PHP-and-MySQL/C2/Arithmatic-Operators/Kannada
From Script | Spoken-Tutorial
Revision as of 17:21, 12 March 2020 by Sandhya.np14 (Talk | contribs)
Time | Narration |
00:00 | Arithmetic Operators ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:03 | ನಾವು ಮೊದಲಿಗೆ ಸಂಕಲನ, ವ್ಯವಕಲನ, ಗುಣಿಸುವ ಮತ್ತು ಭಾಗಿಸುವ ಕ್ರಿಯೆಗಳನ್ನು ನೋಡುವೆವು. |
00:09 | ಇವುಗಳಿಗಾಗಿ, ಪ್ಲಸ್ (+), ಮೈನಸ್ (-), ಗುಣಾಕಾರಕ್ಕೆ ಆಸ್ಟೆರಿಸ್ಕ್ (*) ಮತ್ತು ಭಾಗಾಕಾರಕ್ಕೆ ಫಾರ್ವರ್ಡ್ ಸ್ಲ್ಯಾಶ್ (/) ಗಳನ್ನು ಬಳಸುತ್ತೇವೆ. |
00:17 | ಇಲ್ಲಿ ನಾನು ಎರಡು ವೇರಿಯೇಬಲ್ ಗಳನ್ನು ಹೊಂದಿದ್ದೇನೆ. |
00:20 | "$num1" ಎಂಬ ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಿ, ಅದರ ವ್ಯಾಲ್ಯುವನ್ನು 10 ಎಂದೂ, ಇನ್ನೊಂದು ವೇರಿಯೇಬಲ್ "$num2" ವನ್ನು 2 ಎಂದೂ ಸೇವ್ ಮಾಡುವೆನು. |
00:30 | ಇವೆರಡೂ ಪೂರ್ಣಾಂಕ (ಇಂಟೀಜರ್) ಗಳಾಗಿವೆ. |
00:34 | ಈಗ ನನಗೆ "num1" ಮತ್ತು "num2" ಎರಡನ್ನು ಕೂಡಿಸಬೇಕಾಗಿದೆ ಎಂದುಕೊಳ್ಳಿ. |
00:40 | ನಾನು "$num1" ಮತ್ತು "$num2" ಗಳ ಮೊತ್ತವನ್ನು echo ಮಾಡುವೆನು. |
00:44 | ಈಗ ಇದನ್ನು ಪರೀಕ್ಷಿಸೋಣ. |
00:47 | ಅದು "12" ಆಗಿದೆ. 10 ಮತ್ತು 2, ಅಂದರೆ, 'num1' ಮತ್ತು 'num2'; ಇವೆರನ್ನು ಕೂಡಿಸಿದಾಗ, ಉತ್ತರವು "12" ಆಗಿದೆ. |
00:55 | ಈಗ ವ್ಯವಕಲನವನ್ನು ಪ್ರಯತ್ನಿಸೋಣ. ಇಲ್ಲಿ ಚಿಹ್ನೆಯನ್ನು ಮೈನಸ್ ಎಂದು ಬದಲಿಸೋಣ. |
01:01 | Refresh ಮಾಡಿ ಮತ್ತು ಉತ್ತರವು "8" ಆಗಿರುವುದು. |
01:05 | ಈಗ ಗುಣಾಕಾರವನ್ನು ಪ್ರಯತ್ನಿಸೋಣ. 10 ಗುಣಿಸು 2 ಅಂದರೆ 20 ಮತ್ತು "20" ಅನ್ನು ಉತ್ತರವಾಗಿ ಪಡೆದಿದ್ದೇವೆ. |
01:11 | ನಂತರ 10 ಭಾಗಿಸು 2 ಅಂದರೆ ಹತ್ತರ ಅರ್ಧ ಅದು "5" ಆಗಿರುತ್ತದೆ. |
01:18 | ಈಗ, ನಾವು ಇದರ ಕೊನೆಗೆ ಏನಾದರೂ ಸೇರಿಸೋಣ. |
01:24 | ಹಾಗಾಗಿ ಅದು ಭಾಗಿಸು 'num2' ಎಂದಾಗಿರಲಿ. |
01:27 | ಮೊದಲು "num1" ಮತ್ತು "num2" ಕೂಡಿಸಿ, ಅಂದರೆ 10 ಮತ್ತು 2 ಅನ್ನು ಕೂಡಿಸಿದಾಗ 12 ಆಗುತ್ತದೆ. 12 ಅನ್ನು 2 ರಿಂದ ಭಾಗಿಸಬೇಕು. |
01:39 | 12 ಅನ್ನು 2 ರಿಂದ ಭಾಗಿಸಿದರೆ 6 ಸಿಗಬೇಕು. |
01:43 | ಆದರೆ ಇಲ್ಲಿ, 'num2' ವನ್ನು 'num2' ನಿಂದ ಭಾಗಿಸುತ್ತದೆ. ಆಗ ನಮಗೆ 1 ಸಿಗುವುದು ಮತ್ತು ಅದಕ್ಕೆ 'num1' ಅನ್ನು ಕೂಡಿಸುತ್ತದೆ. |
01:56 | ಅಂದರೆ 6 ರ ಬದಲು, ನಮಗೆ 11 ದೊರೆಯುತ್ತದೆ. |
02:00 | ಕಾರಣ, ಭಾಗಾಕಾರದ ಆಪರೇಟರ್ ಯಾವಾಗಲೂ ಸಂಕಲನದ ಆಪರೇಟರ್ ಗೂ ಮೊದಲು ಕೆಲಸ ಮಾಡುತ್ತದೆ. ಇದು ಗುಣಾಕಾರಕ್ಕೂ ಅನ್ವಯವಾಗುತ್ತದೆ. |
02:10 | ಈಗ ಇದರ ಉತ್ತರ ಕಂಡುಹಿಡಿಯಲು ನಾವು ಬ್ರ್ಯಾಕೆಟ್ ಅನ್ನು ಹಾಕಬೇಕು. |
02:16 | ಬ್ರ್ಯಾಕೆಟ್ ಗಳು, ಅದರೊಳಗೆ ಇರುವ ಕ್ರಿಯೆಯನ್ನು ಮೊದಲು ಮಾಡಿ, ನಂತರ ಇಂಟೀಜರ್ ಅಥವಾ ವೇರಿಯೇಬಲ್ ನಿಂದ ಭಾಗಿಸಿ ಎಂದು ಹೇಳುತ್ತದೆ. |
02:29 | ಇಲ್ಲಿ 'num1' ಪ್ಲಸ್ 'num2' ಅಂದರೆ 10 ಪ್ಲಸ್ 2 ಅನ್ನು ಮಾಡಿ, ಇದರಿಂದ ಸಿಗುವ 12 ಅನ್ನು 2 ರಿಂದ ಭಾಗಿಸಿದಾಗ 6 ಸಿಗುತ್ತದೆ. |
02:39 | ಈಗ refresh ಮಾಡಿ, ಅದು ಏನು ಮಾಡಿದೆ ಎಂದು ನೋಡೋಣ. |
02:43 | ಇವು ಬಳಸಲು ಸುಲಭವಾದ , ಮೂಲಭೂತ arithmetic operator ಗಳಾಗಿವೆ. |
02:48 | ಯಾವುದೇ ಲೆಕ್ಕವನ್ನು ಮಾಡುವಾಗ, ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಕ್ಯಾಲ್ಕ್ಯುಲೇಟರ್ ಬಳಸಿ ಪರೀಕ್ಷಿಸಿಕೊಳ್ಳಿ. |
02:55 | ಇವುಗಳಲ್ಲಿ ಇನ್ನೂ ಕೆಲವನ್ನು ನಾವು ಶೀಘ್ರದಲ್ಲಿಯೇ ನೋಡುವೆವು. |
02:58 | ಇನ್ಕ್ರಿಮೆಂಟ್ ಅರಿಥ್ಮ್ಯಾಟಿಕ್ ಆಪರೇಟರ್(increment arithmetic operator) 1 ರಿಂದ ಹೆಚ್ಚಿಸುತ್ತದೆ. ನಾವು ಇದನ್ನು ನಂತರ ಕಲಿಯುವೆವು. |
03:05 | ಇವುಗಳನ್ನು ಸರಿಯಾಗಿ ಅಭ್ಯಾಸ ಮಾಡಿ, ಚೆನ್ನಾಗಿ ಕಲಿತುಕೊಳ್ಳಿ. |
03:09 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ...........
ಧನ್ಯವಾದಗಳು. |