Java/C3/Java-Interfaces/Kannada
From Script | Spoken-Tutorial
Revision as of 16:52, 4 April 2020 by Sandhya.np14 (Talk | contribs)
(This script is translated by Melvin & uploaded by Sandhya on 4th April 2020) (outline & script to be corrected yet)
Time | Narration | ||
00:01 | ಜಾವಾ ಇಂಟರ್ ಫೇಸ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ | ||
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ ಫೇಸ್ ಒಂದನ್ನು ರಚಿಸುವ ಕುರಿತು ಮತ್ತು, | ||
00:10 | ಇಂಪ್ಲೆಮೆಂಟೇಶನ್ ಕ್ಲಾಸುಗಳ ರಚನೆ ಮತ್ತು ಇಂಟರ್ ಫೇಸ್ ನ ಬಳಕೆಯನ್ನು ಕಲಿಯಲಿದ್ದೇವೆ. | ||
00:16 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04 ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ | ||
00:28 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. | ||
00:36 | ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳ ಜ್ಞಾನವನ್ನು ಸಹ ಹೊಂದಿರಬೇಕು | ||
00:42 | ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. | ||
00:48 | ಮೊದಲಿಗೆ ನಾವು ಇಂಟರ್ ಫೇಸ್ ಏನೆಂಬುದನ್ನು ಅರಿತುಕೊಳ್ಳೋಣ. | ||
00:52 | ಇಂಟರ್ ಫೇಸ್ ಒಂದು ಅಬ್ಸ್ಟ್ರಾಕ್ಟ್ ಮೆಥಡ್ ಗಳ ಮತ್ತು ಸ್ಟಾಟಿಕ್ ಡೇಟಾ ಮೆಂಬರ್ ಗಳ ಗಣವನ್ನು ಹೊಂದಿರುತ್ತದೆ. | ||
00:58 | ಇದು ಬಾಡಿ ಇಲ್ಲದ ಮೆಥಡ್ ಗಳ ಗಣದ ಸಿಗ್ನೇಚರ್ ಗಳನ್ನು ನಿರೂಪಿಸುತ್ತದೆ. | ||
01:04 | ಇದನ್ನು interface ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ. | ||
01:08 | ನಾವೀಗ ಎಕ್ಲಿಪ್ಸ್ ನತ್ತ ಸಾಗಲಿದ್ದೇವೆ ಮತ್ತು InterfaceDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸಲಿದ್ದೇವೆ. | ||
01:15 | ಇಲ್ಲಿ, ಇಂಟರ್ ಫೇಸ್ ಗಳ ಬಳಕೆಯನ್ನು ತೋರಿಸಲು, ಅಗತ್ಯವಿರುವ ಕ್ಲಾಸುಗಳು ಮತ್ತು ಇಂಟರ್ ಫೇಸ್ ಅನ್ನು ರಚಿಸಲಿದ್ದೇವೆ. | ||
01:24 | src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Interface ಮೇಲೆ ಕ್ಲಿಕ್ ಮಾಡಿ. | ||
01:30 | ಹೆಸರನ್ನು Animal ಎಂಬುದಾಗಿ ಟೈಪ್ ಮಾಡಿ ಮತ್ತು Enter ಒತ್ತಿ. | ||
01:34 | ಇಂಟರ್ ಫೇಸ್ ಅನ್ನು ನಿರೂಪಿಸಲು ʻʻinterface'’ ಕೀವರ್ಡ್ ಅನ್ನು ಬಳಸಲಾಗಿದೆ ಎಂಬುದನ್ನು ಗಮನಿಸಿ. | ||
