Avogadro/C2/Create-Surfaces/Kannada
From Script | Spoken-Tutorial
Revision as of 12:35, 13 July 2018 by Sandhya.np14 (Talk | contribs)
|
|
---|---|
00:01 | Create surfaces ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು : ಅಣುವಿನ ಲಕ್ಷಣಗಳನ್ನು ನೋಡುವುದು, |
00:13 | ಪರಮಾಣುಗಳನ್ನು 'ಪಾರ್ಶಿಯಲ್ ಚಾರ್ಜ್' (partial charge) ನೊಂದಿಗೆ ಲೇಬಲ್ ಮಾಡುವುದು, |
00:17 | Van der waals (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು, |
00:20 | 'ಇಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಎನರ್ಜೀಸ್' ಗೆ (electrostatic potential energies) ಅನುಗುಣವಾಗಿ, ಮೇಲ್ಮೈ ಗಳಿಗೆ ಬಣ್ಣ ಗಳನ್ನು ಕೊಡುವುದು –ಇವುಗಳ ಕುರಿತು ಕಲಿಯುವೆವು. |
00:25 | ಇಲ್ಲಿ ನಾನು Ubuntu Linux OS 14.04 ಆವೃತ್ತಿ, Avogadro 1.1.1 ಆವೃತ್ತಿ ಗಳನ್ನು ಬಳಸುತ್ತಿದ್ದೇನೆ. |
00:35 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:41 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:47 | ಇಲ್ಲಿ ನಾನು Avogadro ವಿಂಡೋವನ್ನು ಓಪನ್ ಮಾಡಿದ್ದೇನೆ. |
00:51 | Insert Fragment Library (ಇನ್ಸರ್ಟ್ ಫ್ರ್ಯಾಗ್ಮೆಂಟ್ ಲೈಬ್ರರಿ) ಯಿಂದ, ಒಂದು ಬ್ಯುಟೇನ್ ಅಣುವನ್ನು ಸೇರಿಸಿ. |
00:57 | Build ಮೆನ್ಯುವನ್ನು ಕ್ಲಿಕ್ ಮಾಡಿ, ನಂತರ Insert > > fragment ಅನ್ನು ಕ್ಲಿಕ್ ಮಾಡಿ. |
01:04 | alkanes ಫೋಲ್ಡರ್ ಅನ್ನು ಓಪನ್ ಮಾಡಲು, ಅದನ್ನು ಡಬಲ್ ಕ್ಲಿಕ್ ಮಾಡಿ. butane.cml ಅನ್ನು ಆಯ್ಕೆಮಾಡಿ. |
01:11 | Insert ಬಟನ್ ಅನ್ನು ಕ್ಲಿಕ್ ಮಾಡಿ. |
01:14 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
01:17 | ಪ್ಯಾನೆಲ್ ನ ಮೇಲೆ n-butane ನ ಮಾಡೆಲ್ (ಮಾದರಿ) ಡಿಸ್ಪ್ಲೇ ಆಗುತ್ತದೆ. |
01:21 | Select ಮೆನ್ಯುವಿನಲ್ಲಿ Select none ಎಂಬ ಆಯ್ಕೆಯನ್ನು ಬಳಸಿ, ಸೆಲೆಕ್ಷನ್ ಅನ್ನು ತೆಗೆಯಿರಿ. |
01:26 | ಈಗ ನಾವು ಅಣುವಿನ ಲಕ್ಷಣಗಳನ್ನು ತೋರಿಸೋಣ. |
01:30 | View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Properties ಎಂಬ ಆಯ್ಕೆಯನ್ನು ಆರಿಸಿ. |
01:35 | ಸಬ್-ಮೆನ್ಯುವಿನಲ್ಲಿ, Molecule Properties ಅನ್ನು ಕ್ಲಿಕ್ ಮಾಡಿ. |
01:39 | Molecule Properties ಎಂಬ ವಿಂಡೋ ಓಪನ್ ಆಗುತ್ತದೆ. ಇದು IUPAC Molecule Name, Molecular weight, Chemical Formula, Dipole moment ಗಳಂತಹ ಮಾಹಿತಿಯನ್ನು ಹೊಂದಿದೆ. |
01:54 | ವಿಂಡೋವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
01:57 | ಹೀಗೆಯೇ, ಅಣುವಿನ ಲಕ್ಷಣಗಳನ್ನು ನೋಡಲು, properties ಮೆನ್ಯುವಿನಲ್ಲಿ Atom properties ಮೇಲೆ ಕ್ಲಿಕ್ ಮಾಡಿ. |
02:04 | ಅಣುವಿನಲ್ಲಿರುವ ಪ್ರತಿ ಪರಮಾಣುವಿಗಾಗಿ, Element, Type, Valence, Formal charge ಇತ್ಯಾದಿ ಲಕ್ಷಣಗಳ ವ್ಯಾಲ್ಯೂಗಳನ್ನು ಹೊಂದಿದ ಒಂದು ಟೇಬಲ್ ತೆರೆದುಕೊಳ್ಳುತ್ತದೆ. |
02:17 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
02:20 | ಲಿಸ್ಟ್ ನಲ್ಲಿಯ, Angle, Torsion ಮತ್ತು Conformer ಮೊದಲಾದ ಪ್ರಾಪರ್ಟಿಗಳ ಬಗ್ಗೆ ತಿಳಿದುಕೊಳ್ಳಿ. |
02:27 | ಈಗ ನಾವು ಅಣುವಿನಲ್ಲಿಯ ಪರಮಾಣುಗಳನ್ನು 'ಪಾರ್ಶಿಯಲ್ ಚಾರ್ಜ್' (partial charge) ನೊಂದಿಗೆ ಲೇಬಲ್ ಮಾಡುವುದನ್ನು ಕಲಿಯೋಣ. |
02:33 | Display settings ಅನ್ನು ಕ್ಲಿಕ್ ಮಾಡಿ. Display Types ಪಟ್ಟಿಯಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
02:43 | Label ಚೆಕ್ ಬಾಕ್ಸ್ ನ ಬಲಭಾಗದಲ್ಲಿರುವ, 'ಸ್ಪ್ಯಾನರ್' ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
02:48 | Label Settings ವಿಂಡೋ ಓಪನ್ ಆಗುತ್ತದೆ. |
02:51 | atom labels Text ಡ್ರಾಪ್ ಡೌನ್ ನಲ್ಲಿ, Partial charge ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಅಣುವಿನಲ್ಲಿರುವ ಎಲ್ಲಾ ಪರಮಾಣುಗಳು, 'ಪಾರ್ಷಿಯಲ್ ಚಾರ್ಜ್' ನೊಂದಿಗೆ ಲೇಬಲ್ ಆಗಿರುತ್ತವೆ. |
03:01 | 'ಪಾರ್ಷಿಯಲ್ ಚಾರ್ಜ್' ನ ವಿತರಣೆಯು, ಕಾರ್ಬನ್ ಅಣುಗಳ ಪ್ರತಿಕ್ರಿಯಾತ್ಮಕತೆಯನ್ನು ಊಹಿಸಲು ಸಹಾಯ ಮಾಡುತ್ತದೆ. |
03:07 | ಪರಮಾಣುಗಳನ್ನು 'ಪಾರ್ಷಿಯಲ್ ಚಾರ್ಚ್' ನಿಂದ ಲೇಬಲ್ ಮಾಡುವುದರಿಂದ, 'ಇಂಡಕ್ಟಿವ್ ಇಫೆಕ್ಟ್' ಅನ್ನು ವಿವರಿಸಬಹುದು. |
03:14 | ಒಂದು ಹೈಡ್ರೋಜನ್ ಅನ್ನು, ಕ್ಲೋರಿನ್ ನಿಂದ ಬದಲಾಯಿಸಿ. ಕಾರ್ಬನ್ ಸರಣಿಯಲ್ಲಿ 'ಪಾರ್ಷಿಯಲ್ ಚಾರ್ಜ್' ನ ವ್ಯಾಲ್ಯುವಿನಲ್ಲಾದ ಬದಲಾವಣೆಯನ್ನು ಗಮನಿಸಿ. |
03:22 | 'ಇಂಡಕ್ಟಿವ್ ಇಫೆಕ್ಟ್' ನಿಂದಾಗಿ, ಕ್ಲೋರಿನ್ ಗೆ ಹತ್ತಿರವಿರುವ ಕಾರ್ಬನ್ ಗಳು ಹೆಚ್ಚು ಧನಾತ್ಮಕವಾಗುತ್ತವೆ. |
03:28 | ನಾವು, ಬಾಂಡ್ ಗಳಿಗೆ ಕೂಡ ಲೇಬಲ್ ಮಾಡಬಹುದು. bond labels ಎಂಬ ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
03:35 | ಈ ಡ್ರಾಪ್ ಡೌನ್ ಮೆನ್ಯು, ಬಾಂಡ್ ಗಳಿಗೆ ಲೇಬಲ್ ಮಾಡಲು ಆಯ್ಕೆಗಳನ್ನು ಹೊಂದಿದೆ. |
03:39 | bond length ನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಎಲ್ಲಾ ಬಾಂಡ್ ಗಳ ಉದ್ದಗಳನ್ನು ತೋರಿಸಲಾಗುತ್ತದೆ. |
03:46 | ಲೇಬಲ್ ಗಳ ಬಣ್ಣವನ್ನು ಬದಲಾಯಿಸಲು, Color ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:51 | Select atom labels color ವಿಂಡೋ ದಲ್ಲಿ, ಬಣ್ಣವನ್ನು ಆಯ್ಕೆ ಮಾಡಿ, OK ಬಟನ್ ಅನ್ನು ಕ್ಲಿಕ್ ಮಾಡಿ. |
03:59 | ನಾವು ಲೇಬಲ್ ಗಳನ್ನು X, Y ಮತ್ತು Z ದಿಕ್ಕುಗಳಲ್ಲಿ ಸ್ಥಳಾಂತರಿಸಬಹುದು. |
04:04 | label shift ಮೆನ್ಯುವಿನಲ್ಲಿ, ಹೆಚ್ಚು ಅಥವಾ ಕಡಿಮೆ ಮಾಡುವ ಬಟನ್ ಗಳನ್ನು ಒತ್ತಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
04:12 | ಮೇಲ್ಮೈಗಳನ್ನು ರಚಿಸುವ ಸಾಮರ್ಥ್ಯ, Avogadroದ ಇನ್ನೊಂದು ಉಪಯುಕ್ತ ವೈಶಿಷ್ಟ್ಯವಾಗಿದೆ. |
04:18 | Extensions ಮೆನ್ಯುವಿನಲ್ಲಿ, ಮೇಲ್ಮೈಗಳನ್ನು ರಚಿಸಲು ಬೇಕಾದ ಆಯ್ಕೆಯು ಲಭ್ಯವಿದೆ. |
04:24 | Extensions ಮೆನ್ಯುವಿನ ಮೇಲೆ, ನಂತರ create surfaces ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:30 | ಸ್ಕ್ರೀನ್ ಮೇಲೆ create surface ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:34 | Surface type ಡ್ರಾಪ್ ಡೌನ್, Van der waals ಮತ್ತು electro-static potential ಎಂಬ ಎರಡು ಆಯ್ಕೆಗಳನ್ನು ಹೊಂದಿದೆ. |
04:42 | Electrostatic potential surfaces ಅನ್ನು Avogadro ಸಧ್ಯಕ್ಕೆ ಬೆಂಬಲಿಸುವುದಿಲ್ಲ. |
04:48 | Van der waals (ವ್ಯಾನ್ ಡರ್ ವಾಲ್ಸ್) ಆಯ್ಕೆಯನ್ನು ಆರಿಸಿಕೊಳ್ಳಿ. Color By ಎಂಬ ಡ್ರಾಪ್ ಡೌನ್ ನಲ್ಲಿ, Nothing ಅನ್ನು ಆಯ್ಕೆ ಮಾಡಿ. |
04:55 | Resolution ಅನ್ನು Medium ಎಂದು, |
04:58 | Iso value ವನ್ನು ಸೊನ್ನೆ ಎಂದು ಕೊಡಿ. Calculate ಬಟನ್ ಅನ್ನು ಕ್ಲಿಕ್ ಮಾಡಿ. |
05:04 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
05:07 | ಪ್ಯಾನಲ್ ನಲ್ಲಿ, van der waals ಮೇಲ್ಮೈಯನ್ನು ತೋರಿಸಲಾಗುತ್ತದೆ. |
05:11 | Van der waals ಮೇಲ್ಮೈ, ಒಂದು ಅಣು ಬೇರೆ ಅಣುಗಳೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ. |
05:19 | ಸರ್ಫೇಸ್ ಸೆಟ್ಟಿಂಗ್ ಗಳನ್ನು ಬದಲಾಯಿಸಲು, Surfaces ಗಾಗಿ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
05:26 | surfaces settings ಡೈಲಾಗ್ ಬಾಕ್ಸ್ ಓಪನ್ ಆಗುತ್ತದೆ. opacity ಯನ್ನು ಹೊಂದಿಸಲು, ಸ್ಲೈಡರ್ ಅನ್ನು ಜರುಗಿಸಿ. |
05:34 | Render ಎಂಬ ಡ್ರಾಪ್ ಡೌನ್ ನಲ್ಲಿ, Fill, lines ಮತ್ತು point ಗಳಂತಹ ವಿಭಿನ್ನ ಡಿಸ್ಪ್ಲೇ ಆಯ್ಕೆಗಳಿವೆ. |
05:42 | fill ಇದು ಡೀಫಾಲ್ಟ್ ಆಯ್ಕೆಯಾಗಿದೆ. |
05:45 | ಮೇಲ್ಮೈ ನ (ಸರ್ಫೇಸ್) ಬಣ್ಣವನ್ನು ಬದಲಿಸಲು : positive ಎಂಬ ಆಯ್ಕೆಯ ಬದಿಯಲ್ಲಿರುವ, ಬಣ್ಣದಿಂದ ತುಂಬಿದ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
05:52 | ಬೇಸಿಕ್ ಕಲರ್ ಚಾರ್ಟ್ ನಿಂದ ನಿಮಗೆ ಬೇಕಾದ ಬಣ್ಣದ ಮೇಲೆ ಕ್ಲಿಕ್ ಮಾಡಿ, ಬಣ್ಣವನ್ನು ಆಯ್ಕೆ ಮಾಡಿ. OK ಬಟನ್ ಅನ್ನು ಕ್ಲಿಕ್ ಮಾಡಿ. |
06:00 | ನಂತರ, Create surface ವಿಂಡೋದಲ್ಲಿ, Color by ಎಂಬ ಡ್ರಾಪ್ ಡೌನ್ ನಿಂದ, Electrostatic potential ಅನ್ನು ಆಯ್ಕೆ ಮಾಡಿ. |
06:07 | resolution ಅನ್ನು medium ಗೆ ಹಾಗೂ Iso value ವನ್ನು 0.02 ಕ್ಕೆ ಸೆಟ್ ಮಾಡಿ. |
06:14 | Iso value ವನ್ನು ಕಡಿಮೆ ಇಡುವುದರಿಂದ, ಉತ್ತಮವಾದ ಮೇಲ್ಮೈ ದೊರೆಯುತ್ತದೆ. |
06:18 | Calculate ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:21 | ಪ್ಯಾನಲ್ ನಲ್ಲಿ ನಾವು, ಒನ್-ಕ್ಲೋರೋ ಬ್ಯುಟೇನ್ ನ ಮೇಲ್ಮೈಯನ್ನು ನೋಡುತ್ತೇವೆ. ಇದು, ಪರಮಾಣುಗಳ ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ವ್ಯಾಲ್ಯೂ ಗಳಿಗೆ ಅನುಗುಣವಾದ ಬಣ್ಣವನ್ನು ಹೊಂದಿದೆ. |
06:31 | 'ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್' ಇದು ಅಣುವಿನ ಚಾರ್ಜ್ ನ ವಿತರಣೆಯನ್ನು ವಿವರಿಸುತ್ತದೆ. |
06:37 | ಅಣುಗಳ ವರ್ತನೆಗಳನ್ನು ಊಹಿಸಲು ಸಹ ಇವುಗಳನ್ನು ಬಳಸಲಾಗುತ್ತದೆ. |
06:42 | ಡಿಫಾಲ್ಟ್ ಆಗಿ, ಹೆಚ್ಚು 'ವಿದ್ಯುತ್ ಋಣಾತ್ಮಕತೆ' (electro negativity) ಯನ್ನು ಹೊಂದಿದ ಜಾಗವನ್ನು ಕೆಂಪು ಬಣ್ಣದಿಂದಲೂ, ಅತ್ಯಂತ ಕಡಿಮೆ ಇರುವ ಜಾಗವನ್ನು ನೀಲಿ ಬಣ್ಣದಿಂದಲೂ ತೋರಿಸಲಾಗುತ್ತದೆ. |
06:49 | ಇಲ್ಲಿ ಇನ್ನೂ ಕೆಲವು ಅಣುಗಳ 'ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್' ಗಳ ಉದಾಹರಣೆಗಳಿವೆ. |
06:56 | ಅನಿಲಿನ್ ಮತ್ತು ಸೈಕ್ಲೋಹೆಕ್ಸೈಲಮಿನ್. |
07:00 | 'ಸೈಕ್ಲೋಹೆಕ್ಸೈಲಮಿನ್' ನ, ನೈಟ್ರೋಜನ್ ಮೇಲಿನ 'ಎಲೆಕ್ಟ್ರಾನ್ ಡೆನ್ಸಿಟಿ'ಯು, 'ಅನಿಲಿನ್' ನಲ್ಲಿ ಇರುವುದಕ್ಕಿಂತ ಹೆಚ್ಚು ಕೇಂದ್ರೀಕೃತವಾಗಿದೆ. |
07:08 | ಆದ್ದರಿಂದ 'ಸೈಕ್ಲೋಹೆಕ್ಸೈಲಮಿನ್' ಒಂದು ಪ್ರಬಲವಾದ ಕ್ಷಾರ ಆಗಿದೆ. |
07:12 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, : ಅಣುವಿನ ಲಕ್ಷಣಗಳನ್ನು ವೀಕ್ಷಿಸುವುದು, |
07:20 | ಪರಮಾಣುಗಳನ್ನು 'ಪಾರ್ಶಿಯಲ್ ಚಾರ್ಜ್' ನಿಂದ ಲೇಬಲ್ ಮಾಡುವುದು, |
07:24 | ವ್ಯಾನ್ ಡರ್ ವಾಲ್ಸ್ ಮೇಲ್ಮೈಯನ್ನು ರಚಿಸುವುದು, |
07:27 | 'ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಎನರ್ಜೀ' ಗಳಿಗೆ ಅನುಗುಣವಾಗಿ, ಮೇಲ್ಮೈಗೆ ಬಣ್ಣ ಕೊಡುವುದು – ಇವುಗಳನ್ನು ಕಲಿತಿದ್ದೇವೆ. |
07:33 | ಒಂದು ಅಸೈನ್ಮೆಂಟ್ ಇದೆ : 'ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್' ಅನ್ನು ಬಳಸಿ, ಅಸಿಟಾಲ್ಡಿಹೈಡ್ ಮತ್ತು 'ಫಾರ್ಮಮೈಡ್' ಗಳ ಪ್ರತಿಕ್ರಿಯಾತ್ಮಕತೆಯನ್ನು ಹೋಲಿಸಿ. |
07:43 | ಪರಮಾಣುಗಳನ್ನು, 'ಪಾರ್ಶಿಯಲ್ ಚಾರ್ಜ್' ನಿಂದ ಲೇಬಲ್ ಮಾಡಿ. |
07:47 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
07:51 | ಕೆಂಪು ಬಣ್ಣದಿಂದ ಸೂಚಿಸಲಾದ ನೆಗೆಟಿವ್ ಚಾರ್ಜ್, ಅಸಿಟಾಲ್ಡಿಹೈಡ್ ನ ಆಕ್ಸಿಜನ್ ಪರಮಾಣುವಿನ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. |
07:58 | 'ಫಾರ್ಮಮೈಡ್' ನಲ್ಲಿ, ನೆಗೆಟಿವ್ ಚಾರ್ಜ್ ಹೆಚ್ಚು ಡಿ-ಲೋಕಲೈಜ್ ಆಗಿದೆ. |
08:02 | ಆದ್ದರಿಂದ, 'ಫಾರ್ಮಮೈಡ್' ಗಿಂತ ಅಸಿಟಾಲ್ಡಿಹೈಡ್ ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತದೆ. |
08:07 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:15 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
08:22 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
08:29 | ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ. ಧನ್ಯವಾದಗಳು. |