FrontAccounting-2.4.7/C2/Setup-for-Sales-in-FrontAccounting/Kannada

From Script | Spoken-Tutorial
Revision as of 13:21, 23 April 2020 by Melkamiyar (Talk | contribs)

Jump to: navigation, search
Time Narration


00:01 FrontAccounting ನಲ್ಲಿ ಸೆಟಪ್ ಫಾರ್ ಸೇಲ್ಸ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,

ಸೇಲ್ಸ್ ಟೈಪ್ ಗಳು,

00:12 ಸೇಲ್ಸ್ ಪರ್ಸನ್ ಗಳು,
00:14 ಸೇಲ್ಸ್ ಏರಿಯಾಗಳು,
00:16 ಮತ್ತು ಕಸ್ಟಮರ್‌ ಗಳು ಮತ್ತು ಕಸ್ಟಮರ್ ಬ್ರಾಂಚ್‌ ಗಳ ಆಡ್ ಮತ್ತು ಮ್ಯಾನೇಜ್ ಕಲಿಯಲಿದ್ದೇವೆ.
00:22 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:30 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ನ ತತ್ವಗಳ ಜ್ಞಾನ ಹೊಂದಿರಬೇಕು.
00:45 ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಿರಬೇಕು.
00:52 ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:58 ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
01:04 ಸೇಲ್ಸ್ ಎನ್ನುವುದು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ.
01:08 ಇದು ನಿರ್ದಿಷ್ಟ ಸಮಯಾವಧಿಯಲ್ಲಿ ಮಾರಾಟ ಮಾಡಿದ ಸರಕುಗಳು ಮತ್ತು ಸೇವೆಗಳ ಮೊತ್ತವಾಗಿದೆ.
01:14 ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ
01:19 ಬ್ರೌಸರ್ ತೆರೆಯಿರಿ.

localhost/account ಎಂದು ಟೈಪ್ ಮಾಡಿ Enter ಒತ್ತಿ.

01:27 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:30 ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:38 FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.

Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:44 Maintenance ಪ್ಯಾನೆಲ್ ಅನ್ನು ಸೇಲ್ಸ್ ಮತ್ತು ಕಸ್ಟಮರ್ ವಿವರಗಳ ಸೆಟಪ್ ಮಾಡಲು ಬಳಸಲಾಗುತ್ತದೆ.
01:50 ನಾವೀಗ ಸೇಲ್ಸ್ ನಲ್ಲಿ ಸೆಟಪ್ಗಾಗಿ ಇರುವ ಹಂತಗಳನ್ನು ನೋಡೋಣ.
01:56 ಹಂತ 1 – ಸೆಟಪ್ ಸೇಲ್ಸ್
01:59 ಹಂತ 2 – ಸೆಟಪ್ ಕಸ್ಟಮರ್ಸ್
02:03 ಸೆಟಪ್ ಸೇಲ್ಸ್ ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ರೂಪಿಸಬೇಕು.
02:08 ಸೇಲ್ಸ್ ಟೈಪ್ ಗಳು,
02:10 ಸೇಲ್ಸ್ ಪರ್ಸನ್ ಗಳು ಮತ್ತು ಸೇಲ್ಸ್ ಏರಿಯಾಗಳು.

ಇದನ್ನು ಹೇಗೆ ಮಾಡಬಹುದು ಎಂದು ನಾವೀಗ ಕಲಿಯೋಣ.

02:18 FrontAccounting ಇಂಟರ್ ಫೇಸ್ ಗೆ ವಾಪಸ್ ಬನ್ನಿ.
02:22 Maintenance ಪ್ಯಾನೆಲ್ ನಲ್ಲಿ Sales Types ಮೇಲೆ ಕ್ಲಿಕ್ ಮಾಡಿ.
02:27 ಇದು ನಮಗೆ ನಿರ್ದಿಷ್ಟ ಗ್ರಾಹಕರಿಗೆ ಬೆಲೆ ನಿಗದಿಯ ಮಟ್ಟವನ್ನು ನಿರೂಪಿಸಲು ಅನುವು ಮಾಡಿಕೊಡುತ್ತದೆ.
02:33 ನಾವು ರಿಟೇಲ್ ಮತ್ತು ಹೋಲ್ ಸೇಲ್ ಗಳನ್ನು ಸೇಲ್ಸ್ ಟೈಪ್ ಗಳಾಗಿ ನೋಡಬಹುದು.
02:39 ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು ರಿಟೇಲ್ ಎಂದು ನಾವು ಪರಿಗಣಿಸೋಣ.
02:45 ಹೀಗಾಗಿ ನಾವು ಚಿಲ್ಲರೆ ಬೆಲೆ ನಿಗದಿಯನ್ನು ಬೇಸ್ ಬೆಲೆ ಪಟ್ಟಿಯಾಗಿ ಇಡೋಣ.
02:51 ಡಿಫಾಲ್ಟ್ ಆಗಿ Tax included ಫೀಲ್ಡ್ ಅನ್ನು Yes ಎಂದು ನಿಗದಿಪಡಿಸಲಾಗಿದೆ.
02:56 ಅಂದರೆ ಟ್ಯಾಕ್ಸ್ ಯಾವಾಗಲೂ ಸೇಲ್ಸ್ ನಲ್ಲಿ ಒಳಗೊಂಡಿರುತ್ತದೆ.
03:01 Wholesale ಪತ್ತೆಹಚ್ಚಿ ಮತ್ತು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
03:06 Calculation Factor ಫೀಲ್ಡ್ ಗೆ ಹೋಗಿ.
03:09 ನೀವು ಇಚ್ಛಿಸಿದಲ್ಲಿ ಬೇಸ್ ಪ್ರೈಸಿಂಗ್ ಸರಿಹೊಂದಿಸಲು Calculation factor ನಲ್ಲಿ ಟೈಪ್ ಮಾಡಿ.
03:15 ನಾವು ಇದನ್ನು ಹಾಗೆಯೇ ಇಡಲಿದ್ದೇವೆ.
03:18 ನಂತರ Tax included ಫೀಲ್ಡ್ ಬರುತ್ತದೆ.
03:22 ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಗಳು ಸಹ ಒಂದು ಅಂಶ ಆಗಿದ್ದಲ್ಲಿ ಈ ಬಾಕ್ಸ್ ಪರೀಕ್ಷಿಸಿ.
03:28 ನಾನು Tax included ಚೆಕ್ ಬಾಕ್ಸ್ ಪರೀಕ್ಷಿಸುತ್ತೇನೆ.
03:32 ನಂತರ ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
03:37 ನಾವು ಒಂದು ಸಂದೇಶವನ್ನು ನೋಡಬಹುದು. ವಿವರಗಳನ್ನು ಪರಿಷ್ಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ.
03:43 FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
03:48 ಈಗ, ಹೊಸ ಸೇಲ್ಸ್ ಪರ್ಸನ್ ಹೇಗೆ ಸೇರಿಸಬಹುದು ಎಂದು ಕಲಿಯೋಣ.
03:53 Maintenance ಪ್ಯಾನೆಲ್ ನಲ್ಲಿ Sales Persons ಮೇಲೆ ಕ್ಲಿಕ್ ಮಾಡಿ.
03:58 ನಾವಿಲ್ಲಿ ಸೇಲ್ಸ್ ಪರ್ಸನ್ ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
04:05 ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿರಿ.
04:09 Provision ಫೀಲ್ಡ್ ಅನ್ನು ಸೇಲ್ಸ್ ಪರ್ಸನ್ ಬಳಸುತ್ತಾರೆ.
04:13 ಅವರು ತಮ್ಮ ಮಾರಾಟದ ಮೇಲೆ ಕಮಿಷನ್ ಅಥವಾ ಪ್ರೊವಿಶನ್ ಪಡೆಯುತ್ತಾರೆ.
04:18 ಹೀಗಾಗಿ ನಾನು Provision ಫೀಲ್ಡ್ ನಲ್ಲಿ ಕಮಿಷನ್ ಅನ್ನು 5% ಆಗಿ ಟೈಪ್ ಮಾಡುತ್ತೇನೆ.
04:25 ಮುಂದಿನದು ಟರ್ನ್ ಓವರ್ ಬ್ರೇಕ್ ಪಾಯಿಂಟ್ ಲೆವೆಲ್.
04:29 ಇದನ್ನು ಸೇಲ್ಸ್ ಪರ್ಸನ್ ಗೆ ಬಳಸಲಾಗುತ್ತದೆ.
04:32 ಮೊತ್ತವು ಬ್ರೇಕ್ ಪಾಯಿಂಟ್ ದಾಟಿದರೆ ಮಾತ್ರ ಆತ ಪ್ರೊವಿಶನ್ ಪಡೆಯುತ್ತಾನೆ.
04:37 ಹೀಗಾಗಿ, Break point ಫೀಲ್ಡ್ನಲ್ಲಿ ನಾವು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ.
04:42 ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಆತ 5% ಕಮಿಷನ್ ಪಡೆಯುತ್ತಾನೆ.
04:50 ನಮ್ಮ ವಿಚಾರದಲ್ಲಿ ಇದು ಒಂದು ಲಕ್ಷ ರೂಪಾಯಿಗಳು.
04:54 ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ Provision 2 ಫೀಲ್ಡ್ ಬಳಸಲಾಗುತ್ತದೆ.
05:01 ನಾನಿಲ್ಲಿ 3 ಟೈಪ್ ಮಾಡುತ್ತೇನೆ.

ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ ಆತ 3% ಕಮಿಷನ್ ಪಡೆಯುತ್ತಾನೆ.

05:12 ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
05:17 FrontAccounting ಇಂಟರ್ ಫೇಸ್ ಗೆ ವಾಪಸ್ ಬರಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
05:23 ಈಗ ನಾವು ಹೊಸ ಸೇಲ್ಸ್ ಏರಿಯಾ ರಚಿಸುವುದನ್ನು ಕಲಿಯಲಿದ್ದೇವೆ.
05:28 Maintenance ಪ್ಯಾನಲ್ ನಲ್ಲಿ Sales Areas ಮೇಲೆ ಕ್ಲಿಕ್ ಮಾಡಿ.
05:33 ಸೇಲ್ಸ್ ಏರಿಯಾ ಆಧರಿಸಿ ನಾವು ಸೇಲ್ಸ್ ಆರ್ಡರ್ ಗಳನ್ನು ರಚಿಸಲಿದ್ದೇವೆ ಮತ್ತು ಡಿಸ್ಪ್ಯಾಚ್ ಗಳನ್ನು ಮಾಡಲಿದ್ದೇವೆ.
05:40 ನಾವು ರಚಿಸಬೇಕಾದ ಹೊಸ ಏರಿಯಾ ನೇಮ್ ಟೈಪ್ ಮಾಡಿ.

ನಾನು South Mumbai ಎಂದು ಟೈಪ್ ಮಾಡುತ್ತೇನೆ.

05:47 ವಿಂಡೋದಲ್ಲಿ ಕೆಳಗಡೆ dd new ಬಟನ್ ಮೇಲೆ ಕ್ಲಿಕ್ ಮಾಡಿ ಈ ಬದಲಾವಣೆಗಳನ್ನು ಸೇವ್ ಮಾಡಿ.
05:53 ನಾವು ಪರಿಷ್ಕೃತ ಎಂಟ್ರಿಯ ಟೇಬಲ್ ಅನ್ನು ನೋಡಬಹುದು.
05:58 FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:03 ಸೇಲ್ಸ್ ಆರ್ಡರ್ ಹೇಳುವ ಮೊದಲು ನಾವು:
06:08 ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚಸ್ ಸೆಟ್ ಅಪ್ ಮಾಡಬೇಕು.
06:14 ಕಸ್ಟಮರ್ ಎಂದರೆ ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮ.
06:21 ನಮ್ಮ ಉತ್ಪನ್ನಗಳನ್ನು ಮಾರಲು ನಾವು ಕಸ್ಟಮರ್ಗಳನ್ನು ಸೇರಿಸಬೇಕು.
06:25 ಈಗ FrontAccounting ಇಂಟರ್ ಫೇಸ್ ಗೆ ಮರಳಿ.
06:29 Maintenance ಪ್ಯಾನಲ್ನ ಕೆಳಗಡೆ ಎಡಭಾಗದಲ್ಲಿ Add and Manage Customers ಮೇಲೆ ಕ್ಲಿಕ್ ಮಾಡಿ.
06:36 ಇಲ್ಲಿ ತೋರಿಸಿರುವಂತೆ ಕಸ್ಟಮರ್ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
06:42 Customer’s Currency ಡ್ರಾಪ್ ಡೌನ್ ಬಾಕ್ಸ್ ನಲ್ಲಿ Indian Rupees ಆರಿಸಿ.
06:47 Sales Type or Price List ಡ್ರಾಪ್ ಡೌನ್ ಬಾಕ್ಸ್ ನಲ್ಲಿ Retail ಆರಿಸಿ.
06:53 ಇಲ್ಲಿ ತೋರಿಸಿರುವಂತೆ ಕಸ್ಟಮರ್ ನ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.
06:58 ನಾನು ಸೇಲ್ಸ್ ಪರ್ಸನ್ ಹೆಸರನ್ನು ಈ ಹಿಂದೆ ರಚಿಸಿದ್ದ ರಾಹುಲ್ ಅನ್ನೇ ಆರಿಸಿದ್ದೇನೆ.
07:05 ನಾವು ಬಲಗಡೆಗೆ Sales ಕಾಲಂ ಅನ್ನು ನೋಡಬಹುದು.
07:09 ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ಷರತ್ತುಗಳನ್ನು ಭರ್ತಿ ಮಾಡಿ.
07:16 ನಾವು ಡೀಫಾಲ್ಟ್ ಸೆಟ್ಟಿಂಗ್ಗಳನ್ನು ಹಾಗೆಯೇ ಇಡುತ್ತೇನೆ.
07:20 ಕೆಳಗೆ ಸ್ಕ್ರಾಲ್ ಮಾಡಿ.

ವಿಂಡೋವಿನ ಕೆಳಗಡೆ Add New Customer ಬಟನ್ ಮೇಲೆ ಕ್ಲಿಕ್ ಮಾಡಿ.

07:28 ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಸಂದೇಶವನ್ನು ನಾವು ಕಾಣಬಹುದು.
07:33 ಸೇಲ್ಸ್ ಅಥವಾ ಡೆಲಿವರಿ ಆರ್ಡರ್ಗಳನ್ನು ನೀಡಲು ಕಸ್ಟಮರ್ ಒಂದು ಕಸ್ಟಮರ್ ಬ್ರಾಂಚ್ ಹೊಂದಿರಬೇಕು.
07:40 ಮೊದಲಿಗೆ ನಾವು ಹೊಸ ಸೇಲ್ಸ್ ಎಂಟ್ರಿಗೆ ಈ ಬದಲಾವಣೆಗಳನ್ನು ಅನ್ವಯಿಸಬೇಕು.

ಕೆಳಗೆ ಸ್ಕ್ರಾಲ್ ಮಾಡಿ.

07:49 ವಿಂಡೋವಿನ ಕೆಳಗಡೆ Update Customer ಬಟನ್ ಮೇಲೆ ಕ್ಲಿಕ್ ಮಾಡಿ.
07:54 ನಾವು ಕಸ್ಟಮರ್ ವಿವರಗಳನ್ನು ಪರಿಷ್ಕರಿಸಿದ್ದೇವೆ ಎಂಬುದನ್ನು ಸಕ್ಸಸ್ ಮೆಸೇಜ್ ಸೂಚಿಸುತ್ತದೆ.
08:00 FrontAccounting ಇಂಟರ್ಫೇಸ್ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
08:05 ಈಗ ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡೋಣ.
08:11 Maintenance ಪ್ಯಾನಲ್ನಲ್ಲಿ Customer Branches ಮೇಲೆ ಕ್ಲಿಕ್ ಮಾಡಿ.
08:16 ಡಿಫಾಲ್ಟ್ ಬ್ರಾಂಚ್ Global ಅನ್ನು ಕಸ್ಟಮರ್ಗೆ ಸೇರಿಸಿರುವುದನ್ನು ನಾವು ನೋಡಬಹುದು.
08:22 ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
08:28 Sales ಪ್ಯಾನಲ್ನಲ್ಲಿ Sales Area ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು South Mumbai ಆರಿಸಿ.
08:36 ಇತರ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಇಡಿ.
08:40 ಇಲ್ಲಿನ ಕಸ್ಟಮರ್ ಅಡ್ರೆಸ್, ಮೇಯ್ಲಿಂಗ್ ಅಡ್ರೆಸ್ ಮತ್ತು ಬಿಲ್ಲಿಂಗ್ ಅಡ್ರೆಸ್ ಎರಡೂ ಆಗಿರುತ್ತದೆ.
08:46 ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ ನೀವು ಅದನ್ನು ಇಲ್ಲಿ ಬದಲಾಯಿಸಬಹುದು.
08:50 ಈ ಬದಲಾವಣೆಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
08:56 ಬ್ರಾಂಚ್ ಪರಿಷ್ಕರಣೆಯಾಗುತ್ತದೆ ಮತ್ತು ತುದಿಯಲ್ಲಿ ಸಕ್ಸಸ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
09:01 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

09:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಸೇಲ್ಸ್ ಟೈಪ್ಗಳು,

09:13 ಸೇಲ್ಸ್ ಪರ್ಸನ್ ಗಳು,
09:15 ಸೇಲ್ಸ್ ಏರಿಯಾಗಳು,
09:17 ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚ್ಗಳನ್ನು ಸೆಟಪ್ ಮಾಡಲು ಕಲಿತೆವು.
09:23 ಅಸೈನ್ಮೆಂಟ್ ಆಗಿ ಇನ್ನೊಂದು ಕಸ್ಟಮರ್ ಸೇರಿಸಿ.
09:28 ಹೊಸ ಕಸ್ಟಮರ್ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
09:34 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
09:42 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
09:52 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
09:56 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10.02 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14