PHP-and-MySQL/C2/Switch-Statement/Kannada

From Script | Spoken-Tutorial
Revision as of 17:09, 19 December 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ. PHP ಯಲ್ಲಿ 'switch' statement ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ನಾನು ಇದರ ಬಗ್ಗೆ ಒಂದು ಹೊಸ ಅಭ್ಯಾಸವನ್ನು ತೋರಿಸುತ್ತೇನೆ. ಏಕೆಂದರೆ, ಇದು PHP ಯ ಒಂದು ಪ್ರಮುಖ ಲಕ್ಷಣವಾಗಿದೆ.
00:13 ನಾವು ಇದರ ಸಿಂಟ್ಯಾಕ್ಸ್ ಅನ್ನು ಬರೆಯೋಣ.
00:16 switch ಸ್ಟೇಟ್ಮೆಂಟ್ ಅನ್ನು, if ಸ್ಟೇಟ್ಮೆಂಟ್ ಗೆ ಬದಲಾಗಿ ಬಳಸುತ್ತೇವೆ. ಇನ್ಪುಟ್ ಒಂದು ಎಕ್ಸ್ಪ್ರೆಶನ್ (expression) ಆಗಿದ್ದರೂ ಸಹ ಇದು ಅಚ್ಚುಕಟ್ಟಾಗಿದೆ ಮತ್ತು ಫಾರ್ಮ್ಯಾಟ್ ಮಾಡಬಹುದಾದ ಆಯ್ಕೆಯಾಗಿದೆ.
00:29 ಈಗ ಯಾವುದೋ ಒಂದು ವ್ಯಾಲ್ಯೂವನ್ನು ಇನ್ಪುಟ್ ಮಾಡೋಣ ಮತ್ತು ನಂತರ ಇದಕ್ಕೆ ಸಮನಾದ ವ್ಯಾಲ್ಯೂವನ್ನು ಸೇವ್ ಮಾಡೋಣ.
00:36 ಅದು ಈ ವ್ಯಾಲ್ಯೂ ಗೆ ಸಮವಾಗಿದ್ದರೆ, ಆಮೇಲೆ ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡಬಹುದು.
00:43 ಇದು ಹೋಲಿಸುವ ತಂತ್ರವಲ್ಲ. ವ್ಯಾಲ್ಯೂಗಳನ್ನು ಮತ್ತು ಇನ್ಪುಟ್ ಅನ್ನು ಅವಲಂಬಿಸಿರುವ ಔಟ್ಪುಟ್ ಅನ್ನು ಹೊಂದಿಸಲು, ಒಂದು if ಸ್ಟೇಟ್ಮೆಂಟ್ ಅನ್ನು ಹೋಲಿಸಲು, ನಾವು switch ಎಂದು ಹೇಳುತ್ತೇವೆ.
00:55 ಈಗ ನಾವು ಆರಂಭಿಸೋಣ.
00:57 ಇದಕ್ಕಾಗಿ switch ಬೇಸಿಕ್ ಕೋಡ್ ಆಗಿದೆ.
01:00 ಇಲ್ಲಿ ನಾವು ಒಂದು ಎಕ್ಸ್ಪ್ರೆಶನ್ ಅನ್ನು (expression) ಸೇರಿಸೋಣ. ಉದಾಹರಣೆಗೆ- ಇಲ್ಲಿ ನಾನು "Alex" ಎನ್ನುತ್ತೇನೆ.
01:09 ನಾವು ಒಂದು ಚಿಕ್ಕ ಪ್ರೊಗ್ರಾಂಅನ್ನು ಬರೆಯೋಣ. ನಾನು ಅದನ್ನು ವಿವರಿಸುತ್ತ ಹೋಗುತ್ತೇನೆ.
01:15 if ಸ್ಟೇಟ್ಮೆಂಟ್ ನ ಹಾಗೆಯೇ, ಇಲ್ಲಿ ನಾವು ಕರ್ಲೀ ಬ್ರ್ಯಾಕೆಟ್ ಗಳನ್ನು ಹಾಕುತ್ತೇವೆ.
01:21 ಈಗ ಪ್ರತಿಯೊಂದು ರೀತಿಯ ಚೆಕ್ ಮಾಡುವ ಬಗೆಯನ್ನು ನೋಡೋಣ.
01:26 ಇಲ್ಲಿ ನಮಗೆ ವ್ಯಾಲ್ಯೂ ಅನ್ನು ಪರಿಶೀಲಿಸಬೇಕಾಗಿದೆ.
01:29 ಈಗ ನಾವು ಇದನ್ನು ಕೊಟೇಶನ್ ಚಿಹ್ನೆಗಳಲ್ಲಿ ಹಾಕುತ್ತೇವೆ.
01:32 ನೀವು ಸಂಖ್ಯೆಯನ್ನು ಕೊಡಲು ಸಹ ಆಗುವದಿಲ್ಲ.
01:35 ಆದ್ದರಿಂದ ಹೀಗೆ ಟೈಪ್ ಮಾಡುತ್ತೇವೆ - case - ನಮಗೆ ಹೊಂದಿಸಬೇಕಾದ case ನ ವ್ಯಾಲ್ಯೂ. ಉದಾಹರಣೆಗೆ- "Alex".
01:44 ನಂತರ ಒಂದು ಕೋಲನ್ ಅಥವಾ ಸೆಮಿಕೋಲನ್.
01:48 ನಂತರ, ನೀವು ಆರಿಸಿಕೊಂಡ switch ಎಕ್ಸ್ಪ್ರೆಶನ್ ನೊಂದಿಗೆ case ಹೊಂದಿಕೆಯಾದರೆ, ಷರತ್ತು (condition) ಟೈಪ್ ಮಾಡುತ್ತೇವೆ.
01:56 ಹೀಗಾಗಿ, ನಾನು ಇದನ್ನು ಟೈಪ್ ಮಾಡುವೆನು - echo "you have blue eyes".
02:05 ನಮ್ಮ case ಹೋಲಿಕೆಯನ್ನು ಕೊನೆಗೊಳಿಸಲು, ನಾವು break ಮತ್ತು ಒಂದು ಸೆಮಿಕೋಲನ್ ಅನ್ನು ಬಳಸುತ್ತೇವೆ.
02:11 ನೆನಪಿಡಿ, ನಾವು ಸೆಮಿಕೋಲನ್ ಅನ್ನು ಇಲ್ಲಿ ಬಳಸಿದ್ದೇವೆ, ಆದರೆ ಇಲ್ಲಿ ಅಲ್ಲ.
02:18 ಈಗ ಎರಡನೆಯ case. ಇದನ್ನು ಹೇಗೆ ಮಾಡುವುದೆಂದು ನೋಡೋಣ.
02:23 ನಾನು "Billy" ಮತ್ತು echo "you have brown eyes" ಎಂದು ಟೈಪ್ ಮಾಡುವೆನು.
02:30 ಸರಿ. ನಂತರ break ಮತ್ತು ಸೆಮಿಕೋಲನ್.
02:36 ಇದು ಇಂಟಿಗ್ರೇಟ್ ಮಾಡಿದ if ನ ಹಾಗೆ ಇದೆ. ಎಂದರೆ, ಇದನ್ನು ನಾನು ಹೀಗೆ ಹೇಳಬಹುದಿತ್ತು - if your name is "Alex", echo "you have blue eyes", else if your name is Billy, "you have brown eyes".
02:53 ಬಹುಶಃ ಕೆಲವರಿಗೆ ಹೀಗೆ ಮಾಡುವುದು ಸುಲಭವಾಗಿದೆ. ಇದನ್ನು ಓದುವುದು ಸುಲಭ, ಆದರೆ ಅವರವರ ಇಷ್ಟ.
03:02 ಸರಿ, ಇಲ್ಲಿ ಇನ್ನುಮುಂದೆ case ಗಳಿಲ್ಲ. ಈ ಉದಾಹರಣೆಗಾಗಿ, ನಾನು ಕೇವಲ "Alex" ಮತ್ತು "Billy" ಗಳನ್ನು ಮಾತ್ರ ಬಳಸುತ್ತಿದ್ದೇನೆ.
03:10 ಇಲ್ಲಿ, ನಾನು default ಎನ್ನುತ್ತೇನೆ. ಇದು - "I don't know what color your eyes are" ಎಂದು echo (ಇಕೋ) ಮಾಡುತ್ತದೆ.
03:19 ಇದರ ನಂತರ ನಮಗೆ break ನ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಇನ್ನು ಹೆಚ್ಚಿನ case ಗಳಿಲ್ಲ.
03:26 ಖಂಡಿತವಾಗಿಯೂ ಇದರ ನಂತರ break ಇಲ್ಲ. ಏಕೆಂದರೆ, ಇಲ್ಲಿ ಆಯ್ದುಕೊಳ್ಳಲು ಇನ್ನು ಹೆಚ್ಚಿನ ಆಯ್ಕೆಗಳೂ ಇಲ್ಲ.
03:34 ಸರಿ.. ಇಲ್ಲಿ ನಮ್ಮ switch ಇದೆ. ಇದನ್ನು ನೋಡೋಣ.
03:39 ಈಗ, ನಮ್ಮ ಪ್ರೊಗ್ರಾಂಅನ್ನು ಬಿಲ್ಡ್ ಮಾಡಲು, ನಾನು ಇಲ್ಲಿ ಈ "Alex" ಅನ್ನು, ಒಂದು ವೇರಿಯೇಬಲ್ ನಿಂದ ಬದಲಾಯಿಸುತ್ತೇನೆ.
03:46 $name ಇಕ್ವಲ್ಸ್ ಎಂದು ಟೈಪ್ ಮಾಡುತ್ತೇನೆ ಮತ್ತು ಅದನ್ನು ನಿರ್ಧರಿಸಲು ನಿಮಗೆ ಬಿಡುತ್ತೇನೆ.
03:53 ಆಮೇಲೆ ಇಲ್ಲಿ ನಾನು $name ಎನ್ನುತ್ತೇನೆ.
03:57 ಇಲ್ಲಿ, ನಾವು ಒಂದು ವೇರಿಯೇಬಲ್ ಅನ್ನು ಹೀಗೆ ಸೇರಿಸುವುದನ್ನು ನೀವು ನೋಡುತ್ತೀರಿ.
04:01 ಇಷ್ಟರಲ್ಲಿ ಅದನ್ನು ಹೇಗೆ ಮಾಡಬೇಕೆಂದು ನಿಮಗೆ ತಿಳಿದಿರಬೇಕು.
04:04 ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.
04:08 ನೀವು switch ಎಂದು ಹೇಳುವಿರಿ. ನೀವು "Alex" ಗೆ ಸಮವಾಗಿರುವ ಈ ಎಕ್ಸ್ಪ್ರೆಶನ್ ಅನ್ನು (expression) ತೆಗೆದುಕೊಳ್ಳಿ.
04:13 ಮೂಲತಃ, ಇದು "Alex" ಗೆ ಸಮವಾಗಿರುವ case ಆಗಿದೆ ಮತ್ತು ಇದನ್ನು ಹೀಗೆ echo ಮಾಡುತ್ತದೆ. ಈ break, ಅದನ್ನು ಕೊನೆಗೊಳಿಸಲು ಇದೆ.
04:22 ಒಂದುವೇಳೆ, name "Rahul" ಎಂದು ಇದ್ದರೆ, default ಹೀಗೆ echo ಮಾಡುವುದು - "I don't know what colour your eyes are".
04:29 ಸರಿ, ಇದನ್ನು ರನ್ ಮಾಡಲು ಪ್ರಯತ್ನಿಸೋಣ.
04:37 ಸಂಕ್ಷಿಪ್ತವಾಗಿ,
04:39 ನಾವು "Alex" ಮತ್ತು "Alex" ಹೊಂದುತ್ತವೆ ಎಂದು ನೋಡಬಹುದು, ಔಟ್ಪುಟ್ ಗೆ ಸರಿಹೊಂದುತ್ತವೆ.
04:44 ನೀವು ಹೀಗೆ ಮಾಡಬಹುದು, ಇಲ್ಲಿ ನಿಮಗೆ ಬೇಕಾದಷ್ಟು ಕೋಡ್ ನ ಸಾಲುಗಳನ್ನು ನೀವು ಸೇರಿಸಬಹುದು. case ಎಲ್ಲಿಗೆ ಕೊನೆಗೊಳ್ಳುವುದು ಎಂದು ಈ break ನಿರ್ಧರಿಸುತ್ತದೆ.
04:54 ಒಂದು if ಸ್ಟೇಟ್ಮೆಂಟ್ ನಲ್ಲಿ, ಬ್ಲಾಕ್ ಅನ್ನು ಅಂತ್ಯಗೊಳಿಸಲು ಕರ್ಲೀ ಬ್ರ್ಯಾಕೆಟ್ ಗಳು ಬೇಕು.
04:59 ಆದಾಗ್ಯೂ, ಇಲ್ಲಿ break, ಬ್ಲಾಕ್ ನ ಅಂತ್ಯವನ್ನು ನಿರ್ಧರಿಸುತ್ತದೆ. ಅಂದಹಾಗೆ, ಇವುಗಳನ್ನು ಬ್ಲಾಕ್ (block) ಗಳೆನ್ನುತ್ತಾರೆ.
05:06 ಇದನ್ನು "Billy" ಎಂದು ಬದಲಿಸೋಣ ಮತ್ತು ಏನಾಗುತ್ತದೆ ಎಂದು ನೋಡೋಣ.
05:10 "You have brown eyes" – ಇದನ್ನೇ ನಾವು ಇಲ್ಲಿ ನಿರ್ಧರಿಸಿದ್ದೇವೆ.
05:16 ಈಗ ನಾನು ಇದನ್ನು "Kyle" ಎಂದು ಬದಲಿಸಿ ರೆಫ್ರೆಶ್ ಮಾಡುತ್ತೇನೆ. "I don't know what colour your eyes are". ಏಕೆಂದರೆ, ಇಲ್ಲಿ, ನಮ್ಮ ಪ್ರೊಗ್ರಾಂನಲ್ಲಿ ಕೈಲ್ ನ ಕಣ್ಣಿನ ಬಣ್ಣವನ್ನು ಹೇಳುವ ಯಾವದೇ ಬ್ಲಾಕ್ ಇಲ್ಲ.
05:31 ಹೀಗೆ, ಇದು switch ಸ್ಟೇಟ್ಮೆಂಟ್ ಬಗ್ಗೆ ಆಗಿದೆ.
05:34 ಇದನ್ನು ಪ್ರಯತ್ನಿಸಿ ನೋಡಿ. ಕೆಲವರು ಇದನ್ನು ಬಳಸಲು ಇಷ್ಟಪಡುವುದಿಲ್ಲ ಹಾಗೂ ಕೆಲವರು ಇದನ್ನು ಬಳಸಲು ಬಯಸುತ್ತಾರೆ.
05:38 ಇದು ಬಹುಶಃ if ಸ್ಟೇಟ್ಮೆಂಟ್ ಗಿಂತ ಬಹಳ ಶೀಘ್ರವಾಗಿದೆ ಹಾಗೂ ನಿಯಂತ್ರಿಸಲು ಸುಲಭವಾಗಿದೆ. ಚೆನ್ನಾಗಿ ಸಹ ಕಾಣುತ್ತದೆ. ನಿಜವಾಗಿಯೂ ನಿಮ್ಮ ಆಯ್ಕೆಗೆ ಹೊಂದುವಂತಿದೆ.
05:48 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ………

ಧನ್ಯವಾದಗಳು.

Contributors and Content Editors

Sandhya.np14