PHP-and-MySQL/C2/Arrays/Kannada
From Script | Spoken-Tutorial
Revision as of 00:01, 23 December 2018 by Sandhya.np14 (Talk | contribs)
Time | Narration |
00:00 | ನಮಸ್ಕಾರ. Arrays ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:03 | ಅರೇ ಗಳು ಒಂದು ವೇರಿಯೇಬಲ್ ನಲ್ಲಿ ಒಂದಕ್ಕಿಂತ ಹೆಚ್ಚು ಡೇಟಾ ಗಳನ್ನು ಸ್ಟೋರ್ ಮಾಡಲು ಬಳಕೆದಾರನಿಗೆ ಅನುಮತಿಸುತ್ತವೆ. |
00:08 | ಉದಾಹರಣೆಗೆ, $days ಎಂಬ ವೇರಿಯೇಬಲ್ ಅನ್ನು ಅರೇ ಎನ್ನಬಹುದು. |
00:12 | ಜೋಡಿ ಆವರಣದೊಳಗೆ, ನಾವು ಒಂದಕ್ಕಿಂತ ಹೆಚ್ಚು ವ್ಯಾಲ್ಯೂಗಳನ್ನು ಹೊಂದಿದ್ದೇವೆ. |
00:17 | ಇದಕ್ಕಾಗಿ ನಾನು 5 ವ್ಯಾಲ್ಯೂಗಳನ್ನು ಆಯ್ಕೆ ಮಾಡುತ್ತೇನೆ ಮತ್ತು ಇವುಗಳಲ್ಲಿ ಪ್ರತಿಯೊಂದರಲ್ಲಿ, ವಾರದಲ್ಲಿಯ ಒಂದು ದಿನವನ್ನು ನಾನು ಹೊಂದಿದ್ದೇನೆ. |
00:23 | Monday, Tuesday, Wednesday, Thursday ಮತ್ತು Friday - ವಾರದಲ್ಲಿಯ 5 ದಿನಗಳನ್ನು ಮಾತ್ರ ಸೇವ್ ಮಾಡಿದ್ದೇನೆ. |
00:39 | ಉದಾಹರಣೆಗೆ, day one ($day1) ಇದು Monday ಆಗಿದೆ, day two ಇದು Tuesday ಆಗಿದೆ...ಹೀಗೆ... |
00:49 | ಇದು ನಿಮಗೆ ಅರ್ಥವಾಗಿರಬಹುದು. ಇದು, ಒಂದಕ್ಕಿಂತ ಹೆಚ್ಚು ಡೇಟಾ ಗಳನ್ನು ಹೊಂದಿರುವ ವೇರಿಯೆಬಲ್ ಅನ್ನು ಕರೆಯುವ ಸುಲಭವಾದ ಮತ್ತು ಪರಿಣಾಮಕಾರಿಯಾದ ವಿಧಾನವಾಗಿದೆ. |
00:59 | ದಯವಿಟ್ಟು ಗಮನಿಸಿ, ವೇರಿಯೆಬಲ್ ನ ಒಳಗೆ ಇವುಗಳು ಸಂಖ್ಯೆಗಳು ಅಥವಾ ನೀವು ನಿರ್ಧರಿಸುವ ಯಾವುದೇ ಡೇಟಾ ಆಗಿರಬಹುದು. |
01:07 | ಈಗ ನಮ್ಮ ಅರೇಯನ್ನು echo ಮಾಡಲು, ನಾನು echo $days ಎನ್ನುತ್ತೇನೆ. |
01:12 | ನೋಡಿ,ಇದು ಕೆಲಸ ಮಾಡುತ್ತಿಲ್ಲ. |
01:16 | ನಮ್ಮ ಪೇಜ್ ಅನ್ನು ಓಪನ್ ಮಾಡಿದಾಗ ಹೀಗಾಗುತ್ತದೆ. |
01:20 | ಕೇವಲ "Array" ಎಂದು ಇಕೋ ಆಗುತ್ತದೆ. |
01:22 | "Array" ಇಲ್ಲಿ ಎಲ್ಲಿಯೂ ಇಲ್ಲ. |
01:24 | ನಾವು ಅರೇಯನ್ನು ಹೊಂದಿದ್ದೇವೆ ಎಂದು PHP ಇಕೋ ಮಾಡಿದೆ ಅಷ್ಟೇ. |
01:32 | ಈಗ ಅರೇಯಲ್ಲಿರುವ ಒಂದು ನಿರ್ದಿಷ್ಟ ಎಲಿಮೆಂಟ್ ಅನ್ನು ಕಾಲ್ ಮಾಡಲು, ನೀವು ಇವುಗಳನ್ನು ಎಲಿಮೆಂಟ್ ಅನ್ನಬಹುದು, ಕೆಲವೆಡೆ id tags ಅನ್ನುತ್ತಾರೆ ಅಥವಾ ಅರೇಯ ಎಲಿಮೆಂಟ್ ಗಳೆನ್ನುತ್ತಾರೆ. |
01:41 | ನಾವು ಚೌಕ ಬ್ರಾಕೆಟ್ಗಳನ್ನು ಬಳಸುತ್ತಿದ್ದೇವೆ ಮತ್ತು ಅರೇಯ ಒಳಗೆ ಎಲಿಮೆಂಟ್ ಇರುವ ಸ್ಥಾನವನ್ನು ಕಾಲ್ ಮಾಡುತ್ತೇವೆ. |
01:45 | ಹೀಗಾಗಿ ನೀವು ಇದನ್ನು one, two, three, four, five ಎಂದುಕೊಂಡಿರಬಹುದು. |
01:50 | ಆದಾಗ್ಯೂ, ಸ್ಟ್ಯಾಂಡರ್ಡ್ ಸಂಖ್ಯಾ ವ್ಯವಸ್ಥೆಯ ಕಾರಣ, (standard numbering system) ನಾವು zero, one, two, three ಮತ್ತು four ನೊಂದಿಗೆ ಪ್ರಾರಂಭಿಸುತ್ತಿದ್ದೇವೆ. |
01:58 | ಉದಾಹರಣೆಗೆ, ನನಗೆ Monday ಯನ್ನು echo ಮಾಡಬೇಕಾಗಿದ್ದರೆ, ಅದು zero ಆಗಿರುತ್ತದೆ; ಆದ್ದರಿಂದ ನೀವು ಅದರಲ್ಲಿ zero ಅನ್ನು ಸೇರಿಸಿ. ಮತ್ತು Monday ಅನ್ನು 'ಇಕೋ' ಮಾಡಲಾಗುವುದು. |
02:09 | one ನೊಂದಿಗೆ Tuesday ಮತ್ತು four – ಇದು ಅರೇಯಲ್ಲಿಯ ಕೊನೆಯ ಎಲಿಮೆಂಟ್ ಆಗಿದ್ದು Friday ಅನ್ನು 'ಇಕೋ' ಮಾಡುತ್ತದೆ. |
02:18 | ಒಂದು ಅರೇಯಲ್ಲಿ ವ್ಯಾಲ್ಯೂಗಳನ್ನು ಬೇರೆ ರೀತಿಯಲ್ಲಿ ಹೇಗೆ ಅಸೈನ್ ಮಾಡುವುದೆಂದು ನಾನು ನಿಮಗೆ ತೋರಿಸುತ್ತೇನೆ. |
02:26 | ಈಗ ನಾನು ಮೊದಲಿನಿಂದ ಹೇಳಲು ಆರಂಭಿಸುತ್ತೇನೆ. |
02:32 | ನಾನು ಒಂದು ವಿಶೇಷವಾದ ಅರೇಯನ್ನು ಕ್ರಿಯೇಟ್ ಮಾಡುತ್ತೇನೆ. |
02:39 | $days zero equals Monday, days one equals Tuesday. |
02:53 | ನೀವು ಇದೇಕೆ ಹೀಗೆ ಎಂದುಕೊಳ್ಳಬಹುದು. ಎಂದರೆ ನಾನು ಈ ಮೊದಲು ಹೇಳಿದ್ದನ್ನು ಇಲ್ಲಿ ಕ್ರಿಯೇಟ್ ಮಾಡುತ್ತಿದ್ದೇನೆ. ಇದು ಸ್ವಲ್ಪ ಕಷ್ಟದಾಯಕ ಆಗಿದೆ. |
03:04 | ನಾನು ಹೀಗೆ ಸಹ ಹೇಳಬಹುದು: day 1 equals, ಮತ್ತು day 2 equals... ಹೀಗೆ ಮುಂದುವರೆಸಬಹುದು. |
03:15 | ಅದಾಗ್ಯೂ, ಇಲ್ಲಿ ನಾವು ಮಾಡುತ್ತಿರುವುದು ಒಂದು ಅರೇಯಲ್ಲಿ ಸೇರಿಸುತ್ತಿದ್ದೇವೆ. |
03:19 | ಇದು ಅದೇ ರಚನೆಯನ್ನು ಹೊಂದಿರಬಹುದು. ಆದರೆ ನಾವು ಬೇರೆ ರೀತಿಯಲ್ಲಿ ಅಸೈನ್ ಮಾಡುತ್ತಿದ್ದೇವೆ. |
03:25 | ನೀವು ಹಾಗೆ ಮಾಡಬಹುದು. ನಾನು ಯಾವಾಗಲೂ ಹೀಗೆ ಮಾಡಲು ಬಯಸುತ್ತೇನೆ. |
03:33 | ಇದು ಹೆಚ್ಚು ಓರಣವಾಗಿದೆ, ಸುಲಭವಾಗಿದೆ ಎಂದು ನನ್ನ ಅಭಿಪ್ರಾಯ. ಇದನ್ನು ನೀವು ಕೆಳಗೆ ತರಬಹುದು. |
03:45 | ಆದಾಗ್ಯೂ, ನಿಮಗೆ ಇದನ್ನು ನೋಡಬೇಕಾಗಿದ್ದರೆ, ಅರ್ಥಾತ್ ಈಗ ಇದನ್ನು ಸೇವ್ ಮಾಡಿದರೆ.. 'ರಿಫ್ರೆಶ್' ಮಾಡಿ. ಏನೂ ಬದಲಾಗಿಲ್ಲ. |
03:54 | ಇಲ್ಲಿ ಎರರ್ ಗಳು ಇಲ್ಲ. ನಮಗೆ ಇನ್ನೂ ಅದೇ ಸ್ಟ್ರಕ್ಚರ್ ಸಿಗುತ್ತದೆ. ನಾವು ಕೇವಲ ಅದನ್ನು ಕೆಳಗಿನ ಸಾಲುಗಳಲ್ಲಿ ಸರಿಸಿದ್ದೇವೆ. |
04:01 | ನಿಮ್ಮ ಫಂಕ್ಷನ್ ನ ಕೊನೆಯಲ್ಲಿ ಲೈನ್ ಟರ್ಮಿನೇಟರ್ ಇದೆ, ಪ್ರತಿಯೊಂದು ಲೈನ್ ನ ಕೊನೆಯಲ್ಲಿ ಅಲ್ಲ. ಅದರ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ. |
04:11 | ಸರಿ. ನಾವು ಇಲ್ಲಿಗೆ ಹಿಂದಿರುಗೋಣ. |
04:15 | ಹೀಗೆ, ಇದು ಮೂಲ array, ಇದಕ್ಕಾಗಿ ಎರಡು ವಿಧಗಳಲ್ಲಿ ವ್ಯಾಲ್ಯೂಗಳನ್ನು ಹೇಗೆ ಕ್ರಿಯೇಟ್ ಮಾಡುವುದು ಮತ್ತು ವ್ಯಾಲ್ಯೂಗಳನ್ನು ಹೇಗೆ ಕಾಲ್ ಮಾಡುವುದು ಎಂಬುದರ ಬಗ್ಗೆ ವಿವರಣೆ ಆಗಿದೆ. |
04:23 | ಉದಾಹರಣೆಗೆ, ನಾನು echo "Today is" $days ಎಂದು ಹೇಳಿದರೆ, ನಂತರ zero ಎಂದು ಹೇಳಿದರೆ, |
04:34 | ಈಗ ನಾನು ಇದನ್ನು ಕಾಂಟೆಕ್ಸ್ಟ್ ನಲ್ಲಿ ಹೈಲೈಟ್ ಮಾಡಿದ್ದೇನೆ- ಹಸಿರು ಬಣ್ಣದಲ್ಲಿ ಹೈಲೈಟ್ ಮಾಡಿರುವುದನ್ನು ನೀವು ನೋಡಬಹುದು. |
04:41 | ಇದನ್ನು refresh ಮಾಡಿದರೆ, ನೀವು "This is Monday" ಎಂದು ನೋಡುವಿರಿ. |
04:44 | ಗೊಂದಲ ಬೇಡ, ಕಾಂಟೆಕ್ಸ್ಟ್ ಗಳನ್ನು ಬಳಸಲು ನಾನು ನಿಮಗೆ ಶಿಫಾರಸು ಮಾಡುತ್ತೇನೆ. |
04:48 | ಆದಾಗ್ಯೂ, ಇದು contact ಕೋಡಿಂಗ್ ಅನ್ನು ಗುರುತಿಸುವ ಪ್ರಮಾಣಿತ ವಿಧಾನವಲ್ಲ. |
04:53 | ಹೀಗೆ ಚೆನ್ನಾಗಿ ಕಾಣುತ್ತದೆ. ಇಲ್ಲಿ ನಾವು echo $days ಮತ್ತು zero ಎಂದು ಬರೆದಾಗ, ಒಂದು ಸಂಖ್ಯೆ ಎಂದರೆ ಇಂಟೀಜರ್ (ಪೂರ್ಣಾಂಕ) ಎಂದು ತೋರಿಸಲು, ಅದು ಕೆಂಪು ಬಣ್ಣದಲ್ಲಿ ಇರುವುದನ್ನು ನೀವು ನೋಡುತ್ತೀರಿ. |
05:09 | ನೀವು ಹೀಗೆ ಬರೆಯಬೇಕೆಂದು ಅದು ಬಯಸುತ್ತದೆ. ಅದು ಸರಿಯಾಗಿದೆ ಎಂದು ನಾವು ನೋಡಬಹುದು. |
05:16 | ಆದರೆ ಇಕೋ ಮಾಡಲು ನೀವು ನಿಮ್ಮ ಸ್ಟ್ರಿಂಗ್ ನಲ್ಲಿ ಒಂದು ಅರೇಯನ್ನು ಸೇರಿಸಬಹುದು. |
05:23 | ಈಗ ನಾನು associative arrays ಗೆ ಹೋಗುತ್ತೇನೆ. ಇಲ್ಲಿ ನಾವು id tags ಗಳನ್ನು ಅಸೈನ್ ಮಾಡುವವರಿದ್ದೇವೆ ಹಾಗೂ ಪ್ರತಿಯೊಂದು ಐಡೆಂಟಿಟೀ ಗೆ ಒಂದು ವ್ಯಾಲ್ಯೂಅನ್ನು ಕೊಡುತ್ತೇವೆ. |
05:36 | ನಿಮಗೆ ಇದು ಅರ್ಥವಾಗದಿದ್ದರೆ, ನಾನು ಹೀಗೆ ಇದನ್ನು ಕ್ರಿಯೇಟ್ ಮಾಡುವವನಿದ್ದೇನೆ. |
05:46 | ನಾನು $ages equals array(); ಎನ್ನುತ್ತೇನೆ. ಈಗ ಒಳಗಡೆ, "Alex" ಎನ್ನುತ್ತೇನೆ. |
06:03 | ಈಗ, "Billy" ಮತ್ತು ನಂತರ "Kyle" ಎಂದು ಹೇಳುವುದರ ಬದಲಾಗಿ, ಈ ಮೂರು ಹೆಸರುಗಳನ್ನು ನಾನು ಬಳಸುವವನಿದ್ದೆನೆ, ನಾನು nineteen, fourteen ಮತ್ತು eighteen ಎಂದು ಹೇಳುತ್ತೇನೆ. |
06:20 | ಮೂಲತಃ equals ಮತ್ತು ಒಂದು greater than ಚಿಹ್ನೆಯನ್ನು (=>) ಬಳಸುತ್ತಿದ್ದೇನೆ. |
06:24 | ಈಗ, ಇದು ಏನು ಮಾಡಿದೆ ಎಂದರೆ- ಇದರಲ್ಲಿ ಮಾಡುವಂತೆ ಅರೇ ಎಲಿಮೆಂಟ್ ಗಳನ್ನು- ಇದನ್ನು zero ಎಂದು, ಇದನ್ನು one ಎಂದು, ಇದನ್ನು two ಎಂದು ಕಾಲ್ ಮಾಡುವ ಬದಲಾಗಿ, |
06:34 | ಇದನ್ನು "Alex" ಎಂದು, ಇದನ್ನು "Billy" ಎಂದು ಮತ್ತು ಇದನ್ನು "Kyle" ಎಂದು ಕಾಲ್ ಮಾಡಲಾಗಿದೆ. ಆದರೆ ಅವುಗಳ ವ್ಯಾಲ್ಯೂಗಳು fourteen, nineteen ಮತ್ತು eighteen ಆಗಿವೆ. |
06:45 | ಹೀಗಾಗಿ, ನಿಜವಾಗಿಯೂ ಅದನ್ನು ಹಾಗೆ ಬರೆದಂತೆಯೇ ಇರುತ್ತದೆ. ಅದನ್ನು ತೆಗೆದುಬಿಡೋಣ. ಮತ್ತು ಇದನ್ನು zero, one ಮತ್ತು two ಎಂದು ಕಾಲ್ ಮಾಡೋಣ. |
06:55 | ಇದನ್ನು ಇನ್ನೂ ಸರಳವಾಗಿಸಲು, ನೆನಪಿನಲ್ಲಿಡಲು ಮತ್ತು ಕಾಲ್ ಮಾಡಲು ಸುಲಭವಾಗುವಂತೆ ನಾವು ಹೀಗೆ ಹೇಳಬಹುದು: echo $ages "Alex". |
07:09 | ನಾವು refresh ಮಾಡಿದಾಗ ಇದು nineteen ಎಂದು ಇಕೋ ಮಾಡುತ್ತದೆ. ಇಲ್ಲಿ nineteen ಅನ್ನು ನೋಡಿ. 'Billy' ಮತ್ತು 'Kyle' ಗಳೊಂದಿಗೆ ಸಹ ಹೀಗೇ ಆಗುತ್ತದೆ. |
07:24 | ನೀವು ಪ್ರೊಗ್ರಾಂ ನ ಮಧ್ಯದಲ್ಲಿರುವಾಗ, ಅಬ್ಬಾ!! ನಾನು ಮತ್ತೆ ಮೇಲ್ತುದಿಗೆ ಹೋಗಿ ಪ್ರತಿಯೊಂದು ಸಾಲನ್ನು ಎಣಿಸುತ್ತಾ ಇದು " zero, one, two ಅಥವಾ three, ನನಗೆ ನೆನಪಾಗುತ್ತಿಲ್ಲ?" ಎಂದು ಹೇಳುವುದರ ಬದಲಾಗಿ, |
07:38 | ಇದನ್ನು ಮಾಡುವುದು ತುಂಬಾ ಸುಲಭವಾಗಿದೆ. ಇದನ್ನು ಮಾಡುವ ಇನ್ನೊಂದು ಉಪಯುಕ್ತ ವಿಧಾನವೆಂದರೆ, ನಾನು array one is equal to 'Alex' ಮತ್ತು ನಂತರ two is equal to 'Billy' ಎಂದು ಹೇಳುವದು. |
07:50 | ನಾವು zero, ನಂತರ one ಎಂದು ಆರಂಭಿಸುತ್ತಿಲ್ಲ. ನಾವು one ಮತ್ತು two ಎಂದು ಆರಂಭಿಸುತ್ತಿದ್ದೇವೆ. ಇದರಿಂದ ಅದನ್ನು ನೆನಪಿನಲ್ಲಿಡಲು ಸುಲಭವಾಗುತ್ತದೆ. |
08:00 | ಈಗ, ನಾವು echo $ages one ಎಂದು ಹೇಳಬಹುದು, ಅದು "Alex" ಎಂದು ಬರುತ್ತದೆ. |
08:08 | ನಾವು ಅದಕ್ಕಾಗಿ zero ಅನ್ನು ಬಳಸುತ್ತಿಲ್ಲ. zero, one, two ಎಂದು ಹೇಳುವದಕ್ಕಿಂತ ಇದು ಪ್ರೊಗ್ರಾಂ ಮಾಡಲು ನಿಮಗೆ ಹೆಚ್ಚು ಸುಲಭವಾಗಿದೆ. |
08:17 | ಪ್ರಯತ್ನಿಸಿ ನೋಡಿ. ನಿಮಗೆ ಯಾವುದು ಅತ್ಯಂತ ಸುಲಭವಾಗಿದೆ ಎಂದು ನೋಡಿ. |
08:21 | ಆದರೆ ನನಗೆ ಇದರಲ್ಲಿ ಅರ್ಥವಿಲ್ಲ ಎನಿಸುತ್ತದೆ. ಏಕೆಂದರೆ, ನಾನು zero, one, two ಗಳನ್ನು ಬಳಸಲು ಇಷ್ಟಪಡುತ್ತೇನೆ. |
08:28 | ನಾನು ಈಮೊದಲು ಮಾಡಿದಂತೆ ನಿಮಗೆ ಅದನ್ನು ಬಳಸಬೇಕಾಗಿದ್ದರೆ, ಅಥವಾ ಹೀಗೆ ಅಥವಾ ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಯಾವುದೇ ಡೇಟಾ ಟೈಪ್ ಗೆ ಅಸೈನ್ ಮಾಡಬೇಕಾದರೆ, ಆಗ ಅದನ್ನು ಆ ರೀತಿಯಲ್ಲಿ ಮಾಡಬೇಕು. |
08:37 | ಸರಿ. ಇದು, ಅರೇಗಳ ಕುರಿತು ಆಗಿತ್ತು. ನನ್ನ ಹತ್ತಿರ multidimensional arrays ಬಗ್ಗೆ ಇನ್ನೊಂದು ಟ್ಯುಟೋರಿಯಲ್ ಇದೆ. |
08:44 | ಅದೊಂದು ಪ್ರತ್ಯೇಕ ಟ್ಯುಟೋರಿಯಲ್ ಆಗಿದೆ. ದಯವಿಟ್ಟು ಅದನ್ನು ನೋಡಿ. |
08:47 | ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ........
ಧನ್ಯವಾದಗಳು. |