Moodle-Learning-Management-System/C2/Quiz-in-Moodle/Kannada
From Script | Spoken-Tutorial
Revision as of 19:18, 5 December 2019 by Anjana310312 (Talk | contribs)
Time | Narration |
00:01 | ಮೂಡಲ್ ನಲ್ಲಿ Quiz ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
ಮೂಡಲ್ ನಲ್ಲಿ Quiz ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಷ್ಚನ್ ಬ್ಯಾಂಕ್ ನಿಂದ ಪ್ರಶ್ನೆಗಳನ್ನು ಬಳಸುವುದು – ಇವುಗಳ ಬಗ್ಗೆ ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:40 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:48 | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ. |
00:59 | ಮತ್ತು ಇದು ನೀವು ನಿಮ್ಮ ಕೋರ್ಸ್ ನ ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರುವೆಂದು ಕೂಡ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:12 | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಲಾಗಿನ್ ಆಗಿ. |
01:18 | ಎಡ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:22 | ಮೇಲ್ಗಡೆ ಬಲದಲ್ಲಿರುವ gear ಐಕಾನ್ ಅನ್ನೂ, ನಂತರ Turn Editing On ಅನ್ನು ಕ್ಲಿಕ್ ಮಾಡಿ. |
01:29 | Basic Calculus ನ ಕೆಳಗಡೆ, ಬಲದಲ್ಲಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
01:37 | ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ Quiz ಅನ್ನು ಆಯ್ಕೆಮಾಡಿ. |
01:42 | ಆಕ್ಟಿವಿಟಿ ಚೂಸರ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
01:47 | ನಾನು Name ಫೀಲ್ಡ್ ನಲ್ಲಿ, Quiz 1 - Evolutes and involutes ಎಂದು ಟೈಪ್ ಮಾಡುವೆನು. |
01:54 | ನಂತರ Description ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. |
02:00 | Display description on course page ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದಾದ ನಂತರ Timing ವಿಭಾಗವನ್ನು ವಿಸ್ತರಿಸೋಣ. |
02:09 | Open the quiz, Close the quiz ಮತ್ತು Time limit ಚೆಕ್ ಬಾಕ್ಸ್ ಗಳನ್ನು ಎನೇಬಲ್ ಮಾಡಿ. |
02:17 | ಇದು ಕೊಟ್ಟಿರುವ ದಿನಾಂಕದಂದು, ನಿಗದಿತ ಅವಧಿಗೆ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು. |
02:25 | ದಿನಾಂಕ ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿ. ನಾನು ಅವುಗಳನ್ನು ಇಲ್ಲಿ ತೋರಿಸಿರುವಂತೆ ಸೆಟ್ ಮಾಡಿರುವೆನು. |
02:32 | ನಂತರ ನಾನು ಸಮಯದ ಮಿತಿಯನ್ನು 10 ನಿಮಿಷಗಳಿಗೆ ಸೆಟ್ ಮಾಡಿರುವೆನು. |
02:37 | When time expires field ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸರಿಹೊಂದುವ ಒಂದನ್ನು ಆಯ್ಕೆ ಮಾಡಿ. |
02:47 | ನಾನು, Open attempts are submitted automatically ಅನ್ನು ಆಯ್ಕೆ ಮಾಡುವೆನು. ಹಾಗಾಗಿ ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ವಿಫಲನಾದರೂ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು. |