01:39 | ಈಗ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. | ||
01:43 | ಇಲ್ಲಿ ಇಂಟರ್ ಫೇಸ್ ನ ಹೆಸರು Animal ಆಗಿದೆ. | ||
01:46 | ಇದು talk(), see() ಮತ್ತು move() ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ. | ||
01:52 | ಇಂಟರ್ ಫೇಸ್ ನಲ್ಲಿನ ಈ ಎಲ್ಲಾ ಮೆಥಡ್ ಗಳು ಅಂತರ್ಗತವಾಗಿ ಪಬ್ಲಿಕ್ ಮತ್ತು ಅಬ್ಸ್ಟ್ರಾಕ್ಟ್ ಆಗಿವೆ. | ||
01:59 | ಇಂಟರ್ ಫೇಸ್ ಒಂದು ಕಾನ್ಸ್ಟಂಟ್ ವೇರಿಯೇಬಲ್ ಘೋಷಣೆಗಳನ್ನು ಹೊಂದಿರುತ್ತದೆ. | ||
02:04 | ಇಲ್ಲಿ, ಕಾನ್ಸ್ಟಂಟ್ ಸ್ಟ್ಟಿಂಗ್ ಮೌಲ್ಯ “Mammal” ಅನ್ನು ವೇರಿಯೇಬಲ್ “type1” ಗೆ ಅಸೈನ್ ಮಾಡಲಾಗಿದೆ. | ||
02:12 | ಮತ್ತು “Reptiles” ಅನ್ನು ವೇರಿಯೇಬಲ್ “type2” ಗೆ ಅಸೈನ್ ಮಾಡಲಾಗಿದೆ. | ||
02:16 | ಇಂಟರ್ ಫೇಸ್ ಒಂದರಲ್ಲಿ ನಿರೂಪಿಸಲಾದ ಎಲ್ಲಾ ಕಾನ್ಸ್ಟಂಟ್ ಮೌಲ್ಯಗಳು ಅಂತರ್ಗತವಾಗಿ ಪಬ್ಲಿಕ್, ಸ್ಟಾಟಿಕ್ ಮತ್ತು ಫೈನಲ್ ಆಗಿವೆ. | ||
02:25 | ನಂತರ ನಾವು ಇಂಟರ್ ಫೇಸ್ ಗಾಗಿ ಉದಾಹರಣೆಯೊಂದಿಗೆ ಇಂಪ್ಲೆಮೆಂಟೇಷನ್ ಕ್ಲಾಸ್ ನೋಡಲಿದ್ದೇವೆ. | ||
02:32 | ಇಲ್ಲಿ ಹ್ಯೂಮನ್ ಎಂಬುದು ಕ್ಲಾಸ್ ಆಗಿದ್ದು ಅನಿಮಲ್ ಇಂಟರ್ ಫೇಸ್ ಅನ್ನು ಕಾರ್ಯಗತಗೊಳಿಸುತ್ತದೆ. | ||
02:38 | ಹೀಗೆ, talk(), see() ಮತ್ತು move() ಮೆಥಡ್ ಗಳಿಗಾಗಿ ಇದು ಕಾರ್ಯಗತಗೊಳಿಸುವಿಕೆಯನ್ನು ಒದಗಿಸಬೇಕು. | ||
02:45 | ಕ್ಲಾಸ್ ಒಂದು ಅನೇಕ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸಬಲ್ಲದು. | ||
02:49 | ಉದಾಹರಣೆಯಲ್ಲಿ ತೋರಿಸಿರುವಂತೆ, ಹ್ಯೂಮನ್ ಕ್ಲಾಸ್ ಎನ್ನುವುದು ಅನಿಮಲ್ ಮತ್ತು ಆಕ್ಷನ್ ಎಂಬ ಎರಡು ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುತ್ತದೆ. | ||
02:57 | ವಿಭಿನ್ನ ಇಂಟರ್ ಫೇಸ್ ಗಳನ್ನು ಗುರುತಿಸಲು ಸಿಂಟ್ಯಾಕ್ಸ್ ನಲ್ಲಿ ಕೊಮಾ ಅಪರೇಟರ್ ಅನ್ನು ಬಳಸಿರುವುದನ್ನು ಗಮನಿಸಿ. | ||
03:04 | ಈಗ ಈ ಕ್ಲಾಸ್, ಅನಿಮಲ್ ಮತ್ತು ಆಕ್ಷನ್ ಇಂಟರ್ ಫೇಸ್ ಗಳೆರಡರಲ್ಲೂ ಎಲ್ಲಾ ಅಬ್ಸ್ಟ್ರಾಕ್ಟ್ ಮೆಥಡ್ ಗಳಿಗೆ ಕಾರ್ಯಗತಗೊಳಿಸುವಿಕೆಯನ್ನು ಒದಗಿಸಬೇಕು. | ||
03:13 | ಇಲ್ಲಿರುವ ಚಿತ್ರವು ಒಂದು ಇಂಪ್ಲೆಮೆಂಟ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. | ||
03:18 | ಅನಿಮಲ್ ಕ್ಲಾಸ್ ಇಲ್ಲಿ ಇಂಟರ್ ಫೇಸ್ ಆಗಿದೆ. | ||
03:22 | ಹ್ಯೂಮನ್ ಮತ್ತು ಸ್ನೇಕ್ ಕ್ಲಾಸುಗಳು ಎರಡು ಇಂಪ್ಲೆಮೆಂಟೇಷನ್ ಕ್ಲಾಸುಗಳಾಗಿವೆ. | ||
03:28 | ಹ್ಯೂಮನ್ ಕ್ಲಾಸು, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಕಾರ್ಯಗತಗೊಳಿಸುವಿಕೆಗಳನ್ನು ಒದಗಿಸುತ್ತದೆ. | ||
03:36 | ಮತ್ತು, ಸ್ನೇಕ್ ಕ್ಲಾಸು, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಕಾರ್ಯಗತಗೊಳಿಸುವಿಕೆಗಳನ್ನು ಒದಗಿಸುತ್ತದೆ. | ||
03:45 | ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ ಇಂಟರ್ ಫೇಸ್ ಗಳ ಬಳಕೆಯನ್ನು ತಿಳಿದುಕೊಳ್ಳೋಣ. | ||
03:50 | default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಹ್ಯೂಮನ್ ಎನ್ನುವ ಕ್ಲಾಸನ್ನು ರಚಿಸಿ. | ||
03:56 | ಈಗ, ಅನಿಮಲ್ ನ ಇಂಪ್ಲೆಮೆಂಟೇಷನ್ ಕ್ಲಾಸನ್ನು ಮಾಡಲು ಹೀಗೆ ಟೈಪ್ ಮಾಡಿ: implements Animal. | ||
04:04 | ನಾವೀಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ (ದೋಷ) ಅನ್ನು ನೋಡಬಹುದು. | ||
04:09 | ಅನಿಮಲ್ ಇಂಟರ್ ಫೇಸ್ ಗೆ ಇಂಪ್ಲೆಮೆಂಟೇಷನ್ ಒಂದನ್ನು ಒದಗಿಸಬೇಕು ಎಂಬುದನ್ನು ಈ ಎರರ್ ಸೂಚಿಸುತ್ತದೆ. | ||
04:15 | ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನಾವು ನೋಡೋಣ. | ||
04:19 | ಈಗ talk(), see() ಮತ್ತು move() ವಿಧಾನಗಳನ್ನು ನಿರೂಪಿಸೋಣ. | ||
04:23 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void talk( ) ಸುರುಳಿಯಾಕಾರದ ಆವರಣ ಚಿಹ್ನೆಯೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳೊಗೆ "I am a human and I belong to" ಎಂದು ಟೈಪ್ ಮಾಡಿ. | ||
04:37 | ನಾವೀಗ ಅನಿಮಲ್ ಇಂಟರ್ ಫೇಸ್ ನಲ್ಲಿ ಘೋಷಿಸಿರುವ ಸ್ಟಾಟಿಕ್, ಫೈನಲ್ ವೇರಿಯೇಬಲ್ ಟೈಪ್1 ನ ಮೌಲ್ಯವನ್ನು ಬಳಸಬಹುದು. | ||
04:45 | ಈ ಉದ್ದೇಶಕ್ಕಾಗಿ + Animal.type1+ ಹಾಗೂ ಆವರಣ ಚಿಹ್ನೆಗಳೊಳಗೆ "family" ಅಲ್ಪವಿರಾಮ ಚಿಹ್ನೆ ಎಂದು ಟೈಪ್ ಮಾಡಿ. | ||
04:54 | ನಾವೀಗ see() ವಿಧಾನವನ್ನು ಕಾರ್ಯಗತಗೊಳಿಸೋಣ. | ||
04:57 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void see( ) ಮತ್ತು ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳಗೆ "I can see all colors" ಅಲ್ಪವಿರಾಮ ಟೈಪ್ ಮಾಡಿ. | ||
05:11 | ನಾವು move() ವಿಧಾನವನ್ನು ಸಹ ನಿರೂಪಿಸಬೇಕು. | ||
05:14 | ಈಗ ಹೀಗೆ ಟೈಪ್ ಮಾಡಿ : public void move( ) ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳಗೆ "I move by walking" ಅರ್ಧವಿರಾಮ ಚಿಹ್ನೆ ಟೈಪ್ ಮಾಡಿ. | ||
05:29 | ಈ ಎಲ್ಲಾ ಮೆಥಡ್ ಗಳನ್ನು ಕಾರ್ಯಗತಗೊಳಿಸಿದ ನಂತರ ಎರರ್ ನಾಪತ್ತೆಯಾಗುತ್ತದೆ ಎಂಬುದನ್ನು ಗಮನಿಸಿ. | ||
05:34 | ಮುಂದೆ, ಸ್ನೇಕ್ ಕ್ಲಾಸನ್ನು ಹೇಗೆ ನಿರೂಪಿಸಬಹುದು ಎಂದು ನೋಡೋಣ. | ||
05:38 | ನಾನು ಈಗಲೇ ನನ್ನ ಪ್ರಾಜೆಕ್ಟ್ ನಲ್ಲಿ ರಚಿಸಿದ್ದೇನೆ. | ||
05:42 | ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು ಸ್ನೇಕ್ ಕ್ಲಾಸ್ ಅನ್ನು ರಚಿಸಿ ಮತ್ತು ಸ್ಕ್ರೀನ್ ನಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿ. | ||
05:49 | ನಾವೀಗ ಕೋಡ್ ಅನ್ನು ನೋಡೋಣ. | ||
05:52 | ಅನಿಮಲ್ ಇಂಟರ್ ಫೇಸ್ ನ ಎಲ್ಲಾ ಮೆಥಡ್ ಗಳಾದ talk(), see() ಮತ್ತು move() ಗಳನ್ನು ಈ ಕ್ಲಾಸ್ ಒಳಗೆ ಕಾರ್ಯಗತಗೊಳಿಸಿರುವುದನ್ನು ನಾವು ನೋಡಬಹುದು. | ||
06:01 | ಇಲ್ಲಿ talk() ವಿಧಾನವು “I am a snake and I belong to” ಎಂಬುದಾಗಿ ಪ್ರಿಂಟ್ (ಮುದ್ರಿಸು) ಮಾಡುತ್ತದೆ. | ||
06:07 | ನಂತರ Animal.type2 ನ ಮೌಲ್ಯವನ್ನು ಮತ್ತು ನಂತರ “family” ಯನ್ನು ಪ್ರಿಂಟ್ ಮಾಡಬೇಕು. | ||
06:13 | ಇಲ್ಲಿ see() ವಿಧಾನವು “I can see only in black and white” ಎಂಬುದಾಗಿ ಪ್ರಿಂಟ್ ಮಾಡುತ್ತದೆ. | ||
06:19 | move() ವಿಧಾನವು "I move by crawling" ಅನ್ನು ಪ್ರಿಂಟ್ ಮಾಡುತ್ತದೆ. | ||
06:23 | talk(), see() ಮತ್ತು move() ಮೆಥಡ್ ಗಳು ಮುಂತಾದುವುಗಳ ತನ್ನದೇ ಆದ ಕಾರ್ಯಗತಗೊಳಿಸುವಿಕೆಗಳನ್ನು ಹ್ಯೂಮನ್ ಕ್ಲಾಸ್ ಹೊಂದಿರುವುದನ್ನು ಗಮನಿಸಿ. | ||
06:31 | ಮತ್ತು talk(), see() ಮತ್ತು move()() ಮೆಥಡ್ ಗಳು ಮುಂತಾದುವುಗಳ ತನ್ನದೇ ಆದ ಕಾರ್ಯಗತಗೊಳಿಸುವಿಕೆಗಳನ್ನು ಸ್ನೇಕ್ ಕ್ಲಾಸ್ ಹೊಂದಿರುವುದನ್ನು ಗಮನಿಸಿ. | ||
06:39 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು new > class ಮೇಲೆ ಕ್ಲಿಕ್ ಮಾಡಿ, ನಂತರ ಹೆಸರನ್ನು Demo ಎಂಬುದಾಗಿ ಟೈಪ್ ಮಾಡಿ. | ||
06:47 | ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ. | ||
06:51 | ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು ctrl+space ಒತ್ತಿ. | ||
06:58 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ. | ||
07:01 | ಈ ಸಾಲಿನಲ್ಲಿ ನಾವು ಅನಿಮಲ್ ಇಂಟರ್ ಫೇಸ್ ಬಳಸಿ ಹ್ಯೂಮನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಿಸು) ಮಾಡುತ್ತೇವೆ. | ||
07:07 | ಇದನ್ನು Animal h equals new Human(); ಎಂದು ಪ್ರತಿನಿಧಿಸಲಾಗುತ್ತದೆ. | ||
07:14 | ಈಗ ನಾವು ಅಬ್ಜೆಕ್ಟ್ ಅನ್ನು h.talk(); h.see(); h.move(); ಆಗಿ ಬಳಸಿ ವಿವಿಧ ವಿಧಾನಗಳನ್ನು ಇನ್ವೋಕ್ (ಜಾರಿ) ಮಾಡಬಹುದು. | ||
07:26 | ನಂತರ, ಅನಿಮಲ್ ಇಂಟರ್ ಫೇಸ್ ಬಳಸಿ ನಾವು ಸ್ನೇಕ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. | ||
07:31 | ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ ವಿಧಾನಗಳನ್ನು ಇನ್ವೋಕ್ ಮಾಡಬಹುದು. | ||
07:38 | ಈ ಡೆಮೋ ಪ್ರೋಗ್ರಾಂ ಅನ್ನು ನಾವು ರನ್ ಮಾಡೋಣ. | ||
07:41 | ಇದಕ್ಕಾಗಿ ಕ್ಲಾಸ್ Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ. | ||
07:48 | ಈಗ ನಾವು ಔಟ್ಪುಟ್ ನೋಡಬಹುದು. | ||
07:52 | ಇವುಗಳನ್ನು, human class object h ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ವಿಧಾನಗಳ ಮೂಲಕ ಪ್ರಿಂಟ್ ಮಾಡಬಹುದು. | ||
08:00 | ಇವುಗಳನ್ನು, Snake class object s ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ವಿಧಾನಗಳ ಮೂಲಕ ಪ್ರಿಂಟ್ ಮಾಡಬಹುದು. | ||
08:08 | ನಾವೀಗ ಇಂಟರ್ ಫೇಸ್ ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸ್ ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ. | ||
08:14 | ಇಂಟರ್ ಫೇಸ್ ನ ಎಲ್ಲಾ ವಿಧಾನಗಳು ಅಬ್ಸ್ಟ್ರಾಕ್ಟ್ ಆಗಿರಬೇಕು. | ||
08:18 | ಇಂಟರ್ ಫೇಸ್ ಒಳಗೆ ಯಾವುದೇ ಕನ್ಸ್ಟ್ರಕ್ಟರ್ ಗಳು, ಕಾಂಕ್ರೀಟ್ ಮೆಥಡ್ ಗಳು, | ||
08:23 | ಸ್ಟಾಟಿಕ್ ಮೆಥಡ್ ಗಳು ಮತ್ತು ಮೇನ್ ಮೆಥಡ್ ಇರಬಾರದು. | ||
08:28 | ಆದರೆ ಅಬ್ಸ್ಟ್ರಾಕ್ಟ್ ಮೆಥಡ್ ಇವೆಲ್ಲವುಗಳನ್ನು ತನ್ನೊಳಗೆ ಹೊಂದಿರಬಹುದು. | ||
08:32 | ಇಂಟರ್ ಫೇಸ್ ನ ವೇರಿಯೇಬಲ್ ಗಳು ಸ್ಟಾಟಿಕ್ ಮತ್ತು ಫೈನಲ್ ಆಗಿರಬೇಕು. | ||
08:38 | ಅಬ್ಸ್ಟ್ರಾಕ್ಟ್ ಕ್ಲಾಸಿಗೆ ಇಂತಹ ಯಾವುದೇ ನಿರ್ಬಂಧಗಳು ಇಲ್ಲ. | ||
08:43 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ಸಂಕ್ಷೇಪಿಸೋಣ. | ||
08:48 | ಈ ಟ್ಯುಟೋರಿಯಲ್ ನಲ್ಲಿ ನಾವು: ಇಂಟರ್ ಫೇಸ್ ರಚಿಸಲು, | ||
08:53 | ಇಂಪ್ಲೆಮೆಂಟೇಶನ್ ಕ್ಲಾಸ್ ರಚಿಸಲು ಮತ್ತು | ||
08:56 | ಇಂಟರ್ ಫೇಸ್ ಗಳ ಬಳಕೆ ಬಗ್ಗೆ ಕಲಿತೆವು. | ||
08:59 | ಅಸೈನ್ಮೆಂಟ್ ಆಗಿ, brake() ಮತ್ತು run() ವಿಧಾನಗಳನ್ನು ಹೊಂದಿರುವ ಇಂಟರ್ ಫೇಸ್ ವೆಹಿಕಲ್ ಅನ್ನು ರಚಿಸಿ. | ||
09:07 | fill(String type,int quantity), pay(int quantity,int price) ವಿಧಾನಗಳನ್ನು ಹೊಂದಿರುವ ಇನ್ನೊಂದು ಇಂಟರ್ ಫೇಸ್ ಫ್ಯುಯೆಲ್ ಅನ್ನು ರಚಿಸಿ. | ||
09:19 | ವೆಹಿಕಲ್ ಮತ್ತು ಫ್ಯುಯೆಲ್ ಇವೆರಡೂ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಅನ್ನು ರಚಿಸಿ. | ||
09:26 | ಇಲ್ಲಿ ಬ್ರೇಕ್ ವಿಧಾನವು "Car Applies Power brake" ಎಂದು ಪ್ರಿಂಟ್ ಮಾಡಬೇಕು. | ||
09:30 | ಮತ್ತು ರನ್ ವಿಧಾನವು "Car is running on 4 wheels" ಎಂದು ಪ್ರಿಂಟ್ ಮಾಡಬೇಕು. | ||
09:35 | ಇದೇ ರೀತಿ, fill() ವಿಧಾನವು, ತುಂಬಿದ ಇಂಧನದ ಪ್ರಕಾರ ಮತ್ತು ಪ್ರಮಾಣವನ್ನು ಪ್ರಿಂಟ್ ಮಾಡಬಹುದು. | ||
09:41 | ಉದಾಹರಣೆಗೆ: 10 Litres of petrol. | ||
09:44 | pay() ವಿಧಾನವನ್ನು, ಪಾವತಿಸಬೇಕಾದ ಬೆಲೆಯನ್ನು ಪ್ರಿಂಟ್ ಮಾಡಲು ಬಳಸಬಹುದು. ಉದಾಹರಣೆಗೆ: Pay Rs. 640 | ||
09:53 | ವೆಹಿಕಲ್ ಮತ್ತು ಫ್ಯುಯೆಲ್ ಇವೆರಡೂ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುವ ಇನ್ನೊಂದು ಸಬ್ ಕ್ಲಾಸ್ ಬೈಕ್ ಅನ್ನು ರಚಿಸಿ. | ||
10:00 | ಇಲ್ಲಿ ಬ್ರೇಕ್ ವಿಧಾನವು "Bike Applies hand brake" ಎಂದು ಪ್ರಿಂಟ್ ಮಾಡಬಹುದು. | ||
10:05 | ಮತ್ತು ರನ್ ವಿಧಾನವು “Bike is running on 2 wheels” ಎಂದು ಪ್ರಿಂಟ್ ಮಾಡಬಹುದು. | ||
10:10 | ನಂತರ, ಈ ಹಿಂದೆ ವಿವರಿಸಿರುವಂತೆ fill() ಮತ್ತು pay() ವಿಧಾನಗಳನ್ನು ಕಾರ್ಯಗತಗೊಳಿಸಿ. | ||
10:15 | ಅಂತಿಮವಾಗಿ,ಈ ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ. | 10:21 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. | ||
10:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | ||
10:41 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
10:48 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. | ||
10:52 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | ||
11:01 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |