LibreOffice-Suite-Impress/C3/Slide-Master-Slide-Design/Kannada
From Script | Spoken-Tutorial
Revision as of 16:47, 28 January 2019 by Sandhya.np14 (Talk | contribs)
Time | Narration |
00:00 | LibreOffice Impress ನಲ್ಲಿಯ Slide Master and Slide design ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು:
ಸ್ಲೈಡ್ ಗಳಿಗಾಗಿ ಹಿನ್ನೆಲೆಗಳನ್ನು (background) ಮತ್ತು ಲೇಔಟ್ ಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯುತ್ತೆವೆ. |
00:15 | ಇಲ್ಲಿ, ನಾವು:
Ubuntu Linux 10.04 ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ. |
00:24 | Background (ಬ್ಯಾಕ್-ಗ್ರೌಂಡ್) - ಇದು, ಸ್ಲೈಡ್ ನಲ್ಲಿ ಕಂಟೆಂಟ್ಸ ನ (ವಿಷಯದ) ಹಿನ್ನೆಲೆಯಲ್ಲಿ ಇರುವ ಬಣ್ಣ ಮತ್ತು ಪರಿಣಾಮಗಳು ಇವೆಲ್ಲವನ್ನೂ ಸೂಚಿಸುತ್ತದೆ. |
00:32 | LibreOffice Impress, ಹಲವಾರು ಬ್ಯಾಕ್-ಗ್ರೌಂಡ್ ಆಯ್ಕೆಗಳನ್ನು ಹೊಂದಿದೆ. ಇದು ನಿಮಗೆ ಉತ್ತಮವಾದ 'ಪ್ರೆಸೆಂಟೇಷನ್' (presentation) ಗಳನ್ನು ರಚಿಸಲು ಸಹಾಯ ಮಾಡುತ್ತದೆ. |
00:38 | ನೀವು ನಿಮ್ಮ ಸ್ವಂತ ಕಸ್ಟಮ್ ಬ್ಯಾಕ್-ಗ್ರೌಂಡ್ ಗಳನ್ನು ಸಹ ರಚಿಸಬಹುದು. |
00:42 | ನಾವು "Sample-Impress.odp" ಎಂಬ ಪ್ರೆಸೆಂಟೇಷನ್ ಅನ್ನು ತೆರೆಯೋಣ. |
00:48 | ನಮ್ಮ ‘ಪ್ರೆಸೆಂಟೇಶನ್’ ಗಾಗಿ ಒಂದು ಕಸ್ಟಮ್ ಬ್ಯಾಕ್-ಗ್ರೌಂಡ್ ಅನ್ನು ನಾವು ರಚಿಸೋಣ. |
00:52 | ಮತ್ತು, ಈ ಬ್ಯಾಕ್-ಗ್ರೌಂಡ್ ಅನ್ನು ನಾವು ‘ಪ್ರೆಸೆಂಟೇಷನ್’ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯಿಸುವೆವು. |
00:57 | ಈ ಹಿನ್ನೆಲೆಯನ್ನು ರಚಿಸಲು ನಾವು Slide Master ' ಎಂಬ ಆಯ್ಕೆಯನ್ನು ಬಳಸುತ್ತೇವೆ. |
01:02 | 'ಮಾಸ್ಟರ್ ಸ್ಲೈಡ್’ಗೆ (Master slide) ಮಾಡಿದ ಯಾವುದೇ ಬದಲಾವಣೆಯು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ ಗಳಿಗೆ ಅನ್ವಯವಾಗುತ್ತದೆ. |
01:08 | ಮೇನ್ ಮೆನ್ಯುವಿನಿಂದ, View ಅನ್ನು ಕ್ಲಿಕ್ ಮಾಡಿ. Master ಅನ್ನು ಆಯ್ಕೆ ಮಾಡಿ ಮತ್ತುSlide Master ಅನ್ನು ಕ್ಲಿಕ್ ಮಾಡಿ. |
01:15 | Master Slide ಕಾಣಿಸಿಕೊಳ್ಳುತ್ತದೆ. |
01:17 | Master View ಟೂಲ್-ಬಾರ್ ಸಹ ಕಾಣುತ್ತಿರುವುದನ್ನು ಗಮನಿಸಿ. ಇದನ್ನು ನೀವು ಮಾಸ್ಟರ್-ಪೇಜ್ ಗಳನ್ನು, 'ಕ್ರಿಯೇಟ್, ಡಿಲೀಟ್' ಮತ್ತು 'ರೀನೇಮ್' ಮಾಡಲು ಬಳಸಬಹುದು. |
01:27 | ಈಗ ಎರಡು ಸ್ಲೈಡ್ ಗಳು ಪ್ರದರ್ಶಿತವಾಗುತ್ತಿರುವುದನ್ನು ಗಮನಿಸಿ. |
01:31 | ಇವುಗಳು, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ ಎರಡು ಮಾಸ್ಟರ್-ಪೇಜ್ ಗಳಾಗಿವೆ . |
01:37 | Tasks ಎಂಬ ಫಲಕದಿಂದ (ಪೇನ್), Master Pages ಅನ್ನು ಕ್ಲಿಕ್ ಮಾಡಿ. |
01:41 | Used in This Presentation ಫೀಲ್ಡ್, ಈ ಪ್ರೆಸೆಂಟೇಷನ್ ನಲ್ಲಿ ಬಳಸಲಾದ 'ಮಾಸ್ಟರ್ ಸ್ಲೈಡ್’ಗಳನ್ನು ಪ್ರದರ್ಶಿಸುತ್ತದೆ. |
01:48 | 'ಮಾಸ್ಟರ್ ಸ್ಲೈಡ್’, ಒಂದು ಟೆಂಪ್ಲೇಟ್ ನಂತೆ ಇರುತ್ತದೆ. |
01:51 | ನೀವು ಇಲ್ಲಿ ಫಾರ್ಮ್ಯಾಟಿಂಗ್ ಆದ್ಯತೆಗಳನ್ನು (preferences) ಹೊಂದಿಸಬಹುದು. ನಂತರ ಇವುಗಳನ್ನು ಪ್ರೆಸೆಂಟೇಷನ್ ನಲ್ಲಿರುವ ಎಲ್ಲಾ ಸ್ಲೈಡ್ಗಳಿಗೆ ಅನ್ವಯಿಸಲಾಗುತ್ತದೆ. |
01:58 | ಮೊದಲು, Slides ಪೇನ್ ನಿಂದ, ನಾವು Slide 1 ಅನ್ನು ಆಯ್ಕೆಮಾಡೋಣ. |
02:03 | ಈ ಪ್ರೆಸೆಂಟೇಷನ್ ಗೆ, ಒಂದು ಬಿಳಿಯ ಬ್ಯಾಕ್-ಗ್ರೌಂಡ್ ಅನ್ನು ಸೇರಿಸೋಣ. |
02:07 | ‘ಮೇನ್’ ಮೆನ್ಯುವಿನಲ್ಲಿ, Format ಮೇಲೆ, ನಂತರ Page ನ ಮೇಲೆ ಕ್ಲಿಕ್ ಮಾಡಿ. |
02:12 | Page Setup ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
02:15 | Background ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
02:18 | Fill ಎಂಬ ಡ್ರಾಪ್-ಡೌನ್ ಮೆನುವಿನಿಂದ, Bitmap ಎಂಬ ಆಯ್ಕೆಯನ್ನು ಆರಿಸಿ. |
02:24 | ಆಯ್ಕೆಗಳ ಪಟ್ಟಿಯಿಂದ, Blank ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ. |
02:29 | ಸ್ಲೈಡ್, ಈಗ ಬಿಳಿಬಣ್ಣದ ಹಿನ್ನೆಲೆಯನ್ನು ಹೊಂದಿದೆ. |
02:32 | ಈ ಬ್ಯಾಕ್-ಗ್ರೌಂಡ್ ನಲ್ಲಿ, ಈಗಿರುವ ಟೆಕ್ಸ್ಟ್ ನ ಬಣ್ಣವು, ಚೆನ್ನಾಗಿ ಎದ್ದು ಕಾಣುತ್ತಿಲ್ಲ ಎಂಬುದನ್ನು ಗಮನಿಸಿ. |
02:38 | ಯಾವಾಗಲೂ, ಟೆಕ್ಸ್ಟ್, ತನ್ನ ಬ್ಯಾಕ್-ಗ್ರೌಂಡ್ ನಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಅದರ ಬಣ್ಣವನ್ನು ಆಯ್ಕೆ ಮಾಡಿ. |
02:43 | ಟೆಕ್ಸ್ಟ್ ನ ಬಣ್ಣವನ್ನು ನಾವು ಕಪ್ಪು ಬಣ್ಣಕ್ಕೆ ಬದಲಾಯಿಸೋಣ. ಇದು, ಬಿಳಿಯ ಬ್ಯಾಕ್-ಗ್ರೌಂಡ್ ನಲ್ಲಿ ಟೆಕ್ಸ್ಟ್ ಅನ್ನು ಸ್ಪಷ್ಟವಾಗಿ ಕಾಣಿಸುವಂತೆ ಮಾಡುತ್ತದೆ. |
02:52 | ಮೊದಲು ಟೆಕ್ಸ್ಟ್ ಅನ್ನು ಆಯ್ಕೆಮಾಡಿ. |
02:55 | ‘ಮೇನ್ ಮೆನ್ಯು’ವಿನಿಂದ, Format ಅನ್ನು ಕ್ಲಿಕ್ ಮಾಡಿ ಮತ್ತು Character ಅನ್ನು ಆಯ್ಕೆ ಮಾಡಿ. |
02:59 | Character ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
03:02 | ಈ Character ಡೈಲಾಗ್-ಬಾಕ್ಸ್ ನಿಂದ, Font Effects ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
03:08 | Font Color ಎಂಬ ಡ್ರಾಪ್-ಡೌನ್ ನಿಂದ, Black ಅನ್ನು ಆಯ್ಕೆಮಾಡಿ. |
03:12 | OK ಅನ್ನು ಕ್ಲಿಕ್ ಮಾಡಿ. |
03:15 | ಈಗ ಟೆಕ್ಸ್ಟ್, ಕಪ್ಪು ಬಣ್ಣದಲ್ಲಿದೆ. |
03:18 | ಈಗ, ಸ್ಲೈಡ್ ನ ಬಣ್ಣವನ್ನು ಬದಲಾಯಿಸೋಣ. |
03:21 | ಕಾಂಟೆಕ್ಸ್ಟ್ (context) ಮೆನ್ಯುವಿಗಾಗಿ, ಸ್ಲೈಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಮತ್ತು, Slide, ನಂತರ Page Setup ಇವುಗಳ ಮೇಲೆ ಕ್ಲಿಕ್ ಮಾಡಿ. |
