LibreOffice-Suite-Base/C2/Create-queries-using-Query-Wizard/Kannada
From Script | Spoken-Tutorial
Revision as of 18:20, 7 April 2020 by Sandhya.np14 (Talk | contribs)
Time | Narration |
00:02 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
'ಕ್ವೆರಿ ವಿಜಾರ್ಡ್' ಅನ್ನು ಬಳಸಿ, ಸರಳವಾದ ಕ್ವೆರಿ ಗಳನ್ನು (ಪ್ರಶ್ನೆ) ರಚಿಸಲು, ಫೀಲ್ಡ್ ಗಳನ್ನು ಆಯ್ಕೆಮಾಡಲು, ಫೀಲ್ಡ್ ಗಳ ವರ್ಗೀಕರಣದ (sorting) ಕ್ರಮವನ್ನು ನಿಗದಿಪಡಿಸಲು ಮತ್ತು 'ಕ್ವೆರಿ' ಗಾಗಿ, ಸರ್ಚ್ ಮಾಡುವ ಬಗೆ (search criteria) ಅಥವಾ ಷರತ್ತುಗಳನ್ನು ಒದಗಿಸಲು ಕಲಿಯಲಿದ್ದೇವೆ. |
00:24 | ಮೊದಲಿಗೆ 'ಕ್ವೆರಿ' ಅಂದರೆ ಏನೆಂದು ಕಲಿಯೋಣ. |
00:29 | ಒಂದು ಕ್ವೆರಿ ಡೇಟಾಬೇಸ್ ನಿಂದ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಕ್ವೆರಿಯನ್ನು ಬಳಸಬಹುದು. |
00:36 | ಎಂದರೆ, ಒಂದು ನಿರ್ದಿಷ್ಟ ಮಾನದಂಡಕ್ಕೆ ಸರಿಹೊಂದುವ ಕೆಲವು ಡೇಟಾಗಾಗಿ ನಾವು ಡೇಟಾಬೇಸ್ ಅನ್ನು ಕ್ವೆರಿ ಕೇಳಬಹುದು. |
00:48 | ಉದಾಹರಣೆಗೆ, ನಮ್ಮ ಪರಿಚಿತ 'Library' ಡೇಟಾಬೇಸ್ ಅನ್ನು ನಾವು ನೋಡೋಣ. |
00:56 | ನಮ್ಮ Library ಡೇಟಾಬೇಸ್ ನಲ್ಲಿ, ಪುಸ್ತಕಗಳು ಮತ್ತು ಸದಸ್ಯರ ಮಾಹಿತಿಯನ್ನು ನಾವು ಶೇಖರಿಸಿದ್ದೇವೆ. |
01:04 | ಈಗ, ಲೈಬ್ರರಿಯ ಎಲ್ಲಾ ಸದಸ್ಯರ ಬಗ್ಗೆ Library ಡೇಟಾಬೇಸ್ ನಲ್ಲಿ ನಾವು ಕ್ವೆರಿ ಮಾಡಬಹುದು. |
01:12 | ಅಥವಾ, Library ಯಲ್ಲಿ ಇರದ ಎಲ್ಲಾ ಪುಸ್ತಕಗಳಿಗಾಗಿ ನಾವು ಡೇಟಾಬೇಸ್ ನಲ್ಲಿ ಕ್ವೆರಿ ಮಾಡಬಹುದು. |
01:21 | 'Base' ಅನ್ನು ಬಳಸಿ ಸರಳವಾದ ಒಂದು ಕ್ವೆರಿ ಯನ್ನು ನಾವು ಹೇಗೆ ರಚಿಸಬಹುದು ಎಂಬುದನ್ನು ನೋಡೋಣ. |
01:30 | 'Library' ಯ ಎಲ್ಲಾ ಸದಸ್ಯರನ್ನು ಅವರ ದೂರವಾಣಿ ಸಂಖ್ಯೆಯೊಂದಿಗೆ ಪಟ್ಟಿ ಮಾಡುವುದು ನಮ್ಮ ಉದಾಹರಣೆಯಾಗಿದೆ. |
01:44 | ನಾವು 'Library' ಡೇಟಾಬೇಸ್ ನಲ್ಲಿದ್ದೇವೆ. ಇದನ್ನು ತೆರೆಯುವುದು ಹೇಗೆಂದು ಬಹುಶ: ನಿಮಗೆ ಈಗಾಗಲೇ ತಿಳಿದಿರಬಹುದು. |
01:51 | ನಾವೀಗ ಎಡ ಪ್ಯಾನೆಲ್ ನಲ್ಲಿರುವ 'Queries' ಐಕಾನ್ ಮೇಲೆ ಕ್ಲಿಕ್ ಮಾಡೋಣ. |
01:57 | ಬಲ ಪ್ಯಾನೆಲ್ ನಲ್ಲಿ ನಾವು ಮೂರು ಆಯ್ಕೆಗಳನ್ನು ನೋಡಬಹುದು. |
02:03 | ಮೊದಲಿಗೆ ನಾವು ಸರಳವಾದ ಕ್ವೆರಿ ರಚಿಸುತ್ತಿರುವುದರಿಂದ, ಸುಲಭ ಮತ್ತು ಶೀಘ್ರವಾದ ವಿಧಾನವನ್ನು ನಾವು ಆಯ್ದುಕೊಳ್ಳುವೆವು. |
02:11 | ಅದು 'Query Wizard' ಅನ್ನು ಬಳಸುವುದಾಗಿದೆ. |
02:17 | ಜಟಿಲವಾದ ಕ್ವೆರಿಗಳನ್ನು ರಚಿಸಲು, 'Base' ನಮಗೆ 'Create Query in Design View' ಮತ್ತು 'Create Query in SQL view' ನಂತಹ |
02:28 | ಅತ್ಯಂತ ಅನುಕೂಲಕರ ಆಯ್ಕೆಗಳನ್ನು ಒದಗಿಸುತ್ತದೆ. ಇವುಗಳ ಬಗ್ಗೆ ನಾವು ನಂತರ ಕಲಿಯಲಿದ್ದೇವೆ. |
02:36 | ಸದ್ಯಕ್ಕೆ, ನಾವು 'Use Wizard to Create Query' ಮೇಲೆ ಕ್ಲಿಕ್ ಮಾಡೋಣ. |
02:43 | ಈಗ, ಮೇಲ್ಗಡೆ Query Wizard ಎಂಬ ಒಂದು ಪಾಪ್–ಅಪ್ ವಿಂಡೋ ಅನ್ನು ನಾವು ನೋಡಬಹುದು. |
02:50 | ಎಡಗಡೆಗೆ, ನಾವು ಮಾಡಲಿರುವ 8 ಹಂತಗಳನ್ನು ನೋಡುತ್ತೇವೆ. |
02:57 | ನಾವೀಗ 'ಹಂತ 1 - 'Field Selection' ನಲ್ಲಿದ್ದೇವೆ. |
03:03 | ಬಲಗಡೆಗೆ, 'Tables' ಎಂಬ ಲೇಬಲ್ ನ ಕೆಳಗೆ, ನಾವು ಡ್ರಾಪ್ – ಡೌನ್ ಬಾಕ್ಸ್ ಒಂದನ್ನು ನೋಡಬಹುದು. |
03:11 | ಇಲ್ಲಿಯೇ ನಾವು ಈ ಕ್ವೆರಿಯಿಂದ ನಮಗೆ ಬೇಕಾಗುವ ಡೇಟಾದ ಮೂಲವನ್ನು ಆಯ್ದುಕೊಳ್ಳುವೆವು. |
03:21 | ನಮ್ಮ query ಉದಾಹರಣೆಯು, Library ಯ ಎಲ್ಲಾ ಸದಸ್ಯರ ಪಟ್ಟಿಯನ್ನು ಪಡೆಯುವ ಕುರಿತು ಆಗಿರುವುದರಿಂದ, ನಾವು ಡ್ರಾಪ್–ಡೌನ್ ಬಾಕ್ಸ್ ನಲ್ಲಿ 'Tables: Members' ಮೇಲೆ ಕ್ಲಿಕ್ ಮಾಡುವೆವು. |
03:35 | ಈಗ, ನಾವು ಎಡಭಾಗದ 'Available fields' ಪಟ್ಟಿಯಲ್ಲಿ 'Name' ಫೀಲ್ಡ್ ಮೇಲೆ ಡಬಲ್ – ಕ್ಲಿಕ್ ಮಾಡಿ ಅದನ್ನು ಬಲಗಡೆ list box ಗೆ ಸರಿಸೋಣ. |
03:50 | ನಂತರ, ಎಡಭಾಗದ 'Phone' ಫೀಲ್ಡ್ ಮೇಲೆ ಕ್ಲಿಕ್ ಮಾಡಿ ಅದನ್ನು ಬಲಕ್ಕೆ ಸರಿಸೋಣ. |
04:00 | ಗಮನಿಸಿ, ಎಲ್ಲಾ ಫೀಲ್ಡ್ ಗಳನ್ನು ಬಲಗಡೆ ಸರಿಸಲು, ಬಲಕ್ಕೆ ತೋರಿಸುತ್ತಿರುವ ಡಬಲ್-ಆರೋ ಬಟನ್ ಅನ್ನು ನಾವು ಬಳಸಬಹುದು. |
04:09 | ಈಗ, ನಾವು ಕೆಳಗಡೆ 'Next' ಬಟನ್ ಮೇಲೆ ಕ್ಲಿಕ್ ಮಾಡೋಣ. |
04:15 | ನಾವೀಗ 'Step 2 - Sorting Order' ನಲ್ಲಿ ಇದ್ದೇವೆ. |
04:20 | ನಮ್ಮ ಕ್ವೆರಿಯ ಫಲಿತಾಂಶವು ಸದಸ್ಯರು ಮತ್ತು ಅವರ ದೂರವಾಣಿ ಸಂಖ್ಯೆಗಳ ಪಟ್ಟಿ ಆಗಿರುವುದರಿಂದ, ನಾವಿದನ್ನು ಹಾಗೆಯೇ ಬಿಡಬಹುದು. |
04:30 | ಅಥವಾ ನಾವು ಸದಸ್ಯರ ಹೆಸರಿನ ಕ್ರಮದಲ್ಲಿ ಪಟ್ಟಿಯನ್ನು ಹೊಂದಿಸಬಹುದು. |
04:36 | 'Base Wizard,' ರಿಸಲ್ಟ್ ಲಿಸ್ಟ್ ನಲ್ಲಿ ಏಕಕಾಲಕ್ಕೆ 4 ಫೀಲ್ಡ್ ಗಳನ್ನು ವರ್ಗೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ. |
04:45 | ಸದ್ಯಕ್ಕೆ ನಾವು ಮೇಲ್ತುದಿಯಲ್ಲಿರುವ ಡ್ರಾಪ್ – ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡೋಣ, |
04:51 | ಮತ್ತ 'Members.Name' ಮೇಲೆ ಕ್ಲಿಕ್ ಮಾಡೋಣ. |
04:55 | ಹೆಸರುಗಳನ್ನು ಏರಿಕೆ ಅಥವಾ ಇಳಿಕೆ ಕ್ರಮದಲ್ಲಿ ವರ್ಗೀಕರಿಸಲು ಸಹ ನಾವು ಆಯ್ಕೆಮಾಡಬಹುದು. |
05:03 | ನಾವೀಗ 'Ascending' (ಏರಿಕೆ ಕ್ರಮ) ಆಯ್ಕೆ ಮೇಲೆ ಕ್ಲಿಕ್ ಮಾಡೋಣ |
05:07 | ಮತ್ತು ಮುಂದಿನ ಹಂತಕ್ಕೆ ಸಾಗೋಣ. |
05:11 | 'ಸ್ಟೆಪ್ 3 – ಸರ್ಚ್ ಕಂಡೀಷನ್ಸ್'. |
05:16 | ನಾವು ನಮ್ಮ ಫಲಿತಾಂಶವನ್ನು ಕೆಲವು ಷರತ್ತುಗಳಿಗೆ ಸೀಮಿತಗೊಳಿಸಲು ಈ ಹಂತವು ಸಹಾಯಮಾಡುತ್ತದೆ. |
05:22 | ಉದಾಹರಣೆಗೆ, ನಾವು R ಅಕ್ಷರದಿಂದ ಪ್ರಾರಂಭವಾಗುವ ಹೆಸರಿರುವ ಸದಸ್ಯರಿಗೆ ಮಾತ್ರ ನಮ್ಮ ಫಲಿತಾಂಶವನ್ನು ಸೀಮಿತಗೊಳಿಸಬಹುದು. |
05:34 | ಇದಕ್ಕಾಗಿ, ನಾವು ಕ್ರಮವಾಗಿ 'Fields' ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ, ನಂತರ 'Members.Name' ಮೇಲೆ ಕ್ಲಿಕ್ ಮಾಡುವೆವು. |
05:45 | ಈಗ 'Condition' ಎಂಬ ಡ್ರಾಪ್ – ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
05:51 | ಇಲ್ಲಿರುವ ವಿವಿಧ ಷರತ್ತುಗಳನ್ನು ಗಮನಿಸಿ. |
05:58 | ನಾವು 'like' ಮೇಲೆ ಕ್ಲಿಕ್ ಮಾಡೋಣ. |
06:02 | 'Value' ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾವು ದೊಡ್ಡಕ್ಷರ ‘R’ ಮತ್ತು ಪರ್ಸೆಂಟೇಜ್ ಚಿಹ್ನೆಯನ್ನು ಟೈಪ್ ಮಾಡೋಣ. |
06:13 | ಹೀಗೆ, ನಮ್ಮ ಕ್ವೆರಿಯಲ್ಲಿ ಸರಳ ಮತ್ತು ಜಟಿಲ ಷರತ್ತುಗಳನ್ನು ನಾವು ಸೇರಿಸಬಹುದು. |
06:22 | ಈಗ ಎಲ್ಲಾ ಸದಸ್ಯರ ಪಟ್ಟಿ ಮಾಡಲು, 'Value' ಟೆಕ್ಸ್ಟ್-ಬಾಕ್ಸ್ ನಿಂದ 'R%' ಅನ್ನು ಡಿಲೀಟ್ ಮಾಡಿ ನಂತರ 'Next' ಬಟನ್ ಮೇಲೆ ಕ್ಲಿಕ್ ಮಾಡೋಣ. |
06:37 | ನಾವು ನೇರವಾಗಿ ಹಂತ 7ಕ್ಕೆ ಬಂದಿರುವುದನ್ನು ಗಮನಿಸಿ. |
06:43 | ಏಕೆಂದರೆ, ನಾವು ಒಂದೇ 'table' ನಿಂದ ಸರಳವಾದ ಕ್ವೆರಿ ಒಂದನ್ನು ರಚಿಸುತ್ತಿದ್ದೇವೆ. |
06:51 | ಮತ್ತು ನಮ್ಮ ಕ್ವೆರಿ ವಿವರಗಳನ್ನು ಹಿಂದಿರುಗಿಸುತ್ತದೆ, ಸಾರಾಂಶವನ್ನಲ್ಲ. |
06:57 | ಸಾರಾಂಶದ ಕ್ವೆರಿಗಳು ಒಟ್ಟಾರೆ ಫಂಕ್ಷನ್ ಗಳ (aggregate functions) ಡೇಟಾವನ್ನು ಗುಂಪುಗೂಡಿಸಿ ತೋರಿಸುತ್ತವೆ. |
07:05 | ಉದಾಹರಣೆಗೆ, ಎಲ್ಲಾ ಸದಸ್ಯರ ಎಣಿಕೆ ಅಥವಾ ಎಲ್ಲಾ ಪುಸ್ತಕಗಳ ಬೆಲೆಗಳ ಮೊತ್ತ. |
07:13 | ಇವುಗಳ ಕುರಿತು ನಾವು ನಂತರ ಕಲಿಯಲಿದ್ದೇವೆ. |
07:17 | ಸರಿ, ನಾವೀಗ ಇಲ್ಲಿ Aliases (ಏಲಿಯಸಿಸ್) ಅನ್ನು ನಿಗದಿಪಡಿಸೋಣ. |
07:23 | ಅಂದರೆ- ನಾವು ಪಡೆಯುವ ಲಿಸ್ಟ್ ನಲ್ಲಿ, ಅರ್ಥಪೂರ್ಣ ಮತ್ತು ವಿವರಣಾತ್ಮಕ ಲೇಬಲ್ ಗಳು ಅಥವಾ ಹೆಡರ್ ಗಳನ್ನು ಒದಗಿಸೋಣ. |
07:32 | ಹಾಗಾಗಿ, 'Name' ಫೀಲ್ಡ್, 'Member Name' ಅನ್ನು ಏಲಿಯಸ್ ಆಗಿ ಮತ್ತು 'Phone' ಫೀಲ್ಡ್ 'Phone Number' ಅನ್ನು ಏಲಿಯಸ್ ಆಗಿ ಹೊಂದಿರಬಹುದು. |
07:46 | ನಾವು ಈ ಹೊಸ ಏಲಿಯಸ್ ಗಳನ್ನು ಎರಡು ಟೆಕ್ಸ್ಟ್ – ಬಾಕ್ಸ್ ಗಳಲ್ಲಿ ಟೈಪ್ ಮಾಡಿ, 'Next' ಬಟನ್ ಮೇಲೆ ಕ್ಲಿಕ್ ಮಾಡೋಣ. |
07:57 | ನಾವೀಗ ಕೊನೆಯ ಹಂತವಾದ 'Step 8 ' ನಲ್ಲಿದ್ದೇವೆ. |
08:03 | ಇಲ್ಲಿ, ನಮ್ಮ ಸರಳ ಕ್ವೆರಿಗೆ ನಾವು ಒಂದು ಒಳ್ಳೆಯ ವಿವರಣಾತ್ಮಕ ಹೆಸರನ್ನು ಕೊಡೋಣ. |
08:09 | ನಾವೀಗ 'Name of the Query’ ಲೇಬಲ್ ಗಾಗಿ, 'List of all members and their phone numbers' ಎಂದು ಟೈಪ್ ಮಾಡೋಣ. |
08:20 | ಗಮನಿಸಿ, ಈಗ ವಿಜಾರ್ಡ್ ನಲ್ಲಿ ನಮ್ಮ ಆಯ್ಕೆಗಳ ಮೇಲ್ನೋಟವನ್ನು ನಾವು ನೋಡುತ್ತಿದ್ದೇವೆ. |
08:27 | ಮತ್ತು ಇಲ್ಲಿಂದ ನಾವು ಹೇಗೆ ಮುಂದುವರಿಯಬಹುದು? |
08:31 | ಮೇಲ್ಗಡೆ ಬಲಭಾಗದಲ್ಲಿ 'Display Query' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ 'Finish' ಬಟನ್ ಮೇಲೆ ಕ್ಲಿಕ್ ಮಾಡೋಣ. |
08:41 | 'wizard' ವಿಂಡೋ ಮುಚ್ಚಿದೆ ಮತ್ತು ಅಲ್ಲಿ 'List of all members and their phone numbers' ಎಂಬ ಒಂದು ಹೊಸ ವಿಂಡೋ ಇದೆ. |
08:52 | ಗಮನಿಸಿ, 'Members' ಟೇಬಲ್ ನಲ್ಲಿ ನಾವು ಮೊದಲು ಸೇರಿಸಿದ್ದ ನಾಲ್ಕು ಸದಸ್ಯರ ಹೆಸರನ್ನು ಅವರ ದೂರವಾಣಿ ಸಂಖ್ಯೆಗಳೊಂದಿಗೆ ನೋಡುತ್ತಿದ್ದೇವೆ. |
09:04 | ಅಲ್ಲದೆ, ಈ ಪಟ್ಟಿಯನ್ನು ಇಂಗ್ಲಿಷ್ ವರ್ಣಮಾಲೆಯ ಏರಿಕೆ ಕ್ರಮದಲ್ಲಿ ಹೊಂದಿಸಿರುವುದನ್ನು ಸಹ ನಾವು ನೋಡುತ್ತೇವೆ. |
09:13 | ಹೀಗೆ, ಇದು ನಮ್ಮ ಮೊದಲ ಸರಳ ಕ್ವೆರಿ ಆಗಿದೆ. |
09:18 | ಇಲ್ಲೊಂದು ಅಸೈನ್ಮೆಂಟ್ ಇದೆ. |
09:21 | ಎಲ್ಲಾ ಪುಸ್ತಕಗಳನ್ನು (Books) ಏರಿಕೆ ಕ್ರಮದಲ್ಲಿ ಪಟ್ಟಿ ಮಾಡುವ ಕ್ವೆರಿ ಒಂದನ್ನು ರಚಿಸಿ. |
09:28 | ಎಲ್ಲಾ ಫೀಲ್ಡ್ ಗಳನ್ನು ಸೇರಿಸಿ. |
09:31 | ಇದನ್ನು ‘List of all books in the Library’ ಎಂದು ಹೆಸರಿಸಿ. |
09:38 | ಇಲ್ಲಿಗೆ ನಾವು ’ಲಿಬರ್ ಆಫಿಸ್ ಬೇಸ್’ ನಲ್ಲಿ ವಿಜಾರ್ಡ್ ಅನ್ನು ಬಳಸಿ ಕ್ವೆರಿಗಳನ್ನು ರಚಿಸುವ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:45 | ಸಂಕ್ಷಿಪ್ತವಾಗಿ, ನಾವು:
'ಕ್ವೆರಿ ವಿಜಾರ್ಡ್' ಅನ್ನು ಬಳಸಿ ಸರಳ ಕ್ವೆರಿಗಳನ್ನು ರಚಿಸಲು, ಫೀಲ್ಡ್ ಗಳನ್ನು ಆರಿಸಲು, ಫೀಲ್ಡ್ ಗಳ ವರ್ಗೀಕರಣದ ಕ್ರಮವನ್ನು ನಿಗದಿಪಡಿಸಲು ಮತ್ತು ಕ್ವೆರಿಗಾಗಿ ಸರ್ಚ್ ಮಾಡುವ ಬಗೆ ಅಥವಾ ಷರತ್ತುಗಳನ್ನು ಒದಗಿಸಲು ಕಲಿತೆವು. |
10:00 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD
ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
10:12 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
10:17 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
10:22 | ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |