Arduino/C2/Overview-of-Arduino/Kannada
Time | Narration |
00:01 | ಆರ್ಡೀನೊವಿನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ವಿವಿಧ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಅವುಗಳ ಸಂಪರ್ಕಗಳು ಮತ್ತು ಈ ಸರಣಿಯಲ್ಲಿ ಲಭ್ಯವಿರುವ ವಿವಿಧ ಟ್ಯುಟೋರಿಯಲ್ ಗಳ ವಿಷಯಗಳನ್ನು ಕಲಿಯಲಿದ್ದೇವೆ. |
00:19 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಬಳಸುತ್ತಿದ್ದೇನೆ. |
00:26 | ನಾವು ಈ ಸರಣಿಯಲ್ಲಿ ಬೇಸಿಕ್ ಮತ್ತು ಇಂಟರ್ ಮೀಡಿಯೇಟ್ ಮಟ್ಟದ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇವೆ. |
00:32 | ಬೇಸಿಕ್ ಮಟ್ಟದ ಸರಣಿಯನ್ನು ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು ಸರ್ಕಿಟ್ ಗಳ ಜ್ಞಾನವನ್ನು ಹೊಂದಿರಬೇಕು. |
00:38 | ಇಂಟರ್ ಮೀಡಿಯೇಟ್ ಲೆವೆಲ್ ಗೆ ನೀವು ಅಸೆಂಬ್ಲಿ ಮತ್ತು C ಪ್ರೋಗ್ರಾಮಿಂಗ್ ಲೆವೆಲ್ ಗಳ ಜ್ಞಾನ ಹೊಂದಿರಬೇಕು. |
00:45 | ಎಲೆಕ್ಟ್ರಾನಿಕ್ ಘಟಕಗಳೊಂದಿಗೆ ಪ್ರಯೋಗ ಮಾಡಲು ಇಷ್ಟ ಇರುವ ಯಾರೂ ಸಹ ಆರ್ಡೀನೊವನ್ನು ಬಳಸಬಹುದು. |
00:54 | ಉದಾಹರಣೆಗೆ: ಕ್ರಿಯಾಶೀಲತೆಯಲ್ಲಿ ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳು ಅಥವಾ ಹಾರ್ಡ್ ವೇರ್ ವೃತ್ತಿಪರರು ಅಥವಾ ವ್ಯಕ್ತಿಗಳು. |
01:06 | ಈಗ ನಾವು ಸಂಕ್ಷಿಪ್ತವಾಗಿ ಈ ಸರಣಿಯ ಪ್ರತ್ಯೇಕ ಟ್ಯುಟೋರಿಯಲ್ ಗಳ ಮೇಲೆ ಬೆಳಕು ಹರಿಸೋಣ. |
01:12 | ಈ ಸರಣಿಯ ಮೊದಲ ಟ್ಯುಟೋರಿಯಲ್, ವಿವಿದ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಂಪರ್ಕಗಳ ಕುರಿತು ವಿವರಿಸುತ್ತದೆ. |
01:19 | ನಾವಿಲ್ಲಿ ಬ್ರೆಡ್-ಬೋರ್ಡ್ ಮತ್ತು ಇದರ ಅಂತರಿಕ ಸಂಪರ್ಕಗಳು, |
01:24 | ಬ್ರೆಡ್-ಬೋರ್ಡ್ ನಲ್ಲಿ ಎಲ್.ಇ.ಡಿ, ಪುಶ್ ಬಟನ್ ಮತ್ತು ಬ್ರಾಡ್-ಬ್ಯಾಂಡ್ ನಲ್ಲಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕಲಿಯಲಿದ್ದೇವೆ. |
01:33 | ಜೊತೆಗೆ, ಸಂಪರ್ಕ ಮಾಡಲು ಬ್ರೆಡ್-ಬೋರ್ಡ್, ಎಲ್.ಇ.ಡಿ ಮತ್ತು ಪುಶ್ ಬಟನ್ ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳ ಕುರಿತು ನಾವು ಕಲಿಯಲಿದ್ದೇವೆ. |
01:43 | ಈ ಟ್ಯುಟೋರಿಯಲ್ ನ ಮಿಂಚುನೋಟ ಇಲ್ಲಿದೆ.
________@01:47, add audio of tutorial Electronic components and connections from 00:23 to 00:46 ________ |
02:11 | ಈ ಸರಣಿಯ ಮುಂದಿನ ಟ್ಯುಟೋರಿಯಲ್:
ಆರ್ಡೀನೊ ಸಾಧನ, |
02:17 | ಆರ್ಡೀನೊವಿನ ಗುಣಲಕ್ಷಣಗಳು,
ಆರ್ಡೀನೊ ಬೋರ್ಡ್ ನ ಘಟಕಗಳು, |
02:22 | ಮೈಕ್ರೋಕಂಟ್ರೋಲರ್ ಗಳು ಮತ್ತು
ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ ಆರ್ಡೀನೊ ಐ.ಡಿ.ಇ ಅಳವಡಿಕೆ ಕಲಿಯಲಿದ್ದೇವೆ. |
02:29 | ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.
________@02:33, add audio of tutorial Introduction of Arduino from 02:35 to 02:59 __________ |
02:58 | ಮುಂದಿನ ಟ್ಯುಟೋರಿಯಲ್, ಆರ್ಡೀನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ. |
03:03 | ಇದು ನಮಗೆ:
ಆರ್ಡೀನೊ ಮತ್ತು ಕಂಪ್ಯೂಟರ್ ನಡುವೆ ಹೇಗೆ ಭೌತಿಕ ಸಂಪರ್ಕವನ್ನು ಏರ್ಪಡಿಸುವುದು, |
03:10 | ಆರ್ಡೀನೊ ಬೋರ್ಡ್ ನಲ್ಲಿ ಲಭ್ಯವಿರುವ ವಿವಿಧ ಪಿನ್ ಗಳು ಮತ್ತು ಆರ್ಡೀನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲು ಸಹಕರಿಸಲಿದೆ. |
03:17 | ಈ ಟ್ಯುಟೋರಿಯಲ್ ನ ಮೇಲೆ ನಾವು ಬೆಳಕು ಹರಿಸೋಣ.
_________@03:20, add audio of tutorial Arduino Components and IDE from 00:59 to 01:28 _________ |
03:50 | ಮುಂದಿನ ಟ್ಯುಟೋರಿಯಲ್, ಮೊದಲ ಆರ್ಡೀನೊ ಪ್ರೋಗ್ರಾಂ ಕುರಿತಾಗಿದೆ. |
03:54 | ಇಲ್ಲಿ ನಾವು ಸರಳ ಆರ್ಡೀನೊ ಪ್ರೋಗ್ರಾಂ ಬರೆಯಲು, |
03:59 | ಪ್ರೋಗ್ರಾಂ ಅನ್ನು ಸಂಕಲಿಸಲು ಮತ್ತು ಅಪ್ಲೋಡ್ ಮಾಡಲು ಮತ್ತು |
04:02 | ಎಲ್.ಇ.ಡಿ ಮಿನುಗಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
04:06 | ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.
__________@04:09, Add audio of First Arduino Program tutorial from 04:04 to 04:26 ___________ |
04:33 | ಮುಂದಿನ ಟ್ಯುಟೋರಿಯಲ್, ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆಗಿನ ಆರ್ಡೀನೊ ಕುರಿತಾಗಿದೆ. |
04:38 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡೀನೊ ಬೋರ್ಡ್ ಗೆ ಟ್ರೈಕಲರ್ ಎಲ್.ಇ.ಡಿ ಸಂಪರ್ಕಿಸಲು, |
04:45 | ಟ್ರೈಕಲ್ ಎಲ್.ಇ.ಡಿ ಮಿನುಗಲು ಪ್ರೋಗ್ರಾಂ ಬರೆಯಲು ಮತ್ತು |
04:48 | ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸುವುದುನ್ನು ಕಲಿಯಲಿದ್ದೇವೆ. |
04:53 | ನಾವೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ.
____________@04:56, add audio of Arduino with Tricolor LED and Push button from 05:56 to 06:08 ________ |
05:10 | ಮುಂದಿನ ಟ್ಯುಟೋರಿಯಲ್, ಆರ್ಡೀನೊವನ್ನು ಎಲ್.ಸಿ.ಡಿ ಜೊತೆ ಇಂಟರ್ ಫೇಸಿಂಗ್ ಮಾಡುವುದು. |
05:15 | ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡೀನೊ ಬೋರ್ಡ್ ಜೊತೆ ಸಂಪರ್ಕಿಸಲು ಮತ್ತು
ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಸಂದೇಶವನ್ನು ಪ್ರದರ್ಶಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
05:27 | ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.
_________@05:30 add audio of Arduino with LCD tutorial from 01:09 to 01:28 __________
|
05:50 | ಮುಂದಿನ ಟ್ಯುಟೋರಿಯಲ್, ಆರ್ಡೀನೊ ಬಳಸಿ ಡಿಸ್ಪ್ಲೇ ಕೌಂಟರ್ ಮಾಡುವುದಾಗಿದೆ. |
05:56 | ಇಲ್ಲಿ ನಾವು: ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು |
06:04 | ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
06:10 | ಈ ಟ್ಯುಟೋರಿಯಲ್ ನತ್ತ ಬೆಳಕು ಹರಿಸೋಣ.
________@06:13, Add audio of Display counter using Arduino tutorial from 00:47 to 01:05_____
|
06:32 | ಮುಂದಿನ ಟ್ಯುಟೋರಿಯಲ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತಾಗಿದೆ. |
06:36 | ಇದು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು |
06:42 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4 ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಸುತ್ತದೆ. |
06:50 | ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.
__________@06:53, Add audio of Seven Segment Display tutorial from 01:08 to 01:26_________
|
07:12 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
07:17 | ಈ ಟ್ಯುಟೋರಿಯಲ್ ನಲ್ಲಿ, ವಿವಿಧ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಅವುಗಳ ಸಂಪರ್ಕಗಳು ಮತ್ತು ಈ ಸರಣಿಯ ಟ್ಯುಟೋರಿಯಲ್ ನಲ್ಲಿ ಲಭ್ಯವಿರುವ ವಿಷಯಗಳ ಕುರಿತು ಬೆಳಕು ಹರಿಸಿದೆವು. |
07:29 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
07:37 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:46 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. |
07:53 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
08:00 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
08:04 | ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. |
08:08 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
08:13 | ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ. ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
08:21 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.
|
8.34 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |