Moodle-Learning-Management-System/C2/Admin-dashboard/Kannada
Time | Narration |
00:01 | Moodle ನಲ್ಲಿ Admin’s dashboard ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
“Admin’s ಡ್ಯಾಶ್-ಬೋರ್ಡ್” ನಲ್ಲಿಯ ವಿವಿಧ ಬ್ಲಾಕ್ ಗಳು, “Admin’s ಪ್ರೊಫೈಲ್ ಪೇಜ್” ಮತ್ತು Preferences ಅನ್ನು ಹೇಗೆ ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:46 | ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
00:50 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಇದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:59 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನಿಮ್ಮ ಸಿಸ್ಟಂ ನಲ್ಲಿ Moodle 3.3 ಅನ್ನು ಇನ್ಸ್ಟಾಲ್ ಮಾಡಿರಬೇಕು.
ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:13 | ಬ್ರೌಸರ್ ಗೆ ಬದಲಾಯಿಸಿ, ನಿಮ್ಮ moodle ಸೈಟ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
01:21 | ನೀವು ಕೇವಲ ಹೆಡ್ಡರ್ ಗಳೊಂದಿಗೆ ಒಂದು ಖಾಲಿ ಪೇಜ್ ಅನ್ನು ನೋಡಬಹುದು. ಏಕೆಂದರೆ, ನಾವು ನಮ್ಮ ಇನ್ಸ್ಟಾಲ್ಲೇಶನ್ ಗೆ, ಯಾವುದೇ front page ಅನ್ನು ಸೆಟ್ ಮಾಡಿಲ್ಲ. |
01:33 | ವಿಂಡೋದ ಮೇಲಿನ ಬಲಮೂಲೆಯಲ್ಲಿ, Log in ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:39 | ನೀವು Moodle ಅನ್ನು ಇನ್ಸ್ಟಾಲ್ ಮಾಡಿದಾಗ ಕೊಟ್ಟಿದ್ದ ನಿಮ್ಮ admin username ಮತ್ತು ಪಾಸ್ವರ್ಡ್ ಗಳನ್ನು ಬಳಸಿ ಲಾಗ್-ಇನ್ ಮಾಡಿ. |
01:47 | username ಅನ್ನು admin ಎಂದು, password ಅನ್ನು Spokentutorial1@ ಎಂದು ನಮೂದಿಸಿ, Log in ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
01:59 | ನಾವು ಈಗ ನೋಡುತ್ತಿರುವ ಪುಟವನ್ನು ‘ಡ್ಯಾಶ್-ಬೋರ್ಡ್’ ಎನ್ನುತ್ತಾರೆ. |
02:04 | ನಮ್ಮ ‘ಡ್ಯಾಶ್-ಬೋರ್ಡ್’ ಅನ್ನು 2 ಕಾಲಂಗಳಾಗಿ ವಿಭಾಗಿಸಲಾಗಿದೆ. |
02:08 | ಎಡಭಾಗದಲ್ಲಿ ಇರುವ ಅಗಲವಾದ ಕಾಲಂ, ಮುಖ್ಯವಾದ Content ಕಾಲಂ ಆಗಿದೆ. |
02:13 | ಬಲಭಾಗದಲ್ಲಿರುವುದು, ಬ್ಲಾಕ್ಸ್ (Blocks) ಕಾಲಂ ಆಗಿದೆ. |
02:17 | ಬ್ಲಾಕ್ ಗಳು ಈ ಕಾಲಂಗಳಲ್ಲಿರುವ ಐಟಂಗಳಾಗಿದ್ದು, ನಿರ್ದಿಷ್ಟ ಉದ್ದೇಶ ಅಥವಾ ಮಾಹಿತಿಯನ್ನು ಒದಗಿಸುತ್ತವೆ. |
02:25 | ಇವು ಮೂಡಲ್ ನ ಎಲ್ಲಾ ಪೇಜ್ ಗಳಲ್ಲಿ ಕಂಡುಬರುತ್ತವೆ. ನಿಮ್ಮ ಕೋರ್ಸ್ ನ ನಿರ್ಣಾಯಕ ಭಾಗಗಳಿಗೆ ಇವುಗಳನ್ನು ಶಾರ್ಟ್ಕಟ್ ಗಳೆಂದು ಪರಿಗಣಿಸಬಹುದು. |
02:35 | ಉದಾಹರಣೆಗೆ: Private Files, Online Users, Course Overview ಇತ್ಯಾದಿಗಳು ನನ್ನ ‘ಡ್ಯಾಶ್-ಬೋರ್ಡ್’ ಮೇಲಿನ ಬ್ಲಾಕ್ ಗಳಾಗಿವೆ. |
02:46 | ಇಲ್ಲಿ ಯಾವುದೇ ಚಟುವಟಿಕೆಗಳು ಅಥವಾ ಕೋರ್ಸ್ ಗಳು ಇಲ್ಲ ಎಂದು ಗಮನಿಸಿ. |
02:50 | ಏಕೆಂದರೆ, ನಾವು ಇನ್ನೂ ಯಾವದೇ ಕೋರ್ಸ್ ಅನ್ನು ಕ್ರಿಯೇಟ್ ಮಾಡಿಲ್ಲ. |
02:56 | user ನು - ಎಂದರೆ, teacher ಅಥವಾ student ಅಥವಾ admin, ಕೋರ್ಸ್ ಗಳಿಗೆ ಸೇರಿಕೊಂಡಿದ್ದರೆ ಅಥವಾ ಅವುಗಳಲ್ಲಿ ಭಾಗವಹಿಸಿದ್ದರೆ ಆಗ ಎಲ್ಲಾ ಕೋರ್ಸ್ ಗಳ ಪಟ್ಟಿಯನ್ನು ನೋಡಬಹುದು. |
03:08 | Online Users block, ನಮ್ಮ ಈಗಿನ ಲಾಗ್-ಇನ್ ಆಗಿರುವ Admin User ಅನ್ನು ತೋರಿಸುತ್ತಿದೆ ಎಂದು ಗಮನಿಸಿ. |
03:17 | ಈ 'ಬ್ಲಾಕ್', ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಲಾಗ್-ಇನ್ ಮಾಡಿದ ಎಲ್ಲಾ ಯೂಸರ್ ಗಳನ್ನು ತೋರಿಸುತ್ತದೆ. |
03:23 | 'ಮೂಡಲ್' ನಲ್ಲಿಯ ಪ್ರತಿಯೊಂದು 'ಬ್ಲಾಕ್', ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ. ಯಾವುದೇ ಪೇಜ್ ನ, ಯಾವುದೇ ಕಾಲಂಗೆ ನಾವು ಬ್ಲಾಕ್ ಗಳನ್ನು ಸೇರಿಸಬಹುದು. |
03:34 | ಈಗ ನಾವು ಪೇಜ್ ನ header ಅನ್ನು ನೋಡೋಣ. |
03:38 | ಮೇಲಿನ ಎಡಮೂಲೆಯಲ್ಲಿ, 'ನ್ಯಾವಿಗೇಷನ್ ಡ್ರಾವರ್' ಅಥವಾ ' ನ್ಯಾವಿಗೇಷನ್ ಮೆನ್ಯು’ ವನ್ನು ನೋಡಬಹುದು. ಇದು ಕ್ಯಾಲೆಂಡರ್ ಹಾಗೂ ಇತರ ಅಡ್ಮಿನಿಸ್ಟ್ರೇಷನ್ ಲಿಂಕ್ ಗಳನ್ನು ಆಕ್ಸೆಸ್ ಮಾಡಲು ನಮಗೆ ಸಹಾಯ ಮಾಡುತ್ತದೆ. ಇದೊಂದು ಟಾಗಲ್ ಮೆನ್ಯು ಆಗಿದೆ. |
03:55 | ಎಂದರೆ, ಕ್ಲಿಕ್ ಮಾಡಿದಾಗಲೆಲ್ಲ, ಇದು ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಯಿಸುತ್ತದೆ. |
04:04 | ನಂತರ ನಾವು 'ಲೋಗೊ' ಗಾಗಿ ಸ್ಥಳವನ್ನು ಹೊಂದಿದ್ದೇವೆ. |
04:08 | ಡೀಫಾಲ್ಟ್ ಆಗಿ, ಇದು short site name ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿದಾಗ, ಯಾವುದೇ ಪೇಜ್ ನಿಂದ ನಾವು ‘ಡ್ಯಾಶ್-ಬೋರ್ಡ್’ಗೆ ಹೋಗಬಹುದು. |
04:18 | ಮೇಲಿನ ಬಲಭಾಗದಲ್ಲಿ, notifications ಹಾಗೂ messages ಗಳನ್ನು ಶೀಘ್ರವಾಗಿ ಆಕ್ಸೆಸ್ ಮಾಡಲು ಐಕಾನ್ ಗಳಿವೆ. |
04:26 | ಅದರ ಬದಿಯಲ್ಲಿ, ಡ್ರಾಪ್-ಡೌನ್ ಯೂಸರ್ ಮೆನ್ಯು ಇದೆ. ಇದನ್ನು quick access user menu ಎಂದು ಸಹ ಕರೆಯುತ್ತಾರೆ. |
04:35 | ಈ ಟ್ಯುಟೋರಿಯಲ್ ನಲ್ಲಿ ನಾವು, Profile ಹಾಗೂ Preferences ಪೇಜ್ ಅನ್ನು ಸಂಕ್ಷಿಪ್ತವಾಗಿ ಚರ್ಚಿಸುವೆವು. |
04:41 | ಎಡಭಾಗದ ಮೆನ್ಯುವಿನಂತೆ, ಈ ಎಲ್ಲಾ ಮೆನ್ಯು ಐಟಂಗಳು ಸಹ ಟಾಗಲ್ ಮೆನ್ಯುಗಳಾಗಿವೆ. |
04:48 | ಈಗ, Profile ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:52 | ಮೂಡಲ್ ನಲ್ಲಿ, ಪ್ರತಿಯೊಬ್ಬ ಯೂಸರ್ ನು ಒಂದು profile ಪೇಜ್ ಅನ್ನು ಹೊಂದಿದ್ದಾನೆ. |
04:57 | ಯೂಸರ್ ಗಳು- ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಫೋರಮ್ ಅನ್ನು ಅಥವಾ ಬ್ಲಾಗ್ ಪೋಸ್ಟ್ ಗಳನ್ನು ನೋಡಲು, |
05:07 | ತಮಗೆ ಆಕ್ಸೆಸ್ ಇರುವ reports ಅನ್ನು ಪರಿಶೀಲಿಸಲು ಮತ್ತು access logs ಹಾಗೂ ಹಿಂದಿನ ಸಲ ಲಾಗ್-ಇನ್ ಮಾಡಲು ಬಳಸಿದ IP address ಅನ್ನು ನೋಡಲು ಇದು ಲಿಂಕ್ ಗಳನ್ನು ಹೊಂದಿದೆ. |
05:18 | ಈಗ Edit Profile ಲಿಂಕ್ ಮೇಲೆ ಕ್ಲಿಕ್ ಮಾಡೋಣ. Edit Profile ಪೇಜ್ ತೆರೆದುಕೊಳ್ಳುತ್ತದೆ. |
05:26 | ಈ ಪೇಜ್ ನಲ್ಲಿ 5 ವಿಭಾಗಗಳನ್ನು ಮಾಡಲಾಗಿದೆ:
General, User Picture, Additional Names, Interests, Optional. |
05:39 | ಡೀಫಾಲ್ಟ್ ಆಗಿ, General ವಿಭಾಗವನ್ನು ವಿಸ್ತರಿಸಲಾಗಿದೆ. |
05:43 | ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ದೊಡ್ಡದು ಅಥವಾ ಚಿಕ್ಕದು ಆಗುತ್ತದೆ. |
05:49 | ಬಲಗಡೆ ಇರುವ ‘Expand all’ ಲಿಂಕ್, ಎಲ್ಲಾ ವಿಭಾಗಗಳನ್ನು ವಿಸ್ತರಿಸುತ್ತದೆ. |
05:55 | ಇಲ್ಲಿ, ಎಲ್ಲಾ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು. |
05:59 | City / Town ಅನ್ನು ನಾನು Mumbai ಎಂದು ಟೈಪ್ ಮಾಡುತ್ತೇನೆ. |
06:04 | Select a country ಡ್ರಾಪ್-ಡೌನ್ ನಲ್ಲಿ, India ಆಯ್ಕೆಯಾಗಿದೆ ಮತ್ತು timezone ಅನ್ನು Asia/Kolkata ಗೆ ಸೆಟ್ ಮಾಡಿದೆ ಎಂದು ಖಚಿತಪಡಿಸಿಕೊಳ್ಳಿ. |
06:13 | ಈ ಪ್ರೊಫೈಲ್ ಪೇಜ್ ನಿಂದ, Admins ಮಾತ್ರ ಪಾಸ್ವರ್ಡ್ ಅನ್ನು ಬದಲಾಯಿಸಬಹುದು. |
06:18 | ನಾನು Optional ವಿಭಾಗದಲ್ಲಿ ಕೆಲವು ಫೀಲ್ಡ್ ಗಳನ್ನು ಸೇರಿಸುತ್ತೇನೆ. |
06:22 | Institution ಫೀಲ್ಡ್ ನಲ್ಲಿ, IIT Bombay ಎಂದು, Department ನಲ್ಲಿ Mathematics ಮತ್ತು Phone number ಫೀಲ್ಡ್ ನಲ್ಲಿ ಸರಿಯಾದ ಒಂದು ಫೋನ್ ನಂಬರ್ ಅನ್ನು ಸೇರಿಸುತ್ತೇನೆ. |
06:36 | ಆಮೇಲೆ, ಪೇಜ್ ಅನ್ನು ಸೇವ್ ಮಾಡಲು Update Profile ಬಟನ್ ಮೇಲೆ ಕ್ಲಿಕ್ ಮಾಡಿ. |
06:42 | ಈಗ ಮತ್ತೊಮ್ಮೆ, ಮೇಲಿನ ಬಲಭಾಗದಲ್ಲಿ quick access user menu ಮೇಲೆ ಕ್ಲಿಕ್ ಮಾಡಿ.
Preferences ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:51 | Preferences ಪೇಜ್, ಯೂಸರ್ ಗಳಿಗೆ ಅವರು ಎಡಿಟ್ ಮಾಡಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ ಶೀಘ್ರ ಆಕ್ಸೆಸ್ ಅನ್ನು ಕೊಡುತ್ತದೆ. |
06:59 | admin account ನ Preferences ಪೇಜ್ ನಲ್ಲಿ, 4 ವಿಭಾಗಗಳನ್ನು ಮಾಡಲಾಗಿದೆ:
User account, Roles, Blogs ಮತ್ತು Badges. |
07:12 | User Account ವಿಭಾಗವು, ಯೂಸರ್ ನಿಗೆ Edit Profile ಮತ್ತು Change Password ಗಳಿಗೆ ಅನುಮತಿಸುತ್ತದೆ. |
07:19 | ಅದು, Language, Forum, Calendar, Message, Notification ಇತ್ಯಾದಿಗಳಿಗಾಗಿ preferences ಅನ್ನು ಸಹ ಸೆಟ್ ಮಾಡುತ್ತದೆ. |
07:30 | Calendar preferences ಮೇಲೆ ಕ್ಲಿಕ್ ಮಾಡೋಣ. |
07:34 | calendar ಅನ್ನು 24 hour ಫಾರ್ಮ್ಯಾಟ್ ನಲ್ಲಿ ಸಮಯವನ್ನು ತೋರಿಸಲು ಸೆಟ್ ಮಾಡುತ್ತೇವೆ. |
07:40 | Upcoming events look-ahead ಅನ್ನು 2 weeks ಗೆ ಸೆಟ್ ಮಾಡುತ್ತೇವೆ. |
07:46 | ಎಂದರೆ, ಮುಂದಿನ 2 ವಾರಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಸೂಚನೆಗಳನ್ನು ನಾವು ಕ್ಯಾಲೆಂಡರ್ ನಲ್ಲಿ ನೋಡುತ್ತೇವೆ. |
07:55 | ಎಲ್ಲ ಫೀಲ್ಡ್ ಗಳ ಬದಿಯಲ್ಲಿರುವ help ಐಕಾನ್ ಅನ್ನು, ನನಗೆ ಹೈಲೈಟ್ ಮಾಡಬೇಕಾಗಿದೆ. |
08:00 | ಇದರ ಮೇಲೆ ಕ್ಲಿಕ್ ಮಾಡಿದಾಗ, ಆ ಫೀಲ್ಡ್ ನ ಬಗ್ಗೆ ಲಘು ವಿವರಣೆಯೊಂದಿಗೆ ಒಂದು ಹೆಲ್ಪ್-ಬಾಕ್ಸ್ ತೆರೆದುಕೊಳ್ಳುತ್ತದೆ. |
08:08 | ಯಾವುದೇ ಫೀಲ್ಡ್ ಬಗ್ಗೆ ಅನುಮಾನವಿದ್ದರೆ, ಅದರ ಮಹತ್ವವನ್ನು ತಿಳಿದುಕೊಳ್ಳಲು ಯಾವಾಗಲೂ help ಐಕಾನ್ ಮೇಲೆ ಕ್ಲಿಕ್ ಮಾಡಿ. |
08:16 | ಇತರ ಎಲ್ಲಾ ಆಯ್ಕೆಗಳು ಇದ್ದ ಹಾಗೆಯೇ ಇರಲಿ. Save Changes ಬಟನ್ ಮೇಲೆ ಕ್ಲಿಕ್ ಮಾಡಿ. |
08:23 | ಇನ್ನುಳಿದ preferences ಗಳನ್ನು, ಈ ಸರಣಿಯಲ್ಲಿ, ನಂತರ ನಾವು ನೋಡುತ್ತೇವೆ. |
08:30 | ಇಲ್ಲಿ ಮಾಹಿತಿಯನ್ನು ಗಮನಿಸಿ. |
08:33 | ಇದು breadcrumb ನ್ಯಾವಿಗೇಶನ್ ಆಗಿದ್ದು, 'ಮೂಡಲ್ ಸೈಟ್' ನಲ್ಲಿ ಕ್ರಮಾನುಗತವಾಗಿ (hierarchy) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ಹೇಳುವ ಒಂದು ವೀಕ್ಷಣೆಯ ಸಾಧನ ಆಗಿದೆ. |
08:45 | ಒಂದೇ ಕ್ಲಿಕ್ ನಲ್ಲಿ, ಮೇಲಿನ ಲೆವೆಲ್ ನ ಪೇಜ್ ಗೆ ಹಿಂತಿರುಗಲು ಇದು ನಮಗೆ ಸಹಾಯ ಮಾಡುತ್ತದೆ. |
08:51 | ‘ಡ್ಯಾಶ್-ಬೋರ್ಡ್’ ಗೆ ಹೋಗಲು, breadcrumbs ನಲ್ಲಿ Dashboard ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:57 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. ಸಂಕ್ಷಿಪ್ತವಾಗಿ, |
09:03 | ಈ ಟ್ಯುಟೋರಿಯಲ್ ನಲ್ಲಿ ನಾವು:
“Admin’s ಡ್ಯಾಶ್-ಬೋರ್ಡ್” ನಲ್ಲಿಯ ವಿವಿಧ ಬ್ಲಾಕ್ ಗಳು, “Admin’s ಪ್ರೊಫೈಲ್ ಪೇಜ್” ಮತ್ತು preferences ಅನ್ನು ಹೇಗೆ ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
09:16 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
Message Preferences ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ, Users ಪರಸ್ಪರ ಖಾಸಗಿ ಮೆಸೇಜ್ ಗಳನ್ನು ಕಳಿಸಬಹುದು. |
09:27 | ನಾನು ಆಫ್ಲೈನ್ ನಲ್ಲಿದ್ದಾಗಲೂ, ನನ್ನ ಮೆಸೇಜ್ ಗಳನ್ನು ಇಮೇಲ್ ನಂತೆ ಕಳಿಸುವುದು ನನಗೆ ಬೇಕಾಗಿಲ್ಲ. |
09:33 | online ಹಾಗೂ offline ಹೆಲ್ಪ್ ಬಾಕ್ಸ್ ಗಳನ್ನು ನೋಡಿ ಮತ್ತು ಸೆಟ್ಟಿಂಗ್ ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ. |
09:40 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:48 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
09:57 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಪೋಸ್ಟ್ ಮಾಡಿ. |
10:01 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
10:15 | ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
10:24 | ಧನ್ಯವಾದಗಳು. |