PHP-and-MySQL/C2/XAMPP-in-Windows/Kannada

From Script | Spoken-Tutorial
Revision as of 10:26, 28 November 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 PHP Academy ಗೆ ನಿಮಗೆ ಸ್ವಾಗತ.
00:04 ಮೊದಲನೆಯ ಈ ಟ್ಯುಟೋರಿಯಲ್ ನಲ್ಲಿ, ನಾನು ನಿಮ್ಮ ವೆಬ್-ಸರ್ವರ್ ಅನ್ನು ಇನ್ಸ್ಟಾಲ್ ಮಾಡುವ ಬಗ್ಗೆ ನಿಮಗೆ ವಿವರಿಸುತ್ತೇನೆ. ಈ ಪ್ಯಾಕೇಜ್ ನೊಂದಿಗೆ ಬರುವ PHP ಮತ್ತು mysql ಗಳನ್ನು ಇನ್ಸ್ಟಾಲ್ ಮಾಡಿ ಅವುಗಳನ್ನು ಬಳಸುತ್ತೇವೆ.
00:22 ನಾವು XAMPP ಅನ್ನು ಬಳಸುವವರಿದ್ದೇವೆ. ನೀವು ಅದನ್ನು ZAMP ಎಂದು ಸಹ ಕರೆಯಬಹುದು. ನಾನು ಮಾತ್ರ ಅದನ್ನು XAMPP ಎಂದೇ ಹೇಳುತ್ತೇನೆ.
00:34 ನೀವು ಮಾಡಬೇಕಾದದ್ದು ಇಷ್ಟೇ: ನಿಮ್ಮ ಸರ್ವರ್, PHP ಇನ್ಸ್ಟಾಲ್ಲೇಶನ್ ಮತ್ತು ನಿಮ್ಮ mysql ಡೇಟಾಬೇಸ್ ನೊಂದಿಗೆ ರನ್ ಆಗಬೇಕಾಗಿದ್ದರೆ, ಇಲ್ಲಿ, ಈ ವೆಬ್ಸೈಟ್ ಅನ್ನು ನೀವು ನೋಡಬೇಕು.
00:46 "apachefriends.org" ಗೆ ಹೋಗಿ ಅಥವಾ "XAMPP" ಗಾಗಿ ಗೂಗಲ್ ನಲ್ಲಿ ನೋಡಿ.
00:52 ಇದನ್ನು ಹೀಗೆ ಬರೆಯಲಾಗುತ್ತದೆ: X-A-M ಮತ್ತು ಎರಡು P ಗಳು.
00:58 ಇದನ್ನು Windows ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದು ಮತ್ತು ಎಲ್ಲವನ್ನು ಇನ್ಸ್ಟಾಲ್ ಮಾಡಿದ ನಂತರ ರನ್ ಮಾಡುವುದನ್ನು ಸಹ ನಾನು ತೋರಿಸುತ್ತೇನೆ.
01:06 ನಿಮಗೆ ಇದನ್ನೇ ಲಿನಕ್ಸ್ ಅಥವಾ ಬೇರೆ ಯಾವುದೇ ಅಪರೇಟಿಂಗ್ ಸಿಸ್ಟಂನಲ್ಲಿ ಮಾಡಲು ಸಹಾಯ ಬೇಕಾಗಿದ್ದರೆ, ನನಗೆ ತಿಳಿಸಿ. ನಾನು ಅದಕ್ಕಾಗಿ ಒಂದು ಟ್ಯುಟೋರಿಯಲ್ ಮಾಡುತ್ತೇನೆ.
01:15 ನಾವು ವೆಬ್ಸೈಟ್ ಗೆ ಬಂದಿದ್ದೇವೆ. ನಾವು ಇಲ್ಲಿ ಈ Installer ಅನ್ನು ಆರಿಸಿಕೊಳ್ಳಬೇಕು.
01:19 ಅದು ಈ ಪೇಜ್ ಅನ್ನು ತರುತ್ತದೆ. ಕೊನೆಯಲ್ಲಿ, ಡೌನ್ಲೋಡ್ ಮಾಡಲಾದ ಇಂತಹ ಒಂದು ಫೈಲ್, ಆವೃತ್ತಿ ಸಂಖ್ಯೆಯೊಂದಿಗೆ ನಿಮಗೆ ಸಿಗುತ್ತದೆ.
01:29 ಇದಕ್ಕಾಗಿ ಮೊದಲು Installer ಅನ್ನು ಆರಿಸಿಕೊಳ್ಳಿ.
01:32 ಇನ್ಸ್ಟಾಲ್ ಮಾಡಲು, ಡಬಲ್-ಕ್ಲಿಕ್ ಮಾಡಿ ಮತ್ತು ರನ್ ಮಾಡಿ. ನಿಮ್ಮ ಭಾಷೆಯನ್ನು ಆರಿಸಿಕೊಳ್ಳಿ.
01:37 ನಿಮಗೆ ಈ ಮೆಸೇಜ್ ಸಿಗಬಹುದು. ನಾನು Windows Vista ಅನ್ನು ಬಳಸುತ್ತಿದ್ದೇನೆ. ಆದ್ದರಿಂದ ಇದು ಹೀಗೆ ಹೇಳುತ್ತಿದೆ: "Windows Vista Account is deactivated on your system".
01:46 ಇದು ನಮಗೆ ಅವಶ್ಯವಿಲ್ಲ. ಹೀಗಾಗಿ ನಿಮಗೆ ಇದು ಸಿಕ್ಕರೆ ಅದನ್ನು ಅಲಕ್ಷಿಸಿ.
01:52 ಇಲ್ಲಿ ನೀವು ನಿಮ್ಮ ಇನ್ಸ್ಟಾಲ್ಲೇಶನ್ ಅನ್ನು ಮುಂದುವರೆಸಬಹುದು.
01:56 ನಿಮ್ಮ ಅನುಕೂಲಕ್ಕಾಗಿ, ನಿಮ್ಮದೇ ಆದ ಫೋಲ್ಡರ್ ಅನ್ನು ಹೊಂದಿರುವ ಲೋಕಲ್ ಡ್ರೈವ್ ಅನ್ನು ನೀವು ಆರಿಸಿರುವದನ್ನು ಖಚಿತಪಡಿಸಿಕೊಳ್ಳಿ. Program Files ನಲ್ಲಿ ಇರಿಸಬೇಕಾಗಿಲ್ಲ.
02:04 ಈ ಆಯ್ಕೆಗಳು ನಿಮ್ಮ ಇಷ್ಟದಂತೆ ಆಗಿವೆ. Create a XAMPP desktop ಆಯ್ಕೆಯನ್ನು ನಾನು ಗುರುತಿಸುವೆನು. ಆದರೆ ನಾನು ಇದನ್ನು ಆರಿಸಿಕೊಳ್ಳುವುದಿಲ್ಲ.
02:16 ಈಗ ನೀವು Install Apache as service ಮತ್ತು Install MySQL as service ಇವುಗಳನ್ನು ಆರಿಸಿಕೊಳ್ಳಬೇಕು.
02:24 ಇದನ್ನು Systems Service ಎಂದು ಇದು ಸೇರಿಸುವುದು. ನೀವು ನಿಮ್ಮ ಕಂಪ್ಯೂಟರ್ ಅನ್ನು ರನ್ ಮಾಡಿದ ಪ್ರತಿಯೊಂದು ಸಲ ಇದು ರನ್ ಆಗುವುದು.
02:31 ನೀವು ಇವುಗಳನ್ನು ಗುರುತಿಸದೆಯೂ ಇರಬಹುದು. ಸುಲಭವಾಗಿ ಬಳಸಲು, ನಾನು ಅವುಗಳನ್ನು ಗುರುತಿಸುತ್ತೇನೆ.
02:36 ಇದು ಈಗ ಇನ್ಸ್ಟಾಲ್ ಆಗುತ್ತಿದೆ. ಇದನ್ನು ಇಲ್ಲಿಯೇ ಬಿಡುತ್ತೇನೆ. ವೀಡಿಯೊಅನ್ನು ಇಲ್ಲಿ ನಿಲ್ಲಿಸಿ, ಎಲ್ಲವೂ ಇನ್ಸ್ಟಾಲ್ ಆದಮೇಲೆ ಮತ್ತೆ ಹಿಂದಿರುಗುತ್ತೇನೆ.
