Avogadro/C3/General-Features-in-Avogadro/Kannada
From Script | Spoken-Tutorial
Revision as of 20:49, 8 July 2018 by Anjana310312 (Talk | contribs)
Time | Narration |
00:01 | General Features in Avogadro (ಜನರಲ್ ಫೀಚರ್ಸ್ ಇನ್ ಅವೋಗ್ಯಾಡ್ರೋ) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು pH ವ್ಯಾಲ್ಯುಗಳನ್ನು ಬದಲಿಸಿ, ಸಂಯುಕ್ತ ವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು, |
00:16 | ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು, |
00:19 | ವಿವಿಧ Miller plane (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು, |
00:22 | ಸುಪರ್ ಸೆಲ್ ಗಳನ್ನು ರಚಿಸುವುದು, |
00:24 | ಸಹಕಾರ ಸಂಯೋಜನೆಗಳಲ್ಲಿ ಜ್ಯಾಮಿತಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿಯುವೆವು. |
00:31 | ಇಲ್ಲಿ ನಾನು , Ubuntu Linux OS ಆವೃತ್ತಿ 14.04 |
00:37 | Avogadro ಆವೃತ್ತಿ 1.1.1. ಗಳನ್ನು ಬಳಸುತ್ತಿದ್ದೇನೆ. |
00:41 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ನ ಪರಿಚಯ ಹೊಂದಿರಬೇಕು. |
00:47 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ , ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:52 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ. |
00:58 | ನಾನು ಒಂದು ಹೊಸ Avogadro ವಿಂಡೋವನ್ನು ಓಪನ್ ಮಾಡಿದ್ದೇನೆ. |
01:01 | ಈಗ ನಾನು pH value ಗಳನ್ನು ಬದಲಿಸಿ ಸಂಯುಕ್ತ ಗಳಲ್ಲಿ ಪ್ರೋಟೋನ್ ನ ವರ್ಗಾವಣೆಯನ್ನು ವಿವರಿಸುವೆನು. |
01:07 | ಇದಕ್ಕಾಗಿ, Fragment library ಯಿಂದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡುವೆನು. |
01:12 | Build ಮೆನ್ಯುವನ್ನು ಬಳಸಿ, Fragment library ಗೆ ಹೋಗಿ. |
01:16 | Fragment library ಯಲ್ಲಿ Amino acids ಎಂಬ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
01:21 | D-alanine.cml (ಡಿ-ಅಲನೈನ್ ಡಾಟ್ ಸಿಎಮ್ ಎಲ್) ಅನ್ನು ಆಯ್ಕೆ ಮಾಡಿ ಮತ್ತು Insert ನ ಮೇಲೆ ಕ್ಲಿಕ್ ಮಾಡಿ. |
01:26 | Insert Fragment ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
01:30 | ರಚನೆಯನ್ನು ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
01:34 | ರಚನೆಯನ್ನು ಸರಿಯಾಗಿ ಜೋಡಿಸಲು, Navigation ಟೂಲ್ ಅನ್ನು ಬಳಸಿ ತಿರುಗಿಸಿ. |
01:39 | ನಾನು ಅಮಿನೋ ಆಸಿಡ್ ಗಳಲ್ಲಿ pH ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು. |
01:46 | Build ಮೆನ್ಯುವಿಗೆ ಹೋಗಿ ಮತ್ತು Add Hydrogens for pH ಆಯ್ಕೆ ಮಾಡಿ. |
01:51 | Add Hydrogens for pH ಟೆಕ್ಸ್ಟ್ ಬಾಕ್ಸ್ ಡಿಫಾಲ್ಟ್ ವ್ಯಾಲ್ಯು ವಾದ 7.4 ನೊಂದಿಗೆ ತೆರೆದುಕೊಳ್ಳುತ್ತದೆ. |
01:57 | ಟೆಕ್ಸ್ಟ್ ಬಾಕ್ಸ್ ನಲ್ಲಿ pH value ವನ್ನು 7.0 ಎಂದು ಬದಲಿಸಿ ಮತ್ತು OK ಯನ್ನು ಒತ್ತಿ. |
02:04 | ರಚನೆಯನ್ನು ಗಮನಿಸಿ. Carboxylic group(COOH) (ಕಾರ್ಬೋಕ್ಸಿಲಿಕ್ ಗ್ರುಪ್) Carboxylate ion(ಕಾರ್ಪೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗಿದೆ. |
02:11 | Amino group(NH2) (ಅಮಿನೋ ಗ್ರುಪ್)ಇದು protonated(NH3+) ಆಗುತ್ತದೆ. |
02:15 | Build ಮೆನ್ಯುವಿಗೆ ಹೋಗಿ, ಮತ್ತು Add Hydrogens for pH ಅನ್ನು ಆಯ್ಕೆ ಮಾಡಿ. |
02:20 | ಟೆಕ್ಸ್ಟ್ ಬಾಕ್ಸ್ ನಲ್ಲಿ , pH ಅನ್ನು 2.0 ಎಂದು ಬದಲಿಸಿ ಮತ್ತು Ok ಯನ್ನು ಕ್ಲಿಕ್ ಮಾಡಿ. |
02:26 | Carboxylate ion (ಕಾರ್ಬೋಕ್ಸೈಲೇಟ್ ಅಯಾನ್) Carboxylic group (ಕಾರ್ಬೋಕ್ಸಿಲಿಕ್ ಗ್ರುಪ್) ಆಗಿ ಪರಿವರ್ತನೆಯಾಗುತ್ತದೆ. |
02:31 | Build ಮೆನ್ಯುವಿಗೆ ಹೋಗಿ, ಮತ್ತು Add Hydrogens for pH ಅನ್ನು ಕ್ಲಿಕ್ ಮಾಡಿ. |
02:35 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ಅನ್ನು 10.0 ಎಂದು ಬದಲಿಸಿ ಮತ್ತು Ok ಯನ್ನು ಕ್ಲಿಕ್ ಮಾಡಿ. |
02:41 | Carboxylic group (ಕಾರ್ಬೋಕ್ಸಿಲಿಕ್ ಗ್ರುಪ್ ) Carboxylate ion (ಕಾರ್ಬೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗುತ್ತದೆ. |
02:46 | Amino ಗುಂಪು (NH2) deprotonate ಆಗಿದೆ. |
02:49 | ರಚನೆಯನ್ನು ಅಳಿಸಲು Delete ಕೀಲಿಯನ್ನು ಒತ್ತಿ. |
02:52 | ಈಗ ನಾನು, ಅಮೈನ್ ಗಳಲ್ಲಿ pH ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು. |
02:58 | ಇದಕ್ಕಾಗಿ ನಾನು Fragment library ಯಿಂದ ethylamine (ಈಥೈಲಮೈನ್) ರಚನೆಯನ್ನು ಲೋಡ್ ಮಾಡುವೆನು. |
03:05 | Insert Fragment ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
03:09 | ರಚನೆಯನ್ನು ಡಿಸೆಲೆಕ್ಟ್ ಮಾಡಲು , CTRL, SHIFT ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ. |
03:13 | ರಚನೆಯನ್ನು ಸರಿಯಾಗಿ ಜೋಡಿಸಲು, Navigation ಟೂಲ್ ಅನ್ನು ಬಳಸಿ ತಿರುಗಿಸಿ. |
03:18 | Build ಮೆನ್ಯುವಿಗೆ ಹೋಗಿ ಮತ್ತು Add Hydrogens for pH ಆಯ್ಕೆ ಮಾಡಿ. |
03:23 | Add Hydrogens for pH ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:27 | ಟೆಕ್ಸ್ಟ್ ಬಾಕ್ಸ್ ನಲ್ಲಿ pH ವ್ಯಾಲ್ಯುವನ್ನು 7.0 ಎಂದು ಬದಲಿಸಿ, ಮತ್ತು OK ಯನ್ನು ಕ್ಲಿಕ್ ಮಾಡಿ. |
03:34 | ರಚನೆಯನ್ನು ಗಮನಿಸಿ. Amino ಗುಂಪು protonate ಆಗಿದೆ. |
03:39 | Build ಮೆನ್ಯುವಿಗೆ ಹೋಗಿ ಮತ್ತು Add Hydrogens for pH ಆಯ್ಕೆ ಮಾಡಿ. |
03:43 | ಟೆಕ್ಸ್ಟ್ ಬಾಕ್ಸ್ ನಲ್ಲಿ pH ಅನ್ನು 2.0 ಎಂದು ಬದಲಿಸಿ ಮತ್ತು OK ಯನ್ನು ಕ್ಲಿಕ್ ಮಾಡಿ. |
03:49 | ಇಲ್ಲಿ ನಾವು ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದನ್ನು ನೋಡಬಹುದು. |
03:53 | ethylamine(ಈಥೈಲಮೈನ್) ಪ್ರತ್ಯಾಮ್ಲದಲ್ಲಿ ಮಾತ್ರ ಪ್ರೋಟೋನ್ ವರ್ಗಾವಣೆಯನ್ನು ತೋರಿಸುತ್ತದೆ. |
03:59 | Build ಮೆನ್ಯುವಿಗೆ ಹೋಗಿ , Add Hydrogens for pH ಅನ್ನು ಕ್ಲಿಕ್ ಮಾಡಿ. |
04:03 | ಟೆಕ್ಸ್ಟ್ ಬಾಕ್ಸ್ ನಲ್ಲಿ pH ಅನ್ನು 10.0 ಎಂದು ಬದಲಿಸಿ ಮತ್ತು OK ಯನ್ನು ಕ್ಲಿಕ್ ಮಾಡಿ. |
04:09 | Amino ಗುಂಪು deprotonate ಆಗುತ್ತದೆ. |
04:12 | ನಾನು ಈಗ Crystal Library ಯಿಂದ ಕ್ರಿಸ್ಟಾಲ್ ರಚನೆಯನ್ನು ಮತ್ತು ಕೆಲವು ಕ್ರಿಸ್ಟಾಲ್ ಲಕ್ಷಣಗಳನ್ನು ಹೇಗೆ ಲೋಡ್ ಮಾಡುವುದು ಎಂದು ತೋರಿಸುವೆನು. |
04:20 | ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
04:25 | File ಮೆನ್ಯುಗೆ ಹೋಗಿ, Import ಹೋಗಿ ಮತ್ತು Crystal ಅನ್ನು ಆಯ್ಕೆ ಮಾಡಿ. |
04:30 | Insert Crystal ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:34 | ಇಲ್ಲಿ ನಾವು ವಿವಿಧ ಫೋಲ್ಡರ್ ಗಳನ್ನು ನೋಡಬಹುದು. |
04:37 | halides (ಹಲೈಡ್ಸ್)ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
04:40 | NaCl-Halite.cif (ಎನ್ ಎ ಸಿಎಲ್ ಹಲೈಟ್ ಸಿಐಎಫ್)ಅನ್ನು ಆಯ್ಕೆ ಮಾಡಿ ಮತ್ತು Insert ಅನ್ನು ಒತ್ತಿ. |
04:47 | Insert Crystal ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
04:51 | ಸರಿಯಾಗಿ ಕಾಣುವಂತೆ ಮಾಡಲು ಇಲ್ಲಿ ನಾನು Tool Settings ಮತ್ತು Display Setting ಗಳನ್ನು ಕ್ಲೋಸ್ ಮಾಡುವೆನು. |
04:58 | ಸೋಡಿಯಂ ಕ್ಲೋರೈಡ್ ನ ಕ್ರಿಸ್ಟಾಲ್ ರಚನೆ ಪ್ಯಾನಲ್ ನ ಮೇಲೆ ಡಿಸ್ಪ್ಲೇ ಆಗುತ್ತದೆ. |
05:02 | ರಚನೆಯ ಜತೆಗೆ ಅದರ ಸೆಲ್ ಪ್ಯಾರಾಮೀಟರ್ ಗಳು ಕೂಡ ಡಿಸ್ಪ್ಲೇ ಆಗಿದೆ. |
05:07 | ಪ್ಯಾನಲ್ ನ ಮೇಲ್ಭಾಗದ ಎಡ ಭಾಗದಲ್ಲಿ ನೀವು , ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನ
Lattice Type Spacegroup ಮತ್ತು Unit cell volume ಇವುಗಳನ್ನು ನೋಡಬಹುದು. |
05:18 | ನಾನು ಈಗ ಈ ಕ್ರಿಸ್ಟಾಲ್ ನ Miller plane ಗಳನ್ನು ತೋರಿಸುವೆನು. |
05:22 | ಇದಕ್ಕೂ ಮೊದಲು, ನಾನು ಮಿಲ್ಲರ್ ಇಂಡಿಸಿಸ್ ನ ಸಂಕ್ಷಿಪ್ತ ಪರಿಚಯವನ್ನು ಮಾಡುವೆನು. |
05:28 | Miller Indices ಇದು ಮೂರು ಸಂಖ್ಯೆಗಳ ಒಂದು ಜೊತೆಯಾಗಿದೆ. (hkl). |
05:34 | ಇವುಗಳನ್ನು ಕ್ರಿಸ್ಟಾಲ್ ಸಿಸ್ಟಮ್ ಗಳಲ್ಲಿ ದಿಕ್ಕುಗಳು ಮತ್ತು ಇಂಟರ್ನಲ್ ಪ್ಲೇನ್ ಗಳನ್ನು ಸೂಚಿಸಲು ಬಳಸಲಾಗುತ್ತದೆ. |
05:41 | ಈಗ ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನಲ್ಲಿ Miller plane (ಮಿಲ್ಲರ್ ಪ್ಲೇನ್) ಗಳನ್ನು ನೋಡೋಣ. |
05:45 | View ಮೆನ್ಯು ಗೆ ಹೋಗಿ ಮತ್ತು Crystal View Options ಅನ್ನು ಕ್ಲಿಕ್ ಮಾಡಿ. |
05:51 | Crystal View Options ಮೆನ್ಯು ಬಲಭಾಗದಲ್ಲಿ ಲೋಡ್ ಆಗುತ್ತದೆ. |
05:56 | Miller Indices ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ. |
06:00 | ನಾನು 'h', 'k', 'l' ಗಳ ವ್ಯಾಲ್ಯುಗಳನ್ನು 2, 3, 2 ಎಂದು ಬದಲಿಸುವೆನು. |
06:07 | ಕ್ರಿಸ್ಟಾಲ್ ನಲ್ಲಿ plane ಗಳು ಮತ್ತು ಪರಮಾಣುಗಳ ಸ್ಥಾನದಲ್ಲಾದ ಬದಲಾವಣೆಯನ್ನು ಗಮನಿಸಿ. |
06:13 | ಈಗ ನಾನು ಸೂಪರ್ ಸೆಲ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು. |
06:17 | Build ಮೆನ್ಯುವಿಗೆ ಹೋಗಿ ಮತ್ತು Super Cell Builder ಅನ್ನು ಆಯ್ಕೆ ಮಾಡಿ. |
06:22 | Super Cell Parameters ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:26 | Super Cell Option ಗಳಡಿಯಲ್ಲಿ , ನಾವು unit cell ಪ್ಯಾರಾಮೀಟರ್ ಗಳಾದ 'A', 'B' ಮತ್ತು 'C' ಗಳನ್ನು ಬದಲಿಸಬಹುದು. |
06:34 | ನಾನು 'A', 'B' ಮತ್ತು 'C' ಫೀಲ್ಡ್ ಗಳ ವ್ಯಾಲ್ಯುವನ್ನು '2', '2', '2' ಎಂದು ಬದಲಿಸುವೆನು. |
06:43 | ನಂತರ Generate cell ಅನ್ನು ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು Close ಅನ್ನು ಒತ್ತಿ. |
06:50 | ರಚನೆಯು ಸರಿಯಾಗಿ ಕಾಣುವಂತೆ ಮಾಡಲು ಝೂಮ್ ಮಾಡಿ. |
06:55 | ಪ್ಯಾನಲ್ ನಲ್ಲಿ Crystal lattice (ಕ್ರಿಸ್ಟಾಲ್ ಲ್ಯಾಟಿಸ್)ಡಿಸ್ಪ್ಲೇ ಆಗುತ್ತದೆ. |
06:59 | ಈಗ ನಾನು Miller Indices ಅನ್ನು 3, 2, 3 ಎಂದು ಬದಲಿಸುವೆನು. |
07:05 | Navigation ಟೂಲ್ ಅನ್ನು ಬಳಸಿ ಸೆಲ್ ಅನ್ನು ತಿರುಗಿಸಿ. |
07:09 | ಇಲ್ಲಿ ಚುಕ್ಕಿಯಾಕೃತಿ ಪ್ಲೇನ್ ಅನ್ನು ತೋರಿಸುತ್ತದೆ. |
07:13 | ನೀವು 'h', 'k', 'l' ವ್ಯಾಲ್ಯುಗಳನ್ನು ಬದಲಿಸುವುದರ ಮೂಲಕ ಅನೇಕ ಪ್ಲೇನ್ ಗಳನ್ನು ನೋಡಬಹುದು. |
07:20 | ಈಗ ನಾನು Hexamminecobalt(III)(ಹೆಕ್ಸಾಮಿನ್ ಕೊಬಾಲ್ಟ್) ನ ಅಷ್ಟಮುಖೀಯ ರೇಖಾಚಿತ್ರವನ್ನು ರಚಿಸುವೆನು. |
07:26 | ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
07:31 | Hexammine cobalt(III)(ಹೆಕ್ಸಾಮಿನ್ ಕೊಬಾಲ್ಟ್) ಅನ್ನು ರಚಿಸಲು Draw ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ. |
07:37 | Element ಡ್ರಾಪ್ ಡೌನ್ ನಲ್ಲಿ Other ಅನ್ನು ಆಯ್ಕೆ ಮಾಡಿ. |
07:41 | Periodic table ವಿಂಡೋ ಓಪನ್ ಆಗುತ್ತದೆ. |
07:44 | ಟೇಬಲ್ ನಲ್ಲಿ Cobalt ಅನ್ನು ಆಯ್ಕೆ ಮಾಡಿ. |
07:47 | Periodic table ವಿಂಡೋ ವನ್ನು ಕ್ಲೋಸ್ ಮಾಡಿ. |
07:50 | Panel ನ ಮೇಲೆ ಕ್ಲಿಕ್ ಮಾಡಿ. Element ಡ್ರಾಪ್ ಡೌನ್ ನಿಂದ Nitrogen ಅನ್ನು ಆಯ್ಕೆ ಮಾಡಿ. |
07:56 | ಕೊಬಾಲ್ಟ್ ಪರಮಾಣುವಿನ ಮೇಲೆ ಆರು ಬಾಂಡ್ ಗಳನ್ನು ರಚಿಸಲು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
08:03 | ಪ್ರತಿ ನೈಟ್ರೋಜನ್(ಸಾರಜನಕ) ಎರಡು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿರುವುದನ್ನು ಗಮನಿಸಿ. |
08:08 | hexamminecobalt(III) ರಚನೆಯಲ್ಲಿ ಪ್ರತಿ ನೈಟ್ರೋಜನ್ (ಸಾರಜನಕ) ಮೂರು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿದೆ. |
08:15 | Element ಡ್ರಾಪ್ ಡೌನ್ ನಿಂದ Hydrogen ಅನ್ನು ಆಯ್ಕೆ ಮಾಡಿ. |
08:19 | ಎಲ್ಲಾ ಜಲಜನಕದ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
08:25 | ಪ್ಯಾನಲ್ ನ ಮೇಲೆ Hexamminecobalt(III) ರಚನೆ ಬರೆಯಲ್ಪಟ್ಟಿದೆ. |
08:29 | Display Settings ಮೆನ್ಯುವನ್ನು ಓಪನ್ ಮಾಡಲು Display Settings ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:36 | Hexamminecobalt(III) ರಚನೆಯ ಅಷ್ಟಮುಖೀಯ ರೇಖಾಚಿತ್ರವನ್ನು ತೋರಿಸುವೆನು. |
08:42 | ಇದಕ್ಕಾಗಿ, ನಾನು Polygon Display Type ಅನ್ನು ಬಳಸುವೆನು. |
08:46 | Polygon Display Type ಸಕ್ರಿಯವಾಗಿಲ್ಲದಿದ್ದಲ್ಲಿ, Add ಬಟನ್ ಬಳಸಿ ಸಕ್ರಿಯಗೊಳಿಸಿ. |
08:52 | Polygon Display Type ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:56 | ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ Auto Optimization Tool ಅನ್ನು ಕ್ಲಿಕ್ ಮಾಡಿ. |
09:01 | Force Field ಡ್ರಾಪ್ ಡೌನ್ ನಲ್ಲಿ UFF ಅನ್ನು ಆಯ್ಕೆ ಮಾಡಿ. |
09:06 | ಆಪ್ಟಿಮೈಜ್ ಮಾಡಲು , Start ಬಟನ್ ಅನ್ನು ಒತ್ತಿ. |
09:11 | Auto optimization ಕ್ರಿಯೆಯನ್ನು ನಿಲ್ಲಿಸಲು Stop ಅನ್ನು ಒತ್ತಿ. |
09:16 | ಅಷ್ಟಮುಖೀಯ ರೇಖಾಚಿತ್ರವನ್ನು ನೋಡಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
09:22 | ಅದೇ ರೀತಿ , ಇದು iodine heptafluoride ನ pentagonal bipyramidal ರೇಖಾಚಿತ್ರವಾಗಿದೆ. |
09:29 | ಈಗ ನಾವು Build ಮೆನ್ಯುವಿನ ಇನ್ನೊಂದು ವೈಶಿಷ್ಟ್ಯವಾದ Nanotube builder ಅನ್ನು ನೋಡೋಣ. |
09:35 | nanotube ಒಂದು nanometer-scale tube ನಂತಹ ಒಂದು ರಚನೆಯಾಗಿದೆ. |
09:40 | Boron carbon nitrogen, Boron carbon ಮತ್ತು Carbon ಗಳು ನ್ಯಾನೋ ಟ್ಯೂಬ್ ಗಳಿಗೆ ವಿವಿಧ ಉದಾಹರಣೆಗಳಾಗಿವೆ. |
09:50 | ಕಾರ್ಬನ್ ನ್ಯಾನೋಟ್ಯೂಬ್ ಒಂದು ವರ್ಣರಂಜಿತ ಸಿಲಿಂಡರ್ ಆಕಾರದ, ಕಾರ್ಬನ್ ರಚನೆಯಾಗಿದೆ. ಇದು ಅಂಚುಗಳಲ್ಲಿ ಷಡ್ಭುಜೀಯ ಗ್ರಾಫೈಟ್ ಅಣುಗಳನ್ನು ಹೊಂದಿದೆ. |
10:01 | ಹೊಸ ವಿಂಡೋವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
10:06 | ನ್ಯಾನೋಟ್ಯೂಬ್ ಚೆನ್ನಾಗಿ ಕಾಣಲು ನಾನು ಬ್ಯಾಕ್ ಗ್ರೌಂಡ್ ನ ಬಣ್ಣವನ್ನು ನೀಲಿಗೆ ಬದಲಿಸುವೆನು. |
10:12 | View ಗೆ ಹೋಗಿ, Set Background Color ಗೆ ಹೋಗಿ, |
10:17 | Select Color ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ. |
10:21 | ಬಾಕ್ಸ್ ನಲ್ಲಿ ನೀಲಿ ಬಣ್ಣವನ್ನು ಆಯ್ಕೆ ಮಾಡಿ ಮತ್ತು Ok ಯನ್ನು ಕ್ಲಿಕ್ ಮಾಡಿ. |
10:26 | Build ಮೆನ್ಯುವಿಗೆ ಹೋಗಿ ಮತ್ತು Nanotube Builder ಅನ್ನು ಆಯ್ಕೆ ಮಾಡಿ. |
10:30 | ಪ್ಯಾನಲ್ ನ ಕೆಳಗೆ, Nanotube Builder ಮೆನ್ಯು ಓಪನ್ ಆಗುತ್ತದೆ. |
10:35 | Nanotube Builder ಮೆನ್ಯುವನ್ನು ನೋಡಲು ನಾನು Avogadro ವಿಂಡೋ ದ ಗಾತ್ರವನ್ನು ಬದಲಿಸುವೆನು. |
10:40 | ನೀವು ನ್ಯಾನೋಟ್ಯೂಬ್ ನ ವಿಧವನ್ನು ಗುರ್ತಿಸಲು ಕ್ಯಾರಾಲಿಟಿ ಇಂಡೆಕ್ಸ್ n, m ಗಳನ್ನು ಹೊಂದಿಸಬಹುದು. |
10:47 | ನಾನು ಇಂಡೆಕ್ಸ್ ವ್ಯಾಲ್ಯುಗಳಾದ n ಮತ್ತು m ಗಳನ್ನು 4 ಮತ್ತು 4 ಗಳಾಗಿ ಸೆಟ್ ಮಾಡುವೆನು. |
10:53 | Length ಅನ್ನು 4.00 ಗೆ ಬದಲಿಸಿ. |
10:57 | Unit ಫೀಲ್ಡ್ ಅನ್ನು Periodic units ಎಂದು ಸೆಟ್ ಮಾಡಿ. |
11:01 | ನ್ಯಾನೋಟ್ಯೂಬ್ ನಲ್ಲಿ ಡಬಲ್ ಬಾಂಡ್ ಗಳನ್ನು ತೋರಿಸಲು Find double bonds ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
11:08 | ನಂತರ Build ನ ಮೇಲೆ ಕ್ಲಿಕ್ ಮಾಡಿ. |
11:10 | ರಚನೆಯನ್ನು ಡಿಸೆಲೆಕ್ಟ್ ಮಾಡಲು, CTRL + SHIFT + A ಕೀಲಿಗಳನ್ನು ಒಟ್ಟಿಗೆ ಒತ್ತಿ. |
11:15 | ನ್ಯಾನೋ ಟ್ಯೂಬ್ ಸರಿಯಾಗಿ ಕಾಣುವಂತೆ ಮಾಡಲು, Navigation ಟೂಲ್ ಅನ್ನು ಬಳಸಿ ತಿರುಗಿಸಿ ಮತ್ತು ಝೂಮ್ ಮಾಡಿ. |
11:21 | ನಂತರ ನಾನು 6,6 ಇಂಡೆಕ್ಸ್ ವ್ಯಾಲ್ಯುವಿರುವ ನ್ಯಾನೋಟ್ಯೂಬ್ ಅನ್ನು ರಚಿಸುವೆನು. |
11:27 | Build ಮೆನ್ಯುವಿಗೆ ಹೋಗಿ ಮತ್ತು Nanotube Builder ಅನ್ನು ಆಯ್ಕೆ ಮಾಡಿ. |
11:31 | n ಮತ್ತು m ವ್ಯಾಲ್ಯೂಗಳನ್ನು 6 ಮತ್ತು 6 ಎಂದು ಬದಲಿಸಿ. ನಂತರ Build ನ ಮೇಲೆ ಕ್ಲಿಕ್ ಮಾಡಿ. |
11:40 | ಎರಡು ನ್ಯಾನೋಟ್ಯೂಬ್ ಗಳು ಓವರ್ಲ್ಯಾಪ್ ಆಗಿರುವುದನ್ನು ಗಮನಿಸಿ. |
11:44 | ನ್ಯಾನೋ ಟ್ಯೂಬ್ ಗಳನ್ನು ಆಪ್ಟಿಮೈಜ್ ಮಾಡಲು Auto Optimization Tool ಅನ್ನು ಕ್ಲಿಕ್ ಮಾಡಿ. |
11:50 | Force Field ಡ್ರಾಪ್ ಡೌನ್ ನಲ್ಲಿ, MMFF94 ಅನ್ನು ಆಯ್ಕೆ ಮಾಡಿ. |
11:56 | ಆಪ್ಟಿಮೈಜ್ ಮಾಡಲು Start ಬಟನ್ ಅನ್ನು ಒತ್ತಿ. |
12:02 | auto optimization ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಒತ್ತಿ. |
12:07 | ರಚನೆಯನ್ನು ಡಿಸೆಲೆಕ್ಟ್ ಮಾಡಲು, CTRL + SHIFT + A ಕೀಲಿಗಳನ್ನು ಒಟ್ಟಿಗೆ ಒತ್ತಿ. |
12:11 | ಪ್ಯಾನಲ್ ನ ಮೇಲೆ ಎರಡು ಗೋಡೆಗಳಿರುವ ನ್ಯಾನೋಟ್ಯೂಬ್ ಡಿಸ್ಪ್ಲೇ ಆಗುತ್ತದೆ. |
12:16 | ನ್ಯಾನೋ ಟ್ಯೂಬ್ ಅನ್ನು ಸರಿಯಾಗಿ ಕಾಣುವಂತೆ ಮಾಡಲು, Navigation tool ಅನ್ನು ಬಳಸಿ ತಿರುಗಿಸಿ. |
12:21 | ಈಗ ನಾನು ನ್ಯಾನೋಟ್ಯೂಬ್ ನಲ್ಲಿ carbon hexagon ring ಗಳನ್ನು ತೋರಿಸುವೆನು. |
12:26 | Display Types ಮೆನ್ಯುವಿನಲ್ಲಿ, Ring ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ. |
12:31 | carbon hexagon ಗಳನ್ನು ನೋಡಲು, Navigation ಟೂಲ್ ಅನ್ನು ಬಳಸಿ nanotube ಅನ್ನು ತಿರುಗಿಸಿ. |
12:38 | ಸಂಕ್ಷಿಪ್ತವಾಗಿ, |
12:40 | ಈ ಟ್ಯುಟೋರಿಯಲ್ ನಲ್ಲಿ ನಾವು : |
12:43 | pH ವ್ಯಾಲ್ಯುಗಳನ್ನು ಬದಲಿಸಿ ಸಂಯುಕ್ತವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು, |
12:48 | 'ಕ್ರಿಸ್ಟಾಲ್ ಲೈಬ್ರರಿ' ಯಿಂದ ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು, |
12:51 | ವಿವಿಧ Miller plane (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು, |
12:54 | ಸುಪರ್ ಸೆಲ್ ಗಳನ್ನು ರಚಿಸುವುದು, |
12:56 | ಸಹಕಾರ ಸಂಯೋಜನೆಗಳಲ್ಲಿ ಜಾಮೆಟ್ರಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
13:03 | ಅಸೈನ್ಮೆಂಟ್ :
silver chloride(AgCl) crystal structure (ಸಿಲ್ವರ್ ಕ್ಲೋರೈಡ್ ಕ್ರಿಸ್ಟಾಲ್ ಸ್ಟ್ರಕ್ಚರ್) ಅನ್ನು ಲೋಡ್ ಮಾಡುವುದು ಮತ್ತು ಇದರ Miller plane ಗಳನ್ನು ತೋರಿಸಿ. |
13:09 | 'ಕೋ-ಆರ್ಡಿನೇಷನ್ ಲೈಬ್ರರಿ' ಯಿಂದ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಿ ಮತ್ತು ಅದರ ಜ್ಯಾಮಿತಿಗಳನ್ನು ತೋರಿಸಿ. |
13:14 | chirality index 9,9 ನೊಂದಿಗೆ ನ್ಯಾನೋಟ್ಯೂಬ್ ಅನ್ನು ರಚಿಸಿ. |
13:19 | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು. |
13:27 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
13:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ. |
13:41 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು. |