐದನೇ ದಿನದಂದು 55 ಮಿಲಿಲೀಟರ್ ಗಳಷ್ಟು ತೆಗೆದುಕೊಳ್ಳುವುದು. |
07:05 | ನವಜಾತ ಮಗುವಿಗೆ ಇಷ್ಟು ಸಾಕಾಗುತ್ತದೆ. |
07:09 | ಆದ್ದರಿಂದ, ಕೊಲೊಸ್ಟ್ರಮ್ ಅನ್ನು ಹೊರತುಪಡಿಸಿ ಮಗುವಿಗೆ ಬೇರೆ ಯಾವುದೇ ಆಹಾರವನ್ನು ಕೊಡಬಾರದು. |
07:15 | 'ಕೋಲೋಸ್ಟ್ರಮ್' ಅನ್ನು ಮಗುವಿನ ಮೊದಲ ವ್ಯಾಕ್ಸಿನೇಷನ್ ಎಂದು ಪರಿಗಣಿಸಲಾಗುತ್ತದೆ. ಇದು ಸೋಂಕಿನ ಜೊತೆಗೆ ಹೋರಾಡುವ ಪ್ರೋಟೀನ್ ಗಳನ್ನು ಹೊಂದಿದ್ದು, ಮಗುವಿನ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. |
07:27 | ತಾಯಿಯ ಹೆರಿಗೆಯ ನಂತರ, ಮಗುವಿಗಾಗಿ ಇದು ಶಕ್ತಿಯ ಮೊದಲ ಮೂಲವಾಗಿದೆ. |
07:33 | 'ಕೋಲೋಸ್ಟ್ರಮ್', ರಕ್ತದಲ್ಲಿ ಕಡಿಮೆ ಗ್ಲೂಕೋಸ್ ಮಟ್ಟವನ್ನು ಸಹ ತಡೆಯುತ್ತದೆ. |
07:37 | ಮಗುವಿನ ದೇಹದ ಇತರ ಪ್ರಕ್ರಿಯೆಗಳನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. |
07:42 | ಮತ್ತು ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. |
07:46 | ಮಗುವಿಗೆ ಮೊದಲ ಸಲ ಮಲವಿಸರ್ಜನೆ ಮಾಡಲು ಇದು ಸಹಾಯ ಮಾಡುತ್ತದೆ. |
07:50 | ತಾಯಿಯ ಚರ್ಮದ ಸ್ಪರ್ಶ ಇರುವುದರಿಂದ, ‘ಬ್ರೆಸ್ಟ್ ಕ್ರಾಲ್’ ಮಗುವನ್ನು ಬೆಚ್ಚಗೆ ಸಹ ಇಡುತ್ತದೆ. |
07:57 | ತಾಯಿಯ ಸ್ತನಕ್ಕೆ ಆಳವಾಗಿ ಅಂಟಿಕೊಳ್ಳುವುದು ಹೇಗೆ ಎಂದು ಶಿಶು ಸ್ವತಃ ತಾನೇ ಕಲಿಯುತ್ತದೆ. |
08:04 | ‘ಬ್ರೆಸ್ಟ್ ಕ್ರಾಲ್’, ತಾಯಿಯ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಅವಳ ಮಗುವಿಗೆ ದಾಟಿಸುತ್ತದೆ. |
08:08 | ಈ ಬ್ಯಾಕ್ಟೀರಿಯಾಗಳು ಮಗುವಿನ ಕರುಳಿನಲ್ಲಿ ಪ್ರವೇಶಿಸುತ್ತವೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ. |
08:13 | ಒಟ್ಟಿನಲ್ಲಿ, ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. |
08:18 | ‘ಬ್ರೆಸ್ಟ್ ಕ್ರಾಲ್’, ಮಗುವಿಗೆ ಪ್ರೀತಿ ಹಾಗೂ ಭದ್ರತೆಯ ಭಾವನೆಯನ್ನು ಸಹ ನೀಡುತ್ತದೆ. ಅಲ್ಲದೇ ತಾಯಿ ಮತ್ತು ಅವಳ ಮಗುವಿನ ನಡುವಿನ ಬಂಧವನ್ನು ಪ್ರಾರಂಭಿಸುತ್ತದೆ. |
08:29 | ‘ಬ್ರೆಸ್ಟ್ ಕ್ರಾಲ್’ ನ ಪ್ರಯೋಜನಗಳು ತಾಯಿಗೆ ಸಹ ಸಿಗುತ್ತವೆ. |
08:34 | ಮಗುವಿನ ಕಾಲಿನ ಚಲನೆಗಳು, ತಾಯಿಯ ಗರ್ಭದ ಮೇಲೆ ಒತ್ತಡವನ್ನು ಹಾಕುತ್ತವೆ. ಈ ಒತ್ತಡವು, ಗರ್ಭಾಶಯದ ಸಂಕೋಚನ ಮತ್ತು ಮಾಸುಚೀಲವನ್ನು (placenta) ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. |
08:45 | ಸ್ತನ್ಯಪಾನದ ಆರಂಭವು ತಾಯಿಯ ದೇಹದಲ್ಲಿ 'ಆಕ್ಸಿಟೋಸಿನ್' ಅನ್ನು (oxytocin) ಹೆಚ್ಚಿಸುತ್ತದೆ. |
08:51 | 'ಆಕ್ಸಿಟೋಸಿನ್' ನಲ್ಲಿಯ ಹೆಚ್ಚಳವು ಮಾಸುಚೀಲವನ್ನು (placenta) ಹೊರಗೆಹಾಕಲು ಕೂಡ ಸಹಾಯ ಮಾಡುತ್ತದೆ. |
08:56 | ಹೀಗೆ, ‘ಬ್ರೆಸ್ಟ್ ಕ್ರಾಲ್’ ರಕ್ತವ್ಯಯವನ್ನು ಕಡಿಮೆಮಾಡುತ್ತದೆ ಮತ್ತು ತಾಯಂದಿರಲ್ಲಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. |
09:03 | ರಕ್ತಹೀನತೆಯು (Anaemia) ಕೆಂಪು ರಕ್ತಕಣಗಳ ಸಂಖ್ಯೆಯು ಕಡಿಮೆಯಾಗುವ ಒಂದು ಸ್ಥಿತಿಯಾಗಿದೆ. |
09:08 | ಅದು ತಾಯಿಯಲ್ಲಿ ಆಯಾಸ ಮತ್ತು ದೌರ್ಬಲ್ಯಗಳನ್ನು ಉಂಟುಮಾಡಬಹುದು. |
09:13 | ಆದ್ದರಿಂದ ‘ಬ್ರೆಸ್ಟ್ ಕ್ರಾಲ್’, ತಾಯಿ ಮತ್ತು ಮಗುವಿಗೆ ಬಹಳ ಪ್ರಯೋಜನಕಾರಿ ಆಗಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. |
09:21 | ಇಲ್ಲಿಗೆ ನಾವು Breast crawl ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:26 | ನಾವು ಈ ಟ್ಯುಟೋರಿಯಲ್ ನಲ್ಲಿ: 'ಬ್ರೆಸ್ಟ್ ಕ್ರಾಲ್' ಎಂದರೇನು, |
09:30 | ‘ಬ್ರೆಸ್ಟ್ ಕ್ರಾಲ್’ನ ವಿಧಾನ ಮತ್ತು 'ಬ್ರೆಸ್ಟ್ ಕ್ರಾಲ್' ನ ಮಹತ್ವ ಇವುಗಳ ಬಗ್ಗೆ ಕಲಿತಿದ್ದೇವೆ. |
09:37 | ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
09:43 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ. |
09:49 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
09:54 | ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದೆ. |
10:01 | ಈ ಟ್ಯುಟೋರಿಯಲ್, Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್. |
10:12 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
ಧನ್ಯವಾದಗಳು. |