03:27 | Fill ಎಂಬ ಡ್ರಾಪ್-ಡೌನ್ ಮೆನ್ಯುವಿನಿಂದ, Color ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. Blue 8 ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ. |
03:36 | ಗಮನಿಸಿ, ನಾವು ಆಯ್ಕೆ ಮಾಡಿದ ತಿಳಿ ನೀಲಿ ಬಣ್ಣವನ್ನು ಈಗ ಸ್ಲೈಡ್ ಗೆ ಅನ್ವಯಿಸಲಾಗಿದೆ . |
03:42 | ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. ಒಂದು ಹೊಸ ‘ಮಾಸ್ಟರ್ ಸ್ಲೈಡ್’ ಅನ್ನು ರಚಿಸಿ ಮತ್ತು ಹಿನ್ನೆಲೆಯ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ. |
03:52 | ಈ ಪ್ರೆಸೆಂಟೇಷನ್ ಗೆ, ಇತರ ಡಿಸೈನ್ ಅಂಶಗಳನ್ನು ಹೇಗೆ ಸೇರಿಸುವುದೆಂದು ಈಗ ನಾವು ತಿಳಿಯೋಣ. |
03:57 | ಉದಾಹರಣೆಗೆ: ನಿಮ್ಮ ಪ್ರೆಸೆಂಟೇಷನ್ ಗೆ, ನೀವು ಒಂದು ‘ಲೊಗೊ’ ಅನ್ನು ಸೇರಿಸಬಹುದು. |
04:01 | ನಿಮ್ಮ ಸ್ಕ್ರೀನ್ ನ್ ಕೆಳಭಾಗದಲ್ಲಿ ಇರುವ Basic Shapes ಎಂಬ ಟೂಲ್-ಬಾರ್ ಅನ್ನು ನೋಡಿ. |
04:06 | ನೀವು ಇದನ್ನು ವಿವಿಧ ಆಕಾರಗಳಾದ ವೃತ್ತಗಳು, ಚೌಕಗಳು, ಆಯತಗಳು, ತ್ರಿಕೋನಗಳು ಮತ್ತು ದೀರ್ಘವೃತ್ತ ಇವುಗಳನ್ನು ಡ್ರಾ ಮಾಡಲು ಬಳಸಬಹುದು. |
04:16 | ಸ್ಲೈಡ್ ನ Title area ದಲ್ಲಿ, ನಾವು ಒಂದು ಆಯತವನ್ನು ಡ್ರಾ ಮಾಡೋಣ. |
04:21 | Basic Shapes ಎಂಬ ಟೂಲ್-ಬಾರ್ ನಲ್ಲಿ, Rectangle ನ ಮೇಲೆ ಕ್ಲಿಕ್ ಮಾಡಿ. |
04:25 | ಈಗ, ಕರ್ಸರ್ ಅನ್ನು Title area ದಲ್ಲಿ, ಸ್ಲೈಡ್ ನ ಮೇಲ್ತುದಿಯ ಎಡ ಮೂಲೆಗೆ ಸರಿಸಿ. |
04:31 | ನೀವು, ಕ್ಯಾಪಿಟಲ್ 'I' ನೊಂದಿಗೆ, ಒಂದು ಅಧಿಕ ಚಿಹ್ನೆಯನ್ನು ನೋಡುವಿರಿ. |
04:36 | ಒಂದು ಸಣ್ಣ ಆಯತವನ್ನು ಡ್ರಾ ಮಾಡಲು, ಮೌಸ್ ನ ಲೆಫ್ಟ್-ಬಟನ್ ಅನ್ನು ಹಿಡಿದುಕೊಳ್ಳಿ ಮತ್ತು ಡ್ರ್ಯಾಗ್ ಮಾಡಿ. |
04:41 | ಈಗ, ಮೌಸ್-ಬಟನ್ ಅನ್ನು ಬಿಟ್ಟುಬಿಡಿ. |
04:44 | ನೀವು ಒಂದು ಆಯತವನ್ನು ಡ್ರಾ ಮಾಡಿದ್ದೀರಿ! |
04:47 | ಆಯತದ ಮೇಲೆ ಇರುವ ಎಂಟು ಹ್ಯಾಂಡಲ್ ಗಳನ್ನು ಗಮನಿಸಿ. |
04:50 | ಹ್ಯಾಂಡಲ್ ಗಳು ಅಥವಾ ಕಂಟ್ರೋಲ್ ಪಾಯಿಂಟ್ ಗಳು, ಆಯ್ಕೆಮಾಡಿದ ವಸ್ತುವಿನ ಬದಿಗಳಲ್ಲಿ ಕಂಡುಬರುವ ಸಣ್ಣ ನೀಲಿ ಚೌಕಗಳಾಗಿವೆ. |
04:58 | ಆಯತದ ಗಾತ್ರವನ್ನು ಸರಿಹೊಂದಿಸಲು, ನಾವು ಈ ಕಂಟ್ರೋಲ್ ಪಾಯಿಂಟ್ ಗಳನ್ನು ಬಳಸಬಹುದು. |
05:03 | ನೀವು ನಿಮ್ಮ ಕರ್ಸರ್ ಅನ್ನು, ಕಂಟ್ರೋಲ್ ಪಾಯಿಂಟ್ ನ ಮೇಲೆ ಇಟ್ಟು ಅಲುಗಾಡಿಸಿದಾಗ, ಕರ್ಸರ್, ಡಬಲ್-ಸೈಡೆಡ್-ಆರೋ (double-sided-arrow) ಆಗಿ ಬದಲಾಗುತ್ತದೆ. |
05:10 | ಮೂಲ ಆಕಾರಗಳನ್ನು ಬದಲಾಯಿಸಲು, ಕಂಟ್ರೋಲ್-ಪಾಯಿಂಟ್ ಅನ್ನು ಸರಿದಾಡಿಸಬಹುದಾದ ದಿಕ್ಕುಗಳನ್ನು ಇದು ಸೂಚಿಸುತ್ತದೆ. |
05:17 | ಟೈಟಲ್-ಏರಿಯಾ ಅನ್ನು ಸಂಪೂರ್ಣವಾಗಿ ಆವರಿಸುವಂತೆ ಮಾಡಲು, ಈ ಆಯತವನ್ನು ದೊಡ್ಡದಾಗಿಸೋಣ. |
05:25 | ನಾವು ಈ ಆಕಾರಗಳನ್ನು ಕೂಡ ಫಾರ್ಮ್ಯಾಟ್ ಮಾಡಬಹುದು! |
05:28 | 'ಕಾಂಟೆಕ್ಸ್ಟ್ ಮೆನ್ಯು' ಅನ್ನು (context menu) ನೋಡಲು, ಆಯತದ ಮೇಲೆ ರೈಟ್-ಕ್ಲಿಕ್ ಮಾಡಿ. |
05:32 | ಇಲ್ಲಿ, ನೀವು ಆಯತವನ್ನು ಮಾರ್ಪಡಿಸಲು, ಹಲವಾರು ಆಯ್ಕೆಗಳನ್ನು ಆರಿಸಿಕೊಳ್ಳಬಹುದು. |
05:37 | Area ದ ಮೇಲೆ ಕ್ಲಿಕ್ ಮಾಡಿ. Area ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:43 | Fill ಎಂಬ ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಮೆನುವಿನಿಂದ Color ಅನ್ನು ಆಯ್ಕೆಮಾಡಿ. |
05:48 | Magenta 4 ಅನ್ನು ಆಯ್ಕೆ ಮಾಡಿ ಮತ್ತು OK ಅನ್ನು ಕ್ಲಿಕ್ ಮಾಡಿ. |
05:52 | ಈಗ ಆಯತದ ಬಣ್ಣ ಬದಲಾಗಿದೆ. |
05:56 | ಆಯತವು ಈಗ ಟೆಕ್ಸ್ಟ್ ಅನ್ನು ಮುಚ್ಚಿಬಿಟ್ಟಿದೆ. |
05:59 | ಟೆಕ್ಸ್ಟ್ ಅನ್ನು ಮತ್ತೆ ಕಾಣುವಂತೆ ಮಾಡಲು, ಮೊದಲು ಆಯತವನ್ನು ಆಯ್ಕೆಮಾಡಿ. |
06:03 | ಈಗ, ಕಾಂಟೆಕ್ಸ್ಟ್- ಮೆನ್ಯು ಅನ್ನು ತೆರೆಯಲು, ರೈಟ್-ಕ್ಲಿಕ್ ಮಾಡಿ. |
06:07 | ಕ್ರಮವಾಗಿ Arrange ಮತ್ತು Send to back ಗಳ ಮೇಲೆ ಕ್ಲಿಕ್ ಮಾಡಿ. |
06:11 | ಈಗ ಟೆಕ್ಸ್ಟ್ ಮತ್ತೆ ಕಾಣಿಸುತ್ತಿದೆ! |
06:15 | ಇಲ್ಲಿ, ಆಯತವು ಟೆಕ್ಸ್ಟ್ ನ್ ಹಿಂದೆ ಹೋಗಿದೆ. |
06:18 | Tasks ಎಂಬ ಪೇನ್ ನಲ್ಲಿ, Master Page ನ preview ದ ಮೇಲೆ ಕ್ಲಿಕ್ ಮಾಡಿ. |
06:23 | ರೈಟ್ ಕ್ಲಿಕ್ ಮಾಡಿ, Apply to All Slides ಅನ್ನು ಆಯ್ಕೆ ಮಾಡಿ. |
06:27 | Close Master View ಎಂಬ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, Master View ಅನ್ನು ಮುಚ್ಚಿ. |
06:32 | ಈಗ, Master ನಲ್ಲಿ ಮಾಡಿರುವ ಫಾರ್ಮ್ಯಾಟಿಂಗ್ ಬದಲಾವಣೆಗಳನ್ನು, ಪ್ರೆಸೆಂಟೇಷನ್ ನಲ್ಲಿರುವ ಎಲ್ಲ ಸ್ಲೈಡ್ಗಳಿಗೆ ಅನ್ವಯಿಸಲಾಗಿದೆ. |
06:39 | ಎಲ್ಲಾ ಪೇಜ್ ಗಳಲ್ಲಿ, ಆಯತವನ್ನು ಸಹ ಪ್ರದರ್ಶಿಸಲಾಗಿದೆ ಎಂಬುದನ್ನು ಗಮನಿಸಿ. |
06:45 | ನಾವು ಸ್ಲೈಡ್ ನ ಲೇಔಟ್ ಅನ್ನು ಬದಲಾಯಿಸಲು ಕಲಿಯೋಣ. |
06:49 | 'ಲೇಔಟ್'ಗಳೆಂದರೇನು? 'ಲೇಔಟ್' ಗಳು, ಸ್ಲೈಡ್ ನ ಟೆಂಪ್ಲೇಟ್ ಗಳಾಗಿರುತ್ತವೆ. ಕಂಟೆಂಟ್ ನ ಸ್ಥಾನವನ್ನು ಹೊಂದಿಸಲು, ಪ್ಲೇಸ್-ಹೋಲ್ಡರ್ ಗಳೊಂದಿಗೆ ಇವುಗಳನ್ನು ಮೊದಲೇ ಫಾರ್ಮ್ಯಾಟ್ ಮಾಡಲಾಗಿದೆ. |
06:58 | 'ಸ್ಲೈಡ್ ಲೇಔಟ್'ಗಳನ್ನು ವೀಕ್ಷಿಸಲು, ಬಲಗಡೆಯ ಪ್ಯಾನೆಲ್ ನಿಂದ, Layouts ಅನ್ನು ಕ್ಲಿಕ್ ಮಾಡಿ. |
07:04 | Impress ನಲ್ಲಿ ಲಭ್ಯವಿರುವ ಲೇಔಟ್ ಗಳನ್ನು ಪ್ರದರ್ಶಿಸಲಾಗಿದೆ. |
07:07 | layout thumbnail ಗಳನ್ನು ನೋಡಿ. ಲೇಔಟ್ ಅನ್ನು ಸೇರಿಸಿದ ನಂತರ, ಸ್ಲೈಡ್ ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಇದು ನಿಮಗೆ ಕಲ್ಪನೆಯನ್ನು ನೀಡುತ್ತದೆ. |
07:16 | ಟೈಟಲ್ ಗಳು ಮತ್ತು ಎರಡು ಕಾಲಂಗಳಿರುವ ಫಾರ್ಮ್ಯಾಟ್ ಗಳನ್ನು ಹೊಂದಿರುವ ಲೇಔಟ್ ಗಳಿವೆ. ಮೂರು ಕಾಲಂ ಗಳಲ್ಲಿ, ಟೆಕ್ಸ್ಟ್ ಅನ್ನು ಹೊಂದಿಸಬಹುದಾದ ಲೇಔಟ್ಗಳು ಮತ್ತು ಇನ್ನೂ ಅನೇಕ ವಿಧದ ಲೇಔಟ್ ಗಳಿವೆ. |
07:24 | ಇಲ್ಲಿ ಖಾಲಿ ಲೇಔಟ್ ಗಳು ಕೂಡ ಇವೆ. ನಿಮ್ಮ ಸ್ಲೈಡ್ ಗೆ, ನೀವು ಖಾಲಿ ಲೇಔಟ್ ಅನ್ನು ಸೇರಿಸಬಹುದು ಮತ್ತು ನಂತರ ನಿಮ್ಮ ಸ್ವಂತ ಲೇಔಟ್ ಗಳನ್ನು ರಚಿಸಬಹುದು. |
07:32 | ಈ ಸ್ಲೈಡ್ ಗೆ, ಒಂದು ಲೇಔಟ್ ಅನ್ನು ಸೇರಿಸೋಣ. |
07:35 | "Potential Alternatives" ಎಂಬ ಸ್ಲೈಡ್ ಅನ್ನು ಆಯ್ಕೆಮಾಡಿ ಮತ್ತು ಎಲ್ಲ ಟೆಕ್ಸ್ಟ್ ಅನ್ನು ಡಿಲೀಟ್ ಮಾಡಿ. |
07:43 | ಈಗ, ಬಲ ಭಾಗದಲ್ಲಿರುವ Layouts ಪೇನ್ ನಿಂದ, Title, 2 Content over Content ಅನ್ನು ಆಯ್ಕೆಮಾಡಿ. |
07:51 | ಈಗ, ಸ್ಲೈಡ್ ಮೂರು ಟೆಕ್ಸ್ಟ್-ಬಾಕ್ಸ್ ಗಳನ್ನು ಮತ್ತು ಒಂದು 'ಟೈಟಲ್ ಏರಿಯಾ' ಅನ್ನು ಹೊಂದಿದೆ. |
07:56 | ‘ಮಾಸ್ಟರ್ ಪೇಜ್’ ಅನ್ನು ಬಳಸಿಕೊಂಡು, ನಾವು ಸೇರಿಸಿದ ಆಯತವು ಇನ್ನೂ ಕಾಣುತ್ತಿರುವುದನ್ನು ಗಮನಿಸಿ. |
08:02 | ‘ಮಾಸ್ಟರ್ ಸ್ಲೈಡ್’ ಅನ್ನು ಮಾತ್ರ ಬಳಸಿ, ಈ ಆಯತವನ್ನು ಎಡಿಟ್ ಮಾಡಬಹುದು. |
08:07 | Master ಸ್ಲೈಡ್ ನಲ್ಲಿರುವ ಸೆಟ್ಟಿಂಗ್ ಗಳು, ಸ್ಲೈಡ್ ಗಳಿಗೆ ಅನ್ವಯಿಸಲಾದ ಯಾವುದೇ ಫಾರ್ಮ್ಯಾಟಿಂಗ್ ಬದಲಾವಣೆಗಳನ್ನು ಅಥವಾ ಲೇಔಟ್ ಗಳನ್ನು ಅಲಕ್ಷಿಸುತ್ತವೆ. |
08:15 | ಈಗ ಈ ಬಾಕ್ಸ್ ಗಳಲ್ಲಿ, ಸ್ವಲ್ಪ ಟೆಕ್ಸ್ಟ್ ಅನ್ನು ನಮೂದಿಸೋಣ. |
08:19 | ಮೊದಲನೆಯ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Strategy 1 PRO: Low cost CON: slow action". |
08:28 | ಎರಡನೇ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Strategy 2 CON: High cost PRO: Fast Action". |
08:40 | ಮೂರನೆಯ ಟೆಕ್ಸ್ಟ್-ಬಾಕ್ಸ್ ನಲ್ಲಿ, ಹೀಗೆ ಟೈಪ್ ಮಾಡಿ: "Due to lack of funds, Strategy 1 is better". |
08:48 | ಹೀಗೆಯೇ, ನಿಮ್ಮ ಪ್ರೆಸೆಂಟೇಷನ್ ಗೆ ಹೆಚ್ಚು ಸೂಕ್ತವಾದ ಲೇಔಟ್ ನ ವಿಧವನ್ನು ನೀವು ಆಯ್ಕೆ ಮಾಡಬಹುದು. |
08:54 | ಇಲ್ಲಿಗೆ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವು , ಸ್ಲೈಡ್ಗಳಿಗಾಗಿ
Backgrounds ಮತ್ತು Layouts ಗಳನ್ನು ಹೇಗೆ ಸೇರಿಸಬೇಕು ಎಂದು ಕಲಿತಿದ್ದೇವೆ. |
09:03 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
09:05 | ಒಂದು ಹೊಸ ‘ಮಾಸ್ಟರ್ ಸ್ಲೈಡ್’ ಅನ್ನು ರಚಿಸಿ. |
09:08 | ಒಂದು ಹೊಸ ಬ್ಯಾಕ್-ಗ್ರೌಂಡ್ ಅನ್ನು ರಚಿಸಿ. |
09:11 | ಲೇಔಟ್ ಅನ್ನು, Title, content over content ಗೆ ಬದಲಾಯಿಸಿ. |
09:15 | Master slide ಗೆ, ನೀವು ಒಂದು Layout ಅನ್ನು ಅನ್ವಯಿಸಿದಾಗ ಏನಾಗುತ್ತದೆ ಎಂದು ಪರಿಶೀಲಿಸಿ. |
09:20 | ಒಂದು ಹೊಸ ಸ್ಲೈಡ್ ಅನ್ನು ಸೇರಿಸಿ ಮತ್ತು ಖಾಲಿ ಲೇಔಟ್ ಅನ್ನು ಅನ್ವಯಿಸಿ. |
09:25 | ಟೆಕ್ಸ್ಟ್-ಬಾಕ್ಸ್ ಗಳನ್ನು ಬಳಸಿ ಮತ್ತು ಅದರಲ್ಲಿ ಕಾಲಂ ಗಳನ್ನು ಸೇರಿಸಿ. |
09:29 | ಈ ಟೆಕ್ಸ್ಟ್-ಬಾಕ್ಸ್ ಗಳನ್ನು, ಫಾರ್ಮ್ಯಾಟ್ ಮಾಡಿ. |
09:32 | ಈ ಬಾಕ್ಸ್ ಗಳಲ್ಲಿ, ಟೆಕ್ಸ್ಟ್ ಅನ್ನು ನಮೂದಿಸಿ. |
09:36 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:42 | ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:47 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:56 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
10:02 | Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:14 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro. |
10:25 | ಈ ಟ್ಯುಟೋರಿಯಲ್, DesiCrew Solutions Pvt. Ltd ಅವರ ಕೊಡುಗೆಯಾಗಿದೆ. |
10:30 | ಈ ಸ್ಕ್ರಿಪ್ಟ್ ನ ಅನುವಾದಕಿ, ಧಾರವಾಡದಿಂದ ಈ. ವೈ. ಮಳೆಕಾರ್ ಹಾಗೂ ಪ್ರವಾಚಕ .......
ವಂದನೆಗಳು. |