LibreOffice-Suite-Base/C3/Create-tables/Kannada
From Script | Spoken-Tutorial
Revision as of 08:13, 28 February 2020 by Sandhya.np14 (Talk | contribs)
Time | Narration |
00:00 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್- ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯೂಟೋರಿಯಲ್ ನಲ್ಲಿ ನಾವು, |
00:07 | a) ವ್ಯೂ ಗಳನ್ನು ರಚಿಸಿ ಮತ್ತು |
00:09 | b) ಕಾಪಿ ವಿಧಾನವನ್ನು ಬಳಸಿ, |
00:11 | ಟೇಬಲ್ ಅನ್ನು ರಚಿಸಲು ಕಲಿಯುವೆವು. |
00:13 | ಈಗ ನಮ್ಮ “ಲೈಬ್ರರಿ” ಡೇಟಾಬೇಸ್ ಗೆ ಹೋಗೋಣ. |
00:16 | ಎಡ ಪ್ಯಾನಲ್ ನಲ್ಲಿರುವ ‘Tables’ ಐಕಾನ್ ಮೇಲೆ ಕ್ಲಿಕ್ ಮಾಡೋಣ. |
00:21 | ಬಲ ಪ್ಯಾನಲ್ ನಲ್ಲಿ, ನಾವು ಟೇಬಲ್ ರಚಿಸುವ ಮೂರು ವಿಧಾನಗಳನ್ನು ನೋಡಬಹುದು. |
00:26 | ನಾವೀಗ ‘Create View’ ಎಂಬ ಆಯ್ಕೆಯನ್ನು ನೋಡೋಣ. |
00:30 | ಅದಕ್ಕಿಂತ ಮೊದಲು, ನಾವು ವ್ಯೂ ಗಳ ಕುರಿತು ಕಲಿಯೋಣ. ವ್ಯೂ ಅಂದರೇನು? |
00:36 | ವ್ಯೂ ಸಹ ಟೇಬಲ್ ನಂತೆಯೇ ಇರುತ್ತದೆ ಆದರೆ ಇದರಲ್ಲಿ ಡೇಟಾ ಇರುವುದಿಲ್ಲ. |
00:43 | ಇದು ಟೇಬಲ್ ಗಳಿಂದ ಅಥವಾ ಡೇಟಾಬೇಸ್ ನ ಇತರ ವ್ಯೂ ಗಳಿಂದ ಡೇಟಾವನ್ನು ಮರಳಿ ಪಡೆಯುವ ಒಂದು ‘ಕ್ವೆರಿ ಎಕ್ಸ್ಪ್ರೆಶನ್’ (query expression) ಎಂದು ಹೇಳಬಹುದು. |
00:54 | ನೋಡುವಾಗ, ಟೇಬಲ್ ನಂತೆಯೇ ಇದು ಡೇಟಾದ ಕಾಲಂಗಳು ಮತ್ತು ರೋ ಗಳನ್ನು ಹೊಂದಿದೆ. |
01:00 | ವ್ಯೂ ಗಳನ್ನು, ಸೀಮಿತ ಆಕ್ಸೆಸ್ ಅನ್ನು ಕೊಡಲು |
01:06 | ಅಥವಾ ಇದಕ್ಕೆ ಆಧಾರವಾದ ಟೇಬಲ್-ಕಾಲಂಗಳು ಮತ್ತು ಟೇಬಲ್-ಡೇಟಾಗಳ ರಚನೆ ಮತ್ತು ಹೆಸರುಗಳನ್ನು ಮರೆಮಾಡಲು ಬಳಸಬಹುದು. |
