Moodle-Learning-Management-System/C2/Formatting-Course-material-in-Moodle/Kannada
Time | Narration |
00:01 | Formatting course material in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು,
ಮೂಡಲ್ ನಲ್ಲಿ ರಿಸೋರ್ಸ್ ಗಳು, ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳ ಕುರಿತು ಕಲಿಯುವೆವು. |
00:21 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:48 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:56 | ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ. |
01:06 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ teacher login ಅನ್ನು ಹೊಂದಿರಲೇ ಬೇಕು.
ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು. |
01:21 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:27 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. |
01:31 | ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಆಗಿ. |
01:36 | ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು. |
01:39 | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ಗಮನಿಸಿ. |
01:45 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. |
01:48 | ನಾವು ಈಗಾಗಲೇ announcements ಮತ್ತು ಕೋರ್ಸ್ ನ ವಿವರಗಳನ್ನು ಸೇರಿಸಿದ್ದೇವೆ. |
01:54 | ಈಗ ನಾವು ಹೆಚ್ಚುವರಿ course material ಯನ್ನು ಸೇರಿಸುವೆವು. |
01:58 | ಮೂಡಲ್ ನಲ್ಲಿ ಎಲ್ಲಾ ಕೋರ್ಸ್ ಮಟೀರಿಯಲ್ ಗಳನ್ನು ರಿಸೋರ್ಸ್ ಗಳೆಂದು ಕರೆಯುವರು. ಇವು ಕಲಿಕೆಗೆ ಸಹಾಯವಾಗಲೆಂದು ಟೀಚರ್ ಗಳು ಬಳಸುವ ಮಟೀರಿಯಲ್(ಸಾಮಾಗ್ರಿ) ಗಳಾಗಿವೆ. |
02:09 | ರಿಸೋರ್ಸ್ ಗಳು ಉಪನ್ಯಾಸ ಟಿಪ್ಪಣಿಗಳು(ನೋಟ್ಸ್), ಪುಸ್ತಕಗಳಂತಹ ಆಂತರಿಕ ವಿಷಯಗಳಾಗಿರಬಹುದು ಅಥವಾ Wikipedia links ಗಳಂತಹ ಬಾಹ್ಯ ವಿಷಯಗಳಾಗಿರಬಹುದು. |
02:19 | ಈಗ ಪ್ರಾರಂಭಿಸೋಣ.
ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ Turn Editing On ಅನ್ನು ಕ್ಲಿಕ್ ಮಾಡಿ |
02:29 | ಗಮನಿಸಿ. ನೀವು ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಾದರೆ, editing on ಆಯ್ಕೆಯನ್ನು ಆನ್ ಮಾಡಿರಲೇ ಬೇಕು. |
02:36 | Basic Calculus ವಿಭಾಗದ ಕೆಳಗೆ ಬಲಕ್ಕಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
02:44 | ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್ ಅಪ್ ತೆರೆದುಕೊಳ್ಳುತ್ತದೆ. |
02:48 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ Page ಅನ್ನು ಆಯ್ಕೆ ಮಾಡಿ. ನೀವು ಯಾವುದೇ ರಿಸೋರ್ಸ್ ಅನ್ನು ಆಯ್ಕೆ ಮಾಡಿದಾಗ, ರಿಸೋರ್ಸ್ ನ ಬಗ್ಗೆ ಬರುವ ವಿವರವಾದ ವಿವರಣೆಯನ್ನು ಓದಿ. |
03:01 | ಪಾಪ್ ಅಪ್ ಸ್ಕ್ರೀನ್ ನ ಕೆಳಗಿರುವ Add button ಅನ್ನು ಕ್ಲಿಕ್ ಮಾಡಿ. |
03:06 | ನಾನು, Name ಫೀಲ್ಡ್ ನಲ್ಲಿ, Lecture 1 Notes ಎಂದು ಟೈಪ್ ಮಾಡುವೆನು. |
03:12 | ನಂತರ, Description ಬಾಕ್ಸ್ ನಲ್ಲಿ, “Involutes and construction of Involute of circle” ಎಂದು ಟೈಪ್ ಮಾಡುವೆನು. |
03:22 | Display description on course page ಆಯ್ಕೆಯನ್ನು ಚೆಕ್ ಮಾಡಿ. |
03:27 | Page Content ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾದಿ. BasicCalculus-Involutes.odt ಫೈಲ್ ನಿಂದ ಕಂಟೆಂಟ್ ಅನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ. |
03:40 | ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡುವೆವು. ಇದು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ. |
03:51 | ಈಗ ಈ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲ್ಭಾಗದ ಎಡಗಡೆಯಿರುವ, ಡೌನ್ ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ. |
04:03 | ನಾನು ಇಲ್ಲಿ ತೋರಿಸಿರುವಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು. |
04:07 | ಈ ಟೆಕ್ಸ್ಟ್ ಎಡಿಟರ್ ನಲ್ಲಿರುವ ಆಯ್ಕೆಗಳು ಬೇರೆ ಯಾವುದೇ ಪ್ರತಿಷ್ಠಿತ ಟೆಕ್ಸ್ಟ್ ಎಡಿಟರ್ ಗೆ ಸಮನಾಗಿದೆ. Bold, Italics, Unordered ಮತ್ತು Ordered lists ಆಯ್ಕೆಗಳನ್ನು ನೋಡಬಹುದು. |
04:24 | ಟೆಕ್ಸ್ಟ್ ಅನ್ನು hyperlink ಮತ್ತು unlink ಮಾಡಲು ಕೂಡ ಆಯ್ಕೆಗಳಿವೆ. |
04:30 | ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ಈಗ ನಾವು “Figure 1 shows the involute of a circle” ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ. |
04:41 | ಇಮೇಜ್ ಗೆ ಜಾಗವನ್ನು ಮಾಡಲು Enter ಅನ್ನು ಒತ್ತಿ. ನಂತರ Image ಐಕಾನ್ ಅನ್ನು ಕ್ಲಿಕ್ ಮಾಡಿ. |
04:48 | Image properties ವಿಂಡೊ ಕಾಣಿಸುತ್ತದೆ. ನೀವು ಎಕ್ಸ್ಟರ್ನಲ್ ಇಮೇಜ್ ಅನ್ನು ಸೇರಿಸುವುದಾದರೆ, ಇಲ್ಲಿ ನೀವು ಇಮೇಜ್ ನ ಯು.ಆರ್.ಎಲ್ ಅನ್ನು ನಮೂದಿಸಬಹುದು. |
04:58 | ನಾನು ಇಮೇಜ್ ಅನ್ನು ಅಪ್ಲೋಡ್ ಮಾಡಲು, Browse Repositories ಅನ್ನು ಕ್ಲಿಕ್ ಮಾಡುವೆನು. |
05:04 | File Picker ಎಂಬ ಹೆಸರಿನ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
05:09 | Upload a file ಅನ್ನು ಕ್ಲಿಕ್ ಮಾಡಿ. ನಂತರ Choose File ಅಥವಾ Browse ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆ ಮಾಡಿ. |
05:19 | ಈ ಇಮೇಜ್ Code Files ಲಿಂಕ್ ನಲ್ಲಿ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
05:26 | Upload this file ಬಟನ್ ಅನ್ನು ಕ್ಲಿಕ್ ಮಾಡಿ. |
05:29 | ನಾವು ಡಿಸ್ಕ್ರಿಪ್ಷನ್ ಅನ್ನು “This is the involute of a circle” ಎಂದು ಟೈಪ್ ಮಾಡೋಣ. |
05:36 | ಕೊನೆಯಲ್ಲಿ, ಇಮೇಜ್ ಅನ್ನು ಇನ್ಸರ್ಟ್ ಮಾಡಲು, Save image ಬಟನ್ ಅನ್ನು ಕ್ಲಿಕ್ ಮಾಡಿ. |
05:42 | ಮುಂದಿನ ಆಯ್ಕೆ media ವನ್ನು ಸೇರಿಸುವುದಾಗಿದೆ. ಇದು URL, video ಅಥವಾ audio ಫೈಲ್ ಆಗಿರಬಹುದು. ಮತ್ತು ಇದು external URL ಅಥವಾ ಮಶಿನ್ ನಿಂದ ಕೂಡ ಅಪ್ಲೋಡ್ ಮಾಡಬಹುದು. |
05:58 | ಮುಂದಿನ ಆಯ್ಕೆ Manage Files. ಆಗಿದೆ. ಅದನ್ನು ಕ್ಲಿಕ್ ಮಾಡೋಣ. |
06:04 | Manage Files ಆಯ್ಕೆಯು, ನಾವು ಸ್ಟೋರ್ ಮತ್ತು ಡಿಸ್ಪ್ಲೇ ಮಾಡಲು ಬಯಸುವ ಫೈಲ್ ಗಳನ್ನು ಹೊಂದಲು ಇರುವ ಆಯ್ಕೆಯಾಗಿದೆ. ಇದು assignment submissions, resource files, ಮುಂತಾದವುಗಳನ್ನು ಹೊಂದಿರಬಹುದು. |
06:17 | ಈ ಕೋರ್ಸ್ ನಲ್ಲಿ ಯಾವುದೇ ರಿಸೋರ್ಸ್ ಗಳು ಬೇಕಾದರೂ ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಅನ್ನು ಕೂಡ ಇಲ್ಲಿರುವುದನ್ನು ಗಮನಿಸಿ. |
06:27 | ಈ ಪಾಪ್ ಅಪ್ ಬಾಕ್ಸ್ ನ ಎಡಗಡೆ ಮೂರು ಐಕಾನ್ ಗಳಿವೆ. |
06:32 | ಮೊದಲನೆಯದು, File picker ಆಗಿದೆ. ಅದನ್ನು ಕ್ಲಿಕ್ ಮಾಡೋಣ. |
06:37 | ಇದರಲ್ಲಿ server files, recent files ಮುಂತಾದವುಗಳನ್ನು ನೋಡಲು ಆಯ್ಕೆಗಳಿವೆ. Server files ಇವು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಿದ ಫೈಲ್ ಗಳಾಗಿದ್ದು, ಇವನ್ನು ಪುನರ್ಬಳಕೆ ಮಾಡಬಹುದಾಗಿದೆ. |
06:52 | ಈಗ X ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನು ಇದನ್ನು ಕ್ಲೋಸ್ ಮಾಡುವೆನು. |
06:57 | ನಂತರ ನಾನು ಎರಡನೇ ಐಕಾನ್ ಆದ, Create Folder ಐಕಾನ್ ಅನ್ನು ಕ್ಲಿಕ್ ಮಾಡುವೆನು. |
07:04 | New folder name ಫೀಲ್ಡ್ ನಲ್ಲಿ Assignments ಎಂದು ಟೈಪ್ ಮಾಡೋಣ. |
07:10 | Assignments ಫೋಲ್ಡರ್ ಅನ್ನು ತೆರೆಯಲು, ಅದನ್ನು ಕ್ಲಿಕ್ ಮಾಡಿ. |
07:15 | ಈಗ ನಾನು ನನ್ನ ಫೈಲ್ ಅನ್ನು Assignments ಫೋಲ್ಡರ್ ಗೆ ಎಳೆದು (ಡ್ರ್ಯಾಗ್) ತರುವೆನು. |
07:20 | ಈಗ , ಈಗಷ್ಟೇ ಅಪ್ಲೋಡ್ ಆದ ಫೈಲ್ ಅನ್ನು ಒತ್ತಿ. |
07:24 | ಈ ಪಾಪ್ ಅಪ್ ನಲ್ಲಿ ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಿಸಲು ಆಯ್ಕೆಗಳಿವೆ. ಮತ್ತು ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ. |
07:34 | ನಾನು ಏನನ್ನು ಬದಲಿಸಲು ಇಚ್ಛಿಸುವುದಿಲ್ಲ. ಹಾಗಾಗಿ ನಾನು ಪಾಪ್ ಅಪ್ ನ ಕೆಳಭಾಗದಲ್ಲಿರುವ Cancel ಬಟನ್ ಅನ್ನು ಕ್ಲಿಕ್ ಮಾಡಿ. |
07:41 | ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.
Reference Material ಎಂಬ ಫೋಲ್ಡರ್ ಅನ್ನು ರಚಿಸಿ. ಈ ಫೋಲ್ಡರ್ Files ಫೋಲ್ಡರ್ ನಲ್ಲಿಯೇ ಇದ್ದು, Assignments ಫೋಲ್ಡರ್ ನ ಸಬ್ ಫೋಲ್ಡರ್ ನಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. |
07:57 | ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ನೋಡಬಹುದು. |
08:05 | ಈ ಅಸೈನ್ಮೆಂಟ್ ಅನ್ನು ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ. |
08:10 | ಈಗ ನಿಮ್ಮ File manager ಇದು, Assignments ಮತ್ತು Reference Material ಎಂಬ ಹೆಸರಿನ ಎರಡು ಫೋಲ್ಡರ್ ಗಳನ್ನು ಹೊಂದಿದೆ. |
08:18 | ಮತ್ತು ಇನ್ನೊಂದು ಫೈಲ್ involutes-img1.png ಎಂಬುದಾಗಿದೆ. |
08:26 | ಮೇಲೆ ಬಲಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್ ಅಪ್ ವಿಂಡೋವನ್ನು ಕ್ಲೋಸ್ ಮಾಡಿ. |
08:33 | ಮುಂದಿನದು ಫಾರ್ಮ್ಯಾಟಿಂಗ್ ಆಯ್ಕೆಗಳು: ಅವು
Underline, Strikethrough, Subscript ಮತ್ತು Superscript ಆಯ್ಕೆಗಳಾಗಿವೆ. |
08:45 | ಇವುಗಳ ನಂತರ Align ಮತ್ತು indent ಆಯ್ಕೆಗಳಿವೆ. ಇವು ಉಳಿದ ಟೆಕ್ಸ್ಟ್ ಎಡಿಟರ್ ಗಳಂತೆ ಕಾರ್ಯ ನಿರ್ವಹಿಸುತ್ತವೆ. |
08:53 | ಈಗ ಮುಂದಿನ ಆಯ್ಕೆಯಾದ equation editor ಅನ್ನು ಹೇಗೆ ಬಳಸುವುದು ಎಂದು ನೋಡೋಣ. |
08:59 | ನಾನು, ಸಮೀಕರಣವನ್ನೊಳಗೊಂಡ ಈ ವಾಕ್ಯವನ್ನು ಇಲ್ಲಿ ಸೇರಿಸಲು ಬಯಸುವೆನು. ಹಾಗಾಗಿ ನಾನು equation editor ಐಕಾನ್ ಅನ್ನು ಕ್ಲಿಕ್ ಮಾಡಿ, ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು ಇಕ್ವೇಷನ್ ಎಡಿಟರ್ ಅನ್ನು ಬಳಸುವೆನು. |
09:14 | ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು LaTeX ಅನ್ನು ಹೇಗೆ ಬಳಸುವುದು ಎನ್ನುವುದರ ವಿವರವು, Additional Reading Material ಲಿಂಕ್ ನಲ್ಲಿದೆ. ನೀವು ಮುಗಿಸಿದ ನಂತರ Save equation ಬಟನ್ ಅನ್ನು ಕ್ಲಿಕ್ ಮಾಡಿ. |
09:29 | Insert character, insert table ಮತ್ತು clear formatting ಆಯ್ಕೆಗಳು, ಉಳಿದ ಟೆಕ್ಸ್ಟ್ ಎಡಿಟರ್ ನಂತೆಯೇ ಕಾರ್ಯನಿರ್ವಹಿಸುತ್ತವೆ. |
09:40 | ಮುಂದಿನವು Undo ಮತ್ತು Redo ಆಯ್ಕೆಗಳಾಗಿವೆ. ಇವು ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಎನೇಬಲ್ ಆಗಿರುತ್ತವೆ. |
09:51 | ಮುಂದಿನ ಎರಡು ಆಯ್ಕೆಗಳು ಅಸ್ಸೆಸಿಬಿಲಿಟಿ ಗೆ ಸಂಬಂಧಿಸಿದವಾಗಿವೆ. ಮೊದಲನೆಯದನ್ನು Accessibility checker ಎಂದೂ, ಎರಡನೆಯದನ್ನು screen reader helper ಎಂದೂ ಕರೆಯುವರು. |
10:05 | ಅಸ್ಸೆಸಿಬ್ಲೆ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಕುರಿತು ವಿವರಗಳು, Additional Reading Material ಲಿಂಕ್ ನಲ್ಲಿ ಲಭ್ಯವಿದೆ. |
10:14 | ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು ಹೆಚ್.ಟಿ.ಎಮ್.ಎಲ್ ಕೋಡ್ ವ್ಯೂ ಗಳಿಗೆ ಟಾಗಲ್ (ಬದಲಿಸುವ) ಮಾಡುವ ಆಯ್ಕೆಯಾಗಿದೆ. ಇದನ್ನು ಇಮೇಜ್ ಗಳು, ವಿಡಿಯೋ ಗಳು, ಪಿ.ಪಿ.ಟಿ, ಇಂಟರಾಕ್ಟೀವ್ ಕಂಟೆಂಟ್ ಮುಂತಾದವುಗಳನ್ನು ಸೇರಿಸಲು ಬಳಸಬಹುದು. |
10:30 | HTML ಟಾಗಲ್ ಮೇಲೆ ಕ್ಲಿಕ್ ಮಾಡಿ. ಇದು ಎಡಿಟರ್ ವ್ಯೂ ಗೆ ಹಿಂದಿರುಗುಸುತ್ತದೆ. |
10:39 | ನಾನು ವಿವರಣೆಗೋಸ್ಕರ , ಟೆಕ್ಸ್ಟ್ ಅನ್ನು bold, italics ಮತ್ತು list ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನೀವು ನಿಮ್ಮ ಕಂಟೆಂಟ್ ಅನ್ನು ಹೀಗೆಯೇ ಮಾಡಿ. |
10:52 | ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ. |
11:01 | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು. |
11:05 | ಈ ರೀತಿಯಾಗಿ ಸ್ಟುಡೆಂಟ್ Priya Sinha ಈ ಪೇಜ್ ಅನ್ನು ನೋಡುವಳು. |
11:11 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
11:19 | ಈ ಟ್ಯುಟೋರಿಯಲ್ ನಲ್ಲಿ ನಾವು
ಮೂಡಲ್ ನಲ್ಲಿ ರಿಸೋರ್ಸ್ ಗಳು, course material ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿನ ಫಾರ್ಮ್ಯಾಟಿಂಗ್ ಆಯ್ಕೆಗಳು – ಇವುಗಳ ಕುರಿತು ಕಲಿತಿದ್ದೇವೆ.
|
11:34 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
Basic Calculus ನಲ್ಲಿ ಒಂದು ಹೊಸ ಫೋಲ್ಡರ್ resource ಅನ್ನು ಸೇರಿಸಿ. File Manager ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ . ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
11:51 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
12:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
12:27 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
12:38 | ಧನ್ಯವಾದಗಳು. |