Java/C3/Static-Blocks/Kannada

From Script | Spoken-Tutorial
Revision as of 20:09, 18 May 2020 by Sandhya.np14 (Talk | contribs)

Jump to: navigation, search
Time Narration
00:01 Static blocks ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು:

Static ಬ್ಲಾಕ್ ಗಳು ಎಂದರೇನು,

00:10 ಅವುಗಳನ್ನು ಡಿಕ್ಲೇರ್ ಮಾಡುವ ಮತ್ತು ಬಳಸುವ ವಿಧಾನದ ಬಗ್ಗೆ ಕಲಿಯಲಿದ್ದೇವೆ.
00:16 ಇಲ್ಲಿ ನಾವು ಉಬಂಟು 14.04, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುವೆವು.
00:26 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:34 ಅಲ್ಲದೆ ಜಾವಾದಲ್ಲಿ instance ವೇರಿಯೇಬಲ್ ಗಳು, static ವೇರಿಯೇಬಲ್ ಗಳು ಮತ್ತು static ಮೆಥಡ್ ಗಳ ಬಗ್ಗೆ ಸಹ ತಿಳಿದಿರಬೇಕು.
00:43 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:48 ನಾವೀಗ static ಬ್ಲಾಕ್ಗಳ ಕುರಿತು ಕಲಿಯೋಣ.
00:52 Static ಬ್ಲಾಕ್ ಅನ್ನು ಹೆಚ್ಚಿನದಾಗಿ static ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಬಳಸಲಾಗುತ್ತದೆ.
00:59 static ಬ್ಲಾಕ್ ಅನ್ನು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
01:03 ಮೆಮರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ static ಬ್ಲಾಕ್ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
01:08 ಪ್ರೋಗ್ರಾಂನಲ್ಲಿ static ಬ್ಲಾಕ್ ಗಳಿದ್ದರೆ, constructor ಗಳ ಮೊದಲು ಅವುಗಳನ್ನು ಇನ್ವೋಕ್ ಮಾಡಲಾಗುತ್ತದೆ.
01:14 ನಾವು static ಬ್ಲಾಕ್ ನ ಒಳಗೆ instance ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲ.
01:19 ಈಗ ನಾವು Eclipse ಗೆ ಬದಲಾಯಿಸೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ.
01:26 ಈ ಪ್ರಾಜೆಕ್ಟ್ ನ ಒಳಗೆ, Static ಬ್ಲಾಕ್ಗಳ ಬಳಕೆಯನ್ನು ವಿವರಿಸಲು ಅಗತ್ಯವಿರುವ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
01:33 src ಫೋಲ್ಡರ್ ನ ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ.
01:38 ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:44 ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
01:49 ಗಮನಿಸಿ, ಇಲ್ಲಿ count ಮತ್ತು orgname ಎಂಬ ಎರಡು static ವೇರಿಯೇಬಲ್ಗಳು ಇವೆ.
01:54 ಈಗ Source ಮೇಲೆ ಕ್ಲಿಕ್ ಮಾಡಿ, Generate Constructor using Fields ಆರಿಸಿ.
02:00 ಈಗ ತಯಾರಾದ ಕೋಡ್ನಿಂದ, super ಕೀವರ್ಡ್ ಅನ್ನು ಡಿಲೀಟ್ ಮಾಡಿ.
02:04 constructor ಅನ್ನು ಇನ್ವೋಕ್ ಮಾಡಿದಾಗಲೆಲ್ಲ, ಒಂದು ಮೆಸೇಜ್ ಪ್ರಿಂಟ್ ಆಗಬೇಕು.
02:09 “Constructor invoked” ಎಂದು ಪ್ರಿಂಟ್ ಮಾಡಲು, constructor ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ.
02:15 ಈಗ ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, ನಾವು ಈ ಕ್ಲಾಸಿಗೆ showData( ) ಮೆಥಡ್ ಅನ್ನು ಸೇರಿಸುವೆವು.
02:21 ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:23 ಈಗ, count ಮತ್ತು orgname ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, static ಬ್ಲಾಕ್‌ ಅನ್ನು ಸೇರಿಸುವೆವು.
02:29 ಈ ಕೋಡ್‌ ಅನ್ನು ಟೈಪ್‌ ಮಾಡಿ.
02:32 orgname ಮತ್ತು count ವೇರಿಯೇಬಲ್‌ ಗಳು static ವೇರಿಯೇಬಲ್‌ ಗಳಾಗಿವೆ.
02:36 static ಕೀವರ್ಡ್ ನಿಂದ ಆರಂಭವಾಗಿ, ಕರ್ಲಿ ಬ್ರ್ಯಾಕೆಟ್ಸ್ ಒಳಗೆ ಇರುವ ಕೋಡ್ ನ ಈ ಬ್ಲಾಕ್, static ಬ್ಲಾಕ್ ಆಗಿದೆ.
02:42 static ಬ್ಲಾಕ್, count ಮತ್ತು orgname ನ ವ್ಯಾಲ್ಯೂಗಳನ್ನು 100 ಮತ್ತು IITM ಎಂದು ಇನಿಶಿಯಲೈಸ್ ಮಾಡುತ್ತದೆ.
02:51 static ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ.
02:58 ಈಗ ನಾವು main() ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸುವೆವು.
03:03 ಇದಕ್ಕಾಗಿ default package ಮೇಲೆ ರೈಟ್-ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
03:11 ಈ ಕ್ಲಾಸ್ ಒಳಗೆ main() ಮೆಥಡ್ ಇರುವುದು.
03:15 main ಎಂದು ಟೈಪ್ ಮಾಡಿ ಮತ್ತು main() ಮೆಥಡ್ ಅನ್ನು ರಚಿಸಲು Ctrl+space ಒತ್ತಿ.
03:21 ನಾವೀಗ StudentEnroll ಕ್ಲಾಸ್ ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ.
03:25 s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
03:29 ಈಗ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, showData() ಮೆಥಡ್ ಅನ್ನು ಇನ್ವೋಕ್ ಮಾಡೋಣ.
03:33 s1.showData() semicolon ಎಂದು ಟೈಪ್ ಮಾಡಿ.
03:38 ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
03:41 ಕನ್ಸ್ಟ್ರಕ್ಟರ್ನ ಮೊದಲು static ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ನೋಡಬಹುದು.
03:46 count ಮತ್ತು orgname ನ ವ್ಯಾಲ್ಯೂಗಳು, static ಬ್ಲಾಕ್ನಲ್ಲಿ ಹೇಳಿದಂತೆ ಇನಿಶಿಯಲೈಸ್ ಆಗುತ್ತವೆ.
03:53 ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ.
03:57 static ಬ್ಲಾಕ್ನ ಒಳಗೆ id ಯ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ.
04:03 static ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ.
04:10 ಇಲ್ಲಿ ಎರರ್ ಸಿಗುತ್ತದೆ.
04:13 instance ವೇರಿಯೇಬಲ್ ಅನ್ನು static ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ತೋರಿಸುತ್ತದೆ.
04:19 ನಾವೀಗ ಈ ಸಾಲನ್ನು ಕಮೆಂಟ್ ಮಾಡಿ ಮುಂದುವರಿಯೋಣ.
04:25 ಈಗ ಸ್ಲೈಡ್ ಗಳಿಗೆ ಹಿಂದಿರುಗೋಣ.
04:27 ಒಂದು ಕ್ಲಾಸ್ ನಲ್ಲಿ, ಅನೇಕ static ಬ್ಲಾಕ್ಗಳು ಇರಬಹುದು.
04:30 ಇಂತಹ ಸಂದರ್ಭದಲ್ಲಿ, ಅವುಗಳು ಮೂಲ ಕೋಡ್ನಲ್ಲಿ ಇರುವ ಕ್ರಮದಲ್ಲಿ, ಒಮ್ಮೆ ಮಾತ್ರ ಕಾಲ್ ಮಾಡಲಾಗುತ್ತದೆ.
04:37 ಇದನ್ನು ಪರಿಶೀಲಿಸಲು Eclipse ಗೆ ಬದಲಾಯಿಸೋಣ.
04:40 ಈಗ ಇರುವುದರ ಜೊತೆಗೆ ಇನ್ನೊಂದು static ಬ್ಲಾಕ್ ಅನ್ನು ಸೇರಿಸೋಣ.
04:45 ಈ ಕೋಡ್ ಅನ್ನು ಟೈಪ್ ಮಾಡಿ.
04:47 static ಬ್ಲಾಕ್, count ಮತ್ತು orgname ಗಳ ವ್ಯಾಲ್ಯೂವನ್ನು ಕ್ರಮವಾಗಿ 200 ಮತ್ತು IITB ಎಂದು ಇನಿಶಿಯಲೈಸ್ ಮಾಡುತ್ತದೆ.
04:57 static ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
05:01 ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
05:04 ಎರಡನೇ static ಬ್ಲಾಕ್ ಅನ್ನು, ಮೊದಲಿನ ಬ್ಲಾಕ್ ನಂತರ ಇನ್ವೋಕ್ ಮಾಡಲಾಗಿದೆ ಎಂದು ಈ ಔಟ್ಪುಟ್ ನಿಂದ ತಿಳಿಯಬಹುದು.
05:10 count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಎರಡನೇ static ಬ್ಲಾಕ್ ಅಪ್ಡೇಟ್ ಮಾಡುತ್ತದೆ.
05:18 ಅವುಗಳು ಕ್ರಮವಾಗಿ 200 ಮತ್ತು IITB ಆಗಿವೆ.
05:22 ಸಂಕ್ಷಿಪ್ತವಾಗಿ,
05:24 ಈ ಟ್ಯುಟೋರಿಯಲ್ ನಲ್ಲಿ ನಾವು:

static ಬ್ಲಾಕ್ ಎಂದರೇನು, static ಬ್ಲಾಕ್ ಅನ್ನು ಹೇಗೆ ಡಿಕ್ಲೇರ್ ಮತ್ತು ಡಿಫೈನ್ ಮಾಡುವುದು, static ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮತ್ತು ಎಕ್ಸಿಕ್ಯೂಟ್ ಮಾಡುವುದೆಂದು ಕಲಿತೆವು.

05:37 ಅಸೈನ್ಮೆಂಟ್ಗಾಗಿ, ಇಲ್ಲಿ static ಮೆಥಡ್ಗಳ ಅಸೈನ್ಮೆಂಟ್ ಅನ್ನೇ ಮುಂದುವರಿಸುತ್ತಿದ್ದೇವೆ.
05:44 ನೀವು static ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ.
05:48 ಹಿಂದೆ ಮಾಡಿದ ಹಾಗೆ, ಈ ಸ್ಲೈಡ್ನಲ್ಲಿ ಹೇಳಿದಂತೆ CarService ಕ್ಲಾಸ್ ಅನ್ನು ರಚಿಸಿ.
05:54 instance ವೇರಿಯೇಬಲ್ಗಳು ಮತ್ತು static ವೇರಿಯೇಬಲ್ಗಳನ್ನು ಗುರುತಿಸಿ.
05:58 instance ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, constructor ಒಂದನ್ನು ತಯಾರಿಸಿ.
06:03 static ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, static ಬ್ಲಾಕ್ ಅನ್ನು ಡಿಫೈನ್ ಮಾಡಿ.
06:08 ಜೊತೆಗೆ main() ಮೆಥಡ್ ಅನ್ನು ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ.
06:12 main() ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ.
06:19 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
06:24 ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
06:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
06:35 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
06:39 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
06:46 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
06:50 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
06:58 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14