01:13 | ಉದಾಹರಣೆಗೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡುವ ಒಂದು ಸರಳ ವ್ಯೂ ಅನ್ನು ನಾವು ರಚಿಸಬಹುದು. |
01:21 | ಮತ್ತು, ಗೌಪ್ಯತೆಯನ್ನು ಕಾಪಾಡಲು ಅವರ ಫೋನ್ ನಂಬರ್ ಗಳನ್ನು ಬಿಟ್ಟು ಬಿಡಬಹುದು. |
01:27 | ಇಲ್ಲಿ ಆಧರಿತ ಟೇಬಲ್, ‘Members’ ಆಗಿದೆ. |
01:32 | ಲೈಬ್ರರಿ ಡೇಟಾಬೇಸ್ ನ ಇತರ ಬಳಕೆದಾರರು ಇದನ್ನು ಆಕ್ಸೆಸ್ ಮಾಡಲು ಅವಕಾಶವಿದೆ ಆದರೆ Members ಟೇಬಲ್ ಗೆ ಸಾಧ್ಯವಿಲ್ಲ. |
01:40 | ಈ ರೀತಿ, ನಾವು ಸದಸ್ಯರ ಹೆಸರನ್ನು ಮಾತ್ರ ನೋಡಬಹುದು, ಆದರೆ ಫೋನ್ ನಂಬರ್ ನೋಡಲು ಸಾಧ್ಯವಿಲ್ಲ. |
01:46 | ಸರಿ, ನಾವೀಗ ಮೇನ್ ಬೇಸ್ ವಿಂಡೋಗೆ ಹಿಂದಿರುಗಿ, ಈ ವ್ಯೂ ಅನ್ನು ರಚಿಸೋಣ. |
01:53 | ಬಲಗಡೆಯ ಪ್ಯಾನಲ್ ನಲ್ಲಿ, ‘Create View’ ಮೇಲೆ ಕ್ಲಿಕ್ ಮಾಡೋಣ. |
01:58 | ಇಲ್ಲಿ, ‘View Design’ ಎಂಬ ಒಂದು ಹೊಸ ವಿಂಡೋ ಮತ್ತು ‘Add tables’ ಎಂಬ ಒಂದು ಪಾಪ್-ಅಪ್ ವಿಂಡೋಅನ್ನು ನೋಡುತ್ತಿದ್ದೇವೆ. |
02:06 | ‘Members’ ಮೇಲೆ ಕ್ಲಿಕ್ ಮಾಡೋಣ |
02:09 | ಮತ್ತು ಈ ಪಾಪ್- ಅಪ್ ವಿಂಡೋಅನ್ನು ಮುಚ್ಚೋಣ. |
02:12 | ಈಗ ‘View design’ ವಿಂಡೋದಲ್ಲಿದ್ದೇವೆ. |
02:16 | ‘MemberId’ ಮತ್ತು ‘Name’ ಫೀಲ್ಡ್ ಗಳ ಮೇಲೆ ಡಬಲ್-ಕ್ಲಿಕ್ ಮಾಡುವೆವು. |
02:21 | 'Id' ಫೀಲ್ಡ್ ಸೇರಿಸುವುದು ಯಾವಾಗಲೂ ಉಪಯುಕ್ತವಾಗಿದೆ. |
02:25 | ಏಕೆಂದರೆ, ಈ ವ್ಯೂ ಅನ್ನು ಇತರ ಸಂಬಂಧಿತ ಟೇಬಲ್ ಜೊತೆ ಸೇರಿಸಲು ಇದು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ‘BooksIssued’ ಟೇಬಲ್. |
02:34 | ನಾವು ಫಂಕ್ಷನ್ ಗಳು, ಕ್ರೈಟೀರಿಯಾ (ಮಾನದಂಡ) ಸೇರಿಸಬಹುದು ಮತ್ತು ಇದನ್ನು ನಮಗೆ ಬೇಕಾದಂತೆ ವರ್ಗೀಕರಿಸಬಹುದು (sort). |
02:40 | ಸದ್ಯಕ್ಕೆ, ಸದಸ್ಯರ ಹೆಸರುಗಳನ್ನು ಏರಿಕೆ ಕ್ರಮದಲ್ಲಿ ವರ್ಗೀಕರಿಸೋಣ. |
02:45 | ಇದಕ್ಕಾಗಿ, ಕೆಳಗಿನ ವಿಭಾಗದಲ್ಲಿ ‘Name’ ಕಾಲಂನಡಿ ಇರುವ ‘Sort’ ರೋನಲ್ಲಿ, ಖಾಲಿ ಸೆಲ್ ಮೇಲೆ ಕ್ಲಿಕ್ ಮಾಡೋಣ. |
02:54 | ನಂತರ ‘ascending’ ಮೇಲೆ ಕ್ಲಿಕ್ ಮಾಡೋಣ. |
02:58 | ನಮ್ಮ ಮೊದಲ ವ್ಯೂ ಅನ್ನು ಸೇವ್ ಮಾಡೋಣ. |
03:01 | ಇಲ್ಲಿ, ಈ ವ್ಯೂ ಗಾಗಿ ನಾವು ಒಂದು ವಿವರಣಾತ್ಮಕ ಹೆಸರನ್ನು ಟೈಪ್ ಮಾಡೋಣ –‘View: Members Name Only’. |
03:10 | ಮತ್ತು ‘OK ‘ ಬಟನ್ ಮೇಲೆ ಕ್ಲಿಕ್ ಮಾಡೋಣ. |
03:14 | ಆಧರಿತ ಡೇಟಾವನ್ನು ನೋಡಲು, ನಾವು ಮೇಲ್ಭಾಗದಲ್ಲಿ ‘Edit’ ಮೆನು ಮೇಲೆ ಕ್ಲಿಕ್ ಮಾಡೋಣ. |
03:22 | ನಂತರ, ಕೆಳಗೆ ‘Run Query’ ಮೇಲೆ ಕ್ಲಿಕ್ ಮಾಡೋಣ. |
03:27 | ಮೇಲ್ತುದಿಯಲ್ಲಿ, ʼಲೈಬ್ರರಿʼಯ ಎಲ್ಲಾ ಸದಸ್ಯರನ್ನು ಏರಿಕೆ ಕ್ರಮದಲ್ಲಿ ಪಟ್ಟಿ ಮಾಡಿರುವ ಹೊಸ ವಿಭಾಗವನ್ನು ನೋಡುತ್ತೇವೆ. |
03:36 | ನಮಗೆ ಯಾವುದೇ ಫೋನ್ ನಂಬರ್ ಗಳು ಕಾಣುತ್ತಿಲ್ಲ ಎಂದು ಗಮನಿಸಿ. |
03:40 | ಮತ್ತು ಇಲ್ಲಿ ನಮ್ಮ ಸರಳ ವ್ಯೂ ಇದೆ. |
03:43 | ನಮ್ಮ ಅಗತ್ಯತೆಗೆ ತಕ್ಕಂತೆ ನಾವು ವ್ಯೂ ಗಳನ್ನು ರಚಿಸಿ, ಅವುಗಳನ್ನು ಡಿಸೈನ್ ಮಾಡಬಹುದು. |
03:48 | ಮುಂದಿನ ಟಾಪಿಕ್ ಗೆ ಹೋಗುವ ಮೊದಲು, ಇಲ್ಲೊಂದು ಅಸೈನ್ಮೆಂಟ್ ಇದೆ. |
03:53 | ಸದಸ್ಯರಿಗೆ (Members) ಇಶ್ಯೂ ಮಾಡಿರುವ (Books Issued) ಮತ್ತು ಕೇವಲ ಚೆಕ್-ಇನ್ ಆಗದೇ ಇರುವ ಪುಸ್ತಕಗಳ ಒಂದು ವ್ಯೂ ಅನ್ನು ರಚಿಸಿ. |
04:01 | ಈ ವ್ಯೂ ನಲ್ಲಿ, ಈ ಫೀಲ್ಡ್ ಗಳನ್ನು ಸೇರಿಸಿ: ‘Book Titles, Member Names, Issue Date’ ಮತ್ತು ‘Return Date’. |
04:12 | ವ್ಯೂ ಅನ್ನು 'View: List of Books not checked in' ಎಂದು ಹೆಸರಿಸಿ. |
04:20 | ಸರಿ, ನಾವೀಗ ‘ಕಾಪಿ’ ವಿಧಾನವನ್ನು ಬಳಸಿ ಟೇಬಲ್ ಗಳನ್ನು ರಚಿಸಲು ಕಲಿಯೋಣ. |
04:25 | ಟೇಬಲ್ ರಚನೆಗಳು ಒಂದೇ ತೆರನಾಗಿರುತ್ತವೆ ಎಂದು ನಮಗೆ ಗೊತ್ತಿದ್ದರೆ, ಟೇಬಲ್ ರಚಿಸಲು ಇದು ಸುಲಭದ ವಿಧಾನವಾಗಿರುತ್ತದೆ. |
04:33 | ಇದಕ್ಕಾಗಿ, ನಮ್ಮ ಲೈಬ್ರರಿಯು ಡಿ.ವಿ.ಡಿ.ಗಳು ಮತ್ತು ಸಿ.ಡಿ.ಗಳನ್ನು ಹೊಂದಿದೆ ಎಂದು ನಾವು ಭಾವಿಸೋಣ. |
04:39 | ನಾವು ಈ ಡೇಟಾವನ್ನು “ಮೀಡಿಯಾ” ಎಂಬ ಹೊಸ ಟೇಬಲ್ ನಲ್ಲಿ ಸ್ಟೋರ್ ಮಾಡಬಹುದು. |
04:44 | ಉದಾಹರಣೆಗೆ, ಸಿ.ಡಿ. ಅಥವಾ ಡಿ.ವಿ.ಡಿ. ಶೀರ್ಷಿಕೆ ಮತ್ತು ಪ್ರಕಟಣೆಯ ವರ್ಷವನ್ನು ಹೊಂದಿರಬಹುದು. |
04:51 | ಆಡಿಯೋ ಮತ್ತು ವೀಡಿಯೋಗಳನ್ನು ಪ್ರತ್ಯೇಕಿಸಲು, “ಮೀಡಿಯಾ ಟೈಪ್” ಎಂಬ ಒಂದು ಫೀಲ್ಡ್ ಅನ್ನು ಸೇರಿಸೋಣ. |
05:00 | ಈಗ, ‘Books’ ಟೇಬಲ್, ಸರಿಸುಮಾರು ಒಂದೇ ರೀತಿಯ ಫೀಲ್ಡ್ ಗಳನ್ನು ಹೊಂದಿರುವುದರಿಂದ ನಾವು ‘Books’ ಟೇಬಲ್ ಅನ್ನು ಕಾಪಿ-ಪೇಸ್ಟ್ ಮಾಡಬಹುದು. |
05:08 | ನಂತರ, ಈ ಪ್ರಕ್ರಿಯೆಯಲ್ಲಿ ಫೀಲ್ಡ್ ಗಳು ಮತ್ತು ಟೇಬಲ್ ಹೆಸರನ್ನು ರಿನೇಮ್ ಮಾಡಬಹುದು. |
05:14 | ಇದು ಹೇಗೆಂದು ನೋಡೋಣ. |
05:16 | ನಾವೀಗ ಮುಖ್ಯ ಬೇಸ್-ವಿಂಡೋಗೆ ಹೋಗೋಣ. |
05:19 | ಇಲ್ಲಿ, ‘Books’ ಟೇಬಲ್ ಮೇಲೆ ರೈಟ್-ಕ್ಲಿಕ್ ಮಾಡೋಣ. |
05:23 | ಇಲ್ಲಿ ‘Copy’ ಆಯ್ಕೆಯನ್ನು ನೋಡಬಹುದು. ಇದರ ಮೇಲೆ ಕ್ಲಿಕ್ ಮಾಡೋಣ. |
05:28 | ನಂತರ ಅದರ ಮೇಲೆ ರೈಟ್-ಕ್ಲಿಕ್ ಮಾಡೋಣ. |
05:31 | ಇಲ್ಲಿರುವ ಬೇರೆ ಬೇರೆ ಆಯ್ಕೆಗಳನ್ನು ಗಮನಿಸಿ. ಇಲ್ಲಿ ‘Paste’ ಮತ್ತು ‘Paste Special’ ಸಹ ಇವೆ. |
05:39 | ನಾವು ನಿರ್ದಿಷ್ಟ ಫಾರ್ಮ್ಯಾಟ್ ನಲ್ಲಿ ಕಾಪಿ ಮತ್ತು ಪೇಸ್ಟ್ ಗಳನ್ನು ಬಳಸಬಹುದು. |
05:44 | ಸಾಧ್ಯವಿರುವ ಫಾರ್ಮ್ಯಾಟ್ ಗಳೆಂದರೆ ‘ಫಾರ್ಮ್ಯಾಟೆಡ್ ಟೆಕ್ಸ್ಟ್, HTML’ ಅಥವಾ ‘ಡೇಟಾ ಸೋರ್ಸ್ ಟೇಬಲ್’. |
05:51 | ಹೀಗೆ, ನಾವಿಲ್ಲಿ ಡೇಟಾಬೇಸ್ ಟೇಬಲ್ ಅನ್ನು ಆರಿಸಿಕೊಳ್ಳಬಹುದು |
05:55 | ಅಥವಾ ನಾವು ರೈಟ್- ಕ್ಲಿಕ್ ಮೆನುವಿನಿಂದ ‘Paste’ ಅನ್ನು ಆಯ್ಕೆಮಾಡಬಹುದು. |
05:59 | ಇದು ಒಂದು ವಿಜಾರ್ಡ್ ಅನ್ನು ತೆರೆಯುತ್ತದೆ. ಈ ವಿಂಡೋ ನಲ್ಲಿ ನಾವು, |
06:03 | ‘Table name’ಗಾಗಿ, ‘Media’ ಎಂದು ಟೈಪ್ ಮಾಡಿ, ನಮ್ಮ ಟೇಬಲ್ ಅನ್ನು ರಿನೇಮ್ ಮಾಡುವೆವು. |
06:11 | ಆಯ್ಕೆಗಳಲ್ಲಿ, 'Definition and data' ಮೇಲೆ ಕ್ಲಿಕ್ ಮಾಡುವೆವು. |
06:16 | ಈಗ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ. |
06:19 | ಮುಂದಿನ ವಿಂಡೋನಲ್ಲಿ, ನಾವು ಕಾಲಂಗಳನ್ನು ಸೇರಿಸಲಿದ್ದೇವೆ. |
06:23 | ಇಲ್ಲಿ ವಿವರಣೆಗಾಗಿ ನಾವು ‘BookId, title’ ಮತ್ತು ‘publish-year’ ಗಳನ್ನು ಆರಿಸಿಕೊಳ್ಳೋಣ. |
06:29 | ಈಗ, ಎಡಗಡೆ ಇರುವ ಈ ಫೀಲ್ಡ್ ಗಳನ್ನು ಆಯ್ಕೆಮಾಡಿ, ಅವುಗಳನ್ನು ಬಲಗಡೆಗೆ ಸರಿಸಲು ಸಿಂಗಲ್- ಆರೋ- ಬಟನ್ ಅನ್ನು ಬಳಸುವೆವು. |
06:39 | ನಂತರ ‘Next’ ಬಟನ್ ಮೇಲೆ ಕ್ಲಿಕ್ ಮಾಡುವೆವು. |
06:42 | ಮುಂದಿನ ವಿಂಡೋದಲ್ಲಿ, ನಮ್ಮ ಕಾಲಂಗಳನ್ನು ನೋಡುತ್ತೇವೆ. |
06:46 | ಇಲ್ಲಿ, ಫೀಲ್ಡ್ ಗಳನ್ನು ರಿನೇಮ್ ಮಾಡಬಹುದು. ಅವುಗಳ ಡೇಟಾ-ಟೈಪ್ ಗಳನ್ನು ಸಹ ಬದಲಾಯಿಸಬಹುದು. |
06:51 | ನಾವು ‘BookId ‘ಯನ್ನು ‘MediaId’ ಎಂದು ರಿನೇಮ್ ಮಾಡಿ, |
06:55 | ನಂತರ ‘Create’ ಬಟನ್ ಮೇಲೆ ಕ್ಲಿಕ್ ಮಾಡುವೆವು. |
06:59 | ಮುಖ್ಯ ಬೇಸ್-ವಿಂಡೋನಲ್ಲಿ, ನಮ್ಮ ಹೊಸ ‘Media’ ಟೇಬಲ್ ಇದೆ. |
07:05 | ಈಗ, ಆಡಿಯೋ ಅಥವಾ ವೀಡಿಯೋ ಎಂಬ ಮಾಹಿತಿಗಾಗಿ, ‘MediaType’ ಎಂಬ ಹೊಸ ಫೀಲ್ಡ್ ಅನ್ನು ಸೇರಿಸಲು, ಈ ಟೇಬಲ್ ಅನ್ನು ಎಡಿಟ್ ಮಾಡೋಣ. |
07:15 | ಈಗ, ‘Table Design’ ವಿಂಡೋದಲ್ಲಿದ್ದೇವೆ. |
07:19 | ಇಲ್ಲಿ, ನಾವು ‘MediaType’ ಅನ್ನು ಕೊನೆಯ ಕಾಲಂ ಆಗಿ ಸೇರಿಸೋಣ. |
07:24 | ‘publishyear’ ಕೆಳಗಿನ ಸೆಲ್ ಮೇಲೆ ಕ್ಲಿಕ್ ಮಾಡೋಣ. |
07:27 | ಮತ್ತು, 'MediaType’ ಅನ್ನು ‘Field Name’ ಗಾಗಿ ನಮೂದಿಸಿ. ‘Field Type’ ಗಾಗಿ ‘Text’ ಎನ್ನೋಣ. |
07:36 | ಈಗ ಈ ಟೇಬಲ್ ಡಿಸೈನ್ ಅನ್ನು ಸೇವ್ ಮಾಡೋಣ. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. |
07:41 | ಹೀಗೆ, ‘ಕಾಪಿ’ ವಿಧಾನವನ್ನು ಬಳಸಿ, ನಾವು ಈಗಷ್ಟೇ ನಮ್ಮ ‘Media’ ಟೇಬಲ್ ಅನ್ನು ರಚಿಸಿದ್ದೇವೆ. |
07:48 | ಸರಿ, ಇಲ್ಲಿ ಇನ್ನೊಂದು ಅಸೈನ್ಮೆಂಟ್ ಇದೆ. |
07:51 | ‘Use Wizard to Create table’ ವಿಧಾನವನ್ನು ಬಳಸಿ, ಒಂದು ಟೇಬಲ್ ರಚಿಸಿ. |
07:57 | ಇಲ್ಲಿ ‘Assets’ ಸ್ಯಾಂಪಲ್ ಟೇಬಲ್ ಬಳಸಿ. ಮತ್ತು, ಇದನ್ನು ‘AssetsCopy’ ಎಂದು ರಿನೇಮ್ ಮಾಡಿ. |
08:04 | ಈ ವಿಧಾನದಲ್ಲಿಯ ವಿವಿಧ ಆಯ್ಕೆಗಳನ್ನು ತಿಳಿದುಕೊಳ್ಳಿ. |
08:08 | ಇಲ್ಲಿಗೆ, ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ ಟೇಬಲ್ ಗಳನ್ನು ರಚಿಸುವ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:14 | ಸಂಕ್ಷಿಪ್ತವಾಗಿ, ಇಲ್ಲಿ ನಾವು |
08:17 | a) ವ್ಯೂ ಗಳನ್ನು ರಚಿಸಿ ಮತ್ತು b) ಕಾಪಿ ವಿಧಾನವನ್ನು ಬಳಸಿ ಟೇಬಲ್ ಅನ್ನು ರಚಿಸಲು ಕಲಿತೆವು. |
08:23 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
08:44 | ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |