Java/C3/Polymorphism/Kannada
Time | Narration |
00:01 | ಜಾವಾದಲ್ಲಿ Polymorphism (ಪಾಲಿಮಾರ್ಫಿಸಂ) ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಜಾವಾದಲ್ಲಿ ಪಾಲಿಮಾರ್ಫಿಸಂ, ರನ್-ಟೈಂ ಪಾಲಿಮಾರ್ಫಿಸಂ, ವರ್ಚುವಲ್ ಮೆಥಡ್ ಇನ್ವೊಕೇಶನ್ ಮತ್ತು ಕಂಪೈಲ್-ಟೈಂ ಪಾಲಿಮಾರ್ಫಿಸಂ ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:19 | ಇಲ್ಲಿ ನಾವು,
ಉಬಂಟು ಲಿನಕ್ಸ್ ಆವೃತ್ತಿ 12.04, JDK ಆವೃತ್ತಿ 1.7 ಮತ್ತು Eclipse 4.3.1 ಬಳಸುತ್ತಿದ್ದೇವೆ. |
00:31 | ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು, ನೀವು ಜಾವಾ ಮತ್ತು Eclipse IDE ಗಳ (ಎಕ್ಲಿಪ್ಸ್ ಐ.ಡಿ.ಇ) ಬಗ್ಗೆ ತಿಳಿದಿರಬೇಕು. |
00:37 | ಸಬ್-ಕ್ಲಾಸಿಂಗ್ ಮತ್ತು ಮೆಥಡ್ ಓವರ್-ರೈಡಿಂಗ್ ಹಾಗೂ ಓವರ್-ಲೋಡಿಂಗ್ ಗಳ ಬಗ್ಗೆ ಸಹ ತಿಳಿದಿರಬೇಕು. |
00:43 | ಇಲ್ಲದಿದ್ದರೆ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ. |
00:48 | ಪಾಲಿಮಾರ್ಫಿಸಂ ಎಂದರೆ, ಒಂದು ಅಬ್ಜೆಕ್ಟ್, ಅನೇಕ ರೂಪಗಳನ್ನು ಹೊಂದಬಲ್ಲ ಸಾಮರ್ಥ್ಯವಾಗಿದೆ. |
00:54 | ಪಾಲಿಮಾರ್ಫಿಸಂನ ಪ್ರಮುಖ ಲಾಭಗಳೆಂದರೆ:
ಸಂಕೀರ್ಣತೆಯನ್ನು ಕಡಿಮೆ ಮಾಡುವುದು ಮತ್ತು ಕೋಡ್ ಅನ್ನು ಮತ್ತೆ ಬಳಸುವ ಸಾಧ್ಯತೆ. |
01:03 | ಜಾವಾದಲ್ಲಿ ಕಂಪೈಲ್-ಟೈಂ ಮತ್ತು ರನ್-ಟೈಂ ಪಾಲಿಮಾರ್ಫಿಸಂ ಎಂಬ ಎರಡು ವಿಧದ ಪಾಲಿಮಾರ್ಫಿಸಂ ಇವೆ. |
01:11 | ‘ಕಂಪೈಲ್-ಟೈಂ ಪಾಲಿಮಾರ್ಫಿಸಂ’ ಅನ್ನು ಮುಖ್ಯವಾಗಿ ‘ಮೆಥಡ್ ಓವರ್-ಲೋಡಿಂಗ್’ ಎಂದು ಹೇಳಲಾಗುತ್ತದೆ. ಇದನ್ನು ‘ಸ್ಟಾಟಿಕ್ ಬೈಂಡಿಂಗ್’ ಎಂದು ಸಹ ಕರೆಯಲಾಗುತ್ತದೆ. |
01:20 | ‘ರನ್-ಟೈಂ ಪಾಲಿಮಾರ್ಫಿಸಂ’ ಅನ್ನು ಮುಖ್ಯವಾಗಿ ‘ಮೆಥಡ್ ಓವರ್-ರೈಡಿಂಗ್’ ಎಂದು ಹೇಳಲಾಗುತ್ತದೆ. ಇದನ್ನು ‘ಡೈನಾಮಿಕ್ ಬೈಂಡಿಂಗ್’ ಎಂದು ಸಹ ಕರೆಯಲಾಗುತ್ತದೆ. |
01:29 | ನಾವು ಈಗಾಗಲೇ ರನ್-ಟೈಂ ಪಾಲಿಮಾರ್ಫಿಸಂ ಎಂದರೆ ಮೆಥಡ್ ಓವರ್-ರೈಡಿಂಗ್ ಬಗ್ಗೆ ಕಲಿತಿದ್ದೇವೆ. |