02:47 ನಂತರ, ನಿಮ್ಮ PHP ಇನ್ಸ್ಟಾಲ್ಲೇಶನ್ ನ ಸೆಟಿಂಗ್-ಅಪ್ ನ ಉಳಿದ ಭಾಗವನ್ನು ನಾನು ವಿವರಿಸುತ್ತೇನೆ.
02:53 ದಯವಿಟ್ಟು ಗಮನಿಸಿ: ನಾವು ಇದನ್ನು ಇನ್ಸ್ಟಾಲ್ ಮಾಡುವ ಮುಂಚೆ, ಇಲ್ಲಿ ಒಂದು ಖಾಲಿ ಬ್ರೌಸರ್ ಇದ್ದರೆ, ಮತ್ತು ನಾನು localhost ಅನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ...
03:00 ಇದು ಲೋಕಲ್ ವೆಬ್ ಸರ್ವರ್ ದ ಹೋಸ್ಟ್ ಆಗಿದೆ.
03:05 ಸಾಮಾನ್ಯವಾಗಿ ನೀವು "google dot com" ನಂತಹ ವೆಬ್ ಅಡ್ರೆಸ್ ಅನ್ನು ಹೊಂದಿದ್ದೀರಿ. ಆದರೆ, ಇದನ್ನು "localhost" ಎಂದು ನಾವು ಕರೆಯುತ್ತೇವೆ.
03:12 ನಮಗೆ "Failed to connect" ಎಂಬ ಎರರ್-ಮೆಸೇಜ್ ಸಿಕ್ಕಿರುವುದನ್ನು ಇಲ್ಲಿ ನೀವು ನೋಡಬಹುದು.
03:17 ಆದರೆ, ನಾವು XAMPP ಅನ್ನು ಇನ್ಸ್ಟಾಲ್ ಮಾಡಿದಾಗ ಮತ್ತು ಈ localhost ಆಯ್ಕೆಯನ್ನು ಆರಿಸಿಕೊಂಡಾಗ, ನಾವು ನೇರವಾಗಿ ನಮ್ಮ ಸರ್ವರ್ ಅನ್ನು ಸಂಪರ್ಕಿಸುವೆವು.
03:26 http webserver ಆಗಿರುವ Apache ಯನ್ನು ಇನ್ಸ್ಟಾಲ್ ಮಾಡುವುದನ್ನು XAMPP ಸುಲಭವಾಗಿಸುತ್ತದೆ. php module ಅನ್ನು, ಆನಂತರ ಸರ್ವರ್ ಮೇಲೆ mysql database ಅನ್ನು ಇನ್ಸ್ಟಾಲ್ ಮಾಡುತ್ತದೆ.
03:40 ಹೀಗಾಗಿ, ಇನ್ಸ್ಟಾಲ್ ಮಾಡಿದ ನಂತರ ನಾವು ಇದಕ್ಕೆ ಹಿಂದಿರುಗಿದಾಗ, localhost ರನ್ ಆಗಬೇಕು.
03:46 ನಾನು localhost directory ಯಲ್ಲಿ ಫೈಲ್ ಗಳನ್ನು ಹೇಗೆ ಇಡುವುದೆಂದು ಸಹ ನಿಮಗೆ ತೋರಿಸುತ್ತೇನೆ.
03:52 ಇದನ್ನು "localhost" ಎನ್ನುವುದಿಲ್ಲ. ಆದರೆ, ನಾವು ನಮ್ಮ ವೆಬ್-ಸರ್ವರ್ ಮೇಲಿನ ರೂಟ್ ಫೋಲ್ಡರ್ ಅನ್ನು ಹೀಗೆ ಕರೆಯುತ್ತೇವೆ.
04:01 ಅದು ಇನ್ಸ್ಟಾಲ್ ಆದ ನಂತರ, ವೀಡಿಯೋಗೆ ಹಿಂತಿರುಗಿ ಮತ್ತೆ ನಾವು ಮುಂದುವರೆಸಬಹುದು.
04:06 ಸರಿ.. ನಾವು ಇನ್ಸ್ಟಾಲ್ ಮಾಡುವುದನ್ನು ಪೂರ್ಣಗೊಳಿಸಿದ್ದೇವೆ ಮತ್ತು ಈಗ ಬಂದ ಕೆಲವು ಮೆಸೇಜ್ ಗಳನ್ನು ಇಲ್ಲಿವೆ.
04:11 ಹಾಗೆ Finish ಅನ್ನು ಕ್ಲಿಕ್ ಮಾಡಿ.
04:14 ನಾವು ಅಗತ್ಯವಿರುವ ports ಗಳಿಗಾಗಿ ಪರಿಶೀಲಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.
04:23 ಇದರ ಅರ್ಥ, ಅದು port 80 (ಪೋರ್ಟ್) ಮತ್ತು mysql ಗಾಗಿ ಹುಡುಕುತ್ತಿದೆ.
04:27 ಆದಾಗ್ಯೂ, ನಿಮಗೆ ಇಲ್ಲಿ ಎರರ್ ಸಿಗುವವರೆಗೆ ಎಲ್ಲ ಸರಿಯಾಗಿಯೇ ಇದೆ ಎಂದುಕೊಳ್ಳಿ.
04:32 ಇಲ್ಲಿ, Apache 2.2 ಸೆಟ್-ಅಪ್ ಆಗಿರುವುದನ್ನು ನೀವು ನೋಡಬಹುದು.
04:36 ಇದು ಹಾಗೂ mysql ಕೆಲಸ ಮಾಡಲು ಆರಂಭಿಸಿದಂತೆ ಕಾಣುತ್ತದೆ.
04:42 ನಮ್ಮ ಇನ್ಸ್ಟಾಲ್ಲೇಶನ್ ಮುಗಿದಿದೆ ಎಂದು ಹೇಳುತ್ತಿರುವ ಒಂದು ಮೆಸೇಜ್ ಸಿಗುತ್ತದೆ.
04:46 ಈಗ ನಾವು XAMPP ಕಂಟ್ರೋಲ್ ಪ್ಯಾನೆಲ್ ಅನ್ನು ಆರಂಭಿಸಬಹುದು. Yes ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಾವು ಇಲ್ಲಿ ತರಬಹುದು.
04:52 ನಮ್ಮ Apache (ಅಪಾಚೆ) ಸರ್ವರ್ ಮತ್ತು Mysql ಸರ್ವರ್ ಗಳು ರನ್ ಆಗುತ್ತಿರುವುದನ್ನು ನೀವು ನೋಡಬಹುದು.
04:58 PHP ಯನ್ನು ನೀವು ಇಲ್ಲಿ ನೋಡದೇ ಇರುವ ಕಾರಣ, PHP ನಮ್ಮ ವೆಬ್-ಸರ್ವರ್ ನ ಭಾಗವಾಗಿದೆ. ಹಾಗಾಗಿ Apache ಯ ಭಾಗವಾಗಿದೆ. ಇದನ್ನು ಪ್ರತ್ಯೇಕವಾದ ಮೊಡ್ಯೂಲ್ ಎಂದು ಇನ್ಸ್ಟಾಲ್ ಮಾಡಲಾಗಿದೆ ಮತ್ತು ಸರ್ವೀಸ್ ಎಂದು ರನ್ ಮಾಡುವುದಿಲ್ಲ. ಇದು ನಮ್ಮ ವೆಬ್-ಸರ್ವರ್ ಗೆ ಒಂದು ಮೊಡ್ಯೂಲ್ ಎಂದು ಸೇರ್ಪಡೆಯಾಗಿದೆ.
05:14 ನಾವು ಇಲ್ಲಿ ಹೋಗಿ ನಮ್ಮ ಪೇಜ್ ಅನ್ನು ಲೋಡ್ ಮಾಡೋಣ.
05:17 localhost ಮೇಲೆ Enter ಅನ್ನು ಇನ್ನೊಮ್ಮೆ ಒತ್ತುವುದರಿಂದ, ನಾವು "XAMPP" ಗೆ ಸಂಪರ್ಕವನ್ನು ಹೊಂದಿದ್ದೇವೆ ಎಂದು ನೀವು ನೋಡಬಹುದು.
05:25 ಸಾಮಾನ್ಯವಾಗಿ ನಮ್ಮ ವೆಬ್ ಸರ್ವರ್ ನಲ್ಲಿ, ಯಾವುದೇ ಒಂದು ನಿರ್ದಿಷ್ಟ ಡಿರೆಕ್ಟರೀ ಒಳಗೆ ನಾವು ನೋಡಬಹುದು.
05:30 ಸಧ್ಯಕ್ಕೆ English ಅನ್ನು ಕ್ಲಿಕ್ ಮಾಡಿ.
05:33 ಇಲ್ಲಿ, "XAMPP" ಸೆಟ್-ಅಪ್ ಇರುವುದನ್ನು ನೀವು ನೋಡಬಹುದು.
05:37 ಸರಿ, ಈಗ ನಾನು ಇಲ್ಲಿ ನನ್ನ "C" ಡ್ರೈವ್ ಅನ್ನು ತೆರೆಯುತ್ತೇನೆ ಮತ್ತು ನೀವು ಇಲ್ಲಿ ಒಳಗೆ ಅದನ್ನು ನೋಡಬಹುದು.
05:42 ನಾನು XAMPP ಮೇಲೆ ಕ್ಲಿಕ್ ಮಾಡುವೆನು. ಇದು, ನಾವು ಇನ್ಸ್ಟಾಲ್ ಮಾಡಿದ installation directory ಆಗಿದೆ.
05:49 ಇಲ್ಲಿ ನಾವು ಕೆಲವು ಫೈಲ್ ಗಳನ್ನು ಪಡೆದಿದ್ದೇವೆ. ಆದರೆ, 'htdocs' ಇವುಗಳಲ್ಲಿ ಪ್ರಮುಖವಾದದ್ದು. ನಿಮ್ಮ ವೆಬ್ ಸರ್ವರ್ ನಿಂದ ರನ್ ಆಗಬೇಕಾದ ಮತ್ತು php ಯಲ್ಲಿ ಪ್ರೊಸೆಸ್ ಮಾಡಲಾದ ನಿಮ್ಮ ಫೈಲ್ಗಳನ್ನು ನೀವು ಇಲ್ಲಿ ಇರಿಸಿ.
06:02 ಇದರ ಮೇಲೆ ಡಬಲ್-ಕ್ಲಿಕ್ ಮಾಡಿದರೆ, ಇಲ್ಲಿ ನಾವು ವಿವಿಧ ಫೈಲ್ಗಳನ್ನು ಪಡೆದಿದ್ದೇವೆ ಎಂದು ನೀವು ನೋಡಬಹುದು.
06:07 ಮತ್ತು, ಈ "index.html" ಫೈಲ್ ಅನ್ನು ನೀವು ಇಲ್ಲಿ ನೋಡಬಹುದು. ಇಲ್ಲಿರುವುದು ಈಗ ಸಧ್ಯಕ್ಕೆ "index.php" ಆಗಿದೆ.
06:15 ಈ ಫೈಲ್ ನಲ್ಲಿ "index dot" ಏನೇ ಇದ್ದರೂ, ಅದು ತಂತಾನೆ ಪ್ರಾರಂಭವಾಗಿರುತ್ತದೆ.
06:20 ನೀವು ಇದನ್ನು ಬದಲಾಯಿಸಬಹುದು ಆದರೆ ಸಧ್ಯಕ್ಕೆ ಇದನ್ನು ಹಾಗೆಯೇ ಬಿಡಿ.
06:25 ಇಲ್ಲಿ ನನಗೆ phpacademy ಎಂಬ ಒಂದು ಫೋಲ್ಡರ್ ಸಿಕ್ಕಿದೆ.
06:29 ನಾನು ಒಂದು ಹೊಸ ಟೆಕ್ಸ್ಟ್-ಡಾಕ್ಯುಮೆಂಟ್ ಅನ್ನು ಕ್ರಿಯೇಟ್ ಮಾಡುತ್ತೇನೆ. ವಾಸ್ತವವಾಗಿ, ನಾನು ಸುಲಭವಾಗಿ ಇದನ್ನು ನನ್ನ ಕಾಂಟೆಕ್ಸ್ಟ್- ಎಡಿಟರ್ ನಲ್ಲಿ ಮಾಡುತ್ತೇನೆ.
06:38 ಇದನ್ನು ತೆಗೆದುಬಿಡೋಣ. ಸರಿ..ನಾನು ಒಂದು ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತೇನೆ.
06:44 ಅದನ್ನು ಇಲ್ಲಿ, ನನ್ನ "htdocs" ಫೋಲ್ಡರ್ ನಲ್ಲಿ, "phpinfo" dot php ಎಂದು ನಾನು ಸೇವ್ ಮಾಡುತ್ತೇನೆ.
06:53 ಮತ್ತು, ಇಲ್ಲಿ ಒಳಗಡೆ, ನಾನು ಸ್ವಲ್ಪ php ಕೋಡ್ ಅನ್ನು ಟೈಪ್ ಮಾಡುತ್ತೇನೆ.
06:59 ಇದು "php underscore info" ಎಂದು ಇರುವುದು. ನಿಮಗೆ 2 ಬ್ರಾಕೆಟ್ಗಳ, ನಂತರ 'ಲೈನ್ ಟರ್ಮಿನೇಟರ್' ನ ಅಗತ್ಯವಿದೆ.
07:06 ಇದರ ಅರ್ಥವೇನೆಂದು ನಿಮಗೆ ತಿಳಿಯದಿದ್ದರೆ, ನೀವು ಅದನ್ನು ಕಲಿಯಬೇಕಾಗಿಲ್ಲ. ಇದು ದಿನನಿತ್ಯದ ಬಳಕೆಗೆ ನೀವು ತಿಳಿಯಬೇಕಾದ ವಿಷಯವೇನಲ್ಲ.
07:14 ಇದು ಕೇವಲ ನಮ್ಮ PHP server ಅಥವಾ ವೆಬ್-ಸರ್ವರ್ php ಇನ್ಸ್ಟಾಲ್ಲೇಶನ್ ನ ಬಗ್ಗೆ ನಮಗೆ ಸ್ವಲ್ಪ ಮಾಹಿತಿಯನ್ನು ಕೊಡುತ್ತದೆ.
07:20 ನಾವು ಇಲ್ಲಿಗೆ ಹಿಂತಿರುಗಬಹುದು. ಇಲ್ಲಿ ನಿಮಗೆ "localhost" ನ ಅಗತ್ಯವಿದೆ.
07:26 ನೀವು "htdocs" ಅಥವಾ ಬೇರೇನನ್ನೂ ಟೈಪ್ ಮಾಡುವ ಅಗತ್ಯವಿಲ್ಲ.
07:29 ನಮಗೆ ಬೇಕಾಗಿರುವುದು "localhost"ಮಾತ್ರ. ನಾವು "phpinfo dot php" ಎಂದು ಟೈಪ್ ಮಾಡಬೇಕಾಗಿದೆ. Enter ಅನ್ನು ಒತ್ತಿ.
07:42 ನಮಗೆ 'ಅಂಡರ್ಸ್ಕೋರ್' ನ ಅಗತ್ಯವಿಲ್ಲ. ಆದ್ದರಿಂದ ಅದನ್ನು ತೆಗೆದುಹಾಕಿ ಮತ್ತು ನೀವು ಈಗ ರಿಫ್ರೆಶ್ ಮಾಡಬೇಕಾಗಿದೆ.
07:50 ನಾವು ಇಲ್ಲಿ ನಮ್ಮ php ಮಾಹಿತಿ ಫೈಲ್ ಅನ್ನು ಸಾಕಷ್ಟು ಡೇಟಾದೊಂದಿಗೆ ಪಡೆದಿದ್ದೇವೆ ಎಂದು ನೀವು ನೋಡಬಹುದು.
07:55 ಇಲ್ಲಿ, ನಾವು PHP ಸ್ಕ್ರಿಪ್ಟ್ ಅನ್ನು, ನಮ್ಮ 'htdocs' ಫೈಲ್ ಒಳಗೆ ರನ್ ಮಾಡುತ್ತಿದ್ದೇವೆ.
08:01 ನನಗೆ "favicon dot ico" ಎಂದು ಅಡ್ರೆಸ್ ಅನ್ನು ಹೇಳಿದರೆ, ನಮಗೆ ಅದು ಸಿಗುತ್ತಿದೆ ಎಂದು ನೀವು ನೋಡಬಹುದು.
08:10 "htdocs" ನಲ್ಲಿ ನೀವು ಇರಿಸಿದ ಯಾವುದೇ ಫೈಲ್ ಗಳನ್ನು, ನಿಮ್ಮ ವೆಬ್ ಸರ್ವರ್ ನಿಂದ php ಮೂಲಕ ಪ್ರೊಸೆಸ್ ಮಾಡಲಾಗುತ್ತದೆ.
08:18 ಟ್ಯುಟೋರಿಯಲ್ ಗಳಲ್ಲಿ ನೀವು ಬರೆಯುವ ಯಾವುದೇ ಫೈಲ್ ಗಳನ್ನು "htdocs" ನಲ್ಲಿ ಇರಿಸಿ. ಇದು "c: \ xampp ಮತ್ತು htdocs" ನಲ್ಲಿರುವ ಒಂದು ಫೋಲ್ಡರ್ ಅಗಿದೆ. ಮತ್ತು ಅಲ್ಲಿರುವ ಯಾವುದೇ ಫೈಲ್ ಅನ್ನು ಪ್ರೊಸೆಸ್ ಮಾಡಲಾಗುತ್ತದೆ.
08:34 ನೀವು ಅದನ್ನು localhost ಅಥವಾ 127.0.0.1 ಮೂಲಕ ಅಡ್ರೆಸ್ ಮಾಡಬಹುದು. Enter ಅನ್ನು ಒತ್ತಿ, ಇಲ್ಲಿ ಏನೂ ಬದಲಾಗಿಲ್ಲ ಎಂದು ನೀವು ನೋಡಬಹುದು. ಇದು ಹಾಗೆಯೇ ಇದೆ. ಇದು ನಿಮ್ಮ ಲೋಕಲ್ ವೆಬ್-ಸರ್ವರ್ ಆಗಿದೆ.
08:50 ನಾವು "XAMPP" ಅನ್ನು ಸುಲಭವಾಗಿ ಇನ್ಸ್ಟಾಲ್ ಮಾಡಿದ್ದೇವೆ. ಇದು ನಿಮ್ಮ "ಅಪಾಚೆ" ಯನ್ನು ಮತ್ತು ನೀವು ನಂತರ ಬಳಸುವ, ನಿಮ್ಮ ಡೇಟಾಬೇಸ್ ಆಗಿರುವ "mysql" ಸರ್ವೀಸ್ ಅನ್ನು ಇನ್ಸ್ಟಾಲ್ ಮಾಡುವ ಶಾರ್ಟ್ಕಟ್ ವಿಧಾನವಾಗಿದೆ. ಅಲ್ಲದೆ, "Apache" ಗಾಗಿ "php module", php ಫೈಲ್ಗಳನ್ನು ಪರಿಷ್ಕರಿಸಲು ಅನುವು ಮಾಡಿಕೊಡುತ್ತದೆ. ನಿಸ್ಸಂಶಯವಾಗಿ, ಅದು ತುಂಬಾ ಉಪಯುಕ್ತವಾಗಿದೆ.
09:10 ನಾವು XAMPP ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಿದ್ದೇವೆ. ನಿಮ್ಮ ವೆಬ್-ಸರ್ವರ್ ಮೂಲಕ ಒಂದು ಫೈಲ್ ಅನ್ನು ಹೇಗೆ ಕ್ರಿಯೇಟ್ ಮಾಡಿ, ಅದನ್ನು ರನ್ ಮಾಡುವುದೆಂದು ನಾನು ನಿಮಗೆ ತೋರಿಸಿದ್ದೇನೆ.
09:16 ಟ್ಯುಟೋರಿಯಲ್ ಗಳನ್ನು ಆರಂಭಿಸಲು ಇದು ನಿಮಗೆ ಸಹಾಯಕವಾಗಿದೆ ಎಂದು ಆಶಿಸುತ್ತೇನೆ. ಇದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ.
09:23 ಮುಂದಿನ ಟ್ಯುಟೋರಿಯಲ್ ಗಳಲ್ಲಿ ಮತ್ತೆ ಸಿಗೋಣ.
09:26 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ --------- .

ಧನ್ಯವಾದಗಳು.

Contributors and Content Editors

Sandhya.np14