03:01 | ಈಗ , Grade ವಿಭಾಗವನ್ನು ವಿಸ್ತರಿಸಿ. |
03:05 | Grade to pass ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು 2 ಎಂದು ಟೈಪ್ ಮಾಡುವೆನು. ಅಂದರೆ ಈ ಕ್ವಿಝ್ ಅನ್ನು ಪಾಸ್ ಮಾಡಲು ವಿದ್ಯಾರ್ಥಿಯು ಕನಿಷ್ಟ ಎರಡು ಅಂಕಗಳನ್ನು ಪಡೆಯಬೇಕು. |
03:18 | Attempts allowed ಫೀಲ್ಡ್ ನಲ್ಲಿ, ನಾನು 1 ಅನ್ನು ಆಯ್ಕೆ ಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಅದೇ ಕ್ವಿಝ್ ಅನ್ನು ಆ ಸಂಖ್ಯೆಯಷ್ಟು ಸಲ ಪ್ರಯತ್ನ ಪಡಬಹುದಾಗಿದೆ. |
03:32 | Grading method ಡ್ರಾಪ್-ಡೌನ್ ಡಿಸೇಬಲ್ ಆಗಿರುವುದನ್ನು ಗಮನಿಸಿ. |
03:37 | ಇದು ಒಂದಕ್ಕಿಂತ ಹೆಚ್ಚಿನ ಪ್ರಯತ್ನಕ್ಕೆ ಅವಕಾಶವಿದ್ದರೆ ಮಾತ್ರ ಎನೇಬಲ್ ಆಗುವುದು. ಆಗ ಟೀಚರ್ ಯಾವ ಪ್ರಯತ್ನಕ್ಕೆ ಗ್ರೇಡ್ ಅನ್ನು ಕೊಡಬೇಕೆಂದು ಆಯ್ಕೆ ಮಾಡಬಹುದು. |
03:47 | Layout ವಿಭಾಗವನ್ನು ವಿಸ್ತರಿಸಿ. ಇಲ್ಲಿ ಕ್ವಿಝ್ ನ ಲೇಔಟ್ ಅನ್ನು ನಿರ್ದರ್ಷ್ಟಪಡಿಸಲು ಆಯ್ಕೆಗಳಿವೆ. |
03:56 | New page field ಡ್ರಾಪ್ ಡೌನ್ ನಲ್ಲಿ ಡಿಫಾಲ್ಟ್ ಆಗಿ, Every question ಎಂಬ ಆಯ್ಕೆಯು ಆಯ್ಕೆಯಾಗಿರುತ್ತದೆ. |
04:04 | ಎಲ್ಲಾ ಆಯ್ಕೆಗಳನ್ನು ನೋಡಲು, New page field ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. |
04:09 | ನಾನು Every 2 questions ಆಯ್ಕೆಯನ್ನು ಆರಿಸಿಕೊಳ್ಳುವೆನು. ನೀವು ನಿಮ್ಮಿಷ್ಟದಂತೆ ಯಾವ ಆಯ್ಕೆಯನ್ನು ಬೇಕಾದರೂ ಆರಿಸಿಕೊಳ್ಳಬಹುದು. |
04:17 | ನಂತರ, Question behaviour ವಿಭಾಗವನ್ನು ವಿಸ್ತರಿಸೋಣ. |
04:22 | Shuffle within questions ಡ್ರಾಪ್ ಡೌನ್ ನಲ್ಲಿ Yes ಅನ್ನು ಆಯ್ಕೆ ಮಾಡಿ. |
04:27 | ಇದನ್ನು ಮಾಡುವುದರಿಂದ, ಪ್ರತಿ ಪ್ರಶ್ನೆಗೆ ಎಲ್ಲಾ ಆಯ್ಕೆಗಳು ಷಫಲ್ ಆಗುವವು. |
04:33 | ಹಾಗಾಗಿ ಪ್ರತಿ ವಿದ್ಯಾರ್ಥಿಯು ಅವರ ಕ್ವಿಝ್ ಗೆ ಪ್ರಶ್ನೆ ಮತ್ತು ಆಯ್ಕೆಗಳ ಬೇರೆ ಬೇರೆ ಜೋಡಣೆಯನ್ನು ಹೊಂದಿರುವರು. |
04:40 | How questions behave ಡ್ರಾಪ್ ಡೌನ್ ಗೆ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ. |
04:47 | ನಾನು, Deferred feedback ಅನ್ನು ಇಲ್ಲಿ ಆರಿಸಿಕೊಳ್ಳುವೆನು. ಹಾಗಾಗಿ ನನ್ನ ವಿದ್ಯಾರ್ಥಿಗಳು ಅವರ (ಅಟೆಂಪ್ಟ್) ಪ್ರಯತ್ನವನ್ನು ಸಲ್ಲಿಸಿದ ಮೇಲೆಯೇ ಫೀಡ್ ಬ್ಯಾಕ್ ಅನ್ನು ನೋಡುವರು. |
04:57 | ನಂತರ, Overall feedback ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ. |
05:02 | Overall feedback ಇದು, ವಿದ್ಯಾರ್ಥಿಯು ತನ್ನ ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ ಗ್ರೇಡ್ ಆದ ನಂತರ ನೋಡಬಹುದಾದ ಟೆಕ್ಸ್ಟ್ ಆಗಿದೆ. |
05:10 | ವಿದ್ಯಾರ್ಥಿಯು ಪಡೆದುಕೊಂಡ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಬೇರೆ ಬೇರೆ ಫೀಡ್-ಬ್ಯಾಕ್ ಅನ್ನು ಕೊಡಬಹುದು. |
05:17 | ನಾನು, grade boundary 100% ಗೆ ಫೀಡ್-ಬ್ಯಾಕ್ ಅನ್ನು Excellent performance ಎಂದು ಟೈಪ್ ಮಾಡುವೆನು. |
05:25 | 50% ಮತ್ತು 100% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "Excellent performance" ಎಂಬ ಸಂದೇಶವನ್ನು ನೋಡುವರು. |
05:33 | ಮತ್ತು grade boundary 50%. ಗೆ ಫೀಡ್-ಬ್ಯಾಕ್ You need to work harder ಎಂದಿರಲಿ. |
05:40 | 0% ಮತ್ತು 49.99% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "You need to work harder" ಎಂಬ ಸಂದೇಶವನ್ನು ನೋಡುವರು. |
05:49 | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Activity completion ವಿಭಾಗವನ್ನು ಕ್ಲಿಕ್ ಮಾಡಿ. |
05:54 | Completion Tracking ಫೀಲ್ಡ್ ನ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. Show activity as complete when conditions are met. ಆಯ್ಕೆಯನ್ನು ಆರಿಸಿಕೊಳ್ಳಿ. |
06:05 | Require grade ಮತ್ತು Require passing grade ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ. |
06:13 | ಕೊನೆಯಲ್ಲಿ ಪೇಜ್ ನ ಕೆಳಭಾಗದಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ. |
06:20 | ಈಗ quiz ಗೆ ನಾವು ಕೊಟ್ಟ ಹೆಸರನ್ನೊಳಗೊಂಡ ಹೊಸ ಪೇಜ್ ಕರೆದೊಯ್ಯಲ್ಪಡುವೆವು. ನಾವು ಈಗಾಗಲೇ ಕೊಟ್ಟಿರುವ ಎಲ್ಲ ವಿವರಗಳು ಇಲ್ಲಿ ಡಿಸ್ಪ್ಲೇ ಆಗಿದೆಯೇ ಎಂದು ಓದಿ ಖಚಿತಪಡಿಸಿಕೊಳ್ಳಿ. |
06:31 | ಇಲ್ಲಿ ನೀವು –ಎದ್ದು ಕಾಣುವ, No questions have been added yet ಸಂದೇಶವನ್ನು ನೋಡಬಹುದು. |
06:38 | ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, Edit quiz ಬಟನ್ ಅನ್ನು ಕ್ಲಿಕ್ ಮಾಡಿ. |
06:44 | ಮೇಲೆ ಬಲಗಡೆಯಲ್ಲಿ , Maximum grade ಅನ್ನು 4 ಎಂದು ಟೈಪ್ ಮಾಡಿ. |
06:50 | ಕ್ವಿಝ್ ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ನಮ್ಮನ್ನು ಕ್ವಿಝ್ ನ ಹೆಡಿಂಗ್ ಅನ್ನು ಎಡಿಟ್ ಮಾಡಲು ಬಿಡುವುದು. ಇದು ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಉಪಯುಕ್ತವಾಗಿದೆ. |
07:03 | ನಾನು Section 1 ಎಂದು ಬರೆದು, Enter ಅನ್ನು ಒತ್ತುವೆನು. |
07:08 | ನಂತರ ಬಲಗಡೆಯಿರುವ Shuffle ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದು ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಪ್ರಶ್ನೆಗಳನ್ನು ಷಫಲ್ ಮಾಡುತ್ತದೆ. |
07:20 | Shuffle ಚೆಕ್ ಬಾಕ್ಸ್ ನ ಕೆಳಗಿರುವ Add ಲಿಂಕ್ ಅನ್ನು ಕ್ಲಿಕ್ ಮಾಡಿ. |
07:25 | ಇಲ್ಲಿ ಮೂರು ಆಯ್ಕೆಗಳಿವೆ. ಅವು
a new question from question bank a random question ಎಂದಾಗಿವೆ. |
07:34 | ಹೆಸರೇ ಹೇಳುವ ಹಾಗೆ, a new question ಲಿಂಕ್, ಹೊಸ ಪ್ರಶ್ನೆಗಳನ್ನು ಸೇರಿಸಲು ಸಾಧ್ಯವಾಗಿಸುತ್ತದೆ. ಹಾಗಾಗಿ ನಾನು ಈ ಆಯ್ಕೆಯನ್ನು ಆರಿಸಿಕೊಳ್ಳುವುದಿಲ್ಲ. |
07:44 | from question bank ಲಿಂಕ್ ಅನ್ನು ಕ್ಲಿಕ್ ಮಾಡಿ. |
07:48 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ನೀವು ಪ್ರತಿ ಸ್ಟುಡೆಂಟ್ ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೊಡಲು ಬಯಸಿದ್ದರೆ ಈ ಆಯ್ಕೆ ಉಪಯುಕ್ತವಾಗಿದೆ. |
07:58 | ಆಯ್ಕೆಮಾಡಿದ ಕೆಟಗರಿಯು ಆ ಕೋರ್ಸ್ ನ ಡಿಫಾಲ್ಟ್ ಕೆಟಗರಿಯಾಗಿರುತ್ತದೆ. |
08:04 | ಡಿಫಾಲ್ಟ್ ಆಗಿ, Also show questions from subcategories – ಇದು ಆಯ್ಕೆಯಾಗಿರುತ್ತದೆ. |
08:12 | Also show old questions ಈ ಆಯ್ಕೆಯು, ಹಿಂದಿನ ಕ್ವಿಝ್ ಗಳ ಪ್ರಶ್ನೆಗಳನ್ನು ತೋರಿಸುತ್ತದೆ. |
08:19 | ನೀವು ಸೇರಿಸಬೇಕಾದ ಪ್ರಶ್ನೆಗಳನ್ನು , ಇಲ್ಲಿ ನಾನು ಮಾಡುತ್ತಿರುವಂತೆ ಆಯ್ಕೆ ಮಾಡಬಹುದು. ನಂತರ ಕೆಳಗಡೆ ಇರುವ Add selected questions to the quiz ಬಟನ್ ಅನ್ನು ಕ್ಲಿಕ್ ಮಾಡಿ. |
08:32 | ಆದಾಗ್ಯೂ ನಾನು ಅದನ್ನು ಮಾಡುವುದಿಲ್ಲ. ನಾನು ಮೇಲ್ಗಡೆ ಬಲಕ್ಕಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ ಅದನ್ನು ಕ್ಲೋಸ್ ಮಾಡುವೆನು. |
08:40 | Shuffle ನ ಕೆಳಗಿರುವ Add ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. a random question ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
08:51 | ಈ ಆಯ್ಕೆಯೊಂದಿಗೆ, ಪ್ರತಿ ವಿದ್ಯಾರ್ಥಿಯು ಬೇರೆ ಬೇರೆ ಪ್ರಶ್ನೆಗಳ ಜೋಡಣೆಯನ್ನು ನೋಡುವರು. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಪ್ರಯತ್ನಿಸುವಾಗ ಉತ್ತರದ ಕುರಿತು ಚರ್ಚಿಸಲು ಕಷ್ಟವಾಗುತ್ತದೆ. |
09:03 | Random question from an existing category ಯ ಅಡಿಯಲ್ಲಿ, ನಾನು category ಯನ್ನು Evolutes ಎಂದು ಆಯ್ಕೆ ಮಾಡುವೆನು. |
09:11 | Number of random questions ನಲ್ಲಿ, ನಾನು 2 ಅನ್ನು ಆಯ್ಕೆ ಮಾಡುವೆನು. |
09:16 | ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ Add random question ಅನ್ನು ಆಯ್ಕೆಮಾಡಿ. |
09:23 | ಈ ಕ್ವಿಝ್ ಗೆ Evolutes category ಯಿಂದ ಎರಡು ರೇಂಡಮ್ ಪ್ರಶ್ನೆಗಳು ಸೇರ್ಪಡೆಯಾಗಿವೆ. |
09:29 | ಕೆಳಗೆ ಬಲಗಡೆಯಿರುವ Add ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. |
09:34 | a random questionಲಿಂಕ್ ಅನ್ನು ಕ್ಲಿಕ್ ಮಾಡಿ. category ಯನ್ನು Involutes ಎಂದೂ ಮತ್ತು Number of random questions ಅನ್ನು 2 ಎಂದೂ ಆಯ್ಕೆ ಮಾಡಿ. |
09:44 | ನಂತರ Add random question ಬಟನ್ ಅನ್ನು ಕ್ಲಿಕ್ ಮಾಡಿ. |
09:48 | ಈ ಕ್ವಿಝ್ ಗೆ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ, ಎರಡೂ ಕೂಡ Involutes ನಿಂದ ಬಂದಿವೆ. |
09:55 | ಕ್ವಿಝ್ ಎರಡು ಪೇಜ್ ಗಳಲ್ಲಿ ತಂತಾನೇ ವಿಭಜನೆಯಾಗಿರುವುದನ್ನು ಗಮನಿಸಿ. ಏಕೆಂದರೆ ನಾವು ಮೊದಲೇ Quiz Settings ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೇವೆ. |
10:07 | ಎರಡನೇ ಪ್ರಶ್ನೆಯ ಕೆಳಗೆ ಬಲಭಾಗದಲ್ಲಿ, add ಲಿಂಕ್ ಅನ್ನು ಕ್ಲಿಕ್ ಮಾಡಿ. |
10:13 | a new section heading ಲಿಂಕ್ ಅನ್ನು ಕ್ಲಿಕ್ ಮಾಡಿ. |
10:18 | heading ನ ಹೆಸರನ್ನು ಬದಲಿಸಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ. |
10:23 | ನಾನು, Section 2 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು. |
10:27 | ಕ್ವಿಝ್ ಸೇವ್ ಮಾಡಲು, ಮೇಲೆ ಬಲಗಡೆಯಿರುವ Save button ಅನ್ನು ಕ್ಲಿಕ್ ಮಾಡಿ. |
10:32 | ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆಯೂ ಎರಡು ಐಕಾನ್ ಗಳಿವೆ. ಅವು Preview question ಮತ್ತು Delete ಗಳಾಗಿವೆ.
ಇವು ಸ್ವಯಂ ವಿವರಣಾತ್ಮಕವಾಗಿವೆ. |
10:43 | Delete question ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಇರುವುದು. |
10:51 | ಬ್ರೆಡ್ ಕ್ರಂಬ್ಸ್ ನಲ್ಲಿ ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. |
10:56 | ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, Preview quiz ಬಟನ್ ಅನ್ನು ಕ್ಲಿಕ್ ಮಾಡಿ. |
11:02 | ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗೆ, ಕ್ವಿಝ್ ಸಮಯಾಧಾರಿತವಾಗಿದೆ ಎಂಬ ಮಾಹಿತಿಯನ್ನು ಕೊಡುವುದು. ಮತ್ತು ಇದು Start ಮಾಡಲು ಅಥವಾ Cancel ಮಾಡಲು ಆಯ್ಕೆಗಳನ್ನು ಹೊಂದಿವೆ. |
11:14 | Start attempt ಬಟನ್ ಅನ್ನು ಕ್ಲಿಕ್ ಮಾಡುವೆನು. |
11:18 | ಪರದೆಯ ಬಲಗಡೆಯಿರುವುದು Quiz navigation ವಿಭಾಗವಾಗಿದೆ. |
11:23 | ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ. |
11:29 | ಇಲ್ಲಿ ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ. |
11:35 | ಈಗ ನಾನು ನ್ಯಾವಿಗೇಷನ್ ವಿಭಾಗದಲ್ಲಿ Finish attempt ಲಿಂಕ್ ಅನ್ನು ಕ್ಲಿಕ್ ಮಾಡುವೆನು. |
11:40 | ಪ್ರತಿಯೊಂದು ಪ್ರಶ್ನೆಯ ಸ್ಟೇಟಸ್ ಅನ್ನು ಆ ಪ್ರಶ್ನೆಯ ಹೆಸರಿನ ಮುಂದೆ ತೋರಿಸಲಾಗಿದೆ. |
11:45 | ಪೇಜ್ ನ ಕೆಳಗಡೆಯಿರುವ Submit all and finish ಬಟನ್ ಅನ್ನು ಕ್ಲಿಕ್ ಮಾಡಿ. |
11:51 | ಕನ್ಫರ್ಮೇಷನ್ ಪಾಪ್ ಅಪ್ ನಲ್ಲಿ Submit all and finish ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. |
11:58 | ಇಲ್ಲಿ grade, overall feedback ಮತ್ತು ಪ್ರತಿ ಪ್ರಶ್ನೆಗೆ feedback ಎಲ್ಲವನ್ನೂ ತೋರಿಸಿದೆ. |
12:06 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Finish review ಲಿಂಕ್ ಅನ್ನು ಕ್ಲಿಕ್ ಮಾಡಿ. |
12:11 | ನಾವು Quiz summary ಪೇಜ್ ಗೆ ಹಿಂದಿರುಗಿದ್ದೇವೆ. |
12:15 | ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. Edit quiz ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು. |
12:28 | ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸುವ (ಅಟೆಂಪ್ಟ್ ಮಾಡುವ) ಮೊದಲೇ ಮಾಡಬೇಕು. |
12:35 | ಒಬ್ಬ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ ಕ್ವಿಝ್ ಲಾಕ್ ಆಗುವುದು. ಆದಾಗ್ಯೂ ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು. |
12:47 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
12:53 | ಈ ಟ್ಯುಟೋರಿಯಲ್ ನಲ್ಲಿ ನಾವು,
ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು, ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದು- ಇವುಗಳ ಕುರಿತು ಕಲಿತಿದ್ದೇವೆ. |
13:03 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
evolutes ಗೆ ಒಂದು ಕ್ವಿಝ್ ಅನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:16 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:25 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:34 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
13:38 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:52 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
14:03 | ಧನ್ಯವಾದಗಳು. |