01:35 | ಈಗ ಎಕ್ಲಿಪ್ಸ್ ಐ.ಡಿ.ಇ ಗೆ ಬದಲಾಯಿಸೋಣ. ನಾನು ಹಿಂದಿನ ಟ್ಯುಟೋರಿಯಲ್ ನಲ್ಲಿ, MyProject (ಮೈಪ್ರಾಜೆಕ್ಟ್) ಎಂಬ ಒಂದು ಪ್ರಾಜೆಕ್ಟ್ ಅನ್ನು ರಚಿಸಿದ್ದೇನೆ. |
01:44 | Using final keyword ಎಂಬ ಟ್ಯುಟೋರಿಯಲ್ ನ ಕೋಡ್ ಫೈಲ್ ಗಳನ್ನು ನಾವು ಬಳಸೋಣ. |
01:49 | ಇಲ್ಲಿ Employee ಕ್ಲಾಸ್, ಪೇರೆಂಟ್ ಕ್ಲಾಸ್ ಆಗಿದೆ |
01:52 | ಮತ್ತು Manager ಕ್ಲಾಸ್ ಸಬ್- ಕ್ಲಾಸ್ ಆಗಿದೆ. |
01:55 | Manager ಕ್ಲಾಸ್, department ಎಂಬ ಇನ್ನೊಂದು ವೇರಿಯೇಬಲ್ ಅನ್ನು ಹೊಂದಿದೆ. |
02:01 | Manager ಕ್ಲಾಸ್ ನ ಮೆಥಡ್ getDetails(), Employee ಕ್ಲಾಸ್ ನ ಮೆಥಡ್ getDetails() ಅನ್ನು ಓವರ್-ರೈಡ್ ಮಾಡುತ್ತದೆ. |
02:08 | Manager ಕ್ಲಾಸ್ ನ ಅಬ್ಜೆಕ್ಟ್, ಅಂದರೆ Manager ನಿಂದ ನಾವು getDetails() ಮೆಥಡ್ ಅನ್ನು ಕಾಲ್ ಮಾಡುತ್ತೇವೆ. |
02:16 | ವಿವರಗಳನ್ನು ಪ್ರಿಂಟ್ ಮಾಡಲು, ಹೀಗೆ ಟೈಪ್ ಮಾಡಿ:
system.out.println Details of Manager Class |
02:28 | ಪ್ರೋಗ್ರಾಂ ಅನ್ನು ಸೇವ್ ಮಾಡಿ, ರನ್ ಮಾಡಿ. ನಾವು ಔಟ್ಪುಟ್ ನಲ್ಲಿ department ವೇರಿಯೇಬಲ್ ವ್ಯಾಲ್ಯೂಅನ್ನು ನೋಡಬಹುದು. |
02:37 | ಆದ್ದರಿಂದ ರನ್ ಟೈಂನಲ್ಲಿ, ಸಬ್ ಕ್ಲಾಸ್ ಮೆಥಡ್ ಅನ್ನು ಇನ್ವೋಕ್ (ಜಾರಿ) ಮಾಡಲಾಗಿದೆ. |
02:42 | ಮೆಥಡ್ ನ ಇನ್ವೊಕೇಶನ್ ಅನ್ನು JVM (ಜೆ.ವಿ.ಎಂ) ನಿಂದ ನಿರ್ಣಯಿಸಲಾಗುತ್ತದೆ, ಕಂಪೈಲರ್ ನಿಂದ ಅಲ್ಲ. |
02:48 | ಹೀಗಾಗಿ ಇದನ್ನು ರನ್-ಟೈಂ ಪಾಲಿಮಾರ್ಫಿಸಂ ಅಥವಾ ಮೆಥಡ್ ಓವರ್-ರೈಡಿಂಗ್ ಎನ್ನಲಾಗುತ್ತದೆ. |
02:55 | ರನ್ ಟೈಂ ಪಾಲಿಮಾರ್ಫಿಸಂ ಬಗ್ಗೆ ನಾವು ಕಲಿತೆವು. |
02:58 | ನಾವೀಗ ವರ್ಚುವಲ್ ಮೆಥಡ್ ಇನ್ವೊಕೇಶನ್ ಬಗ್ಗೆ ಕಲಿಯೋಣ. |
03:03 | Eclipse IDE ಯಲ್ಲಿ, Employee ಕ್ಲಾಸ್ಗೆ ಬನ್ನಿ. |
03:07 | ವೇರಿಯೇಬಲ್ ನೇಮ್ ನಲ್ಲಿ, static ಮತ್ತು final ಕೀವರ್ಡ್ ಗಳನ್ನು ತೆಗೆದುಬಿಡಿ. |
03:13 | setName ಮೆಥಡ್ ಅನ್ನು ಅನ್-ಕಾಮೆಂಟ್ ಮಾಡಿ. |
03:16 | static ಬ್ಲಾಕ್ ಅನ್ನು ತೆಗೆದುಬಿಡಿ. ಫೈಲ್ ಅನ್ನು ಸೇವ್ ಮಾಡಿ. |
03:21 | TestEmployee ಕ್ಲಾಸ್ ಗೆ ಬನ್ನಿ. ವ್ಯಾಲ್ಯೂ ಇನ್ಸ್ಟೆನ್ಸ್ manager.setName(“Nikkita Dinesh”); ಅನ್ನು ಅನ್-ಕಾಮೆಂಟ್ ಮಾಡಿ. |
03:31 | Employee ಕ್ಲಾಸ್ ನಲ್ಲಿ setName() ಮೆಥಡ್ ಅನ್ನು ನಾವು ಅನ್-ಕಮೆಂಟ್ ಮಾಡಿದ್ದರಿಂದ, ಈ ಇನ್ಸ್ಟನ್ಸ್ ಅನ್ನು ಅನ್-ಕಮೆಂಟ್ ಮಾಡಿದ್ದೇವೆ. |
03:38 | ನಾವೀಗ Employee ಕ್ಲಾಸ್ ರೆಫರನ್ಸ್ ಗಾಗಿ, Employee ಅಬ್ಜೆಕ್ಟ್ emp1 ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ. |
03:46 | Employee emp1 = new Employee open and close parenthesis semicolon ಎಂದು ಟೈಪ್ ಮಾಡಿ. |
03:57 | ನಾವೀಗ Employee ಕ್ಲಾಸ್ ಗಾಗಿ setEmail ಮತ್ತು setName ಗಾಗಿ ಮೌಲ್ಯವನ್ನು ಇನಿಶಿಯಲೈಸ್ ಮಾಡೋಣ. |
04:03 | ಹೀಗೆ ಟೈಪ್ ಮಾಡಿ: emp1.setName("Jayesh");
emp1.setEmail("pqr@gmail.com"); |
04:16 | ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಲು ಹೀಗೆ ಟೈಪ್ ಮಾಡಿ:
System.out.println("Details of Employee class:" emp1.getDetails()) semicolon. |
04:37 | Employee ಕ್ಲಾಸ್ ರೆಫರೆನ್ಸ್ ಗಾಗಿ, Manager ಅಬ್ಜೆಕ್ಟ್ emp2 ಅನ್ನು ನಾವು ಇನ್ಸ್ಟಾಂಶಿಯೇಟ್ ಮಾಡೋಣ.
ಅಂದರೆ, Employee emp2 = new Manager open and close parenthesis semicolon ಎಂದು ಟೈಪ್ ಮಾಡಿ. |
04:54 | ನಾವಿದನ್ನು ಮಾಡಲು ಸಾಧ್ಯ. ಏಕೆಂದರೆ, ಒಂದಕ್ಕಿಂತ ಹೆಚ್ಚು IS-A ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಯಾವುದೇ ಜಾವಾ ಅಬ್ಜೆಕ್ಟ್,ಪಾಲಿಮಾರ್ಫಿಕ್ ಆಗಿರುತ್ತದೆ. |
05:04 | ಜಾವಾದಲ್ಲಿ ಎಲ್ಲಾ ಅಬ್ಜೆಕ್ಟ್ ಗಳು ಪಾಲಿಮಾರ್ಫಿಕ್ ಆಗಿರುತ್ತವೆ. ಏಕೆಂದರೆ ಯಾವುದೇ ಅಬ್ಜೆಕ್ಟ್, ಇಲ್ಲಿ ತನ್ನ ಸ್ವಂತದ ಟೈಪ್ ಮತ್ತು ಕ್ಲಾಸ್ ಅಬ್ಜೆಕ್ಟ್ಗಾಗಿ IS-A ಟೆಸ್ಟ್ ಅನ್ನು ಪಾಸ್ ಮಾಡುತ್ತದೆ. |
05:16 | Manager IS-A Employee.
Manager IS-A ಮ್ಯಾನೇಜರ್. Manager IS-A ಅಬ್ಜೆಕ್ಟ್. |
05:23 | ರೆಫರನ್ಸ್ ವೇರಿಯಬಲ್ ಮೂಲಕ ಮಾತ್ರ ಯಾವುದೇ ಅಬ್ಜೆಕ್ಟ್ ಅನ್ನು ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ. |
05:29 | emp1, emp2 ಮತ್ತು manager ನಂತಹ ರೆಫರನ್ಸ್ ವೇರಿಯಬಲ್ ಗಳು. |
05:36 | ಇಲ್ಲಿ ನಾವು ಎರಡು manager ಅಬ್ಜೆಕ್ಟ್ ಗಳನ್ನು ಇನ್ಸ್ಟಾಂಶಿಯೇಟ್ ಮಾಡಿದ್ದೇವೆ:
ಒಂದು Employee ಕ್ಲಾಸ್ ಅನ್ನು ರೆಫರನ್ಸ್ ಮಾಡುತ್ತದೆ. ಇನ್ನೊಂದು manager ಕ್ಲಾಸ್ ಅನ್ನು ರೆಫರನ್ಸ್ ಮಾಡುತ್ತದೆ. |
05:47 | ನಾವು emp2 ಅಬ್ಜೆಕ್ಟ್ ಅನ್ನು ಬಳಸಿ, setEmail, setName ಮತ್ತು setDepartment ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡೋಣ. |
05:55 | ಹೀಗೆ ಟೈಪ್ ಮಾಡಿ:
emp2.setName("Ankita"); emp2.setEmail(“xyz@gmail.com”); emp2.setDepartment(“IT”); |
06:14 | ನಾವು ಇಲ್ಲಿ, "The method setDepartment(String) is undefined for the type Employee" ಎಂಬ ಒಂದು ಎರರ್ ಅನ್ನು ನೋಡುತ್ತೇವೆ. |
06:23 | ಏಕೆಂದರೆ, Employee ಕ್ಲಾಸ್ ಗಾಗಿ, setDepartment ಮೆಥಡ್ ಅಸ್ತಿತ್ವದಲ್ಲಿಲ್ಲ. |
06:30 | ಹೀಗಾಗಿ ಈ ಕೆಳಗಿನ ಸಾಲನ್ನು ತೆಗೆದುಬಿಡಿ:
emp2.setDepartment("IT"); |
06:37 | ವಿವರಗಳನ್ನು ಪ್ರಿಂಟ್ ಮಾಡಲು, ಹೀಗೆ ಟೈಪ್ ಮಾಡಿ:
System.out.println("Details of Manager class:" emp2.getDetails()) semicolon |
06:55 | ಪ್ರೋಗ್ರಾಂ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. |
06:58 | ಇಲ್ಲಿ ಔಟ್ಪುಟ್ ನಲ್ಲಿ, Manager of: ಖಾಲಿ ಇದೆ. |
07:04 | ಏಕೆಂದರೆ, manager ಕ್ಲಾಸ್ ನಲ್ಲಿ ನಾವು emp2 ಬಳಸಿ Department ಅನ್ನು ಇನಿಶಿಯಲೈಸ್ ಮಾಡಿಲ್ಲ. |
07:12 | ವಿವರಣೆಗಾಗಿ, ಡಿಫಾಲ್ಟ್ Department IT ಎಂದು ಇರಲಿ. |
07:17 | manager ಕ್ಲಾಸ್ ಗೆ ಹೋಗಿ ಮತ್ತು Department ಗಾಗಿ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಿ. |
07:25 | ಪ್ರೋಗ್ರಾಂ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. |
07:28 | ನಾವು ಈ ಔಟ್ಪುಟ್ ಅನ್ನು ಪಡೆಯುತ್ತೇವೆ: Employee ಅಬ್ಜೆಕ್ಟ್, Employee ಕ್ಲಾಸ್ ಅನ್ನು ರೆಫರ್ ಮಾಡುತ್ತದೆ. |
07:34 | Manager ಅಬ್ಜೆಕ್ಟ್, Employee ಕ್ಲಾಸ್ ಅನ್ನು ರೆಫರ್ ಮಾಡುತ್ತದೆ. ಮತ್ತು Manager ಅಬ್ಜೆಕ್ಟ್, Manager ಕ್ಲಾಸ್ ಅನ್ನು ರೆಫರ್ ಮಾಡುತ್ತದೆ. |
07:42 | ಇಲ್ಲಿ emp2, Manager ಕ್ಲಾಸ್ ನ getDetails() ಮೆಥಡ್ ಅನ್ನು ಕಾಲ್ ಮಾಡುತ್ತದೆ. |
07:49 | ಆದರೆ emp2, setDepartment ಅನ್ನು ಕಾಲ್ ಮಾಡಲು ಯತ್ನಿಸಿದಾಗ, ನಮಗೆ ಎರರ್ ಸಿಕ್ಕಿತ್ತು. |
07:54 | ಇದಕ್ಕೆ ಕಾರಣ ಹೀಗಿದೆ:
emp2.getDetails() ನಲ್ಲಿ ಕಂಪೈಲರ್, Employee ಕ್ಲಾಸ್ ನಲ್ಲಿ getDetails() ಮೆಥಡ್ ಅನ್ನು ನೋಡುತ್ತದೆ. |
08:05 | ಹೀಗಾಗಿ ಇದು ಎರರ್ ಕೊಡುವುದಿಲ್ಲ. ಬದಲಾಗಿ ಕೋಡ್ ಅನ್ನು ಒಪ್ಪಿಕೊಳ್ಳುತ್ತದೆ. |
08:10 | ಆದರೆ ರನ್ ಟೈಂನಲ್ಲಿ JVM, Manager ಕ್ಲಾಸ್ ನಲ್ಲಿ getDetails() ಅನ್ನು ಇನ್ವೋಕ್ ಮಾಡುತ್ತದೆ. ಏಕೆಂದರೆ Manager ಕ್ಲಾಸ್ ನ getDetails(), Employee ಕ್ಲಾಸ್ ನ getDetails() ಅನ್ನು ಓವರ್-ರೈಡ್ ಮಾಡುತ್ತದೆ. |
08:24 | ಹೀಗಾಗಿ, ನಾವು Manager ಕ್ಲಾಸ್ ನ getDetails() ಪ್ರಕಾರ ಔಟ್ಪುಟ್ ಪಡೆಯುತ್ತೇವೆ. ಆದರೆ ಕಂಪೈಲರ್, Employee ಕ್ಲಾಸ್ ನಲ್ಲಿಯ setDepartment() ಮೆಥಡ್ ಅನ್ನು ನೋಡುವುದಿಲ್ಲ. |
08:36 | ಆದ್ದರಿಂದ, emp2, setDepartment() ಅನ್ನು ಕಾಲ್ ಮಾಡಿದಾಗ, ಇದು ಎರರ್ ಅನ್ನು ತೋರಿಸುತ್ತದೆ. |
08:43 | ಇಲ್ಲಿ, Employee ಕ್ಲಾಸ್ ಗಾಗಿ, Employee ಯ ಮೆಥಡ್ getDetails() ಅನ್ನು ಇನ್ವೋಕ್ ಮಾಡಲಾಗುತ್ತದೆ. |
08:49 | emp1.getDetails() ನಲ್ಲಿ, getDetails() ಗಾಗಿ ಕಂಪೈಲರ್, Employee ಕ್ಲಾಸ್ ಅನ್ನು ರೆಫರೆನ್ಸ್ ಮಾಡುತ್ತದೆ. |
08:57 | ರನ್ ಟೈಂ ನಲ್ಲಿ, JVM, Employee ಕ್ಲಾಸ್ ನ getDetails() ಅನ್ನು ಇನ್ವೋಕ್ ಮಾಡುತ್ತದೆ. ಹೀಗಾಗಿ, ನಾವು Employee ಕ್ಲಾಸ್ ನ getDetails() ಪ್ರಕಾರ ಔಟ್ಪುಟ್ ಅನ್ನು ಪಡೆಯುತ್ತೇವೆ. |
09:08 | ಹೀಗೆ, ಪ್ರತಿಯೊಂದು ವೇರಿಯೇಬಲ್ ನಲ್ಲಿ ರೆಫರ್ ಮಾಡಲಾದ ಅಬ್ಜೆಕ್ಟ್ ಗೆ ಸರಿಯಾದ ಮೆಥಡ್ ಅನ್ನು JVM ಕಾಲ್ ಮಾಡುತ್ತದೆ. |
09:16 | ಇದನ್ನು “ವರ್ಚುವಲ್ ಮೆಥಡ್ ಇನ್ವೊಕೇಶನ್” ಎಂದು ಕರೆಯಲಾಗುತ್ತದೆ. |
09:21 | ಈ ಮೆಥಡ್ ಗಳನ್ನು ವರ್ಚುವಲ್ ಮೆಥಡ್ಸ್ ಎಂದು ಹೇಳಲಾಗುತ್ತದೆ. |
09:26 | ಜಾವಾದಲ್ಲಿಯ ಎಲ್ಲಾ ಮೆಥಡ್ ಗಳು ಇದೇ ರೀತಿಯಲ್ಲಿ ವರ್ತಿಸುತ್ತವೆ. |
09:31 | “ವರ್ಚುವಲ್ ಮೆಥಡ್ ಇನ್ವೊಕೇಶನ್” ಬಗ್ಗೆ ನಾವು ತಿಳಿದುಕೊಂಡೆವು. |
09:36 | “ಕಂಪೈಲ್ ಟೈಂ ಪಾಲಿಮಾರ್ಫಿಸಂ”, ಅಂದರೆ, ಮೆಥಡ್ ಓವರ್-ಲೋಡಿಂಗ್ ಬಗ್ಗೆ ನಾವು ಈಗಾಗಲೇ ಕಲಿತಿದ್ದೇವೆ. |
09:42 | ಸಂಕ್ಷಿಪ್ತವಾಗಿ ಈಗ “ಕಂಪೈಲ್ ಟೈಂ ಪಾಲಿಮಾರ್ಫಿಸಂ” ಕುರಿತು ಕಲಿಯೋಣ. |
09:47 | “ಕಂಪೈಲ್ ಟೈಂ ಪಾಲಿಮಾರ್ಫಿಸಂ” ನಲ್ಲಿ, ಕ್ಲಾಸ್ ಒಂದಕ್ಕಿಂತ ಹೆಚ್ಚು ಮೆಥಡ್ ಗಳನ್ನು ಹೊಂದಿರಬಹುದು. |
09:53 | ಈ ಮೆಥಡ್ ಗಳು ಒಂದೇ ಹೆಸರನ್ನು ಹೊಂದಿರುತ್ತವೆ. ಆದರೆ ಆರ್ಗ್ಯುಮೆಂಟ್ ಗಳ ಸಂಖ್ಯೆಯು ಬೇರೆ ಆಗಿರುತ್ತದೆ. |
09:59 | ಕಂಪೈಲ್ ಟೈಂನಲ್ಲಿ, ಕಾಲ್ ಮಾಡಿದ ಮೆಥಡ್ ಅನ್ನು ಕಂಪೈಲರ್ ಗುರುತಿಸುತ್ತದೆ. ಈ ಕಾರಣಕ್ಕಾಗಿ, ಇದನ್ನು “ಕಂಪೈಲ್ ಟೈಂ ಪಾಲಿಮಾರ್ಫಿಸಂ” ಎಂದು ಕರೆಯಲಾಗುತ್ತದೆ. |
10:09 | ಸಂಕ್ಷಿಪ್ತವಾಗಿ, |
10:11 | ಈ ಟ್ಯುಟೋರಿಯಲ್ ನಲ್ಲಿ ನಾವು:
ಜಾವಾ ದಲ್ಲಿ ಪಾಲಿಮಾರ್ಫಿಸಂ ಎಂದರೇನು? ರನ್ ಟೈಂ ಪಾಲಿಮಾರ್ಫಿಸಂ, ವರ್ಚುವಲ್ ಮೆಥಡ್ ಇನ್ವೊಕೇಶನ್ ಮತ್ತು ಕಂಪೈಲ್ ಟೈಂ ಪಾಲಿಮಾರ್ಫಿಸಂ ಕುರಿತು ಕಲಿತೆವು. |
10:23 | ಇಲ್ಲೊಂದು ಅಸೈನ್ ಮೆಂಟ್ ಇದೆ.
ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬಳಸಿದ Vehicle ಮತು Bike ಕ್ಲಾಸ್ ಗಳಿಗಾಗಿ ಮೆಥಡ್ ಗಳನ್ನು ಓವರ್-ರೈಡ್ ಮಾಡಿ. |
10:32 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ಲಿಂಕ್, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ವೀಕ್ಷಿಸಿ. |
10:40 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
10:51 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
11:03 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |