Linux-AWK/C2/MultiDimensional-Array-in-awk/Kannada

From Script | Spoken-Tutorial
Revision as of 12:16, 30 July 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 MultiDimensional Array in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು –

awk ನಲ್ಲಿ, 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಕ್ರಿಯೇಟ್ ಮಾಡುವುದು ಮತ್ತು ಅದನ್ನು ಸ್ಕ್ಯಾನ್ ಮಾಡುವುದರ ಬಗ್ಗೆ ಕಲಿಯುವೆವು.

00:18 ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ.

00:33 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:37 ನೀವು ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಮ್ಮ ವೆಬ್‌ಸೈಟ್‌ನಲ್ಲಿಯ array ಬಗ್ಗೆ ಇರುವ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:45 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:52 ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ.
00:58 ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ.

01:08 awk ನಲ್ಲಿ, 'ಮಲ್ಟಿ ಡೈಮೆನ್ಶನಲ್ ಆರೇ' (multidimensional array) ಎಂದರೇನು?
01:12 'ಸಿಂಗಲ್ ಡೈಮೆನ್ಶನಲ್ ಆರೇ' ಗಳಲ್ಲಿ, 'ಅರೇ ಎಲಿಮೆಂಟ್' ಅನ್ನು ಒಂದೇ ಇಂಡೆಕ್ಸ್ ನಿಂದ ಗುರುತಿಸಲಾಗುತ್ತದೆ ಎಂದು ನಮಗೆ ತಿಳಿದಿದೆ.
01:19 ಉದಾಹರಣೆಗೆ, ಅರೇ week ಅನ್ನು day ಎಂಬ ಒಂದೇ ಇಂಡೆಕ್ಸ್ ನಿಂದ ಗುರುತಿಸಲಾಗುತ್ತದೆ.
01:26 ಆದರೆ 'ಮಲ್ಟಿ ಡೈಮೆನ್ಶನಲ್ ಆರೇ' ಯಲ್ಲಿ, ಎಲಿಮೆಂಟ್ ಅನ್ನು ಅನೇಕ ಇಂಡೆಕ್ಸ್ ಗಳ ಸಿಕ್ವೆನ್ಸ್ ನಿಂದ (ಅನುಕ್ರಮ) ಗುರುತಿಸಲಾಗುತ್ತದೆ.
01:34 ಉದಾಹರಣೆಗೆ, ಎರಡು ಡೈಮೆನ್ಶನ್ ನ ಆರೇ ಯಲ್ಲಿ, ಎಲಿಮೆಂಟ್ ಅನ್ನು 2 ಇಂಡೆಕ್ಸ್ ಗಳ ಸಿಕ್ವೆನ್ಸ್ ನಿಂದ ಗುರುತಿಸಲಾಗುತ್ತದೆ.
01:42 ಇಲ್ಲಿ, ಅನೇಕ ಇಂಡೆಕ್ಸ್ ಗಳನ್ನು, ಅವುಗಳ ನಡುವೆ ಸೆಪರೇಟರ್ ನೊಂದಿಗೆ, ಒಂದೇ 'ಸ್ಟ್ರಿಂಗ್' ನಲ್ಲಿ ಜೋಡಿಸಲಾಗಿದೆ (concatenated).
01:50 ಸೆಪರೇಟರ್, ಬಿಲ್ಟ್-ಇನ್ ವೇರಿಯೆಬಲ್ SUBSEP ನ ವ್ಯಾಲ್ಯೂ ಆಗಿದೆ.
01:55 ಸರಳವಾದ, ಒಂದು ಡೈಮೆನ್ಶನ್ ನ ಆರೇಗಾಗಿ, ಈ ಜೋಡಿಸಲಾದ ಸ್ಟ್ರಿಂಗ್ ಅನ್ನು ಒಂದೇ ಇಂಡೆಕ್ಸ್ ನ ಹಾಗೆ ಬಳಸಲಾಗುತ್ತದೆ.
02:01 ಉದಾಹರಣೆಗೆ, ನಾವು multi within square brackets 4 comma 6 equal to value, in double quotes ಎಂದು ಬರೆಯುತ್ತೇವೆ ಎನ್ನೋಣ.
02:11 ಇಲ್ಲಿ, multi, – ಇದು 'ಮಲ್ಟಿ ಡೈಮೆನ್ಶನಲ್ ಆರೇ'ಯ ಹೆಸರು ಆಗಿದೆ.

'4' ಮತ್ತು '6' ಈ ಸಂಖ್ಯೆಗಳನ್ನು 'ಸ್ಟ್ರಿಂಗ್' ಗೆ ಪರಿವರ್ತಿಸಲಾಗುತ್ತದೆ.

02:21 SUBSEP ನ (ಸಬ್ ಸೆಪ್) ವ್ಯಾಲ್ಯೂ ಹ್ಯಾಶ್ ಚಿಹ್ನೆ (#) ಆಗಿದೆ ಎನ್ನೋಣ.
02:26 ಆಗ ಆ ಸಂಖ್ಯೆಗಳನ್ನು, ಅವುಗಳ ನಡುವೆ 'ಹ್ಯಾಶ್ ಚಿಹ್ನೆ (#)' ಯೊಂದಿಗೆ ಜೋಡಿಸಲಾಗುತ್ತದೆ.
02:32 ಆದ್ದರಿಂದ, ಅರೇ ಎಲಿಮೆಂಟ್, multi within square brackets within double quotes 4 hash 6 ಅನ್ನು, ಡಬಲ್ ಕೋಟ್ಸ್ ನಲ್ಲಿ value ಗೆ ಸೆಟ್ ಮಾಡಲಾಗಿದೆ.
02:43 SUBSEP ನ ಡೀಫಾಲ್ಟ್ ವ್ಯಾಲ್ಯೂ, ಡಬಲ್ ಕೋಟ್ಸ್ ನಲ್ಲಿ backslash 034 ಎಂಬ ಸ್ಟ್ರಿಂಗ್ ಆಗಿದೆ.
02:50 ಇದು ವಾಸ್ತವವಾಗಿ non-printing character ಆಗಿದೆ.

ಇದು ಸಾಮಾನ್ಯವಾಗಿ ಹೆಚ್ಚಿನ ಇನ್ಪುಟ್ ಡೇಟಾದಲ್ಲಿ ಕಾಣಿಸುವುದಿಲ್ಲ.

02:58 ಸ್ಲೈಡ್‌ನಲ್ಲಿ ತೋರಿಸಿರುವಂತೆ, ಎರಡು ಡೈಮೆನ್ಶನ್ ನ ಆರೇಯನ್ನು ಡಿಕ್ಲೇರ್ ಮಾಡಲು ನಾವು ಪ್ರಯತ್ನಿಸೋಣ.
03:03 Row 1, 'A' ಮತ್ತು 'B' ಎಂಬ ಎರಡು ಎಲಿಮೆಂಟ್ ಗಳನ್ನು ಹೊಂದಿದೆ.
03:08 Row 2, 'C ' ಮತ್ತು 'D' ಈ ಎರಡು ಎಲಿಮೆಂಟ್ ಗಳನ್ನು ಹೊಂದಿದೆ.
03:12 CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
03:17 cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ.
03:24 ಈಗ 'ಅರೇ' ಅನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಿ. ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಎಚ್ಚರಿಕೆಯಿಂದ ಟೈಪ್ ಮಾಡಿ.

ನಂತರ Enter ಅನ್ನು ಒತ್ತಿ.

03:35 ಯಾವುದೇ ಎರರ್ ಇಲ್ಲದೆ, ನಾವು ಕಮಾಂಡ್ ಪ್ರಾಂಪ್ಟ್ ಅನ್ನು ಪಡೆಯುತ್ತೇವೆ.

ಹೀಗೆ, 'ಅರೇ' ಅನ್ನು ವ್ಯಾಖ್ಯಾನಿಸಲಾಗಿದೆ.

03:41 ಕೋಡ್‌ನಲ್ಲಿ, ಪ್ರಿಂಟ್ ಮಾಡಲು ನಾವು ಏನನ್ನೂ ಕೊಟ್ಟಿಲ್ಲ. ಆದ್ದರಿಂದ ನಮಗೆ ಯಾವುದೇ ಔಟ್‌ಪುಟ್ ಸಿಗುವುದಿಲ್ಲ.
03:47 ನಾವು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ.
03:50 ಟರ್ಮಿನಲ್ ನಲ್ಲಿ ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ.
03:56 'ಕರ್ಲಿ ಬ್ರಾಕೆಟ್' ಮುಚ್ಚುವ ಮೊದಲು, ಹೀಗೆ ಟೈಪ್ ಮಾಡಿ: semicolon space print space a within square brackets 2 comma 2.

ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ.

04:13 ಗಮನಿಸಿ, ನಾವು ಔಟ್ಪುಟ್ ಅನ್ನು ಕ್ಯಾಪಿಟಲ್ 'D' ಎಂದು ಪಡೆಯುತ್ತೇವೆ.
04:18 ಯಾವುದೇ ಒಂದು 'ಮಲ್ಟಿ ಡೈಮೆನ್ಶನಲ್ ಆರೇ' ಯಲ್ಲಿ, ಒಂದು ನಿರ್ದಿಷ್ಟ ‘ಇಂಡೆಕ್ಸ್ ಸಿಕ್ವೆನ್ಸ್’ ಇರುವುದನ್ನು ಪರೀಕ್ಷಿಸುವುದು ಹೇಗೆ?
04:25 ಇದಕ್ಕಾಗಿ ನಾವು in ಆಪರೇಟರ್‌ ಅನ್ನು ಬಳಸಬಹುದು.
04:28 ಈ ಸರಣಿಯಲ್ಲಿ, ಈಗಾಗಲೇ ನಾವು ಇದನ್ನು 'ಸಿಂಗಲ್ ಡೈಮೆನ್ಶನ್ ಆರೇ'ಯಲ್ಲಿ ನೋಡಿದ್ದೇವೆ.
04:34 ನಾವು ಅಲ್ಪವಿರಾಮದಿಂದ ಬೇರ್ಪಡಿಸಲಾದ ಇಂಡೆಕ್ಸ್ ಗಳ ಸಂಪೂರ್ಣ ಸಿಕ್ವೆನ್ಸ್ ಅನ್ನು ಆವರಣದೊಳಗೆ ಬರೆಯಬೇಕು.
04:42 ಇದನ್ನು ಒಂದು ಉದಾಹರಣೆಯಲ್ಲಿ ನೋಡೋಣ.
04:45 ನಾನು ಈಗಾಗಲೇ test_multi.awk ಎಂಬ ಸ್ಕ್ರಿಪ್ಟ್ ಅನ್ನು ಬರೆದಿದ್ದೇನೆ.
04:51 ಈ ಟ್ಯುಟೋರಿಯಲ್ ಪೇಜ್ ನ Code Files ಲಿಂಕ್‌ನಲ್ಲಿ ಇದು ಲಭ್ಯವಿದೆ.
04:56 ನಮ್ಮ ಹಿಂದಿನ ಚರ್ಚೆಯಲ್ಲಿ ನೋಡಿದಂತೆ, ನಾನು 2 by 2 ಅರೇ ಯನ್ನು ವ್ಯಾಖ್ಯಾನಿಸಿದ್ದೇನೆ.
05:02 ನಂತರ, ನಾನು ಎರಡು if ಕಂಡಿಷನ್ ಗಳನ್ನು ಬರೆದಿದ್ದೇನೆ.
05:06 ಮೊದಲನೆಯ if ಕಂಡಿಷನ್, ಇಂಡೆಕ್ಸ್ one comma one ದಲ್ಲಿ, ಎಲಿಮೆಂಟ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುತ್ತದೆ.
05:13 ನಾವು 'ಮಲ್ಟಿ ಡೈಮೆನ್ಶನಲ್ ಆರೇ' ಗಾಗಿ, ಇಂಡೆಕ್ಸ್ ಅನ್ನು ಆವರಣದ (parentheses) ಒಳಗೆ ಬರೆಯಬೇಕು.
05:18 ಕಂಡಿಷನ್ true ಆಗಿದ್ದರೆ, ಅದು one comma one is present ಎಂದು ಪ್ರಿಂಟ್ ಮಾಡುತ್ತದೆ.
05:23 ಇಲ್ಲದಿದ್ದರೆ, ಅದು one comma one is absent ಎಂದು ಪ್ರಿಂಟ್ ಮಾಡುತ್ತದೆ.
05:28 ಹೀಗೆಯೇ, ಇಂಡೆಕ್ಸ್ three comma one ನಲ್ಲಿ, ಎಲಿಮೆಂಟ್ ನ ಇರುವಿಕೆಯನ್ನು ನಾವು ಪರೀಕ್ಷಿಸುತ್ತೇವೆ.

ಈ ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡೋಣ.

05:36 'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ : awk space hyphen small f space test underscore multi dot awk ಮತ್ತು Enter ಅನ್ನು ಒತ್ತಿ.
05:49 ಔಟ್ಪುಟ್: one comma one is present ಹಾಗೂ three comma one is absent ಎಂದು ಹೇಳುತ್ತದೆ.
05:55 ಇನ್ನೊಂದು ಉದಾಹರಣೆಯನ್ನು ನೋಡೋಣ.

ಈಗ, ನಮಗೆ ಮ್ಯಾಟ್ರಿಕ್ಸ್ ನ 'ಟ್ರಾನ್ಸ್ಪೋಸ್' ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎನ್ನಿ.

06:02 ಒಂದು ಮ್ಯಾಟ್ರಿಕ್ಸ್ ನ 'ರೋ' ಗಳು ಮತ್ತು 'ಕಾಲಂ'ಗಳನ್ನು ಅದಲು ಬದಲು ಮಾಡುವ ಮೂಲಕ, ಆ 'ಮ್ಯಾಟ್ರಿಕ್ಸ್' ನ 'ಟ್ರಾನ್ಸ್ಪೋಸ್' ಅನ್ನು ರಚಿಸಲಾಗುತ್ತದೆ.

ನಾವು ಇದನ್ನು ಹೇಗೆ ಮಾಡಬಹುದು?

06:11 2D-array.txt ಫೈಲ್ ನಲ್ಲಿ, ನಾನು ಎರಡು ಡೈಮೆನ್ಶನ್ ನ ಆರೇ ಮ್ಯಾಟ್ರಿಕ್ಸ್ (two-dimensional array matrix) ಅನ್ನು ಕ್ರಿಯೇಟ್ ಮಾಡಿದ್ದೇನೆ.
06:19 ನಾನು transpose.awk ಎಂಬ ಹೆಸರಿನ ಕೋಡ್ ಅನ್ನು ಬರೆದಿದ್ದೇನೆ.
06:24 ಮೊದಲು, ಈ awk ಸ್ಕ್ರಿಪ್ಟ್ ನ action ವಿಭಾಗವನ್ನು ನೋಡಿ.
06:29 ಇಲ್ಲಿ, ಒಂದು ಸಾಲಿನಲ್ಲಿರುವ (row) ಫೀಲ್ಡ್ ಗಳ ಗರಿಷ್ಠ ಸಂಖ್ಯೆಯನ್ನು ಲೆಕ್ಕ ಮಾಡುತ್ತಿದ್ದೇವೆ. ಮತ್ತು ಈ ವ್ಯಾಲ್ಯೂವನ್ನು max_nf ಎಂಬ ವೇರಿಯಬಲ್ ನಲ್ಲಿ ಸ್ಟೋರ್ ಮಾಡಿದ್ದೇವೆ.
06:40 ನಮಗೆ ತಿಳಿದಿರುವಂತೆ, NR, awk ನಿಂದ ಪ್ರೊಸೆಸ್ ಮಾಡಲಾದ ಪ್ರಸ್ತುತ ರೆಕಾರ್ಡ್ ಗಳ ಸಂಖ್ಯೆಯಾಗಿದೆ.

NR ನ ವ್ಯಾಲ್ಯೂವನ್ನು, max_nr ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ.

06:50 Awk, ಇನ್ಪುಟ್ ಫೈಲ್ ಅನ್ನು ಮೊದಲನೆಯ ರೆಕಾರ್ಡ್ ನಿಂದ ಕೊನೆಯ ರೆಕಾರ್ಡ್ ವರೆಗೆ ಪ್ರೊಸೆಸ್ ಮಾಡುವುದು.
06:56 Awk ಮೊದಲ ರೆಕಾರ್ಡ್ ಅನ್ನು ಪ್ರೊಸೆಸ್ ಮಾಡುವಾಗ, max_nr 1 ಆಗಿರುತ್ತದೆ.
07:03 ಎರಡನೇ ರೆಕಾರ್ಡ್ ಅನ್ನು ಪ್ರೊಸೆಸ್ ಮಾಡುವಾಗ, max_nr 2 ಆಗಿರುತ್ತದೆ ಮತ್ತು ಅದು ಹೀಗೆ ಮುಂದುವರಿಯುತ್ತದೆ.
07:11 awk ಕೊನೆಯ ರೆಕಾರ್ಡ್ ಅನ್ನು ಪ್ರೊಸೆಸ್ ಮಾಡುವಾಗ, max_nr ಒಟ್ಟು ರೆಕಾರ್ಡ್ ಗಳ ಸಂಖ್ಯೆಯನ್ನು ಸ್ಟೋರ್ ಮಾಡುವುದು.
07:19 ಈಗ ನಾವು 'ಇನ್ಪುಟ್ ಫೈಲ್' ನಿಂದ ಡೇಟಾವನ್ನು ಓದಬೇಕು ಮತ್ತು ಡೇಟಾವನ್ನು ಎರಡು ಡೈಮೆನ್ಶನ್ ನ ಆರೇ ಯಲ್ಲಿ ಸ್ಟೋರ್ ಮಾಡಬೇಕು.
07:26 for ಲೂಪ್‌ ನ ಒಳಗೆ, 'ಇಟರೇಟರ್ ವೇರಿಯಬಲ್ x' ಇದೆ.
07:31 x’ ಒಂದರಿಂದ NF ವರೆಗೆ ಕ್ರಮಿಸುತ್ತದೆ ಮತ್ತು ಪ್ರತಿಯೊಂದು ಇಟರೇಶನ್ (ಪುನರಾವರ್ತನೆ) ನಂತರ ‘x’ ಅನ್ನು 1 ರಿಂದ ಹೆಚ್ಚಿಸಲಾಗುತ್ತದೆ.
07:39 x’ ನ ಪ್ರತಿಯೊಂದು ವ್ಯಾಲ್ಯೂಗೆ, $ x (ಡಾಲರ್ x), ಫೀಲ್ಡ್ ‘x’ ನಲ್ಲಿಯ ವ್ಯಾಲ್ಯೂವನ್ನು ಪ್ರತಿನಿಧಿಸುತ್ತದೆ.
07:46 ಆ ವ್ಯಾಲ್ಯೂವನ್ನು, matrix ಎಂಬ ಅರೇಯ NR comma x ಇಂಡೆಕ್ಸ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ.
07:53 ಉದಾಹರಣೆಗೆ, matrix of 1 comma 1, ಇನ್ಪುಟ್ ಫೈಲ್‌ನಿಂದ ಇಂಡೆಕ್ಸ್ 1 comma 1 ನಲ್ಲಿರುವ ವ್ಯಾಲ್ಯೂವನ್ನು ಸ್ಟೋರ್ ಮಾಡುತ್ತದೆ.
08:02 ಆದ್ದರಿಂದ, awk ಈ ಕೋಡ್‌ನೊಂದಿಗೆ ಸಂಪೂರ್ಣ ಇನ್ಪುಟ್ ಫೈಲ್ ಅನ್ನು ಪ್ರೊಸೆಸ್ ಮಾಡಿದ ನಂತರ matrix ಅರೇ, ಪೂರ್ತಿಯಾಗಿ ತಯಾರಾಗುತ್ತದೆ.
08:10 ಇದು 'ಇನ್ಪುಟ್ ಫೈಲ್' ನ ಸಂಪೂರ್ಣ ಡೇಟಾವನ್ನು, 'ಎರಡು ಡೈಮೆನ್ಶನ್ ನ ಆರೇ' ಯ ಫಾರ್ಮ್ಯಾಟ್ ನಲ್ಲಿ ಸ್ಟೋರ್ ಮಾಡುತ್ತದೆ.
08:16 ಈಗ, ನಾವು END ವಿಭಾಗದ ಒಳಗೆ ನೋಡೋಣ.
08:20 matrix ನ 'ಟ್ರಾನ್ಸ್ಪೋಸ್' ಅನ್ನು ಪ್ರಿಂಟ್ ಮಾಡಲು, ನಾವು ಒಂದು 'ನೆಸ್ಟೆಡ್ for ಲೂಪ್' ಅನ್ನು ಬರೆದಿದ್ದೇವೆ.
08:25 ನಿಮಗೆ 'C ಪ್ರೋಗ್ರಾಮಿಂಗ್' ನ ಪರಿಚಯವಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ, ನಾನು ಕೋಡ್‌ನ ಈ ಭಾಗವನ್ನು ವಿಸ್ತಾರವಾಗಿ ವಿವರಿಸುತ್ತಿಲ್ಲ.
08:34 ಕೋಡ್ ಅನ್ನು ವಿವರವಾಗಿ ನೋಡಲು ಮತ್ತು ಅರ್ಥಮಾಡಿಕೊಳ್ಳಲು ವೀಡಿಯೊವನ್ನು ಇಲ್ಲಿ ನಿಲ್ಲಿಸಿ.
08:40 ಈಗ, 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಸ್ಕ್ಯಾನ್ ಹೇಗೆ ಮಾಡುವುದೆಂದು ಕಲಿಯುವೆವು.
08:45 ನಿಜವಾದ ಅರ್ಥದಲ್ಲಿ,Awk, 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಹೊಂದಿಲ್ಲ.
08:50 ಹೀಗಾಗಿ, 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಸ್ಕ್ಯಾನ್ ಮಾಡಲು ಇಲ್ಲಿ ಯಾವುದೇ ವಿಶೇಷ for ಸ್ಟೇಟ್ಮೆಂಟ್ ಇರಲು ಸಾಧ್ಯವಿಲ್ಲ.
08:56 ಆರೇ ಯನ್ನು ಸ್ಕ್ಯಾನ್ ಮಾಡಲು, ನೀವು 'ಮಲ್ಟಿ ಡೈಮೆನ್ಶನಲ್' ರೀತಿಯನ್ನು ಹೊಂದಬಹುದು.
09:00 ಇದಕ್ಕಾಗಿ ನೀವು, for ಸ್ಟೇಟ್ಮೆಂಟ್ ಅನ್ನು split() ಫಂಕ್ಷನ್‌ನೊಂದಿಗೆ ಸೇರಿಸಬಹುದು.
09:05 split ಫಂಕ್ಷನ್ ಎಂದರೇನು?

'ಸ್ಟ್ರಿಂಗ್' ಅನ್ನು ಕತ್ತರಿಸಲು ಅಥವಾ ಭಾಗಗಳಲ್ಲಿ ವಿಭಜಿಸಲು

09:14 ಮತ್ತು ವಿವಿಧ ಭಾಗಗಳನ್ನು ಒಂದು 'ಅರೇ' ಯಲ್ಲಿ ಇರಿಸಲು, split ಫಂಕ್ಷನ್ ಅನ್ನು ಬಳಸಲಾಗುತ್ತದೆ.
09:18 ಸಿಂಟ್ಯಾಕ್ಸ್ ಈ ಕೆಳಗಿನಂತಿರುತ್ತದೆ.

ಮೊದಲನೆಯ 'ಆರ್ಗ್ಯುಮೆಂಟ್', ಕತ್ತರಿಸಬೇಕಾದ 'ಸ್ಟ್ರಿಂಗ್' ಅನ್ನು ಹೊಂದಿದೆ.

09:25 ಎರಡನೆಯ 'ಆರ್ಗ್ಯುಮೆಂಟ್, 'split() ಕತ್ತರಿಸಿದ ಭಾಗಗಳನ್ನು ಇರಿಸಬೇಕಾದ 'ಅರೇ' ಯ ಹೆಸರನ್ನು ಸೂಚಿಸುತ್ತದೆ.
09:33 ಮೂರನೆಯ 'ಆರ್ಗ್ಯುಮೆಂಟ್', ಸ್ಟ್ರಿಂಗ್ ಅನ್ನು ಕತ್ತರಿಸಲು ಬಳಸಲಾಗುವ ಸೆಪರೇಟರ್ ಬಗ್ಗೆ ಹೇಳುತ್ತದೆ.
09:39 ಮೊದಲನೆಯ ಭಾಗವನ್ನು arr 1 ನಲ್ಲಿ ( ಎ ಆರ್ ಆರ್ ವನ್) ಸ್ಟೋರ್ ಮಾಡಲಾಗುವುದು.
09:43 ಎರಡನೆಯ ಭಾಗವನ್ನು arr 2 ನಲ್ಲಿ, ಹೀಗೆ…
09:48 ಈಗಾಗಲೇ ರಚಿಸಲಾದ 'ಅರೇ' ಯಿಂದ, ನಮಗೆ ಇಂಡೆಕ್ಸ್ ಗಳ ಮೂಲ ಅನುಕ್ರಮವನ್ನು ಮರಳಿ ಪಡೆಯಬೇಕಾಗಿದೆ ಎನ್ನೋಣ. ನಾವು ಇದನ್ನು ಹೇಗೆ ಮಾಡಬಹುದು?
09:56 ನಾನು multi_scan.awk ಎಂಬ ಹೆಸರಿನ ಕೋಡ್ ಅನ್ನು ಬರೆದಿದ್ದೇನೆ.
10:02 ಸಂಪೂರ್ಣ ಕೋಡ್ ಅನ್ನು BEGIN ವಿಭಾಗದ ಒಳಗೆ ಬರೆಯಲಾಗಿದೆ.
10:06 ಮೊದಲು ನಾವು a ಎಂಬ ಹೆಸರಿನ ಅರೇ ಯನ್ನು ಕ್ರಿಯೇಟ್ ಮಾಡಿದ್ದೇವೆ ಮತ್ತು ಅದಕ್ಕೆ ಈ ವ್ಯಾಲ್ಯೂಗಳನ್ನು ಅಸೈನ್ ಮಾಡಿದ್ದೇವೆ.
10:12 ನಂತರ, iterator ನೊಂದಿಗೆ forಲೂಪ್ ಅನ್ನು ಹೊಂದಿದ್ದೇವೆ.
10:16 ಪ್ರತಿಯೊಂದು ಇಟರೇಶನ್ ಗಾಗಿ, iterator ಅನ್ನು ಪ್ರತಿಯೊಂದು ಇಂಡೆಕ್ಸ್ ವ್ಯಾಲ್ಯುಗೆ ಸೆಟ್ ಮಾಡಲಾಗುವುದು. 1,1 ನಂತರ 1,2 ಹೀಗೆ…
10:27 split() ಫಂಕ್ಷನ್, 'ಇಟರೇಟರ್' ಅನ್ನು SUBSEP ನಿಂದ ಬೇರ್ಪಡಿಸಲಾದ ಭಾಗಗಳಾಗಿ ವಿಭಾಗಿಸುತ್ತದೆ.
10:34 ಈ ಭಾಗಗಳನ್ನು arr ಎಂಬ ಅರೇಯಲ್ಲಿ ಸ್ಟೋರ್ ಮಾಡಲಾಗುತ್ತದೆ.
10:38 ಹೀಗಾಗಿ, arr[1] ಮತ್ತು arr[2] ಗಳು ಕ್ರಮವಾಗಿ ಮೊದಲನೆಯ ಮತ್ತು ಎರಡನೆಯ ಇಂಡೆಕ್ಸ್ ಅನ್ನು ಹೊಂದಿರುತ್ತವೆ.

ಈ ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡೋಣ.

10:48 'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ - awk space hyphen small f space multi underscore scan dot awk .

ಮತ್ತು Enter ಅನ್ನು ಒತ್ತಿ.

11:01 ಔಟ್ಪುಟ್ ಅನ್ನು ನೋಡಿ; ಇಂಡೆಕ್ಸ್ ಗಳ ಮೂಲ ಸಿಕ್ವೆನ್ಸ್ ವನ್ನು ಮರಳಿ ಪಡೆಯಲಾಗಿದೆ.
11:07 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು -

awk ನಲ್ಲಿ, 'ಮಲ್ಟಿ ಡೈಮೆನ್ಶನಲ್ ಆರೇ' ಯನ್ನು ಕ್ರಿಯೇಟ್ ಮಾಡುವುದು ಮತ್ತು ಅದನ್ನು ಸ್ಕ್ಯಾನ್ ಮಾಡುವುದರ ಬಗ್ಗೆ ಕಲಿತಿದ್ದೇವೆ.

11:18 ಒಂದು ಅಸೈನ್ಮೆಂಟ್ ಇದೆ -

ಎರಡು ಡೈಮೆನ್ಶನಲ್ ಆರೇ ಯನ್ನು 90 ಡಿಗ್ರಿ ತಿರುಗಿಸಲು ಮತ್ತು ತಿರುಗಿಸಿದ 'ಮ್ಯಾಟ್ರಿಕ್ಸ್' ಅನ್ನು ಪ್ರಿಂಟ್ ಮಾಡಲು ಒಂದು awk ಸ್ಕ್ರಿಪ್ಟ್ ಅನ್ನು ಬರೆಯಿರಿ

11:28 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:36 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:45 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
11:49 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ.
11:53 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

12:05 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14